POLICE BHAVAN KALABURAGI

POLICE BHAVAN KALABURAGI

27 May 2015

KALABURAGI DISTRICT REPORTED CRIMES.

ವಿಶ್ವವಿದ್ಯಾಲಯ ಪೊಲೀಸ ಠಾಣೆ : ದಿನಾಂಕ: 18/05/2015 ರಂದು ರಾತ್ರಿ 9:30 ಪಿ.ಎಮ ಕ್ಕೆ ಬಸವೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶ್ರೀಮತಿ.ಈರಮ್ಮ ಗಂಡ ಈರಣ್ಣ ನಂದೂರದವರ ಸಾ|| ರಾಜಾಪೂರ ಕಲಬುರಗಿ ಇವರ ಹೇಳಿಕೆ ಫಿರ್ಯಾದಿ ಪಡೆದುಕೊಂಡಿದ್ದು, ಸಾರಾಂಶವೆನೆಂದರೆ ದಿನಾಂಕ: 16-05-2015 ರಂದು ಮದ್ಯಾಹ್ನ 2-30 ಪಿಎಮ ಸುಮಾರಿಗೆ ನಾನು ಜಯನಗರಕ್ಕೆ ಹೋಗಬೇಕೆಂದು ನಡೆಯುತ್ತಾ ರಾಜಾಪೂರದ ಅಂಬೇಂಡ್ಕರ ಹಾಲ್ ಹತ್ತಿರ ಹೊರಟಾಗ ಒಬ್ಬನು ನನ್ನ ಹತ್ತಿರ ಬಂದು ತನ್ನ ಮೊಟಾರ ಸೈಕಲ ನಿಲ್ಲಿಸಿ ನನಗೆ, ನಿನ್ನ ಗಂಡನಿಗೆ ರಾಣಾಸ್ಪೀರ ದರ್ಗಾ ಹತ್ತಿರ ಹೊಡೆದು ಹಾಕಿದ್ದಾರೆ ಬೇಗ ಬನ್ನಿ ಹೋಗೋಣ ಅಂತಾ ಅಂದಾಗ ನಾನು ಅವರಿಗೆ ನೀವು ಯಾರು ನನ್ನ ಗಂಡ ಒಕ್ಕಲುತನ ಕೆಲಸಕ್ಕೆ ಹೊಲಕ್ಕೆ ಹೋಗಿದ್ದಾರೆ ಅಂತಾ ಅಂದಾಗ ಅವನು ನಾನು ನಿಮ್ಮ ಗಂಡನ ಗೆಳೆಯ ಇದ್ದೆನೆ ಬೇಗ ಬನ್ನಿ ಅಲ್ಲಿ ನಿಮ್ಮ ಗಂಡ ಸಾಯಬಹುದು ಅಂತಾ ಅಂದಾಗ ನಾನು ಗಾಬರಿಗೊಂಡು ನನ್ನ ಮಗನಿಗೆ ಕರೆಯುತ್ತೇನೆ ತಡೆಯಿರಿ ಅಂತ ಅಂದನು ಅವನು ಬೇಗ ನಡೆಯಿರಿ ಮೊದಲು ನಿಮ್ಮ ಗಂಡನ ಪ್ರಾಣ ಉಳಿಸೋಣ ಅಂತಾ ಅಂದಾಗ ನಾನು ಮತ್ತಷ್ಟು ಗಾಬರಿಗೊಂಡು ಅವನು ತಂದಿದ್ದ ಮೊಟಾರ ಸೈಕಲ ಮೇಲೆ ನನಗೆ ಕೂಡಿಸಿಕೊಂಡು ಖರ್ಗೆ ಪೆಟ್ರೊಲ್ ಪಂಪ, ಹುಮನಾಬಾದ ರಿಂಗ ರೋಡ ಮತ್ತು ಆಳಂದ ನಾಕಾ ಮುಖಾಂತರ ರಾಣಾಸ್ಪೀರ ದರ್ಗಾ ದಾಟಿ ಒಂದು ಗುಡ್ಡದ ಹತ್ತಿರ ಕರೆದುಕೊಂಡು ಹೋಗುತ್ತಿದ್ದಾಗ ನಾನು ಎಲ್ಲಿ ನನ್ನ ಗಂಡ ಈ ಕಡೆ ಯಾಕೆ ಕರೆದುಕೊಂಡು ಹೋಗುತ್ತಿರುವಿ ಅಂತಾ ಅನ್ನುವಾಗ ಅವನು ಅಲ್ಲಿಯೇ ತನ್ನ ಮೊಟಾರ ಸೈಕಲ ನಿಲ್ಲಿಸಿ ನನಗೆ ಕೆಳಗೆ ಇಳಿಸಿ ನನ್ನ ಕೂದಲು ಹಿಡಿದು ಎಳೆಯುತ್ತಾ ರೇಲ್ವೆ ಪಟ್ರಿಯ ಬ್ರೀಡ್ಜ ಹತ್ತಿರ ಕರೆದೊಯಿದು ನನಗೆ ಕೈಯಿಂದ ಮುಖಕ್ಕೆ ಹೊಡೆದನು. ಆಗ ನಾನು ಅವನಿಗೆ ನೀನು ಯಾರು ಯಾಕೆ ನನಗೆ ಸುಳ್ಳು ಹೇಳಿ ಇಲ್ಲಿಗೆ ಕರೆದುಕೊಂಡು ಬಂದಿರುವಿ ಅಂತಾ ಅಂದಾಗ ಅವನು ರಂಡಿ ಭೋಸಡಿ ನಿನ್ನಲ್ಲಿದ್ದ ಹಣ, ಬಂಗಾರ ಕೊಡು ಅಂತಾ ಅಂದಾಗ ನಾನು ಕೊಡದಿದ್ದಾಗ ಅವನು ಕೈಯಿಂದ ನನ್ನ ಎಡಗಣ್ಣಿಗೆ ಹೊಡೆದು ಗುಪ್ತಗಾಯ ಮಾಡಿದನು ಮತ್ತು ಅಲ್ಲಿಯೇ ಬಿದ್ದಿದ್ದ ಒಂದು ಕಲ್ಲು ತೆಗೆದುಕೊಂಡು ನನ್ನ ಎಡ ತಲೆಗೆ ಮತ್ತು ಎಡಗಾಲ ಮೊಳಕಾಲ ಹತ್ತಿರ ಹೊಡೆದು ರಕ್ತಗಾಯ ಮಾಡಿದನು. ಆಗ ನಾನು ಅವನಿಗೆ ಹೊಡೆಯಬೇಡ ನನ್ನಲ್ಲಿದ್ದ ಹಣ ಬಂಗಾರ ಕೊಡುತ್ತೇನೆ ಅಂತಾ ಅಂದು ನನ್ನಲ್ಲಿದ್ದ 700/-ರೂ, ಕೊರಳಲ್ಲಿದ್ದ ಬಂಗಾರದ ಗುಂಡಿನ ತಾಳಿಸರ ಒಂದು ತಲೆ ಅ:ಕಿ:25,000/-ರೂ ಎರಡು ಕಿವಿಯಲ್ಲಿದ್ದ 3 ಮಾಸಿಯ ಬಂಗಾರದ ಹೂ ಅ:ಕಿ: 6000/-ರೂ ಗಳನ್ನು ಬಿಚ್ಚಿಕೊಟ್ಟೆನು. ಮತ್ತು ನನ್ನ ಹತ್ತಿರ ಇದ್ದ ಒಂದು ಮೊಬೈಲ ಕೂಡ ಹೋಗುವಾಗ ಕಸಿದುಕೊಂಡು ಹೋದನು. ಸದರಿ ಅಪರಿಚಿತ ವ್ಯಕ್ತಿಯು ನನಗೆ ಅಲ್ಲಿಯೇ ಬಿಟ್ಟು ತಾನು ತಂದಿದ್ದ ಮೊಟಾರ ಸೈಕಲ ಮೇಲೆ ರಣಾಸ್ಪೀಟರ ದರ್ಗಾ ಕಡೆ ಹೋದನು. ನನ್ನ ನೋವಿನ ಬಾದೆಯಲ್ಲಿ ಅವನ ಮೊಟಾರ ಸೈಕಲ ನಂಬರ ನೋಡಿರುವುದಿಲ್ಲ. ಅಪರಿಚಿತ ವ್ಯಕ್ತಿ ಅಂದಾಜು 25 ರಿಂದ 30 ವರ್ಷದವನಿರುತ್ತಾನೆ. ನಂತರ ನಾನು ಅಲ್ಲಿಯೇ ಸ್ವಲ್ಪ ದೂರದಲ್ಲಿ ಬಟ್ಟೆ ಒಗೆಯುತ್ತಿದ್ದ ಹೆಣ್ಣು ಮಕ್ಕಳ ಹತ್ತಿರ ಹೋಗಿ ನಾನು ಅವರ ಮೊಬೈಲದಿಂದ ನನ್ನ ಮಗ ಶೇಖರ ಮತ್ತು ಅಣ್ಣನ ಮಗ ಶಂಕರ ತಂದೆ ರುದ್ರಣ್ಣ ಇವರಿಗೆ ಪೋನ ಮಾಡಿ ಕರೆಯಿಸಿದ್ದು. ಅವರು ನನಗೆ ನೋಡಿ ಏನಾಯಿತು ಅಂತ ಕೇಳಿದಾಗ ನಡೆದ ವಿಷಯ ತಿಳಿಸಿದ್ದು. ನಂತರ ಅವರು ನನಗೆ ಉಪಚಾರ ಕುರಿತು ಒಂದು ಆಟೊದಲ್ಲಿ ಹಾಕಿಕೊಂಡು ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದರು. ನನಗೆ ಅವಾಚ್ಯ ಶಬ್ದಗಳಿಂದ ಬೈದು ಹೆದರಿಸಿ ನನ್ನಲ್ಲಿದ್ದ ಹಣ, ಬಂಗಾರ, ಮೊಬೈಲ ಕಸಿದುಕೊಂಡು ಹೋದ ಅಪರಿಚಿ ವ್ಯಕ್ತಿಯನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಹೇಳಿಕೆ ಫೀರ್ಯಾದಿಯ ಸಾರಾಂಶದ ಮೆಲೀಂದ ಠಾಣಾ ಗುನ್ನೆ ನಂ. 138/2015 ಕಲಂ 504, 506, 394 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. ನಂತರ ಆರೋಪಿತನು ಅಪರಾಧ ಮಾಡಿದ ನಂತರ ಫಿರ್ಯಾದಿದಾರರ ಮೊಬೈಲ್ ತೆಗೆದುಕೊಂಡು ಹೋಗಿದ್ದು, ಅದರಲ್ಲಿದ್ದ ಮೊಬೈಲ ನಂ: 9050969999 ನೇದ್ದನ್ನು ತೆಗೆದು ತನ್ನ ಮೊಬೈಲ್ ಸಿಮ್ ನಂ: 7760009804 ನೇದ್ದನ್ನು ಉಪಯೋಗಿಸುವದನ್ನು ಮೊಬೈಲ್ ಐ.ಎಮ.ಇ.ಐ ನಂಬರ ಮುಖಾಂತರ ಪತ್ತೆ ಹಚ್ಚಿ ಅಪರಾಧ ವಿಭಾಗದ ಸಿಬ್ಬಂದಿಯವರೊಂದಿಗೆ ಮಾನ್ಯ ಎಸ್.ಪಿ ಸಾಹೇಬ, ಮಾನ್ಯ ಅಪರ ಎಸ್.ಪಿ ಸಾಹೇಬ, ಮಾನ್ಯ ಡಿ.ಎಸ್.ಪಿ ಗ್ರಾಮಾಂತರ ಉಪ-ವಿಭಾಗ ಹಾಗೂ ಮಾನ್ಯ ಸಿ.ಪಿ.ಐ ಎಮ.ಬಿ ನಗರ ವೃತ್ತ ರವರ ಮಾರ್ಗದರ್ಶನದಲ್ಲಿ ಮಾನ್ಯ ದಿವ್ಯಾ ಸಾರಾ ಥಾಮಸ ಐ.