POLICE BHAVAN KALABURAGI

POLICE BHAVAN KALABURAGI

02 January 2013

GULBARGA DISTRICT


:: ಗುಲಬರ್ಗಾ ಜಿಲ್ಲಾ ಪೊಲೀಸ್ ರ ಕಾರ್ಯಚರಣೆ ::
ಅಂತರರಾಜ್ಯ ಟವೇರಾ ವಾಹನ ಕಳ್ಳರ ಬಂಧನ,  
ಬಂಧಿತರಿಂದ  20 ಲಕ್ಷ  ಬೆಲೆ ಬಾಳುವ ವಾಹನಗಳು ವಶ.

ಗುಲಬರ್ಗಾ ನಗರದ ಶಾಂತಿ ನಗರ ಬಡಾವಣೆಯಲ್ಲಿ ದಿನಾಂಕ:13/12/2012 ರಂದು  ಶ್ರೀ. ಬಸವರಾಜ ತಂದೆ ಚಂದ್ರಕಾಂತ ಪಾಟೀಲ ಮಾಹಾಲಕ್ಷ್ಮಿ ಲೇಔಟ ಗುಲಬರ್ಗಾ ರವರ ಟವೇರಾ ವಾಹನ ಸಂ. ಕೆ.ಎ-32 ಎ.ಎಂ.-4376 ವಾಹನ ಕಳ್ಳತನ ಆಗಿದ್ದು ಅಲ್ಲದೆ ದಿನಾಂಕ:20/12/2012 ರಂದು ಜೇವರ್ಗಿ ರೋಡ ಎನ್.ಜಿ.ಓ ಕಾಲೋನಿಯಲ್ಲಿ ಶ್ರೀ ಭದ್ರಿ ನಾರಾಯಣ ಮುಜದಾರ ರವರ ಮನೆಯ ಹತ್ತಿರ ಟವೇರಾ ವಾಹನ ನಂ. ಕೆ.ಎ-25 ಸಿ-7572  ಕಳ್ಳತನ ಆಗಿದ್ದು ಈ ಬಗ್ಗೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿರುತ್ತವೆ. ಇದುಲ್ಲದೆ ಗುಲಬರ್ಗಾ ನಗರದ ಒಕ್ಕಲಗೇರಾ ಗಂಜ ಏರಿಯಾದಲ್ಲಿ ಶ್ರೀ ಸೈಯದ ಇಸ್ತಿಯಾರ ಅಹ್ಮದ ರವರ ಟವೇರಾ ವಾಹನ ನಂ. ಕೆ.ಎ-03 ಎಮ್.ಎಮ್ -6968 ಕಳ್ಳತನ ಆಗಿದ್ದು ಈ ಬಗ್ಗೆ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
         ಹೀಗೆ ಗುಲಬರ್ಗಾ ನಗರದಲ್ಲಿ ವಾಹನ ಕಳ್ಳತನ ಆಗುತ್ತಿದ್ದರಿಂದ ಶ್ರೀ ಎನ್.ಸತೀಶಕುಮಾರ ಐಪಿಎಸ್‌ ಜಿಲ್ಲಾ ಪೊಲೀಸ್ ಅಧೀಕ್ಷಕರು ಗುಲಬರ್ಗಾ, ಮತ್ತು ಶ್ರೀ  ಭೂಷಣ ಬೊರಸೆ ಐಪಿಎಸ್‌  ಎ.ಎಸ್‌.ಪಿ (ಎ) ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಶ್ರೀ ಟಿ.ಹೆಚ್.ಕರೀಕಲ್ ಪಿ.ಐ, ಸುರೇಶಕುಮಾರ ಪಿ.ಸಿ. 534 (1150), ಉಮ್ಮಣ್ಣ ಪಿ.ಸಿ. 998 (118), ಯೊಗೇಂದ್ರ ಪಿ.ಸಿ. 606 (1258), ಉಮೇಶ ಪಿ.ಸಿ. 882(30), ಶ್ರೀನಿವಾಸ ಪಿ.ಸಿ. 638 (49),  ರವರನ್ನು ಒಳಗೊಂಡ ತಂಡವನ್ನು ರಚಿಸಿ ಹೈದ್ರಾಬಾದಕ್ಕೆ ಕಳುಹಿಸಲಾಗಿತ್ತು.
              ಈ ತಂಡವು ಆಂದ್ರ ಪ್ರದೇಶ ರಾಜ್ಯದ ಹೈದ್ರಾಬಾದ, ರಂಗಾರೆಡ್ಡಿ ಜಿಲ್ಲೆಯ ಹಯಾತ ನಗರ, ವನಸ್ತಲಿಪೂರಂ. ಹಾಗು ತಿರುಪತಿ ಹತ್ತಿರದ ಪಿಲೆಯರು, ಕಡಪಾ, ಕರ್ನೂಲ್ ವಿವಿಧ ಕಡೆಯಲ್ಲಿ ಟವೇರಾ ವಾಹನ ಕಳ್ಳತನ ಮಾಡುವ ಬಗ್ಗೆ ಮಾಹಿತಿ ಕಲೆ ಹಾಕಿ ಗುಲಬರ್ಗಾ ನಗರದಲ್ಲಿ ಟವೇರಾ ವಾಹನ ಕಳ್ಳತನ ಮಾಡಿದ ಅಂತರಾಜ್ಯ ಟವೇರಾ ಇನ್ನಿತರೆ ವಾಹನ ಕಳ್ಳತನ ಮಾಡುವ 1)  ಮುನಿಶೇಖರ ರೆಡ್ಡಿ ತಂದೆ ಮುನಿರೆಡ್ಡಿ ವ-25 ವರ್ಷ ಉ-ಡ್ರೈವರ ಕೆಲಸ ಸಾ: ಕುರಪರ್ತಿವಾರೆಪಲ್ಲಿ ಮಂಡಲ ರೂಂಪಿಚರ್ಲ ತಾ: ಪಿಲೆಯ ಜಿ:ಚಿತ್ತುರ ಹಾ:ವ: ಸೀತಾರಾಮಪೂರ ಪೇಸ ನಂ 2 ಕಾಲೋನಿ ಹಯಾತ ನಗರ ಹೈದ್ರಾಬಾದ  2) ಸಂದೀಪ ತಂದೆ ಗೋರೆಲಾಲ ಗುಪ್ತಾ ವ-24 ವರ್ಷಜಾ:ಗುಪ್ತಾ ಉ-ಸ್ಯಾಪ್ಪ ವ್ಯಾಪಾರ ಸಾ: ಲಾಲ ಬಜಾರ ಕಾನಪೂರ ಉತ್ತರ ಪ್ರದೇಶ ರಾಜ್ಯ ಹಾ;ವ: ಕಳನಗರ ಅಂಬರಪೇಠ ಸೈಬರಬಾದ ಜಿ: ರಂಗಾರೆಡ್ಡಿ 3) ಲಿಂಗಾ ಸ್ವಾಮಿ ತಂದೆ ಅಂಜಯ ರಾಮಲಂ ವ-23 ವರ್ಷ ಜಾ:ಪಿಚ್ಯಾಗುಟ್ಆ ಕೊಂಚಿಕೊರವೆರ ಉ=ಆಟೋ ಚಾಲಕ ಸಾ: ಜಾನಪಲ್ಲಿ ಮಂಡಲ ರಾಮಪೆಠ ಜಿ:ನೆಲಗೊಂಡ ಸದ್ಯ ಜಾಫರಗೂಡಾ ಮಂಡಲ ಹಯಾತ ನಗರ ಜಿ: ರಂಗಾ ರೆಡ್ಡಿ (ಎ.ಪಿ ) ರವರನ್ನು ದಸ್ತಗಿರಿ ಮಾಡಿ ಇವರಿಂದ ಗುಲಬರ್ಗಾ ನಗರದಲ್ಲಿ 3 ಕಡೆ ಟವೇರಾ ವಾಹನಗಳು ಮತ್ತು ಆಂದ್ರ ಪ್ರದೇಶದ ಜಡಚರಲ್ಲಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳವು ಮಾಡಿದ ಟಾಟಾ ಇಂಡಿಕಾ ವಾಹನವನ್ನು ಪತ್ತೆ ಮಾಡಿ ಒಟ್ಟು 20 ಲಕ್ಷ ರೂ ಬೇಲೆ ಬಾಳುವ ವಾಹನಗಳನ್ನು ವಶಪಡಿಸಿಕೊಂಡು ಗುಲಬರ್ಗಾಕ್ಕೆ ತಂದಿರುತ್ತಾರೆ.
          ಈ ಅಂತರಾಜ್ಯ ಕಳ್ಳರಾದ ಮುನಿಶೇಖರ ರೆಡ್ಡಿ ಇತನು ಹೈದ್ರಾಬಾದಲ್ಲಿ ಹಲುವಾರು ವಾಹನ ಕಳ್ಳತನ ಮಾಡಿದ ಹಳೆ ಗುನ್ನೆಗಾರನಿದ್ದು ಅಲ್ಲದೆ ಆಂದ್ರಪ್ರದೇಶ, ಕರ್ನಾಟಕ, ಇನ್ನಿತರೆ ರಾಜ್ಯಗಳಲ್ಲಿ ವಾಹನ ಕಳ್ಳತನ ಮಾಡುವ ಪ್ರವೃತ್ತಿ ಉಳ್ಳವನಿದ್ದು ಕುಖ್ಯಾತ ಟವೇರಾ ವಾಹನ ಕಳ್ಳನಿಗೆ ಸಿನಿಮಿಯ ರೀತಿಯಿಂದ ದಸ್ತಗಿರಿ ಮಾಡಿಕೊಂಡು ತರಲಾಗಿದೆ. ಈ ಕಾರ್ಯ ಮಾಡಿದ ತಂಡಕ್ಕೆ ಮಾನ್ಯ ಐಜಿಪಿ ಈಶಾನ್ಯ ವಲಯ ಗುಲಬರ್ಗಾ, ಎಸ್.ಪಿ ಗುಲಬರ್ಗಾ, ಎ.ಎಸ್.ಪಿ (ಎ) ಉಪ ವಿಭಾಗ ಗುಲಬರ್ಗಾ ರವರು ಶ್ಲಾಘಿಸಿರುತ್ತಾರೆ.

