POLICE BHAVAN KALABURAGI

POLICE BHAVAN KALABURAGI

31 March 2016

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 30.03.2016 ರಂದು ಸಾಯಂಕಾಲ 19:54 ಗಂಟೆಯ ಸುಮಾರಿಗೆ ನನ್ನ ತಮ್ಮನು ಊರಿಗೆ ಬರುವ ಕುರಿತು ಕಟ್ಟಿ ಸಂಗಾವಿಯ ಕ್ರಾಸ್ ನ ಭೀಮಾ ಬ್ರೀಡ್ಜ ಜೇವರಗಿ ಕಲಬುರಗಿ ರಸ್ತೆ ಮೆಲೆ ನಡೆದುಕೊಂಡು ಬರುತ್ತಿರುವ ವೇಳೆಗೆ ಜೇವರಗಿ ಕಡೆಯಿಂದು ಒಂದು ಮೊಟಾರು ಸೈಕಲ್‌ ನಂ ಕೆಎ32ಇಎಫ್‌1806 ನೇದ್ದರ ಚಾಲಕನು ತನ್ನ ಮೋಟಾರು ಸೈಕಲ್‌ ಅನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಡೆದುಕೊಂಡು ಬರುತ್ತಿದ್ದ ನನ್ನ ತಮ್ಮನಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ್ದರಿಂದ ನನ್ನ ತಮ್ಮನಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿದ್ದು ಅಪಘಾತದಲ್ಲಿ ಮೋಟಾರ ಸೈಕಲ್‌ ಸವಾರನಿಗೂ ಗಾಯವಾಗಿದ್ದು ಕಾರಣ ಸದರಿ ಮೋಟಾರು ಸೈಕಲ್‌ ಸವಾರನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಶ್ರೀ ಅಬ್ಬಾಸಲಿ ತಂದೆ ಅಲಿಸಾಬ ಕೊಳಕೂರ ಸಾ : ಹಸನಾಪುರ  ರವರು  ಸಲ್ಲಿಸಿದ  ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣಗಳು :
ಫರತಾಬಾದ ಠಾಣೆ : ದಿನಾಂಕ: 08/02/2016 ರಂದು ಮದ್ಯಾಹ್ನ 3:30 ರಿಂದ 4:30 ರ ಮದ್ಯದ ಅವಧಿಯಲ್ಲಿ ಪಿರೋಜಾಬಾದ ದರ್ಗಾದ ಹತ್ತಿರದ ಮುಂದಿನ ಗೇಟ ಮುಂದೆ ನಿಲ್ಲಿಸಿದ ಶ್ರೀ ಮಹ್ಮದ ಶಬ್ಬೀರ ತಂದೆ ಮಹ್ಮದ ರುಕ್ನೋದ್ದಿನ ಸಾ: ಉಮರ ಕಾಲೋನಿ ಆಜಾದಪೂರ ರೋಡ ಕಲಬುರಗಿ ರವರ ಸುಮಾರು 30,000/- ರೂಪಾಯಿಗಳು ಕಿಮ್ಮತ್ತಿನ ಹಿರೋ ಹೊಂಡಾ ಫ್ಯಾಶನ ಪ್ಲಸ್‌‌  ಮೋಟಾರ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಸ್ವರ ನಗರ ಠಾಣೆ : ಶ್ರೀ ವಿಜಯಕುಮಾರ ತಂದೆ ರಾಮರಾವ್ ಸಾಕ್ರೆ ಸಾಃ ಮನೆ.ನಂ.4-601/14ಬಿ, 02ನೇ ಕ್ರಾಸ್ ಬಸವೇಶ್ವರ ಕಾಲೋನಿ ಕಲಬುರಗಿ ಇವರು ದಿನಾಂಕ 21/01/2016 ರಂದು ಬೆಳಿಗ್ಗೆ 11.45 ಎಎಂ ಸುಮಾರಿಗೆ ತಮ್ಮ ಹೆರಿನಲ್ಲಿರುವ ರಾಯಲ್ ಎನಫೀಲ್ಡ್ ಕ್ಲಾಸಿಕ್ 350 ಮೊಟಾರು ಸೈಕಲ್ ನಂ. ಕೆ.ಎ.32 ಇಜಿ0765 ನೆದ್ದನ್ನು ಮನೆಯ ಮುಂದೆ ನಿಲ್ಲಿಸಿದ್ದು ನಂತರ 12.45 ಪಿ.ಎಮ್.ಕ್ಕೆ ಬಂದು ನೋಡಲಾಗಿ ಮನೆಯ ಮುಂದೆ ನಿಲ್ಲಿಸಿದ್ದ ಮೊಟಾರು ಸೈಕಲ್ ಇರಲಿಲ್ಲ ಎಲ್ಲಾ ಕಡೆ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ  ಕಳುವಾದ ನನ್ನ ರಾಯಲ್ ಎನಫೀಲ್ಡ್ ಕ್ಲಾಸಿಕ್ 350 ಮೊಟಾರು ಸೈಕಲ್ ನಂ. ಕೆ.ಎ.32 ಇಜಿ0765 ಅ.ಕಿ.1,00,000/- ರೂ. ಸಿಲ್ವರ್ ಬಣ್ಣದ್ದು ನೆದ್ದನ್ನು ಪತ್ತೆ ಮಾಡಿ ಕಳ್ಳರ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾಬಸವೇಸ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

30 March 2016

Kalaburagi District Reported Crimes

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ವಶ :
ಅಫಜಲಪೂರ ಠಾಣೆ : ಶ್ರೀ ಸಿದ್ದರಾಯ ಭೋಸಗಿ ಪಿಎಸ್ಐ ಅಫಜಲಪೂರ ಪೊಲೀಸ್ ಠಾಣೆ ರವರು ದಿನಾಂಕ 30-03-2016 ರಂದು ಬೆಳಗಿನಜಾವ ಅಫಜಲಪೂರ ಪಟ್ಟಣದಲ್ಲಿ ನಮ್ಮ ಠಾಣೆಯ ಪಿಸಿ-339 ಗುಂಡಪ್ಪ, ಪಿಸಿ-801 ಸುರೇಶ, ಪಿಸಿ-903 ಚಂದ್ರಶಾ ಇವರೊಂದಿಗೆ ಪೆಟ್ರೋಲಿಂಗ ಮಾಡುತ್ತಾ ಬಸವೇಶ್ವರ ಸರ್ಕಲ ಹತ್ತಿರ ಇದ್ದಾಗ ನನಗೆ ಮಾಹಿತಿ ಬಂದಿದ್ದೇನೆಂದರೆ, ಕೋಳ್ಳುರ ಗ್ರಾಮದ ಹತ್ತಿರ ಇರುವ ಭೀಮಾನದಿಯಿಂದ ಟಿಪ್ಪರಗಳಲ್ಲಿ ಮರಳು ತುಂಬಿಕೊಂಡು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ, ಪಂಚರೊಂದಿಗೆ ಕೋಳ್ಳೂರ ಗ್ರಾಮದ ಭೀಮಾನದಿ ಹತ್ತಿರ ಹೋಗಿ ಮರೆಯಾಗಿ ನಿಂತು ನೊಡಲು, ಭೀಮಾನದಿಯಿಂದ ಎರಡು ಟಿಪ್ಪರಗಳ ಚಾಲಕರು ಟಿಪ್ಪರಗಳನ್ನು ತಗೆದುಕೊಂಡು ಬರುತ್ತಿದ್ದರು, ಸದರಿ ಟಿಪ್ಪರಗಳ ಚಾಲಕರು ಟಿಪ್ಪರ ತಗೆದುಕೊಂಡು ನದಿಯ ದಡದ ಹತ್ತಿರ ಬರುತ್ತಿದ್ದಂತೆ ನಮ್ಮ ಇಲಾಖಾ ಜೀಪನ್ನು ನೋಡಿ ಎರಡು ಟಿಪ್ಪರಗಳನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೊದರು.  ಆಗ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರಗಳನ್ನು ಚೆಕ್ ಮಾಡಲಾಗಿ ಎರಡು ಟಿಪ್ಪರಗಳಲ್ಲಿ ಮರಳು ತುಂಬಿದ್ದು ಇದ್ದು 1) ಟಿಪ್ಪರ ನಂ ಕೆಎ-28 ಬಿ-7234 ಅಕಿ 10,00,000/-ರೂ 2) ಟಿಪ್ಪರ ನಂ ಕೆಎ-28 ಬಿ-9108 ಅಕಿ 10,00,000/-ರೂ ಈ ರೀತಿ ಇರುತ್ತವೆ. ಸದರಿ ಟಿಪ್ಪರಗಳಲ್ಲಿ ತುಂಬಿದ ಮರಳಿನ  ಒಟ್ಟು ಅಂದಾಜು ಕಿಮ್ಮತ್ತು 10,000/- ರೂ ಆಗಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಎರಡು ಟಿಪ್ಪರಗಳನ್ನು ಪಂಚರ ಸಮಕ್ಷಮ ಇಂದು ದಿನಾಂಕ 30-03-2016 ರಂದು 04:15 ದಿಂದ 05:15 ಎ ಎಮ್ ವರೆಗೆ ಇಲಾಖಾ ಜೀಪಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಾಹಾಂತಪ್ಪ ತಂದೆ ಚಂದ್ರಾಮ  ಮದರಿ   ಸಾ:ಹೀರಾಪೂರ ಗ್ರಾಮ ಇವರು  ದಿನಾಂಕ 28-03-16 ರಂದು ನಾನು ಮತ್ತು ಓಣಿಯ ಗೆಳೆಯರಾದ ಇರಫಾನ ಇಬ್ಬರು ಹೀರಾಪೂರ ಕ್ರಾಸಿಗೆ ಹೋದಾಗ  ಸದರಿ ಅಪರಿಚಿತ ವ್ಯಕ್ತಿಗೆ  ಮತ್ತೆ ಫೆಪರಿ ಬಂದು ಮಲಗುವ ಸ್ಥಳದ  ಪಕ್ಕದಲ್ಲಿ ಇರುವ ಮುಳ್ಳಿನ ಕಂಟಿಯಲ್ಲಿ ಹೊರಳಾಡಿದ್ದರಿಂದ ಅವನ  ಮೈಮೇಲೆ ಅಂದರೆ ಎಡ ಹೊಟ್ಟೆಯ ಮೇಲೆ, ಎಡ ಟೊಂಕ ತೊಡೆ, ಕಾಲುಗಳ ಮೇಲೆ ಅಲ್ಲಿಲ್ಲಿ ತರಚಿದ ರಕ್ತಗಾಯಗಳಾಗಿರುತ್ತೇವೆ. ಇದನ್ನು ನೋಡಿ ಅವನಿಗೆ ಉಪಚಾರ ಕುರಿತು 108 ಅಂಬುಲೈನ್ಸ ಗಾಡಿಗೆ ಪೋನ ಮಾಡಿದ್ದು, 108 ಅಂಬುಲೈನ್ಸದವರು ಬಂದು ಅವನಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕಲಬುರಗಿಗೆ ಒಯ್ದು ಸೇರಿಕೆ ಮಾಡಿದರು.ಸದರಿ ಅಪರಿಚಿತ ವ್ಯಕ್ತಿ ಗುಣಮುಖವಾಗವಾಗಿದ್ದಾನೆ ಹೇಗೆ ಎಂಬುದು ನೋಡಲಿಕ್ಕೆ ಇಂದು ದಿನಾಂಕ 29-03-16 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಸರಕಾರಿ ಅಸ್ಪತ್ರೆ ಕಲಬುರಗಿಗೆ ಹೋಗಿ ವೈದ್ಯರಿಗೆ ವಿಚಾರಿಸಿದಾಗ  ಅಪರಿಚಿತ ವ್ಯಕ್ತಿ ತನಗೆ ಇದ್ದ ಫೆಪರಿ ರೋಗದಿಂದ ಬಳಲುತ್ತಾ  ನಿಶಕ್ತನಾಗಿ  ಗುಣ ಮುಖ ಹೊಂದದೇ ಇಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ ಎಂದು ವೈದ್ಯರಿಂದ ಕೇಳಿ ಗೊತ್ತಾಗಿರುತ್ತದೆ. ಸದರಿ ಅಪರಿಚಿತ ವ್ಯಕ್ತಿ ತನಗೆ ಇದ್ದ ಫೆಪರಿ ರೋಗದಿಂದ ಬಳಲುತ್ತಾ ಅಥವಾ ಅನ್ನ ನೀರು ಇಲ್ಲದೇ ಹಾಗೂ ಬಿಸಿಲಿನ ಶಾಖದಿಂದ ನಿಶಕ್ತನಾಗಿ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು ಇರುತ್ತದೆ.  ಅವನ ಸಾವಿನಲ್ಲಿ  ಯಾರ ಮೇಲೂ ಯಾವುದೇ ತರಹದ ಸಂಶಯ ಇರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆಯ ಪ್ರಕರಣ :
ನಿಂಬರ್ಗಾ ಠಾಣೆ : 01] ಬಾಬು ಪಾಟೀಲ ಪಿ.ಡಿ.ಓ ಗ್ರಾಮ ಪಂಚಾಯತ ನಿಂಬರ್ಗಾ 02] ಮಹಾದೇವಿ ಗಂಡ ಅಮೃತ ಬಿಬ್ರಾಣಿ ಅಧ್ಯಕ್ಷರು ಗ್ರಾಮ ಪಂಚಾಯತ ನಿಂಬರ್ಗಾ  ರವರು ನಿಂಬರ್ಗಾ ಗ್ರಾಮ ಪಂಚಾಯತದಲ್ಲಿ 2015-16 ನೇ ಸಾಲಿನಲ್ಲಿ 14 ನೇ ಹಣಕಾಸು ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಮತ್ತು ಪಿ.ಡಿ.ಓ ರವರು ಕ್ರಿಯಾ ಯೋಜನೆ ಅನುಮೋದನೆ ಪಡೆಯದೆ ಖರ್ಚು ಭರಿಸಿರುತ್ತಾರೆ ಮತ್ತು ಸರ್ಕಾರದ ಹಣವನ್ನು ರುಪಯೋಗಪಡಿಸಿಕೊಂಡು ವಂಚಿಸಿ ಮೋಸ ಮಾಡಿರುತ್ತಾರೆ ಎಂಬುದರ ಬಗ್ಗೆ ಮಾನ್ಯ ಮುಖ್ಯ ಕಾರ್ಯ ನಿರ್ವಾಹಕ ಅಧೀಕಾರಿಗಳು ಜಿಲ್ಲಾ ಪಂಚಾಯತ ಕಲಬುರಗಿ ರವರು ಪತ್ರ ಬರೆದು ಕೇಸು ದಾಖಲಿಸುವಂತೆ ಸೂಚಿಸಿದ್ದರಿಂದ ಶ್ರೀ ಅಶೋಕ ಅಂಬಲಗಿ ಇ.ಓ ತಾಲೂಕಾ ಪಂಚಾಯತ ಆಳಂದರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಜೇವರಗಿ ಠಾಣೆ : ದಿನಾಂಕ 28.03.2015 ರಂದು 23:30 ಗಂಟೆಯಿಂದ 29.03.2016 ರಂದು 05:30 ಗಂಟೆಯ ಮಧ್ಯದ ಅವಧಿಯಲ್ಲಿ ನರಿಬೋಳ ಗ್ರಾಮದಲ್ಲಿನ ನನ್ನ ಮನೆಯ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್‌ ನಂ ಕೆ.ಎ-32 ಟಿ-2479 ಟ್ರಾಯಲಿ ನಂ ಕೆ.ಎ-32 ಟಿ-2480 ಅಂ.ಕಿ 3.00.000/- ರೂ ನೇದ್ದರು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಟ್ರ್ಯಾಕ್ಟರ್‌ ಮತ್ತು ಕಳ್ಳರನ್ನು ಪತ್ತೆ ಮಾಡಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಶ್ರೀ ರಾಮರಾವ ತಂದೆ ಸುರೇಶರಾವ್‌ ಕುಲಕರ್ಣಿ ಸಾ : ನರಿಬೋಳ ಹಾ : : ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ದಿನಾಂಕ: 29/02/2016 ರಂದು 10-30 ಎಎಂ ಸುಮಾರಿಗೆ ನನಗೆ ಮೈಯಲ್ಲಿ  ಹುಷಾರ ಇರಲಾರದ ಕಾರಣ ಆಸ್ಪತ್ರೆಗೆ ತೋರಿಸಿಕೊಂಡು ಬರೋಣ ಅಂತ ನಾನು ಹಾಗೂ ನನ್ನ ತಂದೆಯಾದ 1) ನಾಗಣ್ಣಾ ತಂದೆ ರೇವಣಸಿದ್ದಪ್ಪ ಚೆಂಗಟಿ 2) ತಮ್ಮನ ಹೆಂಡತಿಯಾದ ಸವಿತಾ ಗಂಡ ಸಂತೋಷಕುಮಾರ ಎಲ್ಲರೂ ಕೂಡಿ ಕಲಬುರಗಿಗೆ ಹೋಗಿ ಆಸ್ಪತ್ರೆಗೆ ತೋರಿಸಿಕೊಂಡು ಮರಳಿ ಸೇಡಂ ಬಸ್ಸಿಗೆ ಟೆಂಗಳಿ ಕ್ರಾಸಗೆ ಬಂದು ಇಳಿದು ನಿಂತಾಗ ನಮ್ಮ ಗ್ರಾಮಕ್ಕೆ ಹೋಗುವ ಒಂದು ಟಂಟಂ ನಂ.ಕೆಎ-32 ಬಿ-3516 ನೇದ್ದು ನಿಂತಿದ್ದು ಅದರಲ್ಲಿ ನಾನು ನನ್ನ ತಂದೆ ನಾಗಣ್ಣ ತಮ್ಮನ ಹೆಂಡತಿ ಸವಿತಾ ಮೂರು ಜನರೂ ಏರಿ ಕುಳಿತ್ತೇವು. ನಮ್ಮಂತೆ ನಮ್ಮ ಗ್ರಾಮದ ನೂರಜಹಾನ ಬೇಗಂ ಗಂಡ ಗುಲಾಮ ಮಸ್ತಾಪ ಮತ್ತು ಅವಳ ಗಂಡ ಗುಲಾಮ ಮಸ್ತಾಪ ಹಾಗೂ ತಿಪ್ಪಣ್ಣಾ ತಂದೆ ಮಲ್ಲಪ್ಪ ಇವರೂ ಸಹ ಗ್ರಾಮಕ್ಕೆ ಬರಲು ಸದರಿ ಟಂಟಂದಲ್ಲಿ ಬಂದು ಕುಳಿತರು. ನಮ್ಮಂತೆ ತೊನ್ಸನಳ್ಳಿ ಗ್ರಾಮದ ಅಭಿಷೇಕ ತಂದೆ ಗುಂಡಪ್ಪ ಎಂಬುವವನು ಸಹ ಸದರಿ ಟಂಟಂದಲ್ಲಿ ಕುಳಿತ್ತಾಗ ಸದರಿ ಟಂಟಂ ಚಾಲಕನು ಟಂಟಂ ಚಾಲು ಮಾಡಿಕೊಂಡು ಟೆಂಗಳಿ ಕಡೆಗೆ ಹೋಗಬೇಕೆಂದು ಹೊರಟು ಟೆಂಗಳಿ ಕ್ರಾಸದಿಂದ 1ಕಿ.ಮೀ ಅಂತರದಲ್ಲಿ ಹೋಗುತ್ತಿದ್ದಾಗ 7-15 ಪಿಎಂದ ಸುಮಾರಿಗೆ ಎದುರಿನಿಂದ ಒಬ್ಬ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ನಾವು ಕುಳಿತು ಹೊರಟ ಟಂಟಂಕ್ಕೆ ಎದುರಿನಿಂದ ಮುಖಾ-ಮುಖಿ ಡಿಕ್ಕಿ ಪಡಿಸಿದ ಪರಿಣಾಮ ನನಗೆ ಎಡಗಣ್ಣಿಗೆ,ಎಡ ಮೊಳಕಾಲಿಗೆ ಮೂಗಿನ ಮೇಲೆ ರಕ್ತಗಾಯವಾಗಿದ್ದು ನಂತರ ನನ್ನ ತಂದೆ ನಾಗಣ್ಣನಿಗೆ ನೋಡಲಾಗಿ ತಲೆಗೆ ಭಾರಿ ಗುಪ್ತಗಾಯ ಮೂಗಿನ ಕೆಳಗಡೆ ರಕ್ತಗಾಯವಾಗಿದ್ದು ನಮ್ಮ ತಮ್ಮನ ಹೆಂಡತಿಗೆ ನೋಡಲಾಗಿ ಎಡಹುಬ್ಬಿಗೆ,ಎಡಕಪ್ಪಾಳಕ್ಕೆ ರಕ್ತಗಾಯ ಮತ್ತು ಬಲಗಾಲಿನ ಛಪ್ಪೆಗೆ ಮತ್ತು ಮೊಳಕಾಲಿಗೆ ಗುಪ್ತಗಾಯಗಳಾಗಿದ್ದು ಉಳಿದ ನೂರಜಹಾನ,ಗುಲಾಮ,ತಿಪ್ಪಣ್ಣ,ಅಭಿಷೇಕ ಇವರಿಗೂ ಸಹ ಸಣ್ಣ-ಪುಟ್ಟ ಗಾಯಗಳಾಗಿದ್ದು ನಂತರ ನಮಗೆ ಡಿಕ್ಕಿ ಪಡಿಸಿದ ಟ್ರ್ಯಾಕ್ಟರನು ನೋಡಲಾಗಿ ಅದು ಮಹೀಂದ್ರಾ ಕಂಪನಿಯ ಹೊಸ ಟ್ರ್ಯಾಕ್ಟರ ಮತ್ತು ಟ್ರ್ಯಾಲಿ ಇದ್ದು ಅವುಗಳ ಮೇಲೆ ಯಾವುದೇ ನಂಬರ ವಗೈರೆ ಇರುವುದಿಲ್ಲಾ. ಸದರಿ ಟ್ರ್ಯಾಕ್ಟರ ಚಾಲಕನ ಹೆಸರು ವಿಚಾರಿಸಲಾಗಿ ಅಣ್ಣಪ್ಪ ತಂದೆ ಗುಂಡಪ್ಪ ಸಾ:ಡೊಂಣ್ಣೂರ ಅಂತ ಗೊತ್ತಾಗಿದ್ದು ಇರುತ್ತದೆ. ನಂತರ ನಾವೆಲ್ಲರೂ ಒಂದು ಖಾಸಗಿ ವಾಹನ ಮಾಡಿಕೊಂಡು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಹೋಗಿ ನಾನು ಹಾಗೂ ನಮ್ಮ ತಂದೆ ನಾಗಣ್ಣ,ಸವಿತಾ,ನೂರಜಹಾನ,ಗುಲಾಮ,ತಿಪ್ಪಣ್ಣ ರವರು ಹೊರ ರೋಗಿ ಅಂತ ಉಪಚಾರ ಪಡೆದು ಮನೆಗೆ ಬಂದೇವು. ನಂತರ ಪೊಲೀಸರು ಬಸವೇಶ್ವರ ಆಸ್ಪತ್ರೆಗೆ ಬಂದು ಹೋಗಿರುತ್ತಾರೆ ಅಂತ ಗೊತ್ತಾಗಿದ್ದು ಈ ಬಗ್ಗೆ ವಿಚಾರ ಮಾಡಿ ಹೇಳಿಕೆ ನೀಡಲು ಇದುದ್ದರಿಂದ ಮರುದಿನ ಅಂದರೆ ದಿನಾಂಕ:01/03/16 ರಂದು ನಮ್ಮ ತಂದೆಯವರು ಮತ್ತೆ ಬಸವೇಶ್ವರ ಆಸ್ಪತ್ರೆಗೆ ಹೋಗಿ ಮತ್ತೆ ತೋರಿಸಿಕೊಂಡು ಬಂದರು. ನಂತರ ನಮ್ಮ ತಂದೆಗೆ ನೋವು ಜಾಸ್ತಿ ಆಗಿದ್ದರಿಂದ ದಿನಾಂಕ:05/03/16 ರಂದು ಬೆಳಿಗ್ಗೆ ನಮ್ಮ ತಂದೆಗೆ ಕಲಬುರಗಿಯ ಸತ್ಯಾ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದೇವು. ನಂತರ ಅದೇ ದಿವಸ ರಾತ್ರಿ ಅಲ್ಲಿನ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದಕ್ಕೆ ಹೋಗಲು ತಿಳಿಸಿದ್ದರಿಂದ ನಮ್ಮ ತಂದೆಗೆ ಅಂಬುಲೇನ್ಸದಲ್ಲಿ ಹಾಕಿಕೊಂಡು ಕೇರ್ ಆಸ್ಪತ್ರೆ ಹೈದ್ರಾಬಾದದಲ್ಲಿ ಸೇರಿಕೆ ಮಾಡಿದ್ದು ನಮ್ಮ ತಂದೆಯವರು ಸದ್ಯ ಮಾತನಾಡುತ್ತಿರುವುದಿಲ್ಲ. ಈ ಬಗ್ಗೆ ಸದರಿ ಟ್ರ್ಯಾಕ್ಟರ ಮಾಲೀಕ ನಮಗೆ ಉಪಚಾರದ ಖರ್ಚು ಕೊಡುತ್ತೇನೆ ಅಂತ ಹೇಳುತ್ತಾ ಬಂದು ಹಣ ಕೊಡದೇ ಇದ್ದ ಕಾರಣ ನಾವು ನಮ್ಮ ತಂದೆಗೆ ಹೈದ್ರಾಬಾದನಲ್ಲಿ ಸೇರಿಕೆ ಮಾಡಿದ್ದು ದಿನಾಂಕ 26-03-2016 ರಂದು ಸಾಯಂಕಾಲ ಆಸ್ಪತ್ರೆಯಿಂದ ಡಿಸ್ಚಾರ್ಜ ಮಾಡಿಸಿಕೊಂಡು ಊರಿಗೆ ಬಂದಿದ್ದು ದಿನಾಂಕ 29-03-2016 ರಂದು ನಮ್ಮ ತಂದೆ ಅಪಘಾತದಲ್ಲಿ ಆದ ಗಾಯಗಳ ಉಪಚಾರ ಫಲಕಾರಿಯಾಗದೆ ಮೃತಪಟ್ಟಿದ್ದು ಇರುತ್ತದೆ ಅಂತಾ ಶ್ರೀಮತಿ ಉಮಾದೇವಿ ಗಂಡ ಈರಣ್ಣಾ ಮಾದಪ್ಪನವರ ಸಾ:ಟೆಂಗಳಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ಶ್ರೀ ರಾಜಾಪಟೇಲ ತಂದೆ ಹುಸೇನ ಪಟೇಲ ಸಾ: ಯಾಳವಾರ ಇವರು ದಿನಾಂಕ 28.03.2016 ರಂದು 2೦:00 ಗಂಟೆಗೆ ಯಾಳವಾರ ಕ್ರಾಸ್ ದಾಟಿ ಸ್ವಲ್ಪ ಮುಂದೆ ಜೇವರಗಿ- ಇಜೇರಿ ರೋಡಿನಲ್ಲಿ ನಮ್ಮೂರಿನ ರಫೀಕ್ ಈತನು ತನ್ನ ಮೋಟಾರು ಸೈಕಲ್ ನಂ ಸೈಕಲ್ ನಂ ಕೆ.ಎ32ಎನ್‌3325 ನೇದ್ದರ ಮೇಲೆ ನನಗೆ ಹಿಂದಿನಿ ಸೀಟಿನಲ್ಲಿ ಕೂಡಿಸಿಕೊಂಡು ಅತೀ ವೇಗ ಮತ್ತು ಅಲಕ್ಷ್ಯತನಿಂದ ಚಲಾಯಿಸಿಕೊಂಡು ಯಾಳವಾರ ಗ್ರಾಮದ ಕಡೆಗೆ ಹೋಗುತ್ತದ್ದಾಗ ಅದೇ ವೇಳೆಗೆ ಚಿಗರಳ್ಳಿ ಕಡೆಯಿಂದ ಒಂದು ಮೊಟಾರು ಸೈಕಲ್‌ ನಂ ಕೆ.ಎ32-5811 ನೇದ್ದರ ಸವಾರನು ತನ್ನ ಮೋಟಾರು ಸೈಕಲ್‌ ಹಿಂದೆ ಒಬ್ಬನನ್ನು ಕೂಡಿಸಿಕೊಂಡು ತನ್ನ ಮೋಟಾರು ಸೈಕಲ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಒಂದಕ್ಕೊಂದು ಮುಖಾಮುಖಿಯಾಗಿ ಡಿಕ್ಕಿ ಪಡಿಸಿ ಗಾಯಳಗೊಳಿಸಿದ್ದು ಶ್ರೀಮತಿ ಮಹಾದೇವಿ ಗಂಡ ಬೀಮಣ್ಣ @ ಬೀಮರಾಯ ತಳವಾರ ಸಾ: ಈಜೇರಿ ಇವರು ದಿನಾಂಕ 28.03.2016 ರಂದು ರಾತ್ರಿ 8.00 ಗಂಟೆಗೆ ಯಾಳವಾರ ಕ್ರಾಸ ಸಮೀಪ ಚಿಗರಳ್ಳಿ-ಈಜೇರಿ ರೋಡಿನಲ್ಲಿ ರಸ್ತೆ ಅಪಘಾತದಲ್ಲಿ ನನ್ನ ಗಂಡನಿಗೆ ಭಾರಿ ಗಾಯಗಳಾಗಿದ್ದಿರಂದ ಅವನಿಗೆ ಉಪಚಾರ ಕುರಿತು ಜೇವರಗಿ ಆಸ್ಪತ್ರೆಯಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಕಾಮರಡ್ಡಿ  ಆಸ್ಪತ್ರಯಲ್ಲಿ  ಸೇರಿಕೆ ಮಾಡಿದಾಗ ಅಲ್ಲಿ ವೈದ್ಯರು ನನ್ನ ಗಂಡನಿಗೆ ಆರಾಮ ಆಗುವದಿಲ್ಲಾ ಬೇರೆ ಆಸ್ಪತ್ರೆಗೆ ತಗೆದುಕೊಂಡು ಹೋಗುಲು ಹೇಳಿದರಿಂದ ನನ್ನ ಗಂಡನಿಗೆ ಇಂದು ರಾತ್ರಿಯೇ ಜೇವರಗಿ ಸರಕಾರಿ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿದಾಗ ಅವನಿಗೆ ಉಪಚಾರ ಫಲಕಾರಿಯಾಗದೇ ರಾತ್ರಿ 10.15 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

