POLICE BHAVAN KALABURAGI

POLICE BHAVAN KALABURAGI

10 May 2014

Gulbarga District Reported Crimes

ಸುಲಿಗೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಧನರಾಜ ತಂದೆ ಅಡವಿರಾವ್‌ ಚಿತಾಪೂರ ಸಾ : ಸ್ವಸ್ತಿಕ್‌ ನಗರ ಸೇಡಂ ರಸ್ತೆ ಗುಲಬರ್ಗಾ ಹಾ. ವ: 383-10-95/ಜಿ ಸಮರ್ಥ ಅಪಾರ್ಟಮೇಂಟ್‌ ಗೊಖಲೆ ನಗರ ರಾಮಂತಪೂರ ಹೈದ್ರಾಬಾದ-500013 ರವರು ಹೈದ್ರಾಬಾದನಲ್ಲಿ ಅಕಾಡೆಮಿ ಫಾರ್‌ ನರ್ಸಿಂಗ್ ಸ್ಟಡೀಸ್‌ ಎನ್‌ ಜಿ ಓ ನಲ್ಲಿ ಪ್ರೋಗ್ರಾಮ್‌ ಮ್ಯಾನೇಜರ ಅಂತಾ ಕೇಲಸಮಾಡುತ್ತಿದ್ದು ನಾನು ಗುಲಬರ್ಗಾ ನಗರದ ಮಹಾಲಕ್ಷ್ಮೀ ಲೇಔಟನಲ್ಲಿ ಇರುವ ನನ್ನ ಕಾಕಾರವರಾದ ದಿ: ಉಪೇಂದ್ರರಾವ ಚಿತಾಪೂರಕರ್‌ ಇವರ ಮಗ ಅಂದರೆ ನನ್ನ ತಮ್ಮ ಹರಿಚರಣ ಚಿತಾಪೂರ್‌ಕರ್‌ ಇತನ ಮದುವೇ ಇದ್ದ ಪ್ರಯುಕ್ತ ನಾನುದಿನಾಂಕ: 07-05-2014 ರಂದು ಗುಲಬರ್ಗಾಕ್ಕೆ ಬಂದಿದ್ದು ದಿನಾಂಕ 08-05-2014 ರಂದು ನನ್ನ ತಮ್ಮ ಹರಿಚರಣ ಇವರ ಮದುವೆ ಹುಬ್ಬಳ್ಳಿಯಲ್ಲಿ ಇದ್ದರಿಂದ ನಮ್ಮ ಮನೆಯವರೆಲ್ಲರೂ ಒಂದು ಖಾಸಗಿ ಬಸ್ಸು ಮಾಡಿಕೊಂಡು ಹುಬ್ಬಳಿಗೆ ಹೊಗಿ ಮದುವೆ ಮುಗಿಸಿಕೊಂಡು ದಿನಾಂಕ: 09-05-2014 ರಂದು ಬೆಳಗಿನ 4.00 ಗಂಟೆ ಸುಮಾರಿಗೆ  ಗುಲಬರ್ಗಾ ನಗರದ ಮಹಾಲಕ್ಷ್ಮೀ ಲೇಔಟನಲ್ಲಿರುವ ನಮ್ಮ ತಮ್ಮನ ಮನೆಗೆ ವಾಪಸ್ಸು ಬಂದಿದ್ದು. ಮನೆಯಲ್ಲಿ ಚಹಾ ಮಾಡಲು ಹಾಲು ಬೆಕಾಗಿದ್ದರಿಂದ, ನಾನು ಹಾಲು ತರಲು ಲಾಲ್‌ ಗೇರೆ ಕ್ರಾಸ್‌ಗೆ ನಡೆದುಕೊಂಡು ಹೊಗುತ್ತಿರುವಾಗ ಬೆಳಗಿನ 4.30 ಗಂಟೆ ಸುಮಾರಿಗೆ ಲಾಲಗೇರೆ ಕ್ರಾಸ ಮೆಲೆ 4 ಜನ ಅಪರಿಚಿತ ಹುಡುಗರು ಅವರುಗಳು ಅಂದಾಜು 18-22 ವಯಸ್ಸಿನವರಿದ್ದು. ಅವರೆಲ್ಲರೂ ಒಟ್ಟಿಗೆ ಸೇರಿ ನನ್ನ ಸುತ್ತುವರೆದರು. ಅದರಲ್ಲಿ ಎರಡು ಜನ ಹುಡುಗರು ತಮ್ಮಲ್ಲಿದ್ದ ಲಾಂಗ್‌  ಮತ್ತು ಒಬ್ಬ ಹುಡುಗನು ಚಾಕುವನ್ನು ತೋರಿಸಿ, “ಎ ನೋಡು ನಿನ್ನಲ್ಲಿ ಎನು ಇದೆ ಎಲ್ಲಾ ಸುಮ್ಮನೆ ಕೊಡುಅಂತಾ ಬೆದರಿಕೆ ಹಾಕಿದನು. ಎರಡು ಜನ ಹುಡುಗರು ನನ್ನ ಕೈಗಳನ್ನು ಹಿಡಿದರು, ಅದರಲ್ಲಿ ಒಬ್ಬ ಹುಡುಗನು ನನ್ನ ಪ್ಯಾಂಟ್‌ ಮತ್ತು ಶರ್ಟ ಜೇಬಲ್ಲಿ ಕೈಹಾಕಿ ಜೇಬಲ್ಲಿದ್ದ 700/- ರೂಗಳನ್ನು ತೆಗೆದುಕೊಂಡನು, ಇನ್ನೋಬ್ಬ ಹುಡುಗ ನನ್ನ ಕುತ್ತಿಗೆಗೆ ಕೈಹಾಕಿ ನನ್ನ ಕೊರಳಲ್ಲಿದ್ದ ಬಾಕ್ಸ ಟೈಪ್‌ ಮಾಡೆಲ್‌ನ ಅಂದಾಜು 24 ಇಂಚು ಉದ್ದದ 16 ಗ್ರಾಂ ತೂಕದ 48,000/- ರೂ ಬೆಲೆ ಬಾಳುವ ಬಂಗಾರದ ಒಂದು ಲ್ಯಾಕೇಟ್‌ ದೊಚಿಕೊಂಡನು. ನಂತರ ನಾನು ಅವರಿಗೆ ಅಂಜಿ ಸುಮ್ಮನೆ ಮಾತನಾಡದೆ ನಡೆದುಕೊಂಡು ನನ್ನ ತಮ್ಮನ ಮನಗೆ ಬಂದಿರುತ್ತೆನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ.ದೊಡ್ಡಪ್ಪ ತಂದೆ ವೀರಪ್ಪ ದೇಸಾಯಿ ಸಾ:ಗಂವ್ಹಾರ ಮಾರಡಗಿ ತಾ:ಜೇವರ್ಗಿ ಹಾ.ವ.ಹೌಸಿಂಗ್ ಬೋರ್ಡ ಕಾಲೂನಿ ಜೇವರ್ಗಿ ಇವರು ದಿನಾಂಕ:08-05-2014ರಂದು ತಾನು ಮತ್ತು ನನ್ನ ಹೆಂಡತಿ ಕಲಾವತಿಮಗಳಾದ ಸರೋಜಾ ಗಂಡ ಗುಂಡಪ್ಪ ಲಲಗಿ ಕೂಡಿಕೊಂಡು ಉದಗೀರದಲ್ಲಿರುವ ನನ್ನ ಸೊಸೆ ಸವಿತಾಳಿಗೆ ಆಪರೇಷನ ಆಗಿದ್ದರಿಂದ ಮಾತನಾಡಿಸಿಕೊಂಡು ಮರಳಿ ಜೇವರ್ಗಿಗೆ ಹೋಗಲು ಉದಗೀರದಿಂದ ಹುಮನಾಬಾದಕ್ಕೆ ಬಂದು ಹುಮನಾಬಾದದಿಂದ ಬೀದರಗುಲಬರ್ಗಾ ಬಸ್ ನಂ ಕೆಎ:38ಎಫ್:639 ನೇದ್ದರಲ್ಲಿ ಕುಳಿತುಕೊಂಡು 18-30 ಗಂಟೆಗೆ ಹುಮನಾಬಾದದಿಂದ ಹೊರಟು ಹುಮನಾಬಾದ ಗುಲಬರ್ಗಾ ರಾಷ್ಟ್ರೀಯ ಹೆದ್ದಾರಿ 218ನೇದ್ದರ ಡೊಂಗರಗಾಂವ ಕ್ರಾಸ್ ಹತ್ತಿರ ಬರುತ್ತಿದ್ದಾಗ ನಮ್ಮ ಬಸ್ ಚಾಲಕನು ಬಸ್ಸನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ಕಟ್ ಹೊಡೆಯುತ್ತಾ ಚಲಾಯಿಸುತ್ತಾ ಮುಂದೆ. ಮರಗುತ್ತಿ ಕ್ರಾಸ್ ಹತ್ತಿರ  ಇರುವ ಕೆ.ಇ.ಬಿ. ಆಫೀಸ್ ಹತ್ತಿರ  ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ರಸ್ತೆಯಲ್ಲಿ ಯಾವುದೇ ಸಂಚಾರಿ  ಸೂಚನೆಗಳನ್ನು ಪಾಲಿಸದೇ ಮತ್ತು ಇಂಡಿಕೇಟರ್  ಹಾಕದೇ ನಿಲ್ಲಿಸಿದ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದನು. ಆಗ ಬಸ್ಸಿನಲ್ಲಿದ್ದ  ಹಲವಾರು ಪ್ರಯಾಣಿಕರು ಮತ್ತು ನಾವೇಲ್ಲರೂ ಕೆಳಗೆ ಇಳಿದು ನೋಡಲಾಗಿ ನನಗೆ ಮೂಗಿಗೆಬಾಯಿಗೆ ರಕ್ತಗಾಯವಾಗಿತ್ತು ಮತ್ತು ಎರಡೂ ಮೊಳಕಾಲುಗಳಿಗೆ ತರಚಿದ ಗಾಯ ಮತ್ತು ಟೊಂಕಕ್ಕೆ  ಗುಪ್ತಗಾಯವಾಗಿತ್ತು. ನನ್ನ ಹೆಂಡತಿ ಕಲಾವತಿ ಇವಳಿಗೆ ಹಣೆಗೆಮುಖಕ್ಕೆ ಮತ್ತು  ಎರಡೂ ಕಾಲುಗಳಿಗೆ ಗುಪ್ತಗಾಯಗಳಾಗಿದ್ದವು. ಮಗಳಾದ  ಸರಜಾ ಇವಳಿಗೆಎರಡೂ ಮೊಳಕಾಲಿಗೆ ಗುಪ್ತಗಾಯಗಳಾಗಿದ್ದವು. ಅಲ್ಲದೇ ನಮ್ಮ ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದ ಇತರರಿಗೆ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದವು. ನಂತರ ಲಾರಿ ನಂ.ನೋಡಲಾಗಿ ಎಪಿ-02 ಡಬ್ಲೂ:0794ನೇದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸತೀಶ ತಂದೆ ಸೊಪ್ಪಣ್ಣಾಗೌಡ ಮಾಲಿ ಪಾಟೀಲ ರವರು ದಿನಾಂಕ 10-05-2014 ರಂದು ಬೆಳಿಗ್ಗೆ 9-30 ಗಂಟೆಗೆ  ತನ್ನ ಇನೊವಾ ಕಾರ ನಂ ಕೆಎ-32 ಎನ್-2792 ನೇದ್ದರಲ್ಲಿ ಸಂಜಯ ಬಿರಾದಾರ ಮತ್ತು ಸಾಗರ ಪಾಟೀಲ ರವರನ್ನು ಕೂಡಿಸಿಕೊಂಡು ನಾಗನಹಳ್ಳಿಗೆ ಹೋಗಿ ಸಸಿಗಳನ್ನು ನೋಡಿಕೊಂಡು ಬರುವ ಸಲುವಾಗಿ ನಾನು ಕಾರ ಚಲಾಯಿಸಿಕೊಂಡು ಹಳೆ ಜೆವರ್ಗಿ ರೋಡ ಮುಖಾಂತರ ಹೋಗುವಾಗ ಹೌಸಿಂಗ ಬೋರ್ಡ ಕಾಲೋನಿ ಒಳಗಡೆಯಿಂದ ಜೆ.