POLICE BHAVAN KALABURAGI

POLICE BHAVAN KALABURAGI

04 September 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 04-09-2014 ರಂದು ಅಫಜಲಪೂರ ಪಟ್ಟಣದ ಬಸವೇಶ್ವರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ  ಪಿ.ಎಸ್.ಐ. ಅಫಜಲಪೂರ, ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಲಕ್ಕೆ ಹೋಗಿ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ರಾಜಶೇಖರ ತಂದೆ ಗುಂಡೆರಾವ ಕುಲಕರ್ಣಿ ಸಾ|| ಬ್ರಾಹ್ಮಣ ಗಲ್ಲಿ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 750/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಮರಳಿ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 03-09-2014 ರಂದು 11-00 ಎ.ಎಮ್ ಕ್ಕೆ ಶ್ರೀ ಶಿವರಾಜ @ ಶಿವರಾಯ ತಂದೆ ಶಾಂತಪ್ಪಾ ಡೊಣುರ, ಸಾಃ ಕುಮಸಿ ವಾಡಿ, ತಾಃ ಜಿಃ ಗುಲಬರ್ಗಾ ರವರು ಬಂಬು ಬಜಾರ ಕಟ್ಟಿಗೆ ಅಡ್ಡಾದ ಎದರುಗಡೆ ನಡೆದುಕೊಂಡು ಹೋಗುತ್ತಿದ್ದಾಗ ಸುಲ್ತಾನಪೂರ ರೋಡ ಕಡೆಯಿಂದ ಯಾವುದೊ ಒಬ್ಬ ಮೋಟಾರ ಸೈಕಲ ಚಾಲಕ ತನ್ನ ಮೋಟಾರ ಸೈಕಲ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಡೆದುಕೊಂಡು ಹೋಗುತ್ತಿದ್ದು ಫಿರ್ಯಾದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಅಪಘಾತದಿಂದ ಫಿರ್ಯಾದಿಗೆ ಕಣ್ಣಿನ ಮೆಲಕಿನ ಹತ್ತಿರ ಎಡಗಾಲು ಹೆಬ್ಬರಳಿಗೆ ಬಲಗಾಲು ಮೊಳಕಾಲಿಗೆ, ರಕ್ತಗಾಯವಾಗಿತ್ತು. ಎದೆಗೆ ಗುಪ್ತ ಪೆಟ್ಟಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ವಿಠ್ಠಲ ಜಾಮಗೊಂಡ ಸಾ|| ಬಂಕಲಗಿ ರವರು ದಿನಾಂಕ 03/09/2014 ರಂದು ನಾವು ಅಂದರೆ ವಿಠ್ಠಲ ಜಾಮಗೊಂಡ ಮತ್ತು ಧೂಳಪ್ಪ ಇಬ್ಬರು ಅಫಜಲಪೂರದಿಂದ ಊರಿಗೆ ಬರುವಾಗ ಬಮಕಲಗಾ ಬ್ರಿಡ್ಜ ಹತ್ತಿರ ನಮ್ಮನ್ನು ಬೈಕ್ ತಡೆದು ನಮ್ಮ ಮೇಲೆ ಹಲ್ಲೆ ನಡೆಸಿದ್ದಾನೆ ಹಲ್ಲೆ ನಡೆಸಿದವನು ತಿಪ್ಪಣ್ನ ತಂದೆ ಸವರಪ್ಪಾ ಪೂಜಾರಿ ಇದ್ದು ನಮಗೆ ಅಂಗಿ ಹಿಡಿದು ಜಗ್ಗಿ ನಿವು ನಮ್ಮ ಅಣ್ನನ ನ್ಯಾಯ ಮಾಡಿದ್ದಿರಿ ಅವತ್ತು ನಮಗೆ ಅವಾಚ್ಯ ಶಬ್ದಗಳಿಂದ ಬೈದು ನಮಗೆ ಊರಿನ ಜನರ ಮುಂದೆ ಮರ್ಯಾದೆ ಕಳೆದಿದ್ದಾನೆ ನಿಮಗೆ ಒಂದು ದಿವಸ ಹೊಡೆಯುತ್ತೆನೆ ಅಂತ ಜೀವ ಭಯ ಹಾಕಿದ್ದಾನೆ ಮತ್ತು ನಮಗೆ ಇವನಿಂದ ಜೀವ ಭಯವಿದೆ ಮತ್ತು ನಮ್ಮ ಅಂಗಿಯನ್ನು  ಹರಿದು ಹಾಕಿದ್ದಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಮಟಕಾ ಜೂಜಾಟ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ನಿಂಬರ್ಗಾ ಗ್ರಾಮದ ವಡ್ಡರ ಗಲ್ಲಿಯ ದುರ್ಗಾ ದೇವಿಯ ಗುಡಿಯ  ಕಟ್ಟೆಯ ಮೇಲೆ ಸಾವರ್ವಜನಿಕ ಸ್ಥಳದಲ್ಲಿ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಠಾಣೆಯ ಸಿಬ್ಬಂಧಿಯವರಾದ ಶ್ರೀ  ಸಂತೋಷ ರಾಠೋಡ ಪಿ.