POLICE BHAVAN KALABURAGI

POLICE BHAVAN KALABURAGI

22 June 2017

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಹಮ್ಮದ ದಸ್ತಗೀರ ಪಾಶಾ ತಂದೆ ಮಹಮ್ಮದ ಮಶಾಕ ಶಹಾಬಾದವಾಲೆ ಸಾ; ಇಸ್ಲಾಮಾಬಾದ ಕಾಲೂನಿ ಕಲಬುರಗಿ ಇವರು ದಿನಾಂಕ.21-6-2017 ರಂದು  ಮುಂಜಾನೆ ತನ್ನ ಮೋಟಾರ ಸೈಕಲ್ ನಂ.ಕೆ.ಎ.329796 ನೆದ್ದರ ಮೇಲೆ ತಾನು ಮತ್ತು ತನ್ನ ಮಗ ಮಹಮ್ಮದ ರಿಯಾನ ಇಬ್ಬರು ಕೂಡಿಕೊಂಡು ಹಾಗರಗಾ ಕ್ರಾಸ ಕಡೆಗೆ ಮೊಟಾರ ಸೈಕಲ್ ಮೇಲೆ ಹೋಗುತ್ತಿರುವಾಗ ನಾನು ಮೋಟಾರ ಸೈಕಲ್ ನಡೆಯಿಸುತಿದ್ದು,ನನ್ನ ಮಗ ಮಹಮ್ಮದ ರಿಯಾನ ನನ್ನ ಹಿಂದುಗಡೆ ಕುಳಿತಿದ್ದನು 10-30 ಎ.ಎಂ.ಕ್ಕೆ. ಮಹಮ್ಮದ ರಫೀಕ ಚೌಕ ದಾಟಿ  ಹಾಗರಗಾ ರಿಂಗರೋಡ ಕಡೆಗೆ ಹೋಗುತಿದ್ದಾಗ ಪೀರಬಂಗಾಲಿ ದರ್ಗಾದ ಎದರುಗಡೆ ಹೋಗುತಿದ್ದಾಗ ನನ್ನ ಹತ್ತಿರ ಇದ್ದ ಒಂದು ಸಾಮಾನು ಕೆಳಗೆ ಬಿದ್ದಿದ್ದು ಆಗ ನನ್ನ ಮಗ ಕೆಳಗೆ ಇಳಿದು ಸಾಮಾನು ತೆಗೆದುಕೊಳ್ಳುವಾಗ  ಅದೆ ವೇಳೆಗೆ ನಮ್ಮ ಹಿಂದಿನಿಂದ ಒಂದು ಮೋಟಾರ  ಸೈಕಲ್ ಕೆ.ಎ.32 ಇ.ಬಿ.3983 ನೆದ್ದರಸವಾರನ್ನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನನ್ನ ಮಗನಿಗೆ ಡಿಕ್ಕಿ ಹೊಡೆದನು ಇದರಿಂದ ನನ್ನ ಮಗ ಜೋರಾಗಿ ಕೆಳಗೆ ಬಿದ್ದನು ಆಗ ನಾನು ಓಡುತ್ತಾ ಹೋಗಿ ನನ್ನ ಮಗನಿಗೆ ಎಬ್ಬಿಸಲು ಆತನ  ಬಲಕಿವಿಯ ಹಿಂದುಗಡೆ ತಲೆಗೆ ಭಾರಿ ರಕ್ತಗಾಯ, ಬಲಗಡೆ ಕಿವಿಗೆ ರಕ್ತಗಾಯ, ಎಡಗಾಲು ಮೊಳಕಾಲಿಕೆಳಗೆ ಗಾಯವಾಗಿರುತ್ತದೆ.ಅಷ್ಟರಲ್ಲಿ ಈಘಟನೆಯನ್ನು ನೋಡಿ ಬಂದ ಇಬ್ರಾಹಿಂ ಪಟೇಲ್ ತಂದೆ ಚಾಂದಪಟೇಲ್,ಸೈಯದ ಮಾಜಿದ ಅಲಿ ತಂದೆ ಲಾಯಕ ಅಲಿ ಸಾ; ಎಂ.ಎಸ್.ಕೆ.