POLICE BHAVAN KALABURAGI

POLICE BHAVAN KALABURAGI

11 April 2014

Gulbarga District Press Note

ಪತ್ರಿಕಾ ಪ್ರಕಟಣೆ
          2014ನೇ ಸಾಲಿನ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆ ನಿಮಿತ್ಯ ಚುನಾವಣೆ ಸುಸೂತ್ರವಾಗಿ ನಡೆಯಲು ಹಾಗು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 18 ಜನ ರೌಡಿ ಪಟ್ಟಿಯಲ್ಲಿರುವ ಹಾಗೂ ಸಮಾಜ ಘಾತಕ ವ್ಯಕ್ತಿಗಳನ್ನು ಗಡಿಪಾರು ಮಾಡಲು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
          ಅದರಂತೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗು ಜಿಲ್ಲಾ ದಂಡಾಧಿಕಾರಿಗಳು ಗುಲಬಗರ್ಾ ರವರು 18 ಜನ ರೌಡಿ ಪಟ್ಟಿಯಲ್ಲಿರುವವರಿಗೆ  ಗಡಿಪಾರಿಗೆ ಕಳುಹಿಸಿದ ಪ್ರಸ್ತಾವನೆಯನ್ನು ವಿಚಾರಣೆ ಮಾಡಿ, ಕನರ್ಾಟಕ ಪೊಲೀಸ್ ಕಾಯ್ದೆ 1963 ಕಲಂ 57 ರಂತೆ ಈ ಕೆಳಕಂಡ 18 ಜನ ರೌಡಿ ಜನರನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ದಿನಾಂಕ 09-04-2014ರಂದು ಆದೇಶ ಹೊರಡಿಸಿರುತ್ತಾರೆ. ಗಡಿಪಾರಾದ ರೌಡಿ ಜನರ ಹೆಸರು ಮತ್ತು ವಿಳಾಸ ಈ ಕೆಳಕಂಡಂತಿರುತ್ತದೆ.
1) ಭೀಮಶ್ಯಾ ತಂದೆ ಅಡಿವೆಪ್ಪ ಮಾಶಾಳಕರ್ ಸಾ : ರಾಜಾಪೂರ ಗುಲಬರ್ಗಾ.
2) ನಿಂಗಪ್ಪ ತಂದೆ ಶರಣಪ್ಪ ಕಂಟನೂರ ಸಾ:  ಗಾಂಧಿ ಚೌಕ ಶಹಾಬಾದ ತಾ:  ಚಿತ್ತಾಪೂರ.
3) ರಾಹುಲ್ @ ರಾಹುಳ್ಯಾ @ ಹಣಮಂತ ತಂದೆ ಗುರಪ್ಪ ವಡ್ಡರ ಸಾ:   ಶಿರವಾಳ, ತಾ:  ಅಫ್ಜಲಪೂರ.
4) ದತ್ತು ತಂದೆ ಹಣಮಂತ ಪೂಜಾರಿ ವಗ್ಗಿ ಸಾ:  ಹಾಗರಗಾ ಮತ್ತು ಕನಕದಾಸ ನಗರ ತಾ:  ಗುಲಬರ್ಗಾ.
5) ಇಮಾಮಸಾಬ ತಂದೆ ಅಬ್ಬಾಸ ಅಲಿ ಶೇಖ ಸಿಂಧಿ, ಸಾ:  ಕೆಲ್ಲೂರ, ತಾ:  ಜೇವಗರ್ಿ.
6) ವಿಟ್ಠಲ್ ತಂದೆ ಅಡಿವೆಪ್ಪ ನಾಟೀಕಾರ್ ಸಾ:  ಹವಳಗಾ, ತಾ:  ಅಫ್ಜಲಪೂರ.
7) ಬಸವರಾಜ ತಂದೆ ಸಿದ್ದಣ್ಣ ತೊಂಚಿ ಸಾ:  ಸವರ್ೊದಯ ನಗರ ಗುಲಬರ್ಗಾ.
8) ಸುನಿಲ ತಂದೆ ಪೀರಪ್ಪ ಬಟಗೇರಿ ಸಾ:  ದೇವಲಗಾಣಗಾಪೂರ, ತಾ:  ಅಫ್ಜಲಪೂರ.
9) ಅಶೋಕ ತಂದೆ ವಿಟ್ಠಲರಾವ ಸಿಂಗೆ ಸಾ:  ಅಶೋಕ ನಗರ ಗುಲಬರ್ಗಾ.
10) ತ್ರಿಪುಂಡಯ್ಯ ತಂದೆ ಸಿದ್ರಾಮಯ್ಯ ಸ್ವಾಮಿ ಸಾ:  ಹೊನಗುಂಟಾ, ತಾ:  ಚಿತ್ತಾಪೂರ.
11) ಪಂಡಿತ ತಂದೆ ಭೀಮಶ್ಯಾ ಸೋಲಂಕರ ಸಾ:  ಬೆಣ್ಣೆಶಿರೂರ, ತಾ:  ಅಳಂದ.
12) ಸಿದ್ದಾರೂಢ @ ಸಿದ್ದರಾಮ ತಂದೆ ಈರಣ್ಣ ಪೊಲೀಸ್ ಪಾಟೀಲ್, ಸಾ:  ಧುತ್ತರಗಾಂವ, ತಾ:  ಅಳಂದ.
13) ರಾಜಕುಮಾರ ತಂದೆ ಶರಣಪ್ಪ ಜಮಾದಾರ ಸಾ:  ಧುತ್ತರಗಾಂವ, ತಾ:  ಅಳಂದ.
14) ಸಂತೋಷ @ ಮುತ್ತುರಾಜ ತಂದೆ ಮೈಲಾರಿ ಶೆಳ್ಳಗಿ, ಸಾ:  ಭೂಪಾಲ ತೆಗನೂರ.
