POLICE BHAVAN KALABURAGI

POLICE BHAVAN KALABURAGI

28 March 2015

Kalaburagi District Reported Crimes

ಅಪಘಾತ ಪ್ರಕರಣ :
ಸೇಡಂ ಠಾಣೆ : ಶ್ರೀ ಗೋಪಾಲ ತಂದೆ ಸಾಯಬಣ್ಣ ಮೇತ್ರಿ, ಸಾ: ಸುಲೇಪೇಠ ಗ್ರಾಮ, ತಾ: ಚಿಂಚೋಳಿ ಇವರ  ಅಣ್ಣನಾದ ಬಾಬು ಮೇತ್ರಿ ವ: 35 ವರ್ಷ ಇತನು ಮಳಖೇಡ ಗ್ರಾಮದ ಆರ್,ಸಿ,ಎಫ್ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ ಅಂತಾ ಕೆಲಸ ಮಾಡಿಕೊಂಡಿದ್ದನು ಇಂದು ಬೆಳಿಗ್ಗೆ 10 ಗಂಟೆಗೆ ನಮ್ಮ ಅಣ್ಣ ಬಾಬು ಇತನು ನನ್ನ ಮೋಟಾರ ಸೈಕಲ್ ನಂ-ಕೆಎ-32,ಎಲ್-9227 ನೇದ್ದನ್ನು ಚಲಾಯಿಸಿಕೊಂಡು ಮಳಖೇಡ ಆರ್,ಸಿ,ಎಫ್ ಕೆಲಸಕ್ಕೆ ಹೋಗಿದ್ದನು, ನಂತರ ಇಂದು 07-00 ಪಿ,ಎಮ್ ಸುಮಾರಿಗೆ ಸೇಡಂದಿಂದ ಭೀಮಾಶಂಕರ ತಂದೆ ಶರಣಪ್ಪಾ ಬಡಸ ರವರು ನನಗೆ ಪೋನ ಮಾಡಿ ತಿಳಿಸಿದ್ದೆನಂದರೆ,ನಾನು ಮತ್ತು ನನ್ನ ಗೆಳೆಯ ಕೂಡಿ ಮಳಖೇಡ ಕಡೆಯಿಂದ ಸೇಡಂ ಕಡೆಗೆ ಬರುತ್ತಿದ್ದಾಗ ಸೇಡಂನ ಲಾರಿ ಯಾರ್ಡ ಮತ್ತು ಹಳೆ ಐಬಿ ಮದ್ಯದ ಮುಖ್ಯ ರಸ್ತೆಯ ಮೇಲೆ ಮಳಖೇಡ ಕಡೆಯಿಂದ ಸೇಡಂ ಕಡೆಗೆ ಮೋ/ಸೈ ನಂ-ಕೆಎ-32,ಎಲ್-9227 ನೇದ್ದರ ಮೇಲೆ ಹೋಗುತ್ತಿದ್ದ ಚಾಲಕನಿಗೆ ಸೇಡಂ ಕಡೆಯಿಂದ ಒಂದು ಮಹೀಂದ್ರಾ ಪಿಕಪ್ ಜೀಪ ನಂ-ಎಪಿ-23,ವಾಯ್-3254 ನೇದ್ದರ ಚಾಲಕ ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೂಖಾಮುಖಿ ಡಿಕ್ಕಿ ಪಡಿಸಿ ಅಫಘಾತಪಡಿಸಿದ್ದರಿಂದ ಮೋ.ಸೈ.ಚಾಲಕ ರೋಡಿನ ಮೇಲೆ ಬಿದ್ದು ಒದ್ದಾಡುತ್ತಿದ್ದಾಗ ಹತ್ತಿರ ಹೋಗಿ ನೋಡಲಾಗಿ ನನಗೆ ಪರಿಚಯದವನಾದ ಬಾಬು ತಂದೆ ಸಾಯಿಬಣ್ಣ ಮೇತ್ರಿ ಸಾ: ಸುಲೇಪೇಠ ಇದ್ದು  ಆತನಿಗೆ ತಲೆಗೆ, ಮೂಗಿಗೆ, ಬಲಗಾಲಿಗೆ ಭಾರಿ ರಕ್ತ ಗಾಯ,  ಗುಪ್ತ  ಗಾಯಯಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಸದರಿ ಪಿಕ್ ಅಪ್ ಚಾಲಕ ಸ್ವಲ್ಪ ಮುಂದೆ ಹೋಗಿ ವಾಹನ ನಿಲ್ಲಿಸಿ ಓಡಿ ಹೋಗಿದ್ದು ಆತನ ಹೆಸರು