POLICE BHAVAN KALABURAGI

POLICE BHAVAN KALABURAGI

26 May 2012

GULBARGA DIST REPORTED CRIMES


4 ದಿವಸಗಳ ಹಿಂದೆ ಜೇವರ್ಗಿಲ್ಲಿ ಕಳ್ಳತನ ಮಾಡಿದ ಆರೋಪಿ ಬಂದನ;
5 ತೊಲಿ ಬಂಗಾರದ ಆಭರಣ, ನಗದು ಹಣ ಮತ್ತು ಮೊಬಾಯಿಲ್ ಜಪ್ತಿ.
ಶ್ರೀ ಚನ್ನಮಲ್ಲಯ್ಯ ಹಿರೇಮಠ ಇವರು ತಮ್ಮ ಮನೆಯಲ್ಲಿ ದಿನಾಂಕ 22-05-2012 ರ ಮಧ್ಯ ರಾತ್ರಿ ಯಾರೋ ಕಳ್ಳರು ಮನೆಯೊಳಗೆ ಪ್ರವೇಶಿಸಿ 5 ತೊಲೆ ಬಂಗಾರದ ಆಭರಣಗಳು, 9000=00 ರೂ ನಗದು ಹಣ, ಹಾಗೂ ಒಂದು ಸ್ಯಾಮಸ್ಯಾಂಗ್ ಮೋಬೈಲ್ ಹೀಗೆ  ಒಟ್ಟು 1, 35,000=00 ರೂ  ಕಳುವಾದ ಬಗ್ಗೆ ಜೇವರಗಿ ಠಾಣೆಯಲ್ಲಿ ದೂರು ನೀಡಿದ್ದರ  ಮೇರೆಗೆ ಮಾನ್ಯ ಶ್ರೀ ಪ್ರವೀಣ ಪವಾರ ಎಸ್ ಪಿ ಗುಲಬರ್ಗಾ, ಶ್ರೀ ಕಾಶಿನಾಥ ತಳಿಕೇರಿ ಹೆಚ್ಚುವರಿ ಎಸ್ ಪಿ ಗುಲಬರ್ಗಾ, ಹಾಗೂ ಶ್ರೀ ತಿಮ್ಮಪ್ಪ  ಡಿ ಎಸ್ ಪಿ ಗ್ರಾಮೀಣ ಉಪ ವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ವಿಶ್ವನಾಥ ಕುಲಕರ್ಣಿ ಸಿಪಿಐ ಜೇವರಗಿ ರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಗುರುಬಸ್ಸು, ತುಕರಾಮ, ಜಗದೇವಪ್ಪ, ಅಣ್ಣಪ್ಪ, ರವರು ಕಳ್ಳತನ ಮಾಡಿದ ಆರೋಪಿ ಹಣಮಂತ ತಂದೆ ಯಮನಪ್ಪ ಚಲವಾದಿ ವಯ: 40ವರ್ಷ ಸಾ: ಕಲಕೇರಿ ತಾ: ಸಿಂದಗಿ ಜಿ: ಬಿಜಾಪೂರ ಇತನನ್ನು ಕಲಕೇರಿ ಗ್ರಾಮದಲ್ಲಿ ಬಂದಿಸಿ ಕಳುವಾದ 5 ತೊಲಿ ಬಂಗಾರದ ಆಭರಣಗಳು ಹಾಗೂ ಮೋಬೈಲ್ ಹ್ಯಾಂಡ್ ಸೆಟ್ ಹೀಗೆ ಒಟ್ಟು 1, 26,000=00 ರೂ ವಶಪಡಿಸಿಕೊಂಡಿರುತ್ತಾರೆ, ಆರೋಪಿತನು ಇದಕ್ಕೂ ಮುಂಚೆ ಹುಣಸಗಿ ಹಾಗೂ ಚೌಕ ಪೊಲೀಸ ಠಾಣಾ ವ್ಯಾಪ್ತಿಯಲ್ಲಿಯು ಸಹ ಕಳ್ಳತನ ಮಾಡಿದ್ದು ತನಿಖೆಯಿಂದ ತಿಳಿದು ಬಂದಿರುತ್ತದೆ. ಆರೋಪಿತನನ್ನು ಮಾನ್ಯ ನ್ಯಾಯಾಲಕ್ಕೆ ಒಪ್ಪಿಸಲಾಗಿದೆ. 