15) ಭೀಮಾಶಂಕರ ತಂದೆ ಕಾಶಿನಾಥ ಚಿಕ್ಕೆಗೌಡ ಸಾ:  ಕಮಲಾಪೂರ, ತಾ:  ಜಿ:  ಗುಲಬರ್ಗಾ.
16) ಹರೀಶ @ ಹರ್ಷವರ್ದನ ತಂದೆ ಮಲ್ಲೇಶಪ್ಪ ತಳವಾರ ಸಾ;ಶಹಬಾದ ರೋಡ ಶಕ್ತಿನಗರ ತಾ;ಜಿ;ಗುಲಬರ್ಗಾ.
17) ಆನಂದ ತಂದೆ ದತ್ತಾತ್ರೇಯ ಆಲಮೇಲಕರ್ ಸಾ;ಅಫಜಲಪೂರ ತಾ;ಅಫಜಲಪೂರ ಜಿ;ಗುಲಬರ್ಗಾ
     ಹಾ;; ಪ್ಲಾಟ ನಂ:100 ಜಿಡಿಎ ಕಾಲೋನಿ ಗುಲಬರ್ಗಾ.
18) ಸಂತೋಷ ತಂದೆ ವಿಠ್ಠಲರಾವ ಸಿಂಗೆ ಸಾ;ಅಶೋಕ ನಗರ ತಾ;ಜಿ;ಗುಲಬರ್ಗಾ.

          ಮೇಲ್ಕಂಡ ಈ ಎಲ್ಲಾ ರೌಡಿ ಜನರನ್ನು ಸಾರ್ವತ್ರಿಕ ಲೋಕಸಭಾ ಚುನಾವಣೆ ಸುಸೂತ್ರವಾಗಿ ನಡೆಯಲು ದಿನಾಂಕ 10-04-2014ರಿಂದ ದಿನಾಂಕ 20-04-2014 ರ ವರೆಗೆ 10 ದಿವಸಗಳ ಕಾಲ ಮಾನ್ಯ ಜಿಲ್ಲಾಧಿಕಾರಿಯವರು ಜಿಲ್ಲೆಯಿಂದ ಗಡಿಪಾರು ಮಾಡಲು ಆದೇಶ ಹೊರಡಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು 18 ಜನ ರೌಡಿ ಪಟ್ಟಿಯಲ್ಲಿರುವವರನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ನಿದರ್ೇಶನ ನೀಡಿರುತ್ತಾರೆ.

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ದೇವಲಗಾಣಗಾಪೂರ ಠಾಣೆ : ಹೂವಿನಳ್ಳಿ ಗ್ರಾಮದ ಚಕ್ಕಾರ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 4 ಜನರು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವದ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ. ಗಾಣಗಾಪೂರ, ಸಿಬ್ಬಂದಿ ಹಾಗು ಪಂಚರು ಕೂಡಿಕೊಂಡು ದಾಳಿ ಮಾಡಿ ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1] ಸಿದ್ರಾಮಪ್ಪ ತಂದೆ ಮಹಾದೇವಪ್ಪ ದೇಶಮುಖ 2] ಗುರಣ್ಣ ತಂದೆ ಭೀಮಶ್ಯಾ ಸಾಹು 3] ಉದಯಕುಮಾರ ತಂದೆ ಅಮೃತರಾವ ಅವರಳ್ಳಿ 4] ಸೋಮಯ್ಯ ತಂದೆ ಬಸಯ್ಯ ಮಠ ಸಾ|| ಎಲ್ಲರೂ ಹೂವಿನಳ್ಳಿ ಒಟ್ಟು 1780-00 ರೂ ಮತ್ತು 52 ಇಸ್ಪೇಟ ಎಲೆಗಳನ್ನು ಜಪ್ತಿಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ದಿನಾಂಕ 10-04-2014 ರಂದು 14:00 ಗಂಟೆಗೆ ಬಟ್ಟರಗಾ ಗ್ರಾಮದ ಮೌಲಾಲಿ ದರ್ಗಾದ ಬೇವಿನ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಹಾಗೂ ಠಾಣೆಯ ಸಿಬ್ಬಂದಿ  ಮತ್ತು ಇಬ್ಬರು ಪಂಚರನ್ನು ಕರೆದುಕೊಂಡು  ಭಟ್ಟರಗಾ ಗ್ರಾಮಕ್ಕೆ ಹೋಗಿ ಮೌಲಾಲಿ ದರ್ಗಾದ ಮರೆಯಲ್ಲಿ ನಿಂತು ನೋಡಲಾಗಿ  10 ಜನ ವ್ಯಕ್ತಿಗಳು ದರ್ಗಾದ ಖುಲ್ಲಾ ಜಾಗದಲ್ಲಿರುವ ಒಂದು ಬೇವಿನ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 10 ಜನರನ್ನು ಹಿಡಿದು ಒಬ್ಬೋಬ್ಬರನ್ನಾಗಿ ವಿಚಾರಿಸಿ ಚೆಕ ಮಾಡಲಾಗಿ 