POLICE BHAVAN KALABURAGI

POLICE BHAVAN KALABURAGI

07 June 2015

Kalaburagi District Reported Crimes

ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀ ಅಶೋಕ ತಂದೆ ರೇವಣಸಿದ್ದಪ್ಪಾ ಕಂದಗೂಳ ಸಾ: ಮನೆ ನಂ 11-861/45 ಬೀರಪ್ಪ ಗುಡಿ ಹತ್ತಿರ ಬಸವ ನಗರ  ಕಲಬುರಗಿ ಇವರ ಮಗಳಾದ ಅಕ್ಷತಾ ವಯಸ್ಸು 17 ವರ್ಷ ಇವಳು 10 ನೇ ತರಗತಿಯಲ್ಲಿ ಅನುತ್ತಿರ್ಣವಗಿರುವದರಿಂದ ಮನೆಯಲ್ಲಿಯೇ ಇರುತ್ತಾಳೆ. ದಿನಾಂಕ 01.06.2015 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಅಜಯ ಎಂಬುವ ಹುಡುಗನು ನಮ್ಮ ಮನೆಗೆ ಬಂದು ನನ್ನ ಮಗಳಾದ ಅಕ್ಷತಾ ಇವಳಿಗೆ ಹೆದರಿಸಿ  ರಂಡಿ ಬೋಸಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ನೀನು ನನ್ನ ಜೊತೆಗೆ ಬರದೇ ಇದ್ದರೆ ನಿನ್ನ ತಂದೆ ತಾಯಿಯವರಿಗೆ ಜೀವ ಹೊಡೆದು ನಿನಗೆ ಎತ್ತಿಕೊಂಡು ಹೋಗುತ್ತೇನೆ ಅಂತಾ ಮಗಳಿಗೆ ಕೈಯಿಂದ ಹೊಡೆಬಡೆ ಮಾಡಿ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ಶ್ರೀ ಬಸವರಾಜ ತಂದೆ ಗುಂಡಪ್ಪಾ ಮರತೂರ ಸಾ : ಭಾಗೋಡಿ  ತಾ : ಚಿತ್ತಾಪೂರ ರವರು ಮತ್ತು ತಮ್ಮ ಸಮಾಜದ ನಿಂಗಣ್ಣಾ ಪೂಜಾರಿ ಇಬ್ಬರೂ ಕೊಡಿ ಖಾಸಗಿ ಕೆಲಸದ ನಿವಿತ್ಯ ನನ್ನ ಮೋ.ಸೈಕಲ ನಂ ಕೆಎ-56 ಹೆಚ್-682 ನೇದ್ದನ್ನು ತೆಗೆದುಕೊಂಡು ಕಲಬುರಗಿಗೇ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಭಾಗೋಡಿಗೆ ಹೋಗಬೇಕೆಂದು ಸದ್ರಿ ಮೋಟಾರ ಸೈಕಲ ನಿಂಗಣ್ಣಾ ಚಲಾಯಿಸುತ್ತಿದ್ದು ನಾನು ಹಿಂದೆ ಕುಳಿತ್ತಿದ್ದು ನಮ್ಮಂತೆ ಮಲ್ಲಿಕಾರ್ಜುನ ಹಾಗೂ ತಿಪ್ಪಣ್ಣಾ ಇವರೂ ಸಹ ನಮ್ಮ ಹಿಂದೆನೇ ಬರುತ್ತಿದ್ದು 12-30 ಪಿ.