POLICE BHAVAN KALABURAGI

POLICE BHAVAN KALABURAGI

11 November 2015

Kalaburagi District Reported Crimes

ಕೊಲೆ ಯತ್ನ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ: ಶ್ರೀ ರಶೀದ್ ತಂದೆ ಮುನ್ನು ಆಳಂದಕರ ಉ||ಸೆಂಟ್ರಿಂಗ್ ಕೆಲಸ ಸಾ|| ಅಫಜಲಪೂರ  ರವರು ದಿನಾಂಕ 10/11/2015 ರಂದು ಅಫಜಲಪೂರ ಪಟ್ಟಣದಲ್ಲಿ ಮುಸ್ಲೀಮ್ ಸಮಾಜದ ಮತ್ತು  ಟಿಪ್ಪು ಸುಲ್ತಾನ ಸಂಘ ತಾಲೂಕ ಘಟಕದ ಅಧ್ಯಕ್ಷರಾದ ಸೋಹೆಲ ಪಟೇಲ ರವರ ನೇತೃತ್ವದಲ್ಲಿ ಟಿಪ್ಪು ಸುಲ್ತಾನ ಜಯಂತಿ ಉತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು. ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ನಮ್ಮ ಸಮಾಜದ ಸೊಂದು ದಪೆದಾರ, ಬಾಬುಪಟೇಲ ಸೆಂಟ್ರಿಂಗ್,ಮಹ್ಮದ್ ಮುಜಾವರ ರವರೇಲ್ಲ ಹಾಗೂ ನಮ್ಮ ಸಮಾಜದ ಇನ್ನೂ ಇತರರು  ಮೆರವಣಿಗೆ ಜೊತೆಗೆ ಇದ್ದಾಗ ಮೆರವಣಿಗೆ ತಹಸಿಲ ಕಾರ್ಯಾಲಯದಿಂದ ಮೆರವಣಿಗೆ ಪ್ರಾರಂಭವಾಗಿ ಅಂಬೇಡ್ಕರ ವೃತ್ತದ ಮುಖಾಂತರ ಬಸ್ ನಿಲ್ದಾಣದ ಮುಂದಿನಿಂದ ಮದ್ಯಾಹ್ನ 1.45 ಗಂಟೆ ಸುಮಾರಿಗೆ ಸಿದ್ದರಾಮೇಶ್ವರ ಮಂದಿರದ ಹತ್ತಿರ ಬಂದಾಗ ಸುನೀಲ ಶೆಟ್ಟಿ ಮುಂದಾಳತ್ವದಲ್ಲಿ  1) ನಿಂಗಣ್ಣ ಗುಣಾರಿ 2)ಶ್ರೀಶೈಲ ಕೊರಳ್ಳಿ 3) ಸಿದ್ದು ನಾಗಣಸೂರ 4) ಬಸವರಾಜ ಮ್ಯಾಳೇಸಿ 5) ಶಂಕರ ಕೊರಳ್ಳಿ 6) ಬಸವರಾಜ ಬಿರಾದಾರ 7) ಸಂತೋಷ ಬಿರಾದಾರ 8) ಮಲ್ಲು ಮ್ಯಾಳೇಸಿ 9) ಭೀಮಶ್ಯಾ ಮ್ಯಾಳೆಸಿ 10) ರಾಜು ಬಿಲ್ಲಾಡ 11) ಧನು ಕಲಕೇರಿ 12) ನಾಗು ರಾಠೋಡ 13) ರವಿ ಬುಜರಿ 14) ಧನು ಕೆಂಗನಾಳ 15) ಮಲ್ಲು ಹಾದಿಮನಿ 16) ನಾಗು ನಿಂಬಾಳ 17) ಪ್ರವೀಣ ರಾಂಪೂರ 18) ಸಂತೋಷ ಮ್ಯಾಳೇಸಿ 19) ಅನಿಲ ಮಾಲಿ ಪಾಟೀಲ 20) ಅಭಯ ಕಲಶೇಟ್ಟಿ 21) ಸಚೀನ ಹಾದಿಮನಿ22) ಪಪ್ಪು ನಂದಿ 23) ಶರಣು ಡಾಂಗೆ 24) ನಾಗಯ್ಯ ಸ್ವಾಮಿ 25) ಸಿದ್ದು ಉಡಚಣ 26) ಕಂಟೇಪ್ಪಾ ಹಳಮನಿ 27) ಸಂತೋಷ ಲೊಕಂಡೆ 