1. ಇಸ್ಮಾಯಿಲ್ ತಂದೆ ಹುಸೇನಿ ಯಾದವ 2. ಮಾಹಾಂತೇಶ ತಂದೆ ಸುಬ್ಬಣ್ಣ ಜಮಾದಾರ 3. ರಾಜು ತಂದೆ ಸಿದ್ರಾಮ ಹುಲಸೂರೇ 4. ಸಿದ್ದು ತಂದೆ ಯಶವಂತ್ರಾಯ ಬಸತೇ 5. ನಾಗಪ್ಪ ತಂದೆ ಹಣಮಂತ ಸಿಂಗೆ ಸಾ : ಎಲ್ಲರು ದುಬೈ ಕಾಲನಿ ಗುಲಬರ್ಗಾ 6. ಶರಣಪ್ಪ ತಂದೆ ಮಾಪಣ್ಣ ಸಿಂಗೆ  ಸಾ: ಶಿತನೂರ 7. ಅಮೋಘಸಿದ್ದ ತಂದೆ ಭೀಮಶಾ ಬುರಾನಪುರ 8. ಗಂಗಾಧರ ತಂದೆ ಗುರುಶಾಂತಪ್ಪ ಆಳಂದ ಸಾ: ಶರಣಶಿರಸಗಿ ಗುಲಬರ್ಗಾ 9. ಸಿದ್ದು ತಂದೆ ಅಂಬಣ್ಣ ಬಿಗನೂರ ಸಾ: ಕವಲಗಿ 10. ಶ್ರೀನಾಥ ತಂದೆ ಶಿವಶರಣಪ್ಪ ಸರಡಗಿ ಸಾ: ಚಿತ್ತಾಪೂರ ರವರಿಂದ ಒಟ್ಟು 6060/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಪಂಚರ ಸಮಕ್ಷಮ ಗುನ್ನೆ ಸ್ಥಳದಲ್ಲಿ ಜಪ್ತಿಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಚೌಕ ಠಾಣೆ : ¢£ÁAPÀ 10.04.2014 gÀAzÀÄ 1345 ಗಂಟೆಗೆ  ಫಿಲ್ಟರಬೇಡ ಹನುಮಾನ ಗುಡಿಯ ಕಟ್ಟೇಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 1. ರಾಮು ತಂದೆ ಗೊವಿಂದ ರಾಠೋಡ 2. ದಿನೇಶ ತಂದೆ ಮೋತಿಲಾಲ ಚವ್ಹಾಣ 3. ಈರಣ್ಣ ತಂದೆ ಬಾಬುರಾವ ಪಳಸೆ 4. ಹರಿನಾಥ ತಂದೆ ಬಾಬುರಾವ ಮೇಧಾ 5. ದಿಲೀಪ ತಂದೆ ಸೋಮಲಾ ರಾಠೋಡ ಸಾಃ ಎಲ್ಲರು  ಫಿಲ್ಟರಬೇಡ ತಾಂಡಾ ಗುಲಬರ್ಗಾ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ  ನಗದು 7815/-  ರೂಪಾಯಿ ಮತ್ತು 52 ಇಸ್ಪೇಟ ಎಲೆಗಳು ಜಪ್ತಿ ಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುಧ್ಧ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೌಕ ಠಾಣೆ : ¢£ÁAPÀ 10.04.2014 gÀAzÀÄ 1630 ಹುಮನಾಬಾದ ರೋಡಿಗಿರುವ ಹಾಲಿನ ಡೈರಿಯ ಎದುರುಗಡೆ ಶಾಬಾದಿ ದಾಲಮಿಲ್ ಹಿಂದೆ ಖುಲ್ಲಾ ಜಾಗದ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ  ಆಡುತ್ತಿರುವ ಬಗ್ಗೆ ಬಾತ್ಮ ಮೇರೆಗೆ ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 1. ಚೆನ್ನಬಸಪ್ಪ ತಂದೆ ಮಾಣಿಕಪ್ಪ ನರೋಣಿ ಸಾಃ ಸುಲ್ತಾನಪೂರ 2.ರಾಜು ತಂದೆ ಶಂಕರರಾವ ಸಿಂದೆ ಸಾಃ ರೇವಣಸಿದ್ದೇಶ್ವರ ಕಾಲೋನಿ ಗುಲಬರ್ಗಾ 3. ಸಂಜೀವಕುಮಾರ ತಂದೆ ಸಾಯಿಬಣ್ಣ ಶೀಲವಂತ ಸಾಃ ರಾಮನಗರ ಗುಲಬರ್ಗಾ 4. ಬಾಬುಮಿಯಾ ತಂದೆ ಮಹಿಬೂಬಸಾಬ ಸೈಯ್ಯದ ಸಾಃ ಆದರ್ಶ ನಗರ ಗುಲಬರ್ಗಾ 5. ಚಂದ್ರಕಾಂತ ತಂದೆ ನಾಗಯ್ಯ ಗುತ್ತೇದಾರ ಸಾಃ ಶಿವಾಜಿ ನಗರ ಗುಲಬರ್ಗಾ 6. ಮಹಾದೇವಪ್ಪ ತಂದೆ ಯಶ್ವಂತಪ್ಪ ಕಪನೂರ ಸಾಃ ಕಪನೂರ ತಾಃಜಿಃ ಗುಲಬರ್ಗಾ 7. ಬಸವರಾಜ ತಂದೆ ಪರಮೇಶ್ವರ ಮೂಲಿಮನಿ ಸಾಃ ಹಾಗರಗಾ ತಾಃಜಿಃ ಗುಲಬರ್ಗಾ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ  ನಗದು 25,260/- ರೂಪಾಯಿ ಮತ್ತು 52 ಇಸ್ಪೇಟ ಎಲೆಗಳು ಜಪ್ತಿ ಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 10-04-2014 ರಂದು 4:00 ಪಿ.ಎಮ್ ಕ್ಕೆ ಮಣೂರ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗು ಪಂಚರನ್ನು ಕರೆದುಕೊಂಡು ಮಣೂರ ಗ್ರಾಮಕ್ಕೆ ಹೊಗಿದ್ದು, ಅದೆ ಸಮಯಕ್ಕೆ ಮಾಶಾಳ ಉಕ್ಕಡ ಠಾಣೆಯ ಸಿಬ್ಬಂದಿಯವರು ಬಂದಿದ್ದು, ಅಂಬೆಡ್ಕರ ಸರ್ಕಲ ಹತ್ತಿರ ಜೀಪ ನಿಲ್ಲಿಸಿ ಎಲ್ಲರೂ ಸ್ವಲ್ಪದೂರು ನಡೆದುಕೊಂಡು ಹೊಗಿ ಮರೆಯಾಗಿ ನೋಡಲು ಮಣುರ ಗ್ರಾಮದ ಸರ್ಕಾರಿ ಪ್ರೌಡಶಾಲೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ರಾಜಶೇಖರ ತಂದೆ ಶಾಂತಪ್ಪ ಎಮ್ಮೇನೋರ ಸಾ|| ಮಣೂರ ಗ್ರಾಮ ಎಂದು ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 510/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪ್ರಾಪ್ತಳನ್ನು ಅಪಹರಿಸಿ ಬಲತ್ಕಾರ ಮಾಡಿದ ಪ್ರಕರಣ :
ಕಾಳಗಿ ಠಾಣೆ : ಶ್ರೀ  ರಮೇಶ ತಂದೆ ನಾಥೂರಾಮ ಜಾಧವ ಸಾ|| ಬೆಡಸೂರ ಎಂ ತಾಂಡಾ ರವರ ಮಗಳಾದ ಕಾವ್ಯಾ (ಹೆಸರು ಬದಲಾಯಿಸಿದೆ.) ಇವಳನ್ನು ನಮ್ಮ ತಾಂಡಾದ ಅನೀಲ ತಂದೆ ಠಾಕರು ಇತನು ದಿನಾಂಕ 21/06/13 ರಂದು ಸಾಯಂಕಾಲ 7-30 ಗಂಟೆಯ ಸುಮಾರಿಗೆ ನಾವು ಮನೆಯಲ್ಲಿ ಇಲ್ಲದ ಸಮಯದಲ್ಲಿ ನನ್ನ ಮಗಳನ್ನು ಯಾವುದೋ ವಾಹನದಲ್ಲಿ ಹಾಕಿಕೊಂಡು ಹೋಗಿರುತ್ತಾನೆ ಈ ವಿಷಯ ನಮಗೆ ಹೋತ್ತಾಗಿ ಆ ಕಡೆ ಈ ಕಡೆ ಹುಡುಕಾಡಿದ ನಂತರ ನನ್ನ ಸೋಸೆಯಾದ ಉಷಾ ಗಂಡ ವಿಜಯಕುಮಾರ ಇವಳು ತಿಳಿಸಿದ್ದೆನೆಂದರೆ ಯಾರೋ ವಾಹನದಲ್ಲಿ ಬಂದು ಕುಡಿಸಿಕೊಂಡು ಹೋದರೆಂದು ಹೇಳಿದಳು ನಾವು ಇಲ್ಲಿಯವರೆಗೆ ಸಾಕಷ್ಟು ಹುಡುಕಾಡಿದ್ದರು ಸುಳಿವು ಸಿಗದ ಕಾರಣ ಇಂದು ತಡವಾಗಿ ಠಾಣೆಗೆ ಇನ್ನು ಅಪ್ರಾಪ್ತಳಾದ ನನ್ನ ಮಗಳನ್ನು ಹುಡುಕಿಕೊಡಬೇಕೆಂದು ಅರ್ಜಿ ನೀಡಿದ್ದು ದಿನಾಂಕ 07/04/14 ರಂದು ಠಾಣೆಯ ಸಮನ್ಸ ಮತ್ತು ವಾರೆಂಟ ಜಾರಿ ಮಾಡುವ ಸಿಬ್ಬಂದಿಯವರಾದ ಶ್ರೀ ಶರಣಪ್ಪ ಹೆಚ್.ಸಿ 375 ಸಿ.ಪಿ.ಸಿ 321 ಶ್ರೀ ಅಶೋಕ ರವರಿಗೆ  ಅಪಹೃತಳನ್ನು ಮತ್ತು ಅನೀಲ ಇವರ ಪತ್ತೆ ಕಾರ್ಯಕ್ಕಾಗಿ ಠಾಣೆಯ ಕಳುಹಿಸಿದ್ದು ಸದರಿಯವರು ಪತ್ತೆ ಮಾಡುತ್ತಾ ಹೋಗಿ ಮಹಾರಾಷ್ಟ್ರದ ಧಹೀಸಾರೆಂಬಲ್ಲಿ ಇದ್ದ ಬಗ್ಗೆ ಮಾಹಿತಿ ತಿಳಿದು ಅಲ್ಲಿಗೆ ಹೋಗಿ ಅವರನ್ನು ಕರೆದುಕೊಂಡು ಇಂದು ದಿನಾಂಕ 10-04-2014 ರಂದು 10-00 ಎ,ಎಂಕ್ಕೆ ಠಾಣೆಗೆ ತಂದು ಹಾಜರ ಪಡಿಸಿದರು, ಸದರಿಯವರು vÀ£Àß