POLICE BHAVAN KALABURAGI

POLICE BHAVAN KALABURAGI

16 May 2015

Kalaburagi District Reported Crimes

5 ಜನ ದರೋಡೆಕೋರರ ಬಂಧನ 4 ಲಕ್ಷ ಮೌಲ್ಯದ ಚಿನ್ನಾಭರಣ, ಕಾರು, ದ್ವಿಚಕ್ರವಾಹನ ವಶ                                                                
ಅಶೋಕ ನಗರ ಠಾಣೆ : ದಿನಾಂಕ 30-04-2015 ರಂದು ಮುಂಜಾನೆ 11-30 ಗಂಟೆಗೆ  ಫಿರ್ಯಾದಿ ಕಾಳಪ್ಪ ತಂದೆ ಗುಂಡಪ್ಪ ಪಂಡರಗಿರಿ ಸಾ: ಟಾಕಳಿ ಗ್ರಾಮ ತಾ: ಅಪಜಲಪೂರ ರವರು ತಮ್ಮೂರಿನ ಅಪ್ಸರಾ ಬೇಗಂ ರವರೊಂದಿಗೆ ಬಸ ಸ್ಟ್ಯಾಂಡ ಹತ್ತಿರ ಇರುವ ಕಬಿನಿ ಲಾಡ್ಜಗೆ ಬರುತ್ತಿರುವಾಗ  4 ಜನ ಮುಸ್ಲಿಂ ಹುಡುಗರು ಫಾಲೋ ಮಾಡುತ್ತಾ ಬಂದು ಕಬಿನಿ ಲಾಡ್ಜ ದಲ್ಲಿ ಫಿರ್ಯಾದಿಗೆ ನೀನು ಹಿಂದು ಆಗಿ ಮುಸ್ಲಿಂ ಹೆಣ್ಣುಮಗಳಿಗೆ ಲಾಡ್ಜಕ್ಕೆ ಕರೆದುಕೊಂಡು ಬಂದಿದ್ದಿ ಅಂತಾ ಅವಾಚ್ಯ ಶಬ್ದಗಳಿಂದ ಬೈದ್ದು ಚಾಕು ಮಾರಕಾಸ್ತ್ರಗಳಿಂದ ಹೆದರಿಸಿ ನಿನ್ನ ಹೆಂಡತಿ ಹಾಗೂ ನಿನ್ನ ಗಂಡನಿಗೆ ಹೇಳಿ ಮಾರ್ಯಾದಿ ತೆಗೆಯುತ್ತೇನೆ ಅಂತಾ ಬೆದರಿಸಿ ಬ್ಲಾಕ ಮೇಲ್‌ ಮಾಡಿ ಅಪಸರ ಬೇಗಂ ರವಳ ಕೊರಳಿನಿಂದ 3ವರೆ ತೊಲೆ ಬಂಗಾರದ ಆಭರಣಗಳನ್ನು ಕಸಿದುಕೊಂಡು ಲಾಡ್ಜಿನಿಂದ ಇನ್ನು 4 ಜನರಿಗೆ ಕರೆಯಿಸಿ ಮಿಸಬಾ ನಗರಕ್ಕೆ ಕರೆದುಕೊಂಡು ಒಯ್ದು ರೂಮಿನಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿ ಫಿರ್ಯಾದಿ ಕಾಳಪ್ಪನ ಜೇಬಿನಲ್ಲಿದ್ದ ಚೆಕ್ ಗಳನ್ನು ನೋಡಿ ಆ ದಿವಸ ಬ್ಯಾಂಕ ಬಂದ ಇದ್ದುದರಿಂದ ಮೂನ ಲೈಟ ಲಾಡ್ಜಿಗೆ ತಂದು ಕೂಡಿ ಹಾಕಿ ಹಲ್ಲೆ ಮಾಡಿ ದಿನಾಂಕ 02-05-2015 ರಂದು ಕಾರಿನಲ್ಲಿ ಕರೆದುಕೊಂಡು ಸೂಪರ ಮಾರ್ಕೆಟದ ಓರಿಯಂಟಲ್ ಕಾರ್ಮಸ ಬ್ಯಾಂಕದಲ್ಲಿ ಒಯ್ದು 90,000/- ರೂ ಹಣವನ್ನು ವಿಡ್ರಾ ಮಾಡಿಸಿ ಕಸಿದುಕೊಂಡು ಅಫಜಲಪೂರ ರೋಡಿಗೆ ಬಿಟ್ಟು ಹೋಗಿದ್ದು  ಈ ಬಗ್ಗೆ ಅಶೊಕ ನಗರ ಠಾಠಣೆಯಲ್ಲಿ ಪ್ರಕರಣ ದಾಖಲಾಗಿದ್ದು
