POLICE BHAVAN KALABURAGI

POLICE BHAVAN KALABURAGI

21 December 2011

GULBARGA DIST REPORTED CRIMES

ಕಳ್ಳತನ ಪ್ರಕರಣ:
ಸೇಡಂ ಪೊಲೀಸ ಠಾಣೆ:
ಶ್ರೀ ರಮೇಶ ತಂದೆ ಶಾಮರಾವ ರಾಜಾಪೂರ ಸಾ ನಗರೇಶ್ವರ ಕಾಲೋನಿ ಸೇಡಂ. ರವರು ನಾನು ಎಂದಿನಂತೆ ಬೆಳಗ್ಗೆ 8-00 ಗಂಟೆಗೆ ನನ್ನ ಬಟ್ಟೆ ಅಂಗಡಿಗೆ ಬಂದಿದ್ದು ನಂತರ ನನ್ನ ಹೆಂಡತಿ ಬಸಮ್ಮ ಇವಳು ಕೂಡಾ 10-00 ಗಂಟಗೆ ಅಂಗಡಿಗೆ ಬಂದಿದ್ದು ವ್ಯಾಪಾರ ಮಾಡಿಕೊಂಡು ಸಂಜೆ 04-00 ಗಂಟೆಗೆ ನನ್ನ ಹೆಂಡತಿ ಬಸಮ್ಮ ಇವಳು ಮರಳಿ ಮನೆಗೆ ಹೋದಾಗ ಮನೆಯ ಕೀಲಿ ಹಾಕುವ ಕೊಂಡಿ ಲಾಕರದಲ್ಲಿಟ್ಟಿರುವ 60 ಗ್ರಾಂ ಬಂಗಾರದ ಆಭರಣಗಳು ಅಂ.ಕಿ 1,20,000/- ರೂಪಾಯಿ ನೇದ್ದು ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 226/2011 ಕಲಂ 454ಮ 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :
ಶ್ರೀ ಮುರಿಗೆಪ್ಪಾ ಭೈರಾಮಡಗಿ ಶಾಖಾಧಿಕಾರಿ ಘಟಕ ನಂ:3 ಜೆಸ್ಕಾಂ ಗುಲಬರ್ಗಾ ರವರು ದಿನಾಂಕ 20-12-2011 ರಂದು ಸಾಯಂಕಾಲ 6-00 ಆರ್.ಪಿ.ಸರ್ಕಲ್ ದಿಂದ ಎಸ್.ಬಿ.ಕಾಲೇಜ ರೋಡಿನಲ್ಲಿ ಬರುವ ಕೆ.ಎಸ್.ಆರ್.ಟಿ.ಸಿ.ಬಸ್ ಡಿಪೋ ನಂ: 2 ಎದುರು ರೋಡಿನ ಮೇಲೆ ಟೆಂಪು ನಂ:ಕೆಎ 25 ಎ 5704 ನೇದ್ದರ ಚಾಲಕ ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಕೆ.ಇ.ಬಿ.ಕಂಬಕ್ಕೆ ಡಿಕ್ಕಿ ಪಡಿಸಿ ಕಂಬ ಜಕಂ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 159/2011 ಕಲಂ 279, ಐಪಿಸಿ ಸಂಗಡ 187 ಐ.ಎಮ..ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