ಎಮ್ ಕ್ಕೆ ಮುಗುಟಾ ಸಿಮಾಂತರ ದಲ್ಲಿರುವ ವಿ.ಕೆ.ಜಿ. ಕಂಕರ ಮಶಿನ್ ಎದುರುಗಡೆ ಹೋಗುತ್ತಿದ್ದಂತೆ ಒಬ್ಬ ಮೋಟಾರ ಸೈಕಲ ಚಾಲಕನು ಒಬ್ಬ ಹೆಣ್ಣು ಮಗಳಿಗೆ ಕೊಡಿಸಿಕೊಂಡು ಅತಿ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತಾನು ಹೋಗುವ ರಸ್ತೆಯನ್ನು ಬಿಟ್ಟು ನಾವು ಹೋಗುವ ರಸ್ತೆಗೆ ಬಂದು ಮುಖಾ ಮುಖಿಯಾಗಿ ಡಿಕ್ಕಿ ಪಡಿಸಿದ ಪರಿಣಾಮ ನಾವಿಬ್ಬರೂ ಪುಟಿದು ಕೆಳಗೆ ಬಿದ್ದೇವು ನಮ್ಮಂತೆ ಅವರು ಬಿದ್ದಿದ್ದು ನನಗೆ ತೆಲೆಗೆ ಬಲಗಣಿನ ಹತ್ತಿರ, ಮೂಗಿನ ಹತ್ತಿರ, ಭಾರಿ ರಕ್ತಗಾಯ ಹಾಗೂ ಬಲಭುಜಕ್ಕೆ . ಬಲಕಪಾಳಿಗೆ ಭಾರಿ ಗುಪ್ತಗಾಯವಾಗಿರುತ್ತವೆ. ನಂತರ ನಿಂಗಣ್ಣಾ ಇವರಿಗೆ ನೋಡಲಾಗಿ ತೆಲೆಗೆ ಹಾಗೂ ಎಡ. ಬಲ ಕಪಾಳ ಹತ್ತಿರ ಭಾರಿ ಗುಪ್ತಗಾಯವಾಗಿದ್ದು ಅಲ್ಲದೆ ಕಿವಿಯಿಂದ ಮೊಗಿನಿಂದ ರಕ್ತಸ್ರಾವ ಆಗುತ್ತಿತ್ತು ಬಲಗಾಲ ಮುರಿದಂತೆ ಕಂಡುಬರುತ್ತಿತ್ತು. ಮಾತನಾಡುವ ಸ್ಥಿತಿಯಲ್ಲಿ ಇರಲ್ಲಿಲ್ಲಾ . ನಮ್ಮಂತೆ ನಮಗೆ ಅಪಘಾತ ಪಡಿಸಿದವರಿಗೆ ನೋಡಲಾಗಿ ತೆಲೆಗೆ ಕೈಕಾಲಗಳಿಗೆ ಗುಪ್ತಗಾಯ ರಕ್ತಗಾಯವಾಗಿದ್ದು ಆತನ ಹಿಂದುಗಡೆ ಕುಳಿತ ಹೆಣ್ಣು ಮಗಳಿಗೆ ನೋಡಲಾಗಿ ಎದೆಗೆ ಹಾಗೂ ಭುಜಕ್ಕೆ ತಲೆಗೆ ಒಳಪೆಟ್ಟಾಗಿದ್ದು ನಮಗೆ ಅಪಘಾತ ಪಡಿಸಿದ ಮೋ.ಸೈಕಲ ನಂಬರ ನೋಡಲಾಗಿ ಕೆಎ-32 ಇಎ-8704 ಅಂತಾ ಇದ್ದು  ಸದರಿಯವನ ಹೆಸರು ಗುರು ತಂದೆ ಶಿವಶರಣ ನಾಯಿಕೂಡಿ ಹಾಗೂ ಸುಜಾತಾ ಗಂಡ ಗುರುನಾಯ್ಕಿವಾಡಿ ಸಾ: ಇಬ್ಬರೂ ಸಂಗಾವಿ  ಅಂತಾ ಗೋತ್ತಾಯಿತ್ತು ನಂತರ 108 ಗೆ ಪೋನ್ ಮಾಡಿ ಕರೆಯಿಸಿ ಅದರಲ್ಲಿ ಹಾಕಿಕೊಂಡು  