POLICE BHAVAN KALABURAGI

POLICE BHAVAN KALABURAGI

11 March 2016

Kalaburagi District Reported Crimes.

ಫರಹತಬಾದ ಠಾಣೆ : ದಿನಾಂಕ 10/3/2016 ರಂದು ಬೆಳಿಗ್ಗೆ 7-00 ಗಂಟೆಗೆ ಜೇವರಗಿ-ಕಲಬುರಗಿ ರಾಷ್ಟ್ರಿಯ ಹೆದ್ದಾರಿ 218 ರ ಫಿರೋಜಾಬಾದ ದರ್ಗಾ  ಹತ್ತಿರ ರಸ್ತೆ ಅಪಘಾತವಾದ ಬಗ್ಗೆ ಮಾಹಿತಿ ಬಂದ ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಂಚಾರಿ ಸುಗಮಗೊಳಿಸಿ ಅಪಘಾತದಲ್ಲಿ ಮೃತ ಪಟ್ಟ ಲಾರಿ ನಂ ಎಂ.ಹೆಚ್ 40 ವೈ 9070 ನೇದ್ದರ ಚಾಲಕನಾದ ನಾಗೇಂದ್ರ ತಂದೆ ರಾಮ ಅವಧ ಯಾದವ ಸಾ// ರಸೂಲಪುರ ಜಿಲ್ಲಾ// ಗಾಜಿಪುರ ಉತ್ತರ ಪ್ರದೇಶ ಇತನ ಮೃತ ದೇಹವನ್ನು ಜಿಲ್ಲಾ ಸರಕಾರಿ ಆಸ್ಪತ್ರೆ ಶಗಾರಕ್ಕೆ ಸಾಗಿಸಿ ನಂತರ ಈ ಬಗ್ಗೆ ಮಾಹಿತಿಯನ್ನು ಮೃತನ ಸಂಬಂಧಿಕನಾದ ಸರ್ವೇಶ  ತಂದೆ ಪ್ರಭುನಾಥ ಇವರಿಗೆ ದೂರವಾಣಿ ಮೂಲಕ ತಿಳಿಸಿದ್ದು ಸಾಯಂಕಾಲ 4-00 ಗಂಟೆಗೆ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸದರಿ ಫಿರ್ಯಾದಿ ಸರ್ವೇಶ ತಂದೆ ಪ್ರಭುನಾಥ ಯಾದವ ಇತನಿಂದ ಫಿರ್ಯಾದಿ  ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ ಬಂದಿದ್ದು ಫಿರ್ಯಾದಿ ಹೇಳಿಕೆ ಸಂಕ್ಷಿಪ್ತ ಸಾರಾಂಶವೇನಂದರೆತಮ್ಮ ದೋಡ್ಡಪ್ಪ ರಾಮ ಅವದ ಯಾಧವ ಇವರ ಮಗನಾದ ನಾಗೇಂದ್ರ ಇತನು ಅವದೇಶ ಕುಮಾರ ಮೋರೆ ಸಾ// ಅಮಾವತಲಾ ಜಿಲ್ಲಾ// ಝೋನಪುರ ಇವರ ಲಾರಿ ನಂ ಎಂ.ಹೆಚ್ 40 ವೈ 9070 ನೇದ್ದರ ಮೇಲೆ ಚಾಲಕ ಅಂತಾ ಕೆಲಸ ಮಾಡಿಕೊಂಡಿದ್ದು ನಿನ್ನೆ ದಿನಾಂಕ 9/3/2016 ರಂದು ಸದರಿ ಲಾರಿಯಲ್ಲಿ ನನ್ನ ದೊಡ್ಡಪ್ಪನ ಮಗನಾದ ನಾಗೇಂದ್ರ ತಂದೆ ರಾಮ ಅವದ ಯಾಧವ ಇತನು ಗೋವಾದಲ್ಲಿ ಐಸಕ್ರೀಮ್ ಲೋಡ ಮಾಡಿಕೊಂಡು ಹೈದ್ರಾಬಾದಕ್ಕೆ ಹೋಗುವ ಕುರಿತು ಹೊರಟಿದ್ದು, ಜೇವರಗಿ ದಾಟಿದ ನಂತರ ಎನ್.ಹೆಚ್ 218 ರ ಫಿರೋಜಾಬಾದ ದಗರ್ಾದ ಹತ್ತಿರ ತಾನು ಚಲಾಯಿಸುತ್ತಿರುವ ಲಾರಿ ನಂ ಎಂ.