POLICE BHAVAN KALABURAGI

POLICE BHAVAN KALABURAGI

24 February 2014

Gulbarga Dist Reported Crimes

ಮಟಕಾ ಜೂಜಾಟ ಪ್ರಕರಣಗಳು:
ಅಫಜಲಪೂರ ಪೊಲೀಸ್ ಠಾಣೆ:ದಿನಾಂಕ 23-02-2014 ರಂದು ಶ್ರೀ ಸುರೇಶ ಬೆಂಡೆಗುಂಬಳ ಪಿ.ಎಸ್.ಐ ಅಫಜಲಪೂರ ಠಾಣೆ ರವರು ಅಫಜಲಪೂರ ಪಟ್ಟಣದಲ್ಲಿ ಸಿಬ್ಬಂದಿಯವರೊಂದಿಗೆ ಗಸ್ತಿನಲ್ಲಿದ್ದಾಗ ಪಟ್ಟಣದ ಅಮೋಘ ಸಿದ್ದ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವ ಬಾತ್ಮಿ ಬಂದ ಮೇರೆಗೆ ಠಾಣೆಯ ಸಿಬ್ಬಂದಿ ಜನರಾದ ತಸ್ಲೀಮ, ನಿಂಗಣ್ಣ ಇವರವರೊಂದಿಗೆ ಅಮೋಘ ಸಿದ್ದ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ 5 ಜನರು ದುಂಡಾಗಿ ಕುಳಿತುಕೊಂಡು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವದ ಜೂಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಜುಜಾಟವಾಡುತ್ತಿದ್ದ ಅಫಜಲಪೂರ ಪಟ್ಟಣದ 1. ಸೋಮಲಿಂಗ ತಂದೆ ಅಮೋಘಿ ಒಡೇಯರ, 2. ವಿಠ್ಠಲ ತಂದೆ ಮಾಳಪ್ಪ ತೇಗ್ಗಳ್ಳಿ, 3. ಶ್ರೀಮಂತ ತಂದೆ ಅಮೋಘ ಹಿರೆಕುರುಬರ, 4.  ಬಸವರಾಜ ತಂದೆ ಕಲ್ಲಪ್ಪ ಶಿನ್ನೂರ, 5. ಭೂತಾಳಿ ತಂದೆ ಕಲ್ಲಪ್ಪ ಹಿರೇಕುರುಬರ ಇವರನ್ನು ದಸ್ತಗೀರ ಮಾಡಿ  ಜೂಜಾಟಕ್ಕೆ ಬಳಸಿದ 52 ಇಸ್ಪೆಟ ಎಲೆಗಳು ಮತ್ತು ನಗದು ರೂ  990/- ಜಪ್ತಿ ಮಾಡಿಕೊಂಡು ಆರೋಪಿತರ ವಿರುದ್ದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ನಿಂಬರ್ಗಾ ಪೊಲೀಸ ಠಾಣೆ :ದಿನಾಂಕ 23/02/2014 ರಂದು ಮಾಡಿಯಾಳ ಗ್ರಾಮದ ಮರಗಮ್ಮ ದೇವರ ಗುಡಿಯ ಕಟ್ಟೆಯ ಮೇಲೆ ಇಸ್ಪೀಟ ಜೂಜಾಟ ನಡೆಯುತ್ತಿದೆ ಅಂತ ಬಾತ್ಮಿ ಬಂದ ಮೇರೆಗೆ ಶ್ರೀ ಕೆ.ಎಸ್. ಹಟ್ಟಿ ಸಿಪಿಐ ರವರ ನೇತೃತ್ವದಲ್ಲಿ ಶ್ರೀ ಸಂತೋಷ ಎಸ್. ರಾಠೋಡ  ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ರವರು ಠಾಣೆಯ ಸಿಬ್ಬಂದಿ 01. ಶ್ರೀ ಹಜರತ ಅಲಿ, 2. ಶ್ರೀ ಬಾಬುರಾಯ, 3.ಶ್ರೀ ರಾಜಕುಮಾರ, ರವರೊಂದಿಗೆ ಮಾಡಿಯಾಳ ಗ್ರಾಮಕ್ಕೆ ಹೋಗಿ ಇಬ್ಬರು ಪಂಚರು ಬರಮಾಡಿಕೊಂಡು ಎಲ್ಲರೂ ಸೇರಿ ಮಾಡಿಯಾಳ ಗ್ರಾಮದ ಮರಗಮ್ಮ ದೇವರ ಗುಡಿಯ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ 08 ಜನ ಮರಗಮ್ಮ ದೇವರ ಗುಡಿಯ ಕಟ್ಟೆಯ ಮೇಲೆ ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ  ಜೂಜಾಟ ವಾಡುತ್ತಿದ್ದ ಮಾಡಿಯಾಳ ಗ್ರಾಮದ 1. ನಿಂಗಪ್ಪಾ ತಂ. ಶಂಕ್ರೆಪ್ಪಾ ಖೈನ, 2.