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ:ಶ್ರೀಮತಿ, ಲಲಿತಾ ಗಂಡ ಲಕ್ಷ್ಮಣ ಪೂಜಾರಿ ಸಾ|| ಅರಳಗುಂಡಗಿ ರವರು  ನಾನು ಮತ್ತು ನನ್ನ ಮಗಳಾದ ವಿಜಯಲಕ್ಷ್ಮಿ ಹಾಗು ಇತರರು ಕೂಡಿಕೊಂಡು ದಿ:01-01-2013 ರಂದು ಬೆಳಿಗ್ಗೆ 9-30 ಗಂಟೆ ಸುಮಾರಿಗೆ ಕೂಲಿ ಕೆಲಸಕ್ಕೆ ಟಂಟಂ ನಂ ಕೆಎ-32-ಎ-9845 ನೇದ್ದರಲ್ಲಿ ಕುಳಿತುಕೊಂಡು ಹೊರಟಾಗ  ದಾರಿ ಮಧ್ಯದಲ್ಲಿ ಟಂಟಂ ಚಾಲಕ ಸಲೀಮ ಇತನು ತನ್ನ ಟಂಟಂ ಅನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಸುತ್ತಾ ಹೋಗಿ ಅಪಘಾತ ಪಡಿಸಿದ್ದರಿಂದ ನಾನು ಹಾಗೂ ನನ್ನ ಮಗಳಾದ ವಿಜಮ್ಮ @ ವಿಜಯಲಕ್ಷ್ಮಿ ತಂದೆ ಲಕ್ಷ್ಮಣ ಪೂಜಾರಿ ವಯ:10  ವರ್ಷ ಇಬ್ಬರು ಕೆಳಗೆ ಬಿದ್ದಿದ್ದು. ವಿಜಮ್ಮ ಇವಳಿಗೆ ತಲೆ ಹಿಂಭಾಗಕ್ಕೆ ಭಾರಿ ರಕ್ತ ಗಾಯವಾಗಿದ್ದು,ಉಪಚಾರ ಕುರಿತು ಗುಲಬರ್ಗಾ ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಉಪಚಾರ ಪಡೆಯುತ್ತಿರುವಾಗ ದಿ:02-01-13 ರಂದು 12-30 ಪಿ.ಎಮ್ ಕ್ಕೆ ಮೃತಪಟ್ಟಿರುತ್ತಾಳೆ. ಸದರಿ ಟಂಟಂ ಚಾಲಕನ ವಿರುದ್ದ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ:01/2013  ಕಲಂ 279,338,304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ವಾಡಿ ಪೊಲೀಸ್ ಠಾಣೆ:ಶ್ರೀ ಹೀರು ತಂದೆ ಲಾಲಸಿಂಗ ಜಾಧವ ಸಾ|| ಭೊಜು ನಾಯಕ ತಾಂಡಾ ನಾಲವಾರ ಇವರು ನನ್ನ ಹಿರಿಯ ಮಗನಾದ ಸೀತಾರಾಮ ತಂದೆ ಹೀರು ಜಾಧವ ವಯ 40 ವರ್ಷ ಇತನು ನಾವು ನಿನ್ನೆ ದಿನಾಂಕ:01-01-2013 ರಂದು ಸಾಯಂಕಾಲ 5 -00 ಗಂಟೆ ಸುಮಾರಿಗೆ ನನ್ನ ತನ್ನ ಟಂಟಂ ನಂ ಕೆಎ-33/7931 ನೇದ್ದರಲ್ಲಿ  ಧರ್ಮಾ ನಾಯಕ ತಾಂಡಾದಲ್ಲಿ ಸುರೇಶ ಇವರ ಮನೆಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ನಾನು ಹೋಗಿ ಬರುತ್ತೆನೆ ಅಂತಾ ಹೇಳಿ ಹೋಗಿದ್ದನು. ರಾತ್ರಿ  11-30  ಗಂಟೆಗೆ ನಮ್ಮೂರ ಸಿದ್ರಾಮ ತಂದೆ ರಾಮಚಂದ್ರ ರಾಠೋಡ ಇವರು ನಮ್ಮ ಮನೆಗೆ ಬಂದು ರಾತ್ರಿ 10-00 ಗಂಟೆ ಸುಮಾರಿಗೆ ನಾನು ಕುಂಬಾರಹಳ್ಳಿಯಿಂದ ನಮ್ಮ ತಾಂಡಾಕ್ಕೆ ನನ್ನ ಮೋಟರ ಸೈಕಲ ಮೇಲೆ ಬರುತ್ತಿದ್ದು ನನ್ನ ಮುಂದುಗಡೆ ನಿನ್ನ ಮಗ ಸಿತಾರಾಮ ಇತನು ತನ್ನ ಟಂಟಂ ಕೆಎ-33/7931 ನೇದ್ದನ್ನು ಅತಿವೇಗ ದಿಂದ ಚಲಾಯಿಸುತ್ತಾ ಟಂಟಂ ಪಲ್ಟಿ ಮಾಡಿದನು, ಸದರಿ ಟಂಟಂ ಅವನ ಮೇಲೆ ಬಿದ್ದು ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ  ಗುನ್ನೆ ನಂ:02/2012 ಕಲಂ, 279, 304 (ಎ) ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  