ಎಸ್.ಐ. ಸಿಬ್ಬಂದಿ ಮತ್ತು ಪಂಚರೊಂದಿಗೆ ನಿಂಬರ್ಗಾ ಗ್ರಾಮದ ವಡ್ಡರ ಗಲ್ಲಿಯ ದುರ್ಗಾ ದೇವಿಯ ಗುಡಿಯ ಹತ್ತಿರ ಹೋಗಿ ಗುಡಿಯ ಮರೆಯಲ್ಲಿ ನಿಂತು  ನೋಡಲಾಗಿ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ  ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ಸುರೇಶ ತಂದೆ ಭೀಮಶಾ ಫಿರೋಜಿ ಸಾ|| ನಿಂಬರ್ಗಾ ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ 01] ನಗದು ಹಣ 2250/-, 02] ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, 03] ಒಂದು ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡು ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 03-09-2014 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ಶ್ರೀ ಪ್ರವೀಣಕುಮಾರ ತಂದೆ ಶಿವಶರಣಪ್ಪ ಪಾಟೀಲ  ಸಾ: ಎಸ್.ಎಮ್ ಸ್ಕೂಲ ಹತ್ತಿರ ಬಸವೇಶ್ವರ ಕಾಲೋನಿ  ಗುಲಬರ್ಗಾ ರವರು  ತನ್ನ ಮೋ/ಸೈಕಲ ನಂಬರ ಕೆಎ-32 ಇಡಿ-5040 ನೇದ್ದನ್ನು ಎಸ್.ಟಿ.ಬಿ.ಟಿ  ಕ್ರಾಸ್ ದಿಂದ ಜಗತ ಸರ್ಕಲ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದಾಗ ಡಾ: ಮಲ್ಲಾರಾವ ಮಲ್ಲೆ ರವರ ಆಸ್ಪತ್ರೆಯ ಎದುರಿನ ರೋಡ ಮೇಲೆ ಹಿಂದುನಿಂದ ಒಬ್ಬ ಟಂಟಂ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋ/ಸೈಕಲ ಹ್ಯಾಡಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ತನ್ನ ವಾಹನವನ್ನು ಹಾಗೇ ಚಲಾಯಿಸಿಕೊಂಡು ಜಗತ ಸರ್ಕಲ ಕಡೆಗೆ ಹೋದನು. ಫಿರ್ಯಾದಿಯು ಮೋ/ಸೈಕಲ ಕೆಳಗೆ ಬಿದ್ದು ಫಿರ್ಯಾದಿಗೆ ಬಲಗಾಲ ಮೊಳಕಾಲ ಕೆಳಗೆ ಭಾರಿ ಒಳಪೆಟ್ಟು ಮತ್ತು ಎಡಗಾಲು ರಿಸ್ಟ ಹತ್ತಿರ ತರಚಿದಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸಂಚಾರಿ ಠಾಣೆ : ದಿನಾಂಕ 03-09-2014 ರಂದು 12-30 ಪಿ.ಎಮ್ ಸುಮಾರಿಗೆ ಶ್ರೀ ಗುರುರಾಜ ತಂದೆ ಹಣಮಂತ್ರಾವ ಕುಲಕರ್ಣಿ, ಸಾಃ ನ್ಯೂ ರಾಘವೇಂದ್ರ ಕಾಲೂನಿ ಗುಲಬರ್ಗಾ ರವರು ತನ್ನ ಮೋ.ಸೈ ನಂ. ಕೆ.ಎ 32 ವೈ 2079 ನೇದ್ದನ್ನು ಟಿ.