28) ಸುರೇಶ ಅಂದೋಡಗಿ ಇನ್ನಿತರರು ಗುಂಪು ಕಟ್ಟಿಕೊಂಡು ಕೈಗಳಲ್ಲಿ ಕಲ್ಲುಗಳು ಹಿಡಿದುಕೊಂಡು ಬಂದವರೆ ಟಿಪ್ಪು ಸುಲ್ತಾನರ ಮೆರವಣಿಗೆಗೆ ವಿರೋಧ ವ್ಯಕ್ತಪಡಿಸಿ ನಾವು ವಿರೋಧ ವ್ಯಕ್ತ ಪಡಿಸಿದರು ಮೆರವಣಿಗೆ ಮಾಡುತ್ತಿದ್ದಾರೆ. ಅಂತ ಬೈದು ಸುನಿಲ ಶೇಟ್ಟಿ ಎಂಬಾತನು ಕಲ್ಲುಗಳಿಂದ ಹೊಡೆದು ಖಲಾಸ ಮಾಡೋಣ ಅಂತ ಬೈಯುತ್ತ ಕೊಲೆ ಮಾಡುವ ಉದ್ದೇಶದಿಂದ ನನ್ನ ಮೇಲೆ ಕಲ್ಲು ತೂರಾಟ ಮಾಡಿರುತ್ತಾರೆ  ಸದರಿ ಘಟನೆಯಲ್ಲಿ ನನ್ನ ಎಡಗಲ್ಲದ ಮೇಲೆ ಕಲ್ಲಿನ ಹೊಡೆತ ಬಿದ್ದು ಭಾರಿ ರಕ್ತ ಗಾಯ ಮತ್ತು ಒಳಪೆಟ್ಟುಗಳಾಗಿ  ಹಲ್ಲು ಅಲುಗಾಡುತಿರುತ್ತವೆ.  ಮತ್ತು ಬೆನ್ನಿನ ಮೇಲೆ ಕಾಲಿನ ಮೇಲೆ ಅಲ್ಲಲ್ಲಿ ಗುಪ್ತ ಪೆಟ್ಟುಗಳು ಆಗಿರುತ್ತವೆ ಮತ್ತು ಬಂದೊಬಸ್ತ ಕರ್ತವ್ಯದಲಿದ್ದ ಪೊಲೀಸನವರಲ್ಲಿ ಕೆಲವರಿಗೆ ರಕ್ತಗಾಯ ಮತ್ತು ಒಳಪೆಟ್ಟುಗಳಾಗಿರುತ್ತವೆ. ಸದರಿಯವರು ನಾವು ಆಚರಿಸುತಿದ್ದ ಟಿಪ್ಪು ಸುಲ್ತಾನರ ಜಂಯತಿ ಉತ್ಸವಕ್ಕೆ ವಿರೋಧ ವ್ಯಕ್ತಪಡಿಸಿ ಗುಂಪು ಕಟ್ಟಿಕೊಂಡು ಕೈಗಳಲ್ಲಿ ಕಲ್ಲುಗಳು ಹಿಡಿದುಕೊಂಡು ಬಂದು ನನಗೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವ ಉದ್ದೇಶದಿಂದ ಕಲ್ಲು  ತೂರಾಟ ಮಾಡಿ ಭಾರಿ ರಕ್ತಗಾಯ ಮತ್ತು ಒಳಪೆಟ್ಟುಗಳು ಪಡಿಸಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶಧ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಪೊಲೀಸರ ಕರ್ತವ್ಯಕ್ಕೆ ಅಡೆ-ತಡೆ ಮತ್ತು ಕೊಲೆ ಯತ್ನ ಪ್ರಕರಣ
ಅಫಜಲಪೂರ ಪೊಲೀಸ್ ಠಾಣೆ: ಶ್ರೀ ಮಲ್ಲಿಕಾರ್ಜುನ ತಂದೆ ಗುರುಶಾಂತಪ್ಪ ಸೊಡ್ಡಗಿ ಜಿಲ್ಲಾ ಮಿಸಲು ಪೊಲೀಸ್ ಪಡೆ ಮುಖ್ಯ ಪೇದೆ ಎಹೆಚ್ ಸಿ-175 ಡಿಎಆರ್ ವ್ಯಾನ್ ಸಂಖ್ಯೆ ಕೆಎ-32 ಜಿ-263 ನೇದ್ದರ ಚಾಲಕ ರವರು ದಿನಾಂಕ 10/11/2015 ರಂದು ಬೆಳಿಗ್ಗೆ 08.00 ಗಂಟೆ ಸುಮಾರಿಗೆ ಮಾನ್ಯ ಎಸ್ ಪಿ ಸಾಹೇಬರು ಕಲಬುರಗಿ ರವರ ಆದೇಶದ ಮೇರೆಗೆ ಜಿಲ್ಲಾ  ಪೊಲೀಸ್ ಕಂಟ್ರೋಲ್ ರೂಮ್ ನಿಂದ  ಅಫಜಲಪೂರ ಪಟ್ಟಣದಲ್ಲಿ ಜರುಗಲಿರುವ ಟಿಪ್ಪು ಸುಲ್ತಾನ ಜಯಂತಿ ಉತ್ಸವ ಕಾರ್ಯಕ್ರಮದ ಬಂದೊಬಸ್ತ ಕರ್ತವ್ಯ ಕುರಿತು. ಬೆಳಿಗ್ಗೆ 10.00 ಗಂಟೆ ಸುಮಾರಿಗೆ ಅಫಜಲಪೂರ ಪೊಲೀಸ ಠಾಣೆಗೆ ಬಂದು ಸಿಪಿಐ ಅಫಜಲಪೂರರವರ ಮುಂದೆ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದು. ನಮ್ಮ ಪಾರ್ಟಿ ಇನಚಾರ್ಜ ಹಣಮಂತ ಎಹೆಚ್ ಸಿ-51 ಇನ್ನಿತರ ಸಿಬ್ಬಂದಿಯವರಾದ ನಾಗಶೇಟ್ಟಿ ಹೆಚ್ ಸಿ , ಬಸವರಾಜ ಕೊಳಕುಂದಾ ಹೆಚ್ ಸಿ ಮತ್ತು ಶಿವಶರಣ ಹೆಚ್ ಸಿ ರವರೇಲ್ಲರು ನಮ್ಮ ಡಿಎಆರ್ ವ್ಯಾನ  ಸಂಖ್ಯೆ ಕೆಎ-32 ಜಿ-263 ನೇದ್ದರಲ್ಲಿ ಬಂದೋಬಸ್ತ ಕುರಿತು ತಹಸಿಲ ಕಾರ್ಯಾಲಯ ಹತ್ತಿರ ಹೋಗಿದ್ದು. ನಮ್ಮಂತೆ ಸದರಿ ಬಂದೊಬಸ್ತ ಕರ್ತವ್ಯಕ್ಕೆ ಅಫಜಲಪೂರ ವೃತ್ತದ ಸಿಪಿಐ ಸಾಹೇಬರಾದ ಶ್ರೀ ಸಂಗಮೇಶ ಪಾಟೀಲ, ಶ್ರೀ ಪ್ರದೀಪ ಕೊಳ್ಳಾ ಪಿಎಸ್ಐ ರೇವೂರ ಠಾಣೆ, ಶ್ರೀ ಪಂಡಿತ ಸಗರ ಪಿಎಸ್ಐ ಡಿಸಿಐಬಿ ಕಲಬುರಗಿ ಹಾಗೂ ಶ್ರೀ ಭೀಲೂ ಜಾಧವ ಎಎಸ್ಐ , ಶ್ರೀಮಂತ ಎಎಸ್ಐ, ವಿಶ್ವನಾಥ ಎಎಸ್ಐ ಮತ್ತು ಸಿಬ್ಬಂದಿಯವರಾದ ಚಂದ್ರಕಾಂತ ಹೆಚ್ ಸಿ-449, ಕಮಲು ಹೆಚ್ ಸಿ -330, ಮಾರುತಿ ಹೆಚ್ ಸಿ-312,ರಾಮಚಂದ್ರ ಹೆಚ್ ಸಿ-110, ಮಲ್ಲಿಕಾರ್ಜುನ ಹೆಚ್ ಸಿ-218, ಶಿವಶರಣಪ್ಪ ಸಿಪಿಸಿ-361,  ಇಮಾಮ ಸಿಪಿಸಿ-933, ಇನಿಯುಸ ಕಸಬ ಸಿಪಿಸಿ-1234, ಸುರೇಶ ಸಿಪಿಸಿ-801, ವಿಠ್ಠಲ ಸಿಪಿಸಿ-820, ಅಕ್ತರ ಪಟೇಲ ಸಿಪಿಸಿ-623, ಶಾಂತಪ್ಪ ಸಿಪಿಸಿ-364, ಚಂದ್ರಶ್ಯಾ ಸಿಪಿಸಿ-903 ಹಾಗೂ ಇನ್ನಿತರ ಸಿಬ್ಬಂದಿಯವರು ಬಂದೊಬಸ್ತ ಕರ್ತವ್ಯದಲ್ಲಿ ಇದ್ದಾಗ ಇದ್ದಾಗ ಮೆರವಣಿಗೆ ತಹಸಿಲ ಕಾರ್ಯಾಲಯದಿಂದ ಮೆರವಣಿಗೆ ಪ್ರಾರಂಭವಾಗಿ ಅಂಬೇಡ್ಕರ ವೃತ್ತದ ಮುಖಾಂತರ ಬಸ್ ನಿಲ್ದಾಣದ ಮುಂದಿನಿಂದ ಮದ್ಯಾಹ್ನ 1.45 ಗಂಟೆ ಸುಮಾರಿಗೆ ಸಿದ್ದರಾಮೇಶ್ವರ ಮಂದಿರದ ಹತ್ತಿರ ಬಂದಾಗ ಸಿದ್ದರಾಮೇಶ್ವರ ಮಂದಿರದ ಕ್ರಾಸ್ ಹತ್ತಿರ ಹೋಗಿ ನಮ್ಮ ವ್ಯಾನ ನಿಲ್ಲಿಸಿ ನಾನು ವ್ಯಾನಿನಲ್ಲಿಯೇ ಕುಳಿತಿದ್ದು ಇನ್ನುಳಿದವರೆಲ್ಲರೂ ಕೆಳಗಿಳಿದು ವ್ಯಾನ ಹತ್ತಿರ ನಿಂತಿದ್ದಾಗ ಸಿದ್ದರಾಮೇಶ್ವರ ಗುಡಿಯ ಪಕ್ಕದ ದಾರಿಯಿಂದ ಸುಮಾರು 35ರಿಂದ 40 ಜನರು ಕಾನೂನು ಬಾಹಿರವಾಗಿ ಗುಂಪು ಕಟ್ಟಿಕೊಂಡು ಕೈಗಳಲ್ಲಿ ಕಲ್ಲುಗಳು ಹಿಡಿದುಕೊಂಡು ಬಂದವರೆ ಟಿಪ್ಪು ಸುಲ್ತಾನರ ಮೆರವಣಿಗೆಗೆ ವಿರೋಧ ವ್ಯಕ್ತಪಡಿಸಿ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಪೊಲೀಸ್ ನವರು ಟಿಪ್ಪು ಸುಲ್ತಾನ ಜಯಂತಿ ಉತ್ಸವ ಆಚರಣೆ ಮಾಡುತಿದ್ದವರಿಗೆ ಸಪೊರ್ಟ ಮಾಡುತ್ತಿದ್ದಾರೆ . ಎನ್ನುತ್ತಾ ನನ್ನ ಹಾಗೂ ನಮ್ಮ ಸಿಬ್ಬಂದಿಯವರ ಕೊಲೆ ಮಾಡುವ ಉದ್ದೇಶದಿಂದ ಕಲ್ಲು ತೂರಾಟ ಮಾಡಿದ್ದು. ಕಲ್ಲು ತೂರಾಟದಲ್ಲಿ ಕಲ್ಲು ನೇರವಾಗಿ ನನ್ನ ತಲೆಗೆ ಹೊಡೆದಾಗ ನಾನು ಪಕ್ಕಕ್ಕೆ ಸರಿದಾಗ ಸದರಿ ಕಲ್ಲು ನಮ್ಮ ವ್ಯಾನಿನ ಮುಂಭಾಗದ ದೊಡ್ಡ ಗ್ಲಾಸಿಗೆ ಬಡಿದು ಗ್ಲಾಸ ಜಖಂ ಗೊಂಡು ಸುಮಾರು 9,600/-ರೂ ಕಿಮ್ಮತ್ತಿನಷ್ಟು ಹಾನಿ ಯಾಗಿರುತ್ತದೆ. ಸದರಿಯವರು ನಮ್ಮ ವ್ಯಾನಿನ ಮೇಲೆ ಕಲ್ಲು ಎಸೆದಾಗ  ನಾನು ಪಕ್ಕಕ್ಕೆ ಸರಿಯದಿದ್ದರೆ ಸದರಿ ಕಲ್ಲಿನ ಹೊಡೆತ ನನ್ನ ಹಣೆ ಮತ್ತು ತಲೆಗೆ ತಾಗಿ ಸಾವು ಸಂಬವಿಸುತಿತ್ತು  ಸದರಿ ಘಟನೆಯಲ್ಲಿ ಅಫಜಲಪೂರ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಇಮಾಮ ಸಿಪಿಸಿ,ಶಿವಶರಣಪ್ಪ ಸಿಪಿಸಿ, ಇನಿಯುಸ ಕಸಾಬ ಸಿಪಿಸಿ  ರವರಿಗೆ ಸಹ ಕಲ್ಲಿನ ಹೊಡೆತಗಳು ಬಿದ್ದು ಭಾರಿ ರಕ್ತಗಾಯಗಳು ಸಂಭವಿಸಿದ್ದು. ಸದರಿಯವರು ಟಿಪ್ಪು ಸುಲ್ತಾನರ ಜಂಯತಿ ಉತ್ಸವಕ್ಕೆ ವಿರೋಧ ವ್ಯಕ್ತಪಡಿಸಿ ಕಾನೂನು ಬಾಹಿರವಾಗಿ ಗುಂಪು ಕಟ್ಟಿಕೊಂಡು ಕೈಗಳಲ್ಲಿ ಕಲ್ಲುಗಳು ಹಿಡಿದುಕೊಂಡು ಬಂದು ಬಂದೋಬಸ್ತ ಕರ್ತವ್ಯದಲಿದ್ದ ನಮ್ಮ ಮತ್ತು ನಮ್ಮ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಭಯ ಹಾಕಿ ಕೊಲೆ ಮಾಡುವ ಉದ್ದೇಶದಿಂದಲೆ ಕಲ್ಲು  ತೂರಾಟ ಮಾಡಿ ನಮ್ಮ ಸಿಬ್ಬಂದಿಯವರಿಗೆ  ಭಾರಿ ರಕ್ತಗಾಯಗಳು ಮತ್ತು