29 March 2016

Kalaburagi District Press Note

ಪತ್ರಿಕಾ ಪ್ರಕಟಣೆ

 ಇಂದು ದಿನಾಂಕ 29-03-2016 ರಂದು ಪೊಲೀಸ ಭವನ ಕಲಬುರಗಿಯಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ ಠಾಣೆಗಳಲ್ಲಿ ಮಾದಕ ವಸ್ತುಗಳ ಅಧಿನಿಯಮದಡಿಯಲ್ಲಿ ಜಪ್ತಿ ಮಾಡಿಕೊಂಡ ಮಾದಕ ವಸ್ತುಗಳನ್ನು ವಿಲೇವಾರಿ ಮಾಡುವ ಬಗ್ಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯ ನೀಡಿರುವ ನಿರ್ಧೇಶನಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಗೌರವಾನ್ವಿತ ನ್ಯಾಯ ಮೂರ್ತಿ  ಶ್ರೀ ಬಿ.ವಿ. ಪಾಟೀಲ ಪ್ರಧಾನ ನ್ಯಾಯಾಧೀಶರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಲಬುರಗಿ ರವರು ಭಾಗವಹಿಸಿ ಸಭೆಯಲ್ಲಿ ಹಾಜರಿದ್ದ ಎಲ್ಲಾ ಪೊಲೀಸ ಅಧಿಕಾರಿಗಳು ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮಾದಕ ವಸ್ತುಗಳ ಅಧಿನಿಯಮದಡಿ ಜಪ್ತಿ ಮಾಡಿಕೊಂಡ ಮಾದಕ ವಸ್ತುಗಳನ್ನು ಪೊಲೀಸ ಠಾಣೆಗಳಲ್ಲಿ ಯಾವ ರೀತಿ ಸಂಗ್ರಹಿಸಬೇಕು ಮತ್ತು ಜಪ್ತಿ ಮಾಡಿಕೊಂಡ ಮಾದಕ ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ವಿಧಿ ವಿಧಾನದ ಬಗ್ಗೆ ಹಾಗೂ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ಜಿಲ್ಲಾ ಸಂಗ್ರಾಹಾರಕ್ಕೆ ಜಮಾ ಮಾಡಿ, ಮಾದಕ ವಸ್ತುಗಳ ವಿಲೇವಾರಿ ಕಮೀಟಿಯ ಸೂಕ್ತ ಕಣ್ಗಾವಲಿನಲ್ಲಿ ವಿಲೇವಾರಿ ಮಾಡುವ ವಿಧಾನಗಳನ್ನು ಪರಿಣಾಮಕಾರಿ ಅನುಷ್ಠಾನದ ಬಗ್ಗೆ ತಿಳಿಸಿ ಹೇಳಿದರು. ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ   ಶ್ರೀ ಅಮಿತ ಸಿಂಗ ಐ.ಪಿ.ಎಸ್.  ಜಿಲ್ಲಾ ಪೊಲೀಸ ಅಧೀಕ್ಷಕರು ಕಲಬುರಗಿ ರವರು ಮಾದಕ ವಸ್ತುಗಳ ಅಧಿನಿಯಮದಡಿ ಜಪ್ತಿ ಮಾಡಿಕೊಂಡ ಮಾದಕ ವಸ್ತುಗಳನ್ನು ಯಾವ ಪ್ರಮಾಣದಲ್ಲಿ, ಯಾವ ರೀತಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕು, ಹಾಗೂ ಜಿಲ್ಲಾ ಮಾದಕ ವಸ್ತುಗಳ ವಿಲೇವಾರಿ ಕಮೀಟಿಯ ಕಾರ್ಯ ವಿಧಾನಗಳ ಬಗ್ಗೆ ವಿಸ್ತ್ರುತವಾಗಿ ಹಾಜರಿದ್ದ ಎಲ್ಲಾ ಅಧಿಕಾರಿಗಳಿಗೆ ಮನವರಿಕೆ ಮಾಡಿ ಕೊಟ್ಟರು. ಸಭೆಯಲ್ಲಿ ಶ್ರೀ ಜಯಪ್ರಕಾಶ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಲಬುರಗಿ ರವರು ಹಾಜರಿದ್ದರು..
     ಕಾರ್ಯಾಗಾರ ಸಮಾಪ್ತಗೊಂಡ ನಂತರ ಕಲಬುರಗಿ ಜಿಲ್ಲೆಯ ಎಲ್ಲ ಪೊಲೀಸ ಠಾಣೆಗಳಲ್ಲಿ ಮಾದಕ ವಸ್ತುಗಳ ಅಧಿನಿಯಮದಡಿ ಜಫ್ತಿ ಮಾಡಿಕೊಂಡ ಮಾದಕ ವಸ್ತುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲು ಡಿ.ಎ.ಆರ ಕೇಂದ್ರ ಸ್ಥಾನ ಕಲಬುರಗಿಯಲ್ಲಿ ಮಾದಕ ವಸ್ತುಗಳ ಸಂಗ್ರಹಾಗಾರವನ್ನು ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ಬಿ. ವಿ. ಪಾಟೀಲ ಪ್ರಧಾನ ನ್ಯಾಯಾಧೀಶರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಲಬುರಗಿ ರವರ ಅಮೃತ ಹಸ್ತದಿಂದ  ಉದ್ಘಾಟಿಸಿದರು.                                                                                                                   
                                                                    ಸಹಿ/-
                                                             ಪೊಲೀಸ್ ಅಧೀಕ್ಷಕರು

                                                                 ಕಲಬುರಗಿ

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 28.03.2016 ರಂದು ಮುಂಜಾನೆ 04:00 ಗಂಟೆಯಿಂದ 05:00 ಗಂಟೆಯ ಮಧ್ಯದ ಅವಧಿಯಲ್ಲಿ ಮುದಬಾಳ ಬಿ ಕೆನಾಲ್ ಹತ್ತಿರ ಜೇವರಗಿ ಶಹಾಪುರ ಮೇನ್‌ ರೋಡಿನಲ್ಲಿ ಲಾರಿ ನಂ ಹೆಚ್‌ಆರ್‌74-6122 ನೇದ್ದರ ಚಾಲಕ ನಿಸಾರ ಈತನು ತನ್ನ ಲಾರಿಯನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದದ್ದರಿಂದ ಒಮ್ಮೆಲೆ ಆಯ ತಪ್ಪಿದ್ದರಿಂದ ರೋಡಿನ ಪಕ್ಕದಲ್ಲಿನ ಕೇನಾಲ್‌ ನಲ್ಲಿ ಲಾರಿ ಪಲ್ಟಿಯಾಗಿ ಬಿದ್ದಿದ್ದರಿಂದ ಲಾರಿಯಲ್ಲಿನ ಮಮರೇಜ  ಈತನಿಗೆ ಹಾಗು ಲಾರಿ ಚಾಲಕನಿಗೆ ಭಾರಿ ಗಾಯವಾಗಿ ಸ್ಥಳದಲ್ಲಿ ಇಬ್ಬರು ಮೃತಪಟ್ಟಿರುತ್ತಾರೆ ಅಂತಾ ಶ್ರೀ ಎಕ್ಬಾಲ್‌ ತಂದೆ ಶಮಸೋದ್ದಿನ್ ಸಾ : ರಹಾಡಿ ತಾ: ತೌಡ ಜಿ : ಮೇವಾಹತ್ ( ಹರಿಯಾಣ) ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಯಶ್ವಂತ ತಂದೆ ಶಿವಶರಣಪ್ಪಾ ಆರಮನ ಸಾ:ಹೇರೂರ(ಬಿ) ತಾ:ಜಿ: ಕಲಬುರಗಿ ಇವರು ದಿನಾಂಕ:24-03-2016 ರಂದು ಮದ್ಯಾಹ್ನ 3 ಗಂಟೆಯ ಸಮಯಕ್ಕೆ ನಮ್ಮ ಗ್ರಾಮದ ಅಗಸಿಯಿಂದ ನನ್ನ ಮನೆಯ ಕಡೆಗೆ ಹೊರಟಿದ್ದ  ಸಮಯಕ್ಕೆ ಏಕಾಎಕಿಯಾಗಿ ಗುಂಪು ಕಟ್ಟಿಕೊಂಡು ಕೈಯಲ್ಲಿ ಬಡಿಗೆ ಮತ್ತು ಸೈಕಲ ಚೈನ ಹಿಡಿದುಕೊಂಡು ಬಂದು ನನ್ನ ಮೇಲೆ 1) ಹುಲ್ಲೇಪ್ಪಾ ತಂದೆ ಮಲ್ಕಪ್ಪಾ ಇಜೇರಿ 2) ಮಹೇಶ ತಂದೆ ಚಂದ್ರಾಮ ಕ್ಯಾಸ ಇವರಿಬ್ಬರೂ ನನಗೆ ನಡು ರಸ್ತೆಯಲ್ಲಿ ನನ್ನ ಕುತ್ತಿಗೆ ಹಿಡಿದು ನನಗೆ ಏಕೆ? ಹೊಡೆಯುತ್ತಿರಿ ಎಂದು ಕೇಳಿದ್ದರೆ ಹೇ ಹೊಲೆಯ ಸುಳಿಮಗನೇ ನಿನಗೆ ಸೊಕ್ಕು ಬಂದಿದೆ ನಿನ್ನ ಜೀವ ತೆಗೆಯುತ್ತೇವೆ ಎಂದು ಕುತ್ತಿಗೆ ಒತ್ತಿ ಹಿಡಿದು ನೆಲಕ್ಕೆ ಕೆಡವಿ ಎದೆಯ ಮೇಲೆ ಕುಳಿತು ಬಡಿಗೆ & ಸೈಕಲ ಚೈನನಿಂದ ಹೊಡೆದಿದ್ದಾರೆ. ಆಮೇಲೆ 3) ಹುಲ್ಲೆಪ್ಪಾ ತಂದೆ ಚಂದ್ರಾಮಪ್ಪಾ ಭಾಸಗಿ 4) ಬಸವರಾಜ ತಂದೆ ಶೇಖಪ್ಪಾ ಬಕಾರಿ 5) ಹಿರಗೇಪ್ಪಾ ತಂದೆ ಚಂದ್ರಾಮಪ್ಪಾ ಆಲೂರ 6) ಯಲ್ಲಪ್ಪಾ ತಂದೆ ಶಿವಶರಣಪ್ಪಾ ಭಾಸಗಿ ಇವರೆಲ್ಲರೂ ಓಡಿ ಬಂದು ಕಾಲಿ ನಿಂದ ನನ್ನ ಬಲಗಡೆ ಪಕ್ಕದ ಎಲುಬಿಗೆ ಹೊಟ್ಟೆಗೆ ಮುಷ್ಟಿಯಿಂದ ಬಲವಾಗಿ ಹೊಡೆದಿದ್ದಾರೆ. ಮತ್ತು 7) ಶ್ರೀಶೈಲ ತಂದೆ ಶಿವಶರಣಪ್ಪಾ ಸಿದ್ದಬೋ 8) ಬಸವರಾಜ ತಂದೆ ಶಿವಶರಣಪ್ಪಾ ಸಿದ್ದಬೋ 8) ಬಸವರಾಜ ತಂದೆ ಶಿವಶರಣಪ್ಪಾ ಸಿದ್ದಬೋ 9) ರಾಜು ತಂದೆ ಯಲ್ಲಪ್ಪಾ ಕ್ಯಾಸ 10) ಬಸವರಾಜ ತಂದೆ ಶಿವಶರಣಪ್ಪಾ ಭಾಸಗಿ 11) ಹುಲ್ಲೇಪ್ಪಾ ತಂದೆ ಹಿರಗೆಪ್ಪ ನಾರಾಯಣಪೂರ ಇವರೆಲ್ಲರೂ ಈ ಹೊಲೆ ಸುಳಿಮಗನಿಗೆ ಬಿಡಬೇಡರಿ ಇತನ ಜೀವ ತೆಗೆದು ಬಿಡೋಣ ಅಂತಾ ಹೊಲಸು ಶಬ್ದಗಳಿಂದ ಬೈದು ನನ್ನ ಎದೆಗೆ ಒದ್ದು ಗಾಯಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಜೇವರಗಿ ಠಾಣೆ : ಶ್ರೀ. ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ಠಾಣೆ ರವರು ದಿನಾಂಕ 28.03.2016 ರಂದು 04:00 ಗಂಟೆಯ ಸುಮಾರಿಗೆ ಯನಗುಂಟಿ ಗ್ರಾಮದ ಸಿಮಾಂತರದ ಭೀಮಾ ನದಿಯ ದಂಡೆಯಲ್ಲಿ ಸಂಬಂದಪಟ್ಟ ಇಲಾಖೆಯಿಂದ ಯಾವುದೆ ಪರವಾನಿಗೆಯನ್ನು ಪಡೆದುಕೊಳ್ಳದೆ ಸರಕಾರಕ್ಕೆ ಮತ್ತು ಸಂಭಂದಪಟ್ಟ ಇಲಾಖೆಗೆ ಮೋಸ ಮಾಡಿ ಟ್ರ್ಯಾಕ್ಟರ್ ನಂ ಕೆ.ಎ32ಟಿ.ಎ7064 ನೇದ್ದರಲ್ಲಿ ಕಳ್ಳತನದಿಂದ 1 ಬ್ರಾಸ್‌ ಮರಳನ್ನು ತುಂಬಿಕೊಂಡು ಬರುತ್ತಿದ್ದಾಗ ನಾನು ಮತ್ತು ಸಿಬ್ಬಂದಿ ಜನರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಟ್ರ್ಯಾಕ್ಟರ್‌ ಮತ್ತು ಅದರಲ್ಲಿದ್ದ ಒಂದು ಬ್ರಾಸ್ ಅಂ.ಕಿ 500 ನೇದ್ದವುಗಳನ್ನು ಜಪ್ತಿ ಮಾಡಿದ್ದು ಸದರಿ ಟ್ರ್ಯಾಕ್ಟರ್‌ ಚಾಲಕನ್ನು ದಸ್ತಗಿರಿ ಮಾಡಿ ಮುಂದಿನ ಕಾನೂನು ಕ್ರಮ ಕೈಕೊಳ್ಳಲು ಸಲ್ಲಿಸಿದ  ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಸೇಡಂ ಠಾಣೆ : ಶ್ರೀ ಶ್ರೀಶೈಲ್ ತಂದೆ ಸಾಬಣ್ಣ ಬಂದಳ್ಳಿ :ಉರ್ದು ಕಿರಿಯ ಪ್ರಾಥಮಿಕ ಶಾಲೆ ಹಂದರಕಿಯಲ್ಲಿ ಕನ್ನಡ ಶಿಕ್ಷಕ ಸಾ:ಕೊಟಗೇರಾ ತಾ:ಜಿ:ಯಾದಗಿರಿ ಇವರು ಠಾಣೆಗೆ ದಿನಾಂಕ 19/03/2016 ಮಧ್ಯಾನ 12-00 ಗಂಟೆಯಿಂದ ದಿನಾಂಕ 21/03/2016 ಮುಂಜಾನೆ 9-00 ಗಂಟೆಯ ಮಧ್ಯದ ಅವಧಿಯಲ್ಲಿ ಹಂದರಕಿ ಗ್ರಾಮದಲ್ಲಿರುವ ಸರಕಾರಿ ಉರ್ದು ಶಾಲೆಯ ಕ್ಲಾಸ ರೂಮಿನ, ಅಡುಗೆ ಕೋಣೆಯ, ಕಂಪ್ಯೂಟರ ಕೋಣೆಗಳ, ಮತ್ತು ಕಾರ್ಯಾಲಯದ  ಬಾಗಿಲುಗಳು ಕೀಲಿಗಳು ಯಾರೋ ಕಳ್ಳರು ಮುರಿದು ಶಾಲೆಯಲ್ಲಿ ಇದ್ದ ಒಂದು ಕಲರ ಟಿವಿ ಒಂದು ಗೋದ್ರೇಜ ಕಂಪನಿಯ ಡಿವಿಡಿ ಮತ್ತು ಪ್ರೌಢಶಾಲೆಯ ಕಂಪ್ಯೂಟರ ಕೋಣೆಯಲ್ಲಿ ಇಟ್ಟಿದ್ದ ಒಂದು ಏರ ಕೂಲರ ಹೀಗೆ ಒಟ್ಟು .ಕಿ 4100-00 ರೂಪಾಯಿಗಳ ಬೆಲೆಬಾಳುವ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