ಬರುವಾಗ ಮಾರ್ಗ ಮದ್ಯದಲ್ಲಿ ನಿಂಗಣ್ಣಾ ಇತನು ಮೃತ ಪಟ್ಟಿದ್ದು ಇರುತ್ತದೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 05/06/2015 ರಂದು ಬೆಳಿಗ್ಗೆ ಕ್ರುಜರ ನಂ- ಕೆಎ23 ಎಮ್-6712 ನೇದ್ದರಲ್ಲಿ ಆನೂರ ದಿಂದ ಅಫಜಲಪೂರಕ್ಕೆ ಹೋಗುತ್ತಿದ್ದಾಗ ಬಸವಣ್ಣನ ಕಟ್ಟೆಯ  ಸಮೀಪ ಗೂಡ್ಸ ಟಂ ಟಂ ನಂ ಕೆಎ-32 ಬಿ-2104 ನೇದ್ದರ ಚಾಲಕ ಟಂ ಟಂ ನೇದ್ದನ್ನು ಅತೀ ವೇಗವಾಗಿ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಕ್ರೂಜರಕ್ಕೆ ಡಿಕ್ಕಿ ಪಡಿಸಿದ್ದು ಡಿಕ್ಕಿಯಿಂದ ಕ್ರುಜರದಲ್ಲಿ ಕುಳತಿದ್ದ ಮಡಿವಾಳಮ್ಮ ಇವರ ಹಣೆಗೆ ಬಾರಿ ರಕ್ತಗಾಯವಾಗಿ ಕಲಬುರಗಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾಗ ಮಾರ್ಗ ಮದ್ಯ ಮೃತ ಪಟ್ಟಿದ್ದು  ಹಾಗೂ ಡಿಕ್ಕಿ ಪಡಿಸಿದ ಟಂ ಟಂ ನೇದ್ದರಲ್ಲಿದ್ದ ಸುನೀತಾ ಗಾಡಿವಡ್ಡರ, ಸಂಗೀತಾ ಗಾಡಿವಡ್ಡರ, ರೇಖಾ ಗಾಡಿವಡ್ಡರ, ಮಲ್ಲಮ್ಮ ಗಾಡಿವಡ್ಡರ, ಕುಲಗಪ್ಪ ಗಾಡಿವಡ್ಡರ, ತಿಮ್ಮವ್ವ ಗಾಡಿವಡ್ಡರ ಸಾ: ಎಲ್ಲರು ಅಫಜಲಪೂರ ಇವರಿಗೆ ಡಿಕ್ಕಿಯಿಂದ ಬಾರಿ ಮತ್ತು ಸಾದಾ ರಕ್ತಗಾಯಗಳು ಹಾಗೂ ಗುಪ್ತಗಾಯಗಳು ಆಗಿರುತ್ತವೆ ಅಂತಾ ಶ್ರೀ ಚನ್ನಣಗೌ ತಂದೆ ಮಲ್ಲೇಶಪ್ಪ ಪೊಲೀಸ ಪಾಟೀಲ ಸಾ : ಆನೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲೋಗಿ ಠಾಣೆ : ಶ್ರೀ ಗುರುಶಾಂತಯ್ಯ ತಂದೆ ರೇವಣಸಿದ್ದಯ್ಯ ಮಠ ಸಾ-ಜೇರಟಗಿ ತಾ-ಜೇವರ್ಗಿ ಜಿ-ಕಲಬುರ್ಗಿ  ರವರು ತನ್ನ ಟಂಟಂ ತಗೆದುಕೊಂಡು ನಮ್ಮೂರ ರೇಣುಕಾ ವೈನ ಶಾಪದ ಹತ್ತಿರ ನಿಲ್ಲಿಸಿದ್ದೆ ನನ್ನ ಟಂಟಂ ದಲ್ಲಿ ಅಬ್ದುಲ ಗನಿ ನದಾಫ ಇದ್ದು ಇಬ್ಬರು ಮಾತನಾಡುತ್ತಾ ಕುಳಿತ್ತಿದ್ದೇವು ಅಷ್ಟರಲ್ಲಿ ಜೇರಟಗಿ ಬಸ್ಸ ನಿಲ್ದಾಣದಿಂದ ಒಂದು ಕೆ.