POLICE BHAVAN KALABURAGI

POLICE BHAVAN KALABURAGI

10 October 2014

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ವಿಶ್ವವಿದ್ಯಾಲಯ ಠಾಣೆ : ದಿನಾಂಕ: 10/10/2014 ರಂದು ಶ್ರೀ. ರಘು ಎನ್. ಪಿ.ಎಸ್.ಐ ಎಮ್.ಬಿ ನಗರ ಗುಲಬರ್ಗಾರವರು ರಾತ್ರಿ ಗಸ್ತು ಚೆಕ್ಕಿಂಗ್ ಕರ್ತವ್ಯ ಮೇಲೆ ಇದ್ದಾಗ ಆಜಾದಪೂರ ರಸ್ತೆಯ ನವಾಬ್ ಸಾಬ ತೋಟದ ಬದಿಗೆ ಸಾರ್ವಜನಿಕ ಸ್ಥಳದ ಬಯಲು ಜಾಗೆಯಲ್ಲಿ ಕೆಲವು ಜನರು ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮರೆಗೆ ಸಿಬ್ಬಂದಿಯವರನ್ನು ಹಾಗೂ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಲು ಅಲ್ಲಿ 13 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು ಅವರು ತಮ್ಮ ಹೆಸರು 1) ಮುಜಬರ್ ರಹೆಮಾನ ತಂದೆ ಮಹ್ಮದ ಸಲಾವುದ್ದಿನ ಸಾ|| ಜಮ್ ಜಮ್ ಕಾಲೋನಿ ಗುಲಬರ್ಗಾ, 2) ಮಹೆಬೂಬ ತಂದೆ ಉಸ್ಮಾನ ಸಾ|| ಉಮರ ಕಾಲೋನಿ, 3) ಅಬ್ದುಲ ರಶೀದ ತಂದೆ ಅಬ್ದುಲ ಮಜೀದ ಸಾ|| ಯಾದುಲ್ಲಾ ಕಾಲೋನಿ, 4) ಸೈಯದ ಗಫೂರ ತಂದೆ ಸಾಹಬುದ್ದಿನ ಸಾ|| ಯಾದುಲ್ಲಾ ಕಾಲೋನಿ 5) ಅಮ್ಜಾದ ತಂದೆ ಮುನೀರ ಸಾ: ಉಮ್ಮರ ಕಾಲೋನಿ, ಗುಲಬರ್ಗಾ 6) ಸಲಾವುದ್ದಿನ ತಂದೆ ಹಸನ್ ಸಾಬ್ ಬಾಗವಾನ ಸಾ: ಕಮರ ಕಾಲೋನಿ, ಗುಲಬರ್ಗಾ 7) ಅಬ್ದುಲ ಖಾದಿರ್ ತಂದೆ ಅಬ್ದುಲ ಗನಿ ಸಾ: ಬಡಾ ರೋಜಾ, ಗುಲಬರ್ಗಾ 8) ಮೊಹಮ್ಮದ ಆಸೀಫ ತಂದೆ ಎಮ್ಡಿ ಅಜ್ಗರ್ ಸಾ: ಮೆಹಬೂಬ ನಗರ, ಗುಲಬರ್ಗಾ 9) ಅಬ್ದುಲ ರಜಾಕ ತಂದೆ ಅಬ್ದುಲ ಸತ್ತಾರ, ಸಾ: ಮೆಹಬೂಬ ನಗರ ಗುಲಬರ್ಗಾ 10) ಮಲ್ಲಿಕಾರ್ಜುನ ತಂದೆ ರವೀಂದ್ರ ಕುಮಾರ್ ಸಾ: ಬಡಾ ರೋಜಾ ಗುಲಬರ್ಗಾ 