POLICE BHAVAN KALABURAGI

POLICE BHAVAN KALABURAGI

14 January 2015

Kalaburagi District Reported Crimes

ಅಪಘಾತ ಪ್ರಕರಣಗಳು  :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶರಣಬಸಪ್ಪ ತಂದೆ ಸಂಗಶೆಟ್ಟಿ ಮಂಗಳಗಿ ಸಾ: ರವೀಂದ್ರನಾಥ ಪಾಟೀಲ ಆಸ್ಪತ್ರೆ ಹತ್ತಿರ ಕಲಬುರಗಿ  ರವರು ದಿನಾಂಕ: 13-01-2015 ರಂದು ಮಧ್ಯಾಹ್ನ ತನ್ನ ಮೋ/ಸೈಕಲ ನಂ: ಕೆಎ 32 ಇಬಿ 6366 ನೆದ್ದನ್ನು ಚಲಾಯಿಸಿಕೊಂಡು ಜಿಲ್ಲಾ ನ್ಯಾಯಾಲಯದ ಮೆನ ಗೇಟ ದಿಂದ ಹಳೆ ಬಾರ ಅಶೊಷಿಯನ ಮತ್ತು ನೊಟರಿಯವರ ಕಡೆಗೆ ಹೋಗುವಾಗ  ಕಾರ ನಂ: ಕೆಎ 32 ಎನ್ 3814 ರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ನನ್ನ ಮೋ/ಟಾರ ಸೈಕಲ್ ಮುಂದಿನಿಂದ ಹೋಗಿ ಜಿಲ್ಲಾ  ನ್ಯಾಯಾಲಯದ ಆವರಣದ ರೋಡ ಮೇಲೆ ಒಮ್ಮೇಲೆ ಬ್ರೇಕ ಹಾಕಿ ನಿಲ್ಲಿಸಿ ನನ್ನ ಮೋ/ಸೈಕಲ್ ಹಿಂದಿನಿಂದ ಬರುತ್ತಿರುವದನ್ನು ಗಮನಿಸದೆ ಅಲಕ್ಷತನದಿಂದ ಕಾರ ಚಾಲಕ ತನ್ನ ಕಾರಿನ ಬಾಗಿಲಿನಿಂದ ನನ್ನ ಮೊ/ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತಮಾಡಿ ಮಾಡಿದ್ದರಿಂದ ಮೋ/ಸೈಕಲ್ ಸಮೇತ ಕೆಳಗೆ ಬಿದ್ದಿದರಿಂದ  ಫಿರ್ಯಾದಿಗೆ ಎಡಗಾಲು ಮೊಳಕಾಲು ಕೆಳಗೆ ಭಾರಿ ಪೆಟ್ಟು ಬಿದ್ದು ರಕ್ತ ಬಂದಿದ್ದು ಎಡಗೈ ಕಿರ ಬೆರಳಿಗೆ ತರಚೀದಗಾಯ ಹಾಗು ಬಲಗೈ ಮುಂಗೈಗೆ ರಕ್ತಗಾಯಮಾಡಿ  ಕಾರ ಚಾಲಕ ಕಾರ ಅಲ್ಲಿಯೇ ಬಿಟ್ಟು ಚಾಲಕ ಹೊರಟು ಹೋಗಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ಶ್ರೀ ತಾಯಪ್ಪ ತಂದೆ ಸಿದ್ದಣ್ಣ ಅಲಗೂರ ಸಾ : ಯಾದಗಿರ  ರವರು ದಿನಾಂಕ 12.01.15 ರಂದು ಫಿರ್ಯಾದಿದಾರ ಮತ್ತು ಹುಸೇನ್‌ ಬಾಷಾ ಇವರು ಕೂಡಿಕೊಂಡು ತಮ್ಮ ಮೋಟಾರು ಸೈಕಲ್‌ ನಂ ಕೆ.ಎ33ಕ್ಯೂ4786 ನೇದ್ದರ ಮೇಲೆ ಕುಳಿತುಕೊಂಡು ಜೇವರ್ಗಿ ಕಡೆಗೆ ಬರುತ್ತಿದ್ದಾಗ ಕೆಲ್ಲೂರು ಗ್ರಾಮದ ಹತ್ತಿರ ರೋಡಿನಲ್ಲಿ ಟಾಟಾ ವಿಸ್ತಾ ಕಾರ್‌ ನಂ ಕೆ.ಎ33ಎ3438 ಮತ್ತು ಬುಲೇರೋ ಜೀಪ್‌ ನಂ ಕೆ.