POLICE BHAVAN KALABURAGI

POLICE BHAVAN KALABURAGI

30 March 2016

Kalaburagi District Reported Crimes

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ವಶ :
ಅಫಜಲಪೂರ ಠಾಣೆ : ಶ್ರೀ ಸಿದ್ದರಾಯ ಭೋಸಗಿ ಪಿಎಸ್ಐ ಅಫಜಲಪೂರ ಪೊಲೀಸ್ ಠಾಣೆ ರವರು ದಿನಾಂಕ 30-03-2016 ರಂದು ಬೆಳಗಿನಜಾವ ಅಫಜಲಪೂರ ಪಟ್ಟಣದಲ್ಲಿ ನಮ್ಮ ಠಾಣೆಯ ಪಿಸಿ-339 ಗುಂಡಪ್ಪ, ಪಿಸಿ-801 ಸುರೇಶ, ಪಿಸಿ-903 ಚಂದ್ರಶಾ ಇವರೊಂದಿಗೆ ಪೆಟ್ರೋಲಿಂಗ ಮಾಡುತ್ತಾ ಬಸವೇಶ್ವರ ಸರ್ಕಲ ಹತ್ತಿರ ಇದ್ದಾಗ ನನಗೆ ಮಾಹಿತಿ ಬಂದಿದ್ದೇನೆಂದರೆ, ಕೋಳ್ಳುರ ಗ್ರಾಮದ ಹತ್ತಿರ ಇರುವ ಭೀಮಾನದಿಯಿಂದ ಟಿಪ್ಪರಗಳಲ್ಲಿ ಮರಳು ತುಂಬಿಕೊಂಡು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ, ಪಂಚರೊಂದಿಗೆ ಕೋಳ್ಳೂರ ಗ್ರಾಮದ ಭೀಮಾನದಿ ಹತ್ತಿರ ಹೋಗಿ ಮರೆಯಾಗಿ ನಿಂತು ನೊಡಲು, ಭೀಮಾನದಿಯಿಂದ ಎರಡು ಟಿಪ್ಪರಗಳ ಚಾಲಕರು ಟಿಪ್ಪರಗಳನ್ನು ತಗೆದುಕೊಂಡು ಬರುತ್ತಿದ್ದರು, ಸದರಿ ಟಿಪ್ಪರಗಳ ಚಾಲಕರು ಟಿಪ್ಪರ ತಗೆದುಕೊಂಡು ನದಿಯ ದಡದ ಹತ್ತಿರ ಬರುತ್ತಿದ್ದಂತೆ ನಮ್ಮ ಇಲಾಖಾ ಜೀಪನ್ನು ನೋಡಿ ಎರಡು ಟಿಪ್ಪರಗಳನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೊದರು.  ಆಗ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರಗಳನ್ನು ಚೆಕ್ ಮಾಡಲಾಗಿ ಎರಡು ಟಿಪ್ಪರಗಳಲ್ಲಿ ಮರಳು ತುಂಬಿದ್ದು ಇದ್ದು 1) ಟಿಪ್ಪರ ನಂ ಕೆಎ-28 ಬಿ-7234 ಅಕಿ 10,00,000/-ರೂ 2) ಟಿಪ್ಪರ ನಂ ಕೆಎ-28 ಬಿ-9108 ಅಕಿ 10,00,000/-ರೂ ಈ ರೀತಿ ಇರುತ್ತವೆ. ಸದರಿ ಟಿಪ್ಪರಗಳಲ್ಲಿ ತುಂಬಿದ ಮರಳಿನ  ಒಟ್ಟು ಅಂದಾಜು ಕಿಮ್ಮತ್ತು 10,000/- ರೂ ಆಗಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಎರಡು ಟಿಪ್ಪರಗಳನ್ನು ಪಂಚರ ಸಮಕ್ಷಮ ಇಂದು ದಿನಾಂಕ 30-03-2016 