POLICE BHAVAN KALABURAGI

POLICE BHAVAN KALABURAGI

24 March 2014

Gulbarga District Reported Crimes


ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಅಶೋಕ ತಂದೆ ಬಾಜಿರಾವ ದಿವಟೆ ಸಾ : ಅಡಗಾಂವ ಖರಾತ ತಾ: ಮಜಲಗಾಂವ ಜಿ: ಖೇಡ ರವರ ಊರಿನ ಪಕ್ಕದಲ್ಲಿ ಇರುವ ಕಾರಿ ಗ್ರಾಮದ ಮಾಣಿಕ ತಂದೆ ರಾಮರಾವ ಗೋರೆ ಇವನು ಮುಕದಂ ಕೆಲಸ ಮಾಡುತ್ತಿದ್ದು, ನನಗೆ ಮತ್ತು ನನ್ನಂತೆ ನಮ್ಮ ಅಕ್ಕ ಪಕ್ಕದ ಹಳ್ಳಿಯವರನ್ನು ಕರ್ನಾಟಕ ರಾಜ್ಯದ ಗುಲಬರ್ಗಾ ಜಿಲ್ಲೆಯ ಅಫಜಲಪೂರ ತಾಲೂಕಿನ ಶ್ರೀ ರೇಣುಕಾ ಶುಗರ ಕಾರ್ಖಾನೆ ವತಿಯಿಂದ ರೈತರ ಕಬ್ಬು ಕಟಾವ ಮಾಡಲು ಕರೆದುಕೊಂಡು ಬಂದಿರುತ್ತಾನೆ. ನಾವೆಲ್ಲರು ನಮ್ಮ ಹೆಂಡತಿ ಮಕ್ಕಳೊಂದಿಗೆ ಸುಮಾರು 4-5 ತಿಂಗಳ ಹಿಂದೆ ಬಂದಿರುತ್ತೇವೆ. ಈಗ 2 ತಿಂಗಳ ಹಿಂದೆ ಸರ್ಜಾರಾವನು ತನ್ನ ಹೆಂಡತಿಗೆ ಆರಾಮಿಲ್ಲದ ಕಾರಣ ಅವಳನ್ನು ತಮ್ಮೂರಿಗೆ ಕಳುಹಿಸಿಕೊಟ್ಟಿರುತ್ತಾನೆ. ಘತ್ತರ್ಗಾ ಗ್ರಾಮದ ಸಿಮಾಂತರದ ಶ್ರೀ ನಾರಾಯಣರಾವ ಕುಲಕರ್ಣಿ ರವರ ಹೊಲದಲ್ಲಿ ಕಬ್ಬು ಕಟಾವು ಮಾಡುವ ಸಮಯದಲ್ಲಿ ನಾರಾಯಣರಾವ ಕುಲಕರ್ಣಿ ರವರ ಹೊಲದಲ್ಲಿ ಜೋಪಡಿಗಳು ಹಾಕೊಕೊಂಡಿದ್ದು ಅವರ ಕಬ್ಬು ಕಟಾವು ಮುಗಿದ ನಂತರ ಪಕ್ಕದ ಹೊಲಗಳಲ್ಲಿಯ ಕಬ್ಬು ಕಟಾವು ಮಾಡಿ ರಾತ್ರಿ ನಮ್ಮ ಜೋಪಡಿಗಳಲ್ಲಿ ವಾಸಿಸುತ್ತಿದ್ದೇವು. ದಿನಾಂಕ 16-03-2014 ರಂದು ಸಾಯಂಕಾಲ 5;30 ಗಂಟೆ ಸುಮಾರಿಗೆ ನಾವೆಲ್ಲರು ನಮ್ಮ ಜೋಪಡಿಗಳ ಮುಂದೆ ಇದ್ದಾಗ, ಸರ್ಜಾರಾಮನು ಸರಾಯಿ ಕುಡಿದು ಬಂದು ನಿತಿನ ಸಿರಸಟ್ ಇವನಿಗೆ ಬೈಯ್ಯುತ್ತಿದ್ದನು. ಆಗ ನಿತೀನನು `ಮಲಾ ಕಶಾಲಾ ಸಿವಿದಿಲಿ ತುಜ ಆಯಿಲಾ ತುಲ ಖಲಾಸ ಕರ್ತು ಅಂತಾ ಅಂದು ಒಂದು ಬಡಿಗೆಯಿಂದ ಸರ್ಜಾರಾವ ಇವನ ತಲೆಯ ಮೇಲೆ ಜೋರಾಗಿ ಹೊಡೆದು ಗಾಯ ಪಡಿಸಿದನು ನಂತರ ಎಡಗಡೆ ಪಕ್ಕೆಲುಬಿನ ಮೇಲೆ, ಕೈಗೆ ಹಾಗು ಮುಖದ ಮೇಲೆ ಅದೇ ಬಡಿಗೆಯಿಂದ ಹೊಡೆದನು, ಆಗ ಸರ್ಜಾರಾವ ಇವನು ನೆಲಕ್ಕೆ ಬಿದ್ದನು. ನಂತರ ನಾನು ಮತ್ತು ನಮ್ಮ ಮುಕದಂ ಮಾಣಿಕ ಹಾಗು ನಮ್ಮೊಂದಿಗೆ ಇದ್ದ ಇತರರು ಕೂಡಿ ಜಗಳ ಬಿಡಿಸಿದೆವು. ನಂತರ ಸರ್ಜಾರಾವ ತನ್ನ ಜಪಡಿಯಲ್ಲಿ ಹೋಗಿ ಮಲಗಿಕೊಂಡನು. ನಂತರ ದಿನಾಂಕ 17-03-2014 ರಂದು ಮಧ್ಯ ರಾತ್ರಿ 01;30 ಗಂಟೆ ಸುಮಾರಿಗೆ ಸರ್ಜಾರಾವ ವಾಂತಿ ಮಾಡಿಕೊಳ್ಳುತ್ತಿದ್ದನು. ಆಗ ಟ್ರ್ಯಾಕ್ಟರ್ ಚಾಲಕ ಖಂಡು ಹೋಳಕರ ಮತ್ತು ಗೋರಕ ಹಾಗು ಮಾಣಿಕ ಗೋರೆ ಇವರು ಸರ್ಜಾರಾವನನ್ನು ಉಪಚಾರ ಕುರಿತು ಘತರಗಾಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಬೇರೆಕಡೆಗೆ ತೆಗೆದುಕೊಂಡು ಹೋಗಲು ತಿಳಿಸಿದ್ದರಿಂದ ಪುನಃ ಸರ್ಜಾರಾವನನ್ನು ಸಕ್ಕರೆ ಕಾರ್ಖಾನೆಯಲ್ಲಿರುವ ದವಾಖಾನೆಗೆ ಕರೆದುಕೊಂಡು ಬಂದು ಉಪಚಾರ ಮಾಡಿಸಿದ ನಂತರ ಕಾರಖಾನೆಯಲ್ಲಿಯೆ ಪೊಪಳೆ ಮಕಾದಂ ಈತನ ಕೋಣೆಯಲ್ಲಿ ಮಲಗಿಕೊಂಡನು. ಬೆಳಿಗ್ಗೆ ಮತ್ತೆ ಸರ್ಜಾರಾವನು ವಾಂತಿ ಮಾಡಿಕೊಂಡಿದ್ದರಿಂದ ಗೋರಕ ಮತ್ತು ಮಾಣಿಕ ಗೋರೆ ಇವರು ಅಫಜಲಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ. ಆಸ್ಪತ್ರೆಯಲ್ಲಿ ವೈದ್ಯರು, ರಕ್ತ ಮತ್ತು ಮೂತ್ರ ತಪಾಸಣೆ ಮಾಡಿ ಗೋಳಿ ಔಷಧಿ ಕೊಟ್ಟು ಸಾಯಂಕಾಲ ಕಳುಹಿಸಿಕೊಟ್ಟಿರುತ್ತಾರೆ. ಸರ್ಜಾರಾವನನ್ನು ಆಸ್ಪತ್ರೆಯಿಂದ ಕರೆದುಕೊಂಡು ರಾತ್ರಿ 9;30 ಗಂಟೆ ಸುಮಾರಿಗೆ ಕಾರ್ಖಾಯಲ್ಲಿರುವ ಪೊಪಳೆ ಮಕಾದಂ ಈತನ ಕೋಣೆಯ ಹತ್ತಿರ ಬಂದಾಗ ಸರ್ಜಾರಾವ ಇವನು ನಂದು ಮುಗಿತು ಅಂತಾ ಅಂದು ಕೆಳಗಡೆ ಕುಳಿತು ಅಲ್ಲಿಯೆ ಮರಣ ಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಜಾತಿ ನಿಂದನೆ ಪ್ರಕರಣ :
