POLICE BHAVAN KALABURAGI

POLICE BHAVAN KALABURAGI

10 July 2016

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 08-07-2016 ರಂದು ಅಫಜಲಪೂರ ಪಟ್ಟಣದ ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸಥಳದಲ್ಲಿ ಮಟಕಾ ಜೂಜಾಟದಲ್ಲಿ ನಿರತವಾದ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಒಬ್ಬನನ್ನು ಹಿಡಿದು ಅವನ ಹೆರು ವಿಚಾರಿಸಲು ರಮೇಶ ತಂದೆ ಮೈಲಪ್ಪ ಪಾಟಿಲ ಸಾ|| ಅಫಜಲಪೂರ ಅಂತಾ ತಿಳಿಸಿದ್ದು ಸದರಿಯವನಿಂದ ಜೂಜಾಟಕ್ಕೆ ಬಳಸಿದ ನಗದು ಹಣ 2200/- ರೂ ಹಾಗು ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಮತ್ತು ಬಾಲಪೆನ್ನ ಹಾಗು ಒಂದು ಮೊಬೈಲ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.