ಎಸ್.ಆರ್.ಟಿ.ಸಿ.ಬಸ್ಸ ಬಂದಿತು ಅದರ ಚಾಲಕನು ತನ್ನ ಬಸ್ಸನ್ನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನಮ್ಮ ಕಡೆನೇ ಬರುತ್ತಿದ್ದೆ ಸಚೀನ ತಂದೆ ಮನೊಹರ ಶಾಹಾಪೂರ ಇತನಿಗೆ ಡಿಕ್ಕಿ ಪಡಿಸಿದನು ಆಗ ಅವನು ಕೇಳಗಡೆ ಬಿದ್ದನು ಆಗ ನಾವಿಬ್ಬರು ಓಡುತ್ತಾ ಹೊಗಿ ಅವನಿಗೆ ಎಬ್ಬಿಸಿ ನೊಡಲಾಗಿ ಅವನ ಮುಖಕ್ಕೆ ರಕ್ತಗಾಯವಾಗಿತ್ತು ಬಾಯಿ ,ತುಟಿ ಬಡಿದು ರಕ್ತ ಗಾಯವಾಗಿತ್ತು ನಂತರ ಬಸ್ಸ ಚಾಲಕನು ಬಸ್ಸ ಅಲ್ಲೇ ಬಿಟ್ಟು ಓಡಿ ಹೊಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ ಸಬಾನಾ ಗಂಡ ಮಹ್ಮದ ಶೇಖ, ಸಾ|| ಶ್ರೀನಿವಾಸ ಸರಡಗಿ ಗ್ರಾಮ ಇವರು ದಿನಾಂಕ: 06/06/2015 ರಂದು ಬೆಳಿಗ್ಗೆ ನಾನು ಮತ್ತು ನಮ್ಮ ಅಣ್ಣತಮ್ಮಕೀಯ ಆಬೀದಾಬೇಗಂ ಗಂಡ ಉಸ್ಮಾನ ಸಾಬ ಶೇಖ ಇಬ್ಬರು ಮಜೀದ ಎದುರುಗಡೆ ರಸ್ತೆಯ ಮೇಲೆ ನಡೆಯುತ್ತಾ ಹೊರಟಾಗ 1) ಅಬ್ದುಲ ಜಲೀಲ ತಂದೆ ಖಾಜಾಸಾಬ ಲದಾಫ,  2) ಖಲೀಲ ತಂದೆ ಖಾಜಾಸಾಬ ಲದಾಫ, 3) ಮಹಿಬೂಬ ತಂದೆ ರುಸ್ತುಮ ಲದಾಫ,  4) ತೌಸಿಫ ತಂದೆ ಲಿಯಾಖತ ಲದಾಫ, 5) ಅಲಿ ತಂದೆ ಇಬ್ರಾಹಿಂ ಲದಾಫ, 6) ಮೈಮುದಾ ಗಂಡ ಜಾವೀದ ಲದಾಫ, 7) ಬೀಬೀ ಗಂಡ ಲಿಯಾಖತ ಲದಾಫ, 8) ಪರವಿನ ಗಂಡ ಇಬ್ರಾಹಿಂ ಲದಾಫ, 9) ಸರೀಫಾ ಗಂಡ ರುಸ್ತುಮ ಲದಾಫ ಎಲ್ಲರೂ ಸಾ|| ಶ್ರೀನಿವಾಸ ಸರಡಗಿ ಗ್ರಾಮ ಎಲ್ಲರೂ ಅಕ್ರಮ ಕೂಟ ರಚಿಸಿಕೊಂಡು ಬಂದು ನಮಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ಕಟ್ಟಿಗೆಯಿಂದ ಹೊಡೆದು