POLICE BHAVAN KALABURAGI

POLICE BHAVAN KALABURAGI

26 January 2012

GULBARGA DIST REPORTED CRIMES

ಕಳೆದ ತಿಂಗಳು ಅಫಜಲಪೂರ ತಾಲೂಕಿನ ಬಳುಂಡಗಿ ಗ್ರಾಮದ ಹತ್ತಿರ ಭೀಮರಾಯ ತಳವಾರ ಎಂಬಾತನಿಗೆ ಗುಂಡು ಹಾರಿಸಿ ಕೊಲೆ ಮಾಡಿ ನಾಪತ್ತೆಯಾಗಿದ್ದ ಹಾಗು 2000 ಹಾಗೂ 2005 ನೇ ಸಾಲಿನ ಕೊಲೆ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿತನ ಬಂಧನ.
ದಿನಾಂಕ 03-12-2011 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಬಳುಂಡಗಿ ಗ್ರಾಮದ ಹತ್ತಿರ ಬಾಬು ಮುಜಾವರ ಇವರ ಹೊಲದ ಪಕ್ಕದಿಂದ ಅಳ್ಳಗಿ ಗ್ರಾಮಕ್ಕೆ ಹೋಗುವ ರೋಡಿನ ಮೇಲೆ ಬಳುಂಡಗಿ ಗ್ರಾಮದ ಭೀಮರಾಯ ತಂದೆಸೈದಪ್ಪ ತಳವಾರ ಎಂಬಾತನಿಗೆ ಅರ್ಜುನ ತಂದೆ ರಾಮಚಂದ್ರ ತಳವಾರ, ಶಿವಕಾಂತಬಾಯಿ ಗಂಡ ಅರ್ಜುನ ತಳವಾರ, ಪ್ರಕಾಶ ತಂದೆ ಅರ್ಜುನ ತಳವಾರ, ಸುರೇಶ ತಂದೆ ಅರ್ಜುನ ತಳವಾರ ಸಾ ಎಲ್ಲರೂ ಬಳುಂಡಗಿ ಇವರು ಹಳೆಯ ವೈಷಮ್ಯದಿಂದ ಗುಂಡು ಹಾರಿಸಿ ಮತ್ತು ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಈ ಘಟನೆಗೆ ಸಂಬಂದಿಸಿದ ಆರೋಪಿತರಲ್ಲಿ ಪ್ರಕಾಶ ಮತ್ತು ಸುರೇಶ ಎಂಬುವರು ಇಲ್ಲಿಯವರೆಗೆ ತಲೆಮರೆಸಿಕೊಂಡಿದ್ದರು ಅಫಜಲಪೂರ ಪೊಲೀಸ್ ಠಾಣೆಯಲ್ಲಿ 2000 ಮತ್ತು 2005 ನೇ ಸಾಲಿನಲ್ಲಿ ವರದಿಯಾದ ಹಿಂದಿನ 2 ಕೊಲೆ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದವನು ಇಲ್ಲಿಯವರೆಗೆ ಸಿಕ್ಕಿರುವುದಿಲ್ಲ. ಇಂದು ದಿನಾಂಕ:26-01-2012 ರಂದು ಬೆಳಿಗ್ಗೆ 8-30 ಗಂಟೆ ಸುಮಾರಿಗೆ ಈ ಪ್ರಕರಣದ ಆರೋಪಿ ಪ್ರಕಾಶ ತಳವಾರ (ಜಮಾದಾರ) ಎಂಬಾತನು ಸೊನ್ನ ಗ್ರಾಮದ ಹೊಸ ಬ್ರಿಡ್ಜ ಹತ್ತಿರ ಇದ್ದಾನೆ ಎಂಬ ಬಗ್ಗೆ ಖಚಿತ ಬಾತ್ಮಿ ದೊರೆತಿದ್ದರಿಂದ ಮಾನ್ಯ ಎಸ್.ಪಿ.