26 March 2016

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಕವಿತಾಬಾಯಿ ಗಂಡ ದತ್ತು ಜಮದಾರ  ಸಾ; ಕೆರಿಬೋಸಗಾ ಗ್ರಾಮ ತಾ;ಜಿ;ಕಲಬುರಗಿ ಇವರ ಗಂಡ ದತ್ತು ತಂದೆ ಅಂಬರಾಯ @ ಅಮೃತ ಜಮದಾರ ಇವರು ದಿನಾಂಕ.24-3-2016 ರಂದು ಮುಂಜಾನೆ ಉಪಳಾಂವದಲ್ಲಿರುವ ತನ್ನ ಅಕ್ಕಳಿಗೆ ಭೇಟಿಯಾಗಿ ಬರುವದಾಗಿ ನಮ್ಮ ಹೊಂಡಾ ಶೈನ ಮೋಟಾರ ಸೈಕಲ್ ನಂ.ಕೆ.ಎ.28 ಇಎ 4301 ನೆದ್ದರ ಮೇಲೆ ಅವರ ಸಂಗಡ ನಮ್ಮ ಗ್ರಾಮದ ಶಾರದಾಬಾಯಿ ಗಂಡ ಬಸವರಾಜ ಪೊಲೀಸ್ ಗೌಡರ ಇವರನ್ನು ಕರೆದುಕೊಂಡು ಮನೆಯಿಂದ ಹೋದರು  ಸಾಯಂಕಾಲ 3 ಪಿ.ಎಂ.ದ ಸುಮಾರಿಗೆ ಯಾರೋ ನಮ್ಮ ಮಗ ಆಕಾಶನ ಮೋಬಾಯಿಲಗೆ ಫೋನ ಮಾಡಿ ತಿಳಿಸಿದ್ದು ಏನೆಂದರೆ  ಹುಮನಾಬಾದ ರೋಡನ  ಉಪಳಾಂವ ಕ್ರಾಸ ಹತ್ತಿರ ನನ್ನ ಗಂಡನ ಮೋಟಾರ ಸೈಕಲ್ ಸ್ಕಿಡಾಗಿ ಬಿದ್ದಿದರಿಂದ ತಲೆಗೆ ,ಎದೆಗೆ ಹಾಗೂ ಶಾರದಾಬಾಯಿ ಪೊಲೀಸ ಗೌಡರ ಇವರಿಗೆ ಗಾಯಗಳಾಗಿದ್ದು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವದಾಗಿ ತಿಳಿಸಿದರು ಆಗ ನಾನು ಮತ್ತು ನನ್ನ ಮಗ ಆಕಾಶ ಇಬ್ಬರು ಕೂಡಿಕೊಂಡು ಒಂದು ಮೋಟಾರ  ಸೈಕಲ್ ಮೇಲೆ  ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ನೊಡಲಾಗಿ ನನ್ನ ಗಂಡ ದತ್ತು ಇವರಿಗೆ ವಿಚಾರಿಸಲು ತಿಳಿಸಿದ್ದು ಏನೆಂದರೆ  ಮದ್ಯಾನ 2-00 ಗಂಟೆಯ ಸುಮಾರಿಗೆ  ಉಪಾಳಂವ ದಿಂದ ಕಲಬುರಗಿ ಕಡೆಗೆ ಬರುತ್ತಿರುವಾಗ ಹುಮನಾಬಾದ ರೋಡನ ಉಪಳಾಂವ ಕ್ರಾಸ ಹತ್ತಿರ  ವೇಗವಾಗಿ ಬರುತ್ತಿರುವಾಗ ಒಮ್ಮಲೆ ಬ್ರೇಕ್ ಹಾಕಿದಾಗ ಮೋಟಾರ ಸೈಕಲ್ ಸ್ಕೀಡಾಗಿ ಕೆಳಗೆ ಬಿದ್ದಾಗ ಇದರಿಂದ  ತನೆಗೆ ತಲೆಗೆ ಮುಖಕ್ಕೆ, ಎದೆಗೆ ಭಾರಿ ಪೆಟ್ಟಾಗಿರುತ್ತದೆ , ಮತ್ತು ಶಾರದಬಾಯಿ ಗಂಡ ಬಸವರಾಜ ಪೊಲೀಸ್ ಗೌಡ ಇವಳಿಗೆ ಬಲಕಣ್ಣಿ ಪಕ್ಕದಲ್ಲಿ ಬಾರಿ ರಕ್ತಗಾಯವಾಗಿರುತ್ತವೆ ಅಂತಾ ತಿಳಿಸಿದನು,ನನ್ನ ಗಂಡನಿಗೆ ತಲೆಗೆ ಎದೆಗೆಭಾರಿಪೆಟ್ಟಾಗಿದ್ದರಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿ .ಎ.ಎಸ್.ಎಂ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಗುಣ ಮುಖನಾಗದ ಕಾರಣ ದಿನಾಂಕ.   25-3-2016 ರಂದು ಪುನಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಉಪಚಾರ ದಲ್ಲಿ ಗುಣ ಮುಖನಾಗದೆ ದಿನಾಂಕ.26-3-2016 ರಂದು 00-15 ಎ.ಎಂ.ಕ್ಕೆ. ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಪ್ರಭುಲಿಂಗ ತಂದೆ ಸದಾಶಿವ ಗಳವೇರಿ ಸಾ|| ಕರಜಗಿ ಗ್ರಾಮ ಇವರು ಮಾಹಾರಾಷ್ಟ್ರದ ಪೂನಾದಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ನಮ್ಮ ಅಜ್ಜ ಕರಜಗಿ ಸೀಮಾಂತರದಲ್ಲಿ ಬರುವ ಹೊಲ ಸರ್ವೆ ನಂಬರ 242/2 ರಲ್ಲಿ 31 ಎಕರೆ 30 ಗುಂಟೆ ಹಾಗೂ ಸರ್ವೆ ನಂಬರ 241/1 ರಲ್ಲಿ 35 ಎಕರೆ 21 ಗುಂಟೆ ಇರುವ ಜಮೀನುಗಳ ವಿಷಯವಾಗಿ ನಮಗೂ ಮತ್ತು ನಮ್ಮ ತಂದೆಯ ಸೋದರ ಅತ್ತೆಯ ಮಕ್ಕಳಾದ 1) ಹಣಮಂತ ತಂದೆ ಕಾಶಿರಾಮ ಉಪ್ಪಾರ 2) ಮಾಳಪ್ಪ ತಂದೆ ಕಾಶಿರಾಮ ಉಪ್ಪಾರ 3) ಸಿದ್ರಾಮ ತಂದೆ ಕಾಶಿರಾಮ ಉಪ್ಪಾರ ಸಾ|| ಎಲ್ಲರೂ ಕರಜಗಿ ಗ್ರಾಮ ಇವರುಗಳಿಗೂ ತಕರಾರು ಇದ್ದು, ಸದರಿ ವಿಷಯವಾಗಿ ಅಫಜಲಪೂರ ಮಾನ್ಯ ನ್ಯಾಯಾಲಯದಲ್ಲಿ ಸಿವಿಲ್ ಕೇಸ್ ನಡೆದಿರುತ್ತದೆ. ನಾಳೆ ದಿನಾಂಕ 27-03-2016 ರಂದು ಕರಜಗಿ ಗ್ರಾಮದ ಶ್ರೀ ಯಲ್ಲಾಲಿಂಗ ದೇವರ ಜಾತ್ರೆ ಇದ್ದರಿಂದ ನಿನ್ನೆ ದಿನಾಂಕ 25-03-2016 ರಂದು ಮದ್ಯಾಹ್ನ 12:00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಆಯಿ ಮುತ್ಯಾನ ಊರಾದ ಸಾಲುಟಗಿ ಗ್ರಾಮದ ಮಲಕಪ್ಪ ತಂದೆ ಭಿಮಶಾ ಧನ್ನಿಂಗ್ರ ಇವರೊಂದಿಗೆ ಕರಜಗಿ ಗ್ರಾಮಕ್ಕೆ ಬಂದಿರುತ್ತೇನೆ. ಮದ್ಯಾಹ್ನ 12:30 ಗಂಟೆ ಸುಮಾರಿಗೆ ನಾನು ಮತ್ತು ಸದರಿ ಮಲಕಪ್ಪ ಇಬ್ಬರು ಲಕ್ಷ್ಮೀ ಗುಡಿಗೆ ಕಾಯಿ ಒಡೆದುಕೊಂಡು ಬರಲು ಕರಜಗಿ ಗ್ರಾಮದ ಉಡಚಾಣ ರಸ್ತೆಗೆ ಇರುವ ಪೆಟ್ರೋಲ ಬಂಕ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ನಮ್ಮ ಜೋತೆಗೆ ಹೊಲದ ವಿಷಯವಾಗಿ ಜಗಳ ಮಾಡುತ್ತಿದ್ದ 1) ಹಣಮಂತ ತಂದೆ ಕಾಶಿರಾಮ ಉಪ್ಪಾರ 2) ಮಾಳಪ್ಪ ತಂದೆ ಕಾಶಿರಾಮ ಉಪ್ಪಾರ 3) ಸಿದ್ರಾಮ ತಂದೆ ಕಾಶಿರಾಮ ಉಪ್ಪಾರ ಇವರುಗಳು ನನ್ನ ಎದುರಿಗೆ ಬಂದು ಏನೋ ಬೋಸಡಿ ಮಗನೆ ಇಷ್ಟು ದಿನ ಊರ ಬಿಟ್ಟಿದಿ ಈಗ್ಯಾಕ ಬಂದಿ, ನಮ್ಮ ಜೋತೆನೆ ಕೋರ್ಟನಲ್ಲಿ ಕೇಸ್ ನಡೆಸ್ತಿ ಬೋಸಡಿ ಮಗನಾ ಅಂತಾ ಹೊಲಸ ಹೊಲಸು ಬೈಯುತ್ತಿದ್ದರು. ಆಗ ನಾನು ಯಾಕ ಬೈತಿರಿ ಕೋರ್ಟನಲ್ಲಿ ಕೇಸ್ ನಡೆದಾದ, ಕೋರ್ಟನಲ್ಲೆ ತಿರ್ಮಾನ ಆಗ್ಲಿ ಅಂತಾ ಹೇಳಿದೆನು, ಅದಕ್ಕೆ ಸದರಿಯವರು ಮಗನೆ ನಮಗೆ ತಿರುಗಿ ಮಾತಾಡ್ತಿ ಅಂತಾ ಮೂರು ಜನರು ಕೂಡಿ ನನ್ನ ಏದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಹೊಡೆಯುತ್ತಿದ್ದರು, ಹಣಮಂತ ಈತನು ಅಲ್ಲಿಯೆ ಬಿದ್ದ ಒಂದು ಬಡಿಗೆ ತಗೆದುಕೊಂಡು ನನ್ನ ತಲೆಯ ಬಲಭಾಗಕ್ಕೆ ಹೊಡೆದನು, ಇದರಿಂದ ನನ್ನ ತಲೆಗೆ ರಕ್ತಗಾಯವಾಯಿತು, ಸದರಿಯವರು ನನಗೆ ಹೊಡೆಯುತ್ತಿದ್ದಾಗ ನನ್ನ ಜೋತೆಗೆ ಇದ್ದ ಮಲಕಪ್ಪ ಧನ್ನಿಂಗ್ರ ಇವರು ನನಗೆ ಹೊಡೆಯುವುದನ್ನು ಬಿಡಿಸಿರುತ್ತಾರೆ, ಆಗ ಸದರಿ ಮೂರು ಜನರು ಮಗನೆ ನೀನು ಊರಲ್ಲಿ ಬಾ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವ ಬೆದರಿಕೆ ಹಾಕಿ ಕಟ್ಟಿಗೆ ಅಲ್ಲೆ ಬಿಸಾಕಿ ಹೋಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 24-03-16 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ನಮ್ಮ ಅಣ್ಣ ಪರಶುರಾಮನ ಹೆಂಡತಿ ಜಗದೇವಿಬಾಯಿ  ಇವರು ಅಡುಗೆ ಮಾಡುತ್ತಿರುವಾಗ ಆಕಸ್ಮಿಕವಾಗಿ ಅವರ ಮೈ ಸುಟ್ಟಿದ್ದು, ನನ್ನ ಅಣ್ಣ ಪರಶುರಾಮ ಇವರು ನಮ್ಮ ಅತ್ತಿಗೆ ಉಪಚಾರ  ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿದ್ದು, ನಮ್ಮ ಅತ್ತಿಗೆ ಆರೈಕೆ ಕುರಿತು ನಮ್ಮ ಅತ್ತಿಗೆ ತಾಯಿ ಸೀನುಬಾಯಿ ಗಂಡ ಪ್ರಭು ರಾಠೋಡ ಇವರು ಸರಕಾರಿ ಆಸ್ಪತ್ರೆಯಲ್ಲಿ ಇರುತ್ತಾರೆ. ಹೀಗಿದ್ದು  ಇಂದು ದಿನಾಂಕ 25/03/16 ರಂದು ಸಂಜೆ 5-00 ಗಂಟೆ ಸುಮಾರಿಗೆ ನಾನು ಮತ್ತು ತಂದೆ, ಜೀವಲಾ, ತಾಯಿ ಶಾಂತಾಬಾಯಿ ಮೂವರು ಮನೆಯಲ್ಲಿ ಇದ್ದಾಗ ನಮ್ಮ ಅಣ್ಣ ಪರಶುರಾಮ ಇತನು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ  ಉಪಚಾರ ಹೊಂದುತ್ತಿರುವ ನಮ್ಮ ಅತ್ತಿಗೆ ಜಗದೇವಿ ಮತ್ತು ಅತ್ತಿಗೆ ತಾಯಿ ಸೀನುಬಾಯಿ ಇವರಿಗೆ ಊಟ ಕಟ್ಟಿಕೊಂಡು ಸರಕಾರಿ ಆಸ್ಪತ್ರೆ ಕಲಬುರಗಿಗೆ ಹೋಗಿ ಊಟ ಕೊಟ್ಟು ಬರುತ್ತೇನೆಂದು ಹೇಳಿ ಮನೆಯಿಂದ  ತನ್ನ  ಹೊಂಡಾ ಯೂನಿಕ್ರಾನ್  ಎಂಹೆಚ್-04 ಸಿಎಲ್ 3439 ನೇದ್ದರ ಮೇಲೆ ಒಬ್ಬನೇ ಕುಳಿತುಕೊಂಡು ಹೋದನು. ರಾತ್ರಿ 8-00 ಗಂಟೆ ಸುಮಾರಿಗೆ ಮನೆಯುಲ್ಲಿ ಇದ್ದಾಗ ನನಗೆ ಪರಿಚಯದ ಬೆಡಶೂರ ಗ್ರಾಮದ ದಶರಥ ತಂದೆ ಭೀಮರಾಯ ಒಡೆಯರ ಇವರು ನನ್ನ ಮೋಬಾಯಿಲಿಗೆ ಪೋನ ಮಾಡಿ ತಿಳಿಸಿದ್ದೆನೆಂದೆರೆ, ನಿಮ್ಮ  ಅಣ್ಣ ಪರಶುರಾಮ ಇತನು ತನ್ನ  ಹೊಂಡಾ ಯೂನಿಕ್ರಾನ್  ಎಂಹೆಚ್-04 ಸಿಎಲ್ 3439 ಮೇಲೆ ಒಬ್ಬನೇ ಕುಳಿತುಕೊಂಡು ಆಲಗೂಡ ಕ್ರಾಸ ದಾಟಿ ಇರುವ ಒಂದು ಬ್ರೀಡ್ಜ  ಹತ್ತಿರ ಬಂದಾಗ ಕಲಬುರಗಿ ಕಡೆಯಿಂದ ಯಾವುದೋ ಒಂದು ಅಪರಿಚಿತ ವಾಹನ ಚಾಲಕ ಅತಿವೇಗದಿಂದ ನಡೆಸುತ್ತಾ ಬಂದು ನಿನ್ನ ಅಣ್ಣ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿ ಹಾಗೇ ಓಡಿಸಿಕೊಂಡು ಹೋಗಿದ್ದರಿಂದ, ಪರಶುರಾಮನಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದಾನೆ  ಅವನ ಮೃತ ದೇಹ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ಗ್ರಾಮೀಣ ಠಾಣೆ ಕಲಬುರಗಿ ಪೊಲೀಸರು ಸಾಗಿಸುತ್ತಿದ್ದಾರೆ ಅಂತಾ ಯಾರೋ ನನ್ನ ಮೋಬಾಯಿಲಿಗೆ ಪೋನ ಮಾಡಿ ತಿಳಿಸಿಸಿದ್ದು ನಾವು ಸರಕಾರಿ ಆಸ್ಪತ್ರೆಗೆ ಹೋಗಿ ನೋಡಲು ನಮ್ಮ ಅಣ್ಣನು ಅಪಘಾತದಿದಂದ ಮೃತಪಟ್ಟಿರುತ್ತಾನೆ ಅಂತಾ ಶ್ರೀ ನಕಲು ತಂದೆ  ಜೀವಲಾ ಚವ್ಹಾಣ ಸಾ: ಅಣಕಲ ಖಿಂಡಿ ತಾಂಡಾ ತಾ: ಚಿತ್ತಾಪೂರ ಜಿಲ್ಲಾ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಜ್ಯೋತಿ ಗಂಡ ರೇವಣಸಿದ್ದಪ್ಪಾ ಕಲ್ಯಾಣಿ ವಿಳಾಸ ;ಪ್ಲಾಟ ನಂ. 213 ರೇವಣಸಿದ್ದಶ್ವರ ಕಾಲೂನಿ ಕಲಬುರಗಿ, ಇವರನ್ನು ರೇವಣಸಿದ್ದಪ್ಪಾ ತಂದೆ ಕರಬಸ್ಸಪ್ಪಾ ಕಲ್ಯಾಣಿ ಸಾ;ರೇವಣಸಿದ್ದೇಶ್ವರ ಕಾಲೂನಿ ಕಲಬುರಗಿ ಇತನೊಂದಿಗೆ ದಿನಾಂಕ.18-4-2009 ರಂದು ಗುರು ಹಿರಿಯರ ಸಮಕ್ಷಮಾದಲ್ಲಿ ಕಲಬುರಗಿಯ ವೀರೆಂದ್ರ ಪಾಟೀಲ್ ಕಲ್ಯಾಣ ಮಂಟಪದಲ್ಲಿ  ವರೋಪಚಾರ ಕುರಿತು 21 ತೊಲೆ ಬಂಗಾರ, ಹಿಡಿದಂತಹಾ ಬಟ್ಟೆ ,ಹಾಂಡೆಬಾಂಡೆ ಹಾಗೂ ಗೃಹ ಬಳಕೆಯ ಸಾವಾನುಗಳು ಹೀಗೆ ಒಟ್ಟು 9 ರಿಂದ 10 ಲಕ್ಷದವರೆಗೆ ಹಣ ಖರ್ಚು ಮಾಡಿ ನಮ್ಮ ತಂದೆ ತಾಯಿಯವರು ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಾದ ನಂತರ ನನ್ನ ಗಂಡ ರೇವಣಸಿದ್ದಪ್ಪಾ ಇವರು ಎಂ.ಬಿ.ಬಿ.ಎಸ್. ಮುಗಿದ ನಂತರ ಹೆಚ್ಚಿನ ವಿದ್ಯಾಬ್ಯಾಕೆಂದು ಅಂದರೆ ಡಿ.ಎನ್.ಬಿ. ರೆಡಿಯಾಲೋಜಿ ಓದಲು ಒಂದು ವರ್ಷದ ಮಟ್ಟಿಗೆ ಬೆಂಗಳೂರಿಗೆ ಹೋಗಿದ್ದು ನಾನು ನನ್ನ ತವರು ಮನೆಯಲ್ಲಿ ಇದ್ದೇನು. ಹೆಚ್ಚಿನ ಓದು ಮುಗಿಸಿಕೊಂಡು ಕಲಬುರಗಿಗೆ ಬಂದು ನೆಲಸಿದರು ನಾನು ನಡೆಯಲು ಗಂಡನ ಮನೆಗೆ ಅಂದರೆ ಆರ್.ಎಸ್.ಕಾಲೂನಿಗೆ ಬಂದಿದ್ದು ಅಲ್ಲಿ 3-4 ದಿವಸ ಅಷ್ಟೆ ಚನ್ನಾಗಿ ನೋಡಿಕೊಂಡಿದ್ದು ನಮ್ಮ ಅತ್ತೆ ನಾಗಮ್ಮ ನನಗೆ ನೀನು ಮದುವೆಯಲ್ಲಿ ಹುಂಡ, ಬಂಗಾರ ತಂದಿಲ್ಲಾ , ನಿಮ್ಮ ತಾಯಿ ತಂದೆಯ ಇನ್ನೂ ಹಣ ಬಂಗಾರ ತೆಗೆದುಕೊಂಡು ಬಾ ನನ್ನ ಮಗ ಡಾಕ್ಟರ ಇದ್ದಾನೆ ಎಂದು ಹಿಯಾಳಿಸಿ ಬೈಯುವದು ಅಲ್ಲದೆ ಅಡಿಗೆ ಸರಿಯಾಗಿ ಮಾಡಲು ಬರುವದಿಲ್ಲಾ ಎಂದು ಮಾನಸಿಕವಾಗಿ ತೊಂದರೆ ಕೋಡುತ್ತಾ ಬಂದಿರುತ್ತಾರೆ. ಈ ವಿಷಯವನ್ನು ನನ್ನ ಗಂಡ ರೇವಣಸಿದ್ದಪ್ಪಾ ಇವರಿಗೆ ತಿಳಿಸಿದರು ಕೂಡಾ ಅವರು ಕೂಡಾ ನಮ್ಮ ಅತ್ತೆಯವರ ಮಾತುಕೇಳಿ ರಂಡಿ ನಾನು ಎಂ.ಡಿ.ಮಾಡಿ ಬಹಳ ಹಣ ಖರ್ಚ ಆಗಿದ್ದು ನಿಮ್ಮ ತಂದೆ ತಾಯಿಯವರಿಂದ 20 ಲಕ್ಷ ರೂಪಾಯಿ  ತೆಗೆದುಕೊಂಡು ಬಾ ಎಂದು ಅವಾಚ್ಯವಾಗಿ ಬೈಯುವದು , ಬೆಡ ರೂಮಿನಲ್ಲಿ ನನಗೆ ಕೈಯಿಂದ ಹೊಡೆಬಡಿ ಮಾಡಿ ದೈಹಿಕವಾಗಿ ಹಿಂಸೆ ಕೊಟ್ಟಿರುತ್ತಾರೆ.  ನನಗೆ ತೊಂದರೆ ಕೋಡುತ್ತಿದ್ದ ಬಗ್ಗೆ ನನ್ನ ತಂದೆ ತಾಯಿಯವರಿಗೆ ವಿಷಯ ತಿಳಿಸಿದಾಗ ನಮ್ಮ ತಂದೆ ಡಾ;ಚಂದ್ರಶೇಖರ ಪಾಟೀಲ್  ಮತ್ತು ನನ್ನ ತಾಯಿ ಸರೋಜಾ .ಸಿ.ಪಾಟೀಲ್ ಇವರುಗಳು ಮಹಾಗಾಂವ ಗ್ರಾಮದ ಹಿರಿಯರಾದ 1)ಶಿವಕುಮಾರ ತಡಕಲ್ ,2)ಶಿವಪ್ರಭು ಪಾಟೀಲ್. 3) ಶರಣಪ್ಪಾ ಹತ್ತಿ 4) ಸನೀಲ್ ಹತ್ತಿ , 5)ಶಿತಿಕಂಠ ತಡಕಲ್ 7)ಶಂಕರೆಪ್ಪಾ ಹತ್ತಿ 8) ಸುಭಾಶ ಪಾಟೀಲ್ ಕೆಸರಟಗಿ  ಇವರುಗಳೆಲ್ಲರೂ ನನ್ನ ಗಂಡ ಅತ್ತೆ ಯವರಿಗೆ ಸುಮಾರು ಬಾರಿ ಬುದ್ದಿಮಾತು ಹೇಳಿದ್ದು ಅಲ್ಲದೆ ಪಂಚಾಯತ ಮಾಡಿದರೂ ಕೂಡಾ  ನನಗೆ ತೊಂದರೆ ಕೊಡುವದು ಬಿಟ್ಟಿರುವದಿಲ್ಲಾ . ದಿನಾಂಕ  23-3-2013 ನೇ ಸಾಲಿನಲ್ಲಿ  ನನ್ನ ಗಂಡ ರೇವಣಸಿದ್ದಪ್ಪಾ ಬೀದರದಿಂದ ಕಲಬುರಗಿಗೆ ಬಂದು  ಕೆ.ಬಿ.ಎನ್. ಆಸ್ಪತ್ರೆಯಲ್ಲಿ ನೌಕರಿ ಮಾಡಿಕೊಂಡಿದ್ದು ನಾವು ಕಲಬುರಗಿಗೆ ಬಂದ ನಂತರ ನನ್ನ ಗಂಡ ರೇವಣಸಿದ್ದಪ್ಪಾ ಹಾಗೂ ನನ್ನ ಅತ್ತೆ ನಾಗಮ್ಮಾ ಹಾಗೂ ನಮ್ಮ ಭಾವ ಶಿವಶರಣಪ್ಪಾ ಕಲ್ಯಾಣಿ ಹಾಗೂ ನೆಗೆಣಿ ಸ್ವಾತಿ ಇವರೆಲ್ಲರೂ ಕೂಡಿಕೊಂಡು  ರಂಡಿ ನಿಮ್ಮ ತಂದೆ ತಾಯಿ ಆಸ್ತಿವಂತರಿರುತ್ತಾರೆ  ನಿನ್ನ ತವರು ಮನೆಯಿಂದ ಇನ್ನೂ 20 ಲಕ್ಷ ರೂಪಾಯಿ ಹಾಗೂ ನಿಮ್ಮ ತಂದೆ ತಾಯಿ ಕಟ್ಟಿಸಿದ ಹೊಸಮನೆಯನ್ನು ನನ್ನ ಹೆಸರಿಗೆ ಮಾಡಿಕೊಂಡು ಬಂದರೆ ನಮ್ಮ  ಮನೆಯಲ್ಲಿ ನಿನಗೆ ಜಾಗ ಇಲ್ಲದಿದ್ದರೆ ನಿನ್ನ ಮಗು ತೆಗೆದುಕೊಂಡು ನಿನ್ನ ತವರು ಮನೆಗೆ ಹೋಗು ಅಂತಾ ನಾಲ್ಕು ಜನರು ನನಗೆ ಹೊಡೆಬಡಿ ಮಾಡಿ ಮನೆಯಿಂದ ಹೊರೆಗೆ ಹಾಕಿದಾಗ ನಾನು ಕಿರಕುಳ ತಾಳಲಾರದೆ ನನ್ನ ತಂದೆ ತಾಯಿಯವರ ಮನೆಗೆ ಬಂದು ಉಳಿದುಕೊಂಡಿದ್ದು ದಿನಾಂಕ. 15-3-2016  ರಂದು ಮುಂಜಾನೆ 7-00 ಗಂಟೆಯ ಸುಮಾರಿಗೆ ನನ್ನ ತಂದೆ ಚಂದ್ರಶೇಖರ ಪಾಟೀಲ್ , ತಾಯಿ ಶ್ರೀಮತಿ ಸರೋಜಾ ಇಬ್ಬರು ಕೂಡಿಕೊಂಡು ನನಗೆ ನನ್ನ ಗಂಡ ರೇವಣಸಿದ್ದಪ್ಪಾ ಕಲ್ಯಾಣಿ ಇವರ ಹತ್ತಿರ ಕರೆದುಕೊಂಡು ವಿಚಾರ ಮಾಡೋಣ ನಡೆಯಿರಿ ಅಂತಾ ಹೋದಾಗ ರೇವಣಸಿದ್ದೇಶ್ವರ ಕಾಲೂನಿ  ರವಿ ಮಾಸ್ತರ ಇವರ ಮನೆಯ ಹತ್ತಿರ ಹೋಗುತ್ತಿರುವಾಗ ಅದೇ ವೇಳಗೆ ನನ್ನ ಗಂಡ ಎದರುಗಡೆ ಬಂದನು ಆಗ ನನ್ನ ತಂದೆ ತಾಯಿಯವರು ನಿಂತು ಮಾತಾಡಿಸಿ ನನ್ನ ಮಗಳನ್ನು ಕರೆದುಕೊಂಡು ಹೋಗಿ ಸರಿಯಾಗಿ ಜೀವನ ಮಾಡಿರಿ ಅಂತಾ ಕೇಳಿದಕ್ಕೆ ಆಗ ನನ್ನ ಗಂಡ ರೇವಣಸಿದ್ದಪ್ಪಾ ಕಲ್ಯಾಣಿ ಇವರು ನನಗೆ  ತಲೆಯ ಮೇಲಿನ ಕೂದಲು ಹಿಡಿದು ಎಳೆದಾಡಿ  ಏನೆ ರಂಡಿ  ನಿಮ್ಮ ತಾಯಿ ತಂದೆಯವರನ್ನು ಕರೆದುಕೊಂಡು ಬಂದು ನನಗೆ ಮರ್ಯಾದೆ ತೆಗೆಯುತ್ತಿ ಬೋಸಡಿ ಅಂತಾ ಅವಾಚ್ಯ ಶಬ್ದಗಳಿಂದ ಕೈಯಿಂದ ಕಪಾಳಕ್ಕೆ ಹೋಡೆದನು , ಅಷ್ಟರಲ್ಲಿ ಈ ವಿಷಯವನ್ನು ಕೇಳಿ ಅವನ ತಾಯಿ ನಾಗಮ್ಮ , ಅಣ್ಣ ಶಿವಶರಣಪ್ಪಾ , ಅತ್ತಿ ಸ್ವಾತಿ ಇವರು ಕೂಡಾ ಅಲ್ಲಿಗೆ ಬಂದು ರಂಡಿ ನಾವು ಹೇಳಿದಂತೆ 20 ಲಕ್ಷ ರೂಪಾಯಿ , ನಿಮ್ಮ ತಂದೆ ತಾಯಿ ಕಟ್ಟಿಸಿದ ಮನೆಗೆ ತೆಗೆದುಕೊಂಡ ಬಂದರೆ ನಿನಗೆ ಮನೆಯಲ್ಲಿ ಜಾಗ ಇದೆ ಇಲ್ಲದಿದ್ದರೆ ಮನೆಗೆ ಬಂದರೆ ನಿನಗೆ ಉಳಿಸುವದಿಲ್ಲಾ ಅಂತಾ ಜೀವ ಬೆದರಿಕೆ ಹಾಕಿ ಹೋದರು ಆಗ ನನ್ನ ತಂದೆ ತಾಯಿ ಹಾಗೂ ರವಿ ಮಾಸ್ತರ ಇವರು ನನಗೆವಾಪಾಸ ಮನೆಗೆ ಕರೆದುಕೊಂಡು ಬಂದಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

