POLICE BHAVAN KALABURAGI

POLICE BHAVAN KALABURAGI

01 August 2014

Gulbarga District Reported Crimes

ಕೊಲೆ ಪ್ರಕರಣಗಳು :
ಚೌಕ ಠಾಣೆ : ಶ್ರೀ ಪ್ರಶಾಂತ ತಂದೆ ಕಲ್ಯಾಣಿ ಜಿಡಗಾ ಸಾಃ ಕಡಗಂಚಿ ಇವರ ತಾಯಿಯಾದ ಬೋರಮ್ಮ ಇವಳು  ರೇಷ್ಮೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ದಿನಾಂಕ 30.07.14 ರಂದು ಬೆಳಗ್ಗೆ 10 ಗಂಟೆಗೆ ನನ್ನ ತಾಯಿ ಪೈನಾನ್ಸ ಹಣ ಕಟ್ಟಲು ಹಣವನ್ನು ಸಂಬಂದಿಕರ ಹತ್ತಿರ ತರಲು ಗುಲಬರ್ಗಾಕ್ಕೆ ಹೋಗುವೇನೆಂದು ಹೇಳಿ ಹೋಗಿದ್ದು ನಾನು ಸುಮಾರು ಸಲಾ ಪೋನ ಕರೆ ಮಾಡಿದ್ದು ಮೋಬೈಲ ಸ್ವಿಚ ಆಫ್ ಆಗಿದ್ದು ಇಂದು ದಿನಾಂಕ 31.07.14 ರಂದು 7 ಪಿ.ಎಂ ಸುಮಾರಿಗೆ ಚೌಕ ಠಾಣೆಯ ಪಿ.ಐ ಸಾಹೇಬರು ನನಗೆ ಪೋನ ಮಾಡಿ ನನ್ನ ತಾಯಿ ಸೌಜನ್ಯ ಲಾಡ್ಜನ ರೂಮ ನಂ. 74 ರಲ್ಲಿ ಮೃತ ಪಟ್ಟಿರುತ್ತಾಳೆ ಅಂತ ತಿಳಿಸಿದ ಮೇರೆಗೆ ನಾನು ನನ್ನ ಗೆಳೆಯರೊಂದಿಗೆ ಸೌಜನ್ಯ ಲಾಡ್ಜಗೆ ಬಂದು ನೋಡಲು ನನ್ನ ತಾಯಿ ಕಾಟದ ಮೇಲೆ ನನ್ನ ತಾಯಿಯ ಶವ ಬಿದಿದ್ದು, ಕುತ್ತಿಗೆಯ ಬಾಗದಲ್ಲಿ ಚಾಕುವಿನಿಂದ ಹರಿದ ಗಾಯಗಳಿಂದ ರಕ್ತಸ್ರಾವವಾಗಿ ನನ್ನ ತಾಯಿ ಮರಣ ಹೊಂದಿದ್ದು ಯಾವುದೊ ಅನಾಮದೇಯ ವ್ಯಕ್ತಿಗಳು ನನ್ನ ತಾಯಿಯನ್ನು ಅವಳ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸೇಡಂ ಠಾಣೆ : ಶ್ರೀಮತಿ ಚಂದಮ್ಮಾ ಗಂಡ ಶಿವಶರಣಪ್ಪ ಇಂಡಿ ಸಾ: ಲಿಂಗಯ್ಯನವಾಡಿ ತಾ; ಆಳಂದ ಜಿ: ಗುಲಬರ್ಗಾ  ಇವರು ದಿನಾಂಕ: 31-07-2014 ರಂದು ಬೆಳಿಗ್ಗೆ  0730 ಗಂಟೆ ಸುಮಾರಿ ನನ್ನ ಮಗನಾದ ಚನ್ನವಿರಪ್ಪ ಇತನ ಮೋಬೈಲ್ ನಂಬರಿಗೆ ನಮ್ಮ ಅಳಿಯನಾದ ಮಲ್ಲಿಕಾರ್ಜುನ ಸರಡಗಿ ಇತನು ಪೋನ್ ಮಾಡಿ ತಿಳಿಸಿದ್ದೆನೆಂದರೆ ನಿಮ್ಮ ಅಕ್ಕ ನನ್ನ ಸಂಗಡ ಜಗಳ ಮಾಡುತ್ತಿದ್ದಾಳೆ ಅವಳಿಗೆ ಕರೆದುಕೊಂಡು ಹೋಗು ಅಂತ ಸಿಟ್ಟಿನಿಂದ ಹೇಳಿದಾಗ ಆಗ ನನ್ನ ಮಗನು ನಮ್ಮ ಅಕ್ಕಳಿಗೆ ಕೊಡು ಅಂತ ಹೇಳಿದರೆ ಅವನು ಅವಳಿಗೆನು ಮಾತಾಡ್ತಿ ಬಂದು ಕರೆದುಕೊಂಡು ಹೋಗು ಅಂತ ನನಗೆ ಸಿಟ್ಟಿನಿಂದ ಬೈದನು. ನಂತರ ಪುನಃ 09 ಗಂಟೆ 07 ನಿಮಿಷಕ್ಕೆ ಪೋನ್ ಮಾಡಿ ನಿಮ್ಮ ಅಕ್ಕಳು ನೀರು ಕಾಯಿಸಲು ಹೋಗಿ ಕರೆಂಟ್ ಹತ್ತಿ ಸತ್ತಿರುತ್ತಾಳೆ ಅಂತ ಪೋನ್ ಮುಖಾಂತರ ತಿಳಿಸಿದನು. ಆಗ ನಾನು ಮತ್ತು ನನ್ನ ಮಗ ಚನ್ನವೀರಪ್ಪ , ಕೂಡಿಕೊಂಡು ನಮ್ಮೂರಿನಿಂದ ಸೇಡಂಕ್ಕೆ ಬಂದು ನೋಡಲು ಮನೆಯಲ್ಲಿ ನನ್ನ ಮಗಳಾದ ತಾರಾಬಾಯಿ @ಹೇಮಾವತಿ ಇವಳು ಸತ್ತು ಬಿದ್ದ ಶವ ನೋಡಿದಾಗ ಮನೆಯೊಳಗೆ ಸೀಮೆ ಎಣ್ಣೆಯ ವಾಸನೆ ಬರುತ್ತಿದ್ದು ಅವಳಿಗೆ ಕರೆಂಟ್ ಹತ್ತಿದ್ದ ಬಗ್ಗೆ ಕಂಡು ಬರುತ್ತಿಲ್ಲಾ  ಅವಳು ಮೈ ಸುಟ್ಟು ತೊಗಲು ಕಿತ್ತಿರುತ್ತದೆ. ಇದನ್ನು ನೋಡಿದಾಗ ನಮ್ಮ ಅಳಿಯನಾದ ಮಲ್ಲಿಕಾರ್ಜುನ ಸರಡಗಿ ಇತನೇ ಅವಳಿಗೆ ಮೈಮೇಲೆ ಸೀಮೆ ಎಣ್ಣೆ ಹಾಕಿ ಉರಿ ಹಚ್ಚಿ ಕೊಲೆ ಮಾಡಿರುತ್ತಾನೆ. ಈ ಘಟನೆಗೆ ಅಳಿಯನಾದ ಮಲ್ಲಿಕಾರ್ಜುನ, ಮತ್ತು ಅವಳ ಅತ್ತೆಯಾದ ಬಸಮ್ಮಾ ಗಂಡ ರಾಮಚಂದ್ರಪ್ಪ  ಸರಡಗಿ ಇವರೆ ಕಾರಣರಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಪ್ರಕರಣ :
