ಕುಖ್ಯಾತ 6 ಜನ ಸರಗಳ್ಳರ ಬಂದನ, ಸುಮಾರು 12 ಲಕ್ಷ ರೂ ಬೆಲೆಬಾಳುವಬಂಗಾರ,ಆಭರಣಗಳು, ನಗದು,ಮೊಟಾರ ಸೈಕಲ ಮತ್ತು ಮೊಬಾಯಿಲಗಳ ವಶ.
ಖಚಿತ ಮಾಹಿತಿ ಆಧಾರ ಅನ್ವಯ ಈ ದಿವಸ ಸೊನಿಯಾ ಗಾಂಧಿ ಕಾಲೋನಿ ಮತ್ತು ಟಿಪ್ಪು ಸುಲ್ತಾನ ಚೌಕದಲ್ಲಿ ದಾಳಿ ಮಾಡಿದ ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಜನರು 6 ಜನ ಕುಖ್ಯಾತ ಸರಗಳ್ಳತನ ಮಾಡುವ ಜನರನ್ನು ಬಂಧಿಸಿದ್ದಾರೆ. ಸದರಿಯವರಿಂದ ಬಂಗಾರದ ಆಭರಣಗಳು ಸರಗಳ್ಳತನ ಮಾಡಲು ಬಳಸುತ್ತಿದ್ದು ಮೊಟಾರ ಸೈಕಲಗಳು, ಮೊಬಾಯಿಲ್ ಪೊನಗಳು, ಸಿಮ್ ಕಾರ್ಡ, ಚಾಕು, ವಗೈರೆ ಸುಮಾರು 12 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡು ವಿಶೇಷ ತನಿಖಾ ತಂಡದವರು ತನಿಖೆ ಮುಂದುವರೆಯಿಸಿರುತ್ತಾರೆ.
ಗುಲಬರ್ಗಾ ನಗರದಲ್ಲಿ ಘಟಿಸಿದ ಸ್ವತ್ತಿನ ಪ್ರಕರಣಗಳಲ್ಲಿನ ಆರೋಪಿತರ ಪತ್ತೆ ಕುರಿತು ಮಾನ್ಯ ಶ್ರೀ ಮಹಮ್ಮದ ವಜೀರ ಅಹ್ಮದ ಐ.ಪಿ.ಎಸ್ ಐ.ಜಿ.ಪಿ ಸಾಹೇಬರು ಈಶಾನ್ಯ ವಲಯ ಗುಲಬರ್ಗಾ ಹಾಗೂ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್ ಎಸ್.ಪಿ. ಗುಲಬರ್ಗಾ, ಮಾನ್ಯ ಅಪರ ಎಸ್.ಪಿ ಶ್ರೀ ಕಾಶಿನಾಥ ತಳಕೇರಿ ಮತ್ತು ಶ್ರೀ ಹೆಚ್. ತಿಮ್ಮಪ್ಪಾ ಡಿ.ಎಸ್.ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ನಿನ್ನೆ ದಿನಾಂಕ 24/10/2011 ರಂದು ಮದ್ಯ ರಾತ್ರಿ ವಿಶೇಷ ತನಿಖಾ ತಂಡದ ಶ್ರೀ ಚಂದ್ರಶೇಖರ ಬಿ.ಪಿ ಸಿಪಿಐ ಎಮ್.ಬಿ ನಗರ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ ಪಿಐಗಳಾದ 1) ಶ್ರೀ ಬಿ.ಬಿ ಪಟೇಲ ಮತ್ತು 2) ಶ್ರೀ ರಾಜಣ್ಣ 3) ಶ್ರೀ ಪಂಡಿತ ಸಗರ ಪಿ.ಎಸ್.ಐ (ಕಾಸು) ವಿವಿ ಠಾಣೆ 4) ಸಂಜೀವಕುಮಾರ ಪಿ.ಎಸ್.ಐ (ಕಾಸು) ಎಮ್.ಬಿ ನಗರ, 5) ಶ್ರೀ ಸಂಗಮೇಶ ಪಿ.ಎಸ್.ಐ ಜೇವರಗಿ 6) ಶ್ರೀ ಶಾಂತಿನಾಥ ಪಿ.ಎಸ್.ಐ ಕಮಲಾಪುರ ಮತ್ತು ಸಿಬ್ಬಂದಿಯವರಾದ ಸಿದ್ರಾಮ ಹೆಚ್.ಸಿ, ಶಿವಪುತ್ರ ಸ್ವಾಮಿ ಹೆಚ್.ಸಿ, ಪ್ರಭಾಕರ ಪಿಸಿ, ಅಶೋಕ ಪಿಸಿ, ವೇದರತ್ನಂ ಪಿಸಿ, ಗಂಗಾಧರ ಪಿಸಿ, ಲೈಕೋದ್ದಿನ ಪಿಸಿ, ಇಮ್ತಿಯಾಜ ಎಪಿಸಿ, ಅರ್ಜುನ ಎಪಿಸಿ ಚಂದ್ರಕಾಂತ ಮುರುಡ ಪಿಸಿ, ಬಲರಾಮ ರಜಪುತ ಪಿಸಿ, ಮಶಾಕ ಪಿಸಿ ರವರು ಖಚಿತ ಭಾತ್ಮಿ ಮೇರೆಗೆ ಸೊನಿಯಾ ಗಾಂಧಿ ಕಾಲೋನಿ ಮತ್ತು ಟಿಪ್ಪು ಸುಲ್ತಾನ ಚೌಕದಲ್ಲಿ ಮಿಂಚಿನ ದಾಳಿ ಮಾಡಿ ಕುಖ್ಯಾತ ಸರಗಳ್ಳತನ ಮಾಡುವ ಜನರಾದ ಸೈಯದ ಫಯಾಜ ತಂದೆ ಬಾಶುಮಿಯಾ ವಯ: 24 ವರ್ಷ ಗುಲಬರ್ಗಾ ಟಿಪ್ಪು @ ಇರ್ಫಾನ ತಂದೆ ಅಯೂಬ ಪಟೇಲ ಮಚಲಿವಾಲೆ ವಯ : 21 ವರ್ಷ ಉ: ಅಲೂಮಿನಿಯಂ ಸಾ|| ಖುಲ್ಲಾ ಬನಿ ಮಜೀದ ಹತ್ತಿರ ಗುಲಬರ್ಗಾ :ಮಹ್ಮದ ರಫೀಕ ತಂದೆ ಸಲೀಂ ಮಿಯಾ ಶೇಖ ವಯ: 20 ವರ್ಷ ಉ:: ವೆಲ್ಡಿಂಗ್ ಕೆಲಸ ಸಾ|| ನಯಾ ಮೊಹಲ್ಲಾ ಶಾಲೆ ಹಿಂದುಗಡೆ ಗುಲಬರ್ಗಾ ಮಹ್ಮದ ಅಖೀಲ್ ತಂದೆ ಮಹ್ಮದ ಜಾಫರ ಚುವೆವಾಲೆ ವಯ: 22 ವರ್ಷ ಉ:: ಮೇಕ್ಯಾನಿಕ ಸಾ|| ಲಾಲಗೇರಿ ಗುಲಬರ್ಗಾ ಮಹ್ಮದ ಅನ್ವರ ತಂದೆ ಮಹ್ಮದ ಹುಸೇನಿ ಖುರೆಸಿ ವಯ: 23 ವರ್ಷ ಉ: ಚಿಕನ ಅಂಗಡಿ ಸಾ: ಮಿಲನ್ ಚೌಕ ಗಾಜಿಫುರ ಗುಲಬರ್ಗಾ 6) ಶೇಖ್ ಜಾಫರ ತಂದೆ ಶೇಖ್ ಫರೀದ್ ವಯ: 19 ವರ್ಷ ಉ: ಪೆಂಟಿಂಗ ಕೆಲಸ ಸಾ: ಶಹಬಾಜ ಸ್ಕೂಲ್ ಹತ್ತಿರ ಇಸ್ಲಾಮಬಾದ ಕಾಲೋನಿ ಗುಲಬರ್ಗಾ ರವರನ್ನು ಹಿಡಿದುಕೊಂಡು ಠಾಣೆಗೆ ತಂದು ತನಿಖೆಗೆ ಒಳಪಡಿಸಿದಾಗ ಈಗ ಸುಮಾರು ಒಂದು ವರ್ಷದಿಂದ ಗುಲಬರ್ಗಾ ನಗರದ ವಿಭೂತಿ ಕಾಲೋನಿ, ಜಿಡಿಎ ಕಾಲೋನಿ ಹನುಮಾನ ಮಂದಿರ ಹತ್ತಿರ, ಪ್ರಗತಿ ಕಾಲೋನಿ, ಡಾಕ್ಟರ್ಸ ಕಾಲೋನಿ ಬಸವೇಶ್ವರ ಕಾಲೋನಿ, ಗುಬ್ಬಿ ಕಾಲೋನಿ, ಪ್ರಶಾಂತ ನಗರ, ಬ್ಯಾಂಕ ಕಾಲೋನಿ ಮತ್ತು ಜಗತ ವೃತ್ತ ಬಳಿ ಸರಗಳ್ಳತನ ಮತ್ತು ಸುಲಿಗೆ ಮಾಡಿರುವ ಬಗ್ಗೆ ತನಿಖೆ ಹಾಗೂ ವಿಚಾರಣೆ ಕಾಲಕ್ಕೆ ಒಪ್ಪಿಕೊಂಡಿದ್ದು. ಸದರಿ ಆರೊಪಿತರಿಂದ ಸುಮಾರು 12 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳು, ನಗದು, ಮೊಬಾಯಿಲ್ ಮತ್ತು ಸರಗಳ್ಳತನ ಮಾಡಲು ಬಳಸುತ್ತಿದ್ದ 3 ಮೂರು ಮೊಟಾರ ಸೈಕಲಗಳು. ಒಂದು ಚಾಕು, ಸಿಮ್ ಕಾರ್ಡಗಳು ವಗೈರೆ ವಸ್ತುಗಳನ್ನು ಜಪ್ತು ಪಡಿಸಿಕೊಂಡು ವಿಶೇಷ ತನಿಖಾ ತಂಡದವರು ತನಿಖೆ ಮುಂದುವರೆಸಿದ್ದು ಆರೊಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.