      ಶ್ರೀ ಅಮಿತ ಸಿಂಗ ಐಪಿಸಿ ಎಸ.ಪಿ ಕಲಬುರಗಿ, ಶ್ರೀ ಮಹಾಂತೇಶ ಅಪರ ಎಸ.ಪಿ ಕಲಬುರಗಿ ಹಾಗೂ ಶ್ರೀ ಎಂ.ಬಿ ನಂದಗಾಂವಿ ಡಿ.ಎಸ.ಪಿ (ಎ) ಉಪ-ವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಶ್ರೀಮತಿ ಸುಧಾ ಆದಿ ಪಿ.ಐ ಅಶೋಕ ನಗರ ಪೊಲೀಸ ಠಾಣೆ ಕಲಬುರಗಿ, ಸುರೇಶ ಪಿಸಿ 534, ಶಿವಪ್ರಕಾಶ ಪಿಸಿ 615, ಚಂದ್ರಕಾಂತ ಪಿಸಿ 176, ಶಿವಪ್ಪಾ ಎಪಿಸಿ 52, ಮಹೇಶ ಪಿಸಿ 1151  ರವರೊನ್ನಗೊಂಡ ತಂಡವು ಪ್ರಕರಣದಲ್ಲಿ ಸುಲಿಗೆ ದರೋಡೆ, ಮಾಡಿದ 5 ಜನ ಆರೋಪಿತರಾದ 1) ಆದಿಲ್ ತಂದೆ ಸೈಯದ ಶೌಕತ ಸಾ: ವಿದ್ಯಾನಗರ 2) ಇರ್ಪಾನ ತಂದೆ ಶಕೀಲ ಖಾನ ಸಾ: ರುದ್ರವಾಡಿ ಆಸ್ತತ್ರೆ ಹತ್ತಿರ ಪಿ&ಟಿ ಕಾಲೋನಿ 3)  ವಸೀಮ ತಂದೆ ಹಾಜಿ ಕರಿಮ್  ಸಾ: 2 ನೇ ಬಸ ಡಿಪೋ ಎರುದುಗಡೆ ವಿದ್ಯಾನಗರ 4) ರಹೀಮ @ ಅಬ್ದುಲ ರಹೀಮ ತಂದೆ ಮಹ್ಮದ ಜಾಕೀರ ಹುಸೇನ ಸಾ: ವಿದ್ಯಾನಗರ 5) ಸೊಪಿಯಾನ @ ಮಹ್ಮದ ಸೊಪಿಯಾನ ತಂದೆ ಮಹ್ಮದ ಹುಸೇನ ನಾವದಗಿ ಸಾ: ಮನೆ ನಂ 107 ವಿದ್ಯಾನಗರ ಕಲಬುರಗಿ ರವರಿಗೆ ದಸ್ತಗಿರಿ ಮಾಡಿ ಇವರುಗಳಿಂದ ದರೋಡೆ ಮಾಡಿದ 1)  3ವರೆ ತೊಲೆ ಬಂಗಾರದ ಆಭರಣಗಳು 2) ನಗದು ಹಣ 50,000/-   3) ಎನಫಿಲ್ಡ ಬೈಕ ನಂ ಕೆಎ-32 ಇಹೆಚ್-7875 4) ಟಾಟಾ ಇಂಡಿಕಾ ಕಾರ ನಂ ಕೆಎ-32 ಎಂ 6116 ಹೀಗೆ ಒಟ್ಟು 4 ಲಕ್ಷ ರೂಪಾಯಿ ಮೌಲ್ಯದ ಮದ್ದೆಮಾಲನ್ನು ವಶಪಡಿಸಿಕೊಂಡು ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಡಲಾಗಿದೆ.  
ಅಪಘಾತ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 15.05.2015 ರಂದು ರಾತ್ರಿ 7:30 ಗಂಟೆಗೆ ಜೇವರಗಿ ಪಟ್ಟಣದ ಗ್ರೀನ್‌ಪಾರ್ಕ ಧಾಬಾದ ಎದುರು ರೋಡಿನಲ್ಲಿ ನನ್ನ ತಮ್ಮ ಚನ್ನಬಸಪ್ಪ ಮತ್ತು ಅನಿಲ ತಂದೆ ಸುಭಾಶ್ಚಂದ್ರ ಗಣಜಲಖೇಡ ಇವರು ಮೋಟಾರು ಸೈಕಲ್ ನಂ ಕೆ.ಎ32ಇಎಫ್2273 ನೇದ್ದರ ಮೇಲೆ ಕುಳಿತು ನಮ್ಮೂರ ಶ್ರೀಶೈಲ ತಂದೆ ಬಸಣ್ಣ ಗಣಜಲಖೇಡ ಈತನ ಸಂಗಡ ರೋಡಿನ ಸೈಡಿನಲ್ಲಿ ಮಾತನಾಡುತ್ತ ನಿಂತುಕೊಂಡಿದ್ದಾಗ ಆ ವೇಳೆ ಜೇವರಗಿ ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆ.ಎ32ಎಫ್1859 ನೇದ್ದರ ಚಾಲಕನು ತನ್ನ ಬಸ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನಿಂದ ನಡೆಸಿಕೊಂಡುಬಂದು ರೋಡಿನ ಸೈಡಿನಲ್ಲಿ ನಿಂತವರಿಗೆ ಡಿಕ್ಕಿ ಪಡಿಸಿ ಭಾರಿ ಗಾಯ ಆಗಿದ್ದರಿಂದ ಚನ್ನಬಸಪ್ಪ ತಂದೆ ಭೀಮರಾಯ ಭಾಸಗಿ ಸಾ|| ಹರವಾಳ ಈತನು ಸ್ಥಳದಲ್ಲಿಯೆ ಮೃತಪಟ್ಟಿದ್ದು  ಉಳಿದವರಿಗೆ ಭಾರಿ ಮತ್ತು ಸಾದಾ ರಕ್ತ ಗಾಯಗಳಾಗಿದ್ದು ಅಪಘಾತದ ನಂತರ ಬಸ್‌ನ ಚಾಲಕನು ತನ್ನ ಬಸ್‌‌ನ್ನು ಬಿಟ್ಟು ಓಡಿಹೋಗಿರುತ್ತಾನೆ ಅಂತಾ ಶ್ರೀ ರೇವಣಸಿದ್ದಪ್ಪ ತಂದೆ ಭೀಮರಾಯ ಭಾಸಗಿ ಸಾ|| ಹರವಾಳ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಜೇವರಗಿ ಠಾಣೆ : ದಿನಾಂಕ 15-05-2015 ರಂದು ಗಂವ್ಹಾರ ಗ್ರಾಮದ ಬಸ್ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಇಬ್ಬರೂ ಮನುಷ್ಯರು ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ತೆಗೆದುಕೊಂಡು ಮಟಕಾ ಅಂಕಿ ಸಂಖ್ಯೆ ಚೀಟಿ ಬರೆದು ಕೊಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಶ್ರೀ. ಪಂಡಿತ. ವಿ. ಸಗರ  ಪಿ.ಎಸ್. ಜೇವರಗಿ ಪೊಲೀಸ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದುಕೊಂಡು ಅವರ ಹೆಸರು ವಿಚಾರಿಸಲು 1. ವಿಶ್ವರಾದ್ಯ ತಂದೆ ಸೂಗಯ್ಯ ಸ್ವಾಮಿ  2. ಶಿವಯ್ಯ ತಂದೆ ಶರಣಯ್ಯ  ಮಸೂತಿಮಠ ಸಾ|| ಇಬ್ಬರೂ  ಗಂವ್ಹಾರ ಅಂತಾ ತಿಳಿಸಿದ್ದು ಸದರಿಯವರಿಂದ ಮಟಕಾ ಜೂಜಾಟಕ್ಕೆ ಬಳಸಿದ ನಗದು ಹಣ 500/-ರೂಪಾಯಿ, ಎರಡು ಮಟಕಾ ಅಂಕಿ ಸಂಖ್ಯೆ ಚೀಟಿಗಳು, ಮತ್ತು ಎರಡು ಬಾಲ ಪೆನ್ನು, ಜಪ್ತಿ  