ರಾಜು ತಂ. ಗುರುಬಸಪ್ಪಾ ಮಡ್ಡಿತೋಟ, 3. ಬಸವರಾಜ ತಂ. ಹಮಂತ್ರಾಯ ಮಡ್ಡಿತೋಟ, 4. ಗುರುಪಾದಪ್ಪ ತಂ. ಪ್ರಭು ಮಡ್ಡತೋಟ, 5. ಕಲ್ಯಾಣಿ ತಂ. ಸಿದ್ದಪ್ಪ, 6. ಶ್ರೀಮಂತ ತಂದೆ ರೇವಣಸಿದ್ದಪ್ಪ, 7. ಮರೆಪ್ಪ ತಂ. ಪ್ರಭು ಇಕ್ಕಳಕಿ, 8. ಪ್ರಭು ತಂ. ಶರಣಪ್ಪ ವಾಡಿ, ದಸ್ತಗೀರ ಮಾಡಿ ಅಲ್ಲಿದ್ದ 52 ಇಸ್ಪಿಟ ಎಲೆಗಳು ಮತ್ತು ಜೂಜಾಟದಲ್ಲಿ ತೊಡಗಿಸಿದ ನಗದು ರೂ 13090/- ಜಪ್ತಿ ಮಾಡಿಕೊಂದು ಆರೋಪಿತರ ವಿರುದ್ದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಬಕಾರಿ ದಾಳಿ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ :ದಿನಾಂಕ 23/02/2014 ರಂದು ಶ್ರೀ ಸಂತೋಷ ಎಸ್. ರಾಠೋಡ ಪಿ.ಎಸ್.ಐ ನಿಂಬರ್ಗಾ ಠಾಣೆ ರವರು ಠಾಣೆಯ ಸಿಬ್ಬಂಧಿಯವರಾದ ಶ್ರೀ ರಾಜಶೇಖರ ಸಿಪಿಸಿ 778, ಶ್ರೀ ಸತೀಶ ಸಿಪಿಸಿ 851 ರವರೊಂದಿಗೆ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಸುಂಟನೂರ ಗ್ರಾಮದ ಕುರುಬರ ಓಣಿಯಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಮೇಲೆ ಅಕ್ರಮವಾಗಿ ಯಾವುದೆ ಲೈಸನ್ಸ ಇಲ್ಲದೆ ಕೈ ಚೀಲದಲ್ಲಿ ಮಧ್ಯದ ಪಾಕೇಟಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಚಂದ್ರಕಾಂತ ತಂದೆ ಲಾಡಪ್ಪ ನೀಲೂರ ಸಾ: ಸುಂಟನೂರ ಈತನನ್ನು ದಸ್ತಗೀರ ಮಾಡಿ ಆತನಿಂದ 180 ಎಮ್.ಎಲ್ ನ .ಕಿ ರೂ 1,300/- ಮೌಲ್ಯದ 26 ಮದ್ಯದ ಮಧ್ಯದ ಬಾಟಲಿಗಳು, ಮತ್ತು ಮಧ್ಯ ಮಾರಿದ ನಗದು ಹಣ 450/- ರೂಪಾಯಿಗಳನ್ನು ಜಪ್ತಿ ಮಾಡಿಕೊಂಡು ಆರೋಪಿತನ ವಿರುದ್ದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ.ವಿಜಯಕುಮಾರ ತಂದೆ ಮಲ್ಲಿನಾಥ ಗುಂಜೋಟಿ ಸಾ:ಸರಸಂಬಾರವರು ದಿನಾಂಕ:23-02-14 ರ ರಾತ್ರಿ 01:30 ಗಂಟೆಯಿಂದ ದಿನಾಂಕ:23/02/2014  ರ ಬೆಳಗಿನ 5 ಗಂಟೆಯ ಮಧ್ಯದ ಅವಧಿಯಲ್ಲಿ. ತನ್ನ ಮನೆಯ ಮುಂದೆ ನಿಲ್ಲಿಸಿದ ಹೀರೋ ಕಂಪನಿಯ ಮೋಟರ್ ಸೈಕಲ್ ನಂಬರ ಕೆಎ32/ಇಬಿ9559 ನೇದ್ದನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಿಸ ತನಿಖೆ ಕೈಕೊಳ್ಳಲಾಗಿದೆ.