ಒಳಪೆಟ್ಟುಗಳು  ಪಡಿಸಿ ಸರಕಾರಿ ಪೊಲೀಸ್ ವಾಹನಕ್ಕೆ ಕಲ್ಲುಗಳಿಂದ ಹೊಡೆದು ಮುಂದಿನ ಗ್ಲಾಸ ಜಖಂ ಗೊಳಿಸಿದ  1)ಸುನೀಲ ಶೆಟ್ಟಿ  2) ನಿಂಗಣ್ಣ ಗುಣಾರಿ 3)ಶ್ರೀಶೈಲ ಕೊರಳ್ಳಿ 4) ಸಿದ್ದು ನಾಗಣಸೂರ 5) ಬಸವರಾಜ ಮ್ಯಾಳೇಸಿ 6) ಶಂಕರ ಕೊರಳ್ಳಿ 7) ಬಸವರಾಜ ಬಿರಾದಾರ 8) ಸಂತೋಷ ಬಿರಾದಾರ 9) ಮಲ್ಲು ಮ್ಯಾಳೇಸಿ 10) ಭೀಮಶ್ಯಾ ಮ್ಯಾಳೆಸಿ 11) ರಾಜು ಬಿಲ್ಲಾಡ 12) ಧನು ಕಲಕೇರಿ 13) ನಾಗು ರಾಠೋಡ 14) ರವಿ ಬುಜರಿ 15) ಧನು ಕೆಂಗನಾಳ 16) ಮಲ್ಲು ಹಾದಿಮನಿ 17) ನಾಗು ನಿಂಬಾಳ 18) ಪ್ರವೀಣ ರಾಂಪೂರ 19) ಸಂತೋಷ ಮ್ಯಾಳೇಸಿ 20) ಅನಿಲ ಮಾಲಿ ಪಾಟೀಲ 21) ಅಭಯ ಕಲಶೇಟ್ಟಿ 22) ಸಚೀನ ಹಾದಿಮನಿ 23) ಪಪ್ಪು ನಂದಿ 24) ಶರಣು ಡಾಂಗೆ 25) ನಾಗಯ್ಯ ಸ್ವಾಮಿ 26) ಸಿದ್ದು ಉಡಚಣ 27) ಕಂಟೇಪ್ಪಾ ಹಳಮನಿ 28) ಸಂತೋಷ ಲೊಕಂಡೆ 29) ಸುರೇಶ ಅಂದೋಡಗಿ ರವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಪೊಲೀಸರ ಕರ್ತವ್ಯಕ್ಕೆ ಅಡೆ-ತಡೆ ಮತ್ತು ಕೊಲೆ ಯತ್ನ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ: ಶ್ರೀ ಶಿವಶರಣಪ್ಪ ಜಮಾದಾರ ಸಿ.ಹೆಚ್,ಸಿ 361 ಅಫಜಲಪೂರ ಪೊಲೀಸ್ ಠಾಣೆ ದಿನಾಂಕ 10/11/2015 ರಂದು ಬೆಳಿಗ್ಗೆ 08.00 ಗಂಟೆ ಸುಮಾರಿಗೆ ಟಿಪ್ಪು ಸುಲ್ತಾನ ಜಯಂತಿ ಉತ್ಸವ ಕಾರ್ಯಕ್ರಮದ ಬಂದೋಬಸ್ತ ಕರ್ತವ್ಯದಲ್ಲಿ ಅಫಜಲಪೂರ ವೃತ್ತದ ಸಿಪಿಐ ಸಾಹೇಬರಾದ ಶ್ರೀ ಸಂಗಮೇಶ ಪಾಟೀಲ, ಶ್ರೀ ಪ್ರದೀಪ ಕೊಳ್ಳಾ ಪಿಎಸ್ಐ ರೇವೂರ ಠಾಣೆ, ಶ್ರೀ ಪಂಡಿತ ಸಗರ ಪಿಎಸ್ಐ ಡಿಸಿಐಬಿ ಕಲಬುರಗಿ ಹಾಗೂ ಶ್ರೀ ಭೀಲೂ ಜಾಧವ ಎಎಸ್ಐ , ಶ್ರೀಮಂತ ಎಎಸ್ಐ, ವಿಶ್ವನಾಥ ಎಎಸ್ಐ ಮತ್ತು ನಾನು ಹಾಗೂ  ಇನ್ನುಳಿದ ನಮ್ಮ ಸಿಬ್ಬಂದಿಯವರಾದ ಚಂದ್ರಕಾಂತ ಹೆಚ್ ಸಿ-449, ಕಮಲು ಹೆಚ್ ಸಿ -330, ಮಾರುತಿ ಹೆಚ್ ಸಿ-312,ರಾಮಚಂದ್ರ ಹೆಚ್ ಸಿ-110, ಮಲ್ಲಿಕಾರ್ಜುನ ಹೆಚ್ ಸಿ-218  ಇಮಾಮ ಸಿಪಿಸಿ-933, ಇನಿಯುಸ ಕಸಾಬ ಸಿಪಿಸಿ-1234, ಸುರೇಶ ಸಿಪಿಸಿ-801, ವಿಠ್ಠಲ ಸಿಪಿಸಿ-820, ಅಕ್ತರ ಪಟೇಲ ಸಿಪಿಸಿ-623, ಶಾಂತಪ್ಪ ಸಿಪಿಸಿ-364, ಚಂದ್ರಶ್ಯಾ ಸಿಪಿಸಿ-903 ಹಾಗೂ ಇನ್ನಿತರ ಸಿಬ್ಬಂದಿಯವರು ಬಂದೊಬಸ್ತ ಕರ್ತವ್ಯದಲ್ಲಿ ಇದ್ದೇವು. ಮತ್ತು ಒಂದು ಡಿಎಆರ್ ಪ್ರಹಾರ ಬಲ ವಾಹನ ಸಂಖ್ಯೆ ಕೆಎ-32 ಜಿ-263 ನೇದ್ದು ಸಹ ಮೆರವಣಿಗೆ ಬಂದೊಬಸ್ತ ಕರ್ತವ್ಯದಲ್ಲಿದ್ದಾಗ ಮೆರವಣಿಗೆ ತಹಸಿಲ ಕಾರ್ಯಾಲಯದಿಂದ ಮೆರವಣಿಗೆ ಪ್ರಾರಂಭವಾಗಿ ಅಂಬೇಡ್ಕರ ವೃತ್ತದ ಮುಖಾಂತರ ಬಸ್ ನಿಲ್ದಾಣದ ಮುಂದಿನಿಂದ ಮದ್ಯಾಹ್ನ 1.45 ಗಂಟೆ ಸುಮಾರಿಗೆ ಸಿದ್ದರಾಮೇಶ್ವರ ಮಂದಿರದ ಹತ್ತಿರ ಬಂದಾಗ ಸುನೀಲ ಶೆಟ್ಟಿ ಮುಂದಾಳತ್ವದಲ್ಲಿ  1) ನಿಂಗಣ್ಣ ಗುಣಾರಿ 2)ಶ್ರೀಶೈಲ ಕೊರಳ್ಳಿ 3) ಸಿದ್ದು ನಾಗಣಸೂರ 4) ಬಸವರಾಜ ಮ್ಯಾಳೇಸಿ 5) ಶಂಕರ ಕೊರಳ್ಳಿ 6) ಬಸವರಾಜ ಬಿರಾದಾರ 7) ಸಂತೋಷ ಬಿರಾದಾರ 8) ಮಲ್ಲು ಮ್ಯಾಳೇಸಿ 9) ಭೀಮಶ್ಯಾ ಮ್ಯಾಳೆಸಿ 10) ರಾಜು ಬಿಲ್ಲಾಡ 11) ಧನು ಕಲಕೇರಿ 12) ನಾಗು ರಾಠೋಡ 13) ರವಿ ಬುಜರಿ 14) ಧನು ಕೆಂಗನಾಳ 15) ಮಲ್ಲು ಹಾದಿಮನಿ 16) ನಾಗು ನಿಂಬಾಳ 17) ಪ್ರವೀಣ ರಾಂಪೂರ 18) ಸಂತೋಷ ಮ್ಯಾಳೇಸಿ 19) ಅನಿಲ ಮಾಲಿ ಪಾಟೀಲ 20) ಅಭಯ ಕಲಶೇಟ್ಟಿ 21) ಸಚೀನ ಹಾದಿಮನಿ22) ಪಪ್ಪು ನಂದಿ 23) ಶರಣು ಡಾಂಗೆ 24) ನಾಗಯ್ಯ ಸ್ವಾಮಿ 25) ಸಿದ್ದು ಉಡಚಣ 26) ಕಂಟೇಪ್ಪಾ ಹಳಮನಿ 27) ಸಂತೋಷ ಲೊಕಂಡೆ 28) ಸುರೇಶ ಅಂದೋಡಗಿ ರವರು ಹಾಗೂ ಇನ್ನಿತರರು ಕಾನೂನು ಬಾಹಿರವಾಗಿ ಗುಂಪು ಕಟ್ಟಿಕೊಂಡು ಕೈಗಳಲ್ಲಿ ಕಲ್ಲುಗಳು ಹಿಡಿದುಕೊಂಡು ಬಂದವರೆ ಟಿಪ್ಪು ಸುಲ್ತಾನರ ಮೆರವಣಿಗೆಗೆ ವಿರೋಧ ವ್ಯಕ್ತಪಡಿಸಿ ಸೂಳೆಮಕ್ಕಳು ಪೊಲೀಸ್ ನವರು ಟಿಪ್ಪು ಸುಲ್ತಾನ ಜಯಂತಿ ಉತ್ಸವ ಆಚರಣೆ ಮಾಡುತಿದ್ದವರಿಗೆ ಸಪೊರ್ಟ ಮಾಡುತಿದ್ದಾರೆ ಬೊಸಡಿಮಕ್ಕಳಿಗೆ ಕಲ್ಲುಗಳಿಂದ ಹೊಡೆದು ಖಲಾಸ ಮಾಡೋಣ ಅಂತ ಬೈಯುತ್ತ ಬಂದೊಬಸ್ತ ಕರ್ತವ್ಯದಲಿದ್ದ ನಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿ ನಮ್ಮ ಮೇಲೆ ಕಲ್ಲು ತೂರಾಟ ಮಾಡಿರುತ್ತಾರೆ. ಸದರಿ ಘಟನೆಯಲ್ಲಿ ನನ್ನ ಮತ್ತು ಇಮಾಮ ಸಿಪಿಸಿ  ರವರ ತಲೆಗೆ ಕಲ್ಲಿನ ಹೊಡೆತಗಳು ಬಿದ್ದು ರಕ್ತಗಾಯಗಳು ಸಂಬವಿಸಿರುತ್ತವೆ ಮತ್ತು ಡಿಎಆರ್ ವಾಹನ ಸಂಖ್ಯೆ  ಕೆಎ-32 ಜಿ-263  ನೇದ್ದರ ಮುಂದಿನ ದೊಡ್ಡ ಗ್ಲಾಸಿಗೂ ಕಲ್ಲಿನಿಂದ ಹೊಡೆದು ಜಖಂ ಗೊಳಿಸಿ ಸುಮಾರು 9,600/-ರೂಪಾಯಿ ಕಿಮ್ಮತ್ತಿನಷ್ಟು ಹಾನಿ ಪಡಿಸಿರುತ್ತಾರೆ.ಸದರಿಯವರು ಟಿಪ್ಪು ಸುಲ್ತಾನರ ಜಂಯತಿ ಉತ್ಸವಕ್ಕೆ ವಿರೋಧ ವ್ಯಕ್ತಪಡಿಸಿ ಕಾನೂನು ಬಾಹಿರವಾಗಿ ಗುಂಪು ಕಟ್ಟಿಕೊಂಡು ಕೈಗಳಲ್ಲಿ ಕಲ್ಲುಗಳು ಹಿಡಿದುಕೊಂಡು ಬಂದು ಬಂದೋಬಸ್ತ ಕರ್ತವ್ಯದಲಿದ್ದ ನಮ್ಮ ಮತ್ತು ನಮ್ಮ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಭಯ ಹಾಕಿ ಕೊಲೆ ಮಾಡುವ ಉದ್ದೇಶದಿಂದಲೆ ಕಲ್ಲು  ತೂರಾಟ ಮಾಡಿ ನನಗೂ ಮತ್ತು ಇಮಾಮ ಪಿಸಿ ರವರಿಗೆ ತಲೆಗೆ ಭಾರಿ ರಕ್ತಗಾಯಗಳು ಪಡಿಸಿ ಸರಕಾರಿ ಪೊಲೀಸ್ ವ್ಯಾನಿಗೆ ಕಲ್ಲುಗಳಿಂದ ಹೊಡೆದು ಮುಂದಿನ ಗ್ಲಾಸ ಜಖಂ ಗೊಳಿಸಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಅಪಘಾತ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ:ದಿನಾಂಕ 09-11-2015 ರಂದು ಕುಮಾರಿ ಭಾಗಮ್ಮ ತಂದೆ ಮಲ್ಲಪ್ಪ ಹೇರೂರ ಸಾ|| ಮಲ್ಲಾಬಾದ ಇವರು ಹೇಳಿಕೆ ಪಿರ್ಯಾದಿಸಲ್ಲಿಸಿದ್ದೇನೆಂದರೆ ದಿ:09-11-2015 ರಂದು ರಾತ್ರಿ 7:30 ಗಂಟೆ ಸುಮಾರಿಗೆ ತಾನು ಮತ್ತು ತನ್ನ ತಾಯಿ ಇಂದಿರಾಬಾಯಿ ಇಬ್ಬರು ಹಳ್ಯಾಳಮಲ್ಲಾಬಾದ ರಸ್ತೆಗೆ ಬರ್ಹಿದೆಸೆಗೆ ಹೋಗುತ್ತಿದ್ದಾಗ ಭೀಮಶಾ ದೊಡ್ಡಮನಿ ಇವರ ಮನೆಯ ಹತ್ತಿರ ನಮ್ಮ ಹಿಂದಿನಿಂದ ಒಬ್ಬ ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ನನಗೆ ಅಫಘಾತ ಪಡಿಸಿ ಅವನು ಸಹ ಮೋಟಾರ ಸೈಕಲ ಸಮೇತ ಮುಂದೆ ಹೋಗಿ ಬಿದ್ದನು, ಸದರಿ ಘಟನೆ ಸಂಭವಿಸಿದಾಗ ನಾನು ಕೆಳಗೆ ಬಿದ್ದಿದ್ದು ನನ್ನ ಏಡಗೈ ಮೊಣಕೈಗೆ ಭಾರಿ ಒಳಪೆಟ್ಟಾಗಿ, ಮೈ ಕೈಗಳಿಗೆ ಅಲ್ಲಲ್ಲಿ ಬಾರಿ ಗುಪ್ತಗಾಯ ಮತ್ತು ತರಚಿದ ಗಾಯಗಳು ಆಗಿರುತ್ತವೆ. ನನಗೆ ಅಫಘಾತವಾಗಿರುವುದನ್ನು ನೋಡಿ ಸಮೀಪದಲ್ಲಿಯೆ ಇದ್ದ ನಮ್ಮೂರಿನ  ಸಂತೋಷ ರಂಗದಾಳೆ, ಭಾಗಪ್ಪ ಪೂಜಾರಿ ರವರು ಬಂದು, ಭಾಗಪ್ಪನು ಸದರಿ ಘಟನೆಯ ಬಗ್ಗೆ ನಮ್ಮ ಮನೆಗೆ ಹೋಗಿ ನಮ್ಮ ತಂದೆಗೆ ವಿಷಯ ತಿಳಿಸಿರುತ್ತಾನೆ. ನಂತರ ನನ್ನ ತಂದೆ ಮಲ್ಲಪ್ಪ ಹಾಗೂ ನಮ್ಮೂರಿನ ಇನ್ನಿತರರು ಬಂದು ನನಗೆ ನೀರು ಕುಡಿಸಿರುತ್ತಾರೆ. ನಂತರ ಎಲ್ಲರೂ ಅಫಘಾತ ಪಡಿಸಿ ಮೋಟಾರ ಸೈಕಲ ಸಮೇತ ಬಿದ್ದವನ ಹತ್ತಿರ ಹೋಗಿ ನೋಡಲಾಗಿ ಅವನಿಗೆ ಏಡಗಣ್ಣಿಗೆ ಬಾರಿ ರಕ್ತಗಾಯವಾಗಿ, ಕಣ್ಣಿನಿಂದ ರಕ್ತ ಸೊರುತ್ತಿತ್ತು ಮತ್ತು ಗದ್ದಕ್ಕೆ, ಏಡ ಪಾದಕ್ಕೆ ರಕ್ತಗಾಯಗಳಾಗಿದ್ದವು. ಹಾಗೂ ಎದೆಗೆ ಬಾರಿ ಒಳಪೆಟ್ಟಾಗಿ ಒದ್ದಾಡುತ್ತಿದ್ದನು, ಸದರಿಯವನಿಗೆ ನಮ್ಮ ತಂದೆ ಹಾಗೂ ಉಳಿದವರೆಲ್ಲರು ಹೆಸರು ವಿಳಾಸ ವಿಚಾರಿಸಲು  ಅವನು ತನ್ನ ಹೆಸರು ಸಂಗನಗೌಡ @ ಸಂಗಣ್ಣ ತಂದೆ ದತ್ತಪ್ಪಗೌಡ @ ದತ್ತು ಹೆರೂರ ವ|| 32 ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಹಳ್ಯಾಳ ಅಂತಾ ತಿಳಿಸಿದನು. ಸದರಿಯವನ ಮೋಟಾರ ಸೈಕಲ ನಂ ನೋಡಲಾಗಿ ಅದರ ನಂ ಕೆಎ-32 ಎಕ್ಸ-5777 ಅಂತಾ ಇರುತ್ತದೆ. ನಂತರ ನನಗೂ ಮತ್ತು ನನಗೆ ಡಿಕ್ಕಿಪಡಿಸಿದ ಸಂಗನಗೌಡನಿಗೂ 108 ಅಂಬ್ಯೂಲೆನ್ಸದಲ್ಲಿ ಹಾಕಿಕೊಂಡು ಅಫಜಲಪೂರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ. ಸದರಿ ಘಟನೆಯಲ್ಲಿ ಬಾರಿ ಗಾಯಗಳು ಹೊಂದಿದ ಮೋಟಾರ ಸೈಕಲ ಚಾಲಕ ಸಂಗನಗೌಡನಿಗೆ ಕಲಬುರಗಿಗೆ ಕರೆದುಕೊಂಡು ಹೋಗಿರುತ್ತಾರೆ.  ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ನನಗೆ ಡಿಕ್ಕಿ ಹೊಡೆಸಿ ಅಫಘಾತ ಪಡಿಸಿದ ಸಂಗನಗೌಡ @ ಸಂಗಣ್ಣ ತಂದೆ ದತ್ತಪ್ಪಗೌಡ @ ದತ್ತು ಹೆರೂರ ಸಾ|| ಹಳ್ಯಾಳ ಎಂಬಾತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.