ಸಾಹೇಬರಾದ ಶ್ರೀ ಪ್ರವೀಣ ಪವಾರ, ಮಾನ್ಯ ಅಪರ ಎಸ್.ಪಿ.ಸಾಹೇಬರವರಾದ ಶ್ರೀ ಕಾಶಿನಾಥ ತಳಕೇರಿ ಮತ್ತು ಮಾನ್ಯ ಡಿ.ಎಸ್.ಪಿ.ಸಾಹೇಬರು ಆಳಂದ ಶ್ರೀ ಎಸ್.ಬಿ.ಸಂಬಾ ರವರ ಮಾರ್ಗದರ್ಶನದಲ್ಲಿ ಅಫಜಲಪೂರ ವೃತ್ತ ನಿರೀಕ್ಷಕರಾದ ಕೆ.ರಾಜೇಂದ್ರ ಮತ್ತು ಅಫಜಲಪೂರ ಠಾಣೆ ಪಿ.ಎಸ್.ಐ.ಮಂಜುನಾಥ ಎಸ್ ರವರು ಹಾಗು ಸಿಬ್ಬಂದಿಯವರಾದ ರಾಮಚಂದ್ರ, ಅರವಿಂದ, ರಾಜಶೇಖರ, ಭೀಮಾಶಂಕರ, ತುಳಜಪ್ಪ, ಚಂದ್ರಕಾಂತ, ಶಿವಾನಂದ ರವರೆಲ್ಲರು ಸದರ ಆರೋಪಿತನನ್ನು ದಸ್ತಗಿರಿ ಮಾಡಿ ಆರೋಪಿತನಿಂದ ಭೀಮರಾಯ ತಳವಾರ ಎಂಬಾತನಿಗೆ ಕೊಲೆ ಮಾಡಲು ಉಪಯೋಗಿಸಿದ ಒಂದು ನಾಡ ಪಿಸ್ತೂಲನ್ನು ವಶಪಡಿಸಿಕೊಂಡಿರುತ್ತಾರೆ. ಈ ಪತ್ತೆ ಕಾರ್ಯವನ್ನು ಮಾನ್ಯ ಎಸ್.ಪಿ.ಸಾಹೇಬರಾದ ಶ್ರೀ ಪ್ರವೀಣ ಪವಾರವರು ರವರು ಅಫಜಲಪೂರ ಠಾಣೆಯ ಪೊಲೀಸರ ಪತ್ತೆ ಕಾರ್ಯವನ್ನು ಪ್ರಶಂಸಿರುತ್ತಾರೆ.
ಮಹಿಳೆ ಮತ್ತು ಮಗು ಕಾಣೆಯಾದ ಪ್ರಕರಣ:
ಚಿಂಚೋಳಿ ಠಾಣೆ:
ಶ್ರೀ ವಿಶ್ವಾನಾಥ ತಂದೆ ವೀರಭದ್ರಪ್ಪಾ ಶಂಕರ ಸಾ: ಮರಪಳ್ಳಿ ರವರು ನನ್ನ ಮಗಳಾದ ಆಶಾರಾಣಿ ಇವಳು ತನ್ನ 4 ವರ್ಷದ ಮಗನಾದ ಪವನ ಇತನನ್ನು ಕರೆದುಕೊಂಡು ದಿನಾಂಕ: 23-01-2012 ರಂದು ಸಾಯಂಕಾಲ 1800 ಗಂಟೆಯ ಸುಮಾರಿಗೆ ಚಂದಾಪೂರ ಗ್ರಾಮದ ತಮ್ಮ ಮನೆಯಿಂದ ತಂಗಿಯ ಮನೆಗೆ ಹೊಗುತ್ತೇನೆ ಅಂತಾ ಹೇಳಿ ಹೋದವಳು ಮರಳಿ ಬಂದಿರುವದಿಲ್ಲ ಎಲ್ಲಾ ಕಡೆ ಹುಡುಕಾಡಿದರು ಅವರ ಬಗ್ಗೆ ಯಾವುದೆ ಸುಳಿಯು ಸಿಕ್ಕಿರುವದಿಲ್ಲಾ. ಕಾರಣ ಕಾಣೆಯಾದ ನನ್ನ ಮಗಳಾದ ಆಶಾರಾಣಿ ಮತ್ತು ನನ್ನ ಮಮ್ಮೊಗನಾದ ಪವನ ಇವರನ್ನು ಹುಡುಕಿ ಕೊಡಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 10/2012 ಕಲಂ ಮಹಿಳೆ ಮತ್ತು ಮಗು ಕಾಣೆಯಾದ ಬಗ್ಗೆ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಕಾಣೆಯಾದ ಆಶಾರಾಣಿ ಗಂಡ ಶಿವಕುಮಾರ ಪಾಟೀಲ್ ವ23 ವರ್ಷ, ಎತ್ತರ- 5 ಅಡಿ, ಸಾದಾರಣ ಮೈಕಟ್ಟು, ಗೋದಿಬಣ್ಣ, ಕಪ್ಪು ಕೂದಲು, ಬಿಳಿ ಬಣ್ಣದ ಪಂಜಾಬಿ ಉಡುಪುಗಳು ಧರಿಸಿರುತ್ತಾರೆ, ಕನ್ನಡ ಮತ್ತು ಭಾಷೆ ಬಲ್ಲವಳಾಗಿರುತ್ತಾರೆ. ಹಾಗು ಅವಳ ಮಗು ಕುಮಾರ ಪವನ ಇತನು ವಯ4 ವರ್ಷ, ಎತ್ತರ-3 ಅಡಿ, ಗೋದಿಬಣ್ಣ, ಕೆಂಪು ಬಣ್ಣದ ಟಿಶರ್ಟ,ಹಾಗು ನೀಲಿ ಬಣ್ಣದ ಅಂಡರವಿಯರ್ ಉಡುಪು ಹಾಕಿರುತ್ತಾರೆ. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಚಿಂಚೋಳಿ ಪೊಲೀಸ್ ಠಾಣಯ ದೂರವಾಣಿ ಸಂ: 08475-273033, ಮೋಬಾಯಿಲ್ ನಂ: 9480803588 ಅಥವಾ ಸಿಪಿಐ ಚಿಂಚೋಳಿ ರವರ ಮೋಬಾಯಿಲ್ ನಂ: 9480803540 ಅಥವಾ ಡಿ.ಎಸ.ಪಿ ಚಿಂಚೋಳಿ ರವರ ಮೋಬಾಯಿಲ್ ನಂ:9480803524 ಅಥವಾ ಗುಲಬರ್ಗಾ ಕಂಟ್ರೋಲ್ ರೂಮ್ ನಂ:08472-263604 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.
ಮೋಟಾರ ಸೈಕಲ್ ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:
ಶ್ರೀ ಫಕಿ ಅಹ್ಮದ ತಂದೆ ಜಮೀರ ಅಹ್ಮದ ಗೋಳಾ ಸಾ: ಮನೆ ನಂ. 6 ಅಂಭಾ ಭವಾನಿ ಗುಡಿಯ ಎದುರುಗಡೆ ಗೋದುತಾಯಿ ನಗರ ಗುಲಬರ್ಗಾರವರು ನಾನು ದಿನಾಂಕ 25/08/2011 ರಂದು ರಾತ್ರಿ 10 ಗಂಟೆ ಸುಮಾರಿಗೆ ಬಜಾಜ ಪಲ್ಸರ ಮೋಟಾರ ಸೈಕಲ್ ಕೆ.ಎ-32 ಕ್ಯೂ- 5821 ನೇದ್ದು ನಿಲ್ಲಿಸಿ ದಿನಾಂಕ:26/08/2011 ರಂದು ಬೆಳಿಗ್ಗೆ ಎದ್ದು ನೋಡಲು ಮೋಟಾರ ಸೈಕಲ್ ಇರಲಿಲ್ಲಾ ಯಾರೋ ಕಳ್ಳರು ನನ್ನ ಬಜಾಜ ಪಲ್ಸರ್ ಮೋಟಾರ ಸೈಕಲ್ ನಂ. ಕೆ.ಎ-32 ಕ್ಯೂ- 5821 ಇಂಜನ ನಂ. DHGBLF56920, ಚಸ್ಸಿ ನಂ. DHVBLF58155, ಮಾಡಲ್ ನಂ. 2004, ಅ.ಕಿ. 30,000/- ರೂ ನೇದ್ದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 9/2012 ಕಲಂ. 379 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.


ಅಪಹರಣ ಪ್ರಕರಣ:
ನರೋಣಾ ಠಾಣೆ:
ಶ್ರೀ ಯಲ್ಲಯ್ಯ ತಂದೆ ಈರಯ್ಯ ಇಳಗೇರ ಸಾ: ಚಿಂಚನಸೂರ ರವರು ನನಗೆ ಮಾಣಿಕಮ್ಮ ಎಂಬುವ 16 ವರ್ಷದ ಮಗಳಿದ್ದು ಅವಳು ನನ್ನ ಹೆಂಡತಿ ಜೋತೆಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದು ನಿನ್ನೆ ದಿನಾಂ:25/01/2012 ರಂದು ಹೊಲದಿಂದ ಮುಂಜಾನೆ ಮನೆಗೆ ಬಂದಾಗ ಹೆಂಡತಿಯು ತಿಳಿಸಿದ್ದೇನಂದರೆ , ಮಗಳಾದ ಮಾಣಿಕಮ್ಮ ಇವಳು ನಿನ್ನೆ ರಾತ್ರಿ ಮನೆಯಿಂದ ಏಕಿಗಾಗಿ ಹೊರಗೆ ಬಂದವಳು ಮರಳಿ ಬಂದಿರುವದಿಲ್ಲ ಎಲ್ಲಾ ಕಡೆ ಹುಡುಗಾಡಿದರೂ ಸಿಕ್ಕಿರುವುದಿಲ್ಲ್. ಎಂದು ತಿಳಿಸಿದಕ್ಕೆ ನಾನು ಮತ್ತು ಹೆಂಡತಿ ಹುಡುಕಾಡಿದ್ದು ಗ್ರಾಮದ ಸುಗಲಾಬಾಯಿ ಇವಳಿಂದ ಗೊತ್ತಾಗಿದ್ದೇನಂದರೆ ದಿನಾಂಕ:24/01/2012 ರಂದು ರಾತ್ರಿ 9-10 ನಿಮಿಷ ಸುಮಾರಿಗೆ ಮಾಣಿಕಮ್ಮ ಇವಳಿಗೆ ಹಣಮಂತ ಒಡ್ಡರ್ ಇತನು ಜಬರ ದಸ್ತಿಯಿಂದ ಕರೆದುಕೊಂಡು ಹೋಗುತ್ತಿರುವದ್ದನ್ನು ನೋಡಿರುದ್ದಾಗಿ ತಿಳಿಸಿದ್ದು ಅಲ್ಲದೆ ನನ್ನ ಹೆಂಡತಿ ಕೂಡ ಮೊದಲು ಹಣಮಂತನು ಮಗಳಿಗೆ ನೋಡಿದ ವಿಷಯದಲ್ಲಿ ಸೀಟ್ಟು ಮಾಡಿ ಬೈದ ವಿಷಯ ತಿಳಿಸಿದ್ದು ಕಾರಣ ಮಗಳು ಅಪ್ರಾಪ್ತ ವಯಸ್ಕಳಾಗಿ ಆತನು ಯಾವುದೋ ಉದ್ದೇಶದಿಂದ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 14/2012 ಕಲಂ 366 [ಎ] ಐಪಿಸಿ ಪ್ರಕಾರ ಪ್ರಕರಣದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಎಟಿಎಂ ದಿಂದ ಹಣ ಲಪಾಟಿಸಿದ ಬಗ್ಗೆ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ
ಕರಬಸಯ್ಯ ತಂದೆ ಮಳೇಂದ್ರಯ್ಯ ಹೀರೆಮಠ ಸಾ:ಕೆರಾಫ ಅಬ್ದುಲ ರಹೀಮಸಾಬ ಚೌದ್ರಿ ಮನೆ ನಂ ಎಲ್.ಐ.ಜಿ 40 ಹೌಸಿಂಗ ಬೋರ್ಡ ಕಾಲೋನಿ ಶಾಂತಿನಗರ ಗುಲಬರ್ಗಾ ರವರು ನಾನು ದಿನಾಂಕ 01/01/2012 ರಂದು ರಾತ್ರಿ 9-15 ರ ಸುಮಾರಿಗೆ ಎಸ್.ಬಿ.ಎಚ್.ಬ್ಯಾಂಕ ವಿದ್ಯಾನಗರ ಶಾಖೆಯ ಎ.ಟಿ.ಎಂ.ಕ್ಕೆ ಹಣ ಡ್ರಾ ಮಾಡಿಕೊಳ್ಳಲು ಹೋದಾಗ 24 ವರ್ಷದ ಒಬ್ಬ ಯುವಕ ಎ.ಟಿ.ಎಂ.ದಲ್ಲಿ ನಿಂತಿದ್ದನ್ನು ನಾನು ಹಣ ಡ್ರಾ ಮಾಡಲು ನನ್ನ ಎ.ಟಿ.ಎಂ. ಮಷಿನದಲ್ಲಿ ಹಾಕಿ ನನ್ನ ಕಾರ್ಡ ರಹಸ್ಯ ನಂಬರ ಹೊಡೆಯುವಾಗ ರಹಸ್ಯ ನಂಬರನ್ನು ತಿಳಿದುಕೊಂಡು ನೀವು ಸರಿಯಾಗಿ ಕಾರ್ಡ ಹಾಕಿರುವದಿಲ್ಲಾ ನಾನು ಸರಿಪಡಿಸಿಕೊಡುತ್ತೇನೆ ಅಂತಾ ಹೇಳಿದನು. ನಾನು ಬೇಡ ಅಂದರೂ ಸಹ ಅವನು ಎ.ಟಿ.ಎಂ. ಮಷಿನದಲ್ಲಿದ್ದ ನನ್ನ ಕಾರ್ಡನ್ನು ತೆಗೆದು ನನಗೆ ಕೊಟ್ಟು ಹೋದನು. ಅವನು ಹೊದ ನಂತರ ನಾನು ಎ.ಟಿ.ಎಂ.ಕಾರ್ಡನ್ನು ಮಷಿನದಲ್ಲಿ ಹಾಕಿ ನನ್ನ ರಹಸ್ಯ ನಂಬರ ಹೊಡೆದು ನೋಡಲಾಗಿ ಹಣ ಬರಲಿಲ್ಲ , ದಿನಾಂಕ 02/01/2012 ರಂದು ಬ್ಯಾಂಕಿಗೆ ಹಣ ಡ್ರಾ ಮಾಡಲು ಹೋದಾಗ ನನ್ನ ಅಕೌಂಟ ನಂ 52011409786 ನೇದ್ದರಲ್ಲಿ ಹಣ ಶಿಲ್ಕಿನಲ್ಲಿ ಇಲ್ಲಾ ಅಂತಾ ಗೊತ್ತಾಯಿತು. ಕಾರಣ ದಿನಾಂಕ 01/01/2012 ರ ರಾತ್ರಿ ಎಸ್.ಬಿ.ಎಚ್. ಬ್ಯಾಂಕಿನ ವಿದ್ಯಾನಗರದ ಎ.ಟಿ,ಎಂ.ದಲ್ಲಿ ಆಪರಿಚಿತ ಯುವಕನೊಬ್ಬ ನನ್ನ ಹತ್ತಿರ ಇದ್ದ ಬೇರೆ ಕಾರ್ಡನ್ನು ನನಗೆ ಕೊಟ್ಟು ನಂಬಿಕೆ ದ್ರೋಹ ಮಾಡಿ ನನ್ನ ಕಾರ್ಡನ್ನು ಲಪಟಾಯಿಸಿ ನನಗೆ ಮೋಸ ಮಾಡಿ ಎ.ಟಿ.ಎಂ. ಕಾರ್ಡನ್ನು ಲಪಟಾಯಿಸಿ ದಿನಾಂಕ 01/01/2012 ರ ದಿವಸದ ರಾತ್ರಿ ವೇಳೆಯಲ್ಲಿ ಯುಕೊ ಬ್ಯಾಂಕ ಎ.ಟಿ.ಎಂ.ದಿಂದ 10,000=00 ರೂ ಹಾಗೂ 8,500=00 ರೂ ಹೀಗೆ ಒಟ್ಟು 18,500=00 ರೂಪಾಯಿಗಳನ್ನು ಅಪರಿಚಿತ ವ್ಯಕ್ತಿ ನನ್ನ ಅಕೌಂಟಿನಲ್ಲಿದ್ದ ಹಣವನ್ನು ನನ್ನ ಎ.ಟಿ.ಎಂ.