ರಕ್ತಗಾಯ ಹಾಗೂ ಗುಪ್ತಗಾಯ ಪಡಿಸಿದ್ದು ಅಲ್ಲದೆ ಅಬೀದಾಬೇಗಂ ಇವಳೀಗೂ ಸಹ ಕೈಯಿಂದ ಮೈಕೈಗೆ ಹೊಡೆದು ಗುಪ್ತಗಾಯ ಪಡಿಸಿದ್ದು ಇರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವವಿದ್ಯಾಲಯ ಠಾಣೆ : ಶ್ರೀ ಅಬ್ದುಲ ಜಲೀಲ ತಂದೆ ಖಾಜಾಸಾಬ ಲದಾಫ, ಸಾ|| ಶ್ರೀನಿವಾಸ ಸರಡಗಿ ಇವರು ದಿನಾಂಕ: 06/06/2015 ರಂದು ಬೆಳಿಗ್ಗೆ ನಾನು ಮತ್ತು ನಮ್ಮ ಅಣ್ಣತಮ್ಮಕೀಯ ಫರವೀನ ಗಂಡ ಇಬ್ರಾಹಿಂ, ಶರೀಫಾ ಗಂಡ ರುಸ್ತುಮ, ಕೂಡಿಕೊಂಡು ನಮ್ಮೂರ ಮಜೀದ ಹತ್ತಿರ ರಸ್ತೆಯ ಮೇಲೆ ನಡೆಯುತ್ತಾ ಹೊರಟಾಗ ನಮ್ಮೂರ 1) ಮಹ್ಮದ ತಂದೆ ಶರಫೋದ್ದಿನ ಮುಲ್ಲಾ,  2) ಅನ್ಸರ ತಂದೆ ಬಶೀರಸಾಬ ಮುಲ್ಲಾ 3) ಅಶ್ಪಾಕ ತಂದೆ ಬಶೀರಸಾಬ ಮುಲ್ಲಾ  4) ಸೈಯದ ತಂದೆ ಮಹೆಬೂಬ ಮುಲ್ಲಾ 5) ರಶೀದ ತಂದೆ ಬಾಷುಮಿಯಾ ಮುಲ್ಲಾ 6) ರಫೀಕ ತಂದೆ ರಶೀದ ಮುಲ್ಲಾ  7) ರಜಾಕ ತಂದೆ ಬಾಬುಮಿಯಾ ಮುಲ್ಲಾ, 8) ತೋಲು ತಂದೆ ರಜಾಕ ಮುಲ್ಲಾ  9) ಸಬಾನಾ ಗಂಡ ಮಹ್ಮದ ಶೇಖ ಸಾ|| ಎಲ್ಲರೂ ಶ್ರೀನಿವಾಸ ಸರಡಗಿ ಗ್ರಾಮ ಎಲ್ಲರೂ ಅಕ್ರಮ ಕೂಟ ರಚಿಸಿಕೊಂಡು ಬಂದವರೆ ನಮಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ಅಲ್ಲೆ ಬಿದ್ದ ಹಿಡಿ ಗಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದ್ದು ಇರುತ್ತದೆ. ನಮ್ಮ ಅಣ್ಣತಮ್ಮಕೀಯವರು ಬಿಡಿಸಲು ಬಂದಾಗ ಫರವೀನ ಇವಳಿಗೆ ಮಹ್ಮದ ಈತನು ಅವಾಚ್ಯ ಶಬ್ದಗಳಿಂದ ಬೈದು, ಲೈಂಗಿಕ ಕಿರುಕುಳ ನೀಡಿದ್ದು ಅಲ್ಲದೆ ಸರೀಫಾ ಇವಳಿಗೆ ಕೈಯಿಂದ ಮೈಕೈಗಳಿಗೆ ಹೊಡೆದು ಗುಪ್ತಗಾಯ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.