ಹೆಚ್ ವೈ 9070 ನೇದ್ದನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರೋಡಿನ ಬದಿಗೆ ನಿಂತಿದ ಲಾರಿ ನಂ ಎಂ.ಹೆಚ್ 25 ಬಿ 9227 ನೇದ್ದಕ್ಕೆ ಹಿಂದಿನಿಂದ ಇಂದು ದಿನಾಂಕ 10/3/2016 ರಂದು ಬೆಳಿಗ್ಗೆ 6-00 ಗಂಟೆಯ ಸುಮಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ನಾಗೇಂದ್ರನಿಗೆ ಎದೆಗೆ ಭಾರಿ ಒಳಪೆಟ್ಟಾಗಿ, ಹಣೆಗೆ ರಕ್ತಗಾಯವಾಗಿ ಮೂಗಿನಿಂದ ಬಾಯಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತ ಪಟ್ಟಿರುವ ವಿಷಯ ನನಗೆ ಫರಹತಾಬಾದ ಪೊಲೀಸ ಠಾಣೆಯ ಶ್ರೀ ಜಾಲಂದರ ಎ.ಎಸ್.ಐ ಇವರು ದೂರವಾಣಿ ಕರೆ ಮಾಡಿ ಇಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ತಿಳಿಸಿದ್ದರಿಂದ ನಾನು ಕೂಡಲೇ ಗಾಬರಿಗೊಂಡು ಇನ್ನೋಬ್ಬ ನನ್ನ ಚಿಕ್ಕಪ್ಪನ ಮಗನಾದ ಅಂಗದ ಯಾದವ ಇತನೊಂದಿಗೆ ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ಬಂದು ನೊಡಲಾಗಿ ನಾಗೇಂದ್ರನು ಚಲಾಯಿಸುತ್ತಿರುವ ಲಾರಿ ನಂ ಎಂ.ಹೆಚ್ 40 ವೈ 9070 ನೇದ್ದು ರೋಡಿಗೆ ಪಂಚರ ಆಗಿ ನಿಂತಿರುವ ಲಾರಿ ನಂ ಎಂ.ಹೆಚ್ 25 ಬಿ 9227 ನೇದ್ದಕ್ಕೆ ಡಿಕ್ಕಿಯಾಗಿ ಮುಂದಿನ ಭಾಗ ಜಖಂಗೊಂಡಿದ್ದು ನನ್ನ ದೊಡ್ಡಪ್ಪನ ಮಗನಾದ ನಾಗೇಂದ್ರ ಯಾದವ ಇತನ ಶವದ ಬಗ್ಗೆ ವಿಚಾರಿಸಿಲು ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಇರುವ ಬಗ್ಗೆ ತಿಳಿದು ಬಂದ ಮೇರೆಗೆ ನಾವು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟು ನೋಡಲಾಗಿ ನನ್ನ ದೊಡ್ಡಪ್ಪನ ಮಗನಾದ ನಾಗೇಂದ್ರ ಯಾಧವ ಇತನಿಗೆ ಎದೆಗೆ ಭಾರಿ ಒಳಪೆಟ್ಟು, ಹಣೆಗೆ ರಕ್ತಗಾಯಮ, ಮೂಗಿನಿಂದ, ಬಾಯಿಯಿಂದ ರಕ್ತ ಬಂದು ಕಾಲುಗಳಿಗೆ ಭಾರಿ ರಕ್ತಗಾಯವಾಗಿ ಮೃತ ಪಟ್ಟಿದ್ದು ನಾನು ಶವವನ್ನು ನೋಡಿ ಗುರುತಿಸಿರುತ್ತೇನೆ. ಕಾರಣ ಮಾನ್ಯರು ಈ ಬಗ್ಗೆ ಮುಂದಿನ ಕಾನೂನು ರೀತಿಯ ಕ್ರಮ ಜರುಗಿಸಬೇಕು ಅಂತಾ ಇತ್ಯಾದಿ ಸಾರಾಂಶದ ಮೇಲಿಂದೆ ಗುನ್ನೆ ದಾಖಲಾಗಿರುತ್ತದೆ.