25 March 2016

Kalaburagi District Reported Crimes

ಕೊಲೆ ಪ್ರಕರಣ:
ಅಫಜಲಪೂರ ಠಾಣೆ : ಶ್ರೀಮತಿ ದುಂಡಮ್ಮ ಗಂಡ ಕಲ್ಲಪ್ಪ @ ಕಲ್ಯಾಣಿ ಮ್ಯಾಕೇರಿ ಇವರ ಗಂಡ ಮತ್ತು ಎರಡು ಜನ ಗಂಡು ಮಕ್ಕಳೊಂದಿಗೆ ಜಿವನ ಸಾಗಿಸುತ್ತಿರುತ್ತೇನೆ. ನನ್ನ ಗಂಡನಾದ ಕಲ್ಲಪ್ಪ @ ಕಲ್ಯಾಣಿ ತಂದೆ ಚಂದಪ್ಪ ಮ್ಯಾಕೇರಿ ಇವರು ಈಗ ಕಳೆದ ವರ್ಷ ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ನಮ್ಮೂರಿನ ನಮ್ಮ ಸಮಾಜದ ರಮೇಶ ತಂದೆ ಭೀಮಶಾ ದೊಡ್ಡಮನಿ ಇವರ ವಿರುದ್ದವಾಗಿ ನಮ್ಮ ಗ್ರಾಮದಲ್ಲಿ ಚುನಾವಣೆಗೆ ನಿಂತು ಗೆದ್ದಿರುತ್ತಾರೆ, ಅಂದಿನಿಂದ ನನ್ನ ಗಂಡನ ವಿರುದ್ದ ಚುನಾವಣೆಯಲ್ಲಿ ಸೋತ ರಮೇಶ ದೊಡ್ಡಮನಿ ಹಾಗೂ ಅವನ ಅಣ್ಣ ತಮ್ಮರು ಹಾಗೂ ಅವನ ಅಣ್ಣ ತಮ್ಮರ ಮಕ್ಕಳು ನನ್ನ ಗಂಡ ಹಾಗೂ ನಮ್ಮ ಮಕ್ಕಳ ಮೇಲೆ ದ್ವೇಷ ಮಾಡಿಕೊಂಡು ಜಗಳ ತಗೆಯುವುದು ಮಕ್ಕಳೆ ನಿಮಗೆ ಜಿವ ಸಹಿತ ಬಿಡುವುದಿಲ್ಲ, ನೀವು ಹೇಗೆ ಬಾಳೆ ಮಾಡುತ್ತಿರಿ ನಾವು ನೋಡುತ್ತೇವೆ ಅಂತಾ ಜಗಳ ತಗೆಯುತ್ತಾ ಬಂದಿರುತ್ತಾರೆ, ಹಾಗೂ ಈಗ ನಮ್ಮೂರಿನಲ್ಲಿ ಅಂಬೆಡ್ಕರ ಚೌಕ ನಿರ್ಮಿಸುವ ಸಲುವಾಗಿ ಹಣ ಮಂಜೂರಾಗಿದ್ದರಿಂದ, ಸದರಿ ಅಂಬೇಡ್ಕರ ಕಟ್ಟೆಯನ್ನು ನಿರ್ಮಿಸುವ ಸಲುವಾಗಿ ನನ್ನ ಮಕ್ಕಳು ಹಾಗೂ ನನ್ನ ಗಂಡನ ಅಣ್ಣ ತಮ್ಮರ ಮಕ್ಕಳು ಹೋಗಿ ಅಲ್ಲಿನ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದರು, ಆಗ ರಮೇಶ ಮತ್ತು ಅವನ ಅಣ್ಣ ತಮ್ಮರು ನನ್ನ ಮಗ ಶಿವಾಜಿ ಈತನಿಗೆ ಏನೊ ಬೋಸಡಿ ಮಗನೆ ಅಂಬೇಡ್ಕರ ಕಟ್ಟೆ ನಿರ್ಮಿಸಲು ಎಷ್ಟು ಹಣ ಬಂದಿದೆ ನೀವು ಯಾರಿಗೆ ಕೇಳಿ ಕೆಲಸ ಮಾಡುತ್ತಿದ್ದಿರಿ, ನಿಂದು ಮತ್ತು ನಿಮ್ಮ ಅಪ್ಪಂದು ತಿಂಡಿ ಜಾಸ್ತಿ ಆಗಿದೆ ನಿಮಗೆ ನೋಡಿಕೊಳ್ಳುತ್ತೇವೆ ಅಂತಾ ತಕರಾರು ಮಾಡಿ ಜಗಳ ಮಾಡುತ್ತಿರುತ್ತಾರೆ ಎಂದು ನನ್ನ ಗಂಡ ಮತ್ತು ನನ್ನ ಮಗ ನನಗೆ ತಿಳಿಸಿರುತ್ತಾರೆ. ನಿನ್ನೆ ದಿನಾಂಕ 24-03-2016 ರಂದು ಸಂಜೆ ಸುಮಾರು 9:15 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗನಾದ ರಾಜು ಇಬ್ಬರು ಮನೆಯಲ್ಲಿದ್ದಾಗ ನನ್ನ ಮೈದುನಾರದ ಖಾಜಪ್ಪ ಇವರು ಓಡಿಕೊಂಡು ಮನೆಗೆ ಬಂದು ನಮ್ಮ ಸಂಸಾರ ಹಾಳಾಯ್ತು ನಮ್ಮ ಅಣ್ಣ ಕಲ್ಲಪ್ಪ @ ಕಲ್ಯಾಣಿಗೆ ಹಾಗೂ ಮಗ ಶಿವಾಜಿಗೆ ಕನಕದಾಸ ಸರ್ಕಲ ಹತ್ತಿರ ಖಾಜಪ್ಪ ದೊಡ್ಡಮನಿ, ಹಣಮಂತ @ ಹಣಮಂತ್ರಾವ ದೊಡ್ಡಮನಿ, ರಮೇಶ ದೊಡ್ಡಮನಿ, ಬಾಬು ದೊಡ್ಡಮನಿ, ಅಕ್ಷಯಕುಮಾರ ದೊಡ್ಡಮನಿ, ಶಾಂತಕುಮಾರ ದೊಡ್ಡಮನಿ, ಪುಟ್ಟು ದೊಡ್ಡಮನಿ, ಕಮಲಾಕರ ದೊಡ್ಡಮನಿ ಇವರೆಲ್ಲರೂ ಕೂಡಿಕೊಂಡು ಬಡಿಗೆಯಿಂದ ಹೊಡೆಯುತ್ತಿದ್ದಾರೆ, ನಮಗು ಹೊಡೆಯಲು ಬರುತ್ತಿದ್ದರು, ನಾವು ಓಡಿ ಬಂದಿರುತ್ತೇವೆ ಅಂತಾ ತಿಳಿಸಿದರು, ಆಗ ನಾನು ಮತ್ತು ನನ್ನ ಮೈದುನ ಖಾಜಪ್ಪ ಇಬ್ಬರು ಕೂಡಿ  ಸ್ಥಳಕ್ಕೆ ಹೋಗಿ ನೋಡಲು ನನ್ನ ಗಂಡ ಮತ್ತು ನನ್ನ ಮಗ ಶಿವಾಜಿ ಇಬ್ಬರು ಬಿದ್ದಿದ್ದರು, ಆಗ ಅಲ್ಲೆ ಇದ್ದ ಪ್ರತ್ಯಕ್ಷದರ್ಶಿಗಳಾದ ಸುಬಾಷ ಸಿಂಗೆ, ಯಶವಂತ ಕಟ್ಟಿಮನಿ, ಸಿದ್ದು ಮ್ಯಾಕೇರಿ, ಮಡೇಪ್ಪ ಕಟ್ಟಿಮನಿ ಹಾಗೂ ನನ್ನ ಗಂಡನ ಅಣ್ಣ ತಮ್ಮರಾದ ಮಲಕಪ್ಪ ಮ್ಯಾಕೇರಿ, ಖಾಜಪ್ಪ ಮ್ಯಾಕೇರಿ, ಶಾಂತಪ್ಪ ಮ್ಯಾಕೇರಿ ನನ್ನ ಮಗ ರಾಜು ಮ್ಯಾಕೇರಿ ಇವರೆಲ್ಲರೂ ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ನನ್ನ ಗಂಡ ಮತ್ತು ಮಗ ಶಿವಾಜಿ ಇಬ್ಬರಿಗೂ ಹಾಕಿಕೊಂಡು ಅಫಜಲಪೂರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತೇವೆ, ಆಸ್ಪತ್ರೆಯಲ್ಲಿ ವೈದ್ಯಾದಿಕಾರಿಗಳು ನನ್ನ ಗಂಡನನ್ನು ತಪಾಸಣೆ ಮಾಡಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು, ನನ್ನ ಮಗ ಶಿವಾಜಿಗೆ ಎದೆಗೆ ಬಾರಿ ಒಳಪೆಟ್ಟಾಗಿದ್ದರಿಂದ ಅವನು ಜೀವ ಮರಣದಲ್ಲಿ ಹೋರಾಡುತ್ತಿದ್ದನು, ವೈದ್ಯಾದಿಕಾರಿಗಳು ನನ್ನ ಮಗ ಶಿವಾಜಿಯನ್ನು 108 ಅಂಬ್ಯೂಲೆನ್ಸದಲ್ಲಿ ಹಾಕಿ ಕಲಬುರಗಿಗೆ ಕಳುಹಿಸಿಕೊಟ್ಟಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಂಬಿಸಿ ಅಪಹರಿಕೊಂಡು ಹೋಗಿ ಅತ್ಯಾಚಾರವೆಸಗಿದ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 13.03.2016 ರಂದು ಮುಂಜಾನೆ 04:30 ಗಂಟೆಯ ಸುಮಾರಿಗೆ ನನ್ನ ಮಗಳಾದ ಕಲ್ಯಾಣಿ ವಯಾ|| 17 ವರ್ಷ ಸಾ : ಬಿರಾಳ ಕೆ ಇವಳು ಬಹಿರ್ದೇಸೆ ಕುರಿತು ಹೋಗಿ ಮರಳಿ ಮನೆಯ ಕಡೆಗೆ ಬರುತ್ತಿದ್ದಾಗ ದಾರಿಯ ಮಧ್ಯದಲ್ಲಿ 1) ಶಮಸೋದ್ದಿನ್ ತಂದೆ ಮದರಸ 2) ಖಾಸೀಂ ತಂದೆ ಮದರಸ 3) ಬಾಬು ತಂದೆ ಮದರಸ  4) ಸರ್ವರ್‌ಸಾಬ್ ತಂದೆ ಮದರಸ 5) ವಜೀರ್‌ ತಂದೆ ಮದರಸ 6) ಮಶಾಕ್ ತಂದೆ ಮಹೇಬೂಬ ಸಾ : ಬಿರಾಳ ಕೆ. ಎಲ್ಲರು ಕೂಡಿಕೊಂಡು  ತಮ್ಮ ಕ್ರೂಜರ್‌ ಜೀಪ ನಂ ಕೆ.ಎ23 ಎನ್‌ 1509 ನೇದ್ದರಲ್ಲಿ ನನ್ನ ಮಗಳಿಗೆ ಯಾವುದೋ ಒಂದು ಬಲವಾದ ಕಾರಣಕ್ಕಾಗಿ ಬಲವಂತವಾಗಿ ಎಳೆದುಕೊಂಡು ಜೀಪ್‌ನಲ್ಲಿ ಹಾಕಿ ಅಪಹರಣ ಮಾಡಿಕೊಂಡು ಹೋಸ ಬಗ್ಗೆ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ 24.03.16 ರಂದು ಸಾಯಂಕಾಲ 6 ಗಂಟೆಗೆ ಕು : ಕಲ್ಯಾಣಿ ಸಾ : ಬಿರಾಳ ಕೆ ಇವಳು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಕೊಟ್ಟಿದ್ದೇನೆಂದರ  ದಿನಾಂಕ 12.03.2016 ರಂದು ರಾತ್ರಿ      11:30 ಗಂಟೆಗೆ ಶಮಶೋದ್ದಿನ್ ತಂದೆ ಮದರಸಾಬ್ ಕೊಂಚೂರು ಈತನು ನನಗೆ ನಂಬಿಸಿ ಪುಸಲಾಯಿಸಿ ಇತರರೊಂದಿಗೆ ಕೂಡಿಕೊಂಡು ನಮ್ಮೂರಿನಿಂದ ಶಹಾಪೂರದ ವರೆಗೆ ಕರೆದುಕೊಂಡು ಹೊಗಿ ಅಲ್ಲಿಂದ ಶಮಶೋದ್ದಿನ್ ಈತನು ಒಬ್ಬನೆ ನನಗೆ ಬಸ್ಸಿನಲ್ಲಿ ಬೆಂಗಳೂರಕ್ಕೆ ಕರೆದುಕೊಂಡುಹೋಗಿ ಅಲ್ಲಿ ಶಮಶೋದ್ದಿನ್ ಈತನು ನನಗೆ ನಂಬಿಸಿ ಸಂಭೋಗ ಮಾಡಿರುತ್ತಾನೆ. ಇಂದು ದಿನಾಂಕ 24.03.2016 ರಂದು ಕಲಬುರಗಿ ಬಸ್‌ ಸ್ಟ್ಯಾಂಡದಲ್ಲಿ ಬಿಟ್ಟಿರುತ್ತಾನೆ ಅಂತ ಸಲ್ಲಿಸಿದ ದೂರು
ಕಳವು ಪ್ರಕರಣ :
ಆಳಂದ ಠಾಣೆ :  ಶ್ರೀ ಜಾಫರ್‌ ತಂದೆ ಮೈಮೂದಮಿಯಾ ಮುರುಮಕರ್‌ ಸಾ: ರಜವಿರೋಡ ಆಳಂದ ,ರವರು ದಿನಾಂಕ: 23/03/2016 ರಂದು ರಾತ್ರಿ 08-30 ಗಂಟೆಗೆ ನಾನು ಎಂದಿನಂತೆ ನಮ್ಮ ಕಿರಾಣಿ ಅಂಗಡಿಯನ್ನು ಬಂದ ಮಾಡಿ ಸೆಟರ್‌ ಅಂಗಡಿ ಕೀಲಿ ಹಾಕಿ ಮನೆಗೆ ಹೋಗಿರುತ್ತೇನೆ. ನಂತರ ದಿನಾಂಕ: 24/03/2016 ರಂದು ಬೆಳಗ್ಗೆ ಎಂದಿನಂತೆ ದುಖಾನ ತೆರೆಯಲು ಬಂದಾಗ ಅಂಗಡಿಯ ಸೆಟರ್‌ ಕೀಲಿ ಮುರಿದುದ್ದು ಮತ್ತು ಬಲಗಡೆಗೆ ಪಕ್ಕದಲ್ಲಿ ಸೆಟರ್‌ ರಾಡದಿಂದ ಬಾಗಿಸಿದ್ದು ಎದುರಿಗೆ ಸೆಟರ್ ಎತ್ತಿ ಒಂದು ಪರಸಿ ನಿಲ್ಲಿಸಿದ್ದು ನೋಡಲಾಗಿ, ಯಾರೋ ನಮ್ಮ ಕಿರಾಣಿ ಅಂಗಡಿ ಕಳ್ಳತನ ಮಾಡಿರುತ್ತಾರೆ ಅಂತಾ ಅನುಮಾನ ಬಂದು ನಾನು ಮತ್ತು ನನ್ನ ತಂದೆ ಮೈಮೂದಮಿಯಾ ತಂದೆ ಮೀರಾಸಾಬ್‌ ಮುರುಮಕರ್‌ ಕೂಡಿ ಒಳಗಡೆ ಹೋಗಿ ನೋಡಲು ಒಳಗಡೆ ಸಾಮಾನುಗಳೆಲ್ಲಾ ಚೆಲ್ಲಾ ಪಿಲ್ಲಿಯಾಗಿದ್ದು ಚೆಕ್‌ ಮಾಡಿ ನೋಡಲು 01) 10 ಚೀರಿ ಕಿಂಗ್‌ ಸೈಜ್‌ ಸಿಗರೇಟ್ 02) ಒಂದು ಭಾಕ್ಸ ಆರ್‌.ಎಮ್‌.ಡಿ 03) 02 ಪುಡಾ ಬ್ರಿಸ್ಟೆಲ್‌ ಸಿಗರೆಟ್‌ 04) 05 ಪುಡಾ ಕ್ಲಾಸಿಕ್‌ ಸಿಗರೇಟ್‌ 05) ಒಂದು ಕೇ.ಜಿ ಯ 04 ರಜನಿ ಗಂದಾ ಪಾನ ಮಸಾಲಾ ಡಬ್ಬಿ06) 100 ಗ್ರಾಂ ದ 4 ಭಾಕ್ಸ ರಜನಿ ಗಂದಾ 07) ಚಿಲ್ಲರೆ ಹಣ ಮತ್ತು ಇತರೆ ಸಾಮಾನುಗಳು ಒಟ್ಟು ಅಕಿ: 24,000/- ರೂ ಬೆಲೆಬಾಳುವ ವಸ್ತುಗಳನ್ನು ದಿನಾಂಕ: 23/03/2016 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ: 24/03/2016 ರಂದು ರಾತ್ರಿ 04-00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಅಂಗಡಿಯ ಕೀಲಿ ಮುರಿದು, ಸೆಟರ್‌ ಒಡೆದು ಒಳಗಡೆ ಪ್ರವೇಶಿಸಿ ಅಂಗಡಿಯಲ್ಲಿದ್ದ ಮಾಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 24.03.2016 ರಂದು ಮುಂಜಾನೆ 1೦.45 ಗಂಟೆಗೆ  ಚಿಗರಳ್ಳಿ ಸಮೀಪ ಶಿವ ಮಂದೀರದ ಎದುರಿನ ಜೇವರಗಿ ಶಹಾಪುರ ರಸ್ತೆ ಮೇಲೆ ಆರೋಪಿತನು ತನ್ನ ಕಾರ್‌ ನಂ ಕೆ.ಎ32ಎನ್‌1239 ನೇದ್ದನ್ನು ಅತೀ ವೇಗೆ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಒಮ್ಮೇಲೆ ಕಟ್‌ ಹೋಡೆದು ಕಾರ್‌ ಅನ್ನು ರೋಡಿನ ಪಕ್ಕದಲ್ಲಿನ ಪಲ್ಟಿ ಪಡಿಸಿ ಕಾರ್‌ ಅನ್ನು ಜಖಂ ಗೊಳಿಸಿದ್ದು ಕಾರಣ ಸದರಿ ಕಾರ್‌ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೆಕು ಅಂತಾ ಶ್ರೀ ಬಸವರಾಜ ತಂದೆ ಹನಮಂತಪ್ಪ ಗುಂಡುರು ಸಾ: ಯತ್ತಿನಹಳ್ಳೀ ತಾ : ಸಿರಹಟ್ಟಿ ಜಿ : ಗದಗ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

24 March 2016

Kalaburagi District Reported Crimes

ಕೊಲೆ ಪ್ರಕರಣ :
ಮುಧೋಳ ಠಾಣೆ : ಶ್ರೀ ಸಾಬಣ್ಣ ತಂದೆ ಹಣಮಂತ ತಳವಾರ ಸಾ||  ಹಂದರಕಿ ಗ್ರಾಮ ಇವರು ಹಾಗೂ ನಮ್ಮ ತಮ್ಮನಾದ ವಾಸುದೇವ ತಂದೆ ಹಣಮಂತ ಇಬ್ಬರೂ ಅಣ್ಣ ತಮ್ಮಂದಿರು ಇದ್ದು, ನಾವಿಬ್ಬರೂ ಬೇರೆ ಬೇರೆಯಾಗಿದ್ದು ನಮ್ಮ ತಮ್ಮ ವಾಸುದೇವ ಇತನಿಗೆ ನಾಗಮ್ಮ ಅಂತಾ ಹೆಂಡತಿ ಇದ್ದು ಇವರಿಗೆ ಇಬ್ಬರೂ ಹೆಣ್ಣು ಮಕ್ಕಳು ಒಬ್ಬ ಗಂಡಸು ಮಗ ಇರುತ್ತಾನೆ. ದಿನಾಂಕ: 18-03-2016 ರಂದು ಬೆಳಿಗ್ಗೆ ನಮ್ಮ ತಮ್ಮ ವಾಸುದೇವ ಹಾಗೂ ಅವರ ಹೆಂಡತಿ ನಾಗಮ್ಮ ಮತ್ತು ನಮ್ಮೂರ ಯಲ್ಲಪ್ಪ ತಂದೆ ದುರ್ಗಪ್ಪ ಸಣ್ಣಿಂಗಿ ಹಾಗೂ ಯಲ್ಲಪ್ಪನ ಭಾಮೈದುನನಾದ ರಾಂಪೂರ ಗ್ರಾಮದ ಮಲ್ಲಪ್ಪ ಹೀಗೆ ನಾಲ್ಕು ಜನರು ಕೂಡಿಕೊಂಡು ಮದನಾ ಗ್ರಾಮದ ನಾಗಮ್ಮನ ತವರು ಮನೆಗೆ ಕೂಲಿ ಕೆಲಸಕ್ಕಾಗಿ ಬಂದು ಅಂದು ಸದರಿ ಯಲ್ಲಪ್ಪನ ತಮ್ಮನಾದ ಶರಣಪ್ಪ ಮದನಾ ಇವರ ಮನೆಯನ್ನು ರೀಪೆರಿ ಮಾಡಿದ್ದು ನಂತರ ಎರಡು ದಿವಸ ಬಿಟ್ಟು ದಿನಾಂಕ 20-03-2016ರಂದು ನಮ್ಮ ತಮ್ಮನ ಹೆಂಡತಿ ನಾಗಮ್ಮ ಇವಳು ತನ್ನ ಗಂಡನಿಗೆ ತವರು ಮನೆಯಲ್ಲಿ ಬಿಟ್ಟು ವಾಪಸ್ಸು ನಮ್ಮೂರಿಗೆ ಬಂದಿದ್ದಳು ನಮ್ಮ ತಮ್ಮ ವಾಸುದೇವ ಹಾಗೂ ನಮ್ಮೂರ ಯಲ್ಲಪ್ಪ ಮತ್ತು ಅವರ ಬಾಮೈದುನನಾದ ಮಲ್ಲಪ್ಪ ರಾಂಪೂರ ಮದನಾದಲ್ಲಿ ಕೆಲಸಮಾಡಿಕೊಂಡು ಇದ್ದರು. ನಿನ್ನೆ ದಿನಾಂಕ: 22-03-2016 ರಂದು ಮದ್ಯಾಹ್ನ ನಮ್ಮ ತಮ್ಮನ ಹೆಂಡತಿ ನಾಗಮ್ಮ ಇವಳು ತನ್ನ ಗಂಡನಿಗೆ ಪೋನ ಮಾಡಿ ಮಾತನಾಡಿದ್ದು ನಮ್ಮ ತಮ್ಮನು ಇಂದು ಸಾಯಂಕಾಲ ಮನೆಗೆ ಬರುತ್ತೇನೆ ಅಂತಾ ಹೇಳಿದನು. ರಾತ್ರಿ 10 ಗಂಟೆ ಸುಮಾರಿಗೆ ಮತ್ತೆ ನಮ್ಮ ತಮ್ಮನ ಹೆಂಡತಿ ನನ್ನ ಗಂಡ ಇನ್ನೂ ಮನೆಗೆ ಬಂದಿಲ್ಲ ಅಂತಾ ನಮ್ಮ ತಮ್ಮನಿಗೆ ಪೋನ ಕರೆ ಮಾಡಿದಾಗ ಪೋನ ಸ್ವೀಚ್ಚ ಆಫ್ ಅಂತಾ ಹೇಳಿದ್ದು ಇರುತ್ತದೆ. ನಮ್ಮ ತಮ್ಮನ ಪೋನ ನಂಬರ 9611037407 ಅಂತಾ ಇರುತ್ತದೆ. ರಾತ್ರಿ ಕೂಡ ನಮ್ಮ ತಮ್ಮನು ಮನೆಗೆ ಬಂದಿರುವುದಿಲ್ಲ. ದಿನಾಂಕ 23-03-2016 ರಂದು ಬೆಳಿಗ್ಗೆ 7:30-8 ಗಂಟೆ ಸುಮಾರಿಗೆ ನಮ್ಮ ತಮ್ಮನ ಬಾಮೈದುನನಾದ ಭೀಮಶಪ್ಪ ತಂದೆ ಸಿದ್ರಾಮಪ್ಪ ಕಾನಾಗಡ್ಡ ಸಾ|| ಮದನಾ ಇವರು ನನಗೆ ಹಾಗೂ ನಮ್ಮ ತಮ್ಮನ ಹೆಂಡತಿ ನಾಗಮ್ಮ ಇವಳಿಗೆ ಪೋನ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ತಮ್ಮನಾದ ವಾಸುದೇವ ಇತನಿಗೆ ಕೊಲಕುಂದಾ ಗ್ರಾಮದ ಹತ್ತಿರ ಹೊಲದಲ್ಲಿ ಹೊಡೆದು ಕೊಲೆ ಮಾಡಿ ಹಾಕಿರುತ್ತಾರೆ ಅಂತಾ ತಿಳಿಸಿದ್ದು ತಕ್ಷಣ ನಾನು ಹಾಗೂ ನಮ್ಮ ತಮ್ಮನ ಹೆಂಡತಿ ನಾಗಮ್ಮ ಹಾಗೂ ನಮ್ಮ ಅಣ್ಣತಮ್ಮಕಿಯಾದ ಮೈಪಾಲ ತಂದೆ ರಾಮಣ್ಣ ಸಣ್ಣಿಂಗಿ ಇತರರೂ ಕೂಡಿ ಇಂದು ಬೆಳಿಗ್ಗೆ 8:30 ಗಂಟೆ ಸುಮಾರಿಗೆ ಕೊಲಕುಂದಾ ಗ್ರಾಮದ ಕಮಾನ ದ್ವಾರ ಬಾಗಿಲಿನ ಎದುರುಗಡೆ ಇರುವ ಹೊಲದಲ್ಲಿ ನಮ್ಮ ತಮ್ಮನಿಗೆ ಬಂದು ನೊಡಲಾಗಿ ನಮ್ಮ ತಮ್ಮನ ಹೆಣ ಹೊಲದಲ್ಲಿ ಒಂದು ಬಿಳಿ ಬಣ್ಣದ ಟವೇಲದ ಮೇಲೆ ಬಲ ಮಗ್ಗಿಲಾಗಿ ಬಿದ್ದಿದ್ದು ಬಾಯಿಯಿಂದ ಮುಗಿನಿಂದ ರಕ್ತ ಬಂದಿದ್ದು ಇರುತ್ತದೆ. ಮತ್ತು ತಲೆಯ ಹಿಂದುಗಡೆ ಭಾರಿ ರಕ್ತಗಾಯವಾಗಿದ್ದು ಕಂಡು ಬಂದಿರುತ್ತದೆ. ಈ ಬಗ್ಗೆ ಅಲ್ಲಿದ್ದ ನಮ್ಮ ತಮ್ಮನ ಅತ್ತೆಯಾದ ನಾಗಮ್ಮ ಗಂಡ ಸಿದ್ರಾಮಪ್ಪ ಮತ್ತು ಮಾವನಾದ ಸಿದ್ರಾಮಪ್ಪ ತಂದೆ ಭೀಮಪ್ಪ ಕಾನಾಗಡ್ಡ ಹಾಗೂ ನಮ್ಮ ತಮ್ಮನ ಬಾಮೈದುನನಾದ ಭೀಮಶಪ್ಪ ಇವರಿಗೆ ವಿಚಾರಿಸಲಾಗಿ ಅವರು ತಿಳಿಸಿದ್ದೇನೆಂದರೆ, ನಿನ್ನೆ ಸಾಯಂಕಾಲ ನಿಮ್ಮ ತಮ್ಮ ವಾಸುದೇವ ಇತನು ಹಂದರಕಿ ಊರಿಗೆ ಹೋಗುತ್ತೇನೆ ಅಂತಾ ಹೇಳಿದ್ದರಿಂದ ನಾವು ಯಲ್ಲಪ್ಪ ಹಾಗೂ ಹಾಗೂ ನಿಮ್ಮ ತಮ್ಮ ವಾಸುದೇವ ಇವರಿಗೆ ನಮ್ಮ ಮನೆ ಕೆಲಸ ಮಾಡಿದ್ದರ ಕೂಲಿಹಣ ಒಟ್ಟು 10,000/- ರೂ ಕೊಟ್ಟಿದ್ದು ಇವರಿಬ್ಬರೂ ಕೂಡಿ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಇವರಿಬ್ಬರೂ ಕೂಡಿ ನಮ್ಮ ಮನೆಯಿಂದ ಹಂದರಕಿಗೆ ಹೊಗುತ್ತೇವೆ ಅಂತಾ ಹೇಳಿದ್ದು ನಾವು ಅವರಿಗೆ ರಾತ್ರಿ ಆಗಿದೆ ಈಗ ಹೊಗಬೇಡಿರಿ ನಾಳೆ ಮುಂಜಾನೆ ಹೋಗಿರಿ ಅಂತಾ ಹೇಳಿದ್ದಕ್ಕೆ ನಾವು ಇಗಲೆ ಹೋಗುತ್ತೇವೆ ಅಂತಾ ನಮ್ಮ ಮನೆಯಿಂದ ಹೋಗಿದ್ದು ಇವರಿಬ್ಬರೂ ಕೆಲಸ ಮಾಡಿದ ಹಣವನ್ನು ಹಂಚಿಕೊಳ್ಳುವ ಸಂಬಂಧವಾಗಿ ಒಬ್ಬರಿಗೊಬ್ಬರು ತಕರಾರು ಮಾಡುತ್ತಾ ಮನೆಯಿಂದ ಹೋಗಿರುತ್ತಾರೆ. ಇಂದು ಮುಂಜಾನೆ ಕೊಲಕುಂದಾ ಗ್ರಾಮದವರು ನಿಮ್ಮ ತಮ್ಮನ ಮೃತ ದೇಹವನ್ನು ನೋಡಿ ನಮಗೆ ಪೋನ ಮಾಡಿ ತಿಳಿಸಿದ್ದು, ನಾವು ಬಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಸ್ಥಳಕ್ಕೆ ಬಂದು ನೊಡಿದ್ದು ನಿಮಗೆ ಈ ವಿಷಯವನ್ನು  ಪೋನ ಮಾಡಿ ತಿಳಿಸಿರುತ್ತೇವೆ ಅಂತಾ ತಿಳಿಸಿದರು. ನಮ್ಮ ತಮ್ಮನಾದ ವಾಸುದೇವ ಇತನಿಗೆ ನಿನ್ನೆ ದಿನಾಂಕ: 22-03-2016 ರಂದು ರಾತ್ರಿ 10 ಗಂಟೆಗೆ ಯಲ್ಲಪ್ಪ ತಂದೆ ದುರ್ಗಪ್ಪ ಸಣ್ಣಿಂಗಿ ಸಾ|| ಹಂದರಕಿ ಇತನು ಕೂಲಿ ಕೆಲಸ ಮಾಡಿದ ಹಣವನ್ನು ಹಂಚಿಕೊಳ್ಳುವ ವಿಷಯದಲ್ಲಿ ಜಗಳ ತೆಗೆದು ಊರಿಗೆ ಹೋಗುತ್ತೇನೆ ಅಂತಾ ನನ್ನ ತಮ್ಮನಿಗೆ ಮದನಾದ ಅತ್ತೆ ಮಾವನ ಮನೆಯಿಂದ ಕರೆದುಕೊಂಡು ಬಂದು ದಾರಿಯಲ್ಲಿ ಕೊಲಕುಂದಾ ಗ್ರಾಮದ ಹತ್ತಿರ ನಾಗಮ್ಮ ಅಗಸರ ಇವರ ಹೊಲದಲ್ಲಿ ರಾತ್ರಿ ವೇಳೆ ನಮ್ಮ ತಮ್ಮನ ತಲೆಗೆ ಬಲವಾಗಿ ಯಾವುದೊ ಒಂದು ಗಟ್ಟಿ ವಸ್ತುವಿನಿಂದ ಹೊಡೆದು ಭಾರಿ ಗುಪ್ತಗಾಯಪಡಿಸಿದ್ದು ಇದರಿಂದ ನನ್ನ ತಮ್ಮನ ಮೂಗಿನಿಂದ. ಕಿವಿಯಿಂದ, ಬಾಯಿಯಿಂದ ರಕ್ತಬಂದಿದ್ದು ಸ್ಥಳದಲ್ಲಿಯೆ ಮೃತಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ಶ್ರೀ ಲೋಕೇಶ ತಂದೆ ಕಾಶಪ್ಪ ಬಂದೂರ ಸಾ:ಹಂದರಕಿ ಗ್ರಾಮ ಇವರ ಸಂಗಡ ನಮ್ಮೂರ ಭೀಮರಾಯ ಘಂಟೇರ, ಕಾಶಪ್ಪ ಗಡದೊರ, ರಾಮು ಗಡದೊರ, ಭೀಮರಾಯ ತಂದೆ ಹಣಮಂತ ಎಲ್ಲರೂ ಕೂಡಿ ಟ್ರಾಕ್ಟರ್ ನಂ-KA33 T9919 ನೇದ್ದನ್ನು ತೆಗೆದುಕೊಂಡು ಈರಪ್ಪ ತಂದೆ ತಿಪ್ಪಣ್ಣ ಗಡದೊರ ಇವರ ಹೊಲದಿಂದ ಕಣಿಕೆ ತರುವ ಕುರಿತು ಹಂದರಕಿಯಿಂದ ಹುಳಗೋಳ ಕಡೆಗೆ ಹೊರಟಾಗ, ಹೊಸದಾಗಿರುವ ಟ್ರಾಕ್ಟರ್ ಚಾಲಕ ಆತನ ಹೆಸರು ನನಗೆ ಗೊತ್ತಿರುವದಿಲ್ಲ, ಚಾಲಕ ತನ್ನ ವಶದಲ್ಲಿದ್ದ ಟ್ರಾಕ್ಟರ್ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸುತ್ತಿದ್ದಾಗ ನಿಧಾನವಾಗಿ ಚಲಾಯಿಸಲು ನಾವು ಹೇಳಿದರೂ ಆತ ಹಾಗೇಯೆ ಚಲಾಯಿಸುತ್ತಿದ್ದನು ಮದ್ಯಾಹ್ನ 01-30 ಪಿ.