GULBARGA DISTRICT


ಸಿಬ್ಬಂದಿ ನೇಮಕಾತಿ ಆಯೋಗ

                                     ಸಿಬ್ಬಂದಿ ನೇಮಕಾತಿ ಆಯೋಗ
      (ಕರ್ನಾಟಕ ಕೇರಳ ವಲಯ) ಬೆಂಗಳೂರು

ಪತ್ರಿಕಾ ಪ್ರಕಟಣೆ

ಸಿಎಪಿಎಫ್ಎಸ್ ನ ಕಾನ್ಸಟೇಬಲಗಳು (ಜೆಡಿ) ಮತ್ತು ಆಸ್ಸಾಂ ರೈಪಲ್ಸ್ ನ ರೈಫಲ್ ಮನ್ (ಜೆಡ)-2013 ಗಳನ್ನು ನೇಮಕ ಮಾಡಿಕೊಳ್ಳುವದರ ಬಗ್ಗೆ ಪತ್ರಿಕಾ ಪ್ರಕಟಣೆ.


ಸಿಬ್ಬಂದಿ ನೇಮಕಾತಿ ಆಯೋಗವು ಭಾರತ ಸರ್ಕಾರದ ಸಚಿವಾಲಯಗಳು/ ಇಲಾಖೆಗಳು, ಅವುಗಳಿಗೆ ಹೊಂದಿಕೊಂಡಿರುವ ಅಧೀನ ಕಛೇರಿಗಳು,ಸಿ &ಎಜಿ ಮತ್ತು ಅದರ ಅಕೌಂಟೆಂಟ್ ಜನರಲ್ ಕಛೇರಿಗಳು,ಚುನಾವಣಾ ಆಯೋಗ ಮತ್ತು ಕೇಂದ್ರ ವಿಚಕ್ಷಣಾ ಆಯೋಗಳಿಗೆ ಗ್ರೂಪ್ಬಿ( ನಾನ್ ಗೆಜೆಟೆಡ್) ಮತ್ತು ಗ್ರೂಪ್ಸಿ(ನಾನ್ ಗೆಜೆಟೆಡ್) ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತದೆ
ಸಿಬ್ಬಂದಿ ನೇಮಕಾತಿ ಆಯೋಗದ ಮುಖ್ಯ ಕಚೇರಿ ದೆಹಲಿಯಲ್ಲಿದೆ. ಪ್ರಸಕ್ತ  ಶ್ರೀ ಎನ್.ಕೆ.ರಘುಪತಿಅವರು ಅದರ ಅಧ್ಯಕ್ಷರಾಗಿದ್ದಾರೆ. ಆಯೋಗವು ಏಳು ವಲಯ ಮತ್ತು ಎರಡು ಉಪ ವಲಯಗಳ ಕಚೇರಿಗಳನ್ನು ಹೊಂದಿದೆ. ಅಭ್ಯರ್ಥಿಗಳ ಅನುಕೂಲಕ್ಕಾಗಿ ಈ ಕಚೇರಿಗಳು ದೇಶದ ವಿವಿಧ ಭಾಗಗಳಲ್ಲಿರುವ ಪರೀಕ್ಷಾ ಕೇಂದ್ರಗಳ ಜಾಲದ ಮುಖಾಂತರ ಆಯೋಗವು ನೇಮಕಾತಿ ಪರೀಕ್ಷೆಗಳನ್ನು ನಡೆಸುತ್ತದೆ.
ಬೆಂಗಳೂರಿನ ವಲಯ ಕಚೇರಿಯನ್ನು (ಕರ್ನಾಟಕ ಕೇರಳ ವಲಯ) 1990 ರಲ್ಲಿ ಸ್ಥಾಪಿಸಲಾಯಿತು. ಕರ್ನಾಟಕಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಲಕ್ಷ ದ್ವೀಪ ಈ ಕಚೇರಿಯ ವ್ಯಾಪ್ತಿಗೊಳಪಟ್ಟಿವೆ.

