POLICE BHAVAN KALABURAGI

POLICE BHAVAN KALABURAGI

07 October 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀನಿವಾಸ   ತಂದೆ ಚಂದಪ್ಪ ಸಿಂಗೆ   ಉ: ನಿವೃತ ಪೊಲೀಸ್ ಅಧೀಕಾರಿ ಸಾ:ಅಕ್ಕ ಮಹಾದೇವಿ ನಗರ ಹೈ ಕೋರ್ಟ ಹತ್ತಿರ ಗುಲಬರ್ಗಾ     ರವರು ನಾನು ದಿನಾಂಕ: 05-10-2012 ರಂದು  ಸಾಯಂಕಾಲ   5=30 ಗಂಟೆ ಸುಮಾರಿಗೆ ನನ್ನ ಎಮ್ 80 ಮೋಟಾರ ಸೈಕಲ್  ನಂ: ಕೆಎ-32 ಜೆ-2178 ನೇದ್ದರ ಮೇಲೆ ಕೋರ್ಟ ಕ್ರಾಸ್ ದಿಂದ ಕೇಂದ್ರ ಬಸ್ ನಿಲ್ದಾಣದಕ್ಕೆ ಹೋಗುವ ನೋಬೆಲ್ ಶಾಲೆಯ ಕ್ರಾಸ್ ಹತ್ತಿರ ನನ್ನ  ಮೋಟಾರ ಸೈಕಲ್  ತಿರುಗಿಸಿ ಕೇಂದ್ರ ಬಸ್ ನಿಲ್ದಾಣ ರೋಡ ಕಡೆ ಹೋಗುತ್ತಿದ್ದಾಗ  ಮೋಟಾರ ಸೈಕಲ್ ನಂ: ಕೆಎ-32 ಯು-1436 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿ ಮೋಟಾರ ಸೈಕಲ್ ಸಮೇತ  ಹೊರಟು ಹೋಗಿರುತ್ತಾನೆ. .ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 103/2012 ಕಲಂ, 279, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜಾತಿ ನಿಂದನೆ ಪ್ರಕರಣ:
ದೇವಲ ಗಾಣಗಾಪೂರ ಪೊಲೀಸ್ ಠಾಣೆ: ಶ್ರೀ ಯೋಗೇಶ ತಂದೆ ಸದಾಶಿವ ಜಗದಾಳೆ ವಯ:32 ವರ್ಷ ಜಾತಿ||ಢೋರ  ಸಾ||ಗೊಬ್ಬುರ (ಬಿ) ತಾ||ಅಫಜಲಪೂರ ರವರು ನಮ್ಮ ಮನೆಗೆ ದಿನಾಂಕ: 24-05-2012 ರಂದು  5-6  ಜನರು ಕೂಡಿಕೊಂಡು ಬಂದು  ನನ್ನ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು,  ನಾವು ಪೊಲೀಸ್ ರು  ಇದ್ದೇವೆ ಮನೆ ಚೆಕ್ ಮಾಡುತ್ತೆವೆ ಅಂತಾ ಹೇಳಿ  ನನ್ನ  ತಾಯಿಗೆ ಹೊಡೆ-ಬಡೆ ಮಾಡಿ ಮನೆಯಲ್ಲಿದ್ದ ಬಂಗಾರದ ಆಭರಣಗಳು ಮತ್ತು ಹಣವನ್ನು ದೋಚಿರುತ್ತಾರೆ. ನನ್ನ ತಾಯಿಗೆ ದಿನಾಂಕ: 24-05-2012 ರಿಂದ 26-05-2012 ರವರೆಗೆ ಆಸ್ಪತ್ರೆಯಲ್ಲಿ ಉಪಚಾರ ಪಡೆದಿರುತ್ತಾಳೆ. ಹೊಡೆ ಬಡೆ ಮಾಡಿದ 5-6 ಜನರಾದ ಶಿವಾನಂದ ಕಲಶೆಟ್ಟಿ,ಮಹಿಬೂಬ ಅವರಳ್ಳಿ, ಜಗಪ್ಪ ಸಂಗಡ ಇತರರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 121/2012 ಕಲಂ, 323, 504, 395, ಐಪಿಸಿ ಮತ್ತು ಕಲಂ. 3 (11) ಎಸ.ಸಿ/ಎಸ.ಟಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ: 06-10-2012 ರಂದು  ಮಧ್ಯಾಹ್ನ 1-00 ಗಂಟೆ ಸುಮಾರಿಗೆ ತಾವರಗೇರಾ ಕ್ರಾಸಿನಲ್ಲಿ ಹುಮನಾಬಾದ ರಿಂಗ ರೋಡ ಕಡೆಯಿಂದ ಕೆಎ48, 1786 ನೇದ್ದರ ಕೃಷರ ಚಾಲಕ ಟಾಪ ಮೇಲೆ ಮತ್ತು ಒಳಗೆ ಜನರನ್ನು ತುಂಬಿ ಹಾಗೂ ಹಿಂದಿನ ಬಾಗಿಲು ಮುಚ್ಚದೇ  ಅದರ ಮೇಲು  4  ಜನ ಪ್ರಯಾಣಿಕರನ್ನು ನಿಲ್ಲಿಸಿಕೊಂಡು ಮಾನವನ ಜೀವಕ್ಕೆ ಆಪಾಯವಾಗುವ ರೀತಿಯಲ್ಲಿ ಅತಿವೇಗ ಮತ್ತು ಅಲಕ್ಷತನದಿಂದ  ನಡೆಸುತ್ತಾ ಹೊರಟಿದ್ದನ್ನು ಗಮನಿಸಿ ಕೈ ಸನ್ನೆ ಮಾಡಿದರೂ ಹಾಗೇ ಓಡಿಸುತ್ತಿದ್ದರಿಂದ, ಹುಮನಾಬಾದ ರಿಂಗ ರೋಡಿನ ಬಜಾಜ ಅರ್ಥ ಮೋವರ್ಸ ಎದುರುಗಡೆ ತಡೆದು ನಿಲ್ಲಿಸಿದ್ದು ಆತನ ಹೆಸರು  ಶಿವಾನಂದ ತಂದೆ ಅಂಬಣ್ಣಾ  ಹಲಗಿ  ವ:23 ವರ್ಷ ಸಾ: ಅಣಕಲ್ಲ್ ಗ್ರಾಮ ತಾ: ಚಿತ್ತಾಪುರ ಇದ್ದು, ಸದರಿಯವನ ಮೇಲೆ ಪಿ.ಎಸ.ಐ ರವರು ಸರ್ಕಾರಿ ತರ್ಪೆಯಾಗಿ ಠಾಣೆ ಗುನ್ನೆ ನಂ: 318/2012 ಕಲಂ, 279, 336 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ:06-10-2012 ರಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ ಮಸಾಪ್ತಿ  ದರ್ಗಾ ರೋಡಿನ ಎದುರುಗಡೆ ಹುಮನಾಬಾದ ರಿಂಗ ರೋಡ ಕಡೆಯಿಂದ ಕೆ-37 3785 ನೇದ್ದರ ಕೃಷರ ಚಾಲಕ ವಾಹನದ ಟಾಪ ಮೇಲೆ ಮತ್ತು ಒಳಗೆ ಜನರನ್ನು ತುಂಬಿ ಹಾಗೂ ಹಿಂದಿನ ಬಾಗಿಲು ಮುಚ್ಚದೇ  ಫೂಟ್ಟ್ ರೆಸ್ಟ ಮೇಲೆ 4  ಜನ ಪ್ರಯಾಣಿಕರನ್ನು ನಿಲ್ಲಿಸಿಕೊಂಡು ಮಾನವನ ಜೀವಕ್ಕೆ ಆಪಾಯವಾಗುವ ರೀತಿಯಲ್ಲಿ ಅತಿವೇಗ ಮತ್ತು ಅಲಕ್ಷತನದಿಂದ  ನಡೆಸುತ್ತಾ ಹೊರಟಿದ್ದನ್ನು ಗಮನಿಸಿ ನಿಲ್ಲಿಸುವಂತೆ ಸೂಚಿಸಿದರು ಹಾಗೆ ಮುಂದೆ ಹೋಗಿದು, ಆತನನ್ನ ಬೇನ್ನಟಿ ಹಿಡಿದು ಆತನ ಹೆಸರು ವಿಚಾರಿಸಲಾಗಿ ಕಲ್ಯಾಣರಾವ ತಂದೆ ಶಂಕರ ಭಂಕೂರ   ವ:23 ವರ್ಷ ಸಾ: ಮುತ್ತ್ಯಾನ ಬಬಲಾದ ಗ್ರಾಮ ತಾ:ಜಿ: ಗುಲಬರ್ಗಾ ಇತನ ಮೇಲೆ ಸರಕಾರಿ ತರ್ಫೇ ಯಾಗಿ ಪಿ.ಎಸ.ಐ ರವರು ಠಾಣೆ ಗುನ್ನೆ ನಂ: 319/2012 ಕಲಂ, 279, 336 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ:ಡಿ.ಕೇಶವಲು ತಂದೆ ಡೀ.