POLICE BHAVAN KALABURAGI

POLICE BHAVAN KALABURAGI

04 May 2013

GULBARGA DISTRICT REPORTED CRIME


ಮಧ್ಯದ ಬಾಟಲಿಗಳು ವಶ:
ಮಹಾತ್ಮ ಬಸವೇಶ್ವರ ಪೊಲೀಸ್ ಠಾಣೆ:ದಿನಾಂಕ 03/05/2013 ರಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ ಶ್ರೀ ಬಸವರಾಜ ತೇಲಿ ಸಿ.ಪಿ.ಐ ಎಂ.ಬಿ ನಗರ ವೃತ್ತ ಗುಲಬರ್ಗಾರವರಿಗೆ ಖರ್ಗೆ ಪೆಟ್ರೋಲ್ ಪಂಪ್ ಹತ್ತಿರ ಓಮಿನಿ ಕಾರ ನಂ. MH 03 Z 3124 ನೇದ್ದರಲ್ಲಿ 03 ಜನರು ಅಕ್ರಮ ಸರಾಯಿ ಸಾಗಿಸುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಡಿ.ಎಸ್.ಪಿ ಗ್ರಾಮಾಂತರ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀಮಂತ ಇಲ್ಲಾಳ ಪಿ.ಎಸ್.ಐ ಎಂ.ಬಿ ನಗರ ಪೊಲೀಸ ಠಾಣೆ ಮತ್ತು ಅವರ ಸಿಬ್ಬಂದಿಯವರಾದ ಗಂಗಾಧರ, ಶ್ರೀನಿವಾಸರೆಡ್ಡಿ, ವೇದರತ್ನ, ಪಿ.ಸಿ.ರವರೊಂದಿಗೆ ಧ್ಯಾಹ್ನ 3:40 ಗಂಟೆಗೆ ಹೋಗಿ ದಾಳಿ ಮಾಡಿ ಓಮಿನಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಹೈವರ್ಡ್ಸ ಚೇರ್ಸ ವಿಸ್ಕಿ 48 X 180 ಎಂ.ಎಲ್ ನ 30 ಕಾರ್ಟನ ಬಾಕ್ಸಗಳಿದ್ದು ಅಃಕಿಃ 60,000/- ರೂಪಾಯಿಗಳದ್ದು, ಹಾಗು ಒಂದು ಓಮಿನಿ ಕಾರ್, ಕಾರಿನಲ್ಲಿದ್ದ 3 ಜನರನ್ನು ವಿಚಾರಿಸಲಾಗಿ 1) ರಾಕೇಶ ತಂದೆ ಮುರುಗೇಶ ಮುತ್ತಂಗಿ 2) ಗುಂಡಪ್ಪ ತಂದೆ ಬಸವಣಪ್ಪ ಫರತಾಬಾದ 3) ಪುಂಡಲಿಕ ತಂದೆ ರುಕ್ಮಣ್ಣಾ ಗಾಯವಾಡ ಎಲ್ಲರೂ ಸಾಃ ಗುಲಬರ್ಗಾ ಅಂತಾ ತಿಳಿಸಿದ್ದು ಸದರಿಯವರಿಗೆ  ದಾಖಲಾತಿಗಳ ಬಗ್ಗೆ ವಿಚಾರಿಸಲು ಯಾವುದೇ ದಾಖಲಾತಿಗಳು ಇಲ್ಲದೇ ಇರುವುದರಿಂದ ವಶಕ್ಕೆ ಅವರನ್ನು ವಶಕ್ಕೆ ತೆಗೆದುಕೊಂಡು ಸಿಪಿಐ ರವರು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:65/2013 ಕಲಂ 32, 34 ಕೆ.ಇ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.