ಪಿ.ಎಸ್  ರವರ ನೇತ್ರತ್ವದಲ್ಲಿ ರಾಘವೇಂದ್ರ ಪಿ.ಎಸ್.ಐ, ಮಲ್ಲಿಕಾರ್ಜುನ ಸಿ.ಪಿ.ಸಿ 825, ದ್ಯಾವಪ್ಪ ಸಿ.ಪಿ.ಸಿ 942, ಸಂತೋಷ ಸಿ.ಪಿ.ಸಿ 935 ರವರು ಆರೋಪಿತನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ.ನಂತರ ಆರೋಪಿತನ ಹೆಸರು ವಿಳಾಸ ವಿಚಾರಿಸಲಾಗಿ ಮಂಜುನಾಥ ತಂಧೆ ಭೀಮಾಶಂಕರ ತೆಗನೂರ, ವಯ|| 19, ಸಾ|| ಕೋರಿ ಮಠದ ಹತ್ತಿರ ಬ್ರಹ್ಮಪೂರ ಕಲಬುರಗಿ ಅಂತಾ ತಿಳಿಸಿದ್ದು, ಹಾಗೂ ತಾನು ಮಾಡಿದ ಅಪರಾಧ ಒಪ್ಪಿಕೊಂಡಿದ್ದರಿಂದ ಅಪರಾಧಕ್ಕೆ ಉಪಯೋಗಿಸಿದ ಮೋಟರ ಸೈಕಲ ನಂ: ಕೆಎ 32 ಇಸಿ 3962||ಕಿ|| 50,000/- ಹಾಗೂ 1) ಒಂದು ತೊಲೆಯ ಬಂಗಾರದ ಗುಂಡಿನ ತಾಳಿ ಸರ, 2) 3 ಮಾಸಿಯ 2 ಕಿವಿಯ ಹೂ, 3) ಒಂದು ಮೊಬೈಲ್ ಸೆಟ್ ಸೇರಿ 31,000/- ಎಲ್ಲಾ ಸೇರಿ ಒಟ್ಟು 81,000/- ಬೆಲೆಬಾಳುವ ಮುದ್ದೆ ಮಾಲು ಜಪ್ತ ಪಡಿಸಿಕೊಂಡು ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಇರುತ್ತದೆ.

ರಾಘವೇಂದ್ರ ನಗರ ಪೊಲೀಸ್ ಠಾಣೆ : ಮಾನ್ಯರಲ್ಲಿ ಅರಿಕೆ ಮಾಡಿಕೊಳ್ಳುವದೇನೆಂದರೆ ಇಂದು ದಿಃ 27/05/15 ರಂದು ಮಧ್ಯಾಹ್ನ 12-00 ಗಂಟೆಗೆ ಫಿರ್ಯಾದಿ ಶ್ರೀ ಮಹ್ಮದ ರಫಿಯೋದ್ದಿನ ತಂದೆ ಮಹ್ಮದ ಫಸಿಯೋದ್ದಿನ ಮುತ್ತವಲಿ ವಯಃ 44 ಉಃ ಶಿಕ್ಷಕ ಸಾಃ ಎಕ್ಬಾಲ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರ ಸಲ್ಲಿಸಿದ್ದು ಸಾರಾಂಶ ಏನೆಂದರೆ ನಾವು ಯಾವುದೆ ಕಾರ್ಯಕ್ರಮಕ್ಕೆ ಹೊಗುವಾಗ ನಮ್ಮ ಮನೆಯಲ್ಲಿ ಮಲಗಿಕೊಳ್ಳಲು ನನ್ನ ಹೆಂಡತಿಯ ತಾಯಿ ಜೈಬುನ್ಸಿಸಾ ಮತ್ತು ನನ್ನ ಅಳೆಯ ಮಹ್ಮದ ಸೈಫಾನ ಇವರಿಗೆ ಹೇಳಿ ಹೊಗುತ್ತಿದ್ದೆವು ಯಾವಗಲು ಅವರು ನಮ್ಮ ಮನೆಯಲ್ಲಿ ಮಲಗುತ್ತಿದ್ದರು ಹೀಗಿದ್ದು ನಿನ್ನೆ ದಿಃ 26/05/15 ರಂದು ಬೆಳಗ್ಗೆ 08-00 ಗಂಟೆಗೆ ನಾನು ನನ್ನ ಕುಟುಂಬದೊಂದಿಗೆ ನನ್ನ ಅಣ್ಣನ ಮದುವೆ ಇದ್ದ ಪ್ರಯುಕ್ತ ಮನೆಗೆ ಬೀಗ ಹಾಕಿ ಶಾಂತಿನಗರಕ್ಕೆ ಹೋಗಿದ್ದು ಮತ್ತೆ ನಾನು ಸಾಯಂಕಾಲ 05-30 ಗಂಟೆಗೆ ಮನೆಗೆ ಬಂದು ಬಟ್ಟೆಗಳು ಮನೆಯಲ್ಲಿ ಇಟ್ಟು ಮನೆಗೆ ಬೀಗ ಹಾಕಿ ಸಾಯಂಕಾಲ 06-00 ಗಂಟೆಯ ಸುಮಾರಿಗೆ ಮತ್ತೆ ಹೊಗಿರುತ್ತೆನೆ ರಾತ್ರಿ ಮನೆಯಲ್ಲಿ ಇರಲು ನಾನು ನನ್ನ ಅತ್ತಿಗೆಯವರಿಗೆ ಹೇಳಿರುವದಿಲ್ಲ ಇಂದು ದಿಃ 27/05/15 ರಂದು ಬೆಳಗ್ಗೆ 08-30 ಗಂಟೆಗೆ ನಮ್ಮ ಮನೆಯ ಬಾಗಿಲು ಕೊಂಡಿ ಮುಗಿದಿದ್ದು ನಾನು ನೋಡಿ ಒಳಗೆ ಹೋಗಿ ನೋಡಲು ಅಲಮಾರಿದಲ್ಲಿದ್ದ ಎಲ್ಲಾ ಸಮಾನುಗಳು ಚಿಲ್ಲಾ ಪಿಲ್ಲಿಯಾಗಿ ಬಿದಿದ್ದು ಅಲಮಾರಿದಲ್ಲಿದ್ದ 1) 5 ಗ್ರಾಂ ಬಂಗಾರದ ಮಾಟಿರ್ನ ಅ.ಕಿ 12,000/-  2) 3 ಗ್ರಾಂ ಬಂಗಾರದ ಕೀವಿ ರಿಂಗ್ ಅ.ಕಿ 7000/- ರೂ. 3) 3 ಗ್ರಾಂ ಬಂಗಾರದ ಕೀವಿ ರಿಂಗ್ ಅ.ಕಿ 6000/- ರೂ. 4) 3 ಗ್ರಾಂ ಬಂಗಾರದ ಒಂದು ಜೊತೆ ಟಾಪ್ ಅ.ಕಿ 6000/- ರೂ. 5) 3 ಗ್ರಾಂ ಬಂಗಾರದ ಉಂಗುರ ರಿಂಗ್ ಅ.ಕಿ 6000/- 6) 2 ಗ್ರಾಂ ಬಂಗಾರದ ಒಂದು ಸಣ್ಣು ಉಂಗುರ ಅ.ಕಿ 4000/- ರೂ. 7) 4 ಗ್ರಾಂ ಬಂಗಾರದ 4 ತಾಳಿಗಳು ಅ.ಕಿ 7000/- ರೂ. ಹೀಗೆ ಒಟ್ಟು 21 ಗ್ರಾಂ ಬಂಗಾರದ ಆಭರಣಗಳು ಅವುಗಳ ಅ.ಕಿ 48,000/- ರೂ. ಬೆಲೆ ಬಾಳುವದನ್ನು ಯಾರೊ ಕಳ್ಳರು ಮನೆಯ ಕೊಂಡಿ ಮುರಿದು ಒಳಗೆ ಹೋಗಿ ಕಳವು ಮಾಡಿಕೊಂಡು ಹೋಗಿದ್ದು ಪತ್ತೆ ಹಚ್ಚಿಕೊಡುವಂತ ಫಿರ್ಯಾದಿ ಇತ್ಯಾದಿ ದೂರಿನ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ 72/15 ಕಲಂ 454, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ : ದಿನಾಂಕ 27-05-2015 ರಂದು ಬೆಳಗ್ಗೆ 09-30 ಗಂಟೆಗೆ ನಾನು ಜಗತ್ ಸರ್ಕಲ್ ಹತ್ತಿರ ಸಂಚಾರಿ ಕರ್ತವ್ಯ ಮೇಲಿರುವಾಗ ಠಾಣೆ ಎಸ.ಹೆಚ ಓ ಹೆಚ.ಸಿ 283 ರವರು ಪೋನ ಮಾಡಿ ಹರ್ಷವರ್ದನ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಬಂದಿರುತ್ತಾರೆ ಅಂತಾ ಓಪಿ ಪಿಸಿ ರವರು ಪೋನ ಮಾಡಿ ತಿಳಿಸಿದಾರೆ ಅಂತಾ ತಿಳಿಸಿದರಿಂದ ನಾನು ನೇರವಾಗಿ ಬಸವೇಶ್ವರ ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳುವಿಗೆ ಮಾತನಾಡಿಸಲು ಸದರಿರವರು ಹೇಳಿಕೆ ನೀಡುವ ಸ್ಥಿತಿಯಲ್ಲಿರದ ಕಾರಣ ಅವರ ಜೋತೆಯಲ್ಲಿದ ಅವರ ತಂದೆ ತಿಪ್ಪಣ್ಣ ರವರನ್ನು ವಿಚಾರಿಸಲು ಅವರು ಹೇಳಿಕೆ ನೀಡಿದ ಸಾರಂಶವೇನೆಂದರೆ ದಿನಾಂಕ 27-05-2015 ರಂದು ಬೆಳಗ್ಗೆ 06-00 ಗಂಟೆಗೆ ನನ್ನ ಮಗ ಹರ್ಷವರ್ದನ ಇತನು ಸರ್ಕಾರಿ ಆಸ್ಪತ್ರೆಗೆ ಹೋಗಿ ಮರಳಿ ಮನೆಗೆ ಬುರವ ಕುರಿತು   ಮೋಟಾರ ಸೈಕಲ ನಂ ಕೆಎ32ವಿ2603 ನೇದ್ದನ್ನು ಜಗತ್ ಸರ್ಕಲ್ ರೋಡ ಕಡೆಯಿಂದ ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ರೋಡ ಎಡ ಬಲ ತಿರುಗಿಸುತ್ತ ಚಿರಾಯು ಆಸ್ಪತ್ರೆ ಎದುರು ರೋಡ ಮೇಲೆ ಕಟಹೊಡೆದು ಒಮ್ಮೇಲೆ ಬ್ರೇಕ್ ಹಾಕಿ ಮೋಟಾರ ಸೈಕಲ್ ಸ್ಕೀಡ್ ಮಾಡಿ ಕೆಳಗಡೆ ಬಿದ್ದು ಗಾಯಹೋಂದಿರುತ್ತಾನೆ ಅಂತಾ ಇತ್ಯಾದಿ ಫಿರ್ಯಾದಿ ಹೇಳಿಕೆ ಸಾರಂಶ ಅದೆ.