ವಿ ಸ್ಟೇಷನ ಕಡೆಯಿಂದ ಸುಪರ ಮಾರ್ಕೆಟ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದಾಗ ಹುಮನಾಬಾದ ರೋಡಿಗೆ ಇರುವ ಕೆ.ಎಮ್.ಎಪ್. ಡೈರಿ ಎದರುಗಡೆ ಅಟೋರಿಕ್ಷಾ ನಂ. ಕೆ.ಎ 32 ಎ 3778 ನೇದ್ದರ ಚಾಲಕನು ತನ್ನ ಅಟೋರಿಕ್ಷಾವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ರಾಂಗ ಸೈಡಿನಿಂದ ಬಂದು ಫಿರ್ಯಾದಿ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಅಟೋರಿಕ್ಷಾ ಸಮೇತ ಓಡಿ ಹೋಗಿದ್ದು ಅಪಘಾತದಿಂದ ಫಿರ್ಯಾದಿಗೆ ಬಲಗಾಲು ಮೊಳಕಾಲು ಕೆಳಗೆ, ಮತ್ತು ಪಾದದ ಹತ್ತಿರ ತರಚಿದ ಗಾಯವಾಗಿ ಎಡಗೈ ಭುಜಕ್ಕೆ ಮತ್ತು ಎಡಗಡೆ ತಲೆಗೆ ಗುಪ್ತ ಪೆಟ್ಟಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ: 03/09/2014 ರಂದು ಸಾಯಂಕಾಲ 7:00 ಗಂಟೆಗೆ ಶ್ರೀ ತಿಪ್ಪಣ್ಣ ಪೂಜಾರಿ ರವರು ಬಂಕಲಗಿ ಗ್ರಾಮದ ಹತ್ತಿರ ಬ್ರಿಡ್ಜಿನ ಮೇಲೆ ಕುಳಿತಾಗ ಆರೋಪಿತರಾದ ವಿಠಲ ಜಾಮಗೊಂಡ, ದೂಳಪ್ಪ ಮಂಟಗಿ ರವರು ಬಂದು ಫಿರ್ಯಾದಿಯ ಎದೆಯ ಮೇಲಿನ ಅಂಗಿ ಹಿಡಿದು ಫಿರ್ಯಾದಿಗೆ ವಿಠಲ ಜಾಮಗೊಂಡ ಇತನು ನಿಮ್ಮ ಹೊಲದ ಬಗ್ಗೆ ನ್ಯಾಯ ಹೇಳಲು ಬಂದರೆ ನಮಗೆ ಬೈಯತೀ ಏನ ಲೇ ಸುಳಿ ಮಗನಾ ಅಂತ ಅಂದು ತನ್ನ ಕೈಯಿಂದ ಬಲಗಣ್ಣಿನ ಮೇಲೆ ಜೋರಾಗಿ ಹೊಡೆದನು ಆಗ ಫಿರ್ಯಾದಿ ನೆಲದ ಮೇಲೆ ಬಿದ್ದಾಗ ದೂಳಪ್ಪ ಮಂಟಗಿ ಇತನು ತನ್ನ ಕಾಲಿನಿಂದ ಎದೆಯ ಮೇಲೆ ಮತ್ತು ಹೊಟ್ಟೆಯ ಮೇಲೆ ಒದ್ದು ತೀವ್ರ ಗುಪ್ತಗಾಯ ಪಡಿಸಿ ಜೀವ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ನೆಲೋಗಿ ಠಾಣೆ : ದಿನಾಂಕ 31-08-14 ರಂದು ಫಿರ್ಯಾದಿ ಶಿವಶರಣಪ್ಪ ಹಾಗೂ ಹೆಂಡತಿ ಹಾಗೂ ಮಗ ಶ್ರಶೈಲ್ ಕೂಡಿಕೊಂಡು ಹೊಲಕ್ಕೆ ಕೆಲಸಕ್ಕೆ ಹೋಗಿದ್ದು ಮಗಳಾದ ರೂಪ ಇವಳು ಮನೆಯಲ್ಲಿದ್ದು ನಂತರ ಮೂರು ಜನರು ಹೊಲದಿಂದ ಸಾಯಂಕಾಲ ಮರಳಿ ಮನೆಗೆ ಬಂದಿದ್ದು ಮನೆಯಲ್ಲಿ ಮಗಳಾದ ರೂಪ ಇರಲಿಲ್ಲ ನಂತರ ಅಕ್ಕ ಪಕ್ಕದ ಮನೆಯವರಿಗೆ ಕೇಳಲಾಗಿ ಯಾವುದೇ ಮಾಹಿತಿ ಗೊತ್ತಗಲಿಲ್ಲಾ, ನಂತರ ಅದೆ ಓಣೆಯವರಾದ ಶರಣಬಸಪ್ಪ ತಂದೆ ಮಹಾದೇವಪ್ಪ, ಶಾಂತಪ್ಪ ತಂದೆ ಭಿಮಶ್ಯಾ ಇವರು ಬಂದು ಹೇಳಿದರು ನಿನ್ನ ಮಗಳಾದ ರೂಪ ಇವಳಿಗೆ ಮಂಜುನಾಥ ತಂದೆ ಗೊಲ್ಲಾಳಪ್ಪ ನಾಯಕೋಡಿ  ಸಾ: ಕುರನಳ್ಳಿ ಇತನು ಸಾಹೇಬಗೌಡ ತಂದೆ ದೊಡ್ಡಪ್ಪ ಗೌಡ ಪಾಟೀಲ್ ಇತನ ಟಂಟಂ ದಲ್ಲಿ ಮದ್ಯಾಹ್ನ 3-30 ಗಂಟೆಗೆ ಮನೆಯಿಂದ ನನ್ನ ಮಗಳಾದ ರೂಪ ಇವಳಿಗೆ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೇಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.