GULBARGA DIST REPORTED CRIMES


ಕೊಲೆಗೆ ಪ್ರಯತ್ನ :
ಸ್ಟೇಷನ ಬಜಾರ ಪೊಲೀಸ ಠಾಣೆ :ಶ್ರೀ ಗಣೇಶ ತಂದೆ ಅಮರಯ್ಯ ಹಿರೇಮಠ ಸಾ:ರಾಮಪೂರ ತಾ:ಸಿಂದಗಿಹಾ:ವ:ನಾಗಪ್ಪಾ ಸಿರಸಗಿ ಮನೆಯಲ್ಲಿ ಬಾಡಿಗೆ ವಾಸಗಾಬ್ರೆ ಲೇಔಟ ಗುಲಬರ್ಗಾ ರವರು ನನ್ನ ತಂದೆಯವರು ರಾಂಪೂರದಲ್ಲಿರುವ ಹೊಲ ಸುಮಾರು ಎರಡು ವರ್ಷಗಳ ಹಿಂದೆ ಮಾರಾಟ ಮಾಡಿ ಬಂದ ಹಣವನ್ನು ಖರ್ಚು ಮಾಡಿರುತ್ತಾನೆ. ಹೀಗಾಗಿ ಸುಮಾರು ಎರಡು ತಿಂಗಳಿಂದ ಹೊಲ ಮಾರಿದ ಹಣದ ವಿಷಯದಲ್ಲಿ ನನ್ನ ತಾಯಿ ನನ್ನ ತಂದೆಗೆ ಹಣ ಕೇಳುತ್ತಿರುವದರಿಂದ ನನ್ನ ತಂದೆ ನನ್ನ ತಾಯಿಗೆ ಹೊಡೆಬಡೆ ಮಾಡುವದು ಜಗಳ ತೆಗೆಯುವದು ಮಾಡುತ್ತಿದ್ದನು.ದಿನಾಂಕ 25-05-12 ರಂದು ರಾತ್ರಿ 9-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಅಜ್ಜಿಯಾದ ಕರಿಬಸಮ್ಮ, ನನ್ನ ತಂಗಿ ಭಾಗ್ಯವತಿ ಮಾಳಿಗೆ ಮೇಲೆ ಮಲಗಲು ಹೋಗುವಾಗ ನನ್ನ ತಾಯಿ ಸಂಗಮ್ಮ ಗಣೇಶ ಅಂತಾ  ಚೀರುದಳು. ಆಗ ನಾವೆಲ್ಲರು ಮಾಳಿಗೆ ಮೇಲಿಂದ ಕೆಳಗೆ ಬಂದು ನೋಡಲಾಗಿ ನನ್ನ ತಾಯಿಗೆ ಚಾಕುವಿನಿಂದ ಕುತ್ತಿಗೆಗೆ ಹಾಗೂ ಎರಡು ಭುಜಗಳ ಮೇಲೆ ಹೊಡೆದು ಬಾರಿ ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿ ತಾನು  ನೇಣು ಹಾಕಿಕೊಳ್ಳಲು ಪ್ರಯತ್ನಿಸುತ್ತಿದ್ದನ್ನು ನನ್ನ ತಾಯಿಗೆ ಉಪಚಾರಕ್ಕಾಗಿ ಬಸವೇಶ್ವರ ಆಸ್ಪತ್ರೆಗೆ ಖಾಸಗಿ ವಾಹನದಲ್ಲಿ ನಾನು ಮತ್ತು ನನ್ನ ಮನೆಯ ಪಕ್ಕದವರು ಕೂಡಿ ಉಪಚಾರಕ್ಕಾಗಿ ಸೇರಿಕೆ ಮಾಡಿರುತ್ತೇವೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 77/12 ಕಲಂ 325, 307 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ಆಬಿದ ಹುಸೇನ ತಂದೆ ಚಾಂದ ಹುಸೇನ ಸಾ: ಹೈಕೋರ್ಟ ಆಫ ಕರ್ನಾಟಕ ಸೆರೂಕ್ಯೂಟ ಬಾಚ ಗುಲಬರ್ಗಾರವರು ರವರು ನಾನು ದಿನಾಂಕ 25-05-12 ರಂದು ರಾತ್ರಿ 8-30  