ಅಪಘಾತ ಪ್ರಕರಣ:
ಯಡ್ರಾಮಿ ಪೊಲೀಸ್
ಠಾಣೆ:ಶ್ರೀಮತಿ, ಲಲಿತಾ ಗಂಡ ಲಕ್ಷ್ಮಣ ಪೂಜಾರಿ ಸಾ|| ಅರಳಗುಂಡಗಿ ರವರು ನಾನು ಮತ್ತು ನನ್ನ ಮಗಳಾದ ವಿಜಯಲಕ್ಷ್ಮಿ ಹಾಗು ಇತರರು
ಕೂಡಿಕೊಂಡು ದಿ:01-01-2013 ರಂದು ಬೆಳಿಗ್ಗೆ 9-30 ಗಂಟೆ ಸುಮಾರಿಗೆ ಕೂಲಿ ಕೆಲಸಕ್ಕೆ ಟಂಟಂ ನಂ
ಕೆಎ-32-ಎ-9845 ನೇದ್ದರಲ್ಲಿ ಕುಳಿತುಕೊಂಡು ಹೊರಟಾಗ ದಾರಿ ಮಧ್ಯದಲ್ಲಿ ಟಂಟಂ ಚಾಲಕ ಸಲೀಮ ಇತನು ತನ್ನ ಟಂಟಂ
ಅನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಸುತ್ತಾ ಹೋಗಿ ಅಪಘಾತ ಪಡಿಸಿದ್ದರಿಂದ ನಾನು ಹಾಗೂ ನನ್ನ
ಮಗಳಾದ ವಿಜಮ್ಮ @ ವಿಜಯಲಕ್ಷ್ಮಿ ತಂದೆ ಲಕ್ಷ್ಮಣ ಪೂಜಾರಿ ವಯ:10 ವರ್ಷ ಇಬ್ಬರು ಕೆಳಗೆ ಬಿದ್ದಿದ್ದು. ವಿಜಮ್ಮ ಇವಳಿಗೆ ತಲೆ ಹಿಂಭಾಗಕ್ಕೆ
ಭಾರಿ ರಕ್ತ ಗಾಯವಾಗಿದ್ದು,ಉಪಚಾರ ಕುರಿತು ಗುಲಬರ್ಗಾ ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದ್ದು
ಉಪಚಾರ ಪಡೆಯುತ್ತಿರುವಾಗ ದಿ:02-01-13 ರಂದು 12-30 ಪಿ.ಎಮ್ ಕ್ಕೆ ಮೃತಪಟ್ಟಿರುತ್ತಾಳೆ. ಸದರಿ
ಟಂಟಂ ಚಾಲಕನ ವಿರುದ್ದ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶ
ಮೇಲಿಂದ ಠಾಣೆ ಗುನ್ನೆ ನಂ:01/2013 ಕಲಂ 279,338,304(ಎ)
ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ವಾಡಿ ಪೊಲೀಸ್ ಠಾಣೆ:ಶ್ರೀ ಹೀರು ತಂದೆ ಲಾಲಸಿಂಗ ಜಾಧವ
ಸಾ|| ಭೊಜು ನಾಯಕ ತಾಂಡಾ ನಾಲವಾರ ಇವರು ನನ್ನ ಹಿರಿಯ
ಮಗನಾದ ಸೀತಾರಾಮ ತಂದೆ ಹೀರು ಜಾಧವ ವಯ 40 ವರ್ಷ ಇತನು ನಾವು ನಿನ್ನೆ ದಿನಾಂಕ:01-01-2013 ರಂದು
ಸಾಯಂಕಾಲ 5 -00 ಗಂಟೆ ಸುಮಾರಿಗೆ ನನ್ನ ತನ್ನ ಟಂಟಂ ನಂ ಕೆಎ-33/7931 ನೇದ್ದರಲ್ಲಿ ಧರ್ಮಾ ನಾಯಕ ತಾಂಡಾದಲ್ಲಿ ಸುರೇಶ ಇವರ ಮನೆಯಲ್ಲಿ ಕಾರ್ಯಕ್ರಮ
ನಡೆಯುತ್ತಿದೆ. ನಾನು ಹೋಗಿ ಬರುತ್ತೆನೆ ಅಂತಾ ಹೇಳಿ ಹೋಗಿದ್ದನು. ರಾತ್ರಿ 11-30
ಗಂಟೆಗೆ ನಮ್ಮೂರ ಸಿದ್ರಾಮ ತಂದೆ ರಾಮಚಂದ್ರ ರಾಠೋಡ ಇವರು ನಮ್ಮ ಮನೆಗೆ ಬಂದು ರಾತ್ರಿ
10-00 ಗಂಟೆ ಸುಮಾರಿಗೆ ನಾನು ಕುಂಬಾರಹಳ್ಳಿಯಿಂದ ನಮ್ಮ ತಾಂಡಾಕ್ಕೆ ನನ್ನ ಮೋಟರ ಸೈಕಲ ಮೇಲೆ ಬರುತ್ತಿದ್ದು
ನನ್ನ ಮುಂದುಗಡೆ ನಿನ್ನ ಮಗ ಸಿತಾರಾಮ ಇತನು ತನ್ನ ಟಂಟಂ ಕೆಎ-33/7931 ನೇದ್ದನ್ನು ಅತಿವೇಗ ದಿಂದ
ಚಲಾಯಿಸುತ್ತಾ ಟಂಟಂ ಪಲ್ಟಿ ಮಾಡಿದನು, ಸದರಿ ಟಂಟಂ ಅವನ ಮೇಲೆ ಬಿದ್ದು ಸ್ಥಳದಲ್ಲಿಯೆ
ಮೃತಪಟ್ಟಿದ್ದಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:02/2012 ಕಲಂ, 279, 304 (ಎ) ಐಪಿಸಿ ನೇದ್ದರ
ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment