POLICE BHAVAN KALABURAGI

POLICE BHAVAN KALABURAGI

07 February 2012

GULBARGA DIST REPORTED CRIME

ಹಲ್ಲೆ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ಮನೋಹರ ತಂದೆ ಮನೋಜ ತಂದೆ ಸಿದ್ಧಪ್ಪ ಮಾನಿನೂರ ಸಾ|| ಹದನೂರ ತಾ|| ಚಿತ್ತಾಪೂರ ಸಧ್ಯ ಜಯ ನಗರ ಗುಲಬರ್ಗಾರವರು ನಾನು ಮತ್ತು ನನ್ನ ಗೆಳೆಯನಾದ ನಾಗರಾಜ ಕಡಬೂರ ಗುಲಬರ್ಗಾದ ಸಮಾಧಾನ ಹೋಟಲ & ಬಾರನಲ್ಲಿ ಸರಾಯಿ ಕುಡಿದು ಹಿರೋ ಹೊಂಡಾ ಸ್ಪೆಂಡರ ಗಾಡಿಯ ಮೇಲೆ ಸಮರ್ಥ ವೈನಶಾಪ ಹತ್ತಿರುವ ಗೆಳೆಯರ ಭೇಟ್ಟಿ ಕುರಿತು ರಾತ್ರಿ 11-30 ಗಂಟೆ ಸುಮಾರಿಗೆ ಸಮರ್ಥ ವೈನಶಾಪ ಹತ್ತಿರ ಬಂದಿದ್ದು ವೈನ ಶಾಪ ಮುಚ್ಚಿದ್ದು ನೋಡಿ ನಾನು ವೈನಶಾಪ ಹತ್ತಿರ ಪಾನ ಡಬ್ಬಿ ಇಟ್ಟು ಕೊಂಡಿದ್ದ ಪರಿಚಯದ ಶ್ರೀಕಾಂತ ತಂದೆ ನಾಗರಾಜ ಬೆಡಪಲ್ಲಿ ಈತನಿಗೆ ವೈನಶಾಪ ಮಾಲೀಕನ ಮನೆಯು ಎಲ್ಲಿ ಇರುತ್ತದೆ ಎಂದು ಕೇಳಿದಾಗ ಶ್ರೀಕಾಂತನು ನನಗೆ ಗೊತ್ತಿಲ್ಲಾ ಎಂದು ಹೇಳಿದನು. ಅದಕ್ಕೆ ನಾನು ನಿನಗೆ ಎಲ್ಲಾ ಗೊತ್ತಿದೆ ಅಡ್ರೆಸ ಹೇಳು ಅಂತಾ ಕೇಳಿದ್ದಕ್ಕೆ , ಮತ್ತೆ ಶ್ರೀಕಾಂತನು ತನಗೇನು ಗೊತ್ತಿಲ್ಲಾ ಅಂತಾ ಹೇಳಲು ನಾನು ಸಿಟ್ಟಿಗೆ ಬಂದು ಅಲ್ಲೇ ಬಿದ್ದ ಕಲ್ಲು ತೆಗೆದುಕೊಂಡು ಶ್ರೀಕಾಂತ ಪಾನ ಡಬ್ಬಿಯ ಮೇಲೆ ಕಲ್ಲು ಒಗೆದು ಶೋ ಗ್ಲಾಸ ಒಡೆದೆನು. ಅಲ್ಲೇ ಹತ್ತಿರದಲ್ಲಿ ನಿಂತಿದ್ದ ಶ್ರೀಕಾಂತನ ತಂದೆ ನಾಗರಾಜ ಬೆಡಪಲ್ಲಿ ಈತನು ನನ್ನ ಹತ್ತಿರ ಬಂದು ನನಗೆ ಭೋಸಡಿ ಮಗನೇ ಎಲ್ಲಿಂದಲೂ ಬಂದು ರೌಡಿಜಂ ಮಾಡುತ್ತೀ ಮಗನೇ ಅಂತಾ ಬೈಯ್ಯುತ್ತಿದ್ದಾಗ ನಾನು ನನ್ನ ಹತ್ತಿರವಿದ್ದ ಮಚ್ಚ ತೆಗೆದು ನನಗೆ ಬೈಯ್ಯುತ್ತೀ ಮಗನೇ ಅಂತಾ ಹೆದರಿಸಲು ನಾಗರಾಜ ಬೆಡಪಲ್ಲಿ ಇತನು ನನ್ನ ತೆಕ್ಕಿ ಕುಸ್ತಿಗೆ ಬಿದ್ದು ನನ್ನ ಕೈಯಲ್ಲಿದ್ದ ಮಚ್ಚು ಕಸಿದುಕೊಂಡು ಹೊಡೆದು ರಕ್ತಗಾಯಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 39/2012 ಕಲಂ 504,307,324 ಸಂ. 34 ಐಪಿಸಿ ಮತ್ತು 3(1), (10) ಎಸ್.ಸಿ./ಎಸ್.ಟಿ.ಎಕ್ಟ 1989 ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.