POLICE BHAVAN KALABURAGI

POLICE BHAVAN KALABURAGI

16 May 2016

KALABURAGI DISTRICT POLICE PRESS NOTE

ಕಲಬುರಗಿ ಜಿಲ್ಲಾ ಪೊಲೀಸರ ಕಾರ್ಯಚರಣೆ  ಅಣ್ಣ  ತಂಗಿಯನ್ನು ದರೋಡೆ ಮಾಡಿದ ಕುಖ್ಯಾತ ದರೋಡೆಕೊರರ ಬಂಧನ,ಒಂದು ನಾಡ ಪಿಸ್ತೋಲ, ನಗದು ಹಣ, ಇನೋವಾ ಕಾರ ಹಾಗು ಇತರೆ ವಸ್ತುಗಳ ಜಪ್ತಿ


ಕಲಬುರಗಿ ಜೇವರಗಿ ರಾಷ್ಟ್ರಿಯ ಹೆದ್ದಾರಿ 218 ರ ಸರಡಗಿ(ಬಿ) ಕ್ರಾಸ ಹತ್ತಿರ ದಿನಾಂಕ 11-05-2016 ರಂದು ಬೆಳಗಿನ ಜಾವ 5-30 ಗಂಟೆಯ ಸುಮಾರಿಗೆ ಶ್ರೀ ಅನೀಲ ತಂದೆ ಬಾಬು ರಾಠೋಡ ರವರು ಮೊಟಾರ ಸೈಕಲ ಮೇಲೆ ತನ್ನ ತಂಗಿ ಮಂಜುಳಾಳೋಂದಿಗೆ ಗುಡೂರ ಗ್ರಾಮದಿಂದ ಮಹಾರಾಷ್ಟ್ರದ ಪನವೇಲ್ ಗೆ ಹೋಗುತ್ತಿರುವಾಗ ಸರಡಗಿ (ಬಿ) ಗ್ರಾಮದ ಕ್ರಾಸ ಹತ್ತಿರದ  ಪೆಟ್ರೋಲ ಪಂಪನಲ್ಲಿ ಪೆಟ್ರೋಲ ಹಾಕಿಸಿಕೊಳ್ಳುತ್ತಿರುವಾಗ ಅದೇ ವೇಳೆಗೆ ಒಂದು ಸಿಲ್ವರ ಬಣ್ಣದ ಇನೋವಾ ಕಾರು ಕೂಡಾ ಇಂಧನ ಹಾಕಿಸಿಕೊಳ್ಳಲು ಬಂದಿದ್ದು ಅವರು ಕೂಡಾ  ಇಂಧನ ಹಾಕಿಕೊಂಡಿದ್ದು ಇರುತ್ತದೆ. ಅನೀಲ ತಂದೆ ಬಾಬು ರಾಠೋಡರವರು ತಮ್ಮ ಮೊಟಾರ ಸೈಕಲಗೆ ಪೆಟ್ರೋಲ ಹಾಕಿಸಿಕೊಂಡು ಕಲಬುರಗಿ ಕಡೆಗೆ ಬರುತ್ತಿರುವಾಗ ಅದೇ ವೇಳೆಗೆ ಹಿಂದಿನಿಂದ ಪೆಟ್ರೋಲ ಪಂಪದಲ್ಲಿ ಇಂಧನ ಹಾಕಿಸಿಕೊಂಡವರು ಬಂದವರೆ ಅನೀಲ ರಾಠೋಡರವರ ಮೊಟಾರ ಸೈಕಲಗೆ ಅಡ್ಡಗಟ್ಟಿ ನಿಲ್ಲಿಸಿ ಕಾರಿನಿಂದ 5 ಜನರು ಇಳಿದು ಹೊಡೆಬಡೆ ಮಾಡಿ  ಅವರನ್ನು ಕಾರಿನಲ್ಲಿ ಕೂಡಿಸಿಕೊಂಡು ಅವರಲ್ಲಿ ಒಬ್ಬ ಮೊಟಾರ ಸೈಕಲ ತೆಗೆದುಕೊಂಡು ಹೋದನು. ಕಾರಿನಲ್ಲಿ ಫಿರ್ಯಾದಿ ಹಾಗು ಆತನ ತಂಗಿಯನ್ನು