ಅಶೊಕ ನಗರ ಠಾಣೆ : ಶ್ರೀ ಭಾಷಾ ತಂದೆ ಗೊರಖನಾಥ ಚೌಗುಲೆ ಸಾ|| ಮ.ನಂ. 11-689 ಭಗತಸಿಂಗ ಚೌಕ ಹತ್ತಿರ ವಡ್ಡರಗಲ್ಲಿ ಗುಲಬರ್ಗಾ ರವರ ಮಗನಾದ ಶರಣಬಸಪ್ಪ ರವರು ಅಪ್ಪ ಕಾಲೇಜಿನಲ್ಲಿ ಎಂ.ಬಿ.ಎ ವಿದ್ಯಾಬ್ಯಾಸ ಮಾಡುವಾಗ ಉಷಾ ತಂದೆ ಸುಭಾಶ್ಚಂದ್ರ ರವರೊಂದಿಗೆ ಪ್ರಿತಿ ಮಾಡಿ ರಜಿಸ್ಟರ ಮದುವೆ ಮಾಡಿಕೊಂಡಿದ್ದು ಮದುವೆಯಾದ ನಂತರ ಅವರಿಗೆ ಇಬ್ಬರು ಮಕ್ಕಳಾಗಿರುತ್ತಾರೆ. ಈಗ ಒಂದು ವರ್ಷದ ಹಿಂದೆ ಸೊಸೆ ಉಷಾ ಇವಳು ಜಗಳ ಮಾಡಿಕೊಂಡು ತನ್ನ ತವರು ಮನೆಯಾದ ರಾಯಚೂರಿನ ಯರಮರಸಗೆ ಹೊಗಿರುತ್ತಾಳೆ ನಂತರ ದಿನಾಂಕ 05-03-2014 ರಂದು ನನ್ನ ಮಗ ಮಕ್ಕಳ ಪರೀಕ್ಷೆ ಇರುವದರಿಂದ ತನ್ನ ಹೆಂಡತಿ ಮಕ್ಕಳಿಗೆ ಕರೆಯಲು ಹೊದಾಗ ಕೇಸ ಮಾಡಿ ಜೈಲಿಗೆ ಕಳುಹಿಸಿರುತ್ತಾಳೆ. ಈಗ ನಾವು ಜಾಮಿನಿನ ಮೇಲೆ ಬಂದಿದ್ದು ದಿನಾಂಕ 23-03-2014 ರಂದು ಬೆಳಿಗ್ಗೆ 11 ಗಂಟೆಗೆ ನನ್ನ ಮಗನ ಹೆಂಡತಿಯ ತಾಯಿ ಸುಲೋಚನಾ ಗಂಡ ದಿ: ಸುಭಾಶ್ಚಂದ್ರ ತಮ್ಮ ಗೀರಿಶ ತಂದೆ ಸುಭಾಶ್ಚಂದ್ರ ಅಕ್ಕ ರಾಜೇಶ್ವರಿ ಗಂಡ ಮಹೇಶ ಅವಂತಿ, ಮತ್ತು ಅವರೊಂದಿಗೆ ಪ್ರಮೀಳಾಬಾಯಿ ಗಂಡ ವಿಜಯಕುಮಾರ, ವಿಜಯಕುಮಾರ ಮತ್ತು ಮಹೇಶ ಆವಂತಿ, ಇವರುಗಳು ನಮ್ಮ ಮನೆಗೆ ಬಂದು ಎಲ್ಲಿ ಇದ್ದಾನೆ ಶರಣ್ಯಾ,ಅಲ್ಲಿ ಉಷಾ ಮಕ್ಕಳಿಗಾಗಿ ಚಡಪಡಿಸುತ್ತಿದ್ದಾಳೆ ಇಲ್ಲಿ ಮಕ್ಕಳಿಗೆ ಇಟ್ಟುಕೊಂಡು ಕುಳಿತಿರಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಗೀರಿಶ ಇತನು ನನಗೆ ಕೈಹಿಂದ ಹೊಡೆಯಲು ಬಂದ ಪ್ರಮೀಳಾ ಇವಳು ಹೊಡಿ ನಮ್ಮ ಮಗಳಿಗೆ ಹಾಳ ಮಾಡ್ಯಾರ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಳು ವಿಜಯಕುಮಾರ ಇವನು ತನ್ನ ಕಾಲಲ್ಲಿಯ ಚಪ್ಪಲಿ ತೆಗೆದು ನನ್ನ ಮೇಲೆ ಹೊಡೆಯಲು ಏರಿ ಏರಿ ಬರುತ್ತಿದ್ದರು ಇನ್ನುಳಿದವರು ಹೊಲಸು ಹೊಲಸು ಶಬ್ದಗಳಿಂದ ಬೈದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ವಿದ್ಯಾರ್ಥಿ ಕಾಣೆಯಾದ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ. ಭೀಕು ತಂದೆ ಕೇಶು ಪವಾರ  ಸಾ: ನಾಗನಟಗಿ ಮೇಘಾನಾಯ್ಕ ತಾಂಡಾ ತಾ: ಶಾಹಪೂರ ಗುಲಬರ್ಗಾ  ರವರ ಚಿಕ್ಕ ಮಗನಾದ  ಗೇನು ಇತನು ಗುಲಬರ್ಗಾ ಯುನಿವರ್ಸಿಟಿಯಲ್ಲಿ ಎಂ. ಎಡ್‌  ವಿದ್ಯಾಭ್ಯಾಸ ಮಾಡಿಕೊಂಡು ಯುನಿವರ್ಸಿಟಿ ಹಾಸ್ಟೇಲದಲ್ಲಿ ಇರುತ್ತಾನೆ.  2-3  ದಿವಸದ ಹಿಂದೆ  ನಮ್ಮ ತಾಂಡಕ್ಕೆ ಬಂದಿದ್ದನು. ನಿನ್ನೆ ದಿನಾಂಕ 22/03/2014 ರಂದು ಮುಂಜಾನೆ ವೇಳೆಗೆ  ಗೇನು ಮತ್ತು ಗೊಪಾಲ ಪವಾರ ಇಬ್ಬರು ಗುಲಬರ್ಗಾಕ್ಕೆ ಹೊಗುತ್ತಿರುವುದಾಗಿ ಹೇಳಿ ಹೊಗಿದ್ದರು. ನಿನ್ನೆ ರಾತ್ರಿ ವೇಳೆಗೆ  ಗೊಪಾಲ ರವರು ಮರಳಿ ತಾಂಡಾಕ್ಕೆ ಬಂದಾಗ  ನಾನು ಗೇನು ಇತನ ಬಗ್ಗೆ ಕೇಳಿದಾಗ  ಹೇಳಿದೆನೆಂದರೆ  ನಾನು ಮತ್ತು  ಗೇನು ಇಬ್ಬರು  ಸಂಜೆ 7-30 ಗಂಟೆ ಸುಮಾರಿಗೆ ಗುಲಬರ್ಗಾ ಬಸ ಸ್ಟ್ಯಾಂಡ ಕ್ಕೆ ಬಂದು  ನಾನು ಶಾಹಪೂರ ಬಸ್ಸಿನಲ್ಲಿ ಕುಳಿತಿದ್ದು, ಆಗ ಗೇನು ಇತನು  ಶೌಚಾಲಯಕ್ಕೆ ಹೊಗಿ ಬರುವುದಾಗಿ ಹೇಳಿ ಹೊದನು.  ಅರ್ಧ ಗಂಟೆಯಾದರೂ ಬರಲಿಲ್ಲ. ಅವನ ಮೊಬೈಲ ನಂ. 7760751705 ಕ್ಕೆ  ಕರೆ ಮಾಡಿದಾಗ  ಸ್ವಿಚ್ಛ ಆಫ್‌ ಆಗಿತ್ತು. ಆಗ ನಾನು ಒಬ್ಬನೇ ತಾಂಡಾಕ್ಕೆ ಬಂದಿರುವುದಾಗಿ ಹೇಳಿದನು. ನಾವು ಇಲ್ಲಿಯ ವರೆಗೆ  ಅವನ ಮೊಬೈಲಿಗೆ ಕರೆ ಮಾಡಿದ್ದು ಸ್ವಿಚ್ಚ ಆಫ್‌ ಆಗಿರುತ್ತದೆ.  ಗುಲಬರ್ಗಾಕ್ಕೆ ಬಂದು ಹುಡುಕಿದರು ಸಿಕ್ಕಿರುವುದಿಲ್ಲಾ. ನನ್ನ ಮಗ ಗೇನು ಇತನು  ಗುಲಬರ್ಗಾ ಬಸ ನಿಲ್ದಾಣದಿಂದ ಕಾಣೆಯಾಗಿದ್ದು, ಇಂದು ಮುಂಜಾನೆ ವೇಳೆಗೆ ನನ್ನ ಹಿರಿಯ ಮಗನಾದ  ದಾಮು ರವರಿಗೆ ಫೋನ ಮಾಡಿ ನನಗೆ ದೂರ ಕರೆದುಕೊಂಡು ಹೊಗುತ್ತಿದ್ದಾರೆ ಎಂದು ಹೇಳಿ ಫೋನ ಕಟ್‌‌ ಮಾಡಿರುತ್ತಾನೆ. ಎಂದು ಪೂನಾದಿಂದ ನನ್ನ ಮಗ ಫೋನ ಮಾಡಿ ತಿಳಿಸಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.