POLICE BHAVAN KALABURAGI

POLICE BHAVAN KALABURAGI

19 June 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಫರತಾಬಾದ ಠಾಣೆ : ದಿನಾಂಕ 18-06-14 ರಂದು ಮಧ್ಯಾಹ್ನ 01:00. ಗಂಟೆ ಸುಮಾರಿಗೆ ಗುಲಬರ್ಗಾ ಜಿಲ್ಲೆಯ ಫರತಬಾದ ಪೊಲೀಸ ಠಾಣೆಯ ಸರಹದ್ದಿನಲ್ಲಿ ಬರುವ ಸೀತನೂರು ಗ್ರಾಮದಲ್ಲಿ ಬಸವಣ್ಣ ಕಟ್ಟೆಯ ಮೇಲೆ ಶರಣಯ್ಯ ತಂದೆ ಮೊಗಲಯ್ಯಾ ಗುತ್ತೇದಾರ ಸಾ-ಸೀತನೂರು ಅಂತಾ ತಿಳಿಸಿದ್ದು, ಇತನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟ ನಡೆಸುತ್ತಿರುವ ಬಗ್ಗೆ ಗುಲಬರ್ಗಾ ನಗರದ ಡಿಸಿಐಬಿ ಘಟಕದ ಸಿಬ್ಬಂದಿಯವರು ಮಾಹಿತಿ ಸಂಗ್ರಹಣೆ ಮಾಡಿ ಈ ಘಟಕದ ಫ್ರಭಾರದಲ್ಲಿರುವ ಶ್ರೀ. ಯು.ಶರಣಪ್ಪ. ಪೊಲೀಸ್ ಇನ್ಸಪೆಕ್ಟರ ರವರ ಮಾರ್ಗದರ್ಶನದಲ್ಲಿ ಶ್ರೀ.ದತ್ತಾತ್ರೇಯ ಎ.ಎಸ್.ಐ ಹಾಗೂ ಸಿಬ್ಬಂದಿಯವರು ಕೂಡಿ ದಾಳಿ ಮಾಡಿ ಸದರಿಯವನಿಗೆ ಹಿಡಿದುಕೊಂಡು ಅವನ ಕಡೆಯಿಂದ ಮಟಕಾ ನಂಬರ ಚೀಟಿ, ಒಂದು ಬಾಲ್ ಪೆನ್ನು, ಹಾಗೂ ನಗದು ಹಣ 6,850/- ರೂಪಾಯಿ, ಜಪ್ತು ಮಾಡಿಕೊಂಡು ಫರತಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಪಡಿತರ ಸೀಮೆ ಎಣ್ಣೆ  ಬಳಿಸಿ ಟ್ಯಾಂಕರ ಚಲಾವಣೆ ಮಾಡುತ್ತೀದ್ದ 13 ಟ್ಯಾಂಕರ ಜಪ್ತಿ
ವಿಶ್ವವಿದ್ಯಾಲಯ ಠಾಣೆ : ದಿನಾಂಕ 16.06.2014 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಾಯಂಕಾಲ 4.55 ಗಂಟೆ ವರೆಗೆ ಗುಲಬರ್ಗಾ ತಾಲ್ಲೂಕಿನ ನಂದೂರ ಗ್ರಾಮದ ವ್ಯಾಪ್ತಿಯಲ್ಲಿ ಬರುವ KIADB ಇಂಡಸ್ಟ್ರೀಯಲ್ ಎರಿಯಾದಲ್ಲಿರುವ ಹೆಚ್ಪಿಸಿ ಹಾಗೂ ಐಓಸಿ ತೈಲ ಕಂಪನಿಯ ಟರ್ಮಿನಲ್ ಇರುವ ಪ್ರದೇಶಕ್ಕೆ ಭೇಟಿ ನೀಡಿ ಸದರಿ ತೈಲ ಕಂಪನಿಯ ಟರ್ಮಿನಲನ ಪಾರ್ಕಿಂಗ್ ಎರಿಯಾದಲ್ಲಿ ಹಾಗೂ ಟರ್ಮಿನಲ್ ಎದುರಗಡೆಯ ರಸ್ತೆಯ ಬದಿ ನಿಲ್ಲಿಸಲಾಗಿರುವ ಇಂಧನ ಸಾಗಾಣಿಕೆ ಮಾಡುವ ಲಾರಿ ಟ್ಯಾಂಕರಗಳ ಚಾಲನೆಗೆ ಬಳಸುವ ಇಂಧನದ ಟ್ಯಾಂಕಗಳು   ಪರೀಕ್ಷಿಸಲಾಯಿತು. ಮಾನ್ಯ ಉಪ ನಿದೇಶಕರ ಮಾರ್ಗದರ್ಶನದಲ್ಲಿ ಈ ಮೇಲೆ ತಿಳಿಸಿದ ಮೂರು ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಯವರು ಸುಮಾರು 65 ಲಾರಿ ಟ್ಯಾಂಕರಗಳನ್ನು