ಆಯೋಗದ ಪರೀಕ್ಷೆಗಳು ಕರ್ನಾಟಕಕ ಮತ್ತು ಕೇರಳದ ಕೆಳಕಂಡ ಕೇಂದ್ರಗಳಲ್ಲಿ ನಡೆಯುತ್ತವೆ.

(ಎ)               (ಬಿ)

ಕರ್ನಾಟಕ             ಕೇರಳ

ಬೆಂಗಳೂರು           ತಿರುವನಂತಪುರ

ಧಾರವಾಡ             ಕೋಚಿ

ಮಂಗಳೂರು         ತ್ರಿಶೂರು

ಗುಲ್ಬರ್ಗ              ಕೋಝಿಕೋಡ್

ಸಿಬ್ಬಂದಿ ನೇಮಕಾತಿ ಆಯೋಗವು ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಅಡಿಯಲ್ಲಿ ಸಿಎಪಿಎಫ್ ನ (ಬಿಎಸ್ಎಫ್ಸಿಐಎಸ್ಎಫ್ಸಿ,ಅರ್,ಪಿ.ಎಫಐಟಿಬಿಪಿಎಸ್ಎಸ್ ಬಿ) ಕಾನ್ಸಟೇಬಲಗಳು (ಜನರಲ್ ಡ್ಯೂಟಿ) ಮತ್ತು ರೈಫಲ್ಮನ್(ಜಿಡಿ) ಅಸ್ಸಾಂ ರೈಫಲ್ಸ್-2013ಗೆ ನೇಮಕ ಮಾಡಿಕೊಳ್ಳುತ್ತಿದೆ. ಈ ಹುದ್ದೆಗಳಿಗೆ ವೇತನ ಶ್ರೇಣಿ ರೂ.5200-20200 ಇದ್ದು ಜೊತೆಗೆ ರೂ.2000 ಗ್ರೇಡ್ ಪೇ ಇರುತ್ತದೆ. ವಯೋಮಿತಿ 18-23 ವರ್ಷಗಳು. ಹೆಚ್ಚು ಕಡಿಮೆ 22,000 ಹುದ್ದೆಗಳಿದ್ದುನಿರ್ಧಿಷ್ಟವಾದ ಸಂಖ್ಯೆಯನ್ನು ನಂತರ ಖಚಿತಪಡಿಸಲಾಗುತ್ತದೆ. ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಮೆಟ್ರಿಕ್ಯುಲೇಷನ್.
ಈ ನೇಮಕ್ಕೆ ಸಂಬಂಧಿಸಿದ ಪ್ರಕಟಣೆಯನ್ನುಪ್ಲಾಯಮೆಂಟ್ನ್ಯೂಸ್/ ರೋಜ್ಗಾರ್ ಸಮಾಚಾರ್ ನ ಡಿಸೆಂಬರ್ 15-21 ರ ಸಂಚಿಕೆಯಲ್ಲಿ ಆಯೋಗವು ಪ್ರಕಟಿಸುತ್ತದೆ ಮತ್ತು ಅರ್ಜಿ ಸಲ್ಲಿಸಲು 11.01.2013 ಕೊನೆ ದಿನ. ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಹುದ್ದೆಗಳಿಗೆ ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ವಾಸ ವಿರುವ ಅಭ್ಯರ್ಥಿಗಳು ಮಾತ್ರ ಅರ್ಹರು. ದೈಹಿಕಾರ್ಹತೆ/ದೈಹಿಕ ದಕ್ಷತೆಯ ಪರೀಕ್ಷೆ 2013 ರ ಫೆಬ್ರುವರಿ-ಮಾರ್ಚ ತಿಂಗಳುಗಳಲ್ಲಿ ನಡೆಯುತ್ತದೆ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಲಿಖಿತ ಪರೀಕ್ಷೆಯನ್ನು 12.05.2013 ರಂದು ನಡೆಸಲಾಗುತ್ತದೆ. ಇಂಗ್ಲಿಷ್ ಮತ್ತು ಹಿಂದಿ ಜೊತೆಗೆ ಪರೀಕ್ಷೆಯ ಪಾರ್ಟ್-ಎಬಿ ಮತ್ತು ಸಿ ಪ್ರಶ್ನೆಗಳು ಮೂರು ಭಾಷೆಗಳಲ್ಲಿದ್ದುಕರ್ನಾಟಕದಲ್ಲಿ ಕನ್ನಡ ಮತ್ತು ಕೇರಳದಲ್ಲಿ ಮಲಯಾಳಂ ನಲ್ಲಿರುತ್ತವೆ. ವಿವಿಧ ಸಿಎಪಿಎಫ್ ಗಳಿಗೆ ಅರ್ಹತೆ-ಕಂ-ಆಧ್ಯತೆ ಆಧಾರದ ಮೇಲೆ ಅಲಾಟ್ ಮಾಡಲಾಗುತ್ತದೆ. ಪರೀಕ್ಷಾ ಕೇಂದ್ರಗಳು ಯಾವ ವಲಯ ಮತ್ತು ಉಪ ವಲಯಗಳ ಸಿಬ್ಬಂದಿ ನೇಮಕಾತಿ ಆಯೋಗದ ವ್ಯಾಪಿಗೊಳಪಡುತ್ತವೆಯೋ ಅಲ್ಲಿಗೆ ನೇಮಕಾತಿ ಅರ್ಜಿಗಳನ್ನು ಅಭ್ಯರ್ಥಿಗಳು ಕಳಿಸಿಕೊಡಬೇಕು. ಕರ್ನಾಟಕ ಮತ್ತು ಕೇರಳ ರಾಜ್ಯಗಳ ವ್ಯಾಪ್ತಿಯಲ್ಲಿರುವ ಪರೀಕ್ಷಾ ಕೇದ್ರಗಳಲ್ಲಿ ಪರೀಕ್ಷೆ ಬರೆಯಲಿಚ್ಛಿಸುವವರು,