ºÉýPÉAiÀÄ°è ºÉýzÉÝãÉAzÀgÉ ಕಳೆದ 4 ವರ್ಷಗಳಿಂದ ನನ್ನ ಮತ್ತು ನಮ್ಮ ತಾಂಡಾದ ಅನೀಲ ತಂದೆ ಠಾಕ್ರುಸಿಂಗ ರಾಠೋಡನೋಂದಿಗೆ ಪ್ರೀತಿ ಪ್ರೇಮ ಇರುತ್ತದೆ, ಆತನ ನನಗೆ ಮದುವೆಯಾಗುತ್ತೆನೆ ಅಂತ ನಂಬಿಸಿ ಹೋದ ವರ್ಷ ಜೂನ ತಿಂಗಳನಲ್ಲಿ ನನಗೆ ಅವನ ಮನೆಗೆ ಕರೆದುಕೊಂಡು ಹೋಗಿ ಮನೆಯಲ್ಲಿ ಯಾರು ಇರಲಿಲ್ಲಾ ನಾನು ಚಿಕ್ಕವಳು ಇದ್ದೆನೆ ಬೇಡವೆಂದರು ಕೂಡ ಕೇಳದೆ ಅವರ ಮನೆಯಲ್ಲಿ ನನ್ನೊಂದಿಗೆ ಬಲಾತ ಸಂಭೋಗ ಮಾಡಿರುತ್ತಾನೆ, ಈ ವಿಷಯ ನಮ್ಮ ಮನೆಯಲ್ಲಿ ಯಾರಿಗೂ ಹೇಳಿರಲಿಲ್ಲಾ,  ದಿನಾಂಕ 21/06/13 ರಂದು 7-30 ಪಿ,ಎಂ ಸುಮಾರಿಗೆ ಅನೀಲ ಇತನು ನನ್ನನು ಫುಸಲಾಯಿಸಿ ಗುಲಬರ್ಗಾಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ರೈಲ್ವೆ ಮುಖಾಂತರ ಮುಂಬೈಗೆ ಕರೆದುಕೊಂಡು ಹೋಗಿ ಧೈಹೀಸಾರ ಎಂಬಲ್ಲಿ ನಮ್ಮೂರಿನ ಗುರುನಾಥ ಕಾರಬಾಯಿ ಇವರ ಮುಖಾಂತರ ಅನೀಲನು ಒಂದು ಬಾಡಿಗೆ ಮನೆ ಹಿಡಿದುಕೊಂಡು ನನಗೆ ಅಲ್ಲಿ ಇಟ್ಟು, ನನ್ನ ಇಚ್ಚೆಗೆ ವಿರುದ್ದವಾಗಿ ಪದೇ ಪದೇ ಸಂಭೋಗ ಮಾಡುತ್ತಾ ಬಂದಿರುತ್ತಾನೆ ಅಂತಾ ತಿಳಿಸಿದ್ದುರ ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಫರತಾಬಾದ ಠಾಣೆ : ದಿನಾಂಕ: 09-04-2014  ರಂದು ಬೆಳಗ್ಗೆ ಮತ್ತು ಶ್ರೀ ಕೊರೆಪ್ಪ ತಂದೆ ಹಣಮಂತ ದೊಡಮನಿ ಸಾ:ಪಾಣೆಗಾಂವ ತಾ: ಜಿ:ಗುಲಬರ್ಗಾ  ನನ್ನ ಹೆಂಡತಿ ಲಕ್ಕಮ್ಮಾ ಹಾಗೂ ನಮ್ಮ ಮಾವನಾದ ಜಟ್ಟೆಪ್ಪ ಮೂವರು ಮನೆಯಲ್ಲಿದ್ದಾಗ ನಮ್ಮ ಅಣ್ಣತಮ್ಮಕೀಯವರಾದ ಶರಣಪ್ಪ ಮಾಂಗ ಇತನು ತನ್ನ ಮನೆಯ ಮುಂದೆ ರಸ್ತೆಯ ಮೇಲೆ ಕುಳಿತು ರಂಡಿ ಮಗ ಕೊರೇಗ ನಮ್ಮ ಜಾಗದಲ್ಲಿ ಜಾಗ ಬರುತ್ತದ ಅಂತಾ, ಸೂಳಿ ಮಗ ಹ್ಯಾಂಗ್‌ ತೊಗೊತನ ತೋಗಳಿ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಅವನ ಮನೆಯ ಮುಂದೆ ಹೋಗಿ ರಸ್ತೆಯ ಮೇಲೆ ನಿಂತು ಯಾಕೆ ಮುಂಜಾನೆ ಎದ್ದು ಸುಮ್ಮ ಸುಮ್ಮನೆ ಹೊಲಸು ಹೊಲಸ ಬೈತ್ತಿದ್ದಿ, ಅಂತಾ ಕೇಳಿದಕ್ಕೆ, ಅವಾಚ್ಯವಾಗಿ ಬೈದು ಅಲ್ಲೆ ಬಿದ್ದಿದ್ದ ಕಲ್ಲಿನಿಂದ ನನಗೆ ಬಲಗಾಲ ಮೊಣಕಾಲಿಗೆ ಹೊಡೆದು ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ ಠಾಣೆ : ಶ್ರೀ ಗುರುನಾಥ ತಂದೆ ಲಂಬು ಪವಾರ ಸಾ: ಯಡ್ರಾಮಿ ತಾಂಡಾ ರವರು  ದಿನಾಂಕ: 08-04-2014 ರಂದು 9 ಎ.ಎಮ್ ಕ್ಕೆ ಫಿರ್ಯಾದಿಯು ತನ್ನ ಹೊಲ ಸರ್ವೆ ನಂ 441 ರಲ್ಲಿ ಮನೆ ಕಟ್ಟುತಿರುವಾಗ ಸೊಮ್ಲು ತಂದೆ ಜೈರಾಮ ರಾಠೋಡ ಸಾ : ಯಡ್ರಾಮಿ ತಾಂಡಾ ಸಂಗಡ 13 ಜನರು ಕುಡಿಕೊಂಡು ಆಕ್ರಮಕೊಟ ರಚಿಸಿಕೊಂಡು  ಬಂದು ಸದರಿ ಜಾಗವು ನಮ್ಮದು ಇದೆ ಅಂತಾ ಫೀರ್ಯಾದಿಗೆ ಹೊಡೆದು ಗುಪ್ತ ಪೇಟ್ಟು ಪಡೆಸಿ ಜೀವ ದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ ಠಾಣೆ : ಶ್ರೀ ಸೊಮ್ಲು ತಂದೆ ಜೈರಾಮ ರಾಠೋಡ ಸಾ : ಯಡ್ರಾಮಿ ತಾಂಡಾ  ರವರು ದಿನಾಂಕ: 08-04-2014 ರಂದು 8 ಎ.