11) ಫಯಾಜ್ ಅಹ್ಮದ್ ತಂದೆ ಇಬ್ರಾಹಿಂ ಮೊಹಮ್ಮದ್ ಸಾ: ಮೆಹಬೂಬ ನಗರ, ಗುಲಬರ್ಗಾ 12) ಅಬ್ದುಲ ರಹೀಂ ತಂದೆ ಮೊಹಮ್ಮದ ಅಲಿ ಸಾ: ಮೆಹಬೂಬ ನಗರ, ಗುಲಬರ್ಗಾ 13) ಅಸ್ಲಾಮ್ ತಂದೆ ಅಬ್ಬಾಸ್ ಸಾ: ಬಡೆಪುರ ಕಾಲೋನಿ, ಗುಲಬರ್ಗಾ ಅಂತಾ ತಿಳಿಸಿದ್ದು ಅವರ ಹತ್ತಿರ ಹಾಗೂ ಜೂಜಾಟ ಸ್ಥಳದಿಂದ ಒಟ್ಟು 33,167/- ರೂಪಾಯಿ ಮತ್ತು 52 ಇಸ್ಪೇಟ ಎಲೆಗಳನ್ನು ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ವಿಶ್ವವಿದ್ಯಾಲಯ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಜಾತಿ ನಿಂದನೆ ಪ್ರಕರಣ :
ಸೇಡಂ ಠಾಣೆ : ಶ್ರೀ ಮೋನಪ್ಪ ತಂದೆ ಸಾಬಣ್ಣ ತಮ್ಮಾಪೂರ ಸಾ:ಹಂದರಕಿ ಗ್ರಾಮ ಇವರು ದಿನಾಂಕ:09-10-2014 ರಂದು ಸಾಯಂಕಾಲ 07-00 ಗಂಟೆಯ ಸುಮಾರಿಗೆ ನಮ್ಮ ಹತ್ತಿಬೆಳೆಯ ಹೊಲದಲ್ಲಿ ಎತ್ತುಗಳನ್ನು ಬಿಟ್ಟು ಯಾಕೆ ಮೇಯಿಸುತ್ತಿದ್ದಿ ಅಂತ ಕೇಳಿದ್ದರಿಂದ ಅದೇ ದ್ವೇಶ ಇಟ್ಟುಕೊಂಡು ನಮ್ಮೂರ, ಹಣಮಂತ ತಂದೆ ದೇವಪ್ಪ ಬುನ್ನಾ, ಸಂಗಡ ಐದು ಜನರು ಕೂಡಿಕೊಂಡು ನಮ್ಮ ಮನೆಗೆ ಬಂದು ನಮಗೆ ಏ ಬ್ಯಾಡ ಸೂಳಿ ಮಕ್ಕಳೇ ಬರ್ರಲೇ ಹೊರಗಾ ಅಂತ ಜಾತಿ ಎತ್ತಿ ಬೈಯುತ್ತಿದ್ದಾಗ, ನಾನು ಮತ್ತು ನನ್ನ ತಮ್ಮ ಹೊರಗಡೆ ಬಂದಿದ್ದು ಆಗ ನನಗೆ ಕೊಲೆ ಮಾಡಿ ಮುಗಿಸಬೇಕೆಂಬ ಉದ್ದೇಶದಿಂದ ನನಗೆ ಬಡಿಗೆಯಿಂದ ಎಡಕಿವಿಯ ಮೇಲೆ ಹೊಡೆದು ಭಾರಿ ರಕ್ತಗಾಯ ಮಾಡಿದ್ದಲ್ಲದೇ, ಬಿಡಿಸಲು ಬಂದ ನನ್ನ ತಮ್ಮ ಹಾಗೂ ಅತ್ತಿಗೆಯಾದ ಲಕ್ಷ್ಮೀ ಇಬ್ಬರಿಗೂ ಬಡಿಗೆ ಮತ್ತು ಕಲ್ಲುಗಳಿಂದ ಹಾಗೂ ಕೈಯಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Gulbarga District Reported Crimes

ಕೊಲೆ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ನಾಗಣಗೌಡ ತಂದೆ ಶಿವಶರಣಪ್ಪಗೌಡ ಹೊಸಮನಿ ಸಾ|| ಗಂವಾರ ಹಾ|||| ಸಂಗಮೇಶ್ವರ ನಗರ ಗುಲಬರ್ಗಾ ಇವರು  ಸೊನ್ನ ಕ್ರಾಸ್ ಗೆ ಅಗ್ರೋ ಎಜೆನ್ಸಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತೆನೆ. ನಾನು ದಿನಾಲು ಸೊನ್ನ ಕ್ರಾಸ್ ದಿಂದ ಗುಲಬರ್ಗಾಕ್ಕೆ ಹೊಗಿ ಬರುತ್ತೆನೆ. ನನ್ನ ತಮ್ಮನಾದ ಸಂಗಣ್ಣಗೌಡ ಹೊಸಮನಿ ಇವನು ಜೇವರ್ಗಿ ಪಟ್ಟಣದಲ್ಲಿ ದಂಡಗುಂಡ ಆಗ್ರೋ ಎಜೆನ್ಸಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಆತನು ಜೇವರ್ಗಿ ಪಟ್ಟಣದ ವಿಧ್ಯಾ ನಗರದಲ್ಲಿ ಮನೆ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತಾನೆ. ಸದರಿ ನಮ್ಮ ತಮ್ಮನು ದಿನಾಲು ಬೆಳಗ್ಗೆಯಿಂದ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡು ರಾತ್ರಿ 09:30 ಗಂಟೆಯ ಸುಮಾರಿಗೆ ಅಂಗಡಿ ಬಂದ್ ಮಾಡಿಕೊಂಡು ದಿನದಲ್ಲಿ ವ್ಯಾಪಾರ ಮಾಡಿದ ಹಣ ತೆಗೆದುಕೊಂಡು ರಾತ್ರಿ ಮನೆಗೆ ಹೋಗುತ್ತಾನೆ. ದಿನಾಂಕ 09.10.2014 ರಂದು ರಾತ್ರಿ 09:45 ಗಂಟೆಯ ಸುಮಾರಿಗೆ ನಾನು ಸೊನ್ನ ಕ್ರಾಸ್ ನಿಂದ ಗುಲಬರ್ಗಾ ಕ್ಕೆ ಹೋಗುತ್ತಿರುವಾಗ ಜೇವರ್ಗಿ ಪಟ್ಟಣದ ಸಿದ್ದಾರ್ಥ ಲಾಡ್ಜ ಹಿಂಬಾಗ ಯಾರೋ ದುಷ್ಕರ್ಮಿಗಳು ನನ್ನ ತಮ್ಮನಿಗೆ ಗುಂಡು ಹಾರಿಸಿ ಕೊಲೆ ಮಾಡಿರುತ್ತಾರೆ ಅಂತ ಮಾಹಿತಿ ಗೊತ್ತಾಗಿ ತಕ್ಷಣ ನಾನು ಸ್ಥಳಕ್ಕೆ ಬಂದು ನೋಡಲಾಗಿ ಸೀರಿ ಕಾಂಪ್ಲೇಕ್ಷನ ಮುಂದುಗಡೆ ರೋಡಿನ ಮೇಲೆ ನನ್ನ ತಮ್ಮನ ಹೆಣ ಬಿದ್ದಿತ್ತು ನೊಡಲಾಗಿ ಅವನ ಮುಖಕ್ಕೆ ಮತ್ತು ದೇಹಕ್ಕೆ ಬಹಳಷ್ಟು ರಕ್ತ ಹತ್ತಿದ್ದು, ಎದೆಯ ಮೇಲೆ ಎಡಭಾಗ ಗುಂಡು ತಗುಲಿದ ಗಾಯ ಕಾಣುತ್ತಿತ್ತು. ನನ್ನ ತಮ್ಮನ ಮೋಟಾರ ಸೈಕಲ್ ನಂ ಕೆ.