ಕಾರ್ಡನಲ್ಲಿದ್ದ ಹಣವನ್ನು ದುರುಪಯೋಗ ಪಡಿಸಿಕೊಂಡಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 08/2012 ಕಲಂ 406, 420 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹೆಂಡತಿಗೆ ಕಿರುಕುಳ ನೀಡಿದ ಬಗ್ಗೆ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಮಂಜುಳಾ ಗಂಡ ಚನ್ನಪ್ಪ ಗುತ್ತೇದಾರ ಗ ಸಾ: ಹುಮನಾಬಾದ ಹಾವಹೀರಾಪೂರ ತಾಜಿಗುಲಬರ್ಗಾರವರು ನನಗೆ ನನ್ನ ಗಂಡ ಚೆನ್ನಪ್ಪ ತಂದೆ ಅಂಬಯ್ಯ ಗುತ್ತೇದಾರ ಸಾ: ಹೀರಾಪೂರ ಮತ್ತು ನಾದಿನಿ ಚಂದ್ರಕಲಾ ಗಂಡ ಭೀಮ್ಮಯ್ಯ ಗುತ್ತೇದಾರ ಸಾ: ಹೀರಾಪೂರ ರವರು ನನ್ನ ಶೀಲದ ಬಗ್ಗೆ ಸಂಶಯ ಪಟ್ಟು ಕೈಯಿಂದ ಹೊಡೆ ಬಡೆ ಮಾಡಿ ದೈಹಿಕ ಮಾನಸಿಕ ಕಿರುಕುಳ ಕೊಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 24/2012 ಕಲಂ 498 (ಎ) 341 323 504 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ,
ಮೋಟಾರ ಸೈಕಲ್ ಕಳ್ಳತನ ಪ್ರಕರಣ:
ಆಳಂದ ಪೊಲೀಸ್ ಠಾಣೆ :
ಶ್ರೀ ಬಸವರಾಜ ತಂದೆ ಶಾಂತಪ್ಪ ಮೋರೆ ಸಾ ಮಾದನ ಹಿಪ್ಪರರ್ಗಾ ರವರು ನಾನು ದಿನಾಂಕ 22/01/2012 ರಂದು ಆಳಂದದಲ್ಲಿ ಎ.ವಿ.ಮಾಲಿಪಾಟೀಲ ಮಲ್ಯಾಣ ಪಂಟಪದ ಹತ್ತಿರ ಮಾಳಿ ಸಮಾಜದ ಜನ ಜಾಗ್ರತಿ ಸಮಾವೇಶಕ್ಕೆ ಬಂದಾಗ ನಾನು ಮತ್ತು ನನ್ನ ಸ್ನೆಹಿತನಾದ ಕೃಷ್ಣರಾಜ ಕಲ್ಯಾಣಿ ಸಿಂಗೆ ಇಬ್ಬರು ಕುಡಿಕೊಂಡು ನನ್ನ ದ್ವಿ-ಚಕ್ರ ವಾಹನ ಕೆಎ-32 ಆರ್-4282 ನೇದ್ದು ಹನುಮಾನ ಟಾಕೀಜ ಹತ್ತಿರ ನಿಲ್ಲಿಸಿ ಕಾರ್ಯಕ್ರಮಕ್ಕೆ ಹೋಗಿರುತ್ತೆವೆ. ಕಾರ್ಯಕ್ರಮ ಮುಗಿಸಿಕೊಂಡು ಬಂದು ನೋಡಿದಾಗ ನಿಲ್ಲಿಸಿದ ಸ್ಥಳದಲ್ಲಿ ನನ್ನ ದ್ವಿಚಕ್ರವಾಹನ ಇರಲ್ಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಲಿಖಿತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 19/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.