POLICE BHAVAN KALABURAGI

POLICE BHAVAN KALABURAGI

14 September 2018

KALABURAGI DISTRICT REPORTED CRIMES

ವರದಕ್ಷಣೆ ಕಿರುಕಳ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲು  ಪ್ರಚೋದಿಸಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ಶಿವಮ್ಮ ಗಂ ಸುಬಂಜಪ್ಪಗೌಡ ಮಾಲಿಪಾಟೀಲ್ ಸಾ: ರೇವನೂರ ತಾ:ಜೇವರಗಿ ರವರ ಮಗಳಾದ ಜಯಶ್ರೀ ಇವಳಿಗೆ ಕಡಕೋಳ ಗ್ರಾಮದ ಮಲ್ಲಿಕಾರ್ಜುನ ತಂ ಮಡಿವಾಳಪ್ಪ ಪೊಲೀಸ್ ಪಾಟೀಲ್ ಇವರೊಂದಿಗೆ ಮದುವೆ ಮಾಡಿಕೊಟ್ಟಿರುತ್ತೇವೆ. ಆಗಾಗ ನನ್ನ ಮಗಳಿಗೆ ಅವಳ ಗಂಡ ಮತ್ತು ಅತ್ತೆ ಜಗದೇವಿ , ಮಾವ ಮಡಿವಾಳಪ್ಪಗೌಡ , ಮೈದುನ ಮಹಾಂತಪ್ಪ ಇವರು ನನ್ನ ಮಗಳಿಗೆ ನಿನಗೆ ಮದುವೆ ಮಾಡಿಕೊಂಡಿದ್ದರಿಂದ ನಮಗೆ ಲುಖಸಾನ ಆಗಿರುತ್ತದೆ. ನನ್ನ ಮಗನಿಗೆ ಬೇರೆಕೆಡೆ ಮದುವೆ ಮಾಡಿದ್ದರೆ ಸರಿಯಾಗಿ ವರೋಪಚಾರ ಕೊಡುತ್ತಿದ್ದರು. ಈಗ ನೀನು ಸತ್ತರೆ ಎಲ್ಲಾ ಸರಿ ಹೋಗುತ್ತದೆ ಅಂತಾ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದ ಬಗ್ಗೆ ನನ್ನ ಮಗಳು ನನ್ನ ಮುಂದೆ ನಮ್ಮ ಮನೆಗೆ ಬಂದಾಗ ಹೇಳಿರುತ್ತಾಳೆ ಈಗ ಒಂದು ತಿಂಗಳ ಹಿಂದೆ ನನ್ನ ಮಗಳಿಗೆ ಗಂಡನ ಮನೆಗೆ ಕಳುಹಿಸಿರುತ್ತೇವೆ. ನನ್ನ ಮಗಳ ಗಂಡನ ಮನೆ ಕಡಕೋಳ ಸಿಮೇಯ ಅವರ ಹೊಲದಲ್ಲಿರುತ್ತದೆ.  ದಿನಾಂಕ: 13-09-18 ರಂದು  ಕಡಕೋಳ ಗ್ರಾಮದ ಸಂಬಂದಿಕರಾದ ಆನಂದ ತಂ ಯಮನಪ್ಪ ಮಾಲಿಪಾಟೀಲ್ ಇವರು ಪೋನ್ ಮಾಡಿ ನಿಮ್ಮ ಮಗಳು ಜೈಯಶ್ರೀ ಇವಳು ವಿಷ ಕುಡಿದು ಮೃತಪಟ್ಟಿರುತ್ತಾಳೆ ಅಂತಾ ಹೇಳಿರುವದರಿಂದ ನಾನು ಮತ್ತು ನನ್ನ ಮಗ ಶ್ರೀಶೈಲ ಮತ್ತು ಸಂಬಂದಿಕರಾದ ದೇವಪ್ಪಗೌಡ ಮಾಲಿಪಾಟೀಲ್ , ರೇವಣಸಿದ್ದಪ್ಪಗೌಡ ಮಾಲಿಪಾಟೀಲ್ ಅವರವರು ಕೂಡಿಕೊಂಡು ಕಡಕೋಳ ಗ್ರಾಮಕ್ಕೆ ಹೋಗಿ ನನ್ನ ಮಗಳ ಶವವನ್ನು ನೋಡಿದ್ದು ನನ್ನ ಮಗಳಿಗೆ ಅವಳ ಗಂಡ ಮಲ್ಲಿಕಾರ್ಜುನ , ಮಾವ ಮಡಿವಾಳಪ್ಪಗೌಡ , ಅತ್ತೆ ಜಗದೇವಿ , ಮೈದುನ ಮಹಾಂತಪ್ಪ ಇವರೆಲ್ಲರು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟಿದ್ದರಿಂದ ಕಿರುಕುಳ ತಾಳಲಾರದೆ ನನ್ನ ಮಗಳು ಅವರ ಮನೆಯಲ್ಲಿ ಇಂದು ದಿನಾಂಕ: 13-09-18 ರಂದು 12 ಪಿ.