POLICE BHAVAN KALABURAGI

POLICE BHAVAN KALABURAGI

03 July 2011

GULBARGA DISTRICT REPORTED CRIMES

ಅಪಘಾತ ಪ್ರಕರಣ :

ಗ್ರಾಮೀಣ ಠಾಣೆ
:
ಶ್ರೀ ರಘುನಾಥ ತಂದೆ ಗುರಣ್ಣಾ ವಠಾರ ಸಾ|| ಮೇಳಕುಂದಾ ತಾ|| ಜಿ|| ಗುಲಬರ್ಗಾ ರವರು ಠಾಣೆಗೆ ಹಾಜರಾಗಿ ಹೇಳಿಕೆ ಕೊಟ್ಟಿದ್ದು ಸಾರಾಂಶ ಏನೆಂದರೆ ತಾನು ಮತ್ತು ತನ್ನ ಸಂಬಂಧಿ ಮಹೇಶ ಇಬ್ಬರು ಕೂಡಿ , ಮಹೇಶ ಇವರ ಮೋಟಾರ ಸೈಕಲದ ಮೇಲೆ ಗುಲಬರ್ಗಾ ದಿಂದ ಮೇಳಕುಂದಾಕ್ಕೆ ಹೋಗುವ ಕುರಿತು ಹೋಗುವಾಗ ಅಫಜಲಪೂರ ರೋಡಿನ ಶರಣ ಸಿರಸಗಿ ಮಡ್ಡಿಯ ಹತ್ತಿರ ಪಾರ್ವತಿ ಲೇಔಟದ ಬದಿಯಲ್ಲಿ ಒಬ್ಬ ಗಂಡು ಮನುಷ್ಯ ಅಂದಾಜು 25 – 30 ವರ್ಷ ದವನಿದ್ದು ರೋಡಿನ ಬದಿಗೆ ಅಲ್ಲಲ್ಲಿ ಭಾರಿ ಗಾಯಗೊಂಡು ಮೃತ್ತ ಪಟ್ಟಿದ್ದು ನೋಡಲಾಗಿ ಆತನ ಹಣಗೆ ತಲೆಗೆ ಮತ್ತು ಅಲ್ಲಲ್ಲಿ ರಕ್ತ ಗಾಯಗಳಾಗಿದ್ದು ಯಾವುದೊ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಡಿಕ್ಕಿ ಹೊಡೆದು ಭಾರಿ ಗಾಯಗೊಳಿಸಿ ವಾಹನದೊಂದಿಗೆ ಹೋಗಿರಬಹುದು ಈ ಘಟನೆಯು ಇಂದು ನಸುಕಿನಲ್ಲಿ ಸಂಭವಿಸಿರಬಹುದು ಮೃತ್ತನ ಬಗ್ಗೆ ಯಾರು ಪಿರ್ಯಾದಿ ಸಲ್ಲಿಸದಕ್ಕೆ ನಾನೆ ಪಿರ್ಯಾದಿ ಕೊಟ್ಟಿರುತ್ತೆನೆ ಅಂತಾ ದೂರು ಸಲ್ಲಿಸಿದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯ ಆಕಸ್ಮಿಕ ಸಾವು :
ಗ್ರಾಮೀಣ ಠಾಣೆ :
ಶ್ರೀ ಮಲ್ಲಿಕಾರ್ಜುನ ತಂದೆ ಬಸಣ್ಣ ಔರಾದಿ ಸಾ|| ಕೊರಳ್ಲೀ ತಾ|| ಆಳಂದ ರವರು ನ್ನ ಮಗಳಾದ ಶ್ರೀಮತಿ ಮೀನಾಕ್ಷಿ ಗಂಡ ಶರಣಬಸಪ್ಪ ಬಾಬನಗೌಡ ಸಾ: ಜಂಬಗಾ (ಬಿ) ಇವರು ತನ್ನ ಮನೆಯಲ್ಲಿ ನಿನ್ನೆ ಸಾಯಂಕಾಲ ಚಹಾ ಮಾಡುತ್ತಿರುವಾಗ ಸ್ಟೋದ ಹವಾ ಹಾಕಿ ಬೆಂಕಿ ಹಚ್ಚಲು ಹೋದಾಗ ಒಮ್ಮೇಲೆ ಮೈಗೆ ಬೆಂಕಿ ಹತ್ತಿದ್ದರಿಂದ ಉಪಚಾರದ ಸಲುವಗಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ . ಉಪಚಾರ ಫಲಕಾರಿಯಾಗದೇ ಮೃತಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DISTRICT REPORTED CRIMES

