POLICE BHAVAN KALABURAGI

POLICE BHAVAN KALABURAGI

16 May 2014

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕ 16-05-2014 ರಂದು 12:00 ಎ.ಎಂ ಕ್ಕೆ ಎಂ.ಬಿ ನಗರ ಠಾಣಾ ಸರಹದ್ದಿನಲ್ಲಿ ಬರುವ ಅಣ್ಣೆಮ್ಮಾ ನಗರದ ರೋಡಿಗೆ ಇರುವ ಗಣೇಶ ಗುಡಿಯ ಮುಂದೆ ಗಾರ್ಡನ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಕೆಲವು ಜನರು ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಹಣಕ್ಕೆ ಪಣ ಹಚ್ಚಿ ಆಡುತ್ತಿದ್ದವರ ಮೇಲೆ ಪಿ.ಎಸ್.ಐ. ಎಮ್.ಬಿ.ನಗರ ಹಾಗು ಸಿಬ್ಬಂದಿಯವರೊಂದಿಗೆ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 04 ಜನರನ್ನು ಹಿಡಿದು ವಿಚಾರಿಸಲು 1. ಪ್ರದೀಪ ಕುಮಾರ ತಂದೆ ಅಣ್ಣಪ್ಪಾ ಬೆಳಮಗಿ ಸಾಃ ಸುಂದರ ನಗರ ಗುಲಬರ್ಗಾ 2.  ಜಗನ್ನಾಥ ತಂದೆ ಮಲಕಾಜಪ್ಪಾ ಜೇವರ್ಗಿ ಸಾಃ ತಿಲಕ ನಗರ ಗುಲಬರ್ಗಾ 3. ಶಿವರಾಜ ತಂದೆ ಪೀರಪ್ಪಾ ತಳವಾರ ಸಾಃ ಯಮುನಾ ನಗರ ಗುಲಬರ್ಗಾ 4.ವಿರೇಂದ್ರ @ ವೀರಭದ್ರಪ್ಪಾ ತಂದೆ ಸಿದ್ರಾಮ್ @ ಶರಣಪ್ಪಾ ವಾಲಿ ಸಾಃ ಓಂ ನಗರ  ಗುಲಬರ್ಗಾ ರವರನ್ನು ವಶಕ್ಕೆ ತೆಗೆದುಕೊಂಡು ಸದರಿ ಆರೋಪಿತರಿಂದ 7,400/- ರೂ. ಹಾಗು 52 ಇಸ್ಪೇಟ್ ಎಲೆಗಳು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಚಾಂದ ತಂದೆ ಬಾಷಾಸಾಬ ಬನ್ನಟ್ಟಿಕರ ಸಾ : ಅಫಜಲಪೂರ ಇವರು ಸುಮಾರು 8 ವರ್ಷಗಳಿಂದ ಏರಟೆಲ್ ಕಂಪನಿವತಿಯಿಂದ ಅಫಜಲಪೂರ ಪಟ್ಟಣದ ಏರಟೆಲ್ ಸಿಮ್ ಮತ್ತು ಕರೆನ್ಸಿ ವಿತರಕ ಕೆಲಸ ಮಾಡಿಕೊಂಡು ಬಂದಿದ್ದು  ಈ ಮೊದಲು ನಮ್ಮ ಆಫೀಸ ನಮ್ಮ ಮನೆಯಲ್ಲಿದ್ದು, ಸದ್ಯ ಸುಮಾರ 8 ತಿಂಗಳುಗಳಿಂದ ಅಫಜಲಪೂರ ಬಸ್ಸ ನಿಲ್ದಾಣದ ಪಕ್ಕದಲ್ಲಿ ಜಾಗಿರ್ದಾರ ರವರ ಲೇಔಟನಲ್ಲಿ ನನ್ನ ಆಫೀಸ ಇರುತ್ತದೆ. ರಿಟೇಲರ ಮತ್ತು ಗ್ರಾಹಕರಿಂದ ಸಂದಾಯವಾದ ಹಣವನ್ನು 2-3 ದಿನಕೊಮ್ಮೆ ಕಂಪನಿ ಅಕೌಂಟಿಗೆ ಬ್ಯಾಂಕಿನಲ್ಲಿ ಜಮಾ ಮಾಡುತ್ತಾ ಬಂದಿರುತ್ತೇನೆ. ನಮ್ಮ ಆಫಿಸನಲ್ಲಿ ಆಯಿಶಾ ತಂದೆ ಮುಸ್ತಫಾ ಮನಿಯಾರ ಇವರು ಸೇಲ್ಸ್ ಕೆಲಸ ಮಾಡುತ್ತಿದ್ದು, ಆಸೀಫ ತಂದೆ ಹಾರುನಸಾಬ ಪಟೇಲ ಇವರು ರಿಟೇಲರ ಕಡೆಯಿಂದ ಹಣ ಸಂದಾಯ ಮಾಡಿಕೊಂಡು ನಮ್ಮ ಹತ್ತಿರ ಜಮಾ ಮಾಡುತ್ತಾರೆ. ನಾನು ದಿನಾಲು ರಾತ್ರಿ 8;00 ಗಂಟೆಯ ಸುಮಾರಿಗೆ ನನ್ನ ಆಪೀಸ ಬಂದ ಮಾಡಿಕೊಂಡು ಹೊಗುತ್ತೇನೆ. ದಿನಾಂಕ 14-05-2014 ರಂದು ಆಸೀಫ ಇವನು 54,500/- ರೂ ಸಂದಾಯ ಮಾಡಿಕೊಂಡು ತಂದು ಕೊಟ್ಟಿರುತ್ತಾರೆ. ನಮ್ಮ ಆಫೀಸನಲ್ಲಿ ರಿಚಾರ್ಜ ಮಾಡಿದ ಹಣ 26,930/- ಇರುತ್ತವೆ, ಕರಜಗಿ ಗ್ರಾಮದ ಸಬ್ ಡಿಸ್ಟ್ರೂಬೂಟರ ಅಬ್ದುಲ್ ಮಲ್ಲಾಬಾದ ಇವರಿಗೆ ಹಾಕಿದ ಕರೆನ್ಸಿ ಹಣ 35,000/- ರೂ ತಂದು ಕೊಟ್ಟಿರುತ್ತಾರೆ, ಹಾಗು ತೆಲ್ಲೂರ ಗ್ರಾಮದ ಸಬ್ ಡಿಸ್ಟ್ರೂಬೂಟರ ಮಹಿಬೂಬಶಾ ಇವರಿಗೆ ಹಾಕಿದ ಕರೆನ್ಸಿ ಹಣ 22,000/- ರೂ ತಂದು ಕೊಟ್ಟಿರುತ್ತಾರೆ. ಹೀಗೆ ಒಟ್ಟು 1,38,430/- ರೂ ಸಂದಾಯ ವಾಗಿದ್ದು ಇರುತ್ತದೆ. ಸದರಿ ಹಣವನ್ನು ನಮ್ಮ ಆಫೀಸನಲ್ಲೆ ಟೇಬಲ್ ಡ್ರಾದಲ್ಲಿ ಇಟ್ಟು ರಾತ್ರಿ 8;00 ಗಂಟೆ ಸುಮಾರಿಗೆ ಆಫಿಸ ಮುಚ್ಚಿ ಸೆಟರಗೆ ಕೀಲಿ ಹಾಕಿ ಮನೆಗೆ ಹೋಗಿರುತ್ತೇನೆ ಮರು ದಿನ ಬೆಳಿಗ್ಗೆ 07;00 ಗಂಟೆಗೆ ಸುಮಾರಿಗೆ ನಮ್ಮ ಆಫೀಸ ಪಕ್ಕದಲ್ಲಿ ಇರುವ ಟೇಲರ ಅಂಗಡಿಯ ಗೋಪಾಲ ಬಿಂಗೆ ಇವರು ನನಗೆ ಫೋನ ಮಾಡಿ ನಿಮ್ಮ ಆಫಿಸ ಸೆಟರ ಬೆಂಡಾಗಿರುತ್ತದೆ ಅಂತಾ ಹೇಳಿದರು. ಆಗ ನಾನು ಗಾಬರಿಯಾಗಿ ನಮ್ಮ ಆಫೀಸಿಗೆ ಬಂದು ನೋಡಲಾಗಿ ಆಫೀಸ ಸೆಟರ್ ಬೆಂಡ ಮಾಡಿ ಮೇಲೆ ಎತ್ತಿದ್ದು ಕಂಡಿತು ನಾನು ಆಫೀಸ ಒಳಗೆ ಹೋಗಿ ನೋಡಲಾಗಿ ಡ್ರಾದಲ್ಲಿ ಇಟ್ಟಿದ್ದ ಹಣ 1,38,430/- ರೂ ಇದ್ದಿರಲಿಲ್ಲ. ಆ ಹಣವನ್ನು ದಿನಾಂಕ 14, 15-05-2014 ರ ಮದ್ಯ ರಾತ್ರಿವೇಳೆಯಲ್ಲಿ ಯಾರೋ ಕಳ್ಳರು ಕಳುವುಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ :  ಶ್ರೀ ದತ್ತು ತಂದೆ ಖಂಡು ಸಿಂದೆ  ಸಾ : ಉಡಚಾ ಹಟ್ಟಿ ರವರು ದಿನಾಂಕ 15-05-2014 ರಂದು 4;30 ಪಿ.ಎಂ ಸುಮಾರಿಗೆ ನಾನು ನಮ್ಮ ಮನೆಗೆ ಹೋಗುವಾಗ ದೋಂಡಿಬಾ ಗೌಡೆ ರವರ ಮನೆಯ ಹತ್ತಿರ ನಮ್ಮ ಎರಡನೆ ಅಣ್ಣತಮ್ಮಕಿಯವನಾದ ಹುಚ್ಚಪ್ಪ ತಂದೆ ಸುಕ್ಕಣ್ಣ ಸಿಂದೆ ಮತ್ತು ಧರೆಪ್ಪ ತಂದೆ ಮಾಣಿಕ ಸಿಂದೆ ಇವರು ಬಂದು ನನಗೆ ತಡೆದು ನಿಲ್ಲಿಸಿ ಹುಚ್ಚಪ್ಪ ಇವನು ಏ ಭೋಸಡಿ ಮಗನಾ ದತ್ಯಾ ನಿನಗ ಎಷ್ಟುಸಲ ಹೇಳಬೇಕೋ, ನಿಮ್ಮ ತಮ್ಮನ ಮಗ ಖರಿದಿ ಮಾಡಿದ ಆಸ್ತಿಯನ್ನು ನನ್ನ ಹೆಸರಿಗೆ ಮಾಡೋ ಅಂತಾ ಹೇಳಿದರು ಕೇಳುತ್ತಿಲ್ಲಾ ಅಂತಾ ಅಂದನು ಆಗ ನಾನು ಆಸ್ತಿ ನನ್ನ ತಮ್ಮನ ಮಗನಿಗೆ ಸೇರಿದ್ದು ಇರುತ್ತದೆ, ಅದಕ್ಕು ನನಗು ಸಂಬಂಧ ಇರುವುದಿಲ್ಲ ಅಂತಾ ಅಂದಾಗ ಹುಚ್ಚಪ್ಪ ಇವನು ಅಲ್ಲೆ ಬಿದ್ದಿದ ಕಲ್ಲನ್ನು ತೆಗೆದುಕೊಂಡು ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದನು, ಅವನೊಂದಿಗೆ ಬಂದಿದ ಅವನ ತಮ್ಮನ ಮಗ ಧರೆಪ್ಪ ತಂದೆ ಮಾಣಿಕ ಸಿಂದೆ ಇವನು ನನ್ನ ಕೈ ತಿರುವಿ ಬೆನ್ನಿನ ಮೇಲೆ ಹೊಡೆದನು, ಆಗ ಹುಚ್ಚಪ್ಪ ಇವನು ಈಮಗನಿಗೆ ಇವತ್ತ ಬಿಡಬ್ಯಾಡ ಹೊಡೆದು ಖಲಾಸ ಮಾಡು ಅಂತಾ ಜೀವದ ಭೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.