ಸರಗಳ್ಳತನ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ದಿನಾಂಕ||  23/02/2014 ರಂದು ರಾತ್ರಿ 09-00 ಗಂಟೆಗೆ ಶ್ರೀಮತಿ ರೋಹಿಣಿ ಗಂಡ ರಮೇಶ ಯಳಸಂಗಿಕರ ಠಾಣೆಗೆ ಆಗ್ರಿಕಲ್ಚರ್ ಲೇಔಟದಲ್ಲಿರುವ ತನ್ನ ಸಂಬಂಧಿಕರಾದ ಉದಯಕುಮಾರ ಯಳಸಂಗಿಕರ ಮತ್ತು ಕಲ್ಯಾಣರಾವ ವರ ಮನೆಗೆ ಹೊಗಿ ಅಲ್ಲಿಂದ ಉದಯಕುಮಾರ ಯಳಸಂಗಿಕರ  ಇವರ ಮನೆಗೆ ನಡೆದುಕೊಂಡು ಹೊಗುವಾಗ ಬಡಾವಣೆಯಲ್ಲಿರುವ ದತ್ತು ಪೊಲೀಸರ ಮನೆಯ ಮಂದೆ ರಸ್ತೆಯ ಮುಂಚೆ ಹೋಗುತ್ತಿರುವಾಗ ಎದುರುನಿಂದ ಬಂದ ಒಬ್ಬ ಮೋಟಾರ ಸೈಕಲ ಸವಾರ ತನ್ನ ಕೊರಳಿಗೆ  ಕೈ ಹಾಕಿ ಕೊರಳಲ್ಲಿದ್ದ 30 ಗ್ರಾಂ ಬಂಗಾರದ ಮಂಗಳ ಸೂತ್ರ ಅ.ಕಿ ರೂ 90,000 ದೋಚಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣಗಳು:
ಫರಹತಾಬಾದ ಪೊಲೀಸ್ ಠಾಣೆ : ದಿನಾಂಕ: 23-2-2014 ರಂದು ಶ್ರೀ ದಶರಥ ತಂದೆ ರಾಜಪ್ಪಾ ಜೀವಣಗಿ
ಸಾ|| ರಾಮನಗರ ಗುಲಬರ್ಗಾ ರವರು ಠಾಣೆಗೆ ಹಾಜರಾಗಿ ತಾನು ಕರ್ನಾಟಕ ಕೈಮಗ್ಗ ಅಭಿವೃದಿ ನಿಗಮ ಇಲಾಖೆ ಗುಲಬರ್ಗಾದಲ್ಲಿ ಗೂಡ್ಸ ವಾಹನದ ಚಾಲಕ ಎಂದು ಕಳೆದ 15 ವರ್ಷಗಳಿಂದ ಕರ್ತವ್ಯ ನಿರ್ವಹಿಸುದ್ದು ದಿ: 19-02-13 ರಂದು ಇಲಾಖೆಯ ಸಾಮಾನುಗಳನ್ನು ತೆಗೆದುಕೊಂಡು ಬನಹಟ್ಟಿಯಿಂದ ಗುಲಬರ್ಗಾಕ್ಕೆ ಬರುತ್ತಿರುವಾಗ ಸಿರನೂರ ದಾಟಿ ಭಾರತೀಯ ವಿದ್ಯಾ ಮಂದಿರ ಹತ್ತಿರ ಬರುತ್ತಿರುವಾಗ ಗುಲಬರ್ಗಾ ಕಡೆಯಿಂದ ಬರುತ್ತಿದ್ದ ಟಿಪ್ಪರ ಚಾಲಕನು ಟಿಪ್ಪರನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಗೂಡ್ಸ ವಾಹನ ನಂ ಕೆಎ25/ಡಿ3924 ನೆದ್ದಕ್ಕೆ ಅಪಘಾತಪಡಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕಯಕೊಳ್ಳಲಾಗಿದೆ.