ಅಪಘಾತ ಪ್ರಕರಣ :

ಸಂಚಾರಿ ಠಾಣೆ : ಶ್ರೀ ನೀಲಕಂಠ ತಂದೆ ಬಾಭುರಾವ ಸಿರಸಗಿ ಸಾ|| ದುಬೈ ಕಾಲೋನಿ ಗುಲಬರ್ಗಾ ರವರು ನನ್ನ ತಮನಾದ ರಾಜು ಇತನು ಹುಮನಬಾ್ ಬೆಸದಿಂದ ಚೌಕ ಕಡೆಯಿಂದ ನಡೆದುಕೊಂಡು ಹೊರಟಾಗ ಯಾವಧೋ ಒಮದು ವಾಹನ ಚಾಲಕನು ತನ್ನ ವಾಹನವನ್ನು ಅತೀವೆಗ ಮತ್ತು ನಿಷ್ಕಾಳಜಿತನದಿಂದ ನಡೆಯಿಸಿ ಕೊಂಡು ಬಂದು ಡಿಕ್ಕಿ ಪಡಿಸಿ ಹೋಗಿರುತ್ತಾನೆ ಡಿಕ್ಕಿ ಪಡಿಸಿದ ಪರಿಣಾಮ ರಾಜು ಇತನು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಪ್ರಕರಣ :

ಚಿಂಚೋಳಿ ಠಾಣೆ. ವಿಜಯಕುಮಾರ ತಂದೆ ಚಂದ್ರು ಸಾ: ಗಂಗೂನಾಯಕ ಚಂದಾಪುರ ತಾಂಡಾ ರವರು ನಾನು ಇಂದು ದಿನಾಂಕ 02.07.2011 ರಂದು ಸಾಯಂಕಾಲ ನಾನು ಜೆ.ಸಿ.ಬಿ ಯನ್ನು ಚಂದಾಪುರ ಕ್ರಾಸದಲ್ಲಿರುವ ಪೇಟ್ರೋಲ ಪಂಪನ ಹತ್ತಿರ ನಿಲ್ಲಿಸಿ ಊಟ ಮಾಡಬೇಕೆಂದು ನಮ್ಮ ಮನೆಗೆ ಬಂದು ನಮ್ಮ ಮನೆಯ ಹಿಂದುಗಡೆ ರಾಮಶೆಟ್ಟಿ ಇವರ ಮನೆಯಲ್ಲಿ ನಮ್ಮ ತಾಯಿಯೂ ಕುಳಿತಿದ್ದನ್ನು ನೋಡಿ ನಾನು ಕೂಡಾ ರಾಮಶೆಟ್ಟಿಯವರ ಮನೆಯ ಮುಂದುಗಡೆ ಕುಳಿತುಕೊಂಡಾಗ ಹೀರಾಸಿಂಗ್ ತಂದೆ ರಾಮಜೀ ಜಾದವ್ ಇತನು ಅವಾಚ್ಯ ಶಬ್ದಗಳಿಂದ ಬೈದು ಕೊಯತ್ತಾ ತಂದು ಹೊಡೆದಿರುತ್ತಾನೆ ಇದನ್ನು ಕೇಳಲು ಬಂದ ನಮ್ಮ ಅಣ್ಣ ರಾಜು ಇತನು ಯಾಕೇ ಹೊಡೆದಿರುವಿ ಅಂತಾ ಕೇಳುವಷ್ಟರಲ್ಲಿ ಹೀರಾಸಿಂಗ್ ತಂದೆ ರಾಮಜೀ ಜಾದವ , ಚಂದ್ರು ತಂದೆ ರಾಮಜೀ ಜಾದವ ಚಾಂಗಿಬಾಯಿ ಗಂಡ ಹೀರಾಸಿಂಗ್ ಇವರೆಲ್ಲರೂ ಬಂದು ನನಗೆ ಚಾಂಗಿಬಾಯಿ ಇವಳು ಒತ್ತಿ ಹಿಡಿದುಕೊಂಡಳು. ಹೀರಾಸಿಂಗ್ ಮತ್ತು ಚಂದ್ರು ಕೂಡಿ ನಮ್ಮ ಅಣ್ಣನಿಗೆ ಹಿಂದಿನಿಂದ ಕಾಲಿನಿಂದ ಒದ್ದಿದ್ದರಿಂದ ನಮ್ಮ ಅಣ್ಣನು ಹೀರಾಸಿಂಗ್ ನ ಮನೆಯ ಮುಂದೆ ಇರುವ ನಾಲಿಯಲ್ಲಿ ಬೋರಲಾಗಿ ಬಿದ್ದನು. ಆಗ ನಾನು ಚಿರಾಡುತ್ತಿದ್ದಾಗ ಸದರಿ ಆಪಾದಿತರಾದ ಹೀರಾಸಿಂಗ್ , ಚಂದ್ರು ಹಾಗೂ ಚಾಂಗೀಬಾಯಿ ಇವರು ಅಲ್ಲಿಂದ ಹೋದರು. ನಾನು ಮತ್ತು ರಾಮಶೆಟ್ಟಿ ತಂದೆ ವಸೂರಾಮ ಕೂಡಿ ನಮ್ಮ ಅಣ್ಣನಿಗೆ ನೋಡಲು ಅವನಿಗೆ ಎಡ ಹಣೆಗೆ ಹಾಗೂ ಎಡ ಮೆಲಕಿನ ಹತ್ತಿರ ಗಾಯಗಳಾಗಿದ್ದವು. ಆಗ ನಮ್ಮ ಅಣ್ಣನಿಗೆ ಮಾತಾಡಿಸಲು ಅವನು ಸತ್ತಿದ್ದನು. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಲತನ ಮಾಲು ಜಪ್ತಿ ಮಾಡಿದ ಬಗ್ಗೆ .

ಗ್ರಾಮೀಣ ಠಾಣೆ :
ಠಾಣೆ ವ್ಯಾಪ್ತಿಯ ಎಸ್‌ಎಮ್‌ ಕೃಷ್ಣಾ ಕಾಲನಿಯಲ್ಲಿ ವಾಹನಗಳ ಪರವಾನಿಗೆ ಇಲ್ಲದೆ ಹಲವಾರು ಮೋಟಾರ ಸೈಕಲಗಳನ್ನು ಇಟ್ಟುಕೊಂಡು ಅವುಗಳನ್ನು ಬಿಡಿಬಾಗಳನ್ನು ಬಿಚ್ಚುತ್ತಿದ್ದಾರೆ ಅಂತಾ ತಿಳಿದು ಬಂದ ಮಾಹಿತಿ ಮೇರೆಗೆ ದಾಳಿ ಮಾಡಿ ಅವರನ್ನು ವಿಚಾರಿಸಿದಾಗ ಅನ್ವರ ಅಲಿ ಖಾನ ತಂದೆ ಎಜ್ಜಾಜ ಅಲಿ ಖಾನ ಸಾಃ ಸಿಐಬಿ ಕಾಲನಿ ಗುಲಬರ್ಗಾ , ಇರಫಾನ ಪಟೇಲ ತಂದೆ ಶಬ್ಬಿರ ಪಟೇಲ ಸಾಃ ಎಕ್ಬಾಲ ಕಾಲನಿ ಗುಲಬರ್ಗಾ ಅಂತಾ ತಿಳಿದಿದ್ದು , ಈ ವ್ಯಕ್ತಿಗಳು ಕೇಲವು ಕಂಪನಿಗಳ 4 ಮೋಟಾರ ಸೈಕಲಕಗಳನ್ನು ಸಿಕ್ಕಿದ್ದು ಅವುಗಳ ದಾಖಲಾತಿಗಳ ಪರಿಶೀಲಿಸಲಾಗಿ ಯಾವುದೇ ದಾಖಲಾತಿಗಳು ಇಲ್ಲದೆ ಇರುವದು ಕಂಡು ಬಂದಿರುತ್ತದೆ . ವಾಹನಗಳ ಮತ್ತು ಬಿಡಿ ಭಾಗಗಳನ್ನು ಜಪ್ತಿ ಮಾಡಿ ಠಾಣೆಯಲ್ಲಿ ಇಟ್ಟು ಕೊಳ್ಳಲಾಗಿದೆ. ಸಂಬಂಧ ಪಟ್ಟವರು ಈ ಕೆಳಕಂಡ ನಂಬರಿಗೆ ಸಂಪರ್ಕಿಸಲು ಕೋರಲಾಗಿದೆ . ಮೊ 9480803553 ಆಪೀಸ ನಂ: 08472/263631 ಮತ್ತು 08472/263630