ರೀಜನ್ ಡೈರೆಕ್ಟರ್

ಸಿಬ್ಬಂದಿ ನೇಮಕಾತಿ ಆಯೋಗ(ಕೆಕೆಆರ್)

1 ನೇ ಮಹಡಿಇ ವಿಂಗ್

ಕೇಂದ್ರೀಯ ಸದನ

ಕೋರಮಂಗಲ

ಬೆಂಗಳೂರು-560034


ಇಲ್ಲಿಗೆ ಕಳಿಸಿಕೊಡಬೇಕು.


 ಆನ್ ಲೈನ್ಮುಖಾಂತರ ಅರ್ಜಿ ಸಲ್ಲಿಸುವವರುhttp://ssconline.nic.in or http://ssconline2.gov.in ಸಲ್ಲಿಸಬಹುದು. ಆನ್ ಲೈನ್ ನಲ್ಲಿ ಅರ್ಜಿ  ಸಲ್ಲಿಸುವವರಿಗೆ ಪಾರ್ಟ-1 ರಿಜಿಸ್ಟ್ರೇಷನ ಗೆ 09-01-2013 ಕೊನೆ ದಿನ. ಪಾರ್ಟ-2 ಕ್ಕೆ ಅರ್ಜಿ ಸಲ್ಲಿಸಲು 11.01.2013 ಕೊನೆ ದಿನ. ಕೊನೆ ದಿನ ಹತ್ತಿರವಾದಂತೆ ಸರ್ವರ್ ಮೇಲೆ ಹೆಚ್ಚಿನ ಒತ್ತಡ ಬೀಳುವುದರಿಂದಅಭ್ಯರ್ಥಿಗಳು ತಮ್ಮ ಹಿತದೃಷ್ಟಿಯಿಂದ ಕೊನೆಯ ದಿನದ ವರೆಗೆ ಕಾಯದೆ ಅದಷ್ಟು ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು.

ಅಭ್ಯರ್ಥಿಗಳ ಮಾರ್ಗ ದರ್ಶನಕ್ಕೆ ಈ ಕೆಳ ಕಂಡ ಹೆಲ್ಪ್ ಲೈನಗಳು ಬೆಳಿಗ್ಗೆ 10 ರಿಂದ  ಸಂಜೆ 5 ಗಂಟೆ ವರೆಗೆ ಕಾರ್ಯ ನಿರ್ವಹಿಸುತ್ತವೆ. ಹೆಲ್ಪ್ ಲೈನ್ : 9483862020,    080 25502520.

ನೇಮಕಾತಿಯ ಮುಖ್ಯಾಂಶಗಳು ಈ ರೀತಿ ಇವೆ.

ಸಿಪಿಒ ದ ರಾಜ್ಯ/ಕೇಂದ್ರಾಡಳಿತಗಳಿಗೆ ಅಲಾಟ್ ಮಾಡಿದ ಖಾಲಿ ಹುದ್ದೆಗಳನ್ನು ಅಯಾ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿರುವ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಆದ್ದರಿಂದ ಇದು ದೇಶ ಸೇವೆ ಮಾಡುವುದರ ಜೊತೆಗೆ ಸರ್ಕಾರದ ಖಾತರಿ ಉದ್ಯೋಗದ ಅತ್ಯುತ್ತಮ ಅವಕಾಶವನ್ನು ಕರ್ನಾಟಕಕೇರಳ ಮತ್ತು ಲಕ್ಷ ದ್ವೀಪಗಳ ಯುವಕರಿಗೆ ಒದಗಿಸಿಕೊಡುತ್ತದೆ.

ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಗಡಿ ಜಿಲ್ಲೆಗಳು ಮತ್ತು ನಕ್ಸಲೈಟ್/ಉಗ್ರವಾದಿ ಪೀಡಿತ ಪ್ರದೇಶಗಳಿಗೆ ಪ್ರತ್ಯೇಕ ಹುದ್ದೆಗಳನ್ನು ಮೀಸಲಿರಿಸಲಾಗಿದೆ.

ಆಯ್ಕೆಯು ದೇಹದಾಢ್ಯತೆ(ಪಿಎಸ್ ಟಿ) / ದೈಹಿಕ ಕ್ಷಮತೆ(ಪಿಇಟಿ) ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಪಾಸಾದವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.

ಲಿಖಿತ ಪರೀಕ್ಷೆಯು ಮುಗಿಯುವ ವೇಳೆಗೆ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಿ ಅಂತಿಮಗೊಳಿಸಲಾಗುತ್ತದೆ.

ಲಿಖಿತ ಪರೀಕ್ಷೆಯು ಮೆಟ್ರಿಕ್ಯುಲೇಷನ್ ಮಟ್ಟದಲ್ಲಿದ್ದುಸಮಾನ್ಯ ಜ್ಞಾನ ಮತ್ತು ತಾರ್ಕಿಕ ಜ್ಞಾನಸಾಮಾನ್ಯ ಜ್ಞಾನ ಮತ್ತು ತಿಳುವಳಿಕೆಪ್ರಾಥಮಿಕ ಗಣಿತ ಮತ್ತು ಇಂಗ್ಲಿಷ್ ಅಥವಾ ಹಿಂದಿ ವಿಷಯಗಳಿಗೆ ಸಂಬಂಧಿಸಿರುತ್ತದೆ.

ಒಬ್ಬ ಅಭ್ಯರ್ಥಿ ಒಂದು ಅರ್ಜಿ ಮಾತ್ರ ಸಲ್ಲಿಸಬಹುದು. ಅರ್ಜಿಯಲ್ಲಿ ಯಾವ ವಿಭಾಗದಲ್ಲಿ ಸೇವೆ ಸಲ್ಲಿಸಲು (ಆದ್ಯತೆ ಮೇರೆಗೆ) ಸಲ್ಲಿಸಬೇಕು. ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದರೆ ಎಲ್ಲ ಅರ್ಜಿಗಳು ತಿರಸ್ಕರಿಸಲ್ಪಡುತ್ತವೆ.