ಎಮ್ ಕ್ಕೆ ಫಿರ್ಯಾದಿಯು ತನ್ನ ಹೊಲ ಸರ್ವೆ ನಂ 442 ಬಟಾ 15 ರಲ್ಲಿ ಮನೆ ಕಟ್ಟುತಿರುವಾಗ ಗುರುನಾಥ ತಂದೆ ಲಂಬು ಚವ್ಹಾಣ ಸಂಗಡ 12 ಜನರು  ಕುಡಿಕೊಂಡು ಅಕ್ರಮ ಕೂಟ ರಚಿಸಿಕೊಂಡು ಬಂದು  ಸದರಿ ಜಾಗವು ನಮ್ಮದು ಇದೆ ಅಂತಾ ಫೀರ್ಯಾದಿಗೆ ಹೊಡೆದು ಗುಪ್ತ ಪೇಟ್ಟು ಪಡೆಸಿ ಜೀವ ದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಅನುರಾಧ ಗಂಡ ರವಿಂದ್ರನಾಥ ನವಣಿ ಸಾಃ ಪ್ಲಾಟ ನಂ. 30, ಪ್ರಗತಿ ಕಾಲೋನಿ ಸೇಡಂ ರೋಡ್ ಗುಲಬರ್ಗಾ ಇವರು ದಿನಾಂಕಃ 10-04-2014 ರಂದು ಮದ್ಯಾಹ್ನ 12:00 ಗಂಟೆ ಪ್ರಗತಿ ಕಾಲೋನಿಯ ಗಾರ್ಡನದಲ್ಲಿ 10-13 ಹುಡುಗರು ಕ್ರಿಕೇಟ್ ಆಡುತ್ತಿದ್ದಾಗ ಕ್ರಿಕೇಟ್ ಬಾಲು 2-3 ಸಲ ಫಿರ್ಯಾದಿಯ ಅಂಗಳದಲ್ಲಿ ಮತ್ತು ಫಿರ್ಯಾದಿ ಮನೆಯ ಪಕ್ಕದ ಮನೆಯವರಾದ ಸ್ಟೆಫಿನ್ ಇವರ ಅಂಗಳದಲ್ಲಿ ಬಿದ್ದಿದ್ದರಿಂದ ಫಿರ್ಯಾದಿದಾರರು ಕ್ರಿಕೇಟ್ ಆಡುವ ಹುಡುಗರಿಗೆ ನೀವು ಈ ರೀತಿಯಾಗಿ ಕ್ರಿಕೇಟ್ ಬಾಲು ಹೊಡೆಯಬೇಡರಿ ಅಂದಿದಕ್ಕೆ ಅವರುಗಳು ಸಿಟ್ಟಿಗೆದ್ದು ನಾವು ಇಲ್ಲಿಯು ಆಡುತ್ತೇವೆ ಎಲ್ಲಿಯು ಆಡುತ್ತೇವೆ ನೀನು ಯಾರೂ ಕೇಳಲಿಕ್ಕೆ ಎಂದು ಜಗಳಕ್ಕೆ ಇಳಿದು ಮನೆಯಲ್ಲಿ ಚೆಂಡು ಬಿದ್ದರೆ ಏನಾಯತ್ತು ಅಂತಾ ಅವಾಚ್ಯವಾಗಿ ಅನ್ನಬಾರದ ಶಬ್ದಗಳಿಂದ ಬೈದಿದ್ದು ಅದು ನಿನ್ನ ಮನೆ ಅಲ್ಲಾ ಬೇರೆಯವರ ಚಿಂತೆ ನೀನೇಕೆ ಮಾಡುತ್ತಿ ನಿನಗೂ ಏನು ಸಂಬಂಧ ಇದೆ ಅಂತಾ ಬೈಯುತ್ತಾ ಅಭಿಶೇಕ, ಮಹೇಶ ಲೋಕರೆ ಇವರು ನನ್ನ ಮೈಮೇಲಿನ ಸೀರೆ ಹಿಡಿದು ಜಗ್ಗಾಡಿ ಸೀರೆ ಸೆರಗನ್ನು ಹರಿದು ನನಗೆ ಮಾನ ಹಾನಿ ಮಾಡಿರುತ್ತಾರೆ ಮತ್ತು ಕೈಯಿಂದ ಮೈಮೇಲೆ ಹೊಡೆದು ಹೊಟ್ಟೆಗೆ ಒದ್ದರು. ಆಗ ನನ್ನ ಮಗನಿಗೆ ಬಾಜು ಮನೆಯವರಾದ ರಮೇಶ ಇವರು ಫೋನ್ ಮೂಲಕ ಮೆಸೆಜ್ ಮಾಡಿದ್ದರಿಂದ ನನ್ನ ಮಗ ಶರಣು ಇತನು ಬಂದು ನನ್ನ ತಾಯಿಗೆ ಏಕೆ ಬೈಯಿದು ಸೀರೆ ಹರಿದು ಅವಮಾನ ಮಾಡಿರುತ್ತೀರಿ ಅಂತ ಕೇಳಿದಕ್ಕೆ ಸುಮಾರು 6-7 ರಿಂದ ಜನ ಹುಡುಗರು ಕೂಡಿಕೊಂಡು ನನ್ನ ಮಗನಿಗೆ ನೆಲಕ್ಕೆ ಹಾಕಿ ಕೈಯಿಂದ ಕಾಲಿನಿಂದ ಬೆನ್ನಿಗೆ ಹೊಟ್ಟೆಗೆ ಒದ್ದರು. ಮತ್ತು ತಲೆಯ ಮೇಲೆ ಕಲ್ಲಿನಿಂದ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 08-04-2014 ರಂದು ಬೆಳಿಗ್ಗೆ 7-30 ಗಂಟೆ ಸುಮಾರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆಎ-32 ಎಫ-1385 ರ ಚಾಲಕನಾದ ಪ್ರಭು ಇತನು ತನ್ನ ಬಸ್ಸುನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಆಸ್ಪತ್ರೆಯ ಎದುರಿನ ಆಸ್ಪತ್ರೆಯ ಹೆಸರುಳ್ಳ ಬೋರ್ಡಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಡ್ಯಾಮೇಜ ಮಾಡಿರುತ್ತಾನೆ ಅಂತಾ ಡಾ: ನಳಿನಿ ನಮೋಶಿ ಜಿಲ್ಲಾ ಶಸ್ತ್ರಜ್ಞರು ಹಾಗು ಅಧೀಕ್ಷಕರು ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಮಹ್ಮದ ಶಮಿಯೊದ್ದಿನ ತಂದೆ ಮಹ್ಮದ ಸಲಿಮೋದ್ದಿನ ರವರು ದಿನಾಂಕ:10-04-2014  ರಂದು ಮಧ್ಯಾಹ್ನ 2=15 ಗಂಟೆಗೆ ಫಿರ್ಯಾದಿಯು ತನ್ನ ಮೋ/ಸೈಕಲ್ ನಂ: ಕೆಎ 33 ಜೆ 8749 ನೆದ್ದನ್ನು ಆಷಿಯಾನ ಮಹಲ್ ಮತ್ತು ಲಾಹೋಟಿ ಪೆಟ್ರೋಲ್ ಪಂಪ ಕ್ರಾಸ್ ಮುಖಾಂತರ ಎಸ್.ವಿ.ಪಿ.ಸರ್ಕಲ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಪಂಜಾಬ ಭೂಟ ಹೌಸ ಎದುರಿನ ರೋಡ ಮೇಲೆ ಮೋ/ಸೈಕಲ್ ನಂಕೆಎ 32 ಇಡಿ 9978 ರ ಸವಾರನು  ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ/ಸೈಕಲಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಕಳ್ಳತನ ಮಾಡುತ್ತಿರುವ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 10-04-2014 ರಂದು ಬೆಳಿಗ್ಗೆ ಸೋನ್ನ ಗ್ರಾಮದ ಬೀಮಾನದಿಯಲ್ಲಿ ಜೆ.ಸಿ.ಬಿ ಯಿಂದ ಅಕ್ರಮವಾಗಿ ಕಳ್ಳತನದಿಂದ ಮರಳು ಕದಿಯುತ್ತಿದ್ದಾರೆ ಎಂದು ಬಾತ್ಮಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ, ಸಿಬ್ಬಂದಿ ಹಾಗು ಪಂಚರೊಂದಿಗೆ ಸೋನ್ನ ಗ್ರಾಮದ ಭೀಮಾನದಿಯಲ್ಲಿ, ಸೋನ್ನ ಗ್ರಾಮದ ಕಡೆಗೆ ಬರುವಂತೆ, ಡ್ಯಾಮ ಹತ್ತಿರ ಭೀಮಾನದಿಯಲ್ಲಿ ಒಬ್ಬ ವ್ಯಕ್ತಿ ಜೆ.ಸಿ.ಬಿ ವಾಹನದಿಂದ ನದಿಯಲ್ಲಿರುವ ಮರಳನ್ನು ಅಗೆದು ತಗೆದು, ಅಲ್ಲೆ ನದಿಯಲ್ಲಿ ನೀರಿಲ್ಲದ ಕಡೆಯಲ್ಲಿ ದಂಡೆಯಕಡೆಗೆ ಹಾಕುತ್ತಿದ್ದನು, ಆಗ ನಾವು ಸದರಿ ವ್ಯಕ್ತಿಯನ್ನು ಹಿಡಿದು ವಿಚಾರ ಮಾಡಬೇಕು ಎಂದು, ಸದರಿ ಜೆ.ಸಿ.ಬಿ ಹತ್ತಿರ ಹೋಗುತ್ತಿದ್ದಾಗ, ಸದರಿ ಜೆ.ಸಿ.ಬಿ ಚಾಲಕ ನಮ್ಮ ಪೊಲೀಸ್ ವಾಹನವನ್ನು ನೋಡಿ ಜೆ.ಸಿ.ಬಿ ವಾಹನವನ್ನು ಅಲ್ಲೆ ಸ್ಥಳದಲ್ಲಿಯೆ ಬಿಟ್ಟು ಓಡಿ ಹೊಗಿರುತ್ತಾನೆ. ನಾವು ಸದರಿ ಸ್ಥಳಕ್ಕೆ ಪಂಚರೊಂದಿಗೆ ಹೋಗಿ ನೋಡಲು ಸದರಿ ಜೆ.ಸಿ.ಬಿ ಚಾಲಕ ಜೆ.ಸಿ.ಬಿ ವಾಹನದಿಂದ ನದಿಯಲ್ಲಿರುವ ಮರಳನ್ನು ಕಳ್ಳತನದಿಂದ ಅಗೆದು ತಗೆದು, ನದಿಯಲ್ಲಿಯೆ ಅಂದರೆ, ನೀರಿಲ್ಲದ ಜಾಗದಲ್ಲಿ ದಂಡೆಯಕಡೆಗೆ ಮರಳನ್ನು ಸಂಗ್ರಹಿಸಿಟ್ಟಿದ್ದನು. ಸದರಿ ಮರಳನ್ನು ನಂತರ ಅಲ್ಲಿಂದ ಬೇರೆ ಕಡೆಗೆ ಕಳ್ಳತನದಿಂದ ಬೇರೆ ವಾಹನಗಳಲ್ಲಿ ಸಾಗಾಣಿಕೆ ಮಾಡುವ ಉದ್ದೇಶದಿಂದ ನದಿಯಲ್ಲಿರುವ ಮರಳನ್ನು, ಅಲ್ಲೆ ಒಂದು ಕಡೆ ಹಾಕಿ ಸಂಗ್ರಹಿಸುತ್ತಿದ್ದನು. ಸದರಿ ಜೆ.