KALABURAGI DISTRICT REPORTED CRIMES.

ಜೇವರ್ಗಿ ಪೊಲೀಸ್ ಠಾಣೆ : ದಿನಾಂಕ 26.05.2015 ರಂದು 16:30 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ ನನ್ನ ಮಗ ಭೀಮಾಶಂಕರ ಇತನು ಚಿರಗಳ್ಳಿ ಕ್ಯಾಂಪ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡು ತನ್ನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತಾನೆ. ನನ್ನ ಮಗಳಾದ  ಇವಳು ಚಿಗರಳ್ಳಿ ಕ್ಯಾಂಪಿನ ನನ್ನ ಮಗನ ಮನೆಯಲ್ಲಿಯೇ ವಾಸವಾಗಿರುತ್ತಾಳೆ. ದಿ 16.05.2015 ರಂದು ಮುಂಜಾನೆ ನಾನು ಚಿಗರಳ್ಳಿ ಕ್ಯಾಂಪಿಗೆ ನನ್ನ ಮಕ್ಕಳಿಗೆ ಮಾತಾನಾಡಿಸಲು ಬಂದಿರುತ್ತೆನೆ. ಮನೆಯಲ್ಲಿ ನನ್ನ ಮಗಳಾದ ಇವಳಿಗೆ ಮಾತನಾಡಿಸಲು ಅವಳು ಮಾತನಾಡಲಿಲ್ಲಾ. ನಂತರ ನನ್ನ ಸೊಸೆಯಾದ ನಿಂಗಮ್ಮ ಇವಳಿಗೆ ಕೇಳಲು ಅವಳು ಹೇಳಿದ್ದೆನೆಂದರೆ ನೀನ್ನೆ ದಿನಾಂಕ 15.5.2015 ರಂದು ಮಧ್ಯಾಹ್ನ  ಇವಳು ಸಂಡಾಸಕ್ಕೆ ಹೋಗಿ ಮರಳಿ ಮನೆಗೆ ಬಂದು ನನ್ನ ಮುಂದೆ ಹೇಳಿದ್ದನೆಂದರೆ ನಾನು ಸಂಡಾಸಕ್ಕೆ ಕುಳಿತು ಮರಳಿ ಮನೆಗೆ ಮದ್ಯಾನ್ಹ 2.00 ಗಂಟೆಯ ಸುಮಾರಿಗೆ ಚಿಗರಳ್ಳಿ ಕ್ಯಾಂಪಿನ ಸೊಮರಾಯ ಇವರ ಕವಳಿ ಗದ್ದೆಯ ಹೊಲದ ಹತ್ತಿರ ಬರುತ್ತಿದ್ದಾಗ ಆ ವೇಳೆಗೆ ಮುಸ್ಲಿಂ ಜಾತಿಯ ಆಶೀಫ್ ಮಡಕಿ ಸಾಃ ಇಜೇರಿ ಇತನು ನನ್ನ ಹತ್ತಿರ ಬಂದು ನನಗೆ ಜಬರದಸ್ತಿಯಿಂದ ಕೈ ಹಿಡಿದು ಗಿಡ ಕಂಟಿಯ ಮರೆಯಲ್ಲಿ ಕರೆದುಕೊಂಡು ಹೋಗಿ ನನಗೆ ನೇಲಕ್ಕೆ ಕೆಡುವಿ ಮೈ ಮೇಲಿನ ಬಟ್ಟೆ ಎತ್ತಿ ಜಬರದಸ್ತಿಯಿಂದ ನನಗೆ ಸಂಬೋಗ ಮಾಡಿರುತ್ತಾನೆ ಅಂತಾ ಅಳುತ್ತಾ ಹೇಳಿರುತ್ತಾಳೆ ಅಂತಾ ತಿಳಿಸದಳು ಅಂದಿನಿಂದ  ಇವಳು ಸರಿಯಾಗಿ ಮಾತನಾಡಲು ಬರದ ಪ್ರಯುಕ್ತ ಮತ್ತು ನಾವು ಮರ್ಯಾದಿಗಾಗಿ ಅಂಜಿ ಯಾರ ಮುಂದೆ ಹೇಳಿರುವದಿಲ್ಲಾ ನಂತರ ನಾವು ಈ ಬಗ್ಗೆ ನಮ್ಮ ಸಂಬಂಧಿಕರಲ್ಲಿ ವಿಚಾರಿಸಿದಾಗ ಅವರು ಪೊಲೀಸ್ ಠಾಣೆಯಲ್ಲಿ ಕೇಸು ಮಾಡಿಸು ಅಂತ ಹೇಳಿದ್ದರಿಂದ ಇಂದು ತಡವಾಗಿ ಠಾಣೆಗೆ ಬಂದು ದೂರು ಅರ್ಜಿ ನೀಡಿರುತ್ತೇನೆ. ಕಾರಣ ಆಸೀಫ್ ಮಡಕಿ ಇತನು ದಿನಾಂಕ: 15.05.2015 ರಂದು ಮದ್ಯಾನ್ಹ 2.00 ಗಂಟೆಯ ಸುಮಾರಿಗೆ ಚಿಗರಳ್ಳಿ ಕ್ಯಾಂಪಿನ ಹತ್ತಿರದ ಸೊಮರಾಯ ಇವರ ಕವಳಿ ಗದ್ದೆಯ ಹೊಲದ ಹತ್ತಿರ ಜಾಗೆಯಲ್ಲಿ ಯಾರು ಇಲ್ಲದನ್ನು ನೋಡಿ ಸಂಡಾಸ ಮಾಡಿ ವಾಪಸ ಮನೆಗೆ ಬರುತ್ತಿದ್ದ ನನ್ನ ಮಗಳಾದ  ಇವಳಿಗೆ ಜಬರದಸ್ತಿಯಿಂದ ಸಂಬೋಗ ಮಾಡಿದ್ದು ಅವನ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ವಿನಂತಿ. ಅಂತ ವಗೈರೆ ಫಿರ್ಯಾದಿ ಸಾರಾಂಶದ ಮೇಲಿಂದ  ಠಾಣೆಯ ಗುನ್ನೆ ನಂ 149/2015 ಕಲಂ 376. ಐಪಿಸಿ ಮತ್ತು 3 (1) (10) (11) 2(5) ಎಸ್.ಸಿ / ಎಸ್.ಟಿ ಪಿಎ ಆಕ್ಟ್ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಾಗಿರುತ್ತದೆ.
ಜೇವರ್ಗಿ ಪೊಲೀಸ್ ಠಾಣೆ : ದಿನಾಂಕ 26.05.2015 ರಂದು 14:30 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿ|| 25.05.2015 ರಂದು 23:00 ಗಂಟೆಯಿಂದ ದಿ|| 26.05.2015 ರಂದು ೦5:00 ಮಧ್ಯದ ಅವಧೀಯಲ್ಲಿ ಯಾರೋ ಅಪರಿಚಿತ ಕಳ್ಳರು ಮುದಬಾಳ ಕೆ ಕ್ರಾಸ್‌‌ ನಲ್ಲಿ ಇರುವ ನನ್ನ ಶ್ರೀ. ಮರಡಿ ಮಲ್ಲಿಕಾರ್ಜುನ ಟ್ರೇಡರ್ಸ (ಫರ್ಟೀಲೈಸರ್) ಅಂಗಡಿಯಲ್ಲಿನ 1) ಕಾಂಪ್ಲೇನ್ ಸೂಪರ್ 4 ಕೇಸ್ 40 ಲೀಟರ್ ಹತ್ತಿ ಬೆಳೆಗೆ ಹೊಡೆಯುವ ಎಣ್ಣೆ, 2) ಅಸೀಪೇಟ್ ಮೂರು ಕೇಸ್ 30 ಕೇ.ಜಿ ಹತ್ತಿ ಬೆಳೆಗೆ ಹೊಡೆಯುವ ಪೌಡರ್ 3) ವೇಡ್ಬ್ಲಾಕ್ ಮೂರು ಕೇಸ್ 30 ಲೀಟರ್ ತೊಗರಿ ಬೆಳೆಗೆ ಹೊಡೆಯುವ ಎಣ್ಣೆ, 4) ಡೇವನ್ ಮೂರು ಕೇಸ್ 30 ಲೀಟರ್ ಹತ್ತಿ ಬೆಳೆಗೆ ಹೊಡೆಯುವ ಎಣ್ಣೆ, 5) ಟರ್ಬೋ 40 ಪಾಕೇಟ್ ಹತ್ತಿ ಬೀಜ ಹೀಗೆ ಒಟ್ಟು 24.500/- ರೂ ಕಿಮ್ಮತ್ತಿನ ಬೇಳೆ ಕ್ರಿಮಿ ನಾಶಕ ಔಷಧೀಗಳನ್ನು ಮತ್ತು ಹತ್ತಿ ಬೀಜ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು  ಸದರಿ ಆರೋಪಿತರು ಮತ್ತು ಮಾಲನ್ನುಪತ್ತೆ ಹಚ್ಚಿ ಕಾನೂನು ಕ್ರಮ ಕೈಕೊಳ್ಳಬೇಕುಅಂತ ವಗೈರೆ ಫಿರ್ಯಾದಿ ಸಾರಾಂಶದ ಮೇಲಿಂದ  ಠಾಣೆಯ ಗುನ್ನೆ ನಂ 148/2015 ಕಲಂ 457. 380 ಐ.ಪಿ.ಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಾಗಿರುತ್ತದೆ.
ನಿಂಬರ್ಗಾ ಪೊಲೀಸ ಠಾಣೆ : ದಿನಾಂಕ 26-05-2015  ರಂದು 1740 ಗಂಟೆಗೆ ಸರ್ಕಾರಿ ಆಸ್ಪತ್ರೆ ನಿಂಬರ್ಗಾದಿಂದ ಎಮ.ಎಲ.ಸಿ ಬಾತ್ಮಿ ಬಂದ ಮೇರೆಗೆ ಎಮ.ಎಲ.ಸಿ ವಿಚಾರಣೆ ಕುರಿತು ಆಸ್ಪತ್ರೆಗೆ ಭೇಟ್ಟಿ ಕೊಟ್ಟು ಉಪಚಾರ ನಿರತ ಶ್ರೀಮತಿ  ಸತ್ಯಮ್ಮ ಗಂಡ ಬಾಬು ಮಾಡಿಯಾಳ ವ|| 40 ವರ್ಷ, ಜಾ|| ಹೊಲೆಯ, || ಕೂಲಿಕೆಲಸ, ಸಾ|| ಹಿತ್ತಲಶಿರೂರ ಇವಳನ್ನು ವಿಚಾರಿಸಿ ಹೇಳಿಕೆ ದಾಖಲಿಸಿಕೊಂಡಿದ್ದು ಅದರ ಸಂಕ್ಷಿಪ್ತ ಸಾರಾಂಶವೇನೆಂದರೆ ಮನೆಯ ಜಾಗೆಯ ಸಂಭಂಧ ದಿನಾಂಕ 26/05/2015 ರಂದು 1700 ಗಂಟೆಗೆ ಹಿತ್ತಲಶಿರೂರ ಗ್ರಾಮದ ತನ್ನ ಮನೆಯ ಮುಂದೆ ದೇವೆಂದ್ರಪ್ಪ ತಂದೆ ಕಲ್ಲಪ್ಪ ಕಾಮನಕರ ಹಾಗೂ ಇತರರು ಸೇರಿ ಅಕ್ರಮಕೂಟ ಕಟ್ಟಿಕೊಂಡು ಕಲ್ಲು ಮತ್ತ ಕಟ್ಟಿಗೆಯಿಂದ ತನಗೂ ಮತ್ತು ತನ್ನ ಗಂಡ ಮತ್ತು ಮಗನಿಗೆ ಹೊಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಭಯಪಡಿಸಿರುತ್ತಾರೆ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೊಟ್ಟ  ಹೇಳಿಕೆ ಫಿರ್ಯಾದಿಯನ್ನು ದಾಖಲಿಸಿಕೊಂಡು 1900 ಗಂಟೆಗೆ ಠಾಣೆಗೆ ಬಂದು ಸದರಿ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ನಿಂಬರ್ಗಾ ಪೊಲೀಸ ಠಾಣೆ ಗುನ್ನೆ ನಂ. 72/2015 ಕಲಂ 143, 147, 323, 324, 354, 504, 506,  ಸಂ 149  ಐಪಿಸಿ  ನೇದ್ದರಲ್ಲಿ ಪ್ರಕರಣ ದಾಖಲಾಗಿರುತ್ತದೆ..
ಕುರಕುಂಟಾ ಪೊಲೀಸ್ ಠಾಣೆ : ಮನುಷ್ಯ  ಕಾಣೆಯಾದ ಬಗ್ಗೆ,   ದಿನಾಂಕ:- 20-05-2015 ರಂದು 5 ಪಿ.ಎಮ ಕ್ಕೆ ಫಿರ್ಯಾದಿಯು ಠಾಣೆಗೆ ಹಾಜರಾಗಿ ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ಒಂದು ಅರ್ಜಿಯನ್ನು ಹಾಜರು ಪಡಿಸಿದ್ದು ಅರ್ಜಿಯ ಸಾರಾಂಶವೆನೆಂದರೆ ಫಿರ್ಯಾದಿಯ ಮಗನಾದ  ಸಂಗಪ್ಪ ತಂದೆ ಶರಣಪ್ಪ ಮೇಲಿನಕೆರಿ ವ|| 22 ವರ್ಷ ಸಾ|| ಕುರಕುಂಟಾ ಇತನು ದಿನಾಂಕ:- 19-04-2015 ರಂದು ಬೆಳಗ್ಗೆ 10 ಗಂಟೆಗೆ ಮನೆಯಿಂದ ಖಾಸಗಿ ಕೆಲಸದ ನಿಮಿತ್ಯ ಹುಬ್ಬಳಿಗೆ ಹೋಗಿಬರುತ್ತೆನೆ ಎಂದು ಹೇಳಿ ಹೋದವನು. ಮರಳಿ ಮನೆಗೆ ಬರದೇ ಹೋದಾಗ ಫಿರ್ಯಾದಿಯು ತನ್ನ ಸಂಭಂದಿಕರು ಇರುವ ಕಡೆ ಎಲ್ಲಾ ಕಡೆ ಹುಡುಕಾಡುದರೂ ಸಿಕ್ಕಿರುವುದಿಲ್ಲ.ನಂತರ ತಿಳಿದುಬಂದಿದ್ದೆನೆಂದರೆ ಆಂಧಪ್ರದೇಶದ ಬಷಿರಾಬಾದ ಹತ್ತಿರ ಇರುವ ಮಂಥನಗೂಡು ತಾಂಡದ ರಾಜು ಎಂಬಾತನ ಮಗಳಾಧ ಗೀತಾ ಇವಳು  ನಿಮ್ಮ ಮಗನ ಜೊತೆಯಲ್ಲಿ ಹೋಗಿರುತ್ತಾಳೆ ಅಂತಾ ಫಿರ್ಯಾದಿಗೆ ಮತ್ತು ಫಿರ್ಯಾದಿಯ ಹೆಂಡತಿಯಾದ ಕಲ್ಲಮ್ಮಳಿಗೆ  ತೊಂದರೆ  ಕೊಡುತ್ತಿದ್ದು . ಫಿರ್ಯಾದಿಯು ತನ್ನ ಮಗ ಮನೆಯಿಂದ ಹೋಗುವ ಕಾಲಕ್ಕೆ ಮೈಮೇಲೆ ಗೋದಿ ಬಣ್ಣದ ಅಂಗಿ ಮತ್ತು ಚಾಕಲೇಟ ಬಣ್ಣದ ಪ್ಯಾಂಟು ಹಾಕಿದ್ದು ಅಂದಾಜು 5ಫೀಟು 4 ಇಂಚು ಎತ್ತರ ಮೈಬಣ್ಣ ಕೆಂಪು ಬಣ್ಣದವನಿದ್ದು ಬಿ.ಎ ಪಧವಿದರನಿದ್ದು ಇಲ್ಲಿಯವರೆಗೆ ಹುಡುಕಾಡಿದರೂ ಸಿಕ್ಕಿರುವದಿಲ್ಲ.ಇಂದು ಅರ್ಜಿ ಸಲ್ಲಿಸಿದ್ದು ತನ್ನ ಮಗನಿಗೆ  ಪತ್ತೆ ಹಚ್ಚಿ ಕೊಡಲು ವಿನಂತಿ ಅರ್ಜಿ ಸಲ್ಲಿಸದ ಮೇರೆಗೆ ಕುರಕುಂಟಾ ಠಾಣೆ ಗುನ್ನೆ.ನಂ 09/2015 ಕಲಂ:- ಮನುಷ್ಯ ಕಾಣೆಯಾದ ಬಗ್ಗೆ ಗುನ್ನೆ ದಾಖಲಾಗಿರುತ್ತದೆ.

ಆಶೋಕನಗರ ಪೊಲೀಸ್ ಠಾಣೆ : ದಿನಾಂಕ 26-05-2015 ರಂದು ರಾತ್ರಿ 8 ಗಂಟೆಗೆ ಶ್ರೀಮತಿ ಪ್ರೇಮಾ ಗಂಡ ಪ್ರಭಾಕರರಾವ ಮದರಕಿ ಸಾ:ಎನ್.ಜಿ.ಓ ಕಾಲೋನಿ ಕಲಬುರಗಿ ರವರು ಠಾಣೆಗೆ ಬಂದು ನೀಡಿದ ಫಿರ್ಯಾದಿ  ಅರ್ಜಿಯ ಸಾರಾಂಶವೆನೆಂದರೆ ಇಂದು ದಿನಾಂಕ 26-05-2015 ರಂದು ಸಂಜೆ 5-15 ಗಂಟೆ ಸುಮಾರಿಗೆ ನಾನು ಚಂದ್ರಕಲಾ ಕುಲಕರ್ಣಿ ರವರ ಮನೆಗೆ ಭಜನೆ ಮಾಡಲು ನಮ್ಮ  ಮನೆಯಿಂದ ನಡೆದುಕೊಂಡು ಹೋಗುತ್ತಿರುವಾಗ ಜವಾಹರ ಶಾಲೆ ಹತ್ತಿರ ರೇಲ್ವೆ ಟ್ರಾಕ ಕಡೆಗೆ ಹೋಗುವ ರಸ್ತೆಯಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಒಮ್ಮಲೇ ಬಂದು ನನ್ನ ಕೊರಳಲ್ಲಿ ಕೈ ಹಾಕಿ 2ವರೆ ತೊಲೆ ಬಂಗಾರದ ಮಂಗಳಸೂತ್ರ ಸರವನ್ನು ಕಿತ್ತುಕೊಂಡು ರೇಲ್ವೆ ಟ್ರಾಕ ಕಡೆಗೆ ಓಡಿ ಹೋಗಿರುತ್ತಾನೆ. ಅವನು ನೀಲಿ ಜೀನ್ಸ ಪ್ಯಾಂಟ , ನೀಲಿ ಚೆಕ್ಸ ಶರ್ಟ ಧರಿಸಿದ್ದು ಅಂದಾಜು   25-27 ವಯಸ್ಸಿನ ಇದ್ದು ಆತನಿಗೆ ನೋಡಿದರೆ ಗುರುತಿಸುತ್ತೇನೆ. ಆಗ ನಾನು ಚೀರಾಡಿದ್ದು ಜನರು ಬರುವಷ್ಟರಲ್ಲಿ ಆ ವ್ಯಕ್ತಿ ರೇಲ್ವೇ ಟ್ರಾಕ ದಾಟಿ ಓಡಿ ಹೋದನು ಮತ್ತು ಅದೇ ವೇಳೆಗೆ ಗೂಡ್ಸ ರೈಲು ಹೋಗಿದ್ದರಿಂದ ಬೆನ್ನು ಹತ್ತಲು ಆಗಿರುವುದಿಲ್ಲಾ.  ಈ ವಿಷಯ ನನ್ನ ಮನೆಯಲ್ಲಿ ತಿಳಿಸಿ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ನನ್ನ 2ವರೆ ತೊಲೆ ಬಂಗಾರದ ಮಗಳಸೂತ್ರ ಸರ್ ಅ.ಕಿ 50,000/- ನೇದ್ದನ್ನು ಕಿತ್ತುಕೊಂಡು ಹೋಗಿದ್ದ ಕಳ್ಳನನ್ನು ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 77/2015 ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.