ಧರ್ಮಯ್ಯಾ ಉ: ಗುತ್ತೆದಾರ ಸಾ: ಕವಗುಂಟ್ಲಾ ಮಂಡಲ ದೇವರ ಕದ್ರಾ ಜಿ:ಮೈಹುಬೂಬ ನಗರ ಆಂದ್ರ ಪ್ರದೇಶ ಹಾ.ವ. ಕೆ.ಎಚ್.ಬಿ. ಕ್ಯಾಂಪ ಕಾಳನೂರ ತಾ:ಜಿ: ಗುಲಬರ್ಗಾ ರವರು ನಾನು ದಿನಾಂಕ 06-10-2012 ರಂದು ಸಾಯಾಂಕಾಲ 7-00 ಗಂಟೆ ಸುಮಾರಿಗೆ ಕೆ.ಎಚ್.ಬಿ ಕ್ಯಾಂಪಗೆ ಹೋಗುವಾಗ ನ್ನ ಸಂಗಡ ಕೆಲಸ ಮಾಡುವ ಆನಂದ ತಂದೆ ಮಲ್ಲಪ್ಪಾ ಸಾ: ಕವಲಗಾ ಇವರು ಕೂಡಾ ತಮ್ಮ ಮೋಟಾರ ಸೈಕಲ ಹಿಂದೆ ಬರುತ್ತಿದ್ದರು ಕುಸನೂರ ದಾಟಿ ಬುದ್ದ ಮಂದಿರ ಕ್ರಾಸ ನಾಲಾದ ಹತ್ತಿರ ಆನಂದ ಇವರ ಮೋಟಾರ ಸೈಕಲದಲ್ಲಿಯ ಪೆಟ್ರೊಲ ಖಾಲಿಯಾಗಿ ಬಂದ ಮೋಟಾರ ಸೈಕಲ್ ಬಂದ ಆಗಿದ್ದರಿಂದ  ನಾನು ನನ್ನ ಮೊಟಾರ ಸೈಕಲನಿಂದ ಪೆಟ್ರೊಲ ತಗೆದು ಅವರ ಗಾಡಿಗೆ ಹಾಕಿ ಮೊಟಾರ ಸೈಕಲ ತಗೆದುಕೊಂಡು ಮುಂದೆ ಹೋಗುವಾಗ ಕುಸನೂರ ತಾಂಡಾ ಕ್ರಾಸ ದಾಟಿ ಮುಂದೆ ಹೋಗುವಾಗ ರೋಡಿನ ಮೇಲೆ 4 ಜನರು ಸೈಡಿಗೆ ತಮ್ಮ 4 ಮೋಟಾರ ಸೈಕಲಗಳು ನಿಲ್ಲಿಸಿ ನನಗೆ ತಡೆದು  ನಿಲ್ಲಿಸಿ 4 ಜನರಲ್ಲಿಯ ಇಬ್ಬರೂ ತವಾರ ತಗೆದುಕೊಂಡು ಇಬ್ಬರೂ ಬಡಿಗೆಗಳು ಹಿಡಿದುಕೊಂಡು ಅದರಲ್ಲಿ ಒಬ್ಬನು ನನಗೆ ಎಡ ಹುಬ್ಬಿಗೆ,ಇನ್ನೊಬ್ಬ ಕೈಯಿಂದ ಬಡಿಗೆಯಿಂದ,ಬಲಗೈ ಮುಂಗೈ ಮೇಲೆ ಹೊಡೆದು ಕೆಳಗೆ ಬಿಳಿಸಿ ಕೊರಳಲ್ಲಿಯ 15 ಗ್ರಾಂ ಬಂಗಾರದ ಲಾಕೆಟ ಅ.ಕಿ.38,000/ರೂಪಾಯಿಗಳದ್ದು. ಇನ್ನೊಬ್ಬ ನನ್ನ ಜೇಬಿನಲ್ಲಿ ಕೈ ಹಾಕಿ 5000/- ರೂ ಹಣ ಕಿತ್ತುಕೊಂಡು ಟೊಂಕದಲ್ಲಿ ಬೆಲ್ಟಗೆ ಹಾಕಿದ ಮೊಬೈಲ ಕವರನಲ್ಲಿದ್ದ ಒಂದು ನೋಕಿಯಾ ಮೋಬೈಲ ಅ.ಕಿ.3000/ರೂ ಮತ್ತು ಕೈಯಲ್ಲಿದ್ದ್ ಕೈ ಗಡಿಯಾರ ಕಸಿದುಕೊಂಡಿದ್ದು ಅದರ ಅ.ಕಿ.3000/ರೂ ಹೀಗೆ ಒಟ್ಟು 49,000/ರೂ ಕಿಮ್ಮತ್ತಿನ ಮೌಲ್ಯದ್ದು 4 ಜನರು ಹೊಡೆ ಬಡಿಮಾಡಿ ಕಸಿದು ಕೊಂಡಿರುತ್ತಾರೆ. ನನ್ನ ಹಿಂದೆ ಬರುತ್ತಿದ್ದ ಆನಂದ ಇವರನ್ನು ನೋಡಿ 4 ಜನರು ತಮ್ಮ ಮೋಟಾರ ಸೈಕಲಗಳನ್ನು ಚಾಲು ಮಾಡಿಕೊಂಡು ಓಡಿ ಹೋಗುವಾಗ ಅದರಲ್ಲಿ  ಒಂದು ಮೊಟಾರ ಸೈಕಲ ನಂಬರ ನೋಡಲಾಗಿ ಕೆಎ-32 ಕ್ಯೂ-42 ಇರುತ್ತದೆ. ಅಂತಾ ದೂರು ಸಲ್ಲಿಸಿದ  ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:233/2012 ಕಲಂ 394 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.