ಎಸ್ ಸಿ/ಎಸ್ ಟಿ/ಒಬಿಸಿ ವರ್ಗಗ ಮೀಸಲಾತಿಯ ಸೌಲಭ್ಯವನ್ನು ಪಡೆಯುವವರು ಆ ವರ್ಗಗಳಿಗೆ ನೀಡುವ ದಾಖಲೆ ಪತ್ರವನ್ನು ನಿಗದಿತ ನಮೂನೆಯಲ್ಲಿ ದಾಖಲೆ ಪತ್ರಗಳನ್ನು ಸಲ್ಲಿಸುವಾಗ ಸಲ್ಲಿಸಬೇಕು.

ಹೆಚ್ಚಿನ ವಿವರಗಳು ಮತ್ತು ಅರ್ಜಿ ನಮೂನೆಗಳು ಸಿಬ್ಬಂದಿ ನೇಮಕಾತಿ ಆಯೋಗದ ವೆಬ್ ಸೈಟ್ http://ssc.nic.in  ಮತ್ತು ಆಯೋಗದ (ಕೆಕೆಆರ್) ವೆಬ್ ಸೈಟ್ http://ssckkr.kar.nic.in  ಗಳಲ್ಲಿ 15.12.2012 ರ ನಂತರ ದೊರೆಯುತ್ತವೆ.
            ಮೇಲ್ಕಂಡ ಹುದ್ದೆಗೆಳಿಗೆ ಅರ್ಜಿಯನ್ನು ಉಚಿತವಾಗಿ ಜಿಲ್ಲಾ ಪೊಲೀಸ್ ಕಛೇರಿ ಗುಲಬರ್ಗಾದಲ್ಲಿ ಸರಭರಾಜು ಮಾಡುತ್ತಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿಗಳನ್ನು ಉಚಿತವಾಗಿ ಪಡೆದು ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:11-01-2013 ರಂದು ಆಗಿದ್ದು, ಅಭ್ಯರ್ಥಿಗಳು ಕಛೇರಿ ಸಮಯ ಬೆಳಿಗ್ಗೆ 10-00 ಗಂಟೆಯಿಂದ ಸಾಯಂಕಾಲ 5-30 ಗಂಟೆಯವರೆಗೆ ಪೊಲೀಸ್ ಭವನದಲ್ಲಿ ಪಡೆಯಬಹುದಾಗಿದೆ.

GULBARGA DISTRICT


:: ಪತ್ರಿಕಾ ಪ್ರಕಟಣೆ.::
ಸಿಬ್ಬಂದಿ ನೇಮಕಾತಿ ಅಯೋಗ
ಕರ್ನಾಟಕ-ಕೇರಳ ವಲಯ

ಸಿಎಪಿಎಫ್ಎಸ್ ನ  ಕಾನ್ಸ್ ಟೇಬಲಗಳು (ಜಿಡಿ) ಬಿಎಸ್ಎಫ್, ಸಿಐಎಸ್ಎಫ್, ಸಿಆರ್ ಪಿಎಫ್, ಎಸ್ಎಸ್ ಬಿ, ಮತ್ತು ಐಟಿಬಿಪಿ ಮತ್ತು ಅಸ್ಸಾಂ ರೈಫಲ್ ನ  ರೈಫಲ್ ಮನ್ (ಜಿಡಿ)-2013 ಗಳನ್ನು ನೇಮಕ ಮಾಡಿಕೊಳ್ಳುವುದರ ಬಗ್ಗೆ .