ಎಂ ದಿಂದ 3 ಪಿ.ಎಂ ಮಧ್ಯದಲ್ಲಿ ಯಾವುದೊ ವಿಷ ಸೇವನೆ ಮಾಡಿ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:- 15/08/2018 ರಂದು ಸಾಯಂಕಾಲ 06:30 ಗಂಟೆಗೆ ಮೃತ ಭೂಸಣ್ಣಾ @ ಬೂಸಪ್ಪ ಗೊಬ್ಬುರ ಇವರು ಸಂಡಾಸಕ್ಕೆ ಹೋಗಿ ಮರಳಿ ತಾನು ಪಾಲಿಗೆ ಮಾಡಿದ ಹೋಲದ ಕಡೆಗೆ ಬರುವ ಕುರಿತು ಕಲಬುರಗಿ-ಅಫಜಲಪೂರ ರೋಡಿನ ಶರಣಸಿರಸಗಿ ತಾಂಡಾದ ಕೆಇಬಿ ಗೋದಮ ಹತ್ತಿರ ನಡೆದುಕೊಂಡು ಸದರಿ ರೋಡ ಕ್ರಾಸ ಮಾಡುತ್ತಿದ್ದಾಗ ಅದೇ ವೇಳೆಗೆ ಕಲಬುರಗಿ ಕಡೆಯಿಂದ ಒಬ್ಬ ಮೋಟಾರ ಸೈಕಲ್ ನಂ KA-32 Y-6499 ನೇದ್ದರ ಮೋಟಾರ ಸೈಕಲ ಚಾಲಕನು ತನ್ನ ಮೋಟಾರ ಸೈಕಲನ್ನು ಯಾವುದೇ ಹಾರ್ನ ವಗೈರೇ ಹಾಕದೇ ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಮೃತನಿಗೆ ಜೋರಾಗಿ ಡಿಕ್ಕಿ ಕೊಟ್ಟು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲನ್ನು ಸ್ವಲ್ಪ ಮುಂದೆ ಒಯ್ದು ನಿಲ್ಲಿಸಿದ್ದು ಆತನಿಗೆ ತಲೆಯ ಹಿಂದುಗಡೆ ಭಾರಿ ಗುಪ್ತಗಾಯ ಮತ್ತು ರಕ್ತಗಾಯ, ಬಲಗಾಲು ಮುಂಗಾಲಿಗೆ ತರಚಿದ ರಕ್ತಗಾಯಗಳಾದ್ದರಿಂದ್ದ ಆತನಿಗೆ ಕಲಬುರಗಿ ನಗರದ ಗಂಗಾ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿದ್ದು ನಂತರ ದಿನಾಂಕ:- 16/08/2018 ರಂದು ರಾತ್ರಿ ಗಂಗಾ ಆಸ್ಪತ್ರೆಯಿಂದ ಡಿಚಾರ್ಚ ಮಾಡಿಸಿಕೊಂಡು ದಿನಾಂಕ:- 17/08/2018 ರಂದು ಸೋಲಾಪುರದ ಗಂಗಾ ಮಯ್ಯ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದ್ದು ಮೃತ ಭೂಸಣ್ಣಾ @ ಬೂಸಪ್ಪ ಇವರು ದಿನಾಂಕ:- 17/08/2018 ರಿಂದ ದಿನಾಂಕ:- 31/08/2018 ರವರೆಗೆ ಗಂಗಾ ಮಯ್ಯಾ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ಉಪಚಾರದಲ್ಲಿ ಗುಣಮುಖ ಹೊಂದದೇ ದಿನಾಂಕ:- 31/08/2018 ರಂದು ಮದ್ಯಾಹ್ನ ರಸ್ತೆ ಅಪಘಾತದಲ್ಲಿ ನನ್ನ ತಂದೆಗೆ ಆದ ಗಾಯಗಳಿಂದ ಗುಣಮುಖ ಹೊಂದದೇ ಮೃತಪಟ್ಟಿರುತ್ತಾನೆ. ಅಂತಾ ಶ್ರೀ ರಾಜೇಶ ತಂದೆ ಭೂಸಣ್ಣಾ ಸಾ : ಶರಣಶಿರಸಗಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಅಲ್ಲಿಸಾಬ ತಂದೆ ಹಸನಸಾಬ ಕವಾಲ್ದಾರ ಸಾ|| ಬಳಬಟ್ಟಿ ತಾ|| ಜೇವರ್ಗಿ ರವರು 4 ಜನ ಅಣ್ಣತಮ್ಮಂದಿರರಿದ್ದು, ನಮ್ಮೂರ ಸಿಮಾಂತರದಲ್ಲಿ ನಮ್ಮ ಪಿತ್ರಾರ್ಜಿತ ಆಸ್ತಿಗಳಿದ್ದು, ಸರ್ವೆ ನಂ 62 ನೇದ್ದರಲ್ಲಿ 6 ಎಕರೆ ಮತ್ತು ಸರ್ವೆ ನಂ 63 ನೇದ್ದರಲ್ಲಿ 5 ಎಕರೆ, ಸರ್ವೆ ನಂ 83 ನೇದ್ದರಲ್ಲಿ 22 ಎಕರೆ ಜಮೀನು ಇರುತ್ತದೆ, ಹಿರಿಯರು ವಾಟನಿ ಮಾಡಿ ಕೊಟ್ಟಿದ್ದ ಪ್ರಕಾರ ನಾವುಗಳು ಉಪಭೋಗ ಮಾಡುತ್ತಾ ಬಂದಿರುತ್ತೇವೆ, ಆದರೆ ಸರ್ವೆ ನಂ 63 ನೇದ್ದರಲ್ಲಿ ನಮ್ಮ ತಮ್ಮಂದಿರಾದ ಲಾಲಸಾಬ ಮತ್ತು ಚಂದಾಸಾಬ ರವರ ಹೆಸರಿಗೆ ಇದ್ದು ಅವರ ಪಹಣಿಯಲ್ಲಿ ತಲಾ 3 ಎಕರೆ 20 ಗುಂಟೆ ಜಮೀನು ಇರುತ್ತದೆ, ಪಹಣಿಯಲ್ಲಿ 2 ಎಕರೆ ಜಮಿನು ಹೆಚ್ಚಿಗೆ ನಮೂದು ಇರುತ್ತದೆ, ಸರ್ವೆ ನಂ 63 ನೇದ್ದರಲ್ಲಿ ನಮ್ಮ ಎರಡನೇ ಅಣ್ಣತಮ್ಮಂದಿರರಿಗೆ ಮೇಲ್ಕಂಡ ಲಾಲಸಾಬ ಮತ್ತು ಚಂದಾಸಾಬ ರವರು 2 ಎಕರೆ ಹೊಲ ಬಿಟ್ಟು ಕೊಡಬೇಕು ಅದರಂತೆ ನಮ್ಮ ಎರಡನೇ ಅಣ್ಣತಮ್ಮಂದಿರು ಸರ್ವೆ ನಂ 62 ನೇದ್ದರಲ್ಲಿ ನಮಗ 2 ಎಕರೆ ಬಿಟ್ಟು ಕೊಡಬೇಕು, ಅಂತಾ ಹಿರಿಯರು ಮಾತನಾಡಿದ್ದು ಇರುತ್ತದೆ, ಆದರೇ ನಮ್ಮ ತಮ್ಮಂದಿರಾದ ಲಾಲಸಾಬ ಮತ್ತು ಚಂದಾಸಾಬ ರವರು ಹೊಲ ಬಿಟ್ಟು ಕೊಡುತ್ತಿಲ್ಲಾ, ಆದ್ದರಿಂದ ನಮ್ಮ ಎರಡನೇ ಅಣ್ಣತಮ್ಮಂದಿರರುಸಹ ನಮಗೆ 2 ಎಕರೆ ಹೊಲ ಬಿಟ್ಟು ಕೊಡುತ್ತಿಲ್ಲಾ, ಈ ಬಗ್ಗೆ ನಮ್ಮ ತಮ್ಮಂದಿರಾದ ಲಾಲಸಾಬ ಮತ್ತು ಚಂದಾಸಾಬ ರವರಿಗೆ ಸುಮಾರು ಸಲ ಹೇಳಿದರು ಅವರು ಕೇಳದೆ ನನ್ನೊಂದಿಗೆ ತಕರಾರು ಮಾಡಿಕೊಳ್ಳುತ್ತಾ ಬಂದಿರುತ್ತಾರೆ. ದಿನಾಂಕ 