POLICE BHAVAN KALABURAGI

POLICE BHAVAN KALABURAGI

10 December 2017

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 09-12-2017 ರಂದು ಅಫಜಲಪೂರ ಪಟ್ಟಣದ ಲಕ್ಮೀ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಲಕ್ಮಿಗುಡಿ ಹತ್ತಿರ ಹೋಗಿ  ಸ್ವಲ್ಪ ದೂರು ನಮ್ಮ ಇಲಾಖಾ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಲಕ್ಮೀಗುಡಿಯ ಮುಂದಿನ ರೋಡಿನ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶೇಟ್ಟೆಪ್ಪಾ ತಂದೆ ಹಣಮಂತ ಗಾಡಿವಡ್ಡರ ಸಾ|| ವೇಂಕಟೇಶ್ವರ ನಗರ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1010/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ರಾಘವೇಂದ್ರ ನಗರ ಠಾಣೆ : ದಿನಾಂಕ 09.12.2017 ರಂದು ಬೆಳ್ಳಿಗ್ಗೆ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಮಿಜಬಾ ನಗರ ಕ್ರಾಸ ದಿಂದ ಮಹ್ಮದಿ ಚೌಕ ಕಡೆಗೆ ಹೋಗುವ ರಸ್ತೆಯ ಮೇಲೆ ಟಿಪ್ಪರದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಬಾತ್ಮಿಯಂತೆ ಮೀಜಬಾ ನಗರ ಕ್ರಾಸ ದಿಂದ ಮಹ್ಮದಿ ಚೌಕ ಕಡೆಗೆ ಹೋಗುವ ರಸ್ತೆಯ ಮೇಲೆ ಬಂದು ರಸ್ತೆಯ ಮೇಲೆ ನಿಂತುಕೊಂಡಿದ್ದು ಒಂದು ಟಿಪ್ಪರ ಮೀಜಬಾ ನಗರ ಕ್ರಾಸ ದಿಂದ ಮಹ್ಮದಿ ಚೌಕ ಕಡೆಗೆ ಹೋಗುವ ರಸ್ತೆಯ ಮೇಲೆ ಬರುತ್ತಿರುವದನ್ನು ನೋಡಿ ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಟಿಪ್ಪರ ನಿಲ್ಲಿಸಿದ್ದು ಅದರ ನಂಬರ ಕೆಎ 32 ಸಿ 7566 ಅಂತ ಇದ್ದು ಸದರಿ ಟಿಪ್ಪರನ್ನು ಪರಿಶೀಲಿಸಿ ನೋಡಲು ಅದರಲ್ಲಿ ಕಪ್ಪು ಮರಳು ಇದ್ದು ಪಿ.ಎಸ್.ಐ. ಸಾಹೇಬರು ಸದರಿ ಟಿಪ್ಪರ ಚಾಲಕರಿಗೆ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಜಟ್ಟೆಪ್ಪ ತಂದೆ ಸಿದ್ದಪ್ಪ ಜಮಾದಾರ ಸಾ: ಅಳ್ಳಗಿ(ಬಿ) ತಾ: ಅಫಜಲಪೂರ ಜಿ: ಕಲಬುರಗಿ ಅಂತ ತಿಳಿಸಿದ್ದು ಸದರಿ ಟಿಪ್ಪರ ಚಾಲಕನಿಗೆ ಮರಳು ಸಾಗಾಟ ಮಾಡುತ್ತಿದ್ದ ಬಗ್ಗೆ ಕಾಗದ ಪತ್ರಗಳನ್ನು ಹಾಜರ ಪಡಿಸಿಲು ಸೂಚಿಸಿದ್ದು. ಸದರಿ ಟಿಪ್ಪರ ಚಾಲಕ ತನ್ನ ಹತ್ತಿರ ಯಾವುದೆ ದಾಖಲಾತಿಗಳು