POLICE BHAVAN KALABURAGI

POLICE BHAVAN KALABURAGI

03 March 2013

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ದಿನಾಂಕ 28/02/2013 ರಂದು 0130 ಗಂಟೆಯಿಂದ 0400 ಗಂಟೆಯ ಮಧ್ಯದ ಅವಧಿಯಲ್ಲಿ ಭೂಸನೂರ ತಾಂಡಾದಲ್ಲಿ ನಿರ್ಮಿಸಿರುವ ವಡಾಫೋನ ಟಾವರ UGUL 919 INDUS 1115049 ದಕ್ಕೆ ಅಳವಡಿಸಿದ ಬ್ಯಾಟರಿ ಬ್ಯಾಂಕಿನಿಂದ 24 ಬ್ಯಾಟರಿಗಳನ್ನು ಅಂದಾಜ ಕಿಮ್ಮತ್ತು 24,000/- ರೂಪಾಯಿಗಳು  ನೇದ್ದನ್ನು ಸ್ಟೋರ ರೂಮ ಕೀಲಿ ಮುರಿದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತ ಶ್ರೀ ಮಲ್ಲಿಕಾರ್ಜುನ ತಂದೆ ಶಿವಶರಣಪ್ಪ ಕಲಬುರ್ಗಿ ಸಾ|| ಕಾವೇರಿ ನಗರ ಗುಲಬರ್ಗಾರವರು  ಲಿಖಿತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:21/2013 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:ಶ್ರೀ ಪ್ರಭು ತಂದೆ ಸಂಗಣ್ಣ ಪಾಣೆಗಾಂವ ಸಾ:ಡಬರಾಬಾದ ಕ್ರಾಸ ರಿಂಗ ರೋಡ ಗುಲಬರ್ಗಾರವರು ದಿನಾಂಕ:02/03/2013  ರಂದು ಬೆಳಿಗ್ಗೆ 10-00 ಗಂಟೆಗೆ ಹೀರಾಪೂರ ಗೌಟಾಣ ಜಮೀನ ಪ್ಲಾಟ್ ನಂ:32 ನೇದ್ದರ ಹತ್ತಿರ ಪ್ಲಾಟ ಅಳತೆ ಮಾಡುವ ಸಮಯದಲ್ಲಿ ಬಸೀರ ತಂದೆ ಖಾಜಾಸಾಬ  ವಡ್ಡಳ್ಳಿ ಸಾ: ಹೀರಾಪೂರ ಇತನು ನನಗೆ ಪ್ಲಾಟ್ ನಂ:32 ನೇದ್ದರ ಅಳತೆ 30X40 ಕಿಂತ ಕಡಿಮೆ ಇರುತ್ತದೆ, ಇನ್ನೊಂದು ಸಾರಿ ಅಳತೆ ಮಾಡಿಕೊಡು ಅಂತ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಸಲಿಕೆಯಿಂದ ತಲೆಗೆ ಹೊಡೆದು ರಕ್ತ ಗಾಯ ಪಡೆಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 118/2013 ಕಲಂ, 324, 504 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ದಿನಾಂಕ:02-03-2013 ರಂದು 7-00 ಪಿ.ಎಮ ಕ್ಕೆ ಶ್ರೀ ರಘು ಎನ್‌, ಪಿಎಸ್‌ಐ ಶಹಾಬಾದ ನಗರ ಠಾಣೆ ರವರು ಹೊನಗುಂಟಾ ಗ್ರಾಮದ ಜಾವೀದ ಪಟೇಲ ರವರ ಮನೆಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಜೂಜಾಡುತ್ತಿರುವವರ ಮೇಲೆ ದಾಳಿ ಮಾಡಿ ಜೂಜಾಟದಲ್ಲಿ ನಿರತರಾದ  ಮಹ್ಮದ ತೌಫೀಕ ತಂದೆ ಬಸೀರ ಅಹ್ಮದ ಸಾ:ಹೊನಗುಂಟಾ,ಮಹ್ಮದ ಇಸ್ಮಾಯಿಲ ಶಾ ತಂದೆ ಮದಾರಶಾ ಸಾ:ಹೊನಗುಂಟಾ,  ನಬಿಸಾಬ ತಂದೆ ಬದನಸಾಬ ಸಾ:ಹೊನಗುಂಟಾ, ಮೈತಾಬ ಶಾ ತಂದೆ ಬಂದೇಲಿ ಶಾ ಸಾ:ಹೊನಗುಂಟಾ, ಮಹ್ಮದ ಸೈಯದ ತಂದೆ ಮಹ್ಮದ ಅಮ್ಜದ ಸಾಬ ಸಾ:ಇಜೇರಿ ಹಾ:ವ:ಹೊನಗುಂಟಾ, ಮಲ್ಲಪ್ಪಾ ತಂದೆ ನಾಗಪ್ಪಾ ಬಂಡೆಪ್ಪನೂರ ಸಾ:ಹೊನಗುಂಟಾ ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ  ಜೂಜಾಟಕ್ಕೆ ಬಳಸಿದ ಹಣ ಮತ್ತು ಜೂಜಾಟದ ಎಲೆಗಳು ಜಪ್ತಿಪಡಿಸಿಕೊಂಡು ಠಾಣೆ ಗುನ್ನೆ ನಂ: 28/2013 ಕಲಂ, 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ದಿನಾಂಕ:02/03/2013 ರಂದು ಠಾಣಾ ಹದ್ದಿಯಲ್ಲಿ ಬರುವ ಆಶ್ರಯ ಕಾಲೋನಿಯ ನೀರಿನ ಟ್ಯಾಂಕ ಹತ್ತಿರ  ಸಾರ್ವಜನಿಕ  ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕುಳಿತು ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಶರಣಪ್ಪಾ ಹಿಪ್ಪರಗಿ ಪಿಐ ಶಹಾಬಾದ ನಗರ ಠಾಣೆರವರ ನೇತೃತ್ವದಲ್ಲಿ ಪಿ.ಎಸ.ಐ  ಶ್ರೀ ರಘು ಎನ್. ಹಾಗೂ ಸಿಬ್ಬಂದಿಯವರಾದ ಯಾದವ, ರಾಜು  ವೀರಭದ್ರ, ಸುಭಾಷ ರವರು ಕೂಡಿಕೊಂಡು  ಜೂಜಾಟದಲ್ಲಿ ನಿರತರಾದ ಮೊಹ್ಮದ ಮಹಿಬೂಬ ತಂದೆ ಮೊಹ್ಮದ ಹುಸೈನ ವೈನಿವಾಲೆ ವ:51 ಜಾ: ಮುಸ್ಲಿಂ ಉ: ಬಡಿಗೇರ್ ಸಾ: ಸುಭಾಷ ಚೌಕ ಶಹಾಬಾದ  2. ಶೇಖ ಮಲಂಗ್ ತಂದೆ ನಬಿಸಾಬ ಶೇಖ  ವ: 49 ಜಾ: ಮುಸ್ಲಿಂ ಉ:ಟೇಲರ್ ಸಾ: ರಾಮ ಮೊಹಲ್ಲಾ ಶಹಾಬಾದ 3. ಚಂದು ತಂದೆ ಶಂಕರ ಮೇತ್ರೆ ವ:21 ಜಾ: ಮಾದಿಗ ಉ:ಗೌಂಡಿ ಕೆಲಸ ಸಾ: ಆಶ್ರಯ ಕಾಲೋನಿ ಶಹಾಬಾದ  4. ಸದಾಂ ಹುಸೇನ್ ತಂದೆ ರುಕ್ಮೊದ್ದಿನ್ ಕಲಗುರ್ತಿ ವ: 20 ಜಾ:ಮುಸ್ಲಿಂ ಉ: ಕೂಲಿಕೆಲಸ ಸಾ: ಆಶ್ರಯ ಕಾಲೋನಿ ಶಹಾಬಾದ ರವರಿಂದ ಜೂಜಾಟಕ್ಕೆ ಬಳಸಿದ ಹಣ ಮತ್ತು ಜೂಜಾಟದ ಎಲೆಗಳು ಜಪ್ತಿ ಪಡಿಸಿಕೊಂಡು ಠಾಣೆ ಗುನ್ನೆ ನಂ:29/2013 ಕಲಂ, 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಸೇಡಂ ಪೊಲೀಸ್ ಠಾಣೆ:ಶ್ರೀ ರಾಮು ತಂದೆ ನಾಗಪ್ಪ ಮಂಗಾ ವಯ:23 ವರ್ಷ, ಜಾತಿ: ಮಾದಿಗ  (ಎಸ್.ಸಿ) ಉ: ಜೀಪ್ ಚಾಲಕ, ಸಾ:ಮಳಖೇಡ ತಾ:ಸೇಡಂ ರವರು ನಾನು ಮತ್ತು ನಮ್ಮ ಕ್ರೂಜರ ಚಾಲಕ ಸಿದ್ದು ಸಿಂಪಗೇರ ಇಬ್ಬರೂ ಕೂಡಿ ದಿನಾಂಕ:02-03-2013 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಐಬಿ ಎದುರುಗಡೆಯ ತರಕಾರಿ ಮಾರ್ಕೆಟ ಹತ್ತಿರ ಜೀಪ್ ನಿಲ್ಲಿಸಿ ಮಾತಾನಾಡುತ್ತಾ ನಿಂತಾಗ ಸಂಜು  ತಂದೆ ಗುಂಡಪ್ಪ  ಸಾ:ಅಗ್ಗಿ ಬಸವೇಶ್ವರ ಕಾಲೋನಿ ಸೇಡಂ ಇತನು ಬಂದವನೇ ನನಗೆ   ಅವಾಚ್ಯವಾಗಿ ಜಾತಿ ನಿಂದನೆ ಮಾಡಿ ಮಳಖೇಡದಿಂದ ಪ್ಯಾಸಿಂಜರ ಕೂಡಿಸಿಕೊಂಡು ಹೋಗುವ ವಿಷಯದಲ್ಲಿ ಜಗಳ ತೆಗೆದು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿ ತನ್ನ ಕೈಯಲ್ಲಿದ್ದ ಖಾಲಿ ಬೀಯರ್ ಬಾಟಲಿಯಿಂದ ನನ್ನ  ಹಿಂದುಗಡ ತಲೆಗೆ ಹೊಡೆದು ರಕ್ತ ಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಸೇಡಂ ಠಾಣೆ ಗುನ್ನೆ ನಂ:48/2013 ಕಲಂ-324, 504, 506 ಐಪಿಸಿ ಮತ್ತು 3(I)(X) SC/ST PA Act 1989  ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸೇಡಂ ಪೊಲೀಸ್ ಠಾಣೆ:ದಿನಾಂಕ:02-03-2013 ರಂದು ರಾತ್ರಿ 8-45  ಗಂಟೆಗೆ ನಾನು ಮತ್ತು ನಮ್ಮಲ್ಲಿ ಮುನಿಮ ಕೆಲಸ ಮಾಡುವ ಚಂದ್ರಪ್ಪ ತಂದೆ ಹಣಮಂತಪ್ಪ ಮಡಿವಾಳ ವಯ:52 ವರ್ಷ, ಇಬ್ಬರೂ ಕೂಡಿ ಮೋಟಾರ ಸೈಕಲ್ ನಂ: ಕೆಎ:32-ಯು-9805 ನೇದ್ದರ ಮೇಲೆ ಸೇಡಂದಿಂದ ರಂಜೋಳಕ್ಕೆ ಹೋಗುತ್ತಿದ್ದೇವು, ಮೋಟಾರು ಸೈಕಲ್ ನಾನು ಚಲಾಯಿಸುತ್ತಿದ್ದೆ. ಮೋಟಾರು ಸೈಕಲನ್ನು ಸವಾಕಾಶವಾಗಿ ಎಡಭಾಗಕ್ಕೆ ಚಲಾಯಿಸುತ್ತಾ ಬಟಗೆರಾ (ಬಿ) ಕ್ರಾಸ್ ದಾಟಿ, ಕಾಗಿಣಾ ದಾಬಾ ಹತ್ತಿರ ಎದುರುಗಡೆಯಿಂದ ಟ್ರಾಕ್ಟರ್ ಚಾಲಕನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ರಾಂಗ ರೂಟದಲ್ಲಿ ನೇರವಾಗಿ ಬಂದು ನನ್ನ ಮೋಟಾರು ಸೈಕಲಗೆ ಡಿಕ್ಕಿಪಡಿಸಿದನು. ನಾನು ರೋಡಿನ ಮೇಲೆ ಬಲಭಾಗಕ್ಕೆ ಬಿದ್ದೇನು, ಹಿಂದುಗಡೆ ಕುಳಿತ್ತಿದ್ದ ಚಂದ್ರಪ್ಪ ಮಡಿವಾಳ ಇತನು ರೋಡಿನ ಎಡಭಾಗಕ್ಕೆ ಬಿದ್ದಾಗ ಆಗ ಟ್ರಾಕ್ಟರ ಟೈಯರ್ ಚಂದ್ರಪ್ಪ ಇತನ ಮೇಲಿಂದ ಹೋಗಿ ರೋಡಿನ ಎಡಭಾಗಕ್ಕೆ ಟ್ರಾಕ್ಟರ್ ಪಲ್ಟಿಯಾಗಿ ಬಿತ್ತು ಆಗ ಟ್ರಾಕ್ಟರ್ ಚಾಲಕ ಅಲ್ಲಿಂದ ಓಡಿ ಹೋದನು ನನಗೆ ರಕ್ತಗಾಯ ಹಾಗೂ ಗುಪ್ತಗಾಯಗಳಾದವು. ನನ್ನ ಹಿಂದುಗಡೆ ಕುಳಿತ್ತಿದ್ದ ಚಂದ್ರಪ್ಪಾ ಇತನಿಗೆ ನೋಡಲು ಆತನು ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಅಲ್ಲಿಯೇ ನಿಂತಿದ್ದ ಟ್ರಾಕ್ಟರ್ ನೋಡಲು ಕೆಎ-38 ಟಿ-2135-36 ನೇದ್ದು ಇರುತ್ತದೆ. ಟ್ರಾಕ್ಟರ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಮಹ್ಮದ್ ಮೌಲಾನಾ ತಂದೆ ಅಬ್ದುಲ್ ರಶೀದ ರಂಜೋಳ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಸೇಡಂ ಠಾಣೆ ಗುನ್ನೆ ನಂ:49/2013 ಕಲಂ-279,337, 304(ಎ) ಐಪಿಸಿ ಸಂಗಡ 187 ಐ.ಎಮ್.ವ್ಹಿ. ಆಕ್ಟ್  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.