ಪಂಚರ ಸಮಕ್ಷಮ ಪರೀಕ್ಷಿಸಿದರು ಎಲ್ಲಾ ಲಾರಿ ಟ್ಯಾಂಕರಗಳ ಇಂಧನದ ಸೈಡ್ ಫ್ಯೂಲ್ ಟ್ಯಾಂಕಗಳಲ್ಲಿನ ಒಂದು ಲೀಟರ ಇಂಧನದ ಮಾದರಿಯನ್ನು ನಿಯಾಮಾನುಸಾರ ಹೊರಗೆ ತೆಗೆದು ಪರೀಕ್ಷೀಸಲಾಗಿ, ಇದರಲ್ಲಿ 13 ಲಾರಿ ಟ್ಯಾಂಕರಗಳ ಇಂಧನದ ಸೈಡ್ ಫ್ಯೂಲ್ ಟ್ಯಾಂಕಗಳಲ್ಲಿ   ಸದರಿ ಲಾರಿ ಟ್ಯಾಂಕರಗಳ ಚಾಲನೆಗಾಗಿ  ಡಿಜೈಲ್ ಬಳಸುವ ಬದಲು ಪಡಿತರ ಸೀಮೆ ಎಣ್ಣೆಯನ್ನು ಇಂಧನವಾಗಿ ಬಳಸುತ್ತಿರುವದು ಪತ್ತೆ ಹಚ್ಚಲಾಗಿದೆ, ತಪಾಸಣೆ ಸಮಯದಲ್ಲಿ ವಾಹನದ ಚಾಲಕರು ಹಾಜರು ಇರದ ಕಾರಣ ಅವರು ವಾಹನದಲ್ಲಿ ಬಿಟ್ಟು ಹೋಗಿದ ಕೀಲಿ ಕೈಯನ್ನು ತೆಗೆದುಕೊಂಡು ಬೀಗವನ್ನು ತೆರೆದು  ಅದರಲ್ಲಿದ ಇಂಧನವನ್ನು ಹೊರಗೆ ತೆಗೆದು ಪರೀಕ್ಷಿಸುವ ವಿಧಾನದ ಅನುಸಾರ ಪರೀಕ್ಷಿಸಿ ಅದರಲ್ಲಿ ಸೀಮೆ ಎಣ್ಣೆ ಇರುವದನ್ನು ಖಚಿತಪಡಿಸಿಕೊಂಡು ಪತ್ತೆ ಹಚ್ಚಿ ಜಪ್ತಿ ಪಡಿಸಿ ವಶಪಡಿಸಿಕೊಂಡ ವಾಹನಗಳನ್ನು  ದಿನಾಂಕ 17.06.2014 ರಂದು ತಮ್ಮ ವಶಕ್ಕೆ ನೀಡಿ ಠಾಣೆಯ ಆವರಣದಲ್ಲಿ ನಿಲ್ಲಿಸಿ ಸದರಿ ವಿಷಯದ ಬಗ್ಗೆ ನಮ್ಮ ಮೇಲಾಧಿಕಾರಿಗಳಲ್ಲಿ ಚರ್ಚಿಸಿ ಮಾಡಿ ಅನುಮೋದಿಸಿಕೊಂಡು ಇಂದು ದಿನಾಂಕ 18.06.2014 ರಂದು  ತಮ್ಮಲ್ಲಿ ಈ ದೂರುನ್ನು ಸಲ್ಲಿಸುತ್ತಿದ್ದು, ಅಂತಾ ಶ್ರೀಮತಿ ಪಾರ್ವತಿ ಪಾರ್ವತಿ ಮೂದೋಳ ಮಠ ಸಹಾಯಕ ನಿದೇರ್ಶಕರು ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಆಕಸ್ಮಿಕ ಬೆಂಕಿಯಿಂದ ಮನೆ ಭಸ್ಮ :
ಅಫಜಲಪೂರ ಠಾಣೆ : ಶ್ರೀ ಶಿವಾನಂದ ತಂದೆ ಗಿರಿಮಲ್ಲಪ್ಪ ಗುಡೆದಮನಿ ಸಾ: ಬಡದಾಳ  ರವರು ದಿನಾಂಕ 18-06-2014 ರಂದು ಸಾಯಂಕಾಲ 7:30 ಗಂಟೆಗೆ ಫಿರ್ಯಾದುದಾರರ ಮನೆಯಲ್ಲಿ ಕರೆಂಟ್ ಶಾಟ್ ಸಕ್ಯೂಟ್ ಆಗಿ ಮನೆಗೆ ಬೆಂಕಿ ಹತ್ತಿಕೊಂಡು ಮನೆಯಲ್ಲಿದ್ದ ದವಸ ಧಾನ್ಯ ಬಂಗಾರದ ಆಭರಣ ಬಟ್ಟೆ, ನಗದು ಹಣ, ಬಾಂಡೆ ಸಾಮಾನುಗಳು ಹಾಗು ಇನ್ನಿತರ ವಸ್ತಗಳು ಹೀಗೆ ಒಟ್ಟು 3,50,000/- ಕಿಮ್ಮತ್ತಿನ ಸಾಮಾನುಗಳು ಸುಟ್ಟು ಹೋಗಿರುತ್ತವೆ. ಸದರಿ ಸಾಮಾನುಗಳನ್ನು ಫಿರ್ಯಾದುದಾರರ ಹೆಂಡತಿ ಕಲಾವತಿ ಇವರು ತೆಗೆಯಲು ಹೋದಾಗ ಅವರ ಮುಖಕ್ಕೆ ಸ್ವಲ್ಪ ಸುಟ್ಟಿದ ಗಾಯ ಆಗಿರುತ್ತದೆ. ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.