     ಗಡಿ ಭದ್ರತಾ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ, ಸಶಸ್ತ್ರ ಸೀಮಾ ದಳ ಮತ್ತು ಇಂಡೋ ಟಿಬೆಟಿಯನ್ ಗಡಿ ಪೊಲೀಸ್ ಪಡೆ ಮತ್ತು ಅಸ್ಸಾಂ ರೈಫಲ್ ನ ರೈಫಲ್ ಮನ್ ಗಳ ನೇಮಕಾತಿಗೆ ಸಿಬ್ಬಂದಿ ನೇಮಕಾತಿ ಆಯೋಗ ದೇಶದಾಧ್ಯಂತ ಸ್ಪರ್ಧಾತ್ಮಕ ಪರೀಕ್ಷೆಯನ್ನು    12-05-2013 ರಂದು ನಡೆಸಲಿದೆ. ಈ ಹುದ್ದೆಯ ವೇತನ ಶ್ರೇಣಿ ರೂ. 5200-20200 ಜೊತೆಗೆ ಗ್ರೇಡ್ ಪೇ ರೂ. 2000. ನೇಮಕಾತಿಯು ದೈಹಿಕ ದೇಹದಾಢ್ಯತೆ (ಪಿಎಸ್ ಟಿ), ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ) ನಡೆಸಲಾಗುತ್ತದೆ. ಪಿಎಸ್ ಟಿ ಮತ್ತು ಪಿಇಟಿ ಪರೀಕ್ಷೆಗಳಲ್ಲಿ ಪಾಸಾದವರಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಅವರಿಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
    ಅರ್ಜಿ ನಮೂನೆ ಮತ್ತು ಹೆಚ್ಚಿನ ವಿವರಣೆಗಳು 2012 ಡಿಸೆಂಬರ್ 15-21 ರ ಎಂಪ್ಲಾಯ್ ಮೆಂಟ ನ್ಯೂಸ್ ನ ಸಂಚಿಕೆಯಲ್ಲಿ ದೊರೆಯುತ್ತದೆ. ಜೊತೆಗೆ ಈ ವಿವರಗಳು http://ssckkr.kar.nic.in and http://ssc.nic.in ದೊರೆಯುತ್ತವೆ. ಈ ಮಾಹಿತಿಯನ್ನು ಅಭ್ಯರ್ಥಿಗಳು ಡೌನ್ ಲೋಡ್ ಮಾಡಿಕೊಂಡು ಪೇಪರ್ ಅರ್ಜಿಯನ್ನು ಸಲ್ಲಿಸಬಹುದು. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು http://ssconline.nic.in or http://ssconline2.gov.in ವೆಬ್ ಸೈಟಗಳನ್ನು ನೋಡಬಹುದು. ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಲ್ಲ ಅರ್ಹತೆಗಳು ತಮಗಿವೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು. ನಂತರ ಒಬ್ಬ ಅಭ್ಯರ್ಥಿ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಬೇಕು. ಅಭ್ಯರ್ಥಿಯು ಮೆರಿಟ್ ಮತ್ತು ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಸಿಎಪಿಎಫ್ ನ ಯಾವ ವಿಭಾಗಕ್ಕೆ ನಿಯೋಜಿಸಬೇಕು ಎಂಬ ಪ್ರಕ್ರಿಯೆ ನಡೆಯುತ್ತದೆ. ಮಹಿಳಾ ಅಭ್ಯಥಿಗಳಿಗೆ ಅವರಿಗೆ ನಿಗದಿಪಡಿಸಿದ ಹುದ್ದೆಗಳಿಗೆ ನೇಮಿಸಲಾಗುತ್ತದೆ.
1. ಖಾಲಿ ಇರುವ ಹುದ್ದೆಗಳು: ಒಟ್ಟು 22000 (ಅಂದಾಜು) ಕೊನೆಗೆ ಹುದ್ದೆಗಳ    ಸಂಖ್ಯೆಯನ್ನು ನಿಗದಿಪಡಿಸಲಾಗುತ್ತದೆ.. ಕರ್ನಾಟಕಕ್ಕೆ 600 ಹುದ್ದೆಗಳು ಮತ್ತು    ಕೇರಳಕ್ಕೆ  350 ಹುದ್ದೆಗಳು    
2. 11.01.2013 ರಲ್ಲಿ ಇರುವಂತೆ ವಿದ್ಯಾರ್ಹತೆ: ಮೆಟ್ರಿಕ್ಯುಲೇಶನ್ ಅಥವಾ    ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾನಿಲಯದಿಂದ 10 ನೇ ತರಗತಿ    ಪಾಸಾಗಿರಬೇಕು.
3. 01.01.2013 ಕ್ಕೆ ವಯಸ್ಸು 18-23 ಅಭ್ಯರ್ಥಿ 02.01.1990 ಕ್ಕಿಂತ ಮುಂಚೆ ಮತ್ತು     1.1.1995 ರ ನಂತರ  ಜನಿಸಿರಬಾರದು (ಎಸ್ ಸಿ/ಎಸ್ ಟಿ/ಒಬಿಸಿ/ಮಾಜಿ- ಎಸ್/ಇಲಾಖೆ ಅಭ್ಯರ್ಥಿಗಳಿಗೆ ವಯಸ್ಸಿನಲ್ಲಿ ಸಡಿಲಿಕೆ ಇರುವುದರ ಬಗ್ಗೆ ನೋಟೀಸಿನ ಪ್ಯಾರಾ 4 ನ್ನು ನೋಡಬಹದುದು)  
4. ಪೀ : ಪೇಪರಿನಲ್ಲಿ ಅರ್ಜಿ ಸಲ್ಲಿಸುವವರು ಕೇಂದ್ರ ನೇಮಕಾತಿ ಫೀ ಸ್ಟಾಂಪ್     ಮುಖಾಂತರ  50  ರೂಪಾಯಿ ಸಲ್ಲಿಸಬೇಕು.( (crpf). ಆನ್ ಲೈನಿನಲ್ಲಿ ಅರ್ಜಿ     ಸಲ್ಲಿಸುವವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖಾಂತರ ಸಲ್ಲಿಸಬೇಕು.(ಎಲ್ಲಾ ಮಹಿಳೆಯರು ಎಸ್ ಸಿ/ಎಸ್ ಟಿ/ಮಾಜಿ-ಎಸ್ ಅಭ್ಯರ್ತಿಗಳಿಗೆ ಫೀ ರಿಯಾಯಿತಿ ಇದೆ. ಮೇಲೆ ತಿಳಿಸಿದಂತೆ ಫೀ ಕಟ್ಟದೆ ಬೇರೆ ರೀತಿಯಲ್ಲಿ ಕಟ್ಟಿದರೆ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಮತ್ತು ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.