ಗ್ರಾಮೀಣ ಠಾಣೆ : ಕುಮಾರಿ ಗುಲಬರ್ಗಾ ಇವರು ತನ್ನ ಅಕ್ಕನ ಮನೆಯಾದ ಹೀನಾ ಬೇಗಂ ಸಾ:ಡಬರಾಬಾದ ಕ್ರಾಸ ಗುಲಬರ್ಗಾಕ್ಕೆ ದಿನಾಂಕ:- 29-07-2014 ರಂದು ಸಾಯಂಕಾಲ 05:00 ಗಂಟೆ ಸುಮಾರಿಗೆ ತನ್ನ ತಂದೆ ತಾಯಿ ಅಣ್ಣರೊಂದಿಗೆ ಹೋಗಿ ರಮಜಾನ ಹಬ್ಬದ ಶುಬಾಶಯ ಹೇಳಿ ಮನೆಯಲ್ಲಿ ಊಟ ಮಾಡಿ ನನ್ನ ಅಕ್ಕ ಇರು ಅಂತಾ ಹೇಳಿದ್ದರಿಂದ ನಾನು ಉಳಿದುಕೊಂಡೆ ನನ್ನ ತಂದೆ ತಾಯಿ ಅಣ್ಣದಿರರು ಅದೇ ದಿವಸ ಮರಳಿ ನಮ್ಮ ಮನೆಗೆ ಹೋದರು ನಾನು ನನ್ನ ಅಕ್ಕ ಹಾಗು ಅವಳ ಮಕ್ಕಳು ಮನೆಯಲ್ಲಿ ಊಟ ಮಾಡಿ ನಾವೆಲ್ಲರೂ ಕೂಡಿ ಮಲಗಿಕೊಂಡೇವು ರಾತ್ರಿ ಅಂದಾಜ 11:30 ಗಂಟೆ ಸುಮಾರಿಗೆ ನನ್ನ ಮಾವನಾದ ಶೇಖ ಇಸ್ಮಾಯಿಲ್ ತಂದೆ ಶೇಖ ಮೈನೋದ್ದಿನ ಇತನು ಮನೆಯೊಳಗೆ ಬಂದು ನನ್ನ ಅಕ್ಕಳಿಗೆ ಅಲುಗಡಿಸಿದನು ಅವಳು ನಿದ್ರೆಯಲ್ಲಿದ್ದು ಏಳಲಿಲ್ಲಾ ನಂತರ ನನ್ನ ಮಾವ ಕೈಯಿ ಮತ್ತು ಬಾಯಿ ಒತ್ತು ಹಿಡಿದು ಹೊರಗೆ ತಂದು ಮೈಮೇಲಿನ ಬಟ್ಟೆ ಬಿಚ್ಚಿ ಒಂದು ಸಲಾ ಜಬರಿ ಸಂಭೋಗ ಮಾಡಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀ ಮಹಿಮೂದ ಪಾಶ  ತಂದೆ ಅಹ್ಮದ ಪಾಶಾ  ಸಾ: ಹಸನ ನಗರ ಶಿವರಾಮ ಪಲ್ಲಿ  ಹೈದ್ರಾಬಾದ ಇವರು ದಿನಾಂಕ: 31.07.2014 ರಂದು ಬೆಳಗ್ಗಿನ 5.00 ಗಂಟೆ ಸುಮಾರಿಗೆ  ಹೈದ್ರಾಬಾದದಿಂದ ಗುಲಬರ್ಗಾದ ಬಂದೇ ನವಾಜ ದರ್ಗಾಕ್ಕೆ ದರ್ಶನಕ್ಕೆಂದು ಬಂದು ಉಳಿದುಕೊಂಡೆವು ಮಕ್ಕಳಿಗೆ ಸ್ನಾನ ಮಾಡಿಸಿ ಅವರಿಗೆ ಟಿಫೀನ್ ಮಾಡಿಸಬೇಕೆಂದು 8.30 ಗಂಟೆ ಸುಮಾರಿಗೆ ಅವರಿಗೆ ಎಲ್ಲಾ ಕರೆದುಕೊಂಡು ಹೊರಗಡೆ ಬಂದಿದ್ದು ಅವರಲ್ಲಿ ಮೂರನೇ ಮಗಳಾದ ನೋಸಿನ ಬೇಗಂ ಇವಳು ನನ್ನಿಂದ ಆಕಸ್ಮೀಕವಾಗಿ ತಪ್ಪಿಸಿಕೊಂಡಿದ್ದು ಇರುತ್ತದೆ. ಬೆಳಗ್ಗೆಯಿಂದ ಇಲ್ಲಿಯವರೆಗೆ  ನನ್ನ ಮಗಳಿಗೆ ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಶೈಲೇಂದ್ರ ಪಟೇಲ ತಂದೆ ಹಂಸರಾಜ ಪಟೇಲ ಸಾಃ ಮನೆ ನಂ. 