ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ದಿಗಂಬರ ಅವರಾದೆ ದಿನಾಂಕ 16-09-2011 ರಂದು ರಾತ್ರಿ ಲಾರಿ ನಂ. ಎಂ.ಹೆಚ್.25-ಬಿ. 7878 ನೇದ್ದರ ಬ್ಯಾಟರಿ ಕೆಟ್ಟಿದ್ದರಿಂದ ಅವರಾದ ಕ್ರಾಸ್ ದಾಟಿ ಅರ್ದ ಕೀ.ಮಿ. ಅಂತರದ ಮೇಲೆ ರೋಡಿನ ಸೈಡಿಗೆ ಲಾರಿಯನ್ನು ನಿಲ್ಲಿಸಿ ಬ್ಯಾಟರಿಯನ್ನು ಜೋಡಿಸುತ್ತಿದ್ದಾಗ ಹಿರೊ ಹೊಂಡಾ ಸ್ಪೆಂಡರ್ ಮೋಟಾರ ಸೈಕಲ್ ನಂ. ಕೆ.ಎ. 29.ಹೆಚ್.9250. ನೇದ್ದರ ಚಾಲಕ ಚಿದಾನಂದ ಹಿರೆಮಠ ಇತನು ಮೋಟಾರ ಸೈಕಲನ್ನು ಅತಿ ವೇಗ ಮತ್ತು ಅಲಕ್ದಷತನದಿಂದ ನಡೆಸಿ ಲಾರಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಗಾಯನಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
POLICE BHAVAN KALABURAGI

17 September 2011
Gulbarga District Reported Crimes
ಮಾರಾಟ ಮಾಡಿದ ಮನೆಯಲ್ಲಿ, ತನ್ನ ತಾಯಿಗೆ ಪಾಲು ಕೊಡದ ಕಾರಣ ಅಳಿಯನಿಂದ ಮಾವನ ಕೊಲೆಗೆ ಯತ್ನ :-
ರಾಘವೇಂದ್ರ ನಗರ ಠಾಣೆ :ಶ್ರೀ ಮಹ್ಮದ ಹಸಿನೂದ್ದಿನ್ ರವರು, ಲಾಲಗೇರಿ ಬಡಾವಣೆಯಲ್ಲಿರುವ ನಮ್ಮ ಹಳೆಯ ಮನೆ ಮಾರಾಟ ಮಾಡಿದ್ದು, ಮಾರಾಟ ಮಾಡಿದ ಹಣದಲ್ಲಿ ತನ್ನ ತಾಯಿಗೆ ಪಾಲು ಕೊಡಬೇಕು ಅಂತ, ಚಿತ್ತಾಪೂರ ತಾಲ್ಲೂಕಿನ ಕಾಳಗಿ ಗ್ರಾಮದ ಸಿರಾಜ್ ತಂದೆ ರಸೀದ ಬೇಗ್ ಈತನು ಆಗಾಗ ಜಗಳ ತೆಗೆದಿದ್ದು, ನಾನು ಹಣ ಕೊಡುವದಿಲ್ಲಾ ಅಂತ ಅಂದಿದ್ದಕ್ಕೆ, ಅದೇ ವೈಶಮ್ಯದಿಂದ ದಿನಾಂಕ 16-09-11 ರಂದು ಮದ್ಯಾಹ್ನ 2-30 ಗಂಟೆ ಸಮಯದಲ್ಲಿ ನಮಾಜ್ ಮುಗಿಸಿಕೊಂಡು, ಮಹ್ಮದಿ ಚೌಕ್ ಮದಿನಾ ಕಾಲೋನಿಯಲ್ಲಿರುವ ನನ್ನ ಮನೆಗೆ ಬಂದಾಗ ಹಿಂದಿನಿಂದ ಬಂದ ಸಿರಾಜ್ ತಂದೆ ರಸೀದ ಬೇಗ್ ಈತನು ಅಂಗಿ ಹಿಡಿದು ಹಿಂದಕ್ಕೆ ಜಗ್ಗಿ, ಒಂದು ಜಂಬೆಯಿಂದ ಹೊಟ್ಟೆಗೆ ಹೊಡೆದು ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ :ಶ್ರೀ ರುಕ್ಮೋದ್ದಿನ ತಂದೆ ಅಲಿಸಾಬ ಇನಾಮದಾರ ಸಾ:ಶಾಂತನಗರ ಭಂಕೂರ ಇವರು ಮನೆಯಲ್ಲಿದ್ದಾಗ ತಮ್ಮ ತಮ್ಮಂದಿರಾದ ಬಾಸುಮೀಯಾ ಮತ್ತು ಅಜಗರ ಕೂಡಿ ಹೊಲದ ಮೇಲೆ ನನ್ನ ತಂದೆ ಅಲಿಸಾಬ ಇನಾಮದಾರ ಇವರು ಸಾಲ ತೆಗೆದುಕೊಳ್ಳುವಾಗ ನೀನು ಸಹಿ ಏಕೆ ಮಾಡಿದೆ ಅಂತಾ ಅಂದವರೆ ಅವಾಚ್ಯ ಶಬ್ದಗಳಿಂದ ನಮ್ಮನ್ನು ಬೈದು ಬಾಸುಮೀಯಾ ಇತನು ಹಲ್ಲಿನಿಂದ ಗದ್ದಕ್ಕೆ ಬಲವಾಗಿ ಕಚ್ಚಿದನು ಮತ್ತು ಅಜಗರ ಇತನು ಕಟ್ಟಿಗೆಯಿಂದ ಬಲಗೈ ಅಂಗೈಗೆ ಹೊಡೆದರಿಂದ ನನಗೆ ಗದ್ದಕ್ಕೆ ರಕ್ತಗಾಯ ಬಲಗೈ ಅಂಗೈಗೆ ರಕ್ತಗಾಯ ಹಾಗೂ ಎದುರಿನ ಹಲ್ಲು ಅಲುಗಾಡುತ್ತಿವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ: ದಾಖಲಾಗಿದೆ.