ಸಿ.ಬಿ ನಂ ಕೆಎ-32 ಎಮ್-5725 ರ ಚಾಲಕ ಭಗವಾನ ಇತನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಅಡ್ಡವಾಗಿ ಬಂದು ಕಾರಿಗೆ ಡಿಕ್ಕಿ ಪಡಿಸಿ ಡ್ಯಾಮೇಜ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಕಳವು ಪ್ರಕರಣಗಳು :
ಅಶೋಕ ನಗರ ಠಾಣೆ : ಶ್ರೀ.ವಿಶ್ವನಾಥ ತಂದೆ ನಿಂಗಣ್ಣಗೌಡ ಸಾ: ಮಹಾಂತೇ ನಗರ ಬೆಳಗಾವಿ ರವರು ದಿನಾಂಕ: 09-05-2014 ರಂದು ಮುಂಜಾನೆ 6 ಗಂಟೆಗೆ ಬಳ್ಳಾರಿಯಿಂದ ಗುಲಬರ್ಗಾಕ್ಕೆ ಬಂದಿದ್ದು ಹೋಟಲ್ ಹೆರಿಟೇಜ ಇನ್ ನಲ್ಲಿ ಇಳಿದುಕೊಂಡಿದ್ದು  ನನ್ನ ಕೆಲಸ ಮುಗಿಸಿಕೊಂಡು ಇಂದು ದಿನಾಂಕ: 10-05-2014 ರಂದು ಮುಂಜಾನೆ 7 ಕ್ಕೆ ಬೀದರಕ್ಕೆ ಹೋಗಲು ಹೋಟಲದಿಂದ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ಬೀದರ ಬಸ್ ನಂ; ಕೆಎ-32 ಎಫ್-1676 ನೇದ್ದರಲ್ಲಿ ಕುಳಿತು ನನ್ನ ಲಗೇಜ ಬಸ್ ನ ಒಳಗಡೆ ಇರುವ ಕ್ಯಾರಿಯರನಲ್ಲಿ ನನ್ನ ಲ್ಯಾಪಟಾಪ ಬ್ಯಾಗ ಅದರಲ್ಲಿ 1. Lenova think pad E430 LAPTOP ಅ.ಕಿ. 25,000=00 ರೂ  & 2.ಸೊನಿ ಕ್ಯಾಮರ ಡಿ.ಎಸ್.ಇ ಡಬ್ಲೂ ಎಕ್ಸ್-60 ಅ.ಕಿ. 8000=00 ರೂ 3. ಟಾಟಾ ಫೊಟಾನ್ ಇಂಟರನೇಟ್ ಡೊಂಗಲ್ ನಂ: 9212246171 ಅ.ಕಿ. 00 ಹೀಗೆ ಒಟ್ಟು 33,000=00 ರೂ. ಬೆಲೆಬಾಳುವ ವಸ್ತುಗಳು ಕೂಡಾ ಇಟ್ಟಿದ್ದು ನಂತರ 7-10 ಕ್ಕೆ ನನ್ನ ಬ್ಯಾಗ ನೋಡಲಾಗಿ ಕಾಣಲಿಲ್ಲ ಎಲ್ಲಾಕಡೆ ಹುಡುಕಾಡಿ ಅಲ್ಲಿರುವ ಜನರಿಗೆ ವಿಚಾರಿಸಲಾಗಿ ನನ್ನ ಬ್ಯಾಗ ಬಗ್ಗೆ ಯಾವುದೆ ಮಾಹಿತಿ ಸಿಕ್ಕಿರುವದಿಲ್ಲ. ಯಾರೋ ಕಳ್ಳರು ನನ್ನ ಬ್ಯಾಗ ಅದರಲ್ಲಿರುವ ಲ್ಯಾಪಟಾಪ ಮತ್ತು ಕ್ಯಾಮರಾ ಕೂಡಾ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಶೋಕ ನಗರ ಠಾಣೆ :  ಶ್ರೀ ಕೈಲಾಶ ತಂದೆ ಸುಭಾಷ ರಾಠೋಡ ಸಾ: ಪ್ಲಾಟ ನಮ; 103 ಎನ್.ಜಿ.ಓ ಕಾಲೋನಿ ಗುಲಬರ್ಗಾ ರವರು ದಿನಾಂಕ: 02-05-2014 ರಂದು ರಾತ್ರಿ ವೇಳೆ ಮನೆಯಲ್ಲಿ ಶಕೆ ಆಗುತ್ತಿದ್ದರಿಂದ ನಾನು ನಮ್ಮ ಮನೆಯ ಛತ್ತಿನ ಮೇಲೆ  ಮಲಗಿದ್ದು,  ನನ್ನ ಮೈಕ್ರೊಮ್ಯಾಕ್ಸ ಕಾನ್ವಸ್‌-2  ಮೊಬೈಲ ಸೇಟ  ಐಎಂಇಐ ನಂ. 911239259474940 ಅದರಲ್ಲಿ ಸಿಮ ನಂ. 9742898233 ನೇದ್ದನ್ನು ಇಟ್ಟು ಮಲಗಿರುವಾಗ ರಾತ್ರಿ ವೇಳೆಯಲ್ಲಿ  ಯಾರೋ ಕಳ್ಳರು ಛತ್ತಿನ ಮೇಲೆ ಬಂದು  ನನ್ನ ಮೊಬೈಲ ಸೇಟ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ನನ್ನ ಮೈಕ್ರೊಮ್ಯಾಕ್ಸ ಕಾನ್ವಸ-2 ಮೊಬೈಲ ಸೇಟ  ಐಎಂಇಐ ನಂ. 911239259474940  ಅಂದಾಜು ಕಿಮ್ಮತ್ತು  20000/- ರೂಪಾಯಿ ಇರಬಹುದು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ.ಪಾರ್ವತಿ @ಪ್ರೀತಿ ಗಂಡ ಮಹಾದೇವ ಭಜಂತ್ರಿ ಸಾ: ಮನೆ ನಂ 322/75 ಲಕ್ಷ್ಮಿನಾರಾಯಣ ನಗರ ಹಳೆ ಜೇವರ್ಗಿ ರೋಡ ಗುಲಬರ್ಗಾ ರವರನ್ನು ದಿನಾಂಕ 25-3-2007  ರಂದು ನಮ್ಮ ತಂದೆ ತಾಯಿಯವರು ಗುಲಬರ್ಗಾ ನಗರದ ಸಂತ್ರಸವಾಡಿಯಲ್ಲಿರುವ ಮಹಾದೇವ ಇತನ್ನೊಂದಿಗೆ  ದೇವೆಶ್ವರ ಕಲ್ಯಾಣ ಮಂಟಪ್ ಮಕ್ತಂಪೂರದಲ್ಲಿ ಲಗ್ನವಾಗಿದದ್ದು  ಸದ್ಯ ನನಗೆ ಈಗ ಎರಡು ಗಂಡು ಒಂದು ಹೆಣ್ಣು ಮಗು ಇರುತ್ತದೆ.