ಎಮ್.ಕ್ಕೆ ಯಾದಗೀರ-ಸೇಡಂ ರೋಡಿನ ಮೇಲೆ ಮುಸ್ಲಿಂ ಸ್ಮಶಾನದ ಹತ್ತಿರ ಒಮ್ಮೆಲೆ ರೋಡಿನ ಬಲಗಡೆ ತಗ್ಗಿನಲ್ಲಿ ಪಲ್ಟಿ ಮಾಡಿ ಅಪಘಾತ ಪಡಿಸಿದನು. ಆಗ ನಾವೆಲ್ಲರೂ ತಗ್ಗಿನಲ್ಲಿ ಬಿದ್ದೇವು. ನನಗೆ, ಕಾಲಿಗೆ, ಪಾದಕ್ಕೆ ಮತ್ತು ಕೈಗಳಿಗೆ ರಕ್ತಗಾಯವಾಗಿದ್ದು, ಕಾಶಪ್ಪ ಗಡದೊರ ಇತನಿಗೆ ಟೊಂಕಕ್ಕೆ ಗುಪ್ತಗಾಯವಾಗಿತ್ತು, ಭೀಮರಾಯ ಘಂಟೇರ ಇತನ ಮೇಲೆ ಟ್ರಾಕ್ಟರ್ ಬಿದ್ದು ತಲೆಯ ಹಿಂದಿನ ಭಾಗ ಬಿಚ್ಚಿ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು ಉಳಿದವರಿಗೆ ಯಾವುದೇ ಗಾಯ ಆಗಿರುವದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ನಿಖಿನ ತಂದೆ ಚಿದಂಬರಾಯ ಈತನು ಮಾತನಾಡುವ ಸ್ಥೀತಿಯಲ್ಲಿರದ ಕಾರಣ ಆತನ ತಂದೆಯಾದ ಚಿತಂಬರಾಯ ತಂದೆ ಮಲ್ಕಪ್ಪಾ ಜಾಲೇಕಾರ ಸಾ: ಕುರಿಕೋಟಾ ತಾ:ಜಿ: ಕಲಬುರಗಿ ಇವರ ಹಿರಿಯ ಮಗನಾದ ನಿಖಿನ ಈತನು ಕಲಬುರಗಿ ಸರ್ಕಾರಿ ಐಟಿಐ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ದಿನಾಂಕ: 08/03/2016 ರಂದು ಬೆಳಿಗ್ಗೆ ಎಂದಿನಂತೆ ಮಗ ನಿಖಿನ ಈತನು ಕಾಲೇಜಿಗೆ ಹೋಗಿ ಮರಳಿ ಸಾಯಂಕಾಲ 4-00 ಗಂಟೆ ಸುಮಾರಿಗೆ ಮನೆಗೆ ಬಂದು ನಾನು ಮಹಾಗಾಂವ ಕ್ರಾಸದಲ್ಲಿ ಗೆಳೆಯರಿಗೆ ಮಾತಾಡಿ ಬರುತ್ತೇನೆ ಅಂತಾ ಹೇಳಿ ಹೊರಟು ಹೋದನು ನನಗೆ ಬೆಳಿಗ್ಗೆಯಿಂದ ಆರಾಮವಿಲ್ಲದ ಕಾರಣ ನಾನು ಉಪಚಾರ ಪಡೆದುಕೊಳ್ಳಲು ಮಹಾಗಾಂವ ಕ್ರಾಸಿನಲ್ಲಿರುವ ಕಂಠಿಕಾರ ಆಸ್ಪತ್ರೆ ಹೋಗಿ ಕುಳಿತುಕೊಂಡೆನು ಸಾಯಂಕಾಲ 5-00 ಗಂಟೆ ಸುಮಾರಿಗೆ ಒಂದು ಮೋಟಾರ ಸೈಕಲ ಮೇಲೆ ನನ್ನ ಮಗನ ಗೆಳೆಯ ಗುಂಡಪ್ಪಾ ತಂದೆ ಭೀಮಶ್ಯಾ ಲಿಂಗನವಾಡಿ ಸಾ: ಮಹಾಗಾಂವ ಕ್ರಾಸ ಈತನು ನಡೆಸುತ್ತಾ ಹಿಂದೆ ನನ್ನ ಮಗ ಕುಳಿತ್ತಿದ್ದು ಚಿಂಚೋಳಿ ರಸ್ತೆಯಿಂದ ಮಹಾಗಾಂವ ಕ್ರಾಸ ಕಡೆಗೆ ಬರುತ್ತಿರುವಾಗ ಹಿಂದಿನಿಂದ ಒಬ್ಬ ಕ್ರೋಜರ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದ ನನ್ನ ಮಗ ಕುಳಿತು ಹೊರಟ ಮೋ.ಸೈಕಲಕ್ಕೆ ಡಿಕ್ಕಿ ಹೊಡೆದು  ಅಪಘಾತ ಪಡಿಸಿದ್ದರಿಂದ ಇಬ್ಬರು ಮೋ.ಸೈಕಲ ಸಮೇತ ರೋಡಿನ ಮೇಲೆ ಬಿದ್ದರು. ನಾನು ಗಾಬರಿಗೊಂಡಿ ಓಡಿ ಹೋಗಿ ಎಬ್ಬಿಸಿ ನೋಡಲಾಗಿ ನನ್ನ ಮಗನ ಬಲ ತಲೆಗೆ ಭಾರಿ ಗುಪ್ತಗಾಯ ಮತ್ತು ರಕ್ತಗಾಯ ಎದೆ ಕೈಕಾಲುಗಳಿಗೆ ತರಚಿದ ರಕ್ತಗಾಯ ಹಾಗು ಮರ್ಮಾಂಗದ ಚರ್ಮ ಕಿತ್ತಿ ರಕ್ತ ಬರುತ್ತಿದ್ದು.  ಗುಂಡಪ್ಪಾ ಈತನಿಗೂ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದು. ಕ್ರೂಜರ ಚಾಲಕ ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ ಹಾಗೆ ಮಾಡಿ ತನ್ನ ವಾಹನ ಸಮೇತ ಓಡಿ ಹೋದನು ಆಗ ಕ್ರೋಜರ ಜೀಪ ನಂಬರ ನೋಡಲಾಗಿ ಕೆಎ:33,ಎಂ:775 ಅಂತಾ ಇದ್ದು ಮತ್ತು ಮೋ.ಸೈಕಲ ನಂಬರ ನೋಡಲಾಗಿ ಕೆಎ:05 ಇಕೆ: 4920 ಅಂತಾ ಇದ್ದು  ನಂತರ ನನ್ನ ಮಗನಿಗೆ ಉಪಚಾರ ಕುರಿತು ಖಾಸಗಿ ವಾಹನದಲ್ಲಿ ಹಾಕಿಕೊಂಡು ಇಲ್ಲಿ ಗಂಗಾ ಆಸ್ಪತ್ರೆ ತಂದು ಸೇರಿಕೆ ಮಾಡಿರುತ್ತೇನೆ., ದಿನಾಂಕ: 08/03/2016 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ  ನನ್ನ ಮಗ ನೀಖಿನ ಮತ್ತು ಗುಂಡಪ್ಪಾ ಲಿಂಗನವಾಡಿ ಇವರಿಗೆ ರಸ್ತೆ ಅಪಘಾತವಾದ ಬಗ್ಗೆ ಈಗಾಗಲೇ ಫಿರ್ಯಾದಿ ಕೊಟ್ಟಿರುತ್ತೇನೆ. ನನ್ನ ಮಗ ನಿಖಿನ ಈತನಿಗೆ ರಸ್ತೆ  ಅಪಘಾತವಾದ ನಂತರ ಉಪಚಾರ ಕುರಿತು ಕಲಬುರಗಿಯ ಗಂಗಾ ಆಸ್ಪತ್ರೆಗೆ ದಿನಾಂಕ: 08/03/2016 ರಂದು ಸೇರಿಕೆ ಮಾಡಿ, ದಿನಾಂಕ: 10/03/16 ರವರೆಗೆ ಉಪಚಾರ ಪಡಿಸಿದ್ದು. ನಂತರ ರಾತ್ರಿ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯಿಂದ ಸೋಲಾಪೂರ ಯಶೋಧರ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ದಿನಾಂಕ: 11/03/2016 ರಂದು ಬೆಳಿಗ್ಗೆ ಸೇರಿಕೆ ಮಾಡಿರುತ್ತೇವೆ. ನನ್ನ ಮಗ ನಿಖಿನ ಇತನಿಗೆ ದಿನಾಂಕ: 11/03/2016 ರಿಂದ 21/03/2016 ರವರೆಗೆ ಉಪಚಾರ ಕೊಡಿಸಿದರು.  ಸಹ ಸಂಪೂರ್ಣ ಗುಣ ಮುಖವಾಗಿರುವುದಿಲ್ಲಾ. ಹಣಕಾಸಿನ ತೊಂದರೆಯಿಂದಾಗಿ ದಿನಾಂಕ:21/03/2016 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ಸೋಲಾಪೂರದಿಂದ ಬಿಡುಗಡೆ ಮಾಡಿಕೊಂಡು ಕಲಬುರಗಿಗೆ ಅಂಬುಲೇನ್ಸದಲ್ಲಿ ತರುವಾಗ ಮಾರ್ಗ ಮಧ್ಯದಲ್ಲಿ ಅಕ್ಕಲಕೋಟಾ ಹತ್ತಿರ ಸಾಯಂಕಾಲ 7-20 ಗಂಟೆಯ ಸುಮಾರಿಗೆ ನನ್ನ ಮಗ ನಿಖಿನ ಈತನು ರಸ್ತೆ ಅಪಘಾತದಿಂದಾದ ಗಾಯಗಳಿಂದಾಗಿ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾಶರಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಯಶ್ವಂತ ತಂದೆ ಅರ್ಜುನ  ಶಿಲ್ಲ್ ಮೂರ್ತಿ ವಿಳಾಸ;  ಜಲಸಂಗಿ ತಾ;ಹುಮನಾಬಾದ ಜಿಲ್ಲಾ ಬೀದರ ಸದ್ಯ ಓಂ.ನಗರ ಗೇಟ ಹತ್ತಿರ ಓಕಳಿಕ್ಯಾಂಪ ಕಲಬುರಗಿ ಇವರ ಅಕ್ಕ ಅನ್ನಪೂರ್ಣ ಗಂಡ ರಾಜಕುಮಾರ ಹೊಸಮನಿ ವ;31 ವರ್ಷ ಇವಳು ಇ.ಎಸ್.ಐ. ಆಸ್ಪತ್ರೆಗೆ ಕೆಲಸ ಮಾಡಿದ ಸಂಬಳತೆಗೆದುಕೊಂಡು ಬರುತ್ತೇನೆ ಅಂತಾ ದಿನಾಂಕ 09-03-2016 ರಂದು ಬೆಳಗ್ಗೆ 8 ಗಂಟೆಗೆ ತನ್ನ ಮನೆಯಿಂದ ಹೋದವಳು ಮರಳಿ ಮನಗೆ ಬಂದಿರುದಿಲ್ಲಾ ಕಾಣೆಯಾಗಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.