ಎ-32 ಈಈ-9236 ನೇದ್ದು ಸ್ವಲ್ಪ ಸಮೀಪದಲ್ಲಿಯೆ ಇತ್ತು. ದುಷ್ಕರ್ಮಿಗಳು ನನ್ನ ತಮ್ಮನಿಗೆ ಕೊಲೆ ಮಾಡಿ ಅವನ ಹತ್ತಿರ ಇದ್ದ ಹಣದ ಬ್ಯಾಗ್ ಕಸಿದುಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಶಾಂತಾಬಾಯಿ ಗಂಡ ಶ್ರೀಶೈಲ ಬೊರುಟಿ || ಕೆರಜಗಿ ಇವರ ಅಣ್ಣತಮ್ಮಕಿಯವರಾದ ಮಳಸಿದ್ದಪ್ಪ ತಂದೆ ಸಾಯಬಣ್ಣ ಬೊರುಟಿ ಇವರು ನಮ್ಮೊಂದಿಗೆ ಕೆಲವು ತಿಂಗಳಿಂದ ಅವರ ಮಕ್ಕಳ ವಿಷಯಕ್ಕೆ ಸಂಬಂಧ ತಕರಾರು ಮಾಡಿಕೊಳ್ಳುತ್ತಾ ಬಂದಿದ್ದು ದಿನಾಂಕ 07-10-2014 ರಂದು 09;00 .ಎಂ ಸುಮಾರಿಗೆ ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಮಗ ಸಿದ್ದಪ್ಪ ಇದ್ದಾಗ ನಮ್ಮ ಅಣ್ಣತಮ್ಮಕಿಯವರಾದ ಕಸ್ತೂರಬಾಯಿ ಗಂಡ ಮಳಸಿದ್ದಪ್ಪ ಬೊರುಟಿ ಮತ್ತು ಅವರ ಸೊಸೆ ಮಹಾಂತಬಾಯಿ ಬೊರುಟಿ ರವರು ನಮ್ಮ ಮನೆ ಹತ್ತಿರ ಬಂದ ನನಗೆ ಅವಾಚ್ಯವಾಗಿ ಬೈಯುತ್ತಿದ್ದರು, ಆಗ ನಾನು ಅವರ ಹತ್ತಿರ ಹೋಗಿ ಸುಮ ಸುಮನೆ ಯಾಕ ಬೈತಿರಿ ಅಂತಾ ಕೇಳಿದ್ದಕ್ಕೆ ಸದರಿ ಕಸ್ತೂರಿಬಾಯಿ ಇವಳು ನಮ್ಮ ಮಕ್ಕಳಿಗೆ ನೀನು ಯಾವುದೆ ಕೆಲಸ ಹಚ್ಚ ಬೇಡಾ ಅಂತಾ ಹೇಳಿದರು ಕೇಳುತ್ತಿಲ್ಲ, ಇವತ್ತ ನಮ್ಮ ಮಕ್ಕಳಿಗೆ ಅಂಗಡಿಗಿ ಯಾಕ ಕಳಿಸಿದಿ, ನಿನಗ ಬಹಳ ಸೊಕ್ಕು ಬಂದಿದೆ ರಂಡಿ ಅಂತಾ ಅಂದಳು ಆಗ ನಾನು ಸದರಿಯವರಿಗೆ ನಾನು ನಿಮ್ಮ ಮಕ್ಕಳಿಗೆ ಯಾವುದೆ ಕೆಲಸ ಹಚ್ಚಿಲ್ಲಾ ಅಂತಾ ಹೇಳಿದರು ಕಸ್ತೂರಬಾಯಿ ಇವಳು ನನ್ನ ಕುದಲ ಹಿಡಿದು ಎಳದಾಡಿದಳು ಆಗ ಅವಳ ಸೊಸೆ ಮಹಾಂತಬಾಯಿ ಇವಳು ತನ್ನ ಕೈಯಿಂದ ನನ್ನ ಬೆನ್ನಿನ ಮೇಲೆ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.    