11-09-2018 ರಂದು ರಾತ್ರಿ 10;00 ಗಂಟೆಗೆ ನಮ್ಮ ಮನೆಯ ಹತ್ತಿರ ಜಟ್ಟೆಪ್ಪದೇವರ ಗುಡಿ ಹತ್ತಿರ ನಾನು ನನ್ನ ಮಗ ರಜಾಕ ಇಬ್ಬರು ಕೂಡಿ ಮನೆಗೆ ಹೊಗುತ್ತಿದ್ದಾಗ ನಮ್ಮ ತಮ್ಮಂದಿರಾದ 1] ಚಂದಾಸಾಬ ತಂದೆ ಹಸನಸಾಬ ಕವಾಲ್ದಾರ, 2] ಮಹಿಬೂಬ ತಂದೆ ಹಸನಸಾಬ ಕವಾಲ್ದಾರ, 3] ಲಾಲಸಾಬ ತಂದೆ ಹಸನಸಾಬ ಕವಾಲ್ದಾರ, 4] ರಸೂಲ ತಂದೆ ಚಂದಾಸಾಬ ಕವಾಲ್ದಾರ, 5] ರಸೂಲಬಿ ಗಂಡ ಮಹಿಬೂಬ ಕವಾಲ್ದಾರ, 6] ಖಾಜಾಬಿ ಗಂಡ ಲಾಲಸಾಬ ಕವಾಲ್ದಾರ ಹಿಗೆಲ್ಲರು ಗುಂಪು ಕಟ್ಟಿಕೊಂಡು ನಮ್ಮ ಹತ್ತಿರ ಬಂದು ನಮಗೆ ತಡೆದು ನಿಲ್ಲಿಸಿ, ಏ ಸೂಳಿ ಮಕ್ಕಳ್ಯಾ ನಮಗೇ ಹೊಲ ಬಿಟ್ಟು ಕೊಡು ಅಂತಾ ಹೇಳತಿರಾ, ಇವತ್ತ ನಿಮಗ ಖಲಾಸೆ ಮಾಡುತ್ತೇವೆ ಅಂತಾ ಅಂದು ಚಂದಾಸಾಬ ಈತನು ಬಡಿಗೆಯಿಂದ ನನ್ನ ಎಡಗೈ ಮೊಳಕೈ ಕೇಳಗೆ ಜೋರಾಗಿ ಹೊಡೆದು ಭಾರಿ ಗುಪ್ತಪೆಟ್ಟು ಪಡಿಸಿದನು, ನಂತರ ಬೆನ್ನಿನ ಮೇಲೆ ಬಲಗಾಲ ತೊಡೆಯ ಮೇಲೆ ಹೊಡೆದು ಗುಪ್ತ ಪೆಟ್ಟು ಪಡಿಸಿದನು, ನನ್ನ ಮಗ ರಜಾಕನಿಗೆ ಮಹಿಬೂಬ ಈತನು ಕಲ್ಲಿನಿಂದ ಎಡಹಣೆಗೆ ಹೊಡೆದು ರಕ್ತಗಾಯ ಪಡಿಸಿದನು, ಲಾಲಸಾಬ ಈತನು ಬಡಿಗೆಯಿಂದ ನನ್ನ ಮಗನ ಬೆನ್ನಿನ ಮೇಲೆ 2-3 ಸಲ ಹೊಡೆದು ಗುಪ್ತ ಗಾಯಪಡಿಸಿರುತ್ತಾನೆ, ಆ ಮೇಲೆ ಅದೇ ಬಡಿಗೆಯಿಂದ ನನ್ನ ಮಗನ ಎಡಗಾಲ ಮೇಲೆ ಹೊಡೆದಿರುತ್ತಾನೆ, ಆಗ ಜಗಳ ಬಿಡಿಸಲು ಬಂದ ನನ್ನ ಹೆಂಡತಿ ರೆಹಮಾನಬಿ ಇವಳಿಗೆ ರಸೂಲಬಿ ಇವಳು ಚೂಪಾದ ಕಲ್ಲಿನಿಂದ ಎಡಗೈಗೆ ಹೊಡೆದು ರಕ್ತಗಾಯಪಡಿಸಿದಳು, ನಂತರ ಖಾಜಾಬಿ ಇವಳು ಕೈಯಿಂದ ನನ್ನ ಹೆಂಡತಿ ಬೆನ್ನಿನ ಮೇಲೆ ಹೊಡೆ ಬಡೆ ಮಾಡಿರುತ್ತಾಳೆ, ರಸೂಲ ಇವನು ಈ ರಂಡಿ ಮಕ್ಕಳಿಗೆ ಇವತ್ತ ಬಿಡುವುದಿಲ್ಲಾ ಹೊಡೆದು ಖಲಾಸೆ ಮಾಡುತ್ತೇನೆ ಅಂತಾ ಅಂದು ಕೈಯಿಂದ ನನ್ನ ತೊರಡಿನ ಹತ್ತಿರ ಹೊಡೆಯಲು ಬಂದಾಗ ನಾನು ತಪ್ಪಿಸಿಕೊಂಡಿರುತ್ತೇನೆ ಇಲ್ಲದಿದ್ದರೆ ನನಗೆ ಹೊಡೆದು ಖಲಾಸೆ ಮಾಡುತ್ತಿದ್ದನು, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.