5. ಪರೀಕ್ಷೆಗಳ ವಿವರ: ದೇಹ ದಾಢ್ಯತೆ ಪರೀಕ್ಷೆ. (PST)    ಎತ್ತರ- ಪುರುಷ:170 ಸೆ.ಮೀ, ಮಹಿಳೆ: 157 ಸೆ.ಮೀ. ಎದೆ- ಪುರುಷ-ಉಬ್ಬಿಸದೆ: 80 ಸೆ.ಮೀ. ಉಬ್ಬಿಸಿ ಕನಿಷ್ಠ 5 ಸೆ.ಮೀ.  ತೂಕ: ವೈದ್ಯಕೀಯ ನಿಭಂದನೆಯಂತೆ ಪುರುಷ ಮತ್ತು ಮಹಿಳೆಗೆ ಎತ್ತರ ಮತ್ತು ವಯಸ್ಸಿಗನುಗುಣವಾಗಿ. ದೈಹಿಕ ಕ್ಷಮತೆ ಪರೀಕ್ಷೆ(PET) ಓಟ- ಪುರುಷ:24 ನಿಮಿಷದಲ್ಲಿ 5 ಕಿ.ಮಿ. ಮಹಿಳೆಗೆ  8.3 ನಿಮಿಷದಲ್ಲಿ 1.6 ಕಿ.ಮೀ. ಲಿಖಿತ ಪರೀಕ್ಷೆ: ಪಿಇಟಿ, ಲಿಖಿತ ಪರೀಕ್ಷೆಗಳಲ್ಲಿ ಪಾಸಾದ ಅಭ್ಯಥರ್ಿಗಳಿಗೆ  ಆಬ್ಜಕ್ಟೀವ್ ಮಾದರಿಯ ಬಹು ಆಯ್ಕೆಯ 100 ಅಂಕಗಳ ಎರಡು ಗಂಟೆಗಳ ಅವಧಿಯ ಒಂದು ಪತ್ರಿಕೆ. (ಎ-ಸಾಮಾನ್ಯ ಜ್ಞಾನ ಮತ್ತು  ರೀಜನಿಂಗ್ ಗೆ 25  ಅಂಕ, ಬಿ- ಸಾಮಾನ್ಯ ಜ್ಞಾನ ಮತ್ತು ತಿಳುವಳಿಕೆ 25 ಅಂಕ, ಸಿ-ಪ್ರಾಥಮಿಕ ಗಣಿತ 25 ಅಂಕ, ಡಿ-ಇಂಗ್ಲಷ್/ಹಿಂದಿಗೆ 25 ಅಂಕಗಳಿಗೆ ಪರೀಕ್ಷೆ ನಡೆಸಲಾಗುವುದು. ಎ,ಬಿ ಮತ್ತು ಸಿ ಭಾಗಗಳ ಪ್ರಶ್ನೆಗಳು ಇಂಗ್ಲೀಷ್/ಹಿಂದಿ ಜೊತೆಗೆ ಮೂರು ಭಾಷೆಗಳಲ್ಲಿರುತ್ತವೆ. ಕರ್ನಾಟಕದಲ್ಲಿ ಕನ್ನಡ ಮತ್ತು ಕೇರಳದಲ್ಲಿ ಮಲಯಾಳಂ. ಆಯೋಗ ನಿಗದಿ ಪಡಿಸಿದ ಕಟ್ ಆಫ್ ಅಂಕಗಳಿಗಿಂತ ಹೆಚ್ಚಿಗೆ ಪಡೆದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.
6. ಕರ್ನಾಟಕ ವಲಯದಲ್ಲಿ ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಧಾರವಾಡ, ಗುಲ್ಬರ್ಗ, ಮಂಗಳೂರು, ತಿರುವನಂತಪುರ, ಕೋಚಿ, ಕೋಝಿಕೋಡ್ ಮತ್ತು ತ್ರಿಸ್ಸೂರ್. ಇತರೆ ವಲಯಗಳ ಪರೀಕ್ಷಾ ಕೇದ್ರಗಳ ವಿವಿರಗಳನ್ನು ನೋಟೀಸಿನ ಪ್ಯಾರಾ 7 ನ್ನು ನೋಡಬಹುದು.
7. ಅರ್ಜಿಗಳನ್ನು ಸ್ವೀಕರಿಸಲು ಕಡೆಯ ದಿನ: ಆಫ್ ಲೈನ್ ಪೇಪರ್ ಅರ್ಜಿ ಸಲ್ಲಿಸಲು 11.01.2013. ಆನ್ ಲೈನ್ ಅರ್ಜಿಗೆ: ಪಾರ್ಟ-1 ಕ್ಕೆ  01.01.2013 . ಪಾರ್ಟ-2 ಕ್ಕೆ 11.01.2013 ಕ್ಕೆ . ಸೂಚನೆ: (ಕೊನೆ ಗಳಿಗೆಯ ಸರ್ವರ್ ಮೇಲಿನ ಒತ್ತಡದಿಂದ ಆಗಬಹುದಾದ ಸಮಸ್ಯೆಯನ್ನು ಎದುರಿಸುವ  ಬದಲು ಕೊನೆ ದಿನಾಂಕಕ್ಕೆ ಕಾಯದೆ ಆದಷ್ಟು ಮೊದಲು ಅರ್ಜಿ ಸಲ್ಲಿಸಬೇಕು.)     
8. ಕಾನ್ಸಟೇಬಲ್ (ಜೆಡಿ) ಹುದ್ದೆಗೆ ಪೇರ್ ಅರ್ಜಿಗಳನ್ನು : ವಲಯ ನಿರ್ದೇಶಕರು (ಕೆಕೆಅರ್) ಸಿಬ್ಬಂದಿ ನೇಮಕ ಆಯೋಗ, 1 ನೇ ಮಹಡಿ, ಇ ವಿಂಗ್, ಕೇಂದ್ರೀಯ ಸದನ,ಕೋರಮಂಗಲ,ಬೆಂಗಳೂರು- 560034. ನಿಗದಿ ಪಡಿಸಿದ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಬೇಕು. ಹಲವು ಅರ್ಜಿಗಳನ್ನು ಸಲ್ಲಿಸದರೆ ತಿರಸ್ಕರಿಸಲಾಗುತ್ತದೆ.
9. ತಾತ್ಕಾಲಿಕ ವೇಳಾ ಪಟ್ಟಿ :ಪಿಎಸ್ ಟಿ/ ಪಿಇಟಿ: ಫ್ರೆಬ್ರುವರಿ-ಮಾರ್ಚ 2013  ಲಿಖಿತ ಪರೀಕ್ಷೆ :ಮೇ 12,  2013 ವೈದ್ಯಕೀಯ ಪರೀಕ್ಷೆ: ಜೂನ್-ಆಗಸ್ಟ್  2013. 
10.ಸಹಾಯಕ್ಕೆ ಹೆಲ್ಪಲೈನ್:       ಕರ್ನಾಟಕ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶ ಲಕ್ಷ ದ್ವೀಪಗಳಿಗೆ: 09483862020  &   08025502520 (ಬೆಳಿಗ್ಗೆ  10 ರಿಂದ ಸಂಜೆ 5 ಗಂಟೆ ವರೆಗೆ, ಸೋಮವಾರದಿಂದ ಶುಕ್ರವಾರದ ವರೆಗೆ.)   

ಈ ಮೇಲ್ಕಂಡ ಹುದ್ದೆಗೆಳಿಗೆ ಅರ್ಜಿಯನ್ನು ಉಚಿತವಾಗಿ ಜಿಲ್ಲಾ ಪೊಲೀಸ್ ಕಛೇರಿ ಗುಲಬರ್ಗಾದಲ್ಲಿ ಸರಭರಾಜು ಮಾಡುತ್ತಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿಗಳನ್ನು ಉಚಿತವಾಗಿ ಪಡೆದು ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:11-01-2013 ರಂದು ಆಗಿದ್ದು, ಅಭ್ಯರ್ಥಿಗಳು ಕಛೇರಿ ಸಮಯ ಬೆಳಿಗ್ಗೆ 10-00 ಗಂಟೆಯಿಂದ ಸಾಯಂಕಾಲ 5-30 ಗಂಟೆಯವರೆಗೆ ಪೊಲೀಸ್ ಭವನದಲ್ಲಿ ಪಡೆಯಬಹುದಾಗಿದೆ.