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ಶ್ರೀಮತಿ ವಿಜಯಲಕ್ಷ್ಮಿ ಗಂಡ ಅನೀಲಕುಮಾರ ಬಿರಾದಾರ ಇವರು  ದಿನಾಂಕ : 03-10-14 ರಂದು ರಾತ್ರಿ ಸಮಯದಲ್ಲಿ ನಾನು ಬಿಲಗುಂದಿ ಗ್ರಾಮದಲ್ಲಿದ್ದಾಗ ನನ್ನ ನಾದನಿಯಾದ ರೇವತಿ ಗಂಡ ವಿಜಯಕುಮಾರ ಇವಳು ಫೊನಮಾಡಿ ತಿಳಿಸಿದ್ದೆನೇಂದರೆ ದಿನಾಂಕ 3/10/2014 ರಂದು ರಾತ್ರಿ 11.15 ಗಂಟೆ ಸುಮಾರಿಗೆ ಹುಮನಾಬಾದ ರೋಡ ಅಣಕಲ ಪೇಟ್ರೊಲಬಂಕ ಎದುರು ರೋಡಿನ ಮೇಲೆ ಅನೀಲಕುಮಾರ ಇತನಿಗೆ ಯಾವುದೊ ಒಂದು ಕಾರ ಚಾಲಕ ಎಕ್ಸಿಡಂಟ ಮಾಡಿಕೊಂಡು ಹೋಗಿರುತ್ತಾನೇ . ಆತನನ್ನು ಸಂಗಮೇಶ ಬಿಲಗುಂದಿ ಇತನು 108 ಅಂಬುಲೇನ್ಸ ನಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೇಮಾಡಿರುತ್ತಾನೇ. ಅಂತ ತಿಲಿಸಿದ ನಂತರ ನಾನು ದಿನಾಂಕ 4/10.14ರಂದು ನಮ್ಮುರಿನಿಂದ ನನ್ನ ಸಂಗಡ ಮೇಲಗಿರೇಪ್ಪಾ ಇತನ್ನು ಕರೆದುಕೊಂಡು ಗುಲಬರರ್ಗಾ ಜಿಲ್ಲಾ ಸರಕಾರಿ ಆಸ್ಪತ್ರೆಗೆಬಂದು ನನ್ನ ಗಂಡನನ್ನು ನೋಡಲು ಆತನೀಗೆ ತೆಲೆಗೆ ಭಾರಿರಕ್ತ ಗಾಯವಾಗಿ ಕುತ್ತಿಗೆಹತ್ತಿರ ಕೊಯಿದಂತೆ ರಕ್ತ ಗಾಯವಾಗಿ ಎರಡು ಕೈಗಳಿಗೆ ತರಚಿದಗಾಯವಾಗಿದ್ದು .ನನ್ನ ಗಂಡ ಮಾತನಾಡುವ ಸ್ತಿತಿಯಲ್ಲಿ ಇರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ದಿನಾಂಕ: 3-10-14 ರಂದು ರಾತ್ರಿ ರಸ್ತೆ ಅಪಘಾತದಲ್ಲಿ ಭಾರಿ ಗಾಯಹೊಂದಿದ್ದ ನನ್ನ ಗಂಡನನ್ನು ಹೆಚ್ಚಿನ ಉಪಚಾರಕ್ಕೆ ನಗರದ ಸತ್ಯ ಖಾಸಗಿ ಆಸ್ಪತ್ರೆಗೆ ಸೇರಿಕೆ ಮಾಡಿದ ನಂತರ ಆತನ ನ್ನು ಹೇಚ್ಚಿನ ಉಪಚಾರಕ್ಕೆ ಒಯುವಂತೆ ವೈದ್ಯರು ತಿಳಿಸಿದ್ದರಿಂದ ನನ್ನ ಗಂಡನನ್ನು ಒಂದು ಖಾಸಗಿ ಜೀಪಿನಲ್ಲಿ ಕರೆದುಕೊಂಡು ನಾನು ಮತ್ತು ಅರುಣಕುಮಾರ . ಲಕ್ಷ್ಮಿಪುತ್ರ ಹಾಗು ಮೇಲಗಿರೇಪ್ಪಾ ಕುಡುಕೊಂಡು ಗುಲಬರರ್ಗಾ ದಿಂದ ಸೋಲಾಪುರಕ್ಕೆ ಒಯುತ್ತಿರುವಾಗ ಲಾಡಚಿಂಚೋಳಿ ಹತ್ತಿರ ಹೋಗುತ್ತಿದ್ದಾಗ ರಾತ್ರಿ 10.15 ಗಂಟೆ ಸುಮಾರಿಗೆ ಮಾರ್ಗಮದ್ಯದಲ್ಲಿ ನನ್ನ ಗಂಡ ಅನೀಲಕುಮಾರ ಮ್ರತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.