ಗಂಟೆಗೆ ಹೈಕೋರ್ಟ ಕಾರ ನಂ ಕೆಎ-01 ಜೆ-4856 ರ ಚಾಲಕ ಸಲೀಮ ತಂದೆ ಮಹಿಬೂಬ ಸಾಬ ಇತನು ಕೋರ್ಟನಿಂದ ಕಾರಿಗೆ ಪೇಟ್ರೂಲ ಹಾಕಿಸಿಕೊಂಡು ಬರಲು ಶಕ್ತಿ ಪೇಟ್ರೂಲ ಪಂಪಗೆ ಬಂದು ಪೇಟ್ರೂಲ ಹಾಕಿಸಕೊಂಡು  ಹೈಕೋರ್ಟ ಕಡೆಗೆ ಬರುವಾಗ ಸನ್ ಇಂಟರ ನ್ಯಾಷೆನಲ್ ಹೋಟೇಲ ಎದುರು ರೋಡಿನ ಮೇಲೆ ಒಂದು ಹುಡುಗಿ ನಡೆದುಕೊಂಡು ಹೋಗುವಾಗ ಅವಳನ್ನು ಬಚಾವ ಮಾಡಲು ಹೋಗಿ ರೋಡಿನ ಪುಟಪಾಲ ಮೇಲೆ ಇರುವ ಒಂದು ಮರಕ್ಕೆ ಡಿಕ್ಕಿ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 60/2012  ಕಲಂ: 279 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ ಮಧುಕರ ತಂದೆ  ಅಂಬಾಜಿ  ಕಾಂಬಳೆ   ಸಾ:  ಮಾದನ ಹಿಪ್ಪರಗಾರವರು ದಿನಾಂಕ 24/05/2012 ರಂದು  ನಮ್ಮ ಮನೆಯಲ್ಲಿ  ನಾನು ಮತ್ತು ನನ್ನ ಹೆಂಡತಿ ಮಂಗಲಾಬಾಯಿನಮ್ಮ  ಮನೆಯೆ  ಮೇಲೆ ಪತ್ರವಾನ್ನು ಹಾಕುತ್ತಿದ್ದಾಗ ಮಲ್ಲಪ್ಪಾ ತಂದೆ ದೊಂಡಿಬಾ ಕಾಂಬಳೆ , ವಿಠಲ್ ತಂದೆ ದೊಂಡಿಬಾ ಕಾಂಬಳೆ, ವಿಮಲಾಬಾಯಿ  ಗಂಡ  ವಿಠ್ಠಲಕಾಂಬಳೆ   ಮಹಾನಂದ ಗಂಡ  ಗಣೇಶ, ಕುಹಿರಾಬಾಯಿತಂದೆ  ವಿಠ್ಠಲಕಾಂಬಳೆ  6) ಯಶಾಬಾಯಿ  ಗಂಡ  ಮಲ್ಲಪ್ಪ  ಕಾಂಬಳೆ  7)  ಬಾಬು  ತಂದೆ  ವಿಠ್ಠಲ  ಕಾಂಬಳೆ  ಸಾ:  ಎಲ್ಲರೂ  ಮಾದನ  ಹಿಪ್ಪರಗಾ ಇವರೆಲ್ಲರೂ   ತಮ್ಮ  ಕೈಯಲ್ಲಿ  ಕಟ್ಟಿಗೆ  ರಾಡು   ಕೈಯಲ್ಲಿ  ಹಿಡಿದುಕೊಂಡು  ಎಕೊದ್ದೇಶದಿಂದ  ಆಕ್ರಮಕೂಟ  ಕಟ್ಟಿಕೊಂಡು  ಬಂದು  ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ  ಠಾಣೆ   ಗುನ್ನೆ ನಂ  21/2012 ಕಲಂ  143,147,148, 323,324,504,506ಸಂಗಡ 149  ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮೋಸ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ಹೋಳಬಸಯ್ಯ ತಂದೆ ಚನ್ನವೀರಯ್ಯ ಸುರೇಬಾನ  