ಮಿಲ್ಲ ಕಲಬುರಗಿ. ಇವರು ಬಂದಿದ್ದು ಎಲ್ಲರೂ ಕೂಡಿಕೊಂಡು ಬಂದಿದ್ದು ಸದರಿ ಅಪಘಾತ ಪಡಿಸಿದ್ದ ಮೋಟಾರ ಸೈಕಲ್ ಕೆ.ಎ.32 ಇ.ಬಿ.3983 ನೆದ್ದರ ಚಾಲಕ ತನ್ನ ಮೋಟಾರ ಸೈಕಲ್ ಬಿಟ್ಟು ಜನರು ಸೇರುವಷ್ಟರಲ್ಲಿ ಅದರ ಚಾಲಕ ಮೋಟಾರ ಸೈಕಲ್ ಬಿಟ್ಟು ಓಡಿಹೋಗಿರುತ್ತಾನೆ ಸದರಿಯವನಿಗೆ ನೋಡಿದ್ದಲ್ಲಿ ಗುರ್ತಿಸುತ್ತೇನೆ.ನಂತರ ನಾನು ಮತ್ತು ಇಬ್ರಾಹಿಂಪಟೇಲ್ ತಂದೆಚಾಂದಪಟೇಲ್,ಸೈಯದ ಮಾಜಿದ ಅಲಿ ತಂದೆ ಲಾಯಕ ಅಲಿ ಸಾ; ಎಂ.ಎಸ್.ಕೆ.ಮಿಲ್ಲ ಕಲಬುರಗಿ ಮೂರು ಜನರು ಕೂಡಿಕೊಂಡು ಒಂದು ಆಟೊರಿಕ್ಷಾದಲ್ಲಿ ನನ್ನ ಮಗನಿಗೆ ಕೂಡಿಸಿಕೊಂಡು ಉಪಚಾರ ಕುರಿತು ಎ.ಎಸ್.ಎಂ. ಆಸ್ಪತ್ರೆ ಕರದುಕೊಂಡು ಬಂದು ಸೇರಿಕೆ ಮಾಡಿದ್ದು ನನ್ನ ಮಗ ರಿಯಾನ ತಂದೆ  ದಸ್ತಗೀರ ಪಾಶಾ ವಯ;6 ವರ್ಷ  ಇತನು ಎ.ಎಸ್.ಎಂ. ಆಸ್ಪತ್ರೆಯಲ್ಲಿ   ಇತನು ಉಪಚಾರ ಪಡೆಯುತಿದ್ದು, ಉಪಚಾರದಲ್ಲಿ  ಗುಣಮುಖನಾಗದೆ ದಿನಾಂಕ 22-06-2017 ರಂದು 00-30 ಎ.ಎಂ.ಕ್ಕೆ.  ಎ.ಎಸ್.ಎಂ. ಆಸ್ಪತ್ರೆಯಲ್ಲಿ  ಮೃತ ಪಟ್ಟಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಶಾಹಾಬಾದ ನಗರ ಠಾಣೆ : ದಿನಾಂಕ 21/06/2017 ರಂದು ಶಹಾಭಾದ ಪಟ್ಟಣದ ಹೊನಗುಂಟಾ ಕ್ರಾಸ್ ಹತ್ತಿರ ಹಣಮಂತ್ರಾಯ ತಂದೆ ನಾಗಣ್ಣ ಮರಬೋಳಿ ಈತನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ್ ಬರೆದ ಚೀಟಿ ಕೊಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಿ.ಐ. ಶಾಹಾಬಾದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ ಧಾಳಿ ಮಾಡಿ ಹಣಮಂತ್ರಾಯ ಈತನಿಂದ ಮಟಕಾ ಜೂಜಾಟಕ್ಕೆ ಸಂಬಂದಪಟ್ಟ ನಗದು ಹಣ 320 /- ರೂ ಹಾಗೂ ಒಂದು ಮಟಕಾ ನಂಬರ್ ಬರೆದ ಚೀಟಿ , ಮತ್ತು ಒಂದು ಬಾಲ ಪೆನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು  ಸದರಿಯವನೊಂದಿಗೆ ಮರಳಿ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ನೀಲಮ್ಮ ಗಂಡ ಚಂದ್ರಕಾಂತ ಕಂಟಿಕರ್‌ ಸಾ: ಹಾಗರಗುಂಡಗಿ ಇವರು ದಿನಾಂಕ 19/06/2017 ರಂದು ಸಾಯಂಕಾಲ 7 ಗಂಟೆಯ ಸುಮಾರಿಗೆ  ನಾನು ಮನೆಯಲ್ಲಿದ್ದು ಗಂಡ ಚಂದ್ರಕಾಂತ ಇವರು ಹೊರಗಡೆ ಹೋಗಿದ್ದಾಗ ಅದೇ ಸಮಯಕ್ಕೆ ನಮ್ಮ ಮನೆಯ ಮುಂದೆ  ಯಾರೋ ನನ್ನ ಹೆಸರಿನಿಂದ ಕರೆದಾಗ ನಾನು ಮನೆಯ ಹೊರಗೆ ಬಂದು ನೋಡಿದಾಗ ಮನೆಯ ಮುಂದೆ ನಮ್ಮೂರಿನ  ಜಗಪ್ಪ ತಂದೆ ಶಿವಶರಣಪ್ಪ ಹುಣಚಗೇರಿ ಆತನ ತಮ್ಮ ಮರೇಪ್ಪಾ ಇಬ್ಬ ರುಯಿದ್ದು ಅವರಲ್ಲಿ ಜಗಪ್ಪ ಬೋಸಡಿ ಮಗಳೇ ನಿನ್ನ ತಮ್ಮನ ಹತ್ತಿರ 22000/- ರೂಪಾಯಿಗಳು ತೆಗೆದು ಕೊಂಡ ವಿಷಯ ನಮ್ಮ ತಾಯಿಗೆ ಯಾಕೆ ಹೇಳಿದ್ದಿ ರಂಡಿ ಮಗಳೇ ಅಂತಾ ಅವ್ಯಾಚ್ವವಾಗಿ ಬೈದು ನನ್ನ ಕೈ ಹಿಡಿದು ಜಗ್ಗಿ ಕೈಗಳಿಂದ ನನ್ನ ಎಡ ಕಿವಿಯ ಹತ್ತಿರ, ಬಲ ಬುಜದ ಹತ್ತಿರ, ಬೆನ್ನ ಹಿಂದೆ ಹೊಡೆದು ಕಾಲಿನಿಂದ ನನ್ನ ಹೊಟ್ಟೆಯ ಕೆಳಭಾಗದಲ್ಲಿ ಒದ್ದು ಗುಪ್ತಗಾಯ  ಪಡಿಸಿದನು. ಅವರಿಂದ ಬಿಡಿಸಿಕೊಂಡು ಹೋಗಲು ಪ್ರಯತ್ನಿಸಿದಾಗ ಮರೆಪ್ಪಾ ಈತನು ನನ್ನ ಸೀರೆ ಹಿಡಿದು ಎಳೆದು ಮಾನ ಭಂಗ ಮಾಡಲು ಪ್ರಯತ್ನ ಮಾಡಿ ರಂಡಿ  ನೀನು ನಮ್ಮ ಮನೆಗೆ ಬಾ ಹಣಕೊಡುತ್ತೇವೆ ಅಂತಾ ಬೈಯು ತ್ತಿರುವಾಗ ವಿಷಯ ಗೊತ್ತಾಗಿ ನನ್ನ ಗಂಡ ಓಡಿ ಬಂದು ಯಾಕೆ ನನ್ನ ಹೆಂಡತಿಗೆ ಹೊಡೆಯುತ್ತಿದ್ದಿರಿ  ಅಂತಾ ಕೇಳಿದ್ದಕ್ಕೆ ಇಬ್ಬರು ನನ್ನ ಗಂಡನಿಗೂ ಕಪಾಳ ಮೇಲೆ ಹೊಡೆದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.