POLICE BHAVAN KALABURAGI

POLICE BHAVAN KALABURAGI

10 December 2011

Gulbarga Dist Reported Crimes

ಚ್ಯೋಟ್ಯಾ @ ಆನಂದ @ ಪ್ರಿಯದರ್ಶನ ಪರಾರಿಯಾಗಲು ಪ್ರಯತ್ನ :
ಸ್ಟೇಷನ ಬಜಾರ ಪೊಲೀಸ ಠಾಣೆ:
ಸರ್ಕಾರಿ ತರ್ಪೆಯಾಗಿ ಶ್ರೀ ಜೆ.ಹೆಚ್ ಇನಾಮದಾರ ಪಿಐ ಸ್ಟೇಷನ ಬಜಾರ ಪೊಲೀಸ ಠಾಣೆ ಗುಲಬರ್ಗಾರವರು ಯು.ಟಿ.ಪಿ ನಂ 10659 (ಜೈಲು ಖೈದಿ) ಚೋಟ್ಯಾ @ ಆನಂದ @ ಪ್ರಿಯದರ್ಶನ ತಂದೆ ವಸಂತರಾವ ಗಾಯಕವಾಡ ಸಾ: ಪಂಚಶೀಲ ನಗರ ಗುಲಬರ್ಗಾ ಇತನನ್ನು ದಿನಾಂಕ 09/12/2011 ರಂದು ಸ್ಟೇಷನ ಬಜಾರ ಪೊಲೀಸ ಠಾಣೆ ಗುನ್ನೆ ನಂ 79/11 ಕಲಂ 394 ಐಪಿಸಿ ಪ್ರಕರಣದ ತನಿಖೆಗಾಗಿ ನ್ಯಾಯಾಂಗ ಬಂಧನದಿಂದ ಪೊಲೀಸ ಅಭಿರಕ್ಷೆಗೆ ಪಡೆದು ತನಿಖೆ ಪೂರೈಸಿದ ನಂತರ ಆತನನ್ನು 09/12/2011 ರಂದು ಸಂಜೆ 6-15 ಪಿ.ಎಂಕ್ಕೆ ಮಾನ್ಯ ನ್ಯಾಯಾಧಿಶರ ಮುಂದೆ ಹಾಜರು ಪಡಿಸುವಾಗ ಕರ್ತವ್ಯದಲ್ಲಿದ್ದ ಪೊಲೀಸರನ್ನು ನೂಕಿ ಕೊಟ್ಟು ಮಾನ್ಯ ನ್ಯಾಯಾಧೀಶರ ವಸತಿ ಗೃಹ ಮೊದಲನೆ ಮಹಡಿಯಿಂದ ಕೆಳಗೆ ಹಾರಿ ಓಡಿ ಹೋಗಿದ್ದು ಇವನನ್ನು ಹಿಂಬಾಲಿಸಿ ವೆಂಕಟೇಶ ನಗರದಲ್ಲಿ ಹಿಡಿದಿದ್ದು ಕಾರಣ ಇತನ ಕಾಲಿಗೆ ಹಾಗೂ ತಲೆಗೆ ರಕ್ತಗಾಯವಾಗಿದ್ದು ಇರುತ್ತದೆ. ಈ ಆಪಾದಿತನನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆ ಗುಲಬರ್ಗಾದಲ್ಲಿ ಉಪಚಾರಕ್ಕಾಗಿ ಸೇರಿಕೆ ಮಾಡಿದ್ದು ಇರುತ್ತದೆ. ಇತನ ಮೇಲೆ ಠಾಣೆ ಗುನ್ನೆ ನಂ 207/11 ಕಲಂ 332, 224 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಕೊಲೆ ಪ್ರಯತ್ನ ಪ್ರಕರಣ:
ಕೊಂಚಾವರಂ ಠಾಣೆ :
ಶ್ರೀಮತಿ ಪೂಲಮ್ಮ ಗಂಡ ಯಶೆಪ್ಪಾ ಬಂಡಮೆದಪಲ್ಲಿ ಸಾ ಶಿವರೆಡ್ಡಿ ತಾ ಚಿಂಚೋಳಿ ರವರು ನಾನು ಮತ್ತು ನನ್ನ ತಾಯಿ ಮದುವೆಗೆಂದು ದಿನಾಂಕ: 09-12-2011 ರಂದು ಸಾಯಂಕಾಲ್ 5-30 ಗಂಟೆಗೆ ಜಹಿರಬಾದಕ್ಕೆ ಅಟೋದಲ್ಲಿ ಹೋಗುತ್ತಿರುವಾಗ ಸುರೇಂದ್ರ ಮತ್ತು ರವಿ ಇವರು ದ್ವಿಚಕ್ರ ವಾಹನದಲ್ಲಿ ಬಂದು ನಮ್ಮನ್ನು ನಿಲ್ಲಿಸಿ ಅವಮಾನ ಮಾಡಿ ಚಾಕುವಿನಿಂದ ಕುತ್ತಿಗೆ ಸೀಳಿ ಕೊಲೆ ಮಾಡುವ ಉದ್ದೇಶದಿಂದ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದಠಾಣೆ ಗುನ್ನೆ ನಂ: 46/2011 ಕಲಂ 341, 354, 504, 307 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.