9-214ಸಿ ಉಮಿಯಾ ಸದನ ಶಹಾಬಜಾರ ಗುಲಬರ್ಗಾ ರವರಿಗೆ ದಿನಾಂಕ 31-07-2014 ರಂದು ವಿಶಾಲ ದಾಯಮಾ ಎಂಬುವವರು ಫೊನ ಮಾಡಿ ನಿಮ್ಮ ಅಂಗಡಿಯ ಶೇಟ್ಟರ ಮುರಿದ ಹಾಗೆ ಕಾಣುತ್ತಿದೆ ಅಂತ ಪೋನ ಮಾಡಿ ತಿಳಿಸಿದ ಮೇರೆಗೆ ನಾನು ಮತ್ತು ನಮ್ಮ ತಮ್ಮಂದಿರು ಕೂಡಿ ಬಂದು ನೋಡಲಾಗಿ ನಮ್ಮ ಅಂಗಡಿಯ ಎದುರುಗಡೆ ಶೆಟ್ಟರ ಕೀಲಿ ಮುರಿದು ಯಾರೋ ಕಳ್ಳರು ಒಳಗೆ ಪ್ರವೇಶ ಮಾಡಿ ಅಂಗಡಿಯಲ್ಲಿರುವ 1] ಹಿತ್ತಾಳೆಯ ಬ್ರಾಸಟವರ ಬೊಲ್ಟ 9 2] ಹಿತ್ತಾಳೆ ಇಂಜಸ ಬ್ರಾಸ 16 3] ಎಸ್.ಎಸ್. ಇಂಜಿಸ್ 1 4] ಹಿತ್ತಾಳೆಯ ಗೇಟ ಹುಕ್ಕ 8 5] ಸ್ಟೀಲದ ಪಿ ಉಟ್ 18 6] ಹಿತ್ತಾಳೆಯ ಪಿ ಉಟ್ 2 7] ಹಿತ್ತಾಳೆಯ ಡಿ ಬ್ರಾಕೇಟ 6 8] ಸ್ಟೀಲ ಡಿ ಬ್ರಾಕೇಟ 2 9] ಒಂದು ಸ್ಟ್ಯಾಂಡಿಂಗ ಪ್ಯಾನ್ ಹೀಗೆ ಒಟ್ಟು 26,000/- ಬೆಲೆಬಾಳುವ ಸಾಮಾನುಗಳನ್ನು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ದಿನಾಂಕ 30.07.2014 ರಂದು 9 ಪಿ.ಎಂದಿಂದ 31.07.2014 ರಂದು 7 ಎ.ಎಂದ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಅಂಗಡಿಯ ಶೆಟ್ಟರ ಮುರಿದು ಅತಿಕ್ರಮಣ ಪ್ರವೇಶ ಮಾಡಿ ಅಂಗಡಿಯಲ್ಲಿರುವ 26,000/- ರೂಪಾಯಿ ಬೆಲೆಬಾಳು ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀಮತಿ ನಿರ್ಮಲಾ ಗಂಡ ರೇವಣಸಿದ್ದಯ್ಯ (ಮುತ್ತುರಾಜ) ಹಿರೇಮಠ ಸಾ|| ಘತ್ತರಗಾ ರವರು ಈಗ 4 ವರ್ಷದ ಹಿಂದೆ ಘತ್ತರಗಾ ಗ್ರಾಮದಲ್ಲಿ ಒಂದು ಖಾಲಿ ಜಾಗವನ್ನು ಘತ್ತರಗಾ ಗ್ರಾಮದ ಶಿವಯೋಗಿ ತಂದೆ ಶರಣಪ್ಪ ಮೋಗಿನೋರ ಇವರ ಮದ್ಯಸ್ತಿಕೆಯಲ್ಲಿ ಕರೀದಿ ಮಾಡಿರುತ್ತೆನೆ, ಅಂದಿನಿಂದ ಶಿವಯೋಗಿ ಈತನು ನಮ್ಮ ಮನಗೆ ಹೋಗುವುದು ಬರುವುದು ಮಾಡುತ್ತಿರುತ್ತಾನೆ. ಇದರಿಂದ ಶಿವಯೋಗಿಯ ಮಕ್ಕಳು ನಾನು ಶಿವಯೋಗಿಯ ಜೋತೆಗೆ ಅನೈತಿಕ ಸಂಭಂದ ಇಟ್ಟುಕೊಂಡಿದ್ದೆನೆ ಅಂತಾ ನನ್ನ ಮೇಲೆ ದ್ವೇಷ ಸಾದಿಸುತ್ತಾ ಕೋಲೆ ಮಾಡಬೆಕೆಂದು ಹೊಂಚು ಹಾಕುತ್ತಾ ಇದ್ದಿರುತ್ತಾರೆ. ನನ್ನನ್ನು ಕೋಲೆ ಮಾಡಿದರೆ ಇವಳು ನಮ್ಮ ತಂದೆಯ ಜೋತೆಗೆ  ಇದ್ದ ಅನೈತಿಕ ಸಂಭಂದವನ್ನು ಬಿಡುತ್ತಾಳೆ ಎಂದು ಅವನ ಮಕ್ಕಳು ಹೊಂಚು ಹಾಕುತ್ತಾ ಇದ್ದು ದಿನಾಂಕ 30-07-2014 ರಂದು ರಾತ್ರಿ 11-30 ಗಂಟೆ ಸಮಯಕ್ಕೆ ನಾನು ಒಬ್ಬಳೆ ನಮ್ಮ ಮನೆಯಲ್ಲಿ ಇದ್ದಾಗ ಶಿವಯೋಗಿ ಮೋಗಿನೋರ ಮಕ್ಕಳಾದ ಕೃಷ್ಣಪ್ಪ, ಶಿವಕಾಂತಮ್ಮ, ಉಮಾದೇವಿ ಮೂರು ಜನರು ನಮ್ಮ ಮನೆಯಲ್ಲಿ ಬಂದು ಕೃಷ್ಣಪ್ಪ ಈತನು ರಂಡಿ ನಿನಗೆ ನಮ್ಮ ಅಪ್ಪನ ಜೋತೆಗೆ ಇದ್ದ  ಅನೈತಿಕ ಸಂಭಂದ ಬಿಡು ಅಂತಾ ಹೇಳಿದರು ಕೇಳುತ್ತಿಲ್ಲ ಇವತ್ತು ನಿನ್ನನ್ನು ಕೋಲೆ ಮಾಡಿಯೆ ಬಿಡುತ್ತೆವೆ ಎಂದು ಕೈಯಿಂದ ನನ್ನ ಮೂಖದ ಮೇಲೆ ಗುದ್ದಿ, ನನ್ನ ಏದೆಯ ಮೇಲಿನ ಸೀರೆ ಏಳೆದು ಮಾನಬಂಗ ಮಾಡಲು ಪ್ರಯತ್ನಿಸಿದನು. ನಂತರ ಶಿವಕಾಂತಮ್ಮ ಇವಳು ಬೋಸಡಿಗೆ ಹಿಂಗ ಹೇಳಿದರೆ ತಿಳಿಯಲ್ಲಾ ಎಂದು ಕೈಯಿಂದ ನನ್ನ ಹೊಟ್ಟೆಯ ಮೇಲೆ ಹೊಡೆದರು. ಉಮಾದೇವಿ ಇವಳು ಕೈಯಿಂದ ನನ್ನ ಏಡ ಕಿವಿಯ ಮೇಲೆ ಹೊಡೆದಳು, ನಂತರ ಕೃಷ್ಣಪ್ಪ ಈತನು ಅಲ್ಲಿಯೆ ಬಿದ್ದ ಒಂದು ಕಲ್ಲಿನಿಂದ ನನ್ನ ಏಡ ಮಗ್ಗಲಿಗೆ ಹೊಡೆದನು, ಮೂರು ಜನರು ಕೂಡಿಕೊಂಡು ತಮ್ಮ ಮನಸ್ಸೊ ಇಚ್ಚೆ ಕೈಯಿಂದ ನನ್ನ ಮೈ ಕೈಗೆ ಹೊಡೆದಿರುತ್ತಾರೆ. ಸದರಿಯವರು ಹೊಡೆಯುತ್ತಿದ್ದಾಗ ನಾನು ಬೇವಿಸ್ ಆಗಿ ಬಿದ್ದೆನು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ರಾಘವೇಂದ್ರ ನಗರ ಠಾಣೆ : ಶ್ರೀ ಶಿವಲಿಂಗಪ್ಪ ತಂದೆ ಮಲ್ಕಣ್ಣ ಮಲ್ಕಾಜನವರ ಸಾ: ಸೇಂಟ್ ಮೇರಿ ಶಾಲೆ ಹತ್ತಿರ ಆನಂದ ನಗರ, ಬ್ರಹ್ಮಪುರ ಗುಲಬರ್ಗಾ ಇವರು ದಿನಾಂಕ :30/07/2014 ರಂದು ರಾತ್ರಿ 09-00ಪಿ.ಎಂಕ್ಕೆ ನಾನು ಲಾಲ್ಗೆರಿ ಕ್ರಾಸ್ ಹತ್ತಿರ ಪಲ್ಲವಿ ಧಾಬಾಕ್ಕೆ ಊಟಕ್ಕೆ ಹೊಗಿದ್ದಾಗ, ರುಕುಂ ಪಟೇಲ್, ಗೀರಿ ಕುಲಕರ್ಣಿ ಇವರು ನನಗೆ ಶೀವಲಿಂಗ್ಯಾ ಅಂತಾ ಬೈದಿದ್ದು, ಅಲ್ಲದೆ ಇಂದು ದಿನಾಂಕ:31/.07/2014 ರಂದು ರಾತ್ರಿ 10-00 ಪಿ.ಎಂ ಸೂಮಾರಿಗೆ ನಾನು ಯಂಕವ್ವ ಮಾರ್ಕೆಟದಿಂದ ನಡೆದುಕೊಂಡು ಹೊಗುತ್ತಿರುವಾಗ ಮರಗಮ್ಮ ಗುಡಿ ಹತ್ತಿರ ರುಕುಂ ಪಟೇಲ್, ಗೀರಿ ಕುಲಕರ್ಣಿ ಮತ್ತು ಇನ್ನೊಬ್ಬ ಹುಡುಗ ಬಂದು ನನಗೆ ತಡೆದು ಗೀರಿ  ಕುಲಕರ್ಣಿ ಇವನು ನನ್ನ ಎದೆಯ ಮೇಲಿನ ಅಂಗಿ ಹಿಡಿದು, ಏ ರಾಂಡಕೆ ಬೇಟೆ ಶಿವಲಿಂಗ್ಯಾ ನೀನು ಇಲ್ಲಿಂದ ಏಕೆ ಹೊಗುತ್ತಿದ್ದಿಯಾ ಅಂತಾ ವಿನಹಾ ಕಾರಣ ನನ್ನ ಜೊತೆ ಜಗಳಕ್ಕೆ ಬಿದ್ದು ಒಂದು ಕಲ್ಲಿನಿಂದ ನನ್ನ ತೆಲೆಯ ಹಿಂಬಾಗಕ್ಕೆ ಹೊಡೆದು ರಕ್ತಗಾಯ ವಾಗಿರುತ್ತದೆ. ಗಿರಿ ಕುಲಕಣಿ ಇವನು ಈ ರಂಡಿ ಮಗನಿಗೆ ಬಿಡಬಾರದು ಅಂತಾ ಜಿವದ ಬೇದರಿಕೆ ಹಾಕಿ ಕೈಯಿಂದ ತುಟಿಯ ಮೇಲೆ ಹೊಡೆದು ರಕ್ತ ಗಾಯ ಮಾಡಿರುತ್ತರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.