ಎ33 ಎಮ್2465 ನೇದ್ದರವುಗಳ ಚಾಲಕರು ತಮ್ಮ-ತಮ್ಮ ವಾಹನಗಳನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಒಂದಕ್ಕೊಂದು ಮುಖಾಮುಖಿ ಡಿಕ್ಕಿ ಪಡಿಸಿ ಬುಲೇರೋ ವಾಹನ ಫಿರ್ಯಾದಿ ಕುಳಿತ ಮೊಟಾರು ಸೈಕಲ್‌ಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ಫಿರ್ಯಾದಿಗೆ ಮತ್ತು ಅವನ ಸಂಗಡಿಗನಿಗೆ ಹಾಗು ಆರೋಪಿತರ ವಾಹನಗಳಲ್ಲಿದ್ದ ವರಿಗೆ ಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 11.01.15 ರಂದು ರಾತ್ರಿ ಜೇವರ್ಗಿ ವಿಜಯಪುರ ಮೇನ್‌ ರೋಡ್‌ ಮೇಲೆ ಹಳೆಯ ಕಂಕರ್ ಮಷಿನ್‌ ಹತ್ತಿರ ಶ್ರೀ ಮಲ್ಲಿಕಾರ್ಜುನ ತಂದೆ ಬಸಪ್ಪ ತಳವಾರ ಸಾ : ಚೆನ್ನುರ ಮತ್ತು ಶರಣಪ್ಪ ಜಾನಕರ್ ಇವರು ತಮ್ಮ ಮೋಟಾರು ಸೈಕಲ್‌ ನಂ ಕೆ.ಎ25 ಎಲ್ 5227 ನೇದ್ದರ ಮೇಲೆ ಬರುತ್ತಿದ್ದಾಗ ಅದೇ ಸಮಯಕ್ಕೆ ಜೇವರ್ಗಿ ಕಡೆಯಿಂದ ಬಂದ ಟಾಟಾ ಇಂಡಿಕಾ ಕಾರ್‌ ನಂ ಕೆಎ32ಎಮ್5190 ನೇದ್ದರ ಚಾಲಕನು ತನ್ನ ಕಾರ್‌‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರು ಸೈಕಲ್‌ಗೆ ಡಿಕ್ಕಿ ಪಡಿಸಿ ಗಾಯಪಡಿಸಿದ್ದು ಕಾರ್‌ ನೊಂದಿಗೆ ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಶಾಂತಾ ಬಾಯಿ ಗಂಡ ಹುಚ್ಚಪ್ಪ ನಾಟಿಕಾರ ಸಾ : ಹಳ್ಯಾಳ ಇವರ  ಮನೆಯ ಸುತ್ತ-ಮುತ್ತ  ನಮ್ಮ ಸಮಜಾದ ಸಂಜು ತಂದೆ ಜಗದೇವಪ್ಪ ನಾಟಿಕಾರ, ಸಾಯಬಣ್ಣ ತಂದೆ ಜಗದೇವಪ್ಪ ಬಳೂರ್ಗಿ, ಖಾಜಪ್ಪ ತಂದೆ ಜಗದೇವಪ್ಪ ಬಳೂರ್ಗಿ, ಅಂಬಣ್ಣ ತಂದೆ ಚಂದಪ್ಪ ಹರಿಜನ ಇವರ ಮನೆಗಳು ಇದ್ದು, ಸದರಿಯವರಿಗೂ ಮತ್ತು ನಮಗೂ ಮೊದಲಿನಿಂದಲೂ ಮನೆಯ ಜಾಗದ ವಿಚಾರವಾಗಿ ತಕರಾರು ಇದ್ದು ಇದೆ ವಿಷಯವಾಗಿ ಸದರಿಯವರು ನಮ್ಮ ಜೋತೆಗೆ ಅನೇಕ ಸಲ ಜಗಳ ತಗೆದಿರುತ್ತಾರೆ, ಅಂದಿನಿಂದ ಸದರಿಯವರು ನಮಗೆ ಕೋಲೆ ಮಾಡಬೆಕೆಂದು ನಮ್ಮ ಮೇಲೆ ದ್ವೇಷ ಸಾದಿಸುತ್ತಿದ್ದು ದಿನಾಂಕ 13-01-2015 ರಂದು ರಾತ್ರಿ 8:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗಂಡ ಇಬ್ಬರು ನಮ್ಮ ಮನೆಯ ಮುಂದೆ ಮಾತಾಡುತ್ತಾ ಕುಳಿತಿದ್ದಾಗ ನಮ್ಮ ಪಕ್ಕದ ಮನೆಯವರಾದ ಸಂಜು ನಾಟಿಕಾರ, ಸಾಯಬಣ್ಣ ಬಳೂರ್ಗಿ, ಖಾಜಪ್ಪ ಬಳೂರ್ಗಿ, ಅಂಬಣ್ಣ ಹರಿಜನ, ಪರಮೇಶ್ವರ ನಾಟಿಕಾರ ಇವರೆಲ್ಲರು ಅಲ್ಲೆ ನಮ್ಮ ಮನೆಯ ಪಕ್ಕದಲ್ಲಿ ನಿಂತುಕೊಂಡು ನಮಗೆ ಯಾಸಿ ಯಾಸಿ ಬೈಯುತ್ತಿದ್ದರು ಆಗ ನಾವು ಸದರಿಯವರಿಗೆ ಯಾಕೆ ನಮಗೆ ಯಾಸಿ ಯಾಸಿ ಬೈಯುತ್ತಿರಿ ಅಂತಾ ಕೇಳಿದಕ್ಕೆ ಸದರಿಯವರು ಮತ್ತು ಮನೆಯಲ್ಲಿದ್ದ ಸಂಜುನ ಹೆಂಡತಿ ಸಂತೋಷಿ, ಖಾಜಪ್ಪನ ಹೆಂಡತಿ ಮಂಗಲಾ, ಹಾಗೂ ಸಾಯಬಣ್ಣನ ಹೆಂಡತಿ ಮಂಜುಳಾ ಇವರೆಲ್ಲರು ಹಾಗೂ ಇನ್ನು ಕೆಲವು ಜನರು ನಮ್ಮ ಹತ್ತಿರ ಬಂದು ನಮಗೆ ಏನೆ ರಂಡಿ ನಮ್ಮಷ್ಟಕ್ಕೆ ನಾವು ಮಾತಾಡುತ್ತಾ ನಿಂತರೆ ನಮಗೆ ಬೈತಿಯಾ ಅಂತಾ ನನಗೆ ಎಲ್ಲರು ನನಗೆ ಕೈಯಿಂದ ಹೊಡೆಯುತ್ತಿದ್ದರು, ಆಗ ನನ್ನ ಗಂಡ ಹುಚ್ಚಪ್ಪ ಈತನು ಸದರಿಯವರಿಗೆ ಹೇಳಲು ಬಂದಾಗ ನನ್ನ ಗಂಡನಿಗೆ ಸಂಜು ಈತನು ಮಗನೆ ನೀನಗೆ ಇವತ್ತು ಜೀವ ಸಹಿತ ಬಿಡುವುದಿಲ್ಲ ಅಂತಾ ಬೈದು ತನ್ನ ಕೈಯಲ್ಲಿದ್ದ ಸನಿಕೆಯಿಂದ ನನ್ನ ಗಂಡನ ತಲೆಗೆ ಹೊಡೆದನು, ಆಗ ನನ್ನ ಗಂಡ ಕೆಳಗೆ ಬಿದ್ದಾಗ ಎಲ್ಲರೂ ಕೂಡಿ ಕಾಲಿನಿಂದ ಒದೆಯುವುದು, ಕೈಯಿಂದ ಹೊಡೆಯುತ್ತಿದ್ದಾಗ ನಾನು ನನ್ನ ಗಂಡನಿಗೆ ಹೋಡೆಯುವುದನ್ನು ಬೀಡಸಲು ಹೋದಾಗ ನನಗೂ ಸಹ ನೆಲಕ್ಕೆ ಹಾಕಿ ಎಲ್ಲರೂ ಕೂಡಿ ಕಾಲಿನಿಂದ ನನ್ನ ಮೈ ಕೈಗೆ ಒದ್ದು ಗಾಯಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ರುಕ್ಮೀಣಿ ಗಂಡ ಸೂರ್ಯಕಾಂತ ಸೂರ್ಯವಂಶಿ ಸಾ : ಭೂಸನೂರ ಇವರ ಗಂಡನಾದ ಸೂರ್ಯಕಾಂತ ತಂದ ಗುರಣ್ಣ ಸೂರ್ಯವಂಶಿ ಇವರು ದಿನಾಂಕ 12/01/2015 ರಂದು ರಾತ್ರಿ 10.30 ಗಂಟೆಗೆ ಮನೆಯಿಂದ ಹತ್ತಿರದಲ್ಲಿಯೇ ಇರುವ ಹೊಲದ ಕಡೆಗೆ ಸಂಡಾಸಕ್ಕೆ ಅಂತ ಹೋದವರು ಒಂದು ಗಂಟೆಯಾದರು ಮರಳಿ ಮನೆಗೆ ಬರದೆ ಇದ್ದುದರಿಂದ ಹುಡುಕಾಡುತ್ತಾ ತಾನು ಹಾಗೂ ತನ್ನ ಭಾವನಾದ ಪರಮೇಶ್ವರ ಇಬ್ಬರೂ ಹೋಗಿ ತಮ್ಮ ಹೊಲದ ಬಂದಾರಿಯ ಜಾಲಿ ಮರದಲ್ಲಿ ಬ್ಯಾಟರಿ ಬೆಳಕಿನಲ್ಲಿ ನೋಡಲಾಗಿ ತನ್ನ ಗಂಡನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು ಹತ್ತಿರ ಹೋಗಿ ನೋಡಲಾಗಿ ಮೃತಪಟ್ಟಿದ್ದು ತನ್ನ ಗಂಡನ ಸಾವಿನ ಬಗ್ಗೆ ಸಂಶಯ ಇದೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.