ಮಾಡಬೂಳ ಠಾಣೆ : ದಿನಾಂಕ-10/03/2016 ರಂದು 8-30 ಪಿ.ಎಮ್ ಕ್ಕೆ ಶ್ರೀ ಶಿವಶರಣಪ್ಪಾ ಎ.ಎಸ್.ಐ ಮಾಡಬೂಳ ಠಾಣೆ ಕ್ಯಾಂಪ್ ಜಿಜಿಹೆಚ್ ಕಲಬುರಗಿ ರವರು ತಾವು ಪಡೆದ ಹೇಳಿಕೆ ಫಿರ್ಯಾಧಿಯನ್ನು ಮುಂದಿನ ಕ್ರಮಕ್ಕಾಗಿ ಮಪಿಸಿ-616 ರವರ ಮುಖಾಂತರ ಕೊಟ್ಟು ಕಳುಹಿಸಿದ್ದು ಸ್ವೀಕೃತ ಮಾಡಿಕೊಂಡ ಹೇಳಿಕೆ ಸಾರಾಂಶವೆನೆಂದರೆ, ಇಂದು ದಿನಾಂಕ-10/03/2016 ರಂದು ಬೆಳ್ಳಿಗೆ 9 ಗಂಟೆಯಿಂದ 12 ಗಂಟೆ ವರೆಗೆ ಸದರಿ ಲಾರಿ ನಂ ಕೆಎ-39 4328 ನೇದ್ದರಲ್ಲಿ ಫರ್ಸಿ ಕಲ್ಲುಗಳನ್ನು ತುಂಬಿಕೊಂಡು ಸದರಿ ಲಾರಿಯು ನಮ್ಮ ಗ್ರಾಮದ ಮಲ್ಲಪ್ಪ ತಂದೆ ಅಣ್ಣಪ್ಪ ಅಂದರಕಿ ಈತನು ಚಲಾಯಿಸುತ್ತಿದ್ದು ಸದರಿ ಮಲ್ಲಪ್ಪ ನಾವು ಮೂರು ಜನರಿಗೆ ತಿಳಿಸಿದೆನೆಂದರೆ ಸದರಿ ಫರ್ಸಿ ಕಲ್ಲುಗಳನ್ನು ಗುಂಡಗುರ್ತಿ ಗ್ರಾಮಕ್ಕೆ ಒಯ್ದು ಇಳಿಸಿ ಬರೋಣ ನಡೆಯಿರಿ ಅಂತಾ ತಿಳಿಸಿದಾಗ ನಾನು ಹಾಗೂ ರಾಯಪ್ಪ, ಭೀಮು ಮೂರು ಜನರು ಸದರಿ ಲಾರಿಯ ಕ್ಯಾಬಿನಿನಲ್ಲಿ ಕುಳಿತಾಗ ಸದರಿ ಲಾರಿ ಮಲ್ಲಪ್ಪನು ಚಲಾಯಿಸಿಕೊಂಡು ಚಿತ್ತಾಪೂರ, ಟೆಂಗಳಿ ಕ್ರಾಸ್, ಮೇಲಿಂದ ಹೊರಟು ಗುಂಡಗುರ್ತಿ ಗ್ರಾಮವು ಇನ್ನು ಸ್ವಲ್ಪ ದೂರವಿರುವಾಗ ಸದರಿ ಲಾರಿಯನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ನಡೆಸಿಕೊಂಡು ಬ್ರಿಡ್ಜನ ಮೇಲೆ ಗೋಗುತ್ತಿರುವಾಗ ಒಮ್ಮೆಲೆ ಬ್ರಿಡ್ಜನ ಬಲ ಮೇಲಿಂದ ಕೆಳಗೆ ಪಲ್ಟಿ ಮಾಡಿದಾಗ ಸದರಿ ಲಾರಿ ನಾಲ್ಕು ಗಾಲಿಗಳು ಮೇಲಾಗಿ ಬಿದಿದ್ದರಿಂದ ನನಗೆ ಬಲಗೈ ಮಣಕೈ ಕೆಳಗೆ ಭಾರಿ ರಕ್ತಗಾಯ ಬಲಗೈ ಹಸ್ತಕ್ಕೆ ತರಚಿದ ಗಾಯವಾಗಿ ನಾನು ಹಾಗೂ ರಾಯಪ್ಪ, ಭೀಮು, ಮಲ್ಲಪ್ಪ ನಾಲ್ಕು ಜನ ಒಳಗಡೆ ಸಿಕ್ಕಿ ಬಿದ್ದಾಗ ರಸ್ತೆಗೆ ಹೋಗಿ ಬರುವ ಜನರು ಹೊರಗಡೆ ತೆಗೆದರು ನಂತರ ನೋಡಲಾಗಿ ಭೀಮು ಈತನಿಗೆ ತೆಲೆಗೆ ಭಾರಿ ಒಳಪಟಟ್ಟಾಗಿದ್ದು, ಮಲ್ಲಪ್ಪ ಈತನಿಗೆ ಕಾಲಿಗೆ ಮತ್ತು ಇತರ ಕಡೆಗೆ ರಕ್ತಗಾಯಗಳಾಗಿದ್ದು. ರಾಯಪ್ಪ ಈತನಿಗೆ ಎದೆಗೆ ಭಾರಿ ಒಳಪೆಟ್ಟಾಗಿದ್ದು ಅಲ್ಲಿನ ಸಾರ್ವಜನಿಕರು ಜಿ.ವ್ಹಿ.ಆರ್ ಅಂಬುಲೈನ್ಸಗೆ ಪೋನ್ ಮಾಡಿ ಕರೆಯಿಸಿ ಅದರಲ್ಲಿ ನಮಗೆ ನಾಲ್ಕು ಜನರಿಗೆ ಹಾಕಿ ಇಲ್ಲಿಗೆ ಕಳುಹಿಸಿದ್ದು ಮಾರ್ಗ ಮಧ್ಯದಲ್ಲಿ ಭೀಮು ತಂದೆ ಶರಣಪ್ಪ ಹಾಗೂ ರಾಯಪ್ಪ ತಂದೆ ಮರಿಲಿಂಗಪ್ಪ ಇಬ್ಬರೂ ಮೃತ ಪಟ್ಟಿದ್ದು ಸದರಿ ಘಟನೆ ನಡೆದಾಗ ಅಂದಾಜು 2 ಪಿ.ಮ್ ಆಗಿರಬಹುದು. ಕಾರಣ ಲಾರಿ ನಂ ಕೆಎ-39-4328 ನೇದ್ದರ ಚಾಲಕ ಮಲ್ಲಪ್ಪ ತಂದೆ ಅಣ್ಣಪ್ಪ ಈತನು ತನ್ನ ಲಾರಿಯನ್ನು ಅತಿವೇಗ ಹಾಗೂ ನಿಷ್ಕಾಳಜಿನದಿಂದ ನಡೆಯಿಸಿ ಗುಂಡಗುರ್ತಿ ಬ್ರಿಡ್ಜನ ಬಲ ಮೇಲಿಂದ ಕೆಳಗೆ ಪಲ್ಟಿ ಮಾಡಿದ ಪರಿಣಾಮ ಭಾರಿ ರಕ್ತಗಾಯ ಹಾಗೂ ಗುಪ್ತಗಾಯ ಹೊಂದಿ ರಾಯಪ್ಪ ಹಾಗೂ ಭೀಮು ಸಾವಿಗೆ ಕಾರಣನಾದವನ  ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ವಗೈರೆ ಹೇಳಿಕೆ ಫಿರ್ಯಾದಿ  ಮೇಲಿಂದ  ಗುನ್ನೆ ದಾಖಲಾಗಿರುತ್ತದೆ.