ಲಗ್ನವಾಗಿ  ಒಂದು ವರ್ಷದ ನಂತರ  ನನ್ನ ಗಂಡ ಕುಡಿದು ಬಂದು ನನಗೆ ಬೈಯುವದು, ಹೊಡೆಯುವುದು ಮಾಡುತ್ತಾ ಬಂದಿದ್ದು, ನಂತರ ನನ್ನ ಗಂಡ ಮಹಾದೇವ ಮತ್ತು ಅತ್ತೆ ಶಾಂತಾಬಾಯಿ ಇಬ್ಬರೂ ಕೂಡಿ ನಿನಗೆ ಕೆಲಸ ಬರುವುದಿಲ್ಲ ರಂಡಿ ಮುಂಡಿ ಅಂತಾ ಬೈಯುವದು, ಹೊಡೆಯುವುದು ಮಾಡುತ್ತಿದ್ದು, ಈ ವಿಷಯ ನನ್ನ ತಂದೆ ಮತ್ತು ನನ್ನ ಅಣ್ಣನಿಗೆ ತಿಳಿಸಿದಾಗ ಅವರು ಬಂದು ನನ್ನ ಗಂಡನಿಗೆ ಮತ್ತು ನನ್ನ ಅತ್ತೆಗೆ ಈ ರೀತಿ ಮಾಡುವುದು ಸರಿಯಲ್ಲ ,ಸರಿಯಾಗಿಟ್ಟುಕೊಳ್ಳಿ ಅಂತಾ ಬುದ್ದಿವಾದ ಹೇಳಿ ಹೋದರು.ನಂತರ ನನ್ನ ಗಂಡ ಹಾಗೂ ನನ್ನ ಅತ್ತೆ ಕೂಡಿ ನಿಮ್ಮ ತಂದೆ 6 ಲಕ್ಷ ರೂ..ಗೆ ಮನೆ ಒತ್ತೆ ಹಾಕಿದ್ದಾನೆ 2 ಲಕ್ಷ ರೂಪಾಯಿ ನಿನ್ನ ತವರು ಮನೆಯಿಂದ ತೆಗೆದುಕೊಂಡು ಬಾ ಅಂತಾ ಕೈಯಿಂದ ಹೊಡೆಬಡೆ ಮಾಡಿ ಎರಡು ದಿವಸ ಊಟ ಕೊಡಲಿಲ್ಲಾ  ನಾನು ನನ್ನ ತಂದೆತಾಯಿ ಹತ್ತಿರ ಹೋಗಿ ದವಾಖಾನೆ ತೋರಿಸಿಕೊಳ್ಳಬೇಕೆಂದು ತವರುಮನೆಗೆ ಹೊದೆನು. ದಿನಾಂಕ 05-05-2014  ರಂದು ಸಾಯಂಕಾಲ 4-00 ಪಿ.ಎಂಕ್ಕೆ ನನ್ನ ಗಂಡ ಮಹಾದೇವ ಅತ್ತೆ ಶಾಂತಾಬಾಯಿ ಮೈದುನ ಯಲ್ಲಾಲಿಂಗ ಎಲ್ಲರೂ ಕೂಡಿಕೊಂಡು ಗುಲಬರ್ಗಾದ ನನ್ನ ತವರು ಮನೆಗೆ  ಬಂದು ರಂಡಿ ಯಾರಿಗೂ ಹೇಳದೇ ಕೇಳದೆ ಮನೆಬಿಟ್ಟು ಹೇಗೆ ಬಂದಿ ಅಂತಾ ಹೊಡೆ ಬಡೆ ಮಾಡಿದರು ನನ್ನ ಅತ್ತೆ ಮೈದುನ  ಅವಾಚ್ಯ ಶಬ್ದಗಳಿಂದ ಬೈದು ಹಿಂಸೆ ಕೊಟ್ಟಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಶಸಯಾಸ್ಪದ ವ್ಯಕ್ತಿಯ ಬಂಧನ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಗಜಾನನ ಕೆ. ನಾಯ್ಕ ಪಿ.ಎಸ್.ಐ (ಕಾ.ಸೂ) ಎಂ.ಬಿ ನಗರ ಪೊಲೀಸ್ ಠಾಣೆ ಗುಲಬರ್ಗಾ, ದಿನಾಂಕ 09-05-2014 ರಂದು ರಾತ್ರಿ ಎಂ.