ಸಿ.ಬಿ ನಂಬರ ನೊಡಿದ್ದು ಅದರ ನಂ ಎಮ್.ಹೆಚ್-45 ಎಫ್-3941 ಅಂತಾ ಇರುತ್ತದೆ. ಅದರ ಚಾಲಕನ ಹೆಸರು ಗೊತ್ತಾಗಿದ್ದು ಬಗವಂತಪ್ಪ ತಂದೆ ಗುರುಲಿಂಗಪ್ಪ ಮುಗಳಿ ಸಾ|| ದೇವಣಗಾಂವ ಈತನು ಇರುತ್ತಾನೆ. ನಂತರ ನಾವು ಸದರಿ ಜೆ.ಸಿ.ಬಿ ಯನ್ನು ಹಾಜರಿದ್ದ ಪಂಚರ ಸಮಕ್ಷಮ ವಶಕ್ಕೆ ತಗೆದುಕೊಂಡೆನು, ಸದರಿ ಜೆ.ಸಿ.ಬಿ ಚಾಲಕನಾದ ಬಗವಂತಪ್ಪ ತಂದೆ ಗುರುಲಿಂಗಪ್ಪ ಮುಗಳಿ ಸಾ|| ದೇವಣಗಾಂವ ಈತನು ಅನದಿಕೃತವಾಗಿ, ಕಳ್ಳತನದಿಂದ ಜೆ.ಸಿ.ಬಿ ವಾಹನದ ಸಹಾಯದಿಂದ ಸೊನ್ನ ಗ್ರಾಮದ ಭೀಮಾನದಿಯಿಂದ ಮರಳನ್ನು ಸಂಗ್ರಹಣೆ  ಮಾಡುತ್ತಿದ್ದರಿಂದ, ಸದರಿ ಜೆ.ಸಿ.ಬಿ ಯೊಂದಿಗೆ ಠಾಣೆಗೆ ಬಂದು ಸದರಿಯವನ ವಿರುದ್ಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕಃ 10-04-2014  ರಂದು 11:00 ಎ.ಎಂ. ಸುಮಾರಿಗೆ ನಾನು ಮತ್ತು ನನ್ನ ಅಣ್ಣ ಹಾಗು ಗೆಳೆಯರಾದ ರಾಹುಲ, ಸಂಗಮೇಶ, ಮಹೇಶ, ವಿನೋದ, ಶರಣು ಹೆಬ್ಬಾಳಕರ, ಶರಣು, ಶಂಕರ ಎಲ್ಲರೂ ಕೂಡಿಕೊಂಡು ಪ್ರಗತಿ ಕಾಲೋನಿಯಲ್ಲಿರುವ ಗಾರ್ಡನದಲ್ಲಿ ಕ್ರಿಕೇಟ್ ಆಡುತ್ತಿರುವಾಗ ಗಾರ್ಡ ಪಕ್ಕದಲ್ಲಿರುವ ಪ್ರಮಿಳಾ ಮಿಸ್ ಇವರ ಅಂಗಳದಲ್ಲಿ ಚೆಂಡು ಬಿದ್ದಿದ್ದು ಚೆಂಡನ್ನು ನಾವು ತರಲು ಹೋದಾಗ ಅದೇ ಮನೆಯ ಪಕ್ಕದ ಮನೆಯವರಾದ ಅನುರಾಧ ನವಣಿ ಇವರು ಒಳಗಡೆಯಿಂದ ಚೆಂಡನ್ನು ತರಲು ಅಡ್ಡಿಪಡಿಸಿ ನನಗೆ ಭೋಸಡಿ ಮಕ್ಕಳೆ ಮತ್ತು ನಿಮ್ಮಂತಹ ಹೊಲೆಯ ಸೂಳ್ಯಾ ಮಕ್ಕಳೆ ನಿಮದಿಷ್ಟೆ ಮತ್ತು ನಿಮ್ಮಂತಹ ಹೊಲೆಯ ಸೂಳಿ ಮಕ್ಕಳನ್ನು ಈ ಏರಿಯಾದಲ್ಲಿ ಇರಲು ಬಿಟಿದ್ದೇ ತಪ್ಪು ಹಾದಿ ಹೆಣಾ ಆಗಿ ಹೋಗ್ತಿರೋ ಎಂದು ಬೈದರು. ಆಗ ನಾವೆಲ್ಲ ಗೆಳೆಯರು ಕೂಡಿ ಯಾಕೆ ಬೈಯುತ್ತಿರಿ ಅಂಟಿ ಎಂದು ಕೇಳುತ್ತಿರುವಾಗ ತಮ್ಮ ಮಗ ಶರಣು ಇತನಿಗೆ ಕರೆಯಿಸಿ ನಮ್ಮ ಜೊತೆಗೆ ಜಗಳಕ್ಕೆ ಬಿಟ್ಟಳು. ಆಗ ಶರಣು ಇತನು ಏ ರಂಡಿ ಮಕ್ಕಳೆ ನಮ್ಮ ತಾಯಿಗೆ ಬೈಯುತ್ತೀರಿ ಮನೆಯಲ್ಲಿ ಚೆಂಡು ಹೊಡೆಯುತ್ತೀರಿ ಅಂದವಗೆ ತನ್ನ ಕೈಯಲ್ಲಿದ್ದ ಬ್ಯಾಟನ್ನು ಕಸಿದುಕೊಂಡು ನನಗೆ ಹೊಡೆಯುತ್ತಿರುವಾಗ ನಾನು ಬಿಗಿಯಾಗಿ ಹಿಡಿದುಕೊಂಡೇನು. ಆವಾಗ ಹಿಂದಿನಿಂದ ಅನುರಾಧ ಇವಳು ಕಲ್ಲಿನಿಂದ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ನಂತರ ಶರಣು ಇತನು ಬ್ಯಾಟನಿಂದ ಕೈಗೆ ಮತ್ತು ಕಾಲಿಗೆ ಹೊಡೆದು ಗುಪ್ತಗಾಯ ಪಡಿಸಿದ್ದು ಹಾಗು ನನ್ನ ಅಣ್ಣನನ್ನು ಶರಣು ಇತನು ಕೈಯಿಂದ ಕುತ್ತಿಗೆಗೆ ಕೆವರಿ ಬೆನ್ನಿನ ಮೇಲೆ ಮತ್ತು ಹೊಟ್ಟೆಯ ಮೇಲೆ ಹೊಡೆದು ಜಾತಿನಿಂದನೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.