ರಂದು 04:15 ದಿಂದ 05:15 ಎ ಎಮ್ ವರೆಗೆ ಇಲಾಖಾ ಜೀಪಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಾಹಾಂತಪ್ಪ ತಂದೆ ಚಂದ್ರಾಮ  ಮದರಿ   ಸಾ:ಹೀರಾಪೂರ ಗ್ರಾಮ ಇವರು  ದಿನಾಂಕ 28-03-16 ರಂದು ನಾನು ಮತ್ತು ಓಣಿಯ ಗೆಳೆಯರಾದ ಇರಫಾನ ಇಬ್ಬರು ಹೀರಾಪೂರ ಕ್ರಾಸಿಗೆ ಹೋದಾಗ  ಸದರಿ ಅಪರಿಚಿತ ವ್ಯಕ್ತಿಗೆ  ಮತ್ತೆ ಫೆಪರಿ ಬಂದು ಮಲಗುವ ಸ್ಥಳದ  ಪಕ್ಕದಲ್ಲಿ ಇರುವ ಮುಳ್ಳಿನ ಕಂಟಿಯಲ್ಲಿ ಹೊರಳಾಡಿದ್ದರಿಂದ ಅವನ  ಮೈಮೇಲೆ ಅಂದರೆ ಎಡ ಹೊಟ್ಟೆಯ ಮೇಲೆ, ಎಡ ಟೊಂಕ ತೊಡೆ, ಕಾಲುಗಳ ಮೇಲೆ ಅಲ್ಲಿಲ್ಲಿ ತರಚಿದ ರಕ್ತಗಾಯಗಳಾಗಿರುತ್ತೇವೆ. ಇದನ್ನು ನೋಡಿ ಅವನಿಗೆ ಉಪಚಾರ ಕುರಿತು 108 ಅಂಬುಲೈನ್ಸ ಗಾಡಿಗೆ ಪೋನ ಮಾಡಿದ್ದು, 108 ಅಂಬುಲೈನ್ಸದವರು ಬಂದು ಅವನಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕಲಬುರಗಿಗೆ ಒಯ್ದು ಸೇರಿಕೆ ಮಾಡಿದರು.ಸದರಿ ಅಪರಿಚಿತ ವ್ಯಕ್ತಿ ಗುಣಮುಖವಾಗವಾಗಿದ್ದಾನೆ ಹೇಗೆ ಎಂಬುದು ನೋಡಲಿಕ್ಕೆ ಇಂದು ದಿನಾಂಕ 29-03-16 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಸರಕಾರಿ ಅಸ್ಪತ್ರೆ ಕಲಬುರಗಿಗೆ ಹೋಗಿ ವೈದ್ಯರಿಗೆ ವಿಚಾರಿಸಿದಾಗ  ಅಪರಿಚಿತ ವ್ಯಕ್ತಿ ತನಗೆ ಇದ್ದ ಫೆಪರಿ ರೋಗದಿಂದ ಬಳಲುತ್ತಾ  ನಿಶಕ್ತನಾಗಿ  ಗುಣ ಮುಖ ಹೊಂದದೇ ಇಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ ಎಂದು ವೈದ್ಯರಿಂದ ಕೇಳಿ ಗೊತ್ತಾಗಿರುತ್ತದೆ. ಸದರಿ ಅಪರಿಚಿತ ವ್ಯಕ್ತಿ ತನಗೆ ಇದ್ದ ಫೆಪರಿ ರೋಗದಿಂದ ಬಳಲುತ್ತಾ ಅಥವಾ ಅನ್ನ ನೀರು ಇಲ್ಲದೇ ಹಾಗೂ ಬಿಸಿಲಿನ ಶಾಖದಿಂದ ನಿಶಕ್ತನಾಗಿ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು ಇರುತ್ತದೆ.  ಅವನ ಸಾವಿನಲ್ಲಿ  ಯಾರ ಮೇಲೂ ಯಾವುದೇ ತರಹದ ಸಂಶಯ ಇರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆಯ ಪ್ರಕರಣ :
ನಿಂಬರ್ಗಾ ಠಾಣೆ : 01] ಬಾಬು ಪಾಟೀಲ ಪಿ.ಡಿ.ಓ ಗ್ರಾಮ ಪಂಚಾಯತ ನಿಂಬರ್ಗಾ 02] ಮಹಾದೇವಿ ಗಂಡ ಅಮೃತ ಬಿಬ್ರಾಣಿ ಅಧ್ಯಕ್ಷರು ಗ್ರಾಮ ಪಂಚಾಯತ ನಿಂಬರ್ಗಾ  ರವರು ನಿಂಬರ್ಗಾ ಗ್ರಾಮ ಪಂಚಾಯತದಲ್ಲಿ 2015-16 ನೇ ಸಾಲಿನಲ್ಲಿ 14 ನೇ ಹಣಕಾಸು ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಮತ್ತು ಪಿ.ಡಿ.ಓ ರವರು ಕ್ರಿಯಾ ಯೋಜನೆ ಅನುಮೋದನೆ ಪಡೆಯದೆ ಖರ್ಚು ಭರಿಸಿರುತ್ತಾರೆ ಮತ್ತು ಸರ್ಕಾರದ ಹಣವನ್ನು ರುಪಯೋಗಪಡಿಸಿಕೊಂಡು ವಂಚಿಸಿ ಮೋಸ ಮಾಡಿರುತ್ತಾರೆ ಎಂಬುದರ ಬಗ್ಗೆ ಮಾನ್ಯ ಮುಖ್ಯ ಕಾರ್ಯ ನಿರ್ವಾಹಕ ಅಧೀಕಾರಿಗಳು ಜಿಲ್ಲಾ ಪಂಚಾಯತ ಕಲಬುರಗಿ ರವರು ಪತ್ರ ಬರೆದು ಕೇಸು ದಾಖಲಿಸುವಂತೆ ಸೂಚಿಸಿದ್ದರಿಂದ ಶ್ರೀ ಅಶೋಕ ಅಂಬಲಗಿ ಇ.ಓ ತಾಲೂಕಾ ಪಂಚಾಯತ ಆಳಂದರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಜೇವರಗಿ ಠಾಣೆ : ದಿನಾಂಕ 28.03.2015 ರಂದು 23:30 ಗಂಟೆಯಿಂದ 29.03.2016 ರಂದು 05:30 ಗಂಟೆಯ ಮಧ್ಯದ ಅವಧಿಯಲ್ಲಿ ನರಿಬೋಳ ಗ್ರಾಮದಲ್ಲಿನ ನನ್ನ ಮನೆಯ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್‌ ನಂ ಕೆ.ಎ-32 ಟಿ-2479 ಟ್ರಾಯಲಿ ನಂ ಕೆ.ಎ-32 ಟಿ-2480 ಅಂ.ಕಿ 3.00.000/- ರೂ ನೇದ್ದರು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಟ್ರ್ಯಾಕ್ಟರ್‌ ಮತ್ತು ಕಳ್ಳರನ್ನು ಪತ್ತೆ ಮಾಡಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಶ್ರೀ ರಾಮರಾವ ತಂದೆ ಸುರೇಶರಾವ್‌ ಕುಲಕರ್ಣಿ ಸಾ : ನರಿಬೋಳ ಹಾ : : ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ದಿನಾಂಕ: 29/02/2016 ರಂದು 10-30 ಎಎಂ ಸುಮಾರಿಗೆ ನನಗೆ ಮೈಯಲ್ಲಿ  ಹುಷಾರ ಇರಲಾರದ ಕಾರಣ ಆಸ್ಪತ್ರೆಗೆ ತೋರಿಸಿಕೊಂಡು ಬರೋಣ ಅಂತ ನಾನು ಹಾಗೂ ನನ್ನ ತಂದೆಯಾದ 1) ನಾಗಣ್ಣಾ ತಂದೆ ರೇವಣಸಿದ್ದಪ್ಪ ಚೆಂಗಟಿ 2) ತಮ್ಮನ ಹೆಂಡತಿಯಾದ ಸವಿತಾ ಗಂಡ ಸಂತೋಷಕುಮಾರ ಎಲ್ಲರೂ ಕೂಡಿ ಕಲಬುರಗಿಗೆ ಹೋಗಿ ಆಸ್ಪತ್ರೆಗೆ ತೋರಿಸಿಕೊಂಡು ಮರಳಿ ಸೇಡಂ ಬಸ್ಸಿಗೆ ಟೆಂಗಳಿ ಕ್ರಾಸಗೆ ಬಂದು ಇಳಿದು ನಿಂತಾಗ ನಮ್ಮ ಗ್ರಾಮಕ್ಕೆ ಹೋಗುವ ಒಂದು ಟಂಟಂ ನಂ.ಕೆಎ-32 ಬಿ-3516 ನೇದ್ದು ನಿಂತಿದ್ದು ಅದರಲ್ಲಿ ನಾನು ನನ್ನ ತಂದೆ ನಾಗಣ್ಣ ತಮ್ಮನ ಹೆಂಡತಿ ಸವಿತಾ ಮೂರು ಜನರೂ ಏರಿ ಕುಳಿತ್ತೇವು. ನಮ್ಮಂತೆ ನಮ್ಮ ಗ್ರಾಮದ ನೂರಜಹಾನ ಬೇಗಂ ಗಂಡ ಗುಲಾಮ ಮಸ್ತಾಪ ಮತ್ತು ಅವಳ ಗಂಡ ಗುಲಾಮ ಮಸ್ತಾಪ ಹಾಗೂ ತಿಪ್ಪಣ್ಣಾ ತಂದೆ ಮಲ್ಲಪ್ಪ ಇವರೂ ಸಹ ಗ್ರಾಮಕ್ಕೆ ಬರಲು ಸದರಿ ಟಂಟಂದಲ್ಲಿ ಬಂದು ಕುಳಿತರು. ನಮ್ಮಂತೆ ತೊನ್ಸನಳ್ಳಿ ಗ್ರಾಮದ ಅಭಿಷೇಕ ತಂದೆ ಗುಂಡಪ್ಪ ಎಂಬುವವನು ಸಹ ಸದರಿ ಟಂಟಂದಲ್ಲಿ ಕುಳಿತ್ತಾಗ ಸದರಿ ಟಂಟಂ ಚಾಲಕನು ಟಂಟಂ ಚಾಲು ಮಾಡಿಕೊಂಡು ಟೆಂಗಳಿ ಕಡೆಗೆ ಹೋಗಬೇಕೆಂದು ಹೊರಟು ಟೆಂಗಳಿ ಕ್ರಾಸದಿಂದ 1ಕಿ.ಮೀ ಅಂತರದಲ್ಲಿ ಹೋಗುತ್ತಿದ್ದಾಗ 7-15 ಪಿಎಂದ ಸುಮಾರಿಗೆ ಎದುರಿನಿಂದ ಒಬ್ಬ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ನಾವು ಕುಳಿತು ಹೊರಟ ಟಂಟಂಕ್ಕೆ ಎದುರಿನಿಂದ ಮುಖಾ-ಮುಖಿ ಡಿಕ್ಕಿ ಪಡಿಸಿದ ಪರಿಣಾಮ ನನಗೆ ಎಡಗಣ್ಣಿಗೆ,ಎಡ ಮೊಳಕಾಲಿಗೆ ಮೂಗಿನ ಮೇಲೆ ರಕ್ತಗಾಯವಾಗಿದ್ದು ನಂತರ ನನ್ನ ತಂದೆ ನಾಗಣ್ಣನಿಗೆ ನೋಡಲಾಗಿ ತಲೆಗೆ ಭಾರಿ ಗುಪ್ತಗಾಯ ಮೂಗಿನ ಕೆಳಗಡೆ ರಕ್ತಗಾಯವಾಗಿದ್ದು ನಮ್ಮ ತಮ್ಮನ ಹೆಂಡತಿಗೆ ನೋಡಲಾಗಿ ಎಡಹುಬ್ಬಿಗೆ,ಎಡಕಪ್ಪಾಳಕ್ಕೆ ರಕ್ತಗಾಯ ಮತ್ತು ಬಲಗಾಲಿನ ಛಪ್ಪೆಗೆ ಮತ್ತು ಮೊಳಕಾಲಿಗೆ ಗುಪ್ತಗಾಯಗಳಾಗಿದ್ದು ಉಳಿದ ನೂರಜಹಾನ,ಗುಲಾಮ,ತಿಪ್ಪಣ್ಣ,ಅಭಿಷೇಕ ಇವರಿಗೂ ಸಹ ಸಣ್ಣ-ಪುಟ್ಟ ಗಾಯಗಳಾಗಿದ್ದು ನಂತರ ನಮಗೆ ಡಿಕ್ಕಿ ಪಡಿಸಿದ ಟ್ರ್ಯಾಕ್ಟರನು ನೋಡಲಾಗಿ ಅದು ಮಹೀಂದ್ರಾ ಕಂಪನಿಯ ಹೊಸ ಟ್ರ್ಯಾಕ್ಟರ ಮತ್ತು ಟ್ರ್ಯಾಲಿ ಇದ್ದು ಅವುಗಳ ಮೇಲೆ ಯಾವುದೇ ನಂಬರ ವಗೈರೆ ಇರುವುದಿಲ್ಲಾ. ಸದರಿ ಟ್ರ್ಯಾಕ್ಟರ ಚಾಲಕನ ಹೆಸರು ವಿಚಾರಿಸಲಾಗಿ ಅಣ್ಣಪ್ಪ ತಂದೆ ಗುಂಡಪ್ಪ ಸಾ:ಡೊಂಣ್ಣೂರ ಅಂತ ಗೊತ್ತಾಗಿದ್ದು ಇರುತ್ತದೆ. ನಂತರ ನಾವೆಲ್ಲರೂ ಒಂದು ಖಾಸಗಿ ವಾಹನ ಮಾಡಿಕೊಂಡು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಹೋಗಿ ನಾನು ಹಾಗೂ ನಮ್ಮ ತಂದೆ ನಾಗಣ್ಣ,ಸವಿತಾ,ನೂರಜಹಾನ,ಗುಲಾಮ,ತಿಪ್ಪಣ್ಣ ರವರು ಹೊರ ರೋಗಿ ಅಂತ ಉಪಚಾರ ಪಡೆದು ಮನೆಗೆ ಬಂದೇವು. ನಂತರ ಪೊಲೀಸರು ಬಸವೇಶ್ವರ ಆಸ್ಪತ್ರೆಗೆ ಬಂದು ಹೋಗಿರುತ್ತಾರೆ ಅಂತ ಗೊತ್ತಾಗಿದ್ದು ಈ ಬಗ್ಗೆ ವಿಚಾರ ಮಾಡಿ ಹೇಳಿಕೆ ನೀಡಲು ಇದುದ್ದರಿಂದ ಮರುದಿನ ಅಂದರೆ ದಿನಾಂಕ:01/03/16 ರಂದು ನಮ್ಮ ತಂದೆಯವರು ಮತ್ತೆ ಬಸವೇಶ್ವರ ಆಸ್ಪತ್ರೆಗೆ ಹೋಗಿ ಮತ್ತೆ ತೋರಿಸಿಕೊಂಡು ಬಂದರು. ನಂತರ ನಮ್ಮ ತಂದೆಗೆ ನೋವು ಜಾಸ್ತಿ ಆಗಿದ್ದರಿಂದ ದಿನಾಂಕ:05/03/16 ರಂದು ಬೆಳಿಗ್ಗೆ ನಮ್ಮ ತಂದೆಗೆ ಕಲಬುರಗಿಯ ಸತ್ಯಾ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದೇವು. ನಂತರ ಅದೇ ದಿವಸ ರಾತ್ರಿ ಅಲ್ಲಿನ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದಕ್ಕೆ ಹೋಗಲು ತಿಳಿಸಿದ್ದರಿಂದ ನಮ್ಮ ತಂದೆಗೆ ಅಂಬುಲೇನ್ಸದಲ್ಲಿ ಹಾಕಿಕೊಂಡು ಕೇರ್ ಆಸ್ಪತ್ರೆ ಹೈದ್ರಾಬಾದದಲ್ಲಿ ಸೇರಿಕೆ ಮಾಡಿದ್ದು ನಮ್ಮ ತಂದೆಯವರು ಸದ್ಯ ಮಾತನಾಡುತ್ತಿರುವುದಿಲ್ಲ. ಈ ಬಗ್ಗೆ ಸದರಿ ಟ್ರ್ಯಾಕ್ಟರ ಮಾಲೀಕ ನಮಗೆ ಉಪಚಾರದ ಖರ್ಚು ಕೊಡುತ್ತೇನೆ ಅಂತ ಹೇಳುತ್ತಾ ಬಂದು ಹಣ ಕೊಡದೇ ಇದ್ದ ಕಾರಣ ನಾವು ನಮ್ಮ ತಂದೆಗೆ ಹೈದ್ರಾಬಾದನಲ್ಲಿ ಸೇರಿಕೆ ಮಾಡಿದ್ದು ದಿನಾಂಕ 26-03-2016 ರಂದು ಸಾಯಂಕಾಲ ಆಸ್ಪತ್ರೆಯಿಂದ ಡಿಸ್ಚಾರ್ಜ ಮಾಡಿಸಿಕೊಂಡು ಊರಿಗೆ ಬಂದಿದ್ದು ದಿನಾಂಕ 29-03-2016 ರಂದು ನಮ್ಮ ತಂದೆ ಅಪಘಾತದಲ್ಲಿ ಆದ ಗಾಯಗಳ ಉಪಚಾರ ಫಲಕಾರಿಯಾಗದೆ ಮೃತಪಟ್ಟಿದ್ದು ಇರುತ್ತದೆ ಅಂತಾ ಶ್ರೀಮತಿ ಉಮಾದೇವಿ ಗಂಡ ಈರಣ್ಣಾ ಮಾದಪ್ಪನವರ ಸಾ:ಟೆಂಗಳಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ಶ್ರೀ ರಾಜಾಪಟೇಲ ತಂದೆ ಹುಸೇನ ಪಟೇಲ ಸಾ: ಯಾಳವಾರ ಇವರು ದಿನಾಂಕ 28.03.2016 ರಂದು 2೦:00 ಗಂಟೆಗೆ ಯಾಳವಾರ ಕ್ರಾಸ್ ದಾಟಿ ಸ್ವಲ್ಪ ಮುಂದೆ ಜೇವರಗಿ- ಇಜೇರಿ ರೋಡಿನಲ್ಲಿ ನಮ್ಮೂರಿನ ರಫೀಕ್ ಈತನು ತನ್ನ ಮೋಟಾರು ಸೈಕಲ್ ನಂ ಸೈಕಲ್ ನಂ ಕೆ.ಎ32ಎನ್‌3325 ನೇದ್ದರ ಮೇಲೆ ನನಗೆ ಹಿಂದಿನಿ ಸೀಟಿನಲ್ಲಿ ಕೂಡಿಸಿಕೊಂಡು ಅತೀ ವೇಗ ಮತ್ತು ಅಲಕ್ಷ್ಯತನಿಂದ ಚಲಾಯಿಸಿಕೊಂಡು ಯಾಳವಾರ ಗ್ರಾಮದ ಕಡೆಗೆ ಹೋಗುತ್ತದ್ದಾಗ ಅದೇ ವೇಳೆಗೆ ಚಿಗರಳ್ಳಿ ಕಡೆಯಿಂದ ಒಂದು ಮೊಟಾರು ಸೈಕಲ್‌ ನಂ ಕೆ.ಎ32-5811 ನೇದ್ದರ ಸವಾರನು ತನ್ನ ಮೋಟಾರು ಸೈಕಲ್‌ ಹಿಂದೆ ಒಬ್ಬನನ್ನು ಕೂಡಿಸಿಕೊಂಡು ತನ್ನ ಮೋಟಾರು ಸೈಕಲ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಒಂದಕ್ಕೊಂದು ಮುಖಾಮುಖಿಯಾಗಿ ಡಿಕ್ಕಿ ಪಡಿಸಿ ಗಾಯಳಗೊಳಿಸಿದ್ದು ಶ್ರೀಮತಿ ಮಹಾದೇವಿ ಗಂಡ ಬೀಮಣ್ಣ @ ಬೀಮರಾಯ ತಳವಾರ ಸಾ: ಈಜೇರಿ ಇವರು ದಿನಾಂಕ 28.03.2016 ರಂದು ರಾತ್ರಿ 8.00 ಗಂಟೆಗೆ ಯಾಳವಾರ ಕ್ರಾಸ ಸಮೀಪ ಚಿಗರಳ್ಳಿ-ಈಜೇರಿ ರೋಡಿನಲ್ಲಿ ರಸ್ತೆ ಅಪಘಾತದಲ್ಲಿ ನನ್ನ ಗಂಡನಿಗೆ ಭಾರಿ ಗಾಯಗಳಾಗಿದ್ದಿರಂದ ಅವನಿಗೆ ಉಪಚಾರ ಕುರಿತು ಜೇವರಗಿ ಆಸ್ಪತ್ರೆಯಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಕಾಮರಡ್ಡಿ  ಆಸ್ಪತ್ರಯಲ್ಲಿ  ಸೇರಿಕೆ ಮಾಡಿದಾಗ ಅಲ್ಲಿ ವೈದ್ಯರು ನನ್ನ ಗಂಡನಿಗೆ ಆರಾಮ ಆಗುವದಿಲ್ಲಾ ಬೇರೆ ಆಸ್ಪತ್ರೆಗೆ ತಗೆದುಕೊಂಡು ಹೋಗುಲು ಹೇಳಿದರಿಂದ ನನ್ನ ಗಂಡನಿಗೆ ಇಂದು ರಾತ್ರಿಯೇ ಜೇವರಗಿ ಸರಕಾರಿ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿದಾಗ ಅವನಿಗೆ ಉಪಚಾರ ಫಲಕಾರಿಯಾಗದೇ ರಾತ್ರಿ 10.15 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.