POLICE BHAVAN KALABURAGI

POLICE BHAVAN KALABURAGI

22 February 2012

GULBARGA DIST REPORTED CRIMES


ಕಮಲಾಪೂರ ಠಾಣೆ:
ಹೆಣ್ಣು ಮಗಳು ಕಾಣೆಯಾದ ಪ್ರಕರಣ: ಶ್ರೀ ಶಿವಾಜಿ ತಂದೆ ನಾರಯಣರಾವ ಪಾಂಡೆ ಸಾ|| ಶಿವ ನಗರ ಹುಮನಬಾದ ತಾ|| ಹುಮನಬಾದ ಜಿ|| ಬೀದರ ರವರು ನನ್ನ ಮಗಳಾದ ಶ್ರೀಮತಿ ನಾಗೇಶ್ವರಿ ಗಂಡ ಪರಶುರಾಮ ಖಂಡೇಕರ ವ|| 22 ವರ್ಷ, ಜಾ|| ಮರಾಠ, ಸಾ|| ನಿಪ್ಪಾಣಿ ತಾ|| ಚಿತ್ತಾಪೂರ ಜಿ|| ಗುಲಬರ್ಗಾ ಇವರು ದಿನಾಂಕ: 28-12-2012 ರಂದು ಬೆಳಿಗ್ಗೆ 9-00 ಗಂಟೆಗೆ ಕಮಲಾಪೂರ ಬಸ್ಸ ನಿಲ್ದಾಣದಿಂದ ಕಾಣೆಯಾಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 19/2012 ಕಲಂ ಹೆಣ್ಣು ಮಗಳು ಕಾಣೆಯಾದ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಕಾಣೆಯಾದ ಹೆಣ್ಣು ಮಗಳ ಚಹರೆ ಪಟ್ಟಿ ಎತ್ತರ 5 ಪೀಟ, ತಳ್ಳನೆಯ ಮೈಕಟ್ಟು, ಗೋದಿ ಬಣ್ಣ, ದುಂಡು ಮುಖ, ನೇರ ಮೂಗು, ಕಪ್ಪು ಕೂದಲು ಇರುತ್ತವೆ. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು 084728-221306, ಸಿಪಿಐ ಗ್ರಾಮಿಣ ವೃತ್ತ ಕಛೇರಿ ದೂ. ನಂ: 08472-263630 ಅಥವಾ ಗುಲಬರ್ಗಾ ಕಂಟ್ರೋಲ್ ರೂಮ್ ದೂ. ಸಂಖ್ಯೆ: 08472-263604 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.
ದರೋಡೆ ಪ್ರಕರಣ:
ಆಳಂದ ಪೊಲೀಸ ಠಾಣೆ: ಗುಂಡಪ್ಪ ತಂದೆ ಅಂಬದಾಸ ಸಾಳುಂಕೆ ಸಾ: ನಿಂಬರ್ಗಾ ರವರು ನಾನು ಮತ್ತು ನನ್ನ ಹೆಂಡತಿ ಅನಿತಾಬಾಯಿ ಇಬ್ಬರೂ ಕೂಡಿಕೊಂಡು ಮೋಟರ ಸೈಕಲ ಮೇಲೆ ನಂ ಕೆ.ಎ 32.ಎಕ್ಸ್ 2074 ನೇದ್ದರ ಮೇಲೆ ದಿನಾಂಕ 21/02/2012 ರಂದು ನಿರಗುಡಿ ಗ್ರಾಮದಿಂದ ನಿಂಬರ್ಗಾಕ್ಕೆ ಬರುತ್ತಿರುವಾಗ ರಾತ್ರಿ 8.00 ಗಂಟೆ ಸುಮಾರಿಗೆ ಕೋರಳಿ ರಸ್ತೆ ಸಂಗೊಳಗಿ ಕ್ರಾಸ ಹತ್ತಿರ ಮೋಟರ ಸೈಕಲ ಮೇಲೆ 3 ಜನರು ಬಂದು ನಮ್ಮ ಮೋಟರ ಸೈಕಲ ಎದುರುಗಡೆ ಅವರ ಮೋಟಾರ ಸೈಕಲ ನಿಲ್ಲಿಸಿ ಅವರಲ್ಲಿ ಒಬ್ಬನು ಮಚ್ಚು ನನ್ನ ಕುತ್ತಿಗಿಗೆ ಹಚ್ಚಿ ಏ ಬೋಸಡಿ ಮಗನೆ ನೀನ ಹತ್ತಿರ ಎಷ್ಟು ದುಡ್ಡು ಇವೆ ಮತ್ತು ಎಷ್ಟು ಬಂಗಾರ ಇವೆ ಕೊಡು ಅಂತ ಕೇಳುತ್ತಿದ್ದಾಗ ಇನ್ನೊಬ್ಬನು ತನ್ನ ಕೈಯಲ್ಲಿದ ರಾಡಿನಿಂದ ಎಡ ರಟ್ಟೆ ಮೇಲೆ ಜೋರಾಗಿ ಹೊಡೆದು ಗಾಯ ಮಾಡಿದನು. ನನ್ನ ಹೆಂಡತಿ ಹತ್ತಿರ ಏನು ಬಂಗಾರದ ಓಡವೆ ಸಾಮನುಗಳು ಇದೆ ಕೊಡು ಇಲ್ಲದ್ದಿದರೆ ನಿನ್ನ ಗಂಡನಿಗೆ ಬಿಡುವುದ್ದಿಲ್ಲ ಅಂತಾ ಜಬರ ದಸ್ತಿಯಿಂದ ನನ್ನ ಹೆಂಡತ್ತಿ ಹತ್ತಿರ ಇದ್ದ ಕಿವಿ ಹೂ 2 ಗ್ರಾಂ ಅಂದಾಜ ಕಿಮ್ಮತ 4000/- ಸಾವಿರ ರೂಪಾಯಿ, ಮಂಗಳಸೂತ್ರ ಹಾಗೂ 4 ಗುಂಡು ಅಂದಾಜ ಕಿಮ್ಮತ 8000/- ರೂಪಾಯಿ ಹಾಗೂ ನನ್ನ ಜೇಬಿನಲ್ಲಿದ ಎರಡು ಮೊಬೈಲ್ ಗಳು ನೊಕಿಯಾ ಕಂಪನಿದ್ದು ನಂ 9980010153 ಹಾಗೂ ಕಾರ್ಬನ್ ಕಂಪನಿದ್ದು ನಂ 8971637783 ಅಂದಾಜು ಕಿಮ್ಮತ್ 6000/- ರೂಪಾಯಿ ಹೇಗೆ ಒಟ್ಟು 18,000-00 ರುಪಾಯಿಗಳು ನಗುದು ಹಣ 4500 ರುಪಾಯಿಗಳು ಹೇಗೆ ಒಟ್ಟು 22,500-00 ಜಬರ ದಸ್ತಿನಿಂದ ಬೆಲೆಬಾಳುವವದನ್ನು ಸುಲಿಗೆ ಮಾಡಿಕೊಂಡು ಹೋಗಿದ್ದು ಸದರಿಯವರು ಅವಾಚ್ಯ ಶಬ್ದಗಳಿಂದ ಕನ್ನಡ ಹಿಂದಿ ಮತ್ತು ಮರಾಠಿ ಬಾಷೆಯಲ್ಲಿ ಬೈಯುತ್ತಿದ್ದರು ಮತ್ತು ಅವರಲ್ಲಿ ಒಬ್ಬನ ಎತ್ತರ 5 ಪೀಟ್ ಇನ್ನೂ ಇಬ್ಬರ 5 ½ ಪೀಟ್ ಇರುತ್ತಾರೆ ಒಬ್ಬನು ಗೋದಿ ಬಣ್ಣವುಳ್ಳವನಾಗಿರುತ್ತಾನೆ ಇಬ್ಬರೂ ಕಪ್ಪು ಬಣ್ಣ ಹೊಂದಿರುತ್ತಾರೆ. ಇವರು ಸಾಮಾನ್ಯವಾಗಿ 20 ರಿಂದ 25 ವರ್ಷದವರುಳ್ಳವರಾಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 39/2012 ಕಲಂ 394 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಮುಂಜಾಗ್ರತೆ ಕ್ರಮ:


ಬ್ರಹ್ಮಪೂರ ಠಾಣೆ: ದಿನಾಂಕ: 22/02/12 ರಂದು ಠಾಣಾ ಹದ್ದಿಯಲ್ಲಿ ಪೆಟ್ರೋಲಿಂಗ ಮತ್ತು ಹಳೆ ಗುನ್ನೆಗಳ ಪತ್ತೆ ಕುರಿತು ಹೋದಾಗ ನಗರದ ಜಿ.ಜಿ.ಹೆಚ್ ಸರ್ಕಲ ಹತ್ತಿರ 10-30 ಗಂಟೆಗೆ ಮೂರು ಜನ ಹುಡುಗರು ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಸದರಿಯವರನ್ನು ಹಿಡಿದು ಹೆಸರು ಮತ್ತು ವಿಳಾಸ ವಿಚಾರಿಸಲು ಅಂಬರೀಶ ತಂದೆ ದೇವಿಂದ್ರ ಚವ್ಹಾಣ, ಸಾ|| ಸೇವಲಾಲ ದೇವಾಲಯದ ಹಿಂದುಗಡೆ ಭರತನಗರ ತಾಂಡಾ ಬಾಪೂನಗರ ಗುಲಬರ್ಗಾ.ರಾಹುಲ ತಂದೆ ಲಕ್ಷ್ಮಣ ಪವಾರ, ಸಾ|| ವಳಕೇರಿ ಮನೆಯ ಹತ್ತಿರ ಭರತನಗರ ತಾಂಡಾ ಬಾಪೂನಗರ ಗುಲಬರ್ಗಾ. ಶಿವಕುಮಾರ ತಂದೆ ಜಯರಾಮ ರಾಠೋಡ, ಸಾ|| ಭರತನಗರ ತಾಂಡಾ ಬಾಪೂನಗರ ಗುಲಬರ್ಗಾ ಅಂತಾ ತಿಳಿಸಿದ್ದು ಸ್ಥಳದಲ್ಲಿ ಇರುವಿಕೆಯ ಬಗ್ಗೆ ವಿಚಾರಿಸಲು ಯಾವುದೇ ಸಮಂಜಸ ಉತ್ತರ ಕೊಡದೆ ಇರುವದರಿಂದ ಸದರಿಯವರನ್ನು ಸ್ಥಳದಲ್ಲಿ ಹಾಗೆಯೆ ಬಿಟ್ಟಲ್ಲಿ ಯಾವುದಾದರೊಂದು ಸ್ವತ್ತಿನ ಅಪರಾಧ ಮಾಡಬಹುದೆಂದು ತಿಳಿದು ವಶಕ್ಕೆ ತೆಗೆದುಕೊಂಡು ಸೂಕ್ತ ಕ್ರಮಕ್ಕಾಗಿ ಪಿಸಿಗಳಾದ ಶ್ರೀ.ರಾಜಕುಮಾರ, ಮಹಾಂತೇಶ, ಸುಧಾಕರ ರವರು ವರದಿ ಸಲ್ಲಿಸಿದ್ದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 28/12 ಕಲಂ: 109 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.