POLICE BHAVAN KALABURAGI

POLICE BHAVAN KALABURAGI

23 January 2014

Gulbarga District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 22-0-14 ರಂದು ಬೆಳಿಗ್ಗೆ 9-30 ಗಂಟೆ ಸುಮಾರಿಗೆ ಶ್ರೀ ಭಾಗಪ್ಪ ತಂದೆ ಭೀಮಶ್ಯಾ ಕಟ್ಟಿಮನಿ ಮತ್ತು ಆತನ ಮಾಲೀಕ ಇನೋವಾ ಕಾರ ಕೆಎ 50 ಎಂ 8585 ರಲ್ಲಿ ಕುಳಿತುಕೊಂಡು ಗುಲಬರ್ಗಾದಿಂದ ನರನಾಳ ಗ್ರಾಮಕ್ಕೆ ಲಕ್ಷ್ಮೀ ಕಾರ್ಯ ಕುರಿತು ಹೊರಟಿದ್ದು ಫಿರ್ಯಾದಿ ಕಾರು ನಡೆಸುತ್ತಿದ್ದು, ಪಕ್ಕದಲ್ಲಿ ರವಿಕುಮಾರ ಕುಳಿತಿದಿದ್ದು, ಗುಲಬರ್ಗಾ –ಹುಮನಾಬಾದ ಮುಖ್ಯ ರಸ್ತೆಯ, ತಾವರಗೇರಾ ಕ್ರಾಸ ದಾಟಿಬೀದಿ ಬಸವಣ್ಣ ದೇವರ ಗುಡಿ ದಾಟಿ ಸ್ವಲ್ಪ ಮುಂದೆ ಹೊರಟಾ ಹಿಂದಿನಿಂದ ಕೆ.ಎಸ್.ಅರ್.ಟಿ.ಸಿ. ಬಸ್ಸು ಕೆಎ 38 ಎಫ 628 ಚಾಲಕ  ಅರ್ಜುನ ತಂದೆ ಘಾಳೆಪ್ಪ ಮಳ್ಳಿ ಇತನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ಬಂದು ಅಪಘಾತಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ರಾಘವೇಂದ್ರ ನಗರ ಠಾಣೆ :ಶ್ರೀ ಅವಿನಾಶ ತಂದೆ ಶಿವಶರಣಪ್ಪಾ ಕೋಗನೂರ ಸಾ|| ಧನಗರಗಲ್ಲಿ ಬ್ರಹ್ಮಪೂರ, ಗುಲಬರ್ಗಾ ಇವರು ನಮ್ಮ ಮನೆಯ ಮುಂದೆ ನಿಂತಾಗ ಬ್ರಹ್ಮಪೂರ ಕನಕನಗರ ಬಡಾವಣೆಯ ಚನ್ನ @ ಚಾಂದಬಾಯಿ ನಾಯಿಕೊಡಿ ಇವರು ವಿನಾ: ಕಾರಣ ನನ್ನ ಜೊತೆಯಲ್ಲಿ ಜಗಳ ಮಾಡಿ ನನಗೆ ಖರ್ಚಿಗೆ ಹಣ ಕೊಡು ಅಂತಾ ಅಂದಿದ್ದು ಅದಕ್ಕೆ ನನ್ನ ಹತ್ತಿರ ಹಣ ಇಲ್ಲಾ ಅಂತಾ ಕೇಳಿರುತ್ತೇನೆ ಹಿಗಿದ್ದು ಇಂದು ದಿನಾಂಕ|| 22/01/2014 ರಂದು ಮಧ್ಯಾಹ್ನ 01-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಅಣ್ಣ ಮಹೇಶ ಮತ್ತು ನನ್ನ ತಾಯಿ ಭೀಮಬಾಯಿ ಎಲ್ಲರೂ ಮನೆಯಲ್ಲಿದ್ದಾಗ  ಅದೇ ವೇಳೆಯಲ್ಲಿ ಚನ್ನು @ ಚಾಂದಭಾಯಿ ನಾಯಿಕೊಡಿ ಇವರು ನಮ್ಮ ಮನೆಯ ಒಳಗೆ ಬಂದು ತನ್ನ ಜೇಬಿನಿಂದ ಒಂದು ಚಾಕು ತೆಗೆದು ಅವಾಚ್ಯ ಶಬ್ದಗಳಿಂದ ಬೈದು ನನ್ನ ಪ್ಯಾಂಟಿನ ಜೇಬಿನಲ್ಲಿದ್ದ 3000/- ರೂಪಾಯಿ ಕೈಹಾಕಿ ಜಬರದಸ್ತಿಯಿಂದ ದೋಚಿಕೊಂಡಿರುತ್ತಾನೆ ಆಗ ನನ್ನ ಅಣ್ಣ ಮಹೇಶ ಮತ್ತು ನನ್ನ ತಾಯಿ ಭೀಮಬಾಯಿ ಬಿಡಿಸಲು ಬಂದಾಗ ನನ್ನ ಅಣ್ಣ ಮಹೇಶನಿಗೆ ಕಾಲಿನಿಂದ ಹೊಟ್ಟೆಯ ಮೇಲೆ ಒದ್ದಿರುತ್ತಾನೆ ಮತ್ತು ನನ್ನ ತಾಯಿಗೆ ಕಾಲಿನಿಂದ ಹೊಟ್ಟೆಯ ಮೇಲೆ ಒದ್ದಿರುತ್ತಾರೆ ಮತ್ತು ಮನೆಯ ಟಿ.ವಿ ಟೇಬಲ್ ಮೇಲೆ ಇಟ್ಟಿದ ಒಂದು ನೋಕಿಯಾ ಕಂಪನಿಯ ಕಪ್ಪು ಬಣ್ಣ ಇದ್ದ ಮೋಬಾಯಿಲ್ ಫೋನ್ ಅದರಲ್ಲಿ ವೂಡಾಫೋನ್ ಸೀಮ್ ನಂ 08794290458 ನೇದ್ದನ್ನು ತೆಗೆದುಕೊಂಡು ಹೋದನು ಅವನು ಹೋಗುವಾಗ ಈ ವಿಷಯ ಯಾರಿಗಾದರು ಹೇಳಿದರೆ ನೀಮಗೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಭಯ ಹಾಕಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ಎ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.