ವಿದ್ಯುತ್ ತಂತಿ ತಗುಲಿ ಸಾವು ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ದಿನಾಂಕ: 23/02/2014 ರಂದು ಶ್ರೀ ದಿಲೀಪ್ ತಂ. ನೊರಂಜನಪ್ಪಾ ಕೊಡಂಬಲ್ ಸಾ: ಪಟವಾದ ರವರು ಠಾಣೆಗೆ ಹಾಜರಾಗಿ ತಮ್ಮ ತಂದೆ ನಿರಂಜಪ್ಪಾ ರವರವರಿಗೆ ಗ್ರಾಮದ ಜಗನ್ನಾಥ ಇವರ ಹೊಲದಲ್ಲಿ  ವಿದ್ಯುತ್ ಕಂಬದ ವೈರಿನಿಂದ ವಿದ್ಯುತ್ ತಗುಲಿ ಮೃತಪಟ್ಟಿದ್ದು. ಜಗನ್ನಾಥ ರವರ ಹೊಲದಲ್ಲಿ ಕಡಿದು ಬಿದ್ದ ವಿದ್ಯುತ್ ಕಂಬದ ವೈರಗಳನ್ನು ದುರಸ್ತಿ ಮಾಡುವಂತೆ ಹಲವು ಬಾರಿ ದೂರು ನೀಡಿದ್ದರೊ ಸಹ ಜೇಸ್ಕಾಂನ ಸೇಕ್ಷನ ಆಫೀಸರ್ ಸಿದ್ದಿರಾಜು ಮತ್ತು ಲೈನಮ್ಯಾನ ನಾಗಣ್ಣಾ ರವರು ನಿರ್ಲಕ್ಷ ಮಾಡಿ ಕಡಿದು ಬಿದ್ದ ವಿದ್ಯುತ್ ಕಂಬದ ವಾಯರ್ ದುರಸ್ತಿ ಮಾಡದ ಕಾರಣ ತಮ್ಮ ತಂದೆ ಮೃತಪಟ್ಟಿದ್ದು ಅವರ ವಿರುದ್ದ ಕ್ರಮ ಕಯಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:

ಆಳಂದ ಪೊಲೀಸ ಠಾಣೆ: ದಿನಾಂಕ 23/02/2014 ರಂದು ಸಾಯಂಕಾಲ ಶ್ರೀ ಕಾಶಿನಾಥ ತಂದೆ ಚಂದ್ರಶಾ ಲಾವಣಿ ಸಾ|| ಜಿಡಗಾ ರವರು ತಮ್ಮ ಮನೆಯ ಮುಂದೆ ಇದ್ದಾಗ ಹಳೆಯ ವೈಮನಸ್ಸಿನಿಂದ ಅಲ್ಲಿಗೆ ಸಾರಾಯಿ ಕುಡಿದು ಬಂದ ಗುರುಶಾಂತ ತಂದೆ ಗಣಪತಿ ಜಮಾದಾರ, ಪ್ರಕಾಶ ತಂದೆ ಗುಂಡಪ್ಪಾ ಜಮಾದಾರ ಇವರು ವಿನಾ: ಕಾರಣ ಅವಾಚ್ಯ ಶಬ್ದಗಳಿಂದ ನಿಮಗೆ ಖಲಾಸ್ ಮಾಡುವ ಸಲುವಾಗಿ 25 ಸಾವಿರ ರೂಪಾಯಿ ಕೊಟ್ಟಿರುತ್ತೇವೆ ಎಂದು ಅಂದಾಗ ಸುಮ್ಮನೆ ಯಾಕೆ ಬೈಯುತ್ತಿರಿ ಎಂದಾಗ ಗುರುಶಾಂತನು ಒಮ್ಮೇಲೆ ನನ್ನ ಮೇಲೆ ಬಂದು ಅಲ್ಲಿಯೇ ಬಿದ್ದ ಹಿಡಿಗಲ್ಲು ತೆಗೆದುಕೊಂಡು ನನ್ನ ಎಡಗೈ ಮುಂಗೈ ಮೇಲೆ ಹೊಡೆದಾಗ ಪ್ರಕಾಶನು ಕೈ ಮುಷ್ಟಿ ಮಾಡಿ ಹೊಡೆಯುವಾಗ ನನ್ನ ಮಗ ಗುರುಶರಣ, ಮಗಳು ರೇವಮ್ಮಾ ಬಿಡಿಸಲು ಬಂದಾಗ ಅವರಿಗೆ ನೂಕಿಸಿಕೊಟ್ಟು ನನ್ನ ಮಗಳ ಎಡಗೈ ಮೇಲೆ ಚಿವುಟಿ ಗಾಯಗೊಳಿಸಿ ಮಾನಭಂಗ ಉಂಟು ಮಾಡಿದ್ದು ಆಗ ಅಲ್ಲಿಯೇ ಇದ್ದ ಗ್ರಾಮದ ಮಹಾಂತೇಶ ಹಾಗೂ ಅಪ್ಪಾಜಿ ತಂದೆ ಶರಣಬಸಪ್ಪಾ ಲಾವಣಿ ಶಿವರಾಯ ರಾಮಲಿಂಗಪ್ಪಾ ಪಾಟೀಲ ಬಿಡಿಸುವಾಗ ಮಹಾಂತೇಶನಿಗೆ ಸಹ ಜೀವದ ಬೆದರಿಕೆ ಹಾಕಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಪಾದಿತರ ವಿರುದ್ದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.