POLICE BHAVAN KALABURAGI

POLICE BHAVAN KALABURAGI

05 October 2014

Gulbarga District Reported Crimes

ಅಪಘಾತ ಪ್ರಕರಣಗಳು :
ಆಳಂದ ಠಾಣೆ : ಶ್ರೀ ಮಲ್ಲೇಶ ತಂದೆ ಭೀಮಣ್ಣಾ ಕಲಶೆಟ್ಟಿ  ಸಾ|| ಜಮಗಾ (ಜೆ) ರವರು ದಿನಾಂಕ 04-10-2014 ರಂದು ಎಂದಿನಂತೆ ಬೆಳಿಗ್ಗೆ ನಾನು ನನ್ನ ಹೆಂಡತಿ ರತ್ನಾಬಾಯಿ ನನ್ನ ತಮ್ಮ ವಿಠ್ಠಲ, ತಮ್ಮ ವಿಠ್ಠಲನ ಹೆಂಡತಿ ಸಿದ್ದಮ್ಮ ವಿಠ್ಠಲನ ಮಗಳಾದ ಲಕ್ಷ್ಮೀಬಾಯಿ ಎಲ್ಲರೂ ಹೊಲಕ್ಕೆ ಹೋಗಿ ಹೊಲದಲ್ಲಿ ಸಾಯಂಕಾಲದ ವರೆಗೆ ಕೆಲಸ ಮಾಡುತ್ತಿದ್ದಾಗ ಸಾಯಂಕಾಲ 5 ಗಂಟೆಯ ಸುಮಾರಿಗೆ ನನ್ನ ತಮ್ಮ ವಿಠ್ಠಲ ಇತನು ನಮ್ಮ ಹೊಲದ ಪಕ್ಕದ ಮುಖ್ಯ ರಸ್ತೆಯ ಬದಿಯಲ್ಲಿ ಜಿಡಗಾ ಕಡೆಗೆ ಹೋಗುವ ದ್ವಾರ ಬಾಗಿಲ ಅರ್ದ ಕಿ ಮೀ ಅಂತರದಲ್ಲಿ ಪಕ್ಕದಲ್ಲಿ ಹೋಗುವಾಗ ಎದುರಿನಿಂದ ಅಂದರೆ ಆಳಂದ ಕಡೆಯಿಂದ ಮುಖ್ಯ ರಸ್ತೆಯ ಮೇಲೆ ಒಬ್ಬ ಮೋಟಾರ ಸೈಕಲ್ ನೇದರ ಚಾಲಕನು ಮಾನವ ಜೀವಕ್ಕೆ ಹಾನಿಯಾಗುಇವ ರೀತಿಯಲ್ಲಿ ಅತಿವೇಗದಿಂದ ಹಾಗೂ ಅಲಕ್ಷತನದಿಂದ ಮೋಟಾರ ಸೈಕಲನ್ನು ತಮ್ಮ ವಿಠ್ಠಲನಿಗೆ ಜೋರಾಗಿ ಡಿಕ್ಕಿಪಡಿಸಿದ್ದರಿಂದ ನಾವು ಹೋಗಿ ನೋಡಲು ನಮ್ಮ ತಮ್ಮನ ಎಡಗಾಲು ಮುರಿದಿದ್ದು ಎಡ ಮೆಲಕಿನ ಮೇಲೆ ಭಾರಿ ರಕ್ತಗಾಯವಾಗಿದ್ದು & ತಲೆಗೆ ಅಲ್ಲಲ್ಲಿ ಬಡಿದು ರಕ್ತಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ, ನಂತರ ನನ್ನ ತಮ್ಮನಿಗೆ ಡಿಕ್ಕಿ ಪಡಿಸಿದ ಮೋಟಾರ ಸೈಕಲ್ ನಂ ನೋಡಲಾಗಿ ಎಮ್‌ಹೆಚ್‌ 13 ಬಿಹೆಚ್‌ 3836 ಇದ್ದು ಸದರಿ ಮೋಟಾರ ಸೈಕಲ್ ಚಾಲಕನು ಡಿಕ್ಕಿ ಪಡಿಸಿ ವಾಹನ ಸ್ಥಳದಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀಮತಿ ವಿಜಯಲಕ್ಷ್ಮಿ ಗಂಡ ಅನೀಲಕುಮಾರ ಇವರ ಗಂಡನಾದ ಅನೀಲಕುಮಾರ ಈತನು ದಿನಾಂಕ 03-10-2014 ರಂದು ರಾತ್ರಿ 11-15 ಪಿ.ಎಮ್ ಕ್ಕೆ ಹುಮನಾಬಾದ ರೋಡಿನಲ್ಲಿ ಇರುವ ಅಣಕಲ್ ಪೆಟ್ರೊಲ ಬಂಕ ಎದರುಗಡೆ ರೋಡಿನ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಯಾವುದೋ ಒಂದು ಕಾರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಅನೀಲಕುಮಾರ ಇತನಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ತನ್ನ ಕಾರ ಸಮೇತ ಓಡಿ ಹೋಗಿದ್ದು ಅಪಘಾತದಲ್ಲಿ ಅನೀಲಕುಮಾರ ಈತನಿಗೆ ತಲೆಗೆ ಮತ್ತು ಕುತ್ತಿಗಿಗೆ ಭಾರಿ ರಕ್ತಗಾಯಗಳಾಗಿ ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಅಶೋಕ ನಗರ ಠಾಣೆ : ದಿನಾಂಕ 3-10-2014 ರಂದು 11-30 ಎ.ಎಂ ಸುಮಾರಿಗೆ ಗುಲಬರ್ಗಾ ನಗರದ  ಬಸ್ ಸ್ಟ್ಯಾಂಡ ಹತ್ತಿರದ  ಜಿ.ಡಿ.ಎ ಲೇಔಟ ಎಲ್.ಐ.ಸಿ ಆಫೀಸ ಪಕ್ಕದಲ್ಲಿ ಅಂದಾಜು 40-50 ವಯಸ್ಸಿನ ಅಪರಿಚಿತ ವ್ಯಕ್ತಿ ಯಾವುದೋ ಕಾಯಿಲೆಯಿಂದ ಬಳಲಿ ಸ್ವಾಬಾವಿಕವಾಗಿ ಮೃತಪಟ್ಟಿದ್ದುಮೃತನ ಹೆಸರು ವಿಳಾಸ ಪತ್ತೆಯಾಗಿರುವುದಿಲ್ಲಾ.  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.