ಬಿ ನಗರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ವಿಶೇಷ ರಾತ್ರಿ ಗಸ್ತು ಚೆಕಿಂಗ್ ಕರ್ತವ್ಯದಲ್ಲಿದ್ದಾಗ ಠಾಣೆಯಿಂದ 11:00 ಪಿ.ಎಂ ಕ್ಕೆ ಸಂಗಡ ಪಿ.ಸಿ 1186 ಪ್ರವೀಣ ಕುಮಾರ ರವರನ್ನು ಠಾಣಾ ಜೀಪ ನಂ. ಕೆ.ಎ 32 ಜಿ 278 ರಲ್ಲಿ ಕರೆದುಕೊಂಡು ಏರಿಯಾಗಳಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಾ ಜಿ.ಡಿ.ಎ ಕಾಲೋನಿ, ಓಂ ನಗರ, ಸೇಡಂ ರಿಂಗ್, ಸಂತ್ರಾಸವಾಡಿ, ಆದರ್ಶ ನಗರ ಮುಖಾಂತರ ಬಸವೇಶ್ವರ ಕಾಲೋನಿಗೆ ಬಂದಾಗ ಬಸವೇಶ್ವರ ಕಾಲೋನಿಯ ಶಿವಮಂದಿರ ಹತ್ತಿರ ದಿನಾಂಕಃ 09-05-2014 ರಂದು ಬೆಳಗ್ಗೆ 04:30 ಎ.ಎಂ. ಸುಮಾರಿಗೆ ಹೋದಾಗ ಅಲ್ಲಿ ಒಬ್ಬ ವ್ಯಕ್ತಿ ನಿಂತಿದ್ದು ನಮ್ಮನ್ನು ನೋಡಿ ತನ್ನ ಮುಖ ಮರೆ ಮಾಚಿಕೊಂಡು ಸಂಶಯ ಬರುವ ರೀತಿಯಲ್ಲಿ ನಿಂತಿದ್ದು ಅಲ್ಲದೇ ನಮ್ಮನ್ನು ನೋಡಿ ಓಡ ತೊಡಗಿದನು. ಸದರಿಯವನ ಮೇಲೆ ಸಂಶಯ ಬಂದು ನಾವು ಬೇನ್ನಟ್ಟಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲು, ಸದರಿಯವನು ತನ್ನ ಹೆಸರು ಜಾವೀದ ಶೇಖ್ ತಂದೆ ಯುನೂಸ್ ಶೇಖ್  ಸಾಃ ಸಂತ್ರಾಸವಾಡಿ ಬಡಿ ಮಸೀದಿ ಹತ್ತಿರ ಗುಲಬರ್ಗಾ ಅಂತಾ ತಿಳಿಸಿದ್ದು ಸದರಿಯವನಿಗೆ ಯಾಕೆ ತನ್ನ ಮುಖ ಮರೆ ಮಾಚಿಕೊಂಡು ಓಡುತ್ತಿದ್ದಿ, ಈ ಸಮಯಕ್ಕೆ ಇಲ್ಲಿ ಯಾಕೆ ಓಡಾಡುತ್ತಿದ್ದಿ, ಅಂತಾ ಕೇಳಿದಕ್ಕೆ ಸದರಿಯವನು ಯಾವುದೇ ಸಮರ್ಪಕವಾದ ಉತ್ತರ ನೀಡಲಿಲ್ಲ. ಸದರಿಯವನನ್ನು ಹಾಗೆಯೇ ಬಿಟ್ಟಲ್ಲಿ ಯಾವುದಾದರು ಸ್ವತ್ತಿನ ಅಪರಾಧ ಮಾಡಬಹುದೆಂದು ಸಂಶಯ ಕಂಡು ಬಂದಿದ್ದು ನಂತರ ಸದರಿ ಅಪಾಧಿತನನ್ನು ದಸ್ತಗಿರಿ ಮಾಡಿಕೊಂಡು ಠಾಣೆಗೆ ಬಂದು ಸದರಿಯವನ ವಿರುದ್ಧ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.