POLICE BHAVAN KALABURAGI

POLICE BHAVAN KALABURAGI

20 August 2012

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ ; ಶ್ರೀ ರಮೇಶ ತಂದೆ ಬಸವರಾಜ ಹುಗ್ಗಿ ಸಾ: ತೊನಸನಳ್ಳಿ ರವರು ನಾನು ತೊನಸಳ್ಳಿ ಗ್ರಾಮದ ವೀರಣ್ಣಾ ಪೂಜಾರಿ ಇವರ ಅಂಗಡಿಯಲ್ಲಿ ಕಿರಾಣಿ ಸಾಮಾನುಗಳನ್ನು ತೆಗೆದುಕೊಂಡು ಮನ ಕಡೆಗೆ ಬರುತ್ತಿರುವಾಗ ಪ್ರಕಾಶ ಹುಗ್ಗಿ ಇತನು ಕುಡಿದು ಬಂದು,ವಿನಾಕಾರಣ ಜಗಳ ತೆಗೆದು ಅವ್ಯಾಚ ಶಬ್ದಗಳಿಂದ ಬೈದು ಕೈಯಿಂದ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:109/2012 ಕಲಂ 341, 323, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಎತ್ತುಗಳ ಕಳ್ಳತನ ಮಾಡಿಕೊಂಡ ಹೋದ ಬಗ್ಗೆ:
ಗುಲಬರ್ಗಾ ಗ್ರಾಮೀಣ ಠಾಣೆ:ಮಲ್ಲೇಶಪ್ಫಾ ತಂಧೆ ಮರೆಪ್ಪಾ ಜಾನೆ ಸಾ|| ಸಿಂದಗಿ ತಾ|| ಜಿ|| ಗುಲಬರ್ಗಾ ರವರು ನಾನು ದಿನಾಂಕ 18-08-2012 ರಂದು ಬೆಳಿಗ್ಗೆ ನನ್ನ  ಹೊಲದಲ್ಲಿ ಗಳ್ಯಾ ಹೊಡೆದು ನಮ್ಮ ಹೊಲದ ಪಕ್ಕದಲ್ಲಿರುವ ನಂದಿ ಗೋಶಾಲೆ ಎದುರುಗಡೆ ಇರುವ ದನಗಳಿಗೆ ಚಿಕಿತ್ಸೆ ಮಾಡಲು ನೆಟ್ಟಿದ್ದ  ಕಬ್ಬಿಣದ ಪೈಪಿಗೆ ನಮ್ಮ ದೇವಣಿ ಜೋಡಿ ಎತ್ತುಗಳು ಹಗ್ಗದೊಂದಿಗೆ ಕಟ್ಟಿ  ನಾನು ನಂದಿ ಗೋಶಾಲೆಯಲ್ಲಿ ಮಲಗಿದ್ದು, ದಿನಾಂಕ:19-08-2012 ರಂದು ಮಧ್ಯರಾತ್ರಿ 2-30 ಗಂಟೆ ಸುಮಾರಿಗೆ ಎದ್ದು ನೋಡಲಾಗಿ ಯಾರೋ ಕಳ್ಳರು ಕಬ್ಬಿಣದ ಪೈಪಿಗೆ ಕಟ್ಟಿದ್ದ ಒಂದು ದೇವಣಿ ಎತ್ತಿನ ಹಗ್ಗ ಹರಿದು ಎತ್ತು ಕಳ್ಳತನ ಮಾಡಿಕೊಂಡು ಹೋಗಿ ರುತ್ಥಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 270/2012 ಕಲಂ 379 ಐಪಿಸಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