ಮಾಡಿಕೊಂಡು ಸದರಿಯವರೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಜೇವರಗಿ ಠಾಣೆ : ದಿನಾಂಕ : 15.05.2015  ರಂದು  ಮದರಿ ಗ್ರಾಮದ ಜಾನಸಾಬ ದರ್ಗಾ ಖುಲ್ಲಾ ಜಾಗೆಯಲ್ಲಿ ಅಂದಾರ ಬಹಾರ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಶ್ರೀ. ಪಂಡಿತ. ವಿ. ಸಗರ  ಪಿ.ಎಸ್. ಜೇವರಗಿ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ  1. ಅಂಬರೀಶ ತಂದೆ ಶಂಕರ ವಾಲಿಕರ್ 2 ಇಸ್ಪೇಟ ಎಲೆಗಳು. 2. ಹುಣಚಪ್ಪ ತಂದೆ ಬಾಲಣ್ಣಾ ಪೂಜಾರಿ 3. ಮಡಿವಾಳ ತಂದೆ ಚಂದ್ರಶ್ಯಾ ಆಲೂರ ಸಾ: ಎಲ್ಲರುಮದರಿ  ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ನಗದು ಹಣ 800/-  ರೂ ಮತ್ತು 52 ಇಸ್ಪೇಟ ಎಲೆಗಳುನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ದ್ವಿ ಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಮಂಜುನಾಥ ತಂದೆ ಕಾಳಪ್ಪಾ ಸರಡಗಿ ಸಾ: ಪ್ಲಾ.ನಂ 11-240 ಸಿ.ಐ.ಬಿ ಕಾಲೋನಿ ಕಲಬುರಗಿ ರವರು ತನ್ನ ಹಿರೊಹೊಂಡಾ ಸ್ಪ್ಲೆಂಡರ ಪ್ಲಸ್ ದ್ವಿಚಕ್ರ ವಾಹನ ನಂ; KA 32-EA W-6554 ಸಿಲ್ವರ ಕಲರ, ಚೆಸ್ಸಿ ನಂ:MBLHA10EZBHM69584 ಇಂಜಿನ ನಂ: HA10EFBHM88635 ಅ.ಕಿ 25,000/-ರೂ ಬೆಲೆಬಾಳುವದನ್ನು, ದಿನಾಂಕ: 29/04/2015 ರಂದು ಕೇಂದ್ರ ಬಸ್ ನಿಲ್ದಾಣದ ಒಳಗಡೆ ರಾಘವೇಂದ್ರ ಬೇಕರಿ ಪಕ್ಕದಲ್ಲಿ ಫುಟಫಾತ ಮೆಲೆ ನಿಲ್ಲಿಸಿ ಆಳಂದಕ್ಕೆ ಹೋಗಿದ್ದು ನಂತರ 04:00 ಪಿಎಮ್ ಮರಳಿ ಬಂದಾಗ ನಾನು ನಿಲ್ಲಿಸಿದ ಸ್ಥಳದಲ್ಲಿ ನನ್ನ ದ್ವಿ ಚಕ್ರ ವಾಹನ ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ನಂತರ ಎಲ್ಲಾ ಕಡೆ ಹುಡುಕಾಡಿದರು ನನ್ನ ವಾಹನ ಪತ್ತೆ ಯಾಗಿರುವದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಅಶೊಕ ನಗರ ಠಾಣೆ : ಶ್ರೀ ಪ್ರಭುದೇವ ತಂದೆ ಶಿವಬಸಪ್ಪ ಚೌಧರಿ ಸಾ: ಪ್ಲಾಟ ನಂ 62 ರಾಜಮಹಲ್ ಲೇಔಟ ಸಾಯಿ ಮಂದಿರ ಹಿಂದುಗಡೆ ಕಲಬುರಗಿ ರವರು ದಿನಾಂಕ 11-05-2015 ರಂದು ರಾತ್ರಿ ನಾನು ಮತ್ತು ನನ್ನ ಪತ್ನಿ ಶಂಕ್ರಮ್ಮ ಇಬ್ಬರು ಮಕ್ಕಳು ಊಟ ಮಾಡಿ ಮನೆಯಲ್ಲಿ ಶಂಕೆ ಆಗುತ್ತಿದ್ದರಿಂದ ಮನೆ ಬಾಗಿಲ ಬೀಗ ಹಾಕಿ ಛತ್ತಿನ ಮೇಲೆ ಮಲಗಿಕೊಂಡಿದ್ದು, ಇಂದು ಬೆಳ್ಳಿಗೆ 5 ಗಂಟೆಗೆ ಎದ್ದು ಕೆಳಗೆ ಬಂದು ನೋಡಲು ಮನೆ ಬೀಗ ಮುರಿದಿದ್ದು,  ಮತ್ತು ಮನೆಯಲ್ಲಿಯ ಅಲಮಾರಿ ತೆರೆದಿದ್ದು,  ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿದ್ದವು.  ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲ ಬೀಗ ಮುರಿದು ಅತಿಕ್ರಮ ಪ್ರವೇಶ ಮಾಡಿ 24,500/- ಬೆಳ್ಳಿ ಮತ್ತು ಬಂಗಾರದ ನಾಣ್ಯಗಳು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಶೋಕ ನಗರ ಠಾಣೆ : ಶ್ರೀ ರವೀಂದ್ರ ತಂದೆ ಮಲ್ಲಿಕಾರ್ಜುನ ಶೆಟ್ಟಿ  ಸಾ : ಪ್ಲಾಟ ನಂ 37 ಶ್ರೀನಗರ ಚಿತ್ತಾರಿ ಅಡ್ಡಾ ಹಿಂದುಗಡೆ ಕಲಬುರಗಿ ರವರು ದಿನಾಂಕ 13-05-2015 ರಂದು ನಮ್ಮ  ಮನೆಗೆ ಬೀಗ ಹಾಕಿ ನಮ್ಮ ಚಿಕ್ಕಪ್ಪನವರ ಮದುವೆ ವರ್ಷಾಚರಣೆ ಕಾರ್ಯಕ್ರಮಕ್ಕೆ  ಮನೆಯವರೆಲ್ಲರೂ ಅಪಜಲಪೂರಕ್ಕೆ ಹೋಗಿದೆವು.  ಹೋಗುವಾಗ ನಮ್ಮ ಮನೆ ಕೆಲಸದವಳಾದ ಭಾರತಿ ಗಂಡ ದೇವು ರವರಿಗೆ ದಿನಾಲು ಮುಂಜಾನೆ ಕಸ್ ಬಳಿಯುವಂತೆ ಹೇಳಿದ್ದು  ದಿನಾಂಕ 15-05-2015 ರಂದು ಮುಂಜಾನೆ 7 ಗಂಟೆ ಸುಮಾರಿಗೆ ನಮ್ಮ  ಪಕ್ಕದ ಮನೆಯವರಾದ ರವಿ ತಂದೆ ಅಣ್ಣರಾವ ಪಾಟೀಲ ರವರು ನನಗೆ ಪೋನ ಮಾಡಿ ನಿಮ್ಮ ಮನೆ ಕೆಲಸದವಳಾದ ಭಾರತೀ ಇವಳು ಕಸ ಗುಡಿಸಲು ಹೋದಾಗ ಮನೆಯ ಬಾಗಿಲು ಬೀಗ ಮುರಿದಿರುತ್ತದೆ. ಎಂದು ಹೇಳಿರುತ್ತಾಳೆ.  ನಾವು ಹೋಗಿ ನೋಡಿದ್ದು ರಾತ್ರಿ ವೇಳೆ ಮನೆ ಕಳ್ಳತನವಾಗಿರುತ್ತದೆ. ಎಂದು ಹೇಳಿದ ಕೂಡಲೆ ನಾನು ಮತ್ತು ನನ್ನ ಹೆಂಡತಿ ಇಬ್ಬರು ಅಫಜಲಪೂರದಿಂದ ಕಲಬುರಗಿಯ ನನ್ನ ಮನೆಗೆ ಬಂದು ನೋಡಲು ಮುಖ್ಯ ಬಾಗಿಲು ಬೀಗ ಕೊಂಡಿ ಮುರಿದಿದ್ದು,  ಒಳಗಡೆ ಹೋಗಿ ನೋಡಲು ಎರಡು ಬೆಡ್ ರೂಮಿನಲ್ಲಿರುವ ಅಲಮಾರ, ಕಪಾಟದಲ್ಲಿರುವ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿರುತ್ತವೆ. 230 ಗ್ರಾಂ ಬಂಗಾರದ ಆಭರಣಗಳು ಅ.ಕಿ 5,00,000/- ರೂ  ಮತ್ತು ನಗದು ಹಣ 1,80,000/- ರೂ ನೇದ್ದವುಗಳನ್ನು ದಿನಾಂಕ 14/15-05-2015 ರ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮನೆ ಬಾಗಿಲ ಬೀಗ ಮುರಿದು ಅತಿಕ್ರಮ ಪ್ರವೇಶ ಮಾಡಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