ಹೊಡೆಬಡೆ ಮಾಡಿ ಅವರಲ್ಲಿದ್ದ 7500/- ರೂ ನಗದು ಹಣ, ಎರಡು ಸಾಮಸಂಗ ಮೊಬೈಲ ಪೊನ ಕಿತ್ತುಕೊಂಡು ಅವರನ್ನು ವಿಜಯಪುರ ಜಿಲ್ಲೆಯ ಸಿಂಧಗಿ ಸಮೀಪ ಬಿಟ್ಟು ಓಡಿ ಹೋದ ಬಗ್ಗೆ  ಫರಹತಾಬಾದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

            ಈ ದರೋಡೆ ಪ್ರಕರಣವನ್ನು ಪತ್ತೆ ಮಾಡುವ ಕುರಿತು ಮಾನ್ಯ ಶ್ರೀ ಅಮಿತ್ ಸಿಂಗ್.IPS, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಲಬುರಗಿ, ಶ್ರೀ ಜಯಪ್ರಕಾಶ ಹೆಚ್ಚುವರಿ ಪೊಲೀಸ ಅಧೀಕ್ಷಕರು, ಕಲಬುರಗಿ ಹಾಗು ಶ್ರೀ ವಿಜಯ ಅಂಚಿ ಡಿ.ಎಸ್.ಪಿ ಗ್ರಾಮಿಣ ಉಪ-ವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಶ್ರೀ ಎಸ್.ಎಸ್. ಹುಲ್ಲೂರ ಡಿ.ಎಸ್.ಪಿ,  ಡಿ.ಸಿ.ಆರ್.ಬಿ ಘಟಕ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿ,  ತಂಡದಲ್ಲಿದ್ದ ಶ್ರೀ ಜೆ. ಹೆಚ್ ಇನಾಮದಾರ ಸಿಪಿಐ ಎಂ. ಬಿ ನಗರ ವೃತ್ತ, ಕಲಬುರಗಿ, ಲಕ್ಷ್ಮಿ ಪ್ರಸಾದ IPS,  ಎ.ಎಸ್.ಪಿ ಫರಹತಾಬಾದ ಪೊಲೀಸ ಠಾಣೆ ಶ್ರೀ ರಾಘವೇಂದ್ರ ಪಿ.ಎಸ್.ಐ ಎಂ.ಬಿ ನಗರ ಪೊಲೀಸ ಠಾಣೆ, ಶ್ರೀ ನಾಗಭೂಷಣ ಎ.ಎಸ್.ಐ ಫರಹತಾಬಾದ ಪೊಲೀಸ ಠಾಣೆ ಹಾಗು ಸಿಬ್ಬಂದಿಯವರು ಪ್ರಕರಣd ಆರೋಪಿತರನ್ನು ಪತ್ತೆ ಹಚ್ಚಿ , ಈ ಕೇಳಕಂಡ ಆರೋಪಿತರನ್ನು ಇಂದು ದಿನಾಂಕ 16/5/2016 ರಂದು ದಸ್ತಗಿರಿ ಮಾಡಿ, ಆರೋಪಿತರಿಂದ ಒಂದು ನಾಡ ಪಿಸ್ತ್ತೂಲ, ಒಂದು ಇನೋವಾ ಕಾರ, ಫಿಯಾದಿಯ ಮೊಟಾರ ಸೈಕಲ, ಒಂದು ಚಾಕು, ನಗದು ಹಣ ಹಾಗು ಮೊಬೈಲ ಪೊನಗಳನ್ನು ಜಪ್ತು ಪಡಿಸಿಕೊಳ್ಳಲಾಗಿದೆ.