ಸಾ: ಇಂದ್ರಜೀತ ವ್ಹೇರ ಹೌಸಿಂಗ ಕಾರ್ಪೋರೆಷನ್‌ ಆಳಂದ ರೋಡ ಗುಲಬರ್ಗಾ ರವರು ದಿ: ನಾಂಕ: 22/5/2012 ರಂದು ಸಾಯಂಕಾಳ 4 ಪಿಎಮಕ್ಕೆ ಸಂಗಮೇಶ್ವರ ಟ್ರಾನ್ಸ್‌‌ಪೋರ್ಟ ಲಾರಿ ನಂ ಕೆಎ 17 9186 ನೇದ್ದರಲ್ಲಿ ಪಾರ್ಲೆ ಬಿಸ್ಕಿಟ್‌ & ಚಾಕಲೇಟ 555 ಬಾಕ್ಸಗಳನ್ನು ರಾಯಚೂರ ನಂದನ ಟ್ರೇಡರ್ಸ ಅವರಿಗೆ ಬಿಲ್‌ ನಂ 344 & 386 ನೇದ್ದರಲ್ಲಿ 3,49,739/- ರೂ ಕಿಮ್ಮತ್ತಿನದ್ದನ್ನು ಕೊಟ್ಟು ಕಳುಹಿಸಿದ್ದು ಅದನ್ನು ದಿನಾಂಕ:23/5/2012 ರಂದು ಮದ್ಯಾಹ್ನ 3 ಗಂಟೆಗೆ ನಂದನ ಟ್ರೇಡರ್ಸ ರಾಯಚೂರ ಇವರ ಹತ್ತಿರ 80 ಬಾಕ್ಸ್‌‌‌ ಬಿಸ್ಕಿಟ & ಚಾಕಲೇಟ ಕಡಿಮೆ ಕೊಟ್ಟು ಅಫರಾದಿಕ ನಂಬಿಕೆ ದ್ರೋಹವನ್ನು ವೆಸಗಿರುತ್ತಾನೆ ಅಂತಾದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 171/2012 ಕಲಂ 406 420 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಮೋಸ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ಉಮೇಶ ತಂದೆ ಭೀಮಾಶಂಕರ ಖಣಜೆಗೋಳ @ ಎಕಲೂರ  ಸಾ: ಸೈಯದ್ಯ ಚಿಂಚೋಳಿರವರು ನಾನು ನನ್ನ ತಮ್ಮ ಕೂಡಿಕೊಂಡು ದಿನಾಂಕ: 23/4/2012 ರಂದು ಬೆಳಿಗ್ಗೆ 8-00 ಎಎಮಕ್ಕೆ ಸರ್ವೇ ನಂ 4 ನೇದ್ದರಲ್ಲಿ ಬಂಡೆಪ್ಪ ತಂದೆ ಶರಣಪ್ಪ ಖಣಜೇಗೊಳ,ಮಲ್ಲಮ್ಮಾ ಗಂಡ ಬಂಡೆಪ್ಪ ಖಣಜೇಗೋಳ,ಚಂದ್ರಕಾಂತ ತಂದೆ ಬಂಡೆಪ್ಪ ಖಣಜೇಗೋಳ ಸಾ: ಎಲ್ಲರೂ  ಸೈಯದ ಚಿಂಚೋಳಿ ತಾ: ಜಿ: ಗುಲಬರ್ಗಾ ರವರು ಗಳ್ಯಾ ಹೊಡೆಯುತ್ತಿದ್ದಾಗ. ಇಲ್ಲಿ ಏಕೆ ಗಳ್ಯೆ ಹೊಡೆಯುತ್ತಿದ್ದಿರಿ ಅಂತ ಕೇಳಿದಕ್ಕೆ ಗಳ್ಯಾ ಹೊಡೆಯುವರು ಅವ್ಯಾಚ್ಯಚಾಗಿ ಬೈದು ಬಡಿಗೆಯಿಂದ ಹೊಡೆದು ರಕ್ತಗಾಯ ಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 172/2012 ಕಲಂ  504, 323,324, ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.