ಇರುವದಿಲ್ಲ ತಮ್ಮ ಮಾಲಿಕರಾದ ರಾಚಯ್ಯ ಸ್ವಾಮಿ ಸಾ:ಅಫಜಲಪೂರ ಇವರು ಹೇಳಿದಂತೆ ಮರಳು ಕಳ್ಳತನ ದಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದು ಬಗ್ಗೆ ತಿಳಿಸಿದ್ದು. ಸದರಿ ಟಿಪ್ಪರ ನಂ ಕೆಎ 32 ಸಿ 7566 ಅ:ಕಿ; 3 ಲಕ್ಷ ರೂ ಮತ್ತು ಅದರಲ್ಲಿ ಇದ್ದ ಅಂದಾಜ 6 ಬ್ರಾಸ ಕಪ್ಪ ಮರಳು ಅ:ಕಿ: 6,000/-ರೂ ನೇದ್ದು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು,  ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿನಿ ಅಪಹರಣ ಪ್ರಕರಣ :
ನೆಲೋಗಿ ಠಾಣೆ : ಶ್ರೀ ಯಮನಪ್ಪ ತಂದೆ ನಾಗಪ್ಪ ಮಳಗಿ ಸಾ|| ಬೆಣ್ಣೂರ ತಾ|| ಜೇವರ್ಗಿ ರವರ ಸಿದ್ದಮ್ಮಾ  12 ವರ್ಷದವಳಿದ್ದು, ಈಗ 7 ನೇ ತರಗತಿಯಲ್ಲಿ ವಸ್ತಾರಿ ಶಾಲೆಯಲ್ಲಿ ಓದುತ್ತಿದ್ದು ದಿನಾಲು ವಸ್ತಾರಿಗೆ ಶಾಲೆಗೆ ಹೋಗಿ ಬರುತ್ತಾಳೆ. ದಿನಾಂಕ: 6/12/2017 ರಂದು ಶಾಲೆಗೆ ಹೋಗಿ ಸಾಯಂಕಾಲ ಮನೆಗೆ ಬಂದಿದ್ದು ರಾತ್ರಿ ನಾವೆಲ್ಲರೂ ಊಟ ಮಾಡಿ ನನ್ನ ಮಕ್ಕಳಾದ ಸುನೀಲ ಮತ್ತು ಅನೀಲ ಇವರು ನಮ್ಮ ಹೊಲದಲ್ಲಿ ಹಾಕಿದ ಕುರಿಗಳ ಹತ್ತಿರ ಮಲಗಲು ಹೋದರು ನಾನು ನನ್ನ ಹೆಂಡತಿಯಾದ ತಾಯಮ್ಮಾ ಮತ್ತು ಮಗಳಾದ ಸಿದ್ದಮ್ಮಾ ಮನೆಯಲ್ಲಿ ಮಲಗಿಕೊಂಡೆವು ದಿನಾಂಕ: 7/12/2017 ರಂದು ಬೆಳಿಗ್ಗೆ 3:00 ಗಂಟೆಗೆ ಎದ್ದು ನೋಡಲಾಗಿ ನನ್ನ ಮಗಳು ಸಿದ್ದಮ್ಮಾ ಹಾಸಿಗೆಯಲ್ಲಿ ಇರಲಿಲ್ಲಾ ನಂತರ ನಾನು ನನ್ನ ಹೆಂಡತಿ ಕೂಡಿ ನನ್ನ ಮಕ್ಕಳಾದ ಅನೀಲ ಸುನೀಲ ಹತ್ತಿರ ಹೋಗಿರಬೇಕೆಂದು ಗಾಬರಿಯಾಗಿ ಅಲ್ಲಿಗೆ ಹೋಗಿ ನೋಡಲಾಗಿ ಅಲ್ಲಿಯು ಕೂಡಾ ಇರಲ್ಲಿಲ್ಲಾ ನಂತರ ನಾವೆಲ್ಲರೂ ಗಾಬರಿಯಾಗಿ ಊರಲ್ಲಿ ಹುಡಕಾಡಿದರು ಸಿಗಲಿಲ್ಲಾ. ನಂತರ ನಮಗೆ ತಿಳಿದು ಬಂದಿದೆನೆಂದರೆ ನನ್ನ ಮಗಳು ಶಾಲೆಯಿಂದ ಬರುವಾಗ ನನ್ನ ಮಗಳಿಗೆ ಚಂದ್ರಕಾಂತ ತಂದೆ ಮಾನಸಪ್ಪ ಮಾದರ ಇವನು ಚೂಡಾಯಿಸಿದ್ದಾನೆ ಅಂತ ನನ್ನ ಮಗಳು ನನಗೆ ಹೇಳಿದ್ದು ಅವನೆ ನನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ಅಪಹರಿಸಿಕೊಂಡು ಹೋಗಿರುತ್ತಾನೆ ಅಂತ ಅವನ ಮೇಲೆ ಸಂಶೆಯ ಇದೆ ಅವನ ವಿರುದ್ದ ಕಾನೂನು ಕ್ರಮ ಜರಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ: 25/10/2017 ರಂದು ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದಲ್ಲಿ ಶ್ರೀ ರಾಚಣ್ಣ ದೇವರ ಜಾತ್ರೆ ಮತ್ತು ಅಗ್ಗಿ ಹಾಯುವ ಕಾರ್ಯಕ್ರಮವಿದ್ದು  ಸದರಿ ಜಾತ್ರೆಗೆ ಮೃತ ಜಗದೇವಿ ಗಂಡ ಮಹಾಲಿಂಗಪ್ಪ ಮತ್ತು ಅವರ ಮಗ ಲಕ್ಷ್ಮಿಪುತ್ರ ಇಬ್ಬರು ಕೂಡಿಕೊಂಡು ಹೀರೊ ಹೊಂಡಾ ಸ್ಪ್ಲೆಂಡರ್ ಮೋಟರ್ ಸೈಕಲ್ ನಂ KA-32-V-4386 ನೇದ್ದರ ಮೇಲೆ ದುದನಿಯಿಂದ ಹೊರಟು ಬೆಳಿಗ್ಗೆ ಪಟ್ಟಣ ಗ್ರಾಮಕ್ಕೆ ಬರುವಾಗ ಪಟ್ಟಣ ಗ್ರಾಮದ ಟೋಲ ನಾಕಾ ಹತ್ತಿರ ಸದರಿ ಲಕ್ಷ್ಮಿಪುತ್ರ ಇತನು ತನ್ನ ವಶದಲ್ಲಿದ್ದ ತನ್ನ ಮೋಟರ್ ಸೈಕಲ್ನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಮೋಟರ್ ಸೈಕಲ್ ಚಲಾಯಿಸುತ್ತಾ ರೋಡಿನ ಜಂಪನಲ್ಲಿ ಜಂಪ ನೋಡದೇ ವೇಗದಲ್ಲಿ ಮೋಟಾರ ಸೈಕಲ ಚಲಾಯಿಸಿದ್ದರಿಂದ್ದ ಮೃತ ಜಗದೇವಿ ಇವಳು ಮೋಟಾರ ಸೈಕಲ ಮೇಲಿಂದ ಹಾರಿ ರೋಡಿನ ಮೇಲೆ ಬಿದ್ದು ಆತಳಿಗೆ ತಲೆಯ ಹಿಂಬಾಗದಲ್ಲಿ ಭಾರಿ ಗುಪ್ತಗಾಯಗಳಾಗಿ ಬೇಹೋಸ ಆಗಿದ್ದು ಅವಳನ್ನು ಉಪಚಾರ ಕುರಿತು ಕಲಬುರಗಿಯ ಯುನೈಟೇಡ್ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದ್ದು ಮೃತ ಜಗದೇವಿ ಇವಳು  ದಿನಾಂಕ:-25/10/2017 ರಿಂದ ದಿನಾಂಕ:-06/12/2017 ರವರೆಗೆ ಸದರಿ ಆಸ್ಪತ್ರೆಯಲ್ಲಿ ಉಪಚಾರ ಪಡೆದಿದ್ದು ಅವಳಿಗೆ ಸ್ವಲ್ಪ ಆರಾಮ ಆದಂತೆ ಕಂಡು ಬಂದಿದ್ದರಿಂದ್ದ ಅವಳನ್ನು ದಿನಾಂಕ:-06/12/2017 ರಂದು ಮದ್ಯಾಹ್ನ ಆಸ್ಪತ್ರೆಯಿಂದ ಡಿಚಾರ್ಚ ಮಾಡಿಸಿಕೊಂಡು ತಮ್ಮೂರಾದ ದುದನಿಗೆ ಕರೆದುಕೊಂಡು ಹೋಗಿದ್ದು. ನಂತರ ಇಂದು ದಿನಾಂಕ:- 09/12/2017 ರಂದು ಬೆಳಿಗ್ಗೆ ಮೃತ ಜಗದೇವಿ ಇವಳು ನೋವು ಆಗುತ್ತಿದೆ ಅಂತಾ ನರಳಾಡುತ್ತಿದ್ದರಿಂದ್ದ ಅವಳನ್ನು ಮೃತಳ ಗಂಡ ಮಹಾಲಿಂಗಪ್ಪ  ಮತ್ತು ಅವರ ಸ್ನೇಹಿತ ಬಸವರಾಜ ತಂದೆ ಸೈದಪ್ಪ ದಂಡೋತ್ತಿ ಇಬ್ಬರು ಪರಿಚಯದ ಗುಂಡಪ್ಪ ತಂದೆ ಮಲಕಣ್ಣಾ ಘತ್ತರಗಿ ಇವರ ಕಾರ ನಂ MH-16 R-2181 ರಲ್ಲಿ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿಗೆ ತರುವಾಗ ಮಾರ್ಗಮದ್ಯದಲ್ಲಿ ಅಂದರೇ ಕಲಬುರಗಿ ಸಮೀಪ ಮದ್ಯಾಹ್ನ 12:30 ಗಂಟೆಗೆ ಜಗದೇವಿ ಇವಳು ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.