POLICE BHAVAN KALABURAGI

POLICE BHAVAN KALABURAGI

29 June 2012

GULBARGA DIST REPORTED CRIMES

ಯು.ಡಿ.ಅರ್. ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಸುಮಾರು 2-3 ದಿವಸಗಳ ಹಿಂದೆ ಅಪರಿಚಿತ ಗಂಡು ಶವ ಅಂದಾಜ 30 ರಿಂದ 35 ವರ್ಷ ವಯಸ್ಸಿನವನು ಅವರಾದ (ಬಿ) ಸೀಮೆಯಲ್ಲಿ ಬರುವ ರಜಾಕ ಮೇವಡಿ ಇವರ ಹೊಲದಲ್ಲಿ ಮೃತಪಟ್ಟಿದ್ದು ಅವನ ಮೈಮೇಲೆ ಮುಖ, ಎದೆ, ಹೊಟ್ಟೆ, ಕೈ ಕಾಲುಗಳ ಮೇಲೆ ಚರ್ಮ ಸುಂಕಾಗಿ ಕಪ್ಪಾಗಿರುತ್ತದೆ ಅವನು ಬಡಕಲು  ಶರೀರ  ಉಳ್ಳವನು ಇದ್ದು ಅವನ ಮೈಮೇಲೆ ಯಾವುದೇ ಗಾಯ ವಗೈರೇ ಇರುವುದಿಲ್ಲಾ. ಅವನ ಎಡಗಾಲಿನ ಕಾಲಿಗೆ ಕಪ್ಪು ಕಾಸಿದಾರ ಕಟ್ಟಿದ್ದು ನೋಡಲಾಗಿ ಅವನು ಯಾವದೋ ಕಾಯಿಲೆಯಿಂದ ಬಳಲುತ್ತಾ ಮೃತ ಪಟ್ಟಿರುತ್ತಾನೆ ಅಂತಾ ಶ್ರೀ ಅಕ್ಬರ ತಂದೆ ಮಹಿಬೂಬಸಾಬ ಮೇವಡಿ ವ:49 ವರ್ಷ  ಉ: ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ  ಮತ್ತು ಒಕ್ಕಲುತನ ಸಾ: ಅವರಾದ (ಬಿ) ಗ್ರಾಮರವರು ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಯು.ಡಿ.ಅರ್.ನಂ:17/2012 ಕಲಂ 174 ಸಿಅರಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಮತ್ತು ಜಾತಿ ನಿಂದೆನೆ ಪ್ರಕರಣ:
ವಾಡಿ ಪೊಲೀಸ್ ಠಾಣೆ: ಶ್ರೀ ಅಂದರೆ ಬಂದಪ್ಪಾ ಪಿ,ಕಟ್ಟಿಮನಿ ಡಿ.ಎಸ್.ಎಸ್. ಸಂಚಾಲಕ ಚಿತ್ತಾಪೂರ ತಾಲೂಕಿನ ಬೇಳಗೆರಾ ಗ್ರಾಮ ರವರು ನನಗೆ ಇಂದಿರಾ ಆವಾಸ ಮತ್ತು ಕೊಂಡವಾಡಿ ಹರಾಜ ಕುರಿತು ಗ್ರಾಮ ಸಭೆಗೆ ಹಾಜರಾಗುವಂತೆ ಶ್ರೀ ಸೂರ್ಯಕಾಂತ ಪಿಡಿಓ ರವರು ಹೇಳಿದ್ದರು. ಆ ಸಮದಯಲ್ಲಿ ಹಣಮಂತ ದೇವರ ಕಟ್ಟೆಯ ಮೇಲೆ ಬೆಳಿಗ್ಗೆ 11 ಗಂಟೆಗೆ ಊರಿನ ಎಲ್ಲಾ ಜಾತಿಯ ಜನರು ಮತ್ತು ಬೆಳಗೆರಾ ಗ್ರಾಮದ ಎಲ್ಲಾ ಗ್ರಾಮ ಪಂಚಾಯತ ಸದಸ್ಯರು ಮತ್ತು ಅದ್ಯಕ್ಷರು ಸಭೆಯಲ್ಲಿ ಭಾಗವಹಿಸಿದ್ದರು.  ಇಂದಿರಾ ಆವಾಸ ಮನೆಗಳನ್ನು ಹಂಚುವಾಗ ದುಡ್ಡು ತಿಂದು ಸದಸ್ಯರೆ ಮನೆಗಳನ್ನು ಹಂಚುಕೊಳ್ಳುತ್ತಿದ್ದಾಗ, ನಾನು ಅದನ್ನು ಖಂಡಿಸಿ ಬಡವರಿಗೆ ಮನೆಗಳನ್ನು ಕೊಡಿ ಎಂದು ಕೇಳಿದಾಗ ದೇವಪ್ಪಾ ತಂದೆ ಬಸಪ್ಪಾ ಕಡ್ಡೆರ (ಕಬ್ಬಲಿಗ) ಇತನು ಜಾತಿ ಎತ್ತಿ ಬೈದು  ಹೊಡೆ ಬಡೆ ಮಾಡಿರುತ್ತಾನೆ. ಊರಿನ ಮುಖಂಡರಾದ ಬಸಪ್ಪಾ ತಂದೆ ಮರೆಪ್ಪಾ ತುಮಕೂರ ಮತ್ತು ದೇವಪ್ಪಾ ತಂದೆ ಮರೆಪ್ಪಾ ತುಮಕೂರ ಭಿಮರಾಯ ನಿಳಿ ಮಿಸೆ, ಶರಣಪ್ಪಾ ಮಡಿವಾಳ ಕೂಡಾ ಅವಾಚ್ಚ ಶಬ್ದಗಳಿಂದ ನನ್ನನ್ನು ನಿಂದಿಸಿರುತ್ತಾರೆ. ಹಾಗು ಇನ್ನೂ ಕೇಲವರು ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 94/2012 ಕಲಂ 147, 504, 323, ಸಂಗಡ 149 ಐಪಿಸಿ ಮತ್ತು 3(1) (10) ಎಸಸಿ/ಎಸಟಿ ಸಿ ಆಕ್ಟ 1989 ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.