ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ ; ಶ್ರೀ ರಮೇಶ ತಂದೆ ಬಸವರಾಜ ಹುಗ್ಗಿ ಸಾ: ತೊನಸನಳ್ಳಿ ರವರು ನಾನು ತೊನಸಳ್ಳಿ ಗ್ರಾಮದ ವೀರಣ್ಣಾ
ಪೂಜಾರಿ ಇವರ ಅಂಗಡಿಯಲ್ಲಿ ಕಿರಾಣಿ ಸಾಮಾನುಗಳನ್ನು ತೆಗೆದುಕೊಂಡು ಮನ ಕಡೆಗೆ ಬರುತ್ತಿರುವಾಗ
ಪ್ರಕಾಶ ಹುಗ್ಗಿ ಇತನು ಕುಡಿದು ಬಂದು,ವಿನಾಕಾರಣ ಜಗಳ ತೆಗೆದು ಅವ್ಯಾಚ ಶಬ್ದಗಳಿಂದ ಬೈದು ಕೈಯಿಂದ
ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:109/2012 ಕಲಂ
341, 323, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಎತ್ತುಗಳ ಕಳ್ಳತನ ಮಾಡಿಕೊಂಡ ಹೋದ ಬಗ್ಗೆ:
ಗುಲಬರ್ಗಾ ಗ್ರಾಮೀಣ ಠಾಣೆ:ಮಲ್ಲೇಶಪ್ಫಾ ತಂಧೆ ಮರೆಪ್ಪಾ
ಜಾನೆ ಸಾ|| ಸಿಂದಗಿ ತಾ|| ಜಿ|| ಗುಲಬರ್ಗಾ ರವರು ನಾನು ದಿನಾಂಕ 18-08-2012 ರಂದು ಬೆಳಿಗ್ಗೆ
ನನ್ನ ಹೊಲದಲ್ಲಿ ಗಳ್ಯಾ ಹೊಡೆದು ನಮ್ಮ ಹೊಲದ
ಪಕ್ಕದಲ್ಲಿರುವ ನಂದಿ ಗೋಶಾಲೆ ಎದುರುಗಡೆ ಇರುವ ದನಗಳಿಗೆ ಚಿಕಿತ್ಸೆ ಮಾಡಲು ನೆಟ್ಟಿದ್ದ ಕಬ್ಬಿಣದ ಪೈಪಿಗೆ ನಮ್ಮ ದೇವಣಿ ಜೋಡಿ ಎತ್ತುಗಳು
ಹಗ್ಗದೊಂದಿಗೆ ಕಟ್ಟಿ ನಾನು ನಂದಿ ಗೋಶಾಲೆಯಲ್ಲಿ
ಮಲಗಿದ್ದು, ದಿನಾಂಕ:19-08-2012 ರಂದು ಮಧ್ಯರಾತ್ರಿ 2-30 ಗಂಟೆ ಸುಮಾರಿಗೆ
ಎದ್ದು ನೋಡಲಾಗಿ ಯಾರೋ ಕಳ್ಳರು ಕಬ್ಬಿಣದ ಪೈಪಿಗೆ ಕಟ್ಟಿದ್ದ ಒಂದು ದೇವಣಿ ಎತ್ತಿನ ಹಗ್ಗ ಹರಿದು ಎತ್ತು
ಕಳ್ಳತನ ಮಾಡಿಕೊಂಡು ಹೋಗಿ ರುತ್ಥಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:
270/2012 ಕಲಂ 379 ಐಪಿಸಿ ಪ್ರಕರಣ ದಾಖಲ ಮಾಡಿಕೊಂಡು
ತನಿಖೆ ಕೈಕೊಂಡಿರುತ್ತಾರೆ
No comments:
Post a Comment