 ದಸ್ತಗಿರಿ ಮಾಡಿದ ಆರೋಪಿತರ ಹೆಸರು ಮತ್ತು ವಿಳಾಸ
1) ಖಯೂಮ ಪಟೇಲ ತಂದೆ ಮಹಿಬೂಬ ಪಟೇಲ ವಃ 24 ವರ್ಷ ಜಾಃ ಮುಸ್ಲಿಂ ಉಃ ವ್ಯಾಪಾರ ಸಾ:ಕುಮ್ಮನ ಸಿರಸಗಿ ತಾ: ಜೇವರಗಿ ಜಿಲ್ಲಾ: ಕಲಬುರಗಿ
2) ಮಹ್ಮದ ಪಟೇಲ ತಂದೆ ಇಮಾಮ ಪಟೇಲ ಮಾಲಿಪಾಟೀಲ ವಃ 21 ವರ್ಷ ಉಃ ಕಾರ ಚಾಲಕ ಸಾ: ಕಾಸರ ಭೋಸಗಾ ತಾ: ಜೇವರಗಿ ಜಿಲ್ಲಾ: ಕಲಬುರಗಿ
3) ಮಹಿಬೂಬ ತಂದೆ ಗಫರಸಾಬ ವಃ 22 ವರ್ಷ ಜಾಃ ಮುಸ್ಲಿಂ ಉಃ ಸೆಂಟ್ರಿಂಗ್ ಕೆಲಸ ಸಾ: ಕುಮ್ಮನ ಸಿರಸಗಿ ತಾ: ಜೇವರಗಿ ಜಿಲ್ಲಾ: ಕಲಬುರಗಿ
4) ಬಾಬಾ ಪಟೇಲ ತಂದೆ ಸಾಹೇಬ ಪಟೇಲ ವಃ 21 ವರ್ಷ ಉಃ ಟಿಪ್ಪರ ಕ್ಲೀನರ್ ಸಾ: ಕುಮ್ಮನ ಸಿರಸಗಿ ತಾ: ಜೇವರಗಿ ಜಿಲ್ಲಾ: ಕಲಬುರಗಿ
5) ನಜೀರ ಪಟೇಲ ತಂದೆ ಸುಲ್ತಾನ ಪಟೇಲ ವಃ 23 ವರ್ಷ ಜಾಃ ಮುಸ್ಲಿಂ ಸಾ: ಕುಮ್ಮನ ಸಿರಸಗಿ ತಾ: ಜೇವರಗಿ ಜಿಲ್ಲಾ: ಕಲಬುರಗಿ

            ಒಟ್ಟು 5 ಜನ ಆರೋಪಿತರಿಂದ ನಗದು ಹಣ, ಕೃತ್ಯಕ್ಕೆ ಬಳಿಸಿದ ಒಂದು ನಾಡ ಪಿಸ್ತೋಲ, ಇನೋವಾ ಕಾರ, ಫಿರ್ಯಾದಿಯ ಮೊಟಾರ ಸೈಕಲ ಹಾಗು ಮೊಬೈಲ ಪೊನಗಳನ್ನು ಜಪ್ತು ಪಡಿಸಿಕೊಂಡು. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಆರೋಪಿ ಮತ್ತು ದರೊಡೆಮಾಡಿದ ಮಾಲು ಪತ್ತೆ ಮಾಡಿ ಪ್ರಕರಣ ಭೇದಿಸಿದ  ಈ ತನಿಖಾ ತಂಡದ ಪತ್ತೆ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿರುತ್ತಾರೆ

Kalaburagi District Reported Crimes

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 14-05-2016 ರಂದು ರಾತ್ರಿ ಕೃಷ್ಣಾ ತನ್ನ ಹಿರೋ ಹೊಂಡಾ ಸ್ಪೆಂಡರ ಕೆಎ 29  ಎಸ್ 7496 ಮೇಲೆ ಒಬ್ಬನೇ ಕುಳಿತುಕೊಂಡು ಕಾಂತಾ ಕಾಲನಿ ಸ್ಮಶಾನ ಎದುರಿನ ಬಿದ್ದಾಪುರ ಕಾಲನಿಗೆ ಹೋಗುವ ರೋಡಿನಿಂದ ಹೋಗುತ್ತಿರುವಾಗ ಅವನ ಹಿಂದಿನಿಂದ ಟಂಟಂ ಕೆಎ 32 ಬಿ 9972 ನೇದ್ದರ ಚಾಲಕ ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಯಿಸಿಕೊಂಡು ಬಂದು ನನ್ನ ಮಗನ ಮೋಟಾರ ಸೈಕಲಿಗೆ ಹಿಂದಿನಿಂದ ಡಿಕ್ಕಿ ಹೊಡೆದಾಗ ಕೃಷ್ಣಾ ಇತನು ರೋಡ ಬದಿಯಲ್ಲಿ ಕೆದರಿದ ಸ್ಥಳದಲ್ಲಿ ಉಸುಕು ತುಂಬಿ ಇಟ್ಟಿದ್ದ ದಿಬ್ಬಿಗೆ ಡಿಕ್ಕಿ ಹೊಡೆದು ಮೋಟಾರ ಸೈಕಲದೊಂದಿಗೆ ರೋಡಿನ ಮೇಲೆ ಬಿದ್ದಿದ್ದು ಟಂಟಂ ಚಾಲಕ  ಹಾಗೇ ಟಂಟಂ ಓಡಿಸಿಕೊಂಡು ಹೋಗಿದ್ದು. ಇದರಿಂದಾಗಿ ನನ್ನ ಮಗ ಬಲಗಣ್ಣಿಗೆ, ಬಲಭಾಗದ ತಲೆಗೆ ಬಲ ಗಲ್ಲಕ್ಕೆ, ಬಲ ಗಟ್ಟಬಾಯಿ ಎಡಗಣ್ಣಿನ ಹುಬ್ಬಿನ ಮೇಲೆ ಎದೆಗೆ ರಕ್ತಗಾಯ ಮತ್ತು ಭಾರಿ ಒಳಪೆಟ್ಟಾಗಿ ಸ್ಥಳದಲ್ಲಿ ಬೇಹುಷ ಆಗಿದ್ದು ಇರುತ್ತದೆ. ಅವನಿಗೆ ಉಪಚಾರ ಕುರಿತು 108 ಅಂಬುಲೈನ್ಸದಲ್ಲಿ  ಕಾಮರಡ್ಡಿ ಆಸ್ಪತ್ರೆ ಕಲಬುರಗಿ ಒಯ್ದು ಸೇರಿಕೆ ಮಾಡಿದ್ದು, ಅಲ್ಲಿನ ವೈದ್ಯರು ಚಿಕಿತ್ಸೆ ಸರಿಯಾಗಿ ಮಾಡುತ್ತಿಲ್ಲಾ ಎಂದು ಗೊತ್ತಾಗಿ  ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ದಿನಾಂಕ 15-05-2016 ರಂದು ಬೆಳಗಿನ 4-40 ಗಂಟೆ ಸುಮಾರಿಗೆ ಯುನೈಟೆಡ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿರುತ್ತೇನೆ. ಮೃತ ಕೃಷ್ಣಾ ಇತನು ನಿನ್ನೆ ದಿನಾಂಕ 14-05-2016 ರಂದು ರಾತ್ರಿ 08-30 ಗಂಟೆ ಸುಮಾರಿಗೆ ಆದ ರಸ್ತೆ ಅಪಘಾತಗಳಿಂದ ಉಪಚಾರ ಹೊಂದುತ್ತಾ ಗುಣಮುಖವಾಗದೇ ಇಂದು ದಿನಾಂಕ 15-05-2016 ರಂದು ಮಧ್ಯಾಹ್ನ 04-30 ಗಂಟೆಗೆ ನನ್ನ ಮಗ ಕೃಷ್ಣಾ  ಯುನೈಟೆಡ ಆಸ್ಪತ್ರೆ ಕಲಬುರಗಿಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಶ್ರೀಮಂತ ತಂದೆ ವೀರಪ್ಪಾ ಹಳ್ಳನಕರ ಸಾ : ಹೀರಾಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ ಸೋಮಯ್ಯ ತಂದೆ ಬಸಯ್ಯ ಮಠಪತಿ ಸಾ:ಡೊರಜಂಬಗಾ ತಾ:ಜಿ:ಕಲಬುರಗಿ ಇಂದು ಮದ್ಯಾಹ್ನ 02-30 ಗಂಟೆಯ ಸೂಮಾರಿಗೆ ಹುಮನಾಬಾದನಲ್ಲಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸ ನಮ್ಮೂರಿಗೆ ಹೋಗುವ ಸಂಬಂಧ ನಾನು ನನ್ನ ಹೆಂಡತಿ ಗೀತಾ ಮತ್ತು ನನ್ನ ಮಗ ಸುನೀಲಕುಮಾರ ಕೂಡಿಕೊಂಡು ಸರಕಾರಿ ಬಸ್ಸನಲ್ಲಿ ಕುಳಿತು ರೋಡಕಿಣ್ಣಿಗೆ ಬಂದಿದ್ದು ಇರುತ್ತದೆ. ನಂತರ ರೋಡಕಿಣ್ಣಿಯಿಂದ ಡೊರಜಂಬಗಾಕ್ಕೆ ಹೋಗುವ ಕುರಿತು ಕಲಬುರಗಿ ಹುಮನಾಬಾದ ಹೆದ್ದಾರಿಯ ಅಂಬಾಭವಾನಿ ಗುಡಿಯ ಮುಂದಗಡೆಯಿಂದ ನಾನು ನನ್ನ ಹೆಂಡತಿ ಗೀತಾ ರೋಡ ದಾಟುತ್ತಿದ್ದು ಅದೇ ವೇಳೆಗೆ ನನ್ನ ಮಗ ಸುನೀಲಕುಮಾರ ಈತನು ನಮ್ಮ ಮುಂದಗಡೆಯಿಂದ ರೋಡ ದಾಟುತ್ತಿದ್ದಾಗ ಮದ್ಯಾಹ್ನ 03-30 ಗಂಟೆಯ ಸೂಮಾರಿಗೆ ಹುಮನಾಬಾದ ಕಡೆಯಿಂದ ಒಬ್ಬ ಲಾರಿ ಟ್ಯಾಂಕರ ಚಾಲಕನು ತನ್ನ ಟ್ಯಾಂಕರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮುಂದಿನಿಂದ ರೋಡ ದಾಟುತ್ತಿದ್ದ ನನ್ನ ಮಗ ಸುನೀಲಕುಮಾರನಿಗೆ ಡಿಕ್ಕಿ ಹೋಡೆದು ಅಪಘಾತ ಪಡಿಸಿದ್ದು. ನಂತರ ಅದನ್ನು ನೋಡಿ ನಾನು ನನ್ನ ಹೆಂಡತಿ ಹಾಗೂ ನಮ್ಮೂರ ಶ್ರೀಮಂತ ಕೋರವಿ ಅಂಬಾರಾವ ಪಾಟೀಲ ಕೂಡಿಕೊಂಡು ನನ್ನ ಮಗ ಸುನೀಲಕುಮಾರನಿಗೆ ಎಬ್ಬಿಸಿ ನೋಡಲು ನನ್ನ ಮಗನ ಹೋಟ್ಟೆಯ ಮೇಲೆ ಭಾರಿ ಗುಪ್ತಗಾವಾಗಿದ್ದು. ಅಲ್ಲದೆ ಅವನ ಮರ್ಮಾಂಗದ  ಹತ್ತೀರ ಮೇಲ್ಬಾದಲ್ಲಿ ಭಾರಿ ರಕ್ತಗಾವಾಗಿ ನನ್ನ ಮಗನ ಮರ್ಮಾಂಗದ ಜೋತು ಬಿದ್ದಿದ್ದು. ಹಾಗೂ ಮರ್ಮಾಂಗದ ಕೆಳಭಾಗದ ಹತ್ತೀರ ರಕ್ತ ಗಾಯವಾಗಿದ್ದು ಇರುತ್ತದೆ. ನಂತರ ಅಪಘಾತ ಪಡಿಸಿದ ಟ್ಯಾಂಕರ ಚಾಲಕನು ತನ್ನ ಟ್ಯಾಂಕರನ್ನು ಅಲ್ಲೆ ರೋಡಿನ ಸೈಡಿಗೆ ನಿಲ್ಲಿಸಿದ್ದು.ಅದರ ನಂಬರ ನೋಡಲು ಎಮಹೆಚ-12 ಎಲ.