ವಿಳಾಸ ಗೊತ್ತಾಗಿಲ್ಲಾ ನೋಡಿದರೆ ಗುರುತ್ತಿಸುತ್ತೇನೆ ಅಂತಾ ನೀವು ಸೇಡಂಕ್ಕೆ ಬರ್ರಿ ಅಂತ ತಿಳಿಸಿದಾಗ ನಾನು ಮತ್ತು ನಮ್ಮ ಅಣ್ಣ ತಮ್ಮಂದಿರು ಕೂಡಿ ಸೇಡಂಕ್ಕೆ ಬಂದು ನೋಡಲಾಗಿ ವಿಷಯ ನಿಜವಿರುತ್ತದೆ ಅಂತಾ ಸಲ್ಲಿಸದಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 27.03.2015 ರಂದು ಮಧ್ಯಾಹ್ನ ಜೇವರ್ಗಿ ಪಟ್ಟಣದ ಹೊಸ ಬಸ್ನಿಲ್ದಾಣದಲ್ಲಿ ನಾನು ನನ್ನ ಹೆಂಡತಿ ಮತ್ತು ಮಗ ಇವರೊಂದಿಗೆ ಕಲಬುರಗಿಗೆ ಹೋಗಲು ಜೇವರ್ಗಿ ಬಸ್ನಿಲ್ದಾಣದಲ್ಲಿ ಕಲಬುರಗಿಗೆ ಹೋಗುವ ಬಸ್ಹತ್ತುವಾಗ ಜನರ ಧಕ್ಕಾಮುಕ್ಕಿಯಲ್ಲಿ ನನ್ನ ಹೆಂಡತಿಯ ಕೈಯಲ್ಲಿದ್ದ ವ್ಯಾನಿಟಿ ಬ್ಯಾಗಿನಲ್ಲಿದ್ದ ಒಟ್ಟು 49.000/-ರೂ ನಗದು ಹಣವನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ.ಶಿವಕುಮಾರ ತಂದೆ ಶ್ರೀಮಂತರಾವ ಹೊಸಮನಿ ಸಾ|| ನೆಲೋಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಹಣಮಂತ ತಂದೆ ಬಸಣ್ಣ ಸಾರವಾಡ ಸಾ|| ಕೊರಳ್ಳಿ ತಾ|| ಆಳಂದ ಇವರು ರಾಜಶೇಖರ ಯಂಕಂಚಿ ಇತನು ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ರಸ್ತೆ ಗುತ್ತಿಗೆ ಹಿಡಿದು ಕೆಲಸ ಮಾಡುತ್ತಿದ್ದು, ರಸ್ತಗೆ ಕಾಮಗಾರಿ ಕಾಲಕ್ಕೆ ನಮ್ಮ ಹೊಲದಲ್ಲಿರುವ ಗಿಡ ಮತ್ತು ಬಂದಾರಿ ನಾಶಪಡಿಸಿದ್ದು ಇದರ ಬಗ್ಗೆ ನನಗೂ ಮತ್ತು ಆತನಿಗೂ ಮನಸ್ಥಾಪವಾಗಿದ್ದು ದಿನಾಂಕ 26/03/2015 ರಂದು ರಾತ್ರಿ 0800 ಗಂಟೆಗೆ ನನ್ನ ಲಾರಿಯೊಂದಿಗೆ ಭೂಸನೂರ ಫ್ಯಾಕ್ಟರಿಯ ಟೋಕನ ಆಫೀಸ ಹತ್ತಿರ ನಿಂತಾಗ ಸದರಿಯವನು ತನ್ನ ಸಂಗಡ ಇತರೆ 6 ಜನರೊಂದಿಗೆ ಅಕ್ರಮ ಕೂಟ ಕಟ್ಟಿಕೊಂಡು ಬಂದು ನನಗೆ ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ರಾಡಿನಿಂದ ತಲೆಗೆ ಮತ್ತು ಮೈ, ಕೈಗೆ, ಬೆನ್ನಿಗೆ ಹೊಡೆ ಬಡೆ ಮಾಡಿ ಜೀವ ಭಯ ಪಡಿಸಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.