POLICE BHAVAN KALABURAGI

POLICE BHAVAN KALABURAGI

30 July 2014

Gulbarga District Reported Crimes

ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಗುಂಡಮ್ಮಾ ತಂದೆ ಬಸಯ್ಯಾ ಗುತ್ತೆದಾರ ಸಾ|| ಬಳೂರ್ಗಿ ಇವರು 2008 ನೇ ಸಾಲಿನಲ್ಲಿ ನಮ್ಮುರ ಅಪ್ಪಾಸಾಬ ತಂದೆ ಬಾಷಾ ಪಟೇಲ ಸಾ||ಬಳೂರ್ಗಿ ಹಾಗೂ ಇತನ ಹೆಂಡತಿಯಾದ ತಾರಾ ಗಂಡ ಅಪ್ಪಾಸಾಬ ಇವರ ಸಮಕ್ಷಮದಲ್ಲಿ  3 ಲಕ್ಷ ರುಪಾಯಿ ಸಾಲವನ್ನು ಕೊಟ್ಟಿದ್ದು ನನ್ನ ಹಣ ಕೊಡು ಅಂತಾ ದಿನಾಂಕ 24/07/2014 ರಂದು ಬೆಳಿಗ್ಗೆ 10.00 ಎಎಮ್ ಸುಮಾರಿಗೆ ರುಪಾಯಿ ಕೇಳಲು ಅಪ್ಪಾಸಾಬ ರವರ ಮನೆಯ ಕಡೆಗೆ ಹೊರಟಾಗ ಅವರ ಮನೆಯ ಮುಂದೆ ಅಪ್ಪಾಸಾಬ ನಿಂತಿದ್ದು ಅವನಿಗೆ ನಾನು ಹಣದ ಬಗ್ಗೆ ವಿಚಾರಿಸಲು ಸದರ ಅಪ್ಪಾಸಾಬ ಇತನು ನನಗೆ ಮಾತನಾಡದೆ ಮನೆಯ ಒಳಗೆ ಹೋಗುವಾಗ ನಾನು ಅದಕ್ಕೆ ನಿನು ಮನೆಯ ಒಳಗೆ ಹೋದರೆ ಹೇಗೆ ನನಗೂ ಬಾಹಳ ಅಡಚಣೆ ಇದೆ ನಾನು ಕೊಟ್ಟ ರೂಪಾಯಿ ಕೊಡು ಅಂತ ಹೇಳಿದಾಗ ಅದಕ್ಕೆ ಇತನು ಎನು ಮಾತ ನಾಡದೇ ಸುಮ್ಮನೆ ನಿಂತಾಗ ನಂತರ ವಿಚಾರಿಸಲು ನಾನು ಹೊರಟಿದ್ದಾಗ ಅಪ್ಪಾಸಾಬ ಮತ್ತು ಆತನ ಹೆಂಡತಿಆದ ತಾರಾ ನನಗೆ ರಂಡಿ ನಿನ್ನ ರೂಪಾಯಿ ಕೊಟ್ಟಿರುತ್ತೇನೆ ನಿಲ್ಲು ಅಂತ ಅಂದವಳೇ ನನ್ನ ಕುದಲು ಹಿಡಿದು ಜಗ್ಗಾಡಿ ತನ್ನ ಕಾಲಲ್ಲಿ ಇದ್ದ ಚಪ್ಪಲಿಯಿಂದ ಮತ್ತು ಕೈಯಿಂದ ನನಗೆ ಹೊಡೆ ಬಡೆ ಮಾಡಿದ್ದಳು ಜೋತೆ ಇದ್ದ ಅಪ್ಪಾಸಾಬ ಇತನು ರಂಡಿಗೆ ಬಿಡಬೇಡ ಸರಿಯಾಗಿ ಹೊಡೆ ಇನ್ನೋಮ್ಮೆ ರುಪಾಯಿ ಕೇಳಲು ಬಂದರೆ ಕೈ ಕಾಲು ಮುರಿದು ಹಾಕೊಣ ಇಲ್ಲದಿದ್ದರೆ ಜೀವ ಹೊಡೆಯುತ್ತೇವೆ ಅಂತಾ ಬೇದರಿಕೆ ಹಾಕಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 27-07-2014 ರಂದು ರಾತ್ರಿ 08-00 ಪಿ.ಎಮ್ ಕ್ಕೆ ಶ್ರೀಮತಿ ಚನ್ನಮ್ಮಾ ಗಂಡ ವಿಶ್ವನಾಥ ಪಠಪತಿ, ಸಾಃ ಮ. ಸಂ. 5-665, ಛೋಟಾ ರೋಜಾ (ಕೆ) ಗುಲಬರ್ಗಾ ರವರು ತನ್ನ ಮನೆಯಿಂದ ನಡೆದುಕೊಂಡು ಮನೆಯ ಎದುರುಗಡೆ ರೋಡ ದಾಟುತ್ತಿದ್ದಾಗ ಮೋಟಾರ ಸೈಕಲ ನಂ. ಕೆ.ಎ 37 ಎಚ್. 7028 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ರಿಂಗ ರೋಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಫಿರ್ಯಾದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಅಪಘಾತದಿಂದ ಫಿರ್ಯಾದಿಗೆ ಎಡಗಾಲಿಗೆ ಭಾರಿ ಪೆಟ್ಟಾಗಿ ರಕ್ತಗಾಯವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.