POLICE BHAVAN KALABURAGI

POLICE BHAVAN KALABURAGI

25 April 2014

Gulbarga District Reported Crimes

ಕಳವು ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ 24-04-14 ರಂದು  ಬೆಳಗಿನ ಜಾವ 00-15 ಎಎಂದಿಂದ  01-50 ಎಎಂದ ಮಧ್ಯದ ಅವಧಿಯಲ್ಲಿ ಶ್ರೀ ದತ್ತಾತ್ರೇಯ ತಂದೆ ಮಧುಕರ ರಾವ ಚವ್ಹಾಣ ಸಾ : ನಾವದಗಿ (ಬಿ) ರವರ ಮನೆಯಲ್ಲಿ ಯಾರೊ ಕಳ್ಳರು ಪ್ರವೇಶ ಮಾಡಿ ಎರಡು ಕೋಣೆಗಳ ಕೀಲಿ ತೆರೆದು ಎರಡು  ಅಲಮಾರಿಗಳ ಮತ್ತು ಎರಡು ಸಂದೂಕುಗಳು ಹಾಗೂ ಒಂದು ಡಬ್ಬಿಗೆ ಹಾಕಿದ ಕೀಲಿ ಕೊಂಡಿ ಮುರಿದು ಒಳಗಿದ್ದ ಬಂಗಾರ ಮತ್ತು ಬೆಳ್ಳಿ ಆಭರಣಗಳು ಹಾಗೂ ನಗದು  ಹಣ ಹೀಗೆ ಒಟ್ಟು 3,90,500/- ರೂ ಮಾಲನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.