ಟಿ-3764 ನೇದ್ದು ಇರುತ್ತದೆ. ಅಪಘಾತವಾದ ಜಾಗದಲ್ಲಿ ಜನರು ಜಮಾ ಆಗುತ್ತಿದ್ದನ್ನು ನೋಡಿ ಟ್ಯಾಂಕರ ಚಾಲಕನು ತನ್ನ ಟ್ಯಾಂಕರನ್ನು ಅಲ್ಲಿಂದ ತೆಗೆದುಕೊಂಡು ಓಡಿ ಹೋಗಿರುತ್ತಾನೆ. ಚಾಲಕನಿಗೆ ನೋಡಿದಲ್ಲಿ ನಾನು ಗುರುತಿಸುತ್ತೇನೆ. ಆಮೇಲೆ ಅಂಬಾರಾವ ಪಾಟೀಲ ಇವರು 108 ಅಂಬುಲೆನ್ಸಗೆ ಫೊನ ಮಾಡಿ ಕರೆಯಿಸಿದ್ದು. ನನ್ನ ಮಗನಿಗೆ ಉಪಚಾರ ಕುರಿತು ನಾನು ನನ್ನ ಹೆಂಡತಿ ಹಾಗೂ ಅಂಬಾಯ ಪಾಟೀಲ ಕೂಡಿಕೊಂಡು ಅಂಬುಲೆನ್ಸದಲ್ಲಿ ಹುಮನಾಬಾದ ಸರಕಾರಿ ದವಾಖಾನೆಗೆ ತರುವಾಗ ಹುಮನಾಬಾದ ಚೆಕ್ಕ ಪೋಸ್ಟ ಹತ್ತೀರ 04-15 ಪಿ.ಎಮನ ಸೂಮಾರಿಗೆ ಮಾರ್ಗ ಮಧ್ಯದಲ್ಲಿ ನನ್ನ ಮಗ ಸುನೀಲ ಕುಮಾರನು ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಸಿಕಂದರ ಪಟೇಲ ತಂದೆ ಮೊದಿನ ಪಟೇಲ ಜವಾರಿವಾಲೆ ಸಾಃ ಪ್ಲಾಟ ನಂ.128 ಅಂಬಿಕಾ ನಗರ ಕಲಬುರಗಿ ಇವರ ಮಗ ಸಾಹೀಲ ಪಟೇಲ ತಂದೆ ಸಿಕಂದರ ಪಟೇಲ ವಯಃ 5 ವರ್ಷ ಈತನು ದಿನಾಂಕ 07-05-2016 ರಂದು ಮುಂಜಾನೆ 9 ಗಂಟೆಗೆ ನಮ್ಮ ಮನೆಯ ಹತ್ತೀರ ಇರುವ ಇಸ್ತ್ರಿ ಅಂಗಡಿಗೆ ಇಸ್ತ್ರಿ ಬಟ್ಟೆ ತರಲು ಹೋಗಿ ಮರಳಿ ಮನೆಗೆ ಬಂದಿರುವುದಿಲ್ಲಾ ಆಗ ನಾನು ಮತ್ತು ನನ್ನ ತಂದೆ ಮೊದೀನ ಪಟೇಲ ಕೂಡಿ ಹೊರಗೆ ಬಂದು ಹುಡುಕಾಡಿ ಇಸ್ತ್ರಿ ಅಂಗಡಿಯವನಿಗೆ ವಿಚಾರಿಸಲು ಯಾವನೊ ಒಬ್ಬನು ಬಂದು ನಿಮ್ಮ ಹುಡುಗನಿಗೆ ಮೋಟಾರ ಸೈಕಲ ಮೇಲೆ ಕೂಡಿಸಿಕೊಂಡು ನಿಮ್ಮ ತಂದೆಯವರ ಹತ್ತೀರ ಹೋಗೊಣ ಅಂತಾ ಕರೆದುಕೊಂಡು ಹೋಗಿರುತ್ತಾನೆ ಅವನ ಹೆಸರು ಗೊತ್ತಿಲ್ಲಾ ನೋಡಿದರೆ ಗುರುತಿಸುತ್ತೇನೆ ಅಂತಾ ತಿಳಿಸಿದನು. ಆಗ ನಾವು ನನ್ನ ಮಗನಿಗೆ ಅಂದಿನಿಂದ ಅಲ್ಲಲ್ಲಿ ಎಲ್ಲಾ ಕಡೆ ಹುಡುಕಾಡಿದರು ಕೂಡಾ ಸಿಕ್ಕಿರುವುದಿಲ್ಲಾ ಮತ್ತು ಸಂಬಂಧಿಕರಲ್ಲಿ ವಿಚಾರಿಸಿದರು ಕೂಡಾ ನನ್ನ ಮಗ ಎಲ್ಲಿಯೂ ಸಿಕ್ಕಿರುವುದಿಲ್ಲಾ ನನ್ನ ಮಗ ಸಾಹೀಲ ಪಟೇಲ ಇವನಿಗೆ ಯಾರೋ ಒಬ್ಬನು ಮನುಷ್ಯನು ಅಪಹರಿಸಿಕೊಂಡು ಹೋಗಿರುತ್ತಾನೆ. ನನ್ನ ಮಗನು ಮೈಬಣ್ಣ ಕೆಂಪು ಗೋಧಿ ಮೈಬಣ್ಣ, ಹಣೆಯ ಮೇಲೆ ಹಳೆ ಗಾಯದ ಗುರುತು ಇದೆ, ಅಂದಾಜು 3ಎತ್ತರ ಇದ್ದು, ಮೈ ಮೇಲೆ ಹಸಿರು ಬಣ್ಣದ ಟೀ-ಶರ್ಟ ಮತ್ತು ಬಿಳಿ ಬಣ್ಣದ ನೈಟ ಪ್ಯಾಂಟ ಧರಿಸಿರುತ್ತಾನೆ ಮತ್ತು ಹಿಂದಿ ಭಾಷೆಯಲ್ಲಿ ಮಾತನಾಡುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶಾಂತಕುಮಾರ್ ತಂದೆ ಗಣಪತಿ ಹತ್ತಿಗಳೆ ಸಾ: ಪಡಸಾವಳಿ ತಾ: ಆಳಂದ ಹಾವ: ರುಕುಮ್‌ತೊಲಾ ದರ್ಗಾ ರೋಡ ಶಿವಲಿಂಗೇಶ್ವರ ಕಾಲೋನಿ ಕಲಬುರಗಿ,  ರವರು 6 ತಿಂಗಳ ಹಿಂದೆ ಕ್ರೋಜರ್ ನಂ ಎಪಿ 297317 ನೇದ್ದನ್ನು ಖರಿದಿ ಮಾಡಿರುತ್ತೇನೆ. ಸದರಿ ಕ್ರೋಜರ್ ಅನ್ನು ಕಲಬುರಗಿ ಆಳಂದ ರೋಡ್ ಲೈನಿಗೆ ನಡೆಸಿಕೊಂಡು ಬರುತ್ತೇನೆ. ಸದರಿ ಕ್ರೋಜರದ ಮಾಲೀಕ ಹಾಗೂ ಚಾಲಕನಿರುತ್ತೆನೆ. ರಾತ್ರಿ ಸಮಯದಲ್ಲಿ ನಮ್ಮ ಮನೆಯ ಮುಂದೆ ನಿಲ್ಲಿಸುತ್ತಿದ್ದು ದಿನಾಂಕ: 20-04-2016 ರಂದು ರಾತ್ರಿ 10 ಗಂಟೆಗೆ ನಮ್ಮ ಮನೆಗೆ ಬಂದು ಸದರಿ ಕ್ರೋಜರ್ ಮನೆಯ ಮುಂದೆ ನಿಲ್ಲಿಸಿ ಊಟ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ಬ್ಯಾಸಿಗೆ ಇದ್ದ ಪ್ರಯುಕ್ತ ಮನೆಯ ಮ್ಯಾಳಿಗೆಯ ಮೇಲೆ ಮಲಗಿಕೊಂಡಿರುತ್ತೇವೆ ಮರುದಿನ ದಿನಾಂಕ: 21-04-2016 ರಂದು ಬೆಳಿಗ್ಗೆ 06-30 ಗಂಟೆ ಸುಮಾರಿಗೆ ಎದ್ದು ಮ್ಯಾಳಿಗೆಯಿಂದ ಕೆಳಗೆ ಬಂದು ಸದರಿ ನಮ್ಮ ಕ್ರೋಜರ್ ನೋಡಲು ಕಾಣಲಿಲ್ಲ ಅಲ್ಲಿಇಲ್ಲಿ ಹುಡುಕಾಡಿದರೂ ಕೂಡಾ ಸಿಗಲಿಲ್ಲ. ದಿನಾಂಕ: 20-04-2016 ರಂದು ರಾತ್ರಿ 10 ಗಂಟೆಯಿಂದ ದಿನಾಂಕ: 21-04-2016 ರಂದು ಬೆಳಿಗ್ಗೆ 06-30 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಮನೆಯ ಮುಂದೆ ನಿಲ್ಲಿಸಿದ ಕ್ರೋಜರ್ ನಂ ಎಪಿ 297317 ಅ.ಕಿ 4,00,000/- ರೂ ಬೆಲೆ ಬಾಳುವುದನ್ನು ಕಳುವುಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.