POLICE BHAVAN KALABURAGI

POLICE BHAVAN KALABURAGI

21 May 2014

Gulbarga District Reported Crimes

ಮಟಕಾ ಜೂಜಾಟ ನಿರತ ವ್ಯಕ್ತಿಯ ಬಂಧನ :
ಮಾದನಹಿಪ್ಪರಗಾ ಠಾಣೆ : ದಿನಾಂಕ: 20-05-2014 ರಂದು 11;30 ಎ.ಎಮ್.ಕ್ಕೆ ದರ್ಗಾಶಿರೂರ ಗ್ರಾಮದ ಬಸವೇಶ್ವರ ದೇವಾಲಯದ ಹತ್ತಿರ ಒಬ್ಬ ವ್ಯಕ್ತಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮೀ ಬಂದ ಮೇರೆಗೆ ಸಿಬ್ಬಂದಿ ಮತ್ತು ಪಂಚರೊಂದಿಗೆ ಹೋಗಿ ದಾಳಿ ಮಾಡಿ ಮಟಕಾ ಬರೆದುಕೊಳ್ಳುತ್ತಿದ ರಾಜೇಶ @ ರಾಜೇಂದ್ರ ತಂದೆ ಮಾಣಿಕರಾವ ಮರಬೆ ಸಾ: ದರ್ಗಾಶಿರೂರ ಇವನಿಗೆ ಹಿಡಿದು ಅವನ ಹತ್ತಿರ ನಗದು ಹಣ 510=00 ರೂಪಾಯಿ, ಒಂದು ಬಾಲ ಪೇನ್ನು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಜಪ್ತಿ ಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಕರಣಯ್ಯಾ ತಂದೆ ವೀರಯ್ಯಾ ಮಠಪತಿ ಸಾ: ಆಲೂರ ತಾ: ಆಳಂದ ಹಾ;ವ: ಕೇಶವರಾವ ದೇಶಪಾಂಡೆ ರವರ ಮನೆಯಲ್ಲಿ ಬಾಡಿಗೆ ಚಾಣಕ್ಯ ಆಂಗ್ಲ ಮಾಧ್ಯಮ ಶಾಲೆಯ ಎದುರುಗಡೆ ಶಾಂತಿ ನಗರ ಗುಲಬರ್ಗಾ  ರವರು ದಿನಾಂಕ 17-05-2014 ರಂದು ರಾತ್ರಿ 9 ಗಂಟೆಗೆ ದಿನದ ಕಲೇಕ್ಷನ್ ಎಂದಿನಂತೆ ಮನೆಗೆ ತೆಗೆದುಕೊಂಡು ಹೋಗಿದ್ದೇನೆ. ಮನೆಯಲ್ಲಿ ಪ್ಯಾಂಟನ್ನು ಹ್ಯಾಂಗರಕ್ಕೆ ಸಿಗಿಸಿದ್ದು ಅದರಲ್ಲಿ ಕಲೇಕ್ಷನ ಹಣ 49,000/- ರೂ ಅದರಲ್ಲೆ ಇದ್ದು ರಾತ್ರಿ ಮಲಗಿರುವಾಗ ಯಾರೋ ಅಪರಿಚಿತ ಕಳ್ಳರು ಕಿಡಕಿಯ ಮೂಲಕ ಕೊಲನ್ನು ಉಪಯೋಗಿಸಿ ಪ್ಯಾಂಟನ್ನು ತೆಗೆದುಕೊಂಡು ಹೋಗಿದ್ದಾನೆ. ಬೆಳಗಿನ ಜಾವ ದಿನಾಂಕ 18-05-2014 ರಂದು 6 ಗಂಟೆ ಸುಮಾರಿಗೆ ಎದ್ದು ನೋಡಿದಾಗ ಪ್ಯಾಂಟ ಹ್ಯಾಂಗರಕ್ಕೆ ಕಾಣಲಿಲ್ಲಾ.ನನ್ನ ಪ್ಯಾಂಟ ಎಲ್ಲಿ ಎಂದು ಹುಡುಕುತ್ತಿದ್ದಾಗ ಮನೆಯ ಹಿಂದುಗಡೆ ಬಿದ್ದಿದ್ದು  ಅದರ ಜೇಬಿನಲ್ಲಿದ್ದ ಹಣ ಮತ್ತು ಪ್ಯಾಕೇಟ ನೋಡಲು ಇರಲಿಲ್ಲಾ ಎಲ್ಲಾ ಕಡೆ ಹುಡುಕಿದರೂ ಸಿಕ್ಕಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ದಿನಾಂಕ 20/05/2014 ರಂದು 1330 ಗಂಟೆಗೆ ಸರ್ಕಾರಿ ಆಸ್ಪತ್ರೆ ಶ್ರೀಮತಿ ಶೋಭಾ ಗಂಡ ಮಹಾಂತಪ್ಪ ಕಲ್ಲೂರ ಸಾ|| ಹಡಲಗಿ ಇವರಿಗು ಹಾಗೂ 1. ಆನಂದ ತಂದೆ ಲಗಮಣ್ಣ ಅತ್ತೆ2. ಕುಪೇಂದ್ರ ತಂದೆ ಭೀಮಶಾ ಅತ್ತೆ, 3. ಶಿವಾನಂದ ತಂದೆ ಶ್ರೀಮಂತ ಪರೀಟ4. ಶಿವಾನಂದ ತಂದೆ ಆಣ್ಣಪ್ಪಾ ಅತ್ತೆ, 5. ಹಣಮಂತ ತಂದೆ ಲಗಮಣ್ಣ ಅತ್ತೆ6. ರಾಮಣ್ಣಾ ತಂದೆ ಲಗಮಣ್ಣ ಅತ್ತೆ, 7. ರವಿ ತಂದೆ ಲಗಮಣ್ಣ ಅತ್ತೆ8. ಭೋಗೆಶ ತಂದೆ ಹಣಮಂತ ಅತ್ತೆ, 9.ವೀರಣ್ಣಾ ತಂದೆ ಲಗಮಣ್ಣ ಅತ್ತೆ10. ಧರೆಪ್ಪ ತಂದೆ ಯಶವಂತ ಅತ್ತೆ,11. ಮಡಿವಾಳ ತಂದೆ ಅಣ್ಣಪ್ಪ ಅತ್ತೆ112. ರಮೇಶ ತಂದೆ ಯಶವಂತ ಅತ್ತೆ, 13. ಮಹಾದೇವ ತಂದೆ ಭೀಮಶಾ ಅತ್ತೆ14. ಸಿದ್ದಾರಾಮ ತಂದೆ ಶಿವಪುತ್ರ ಅತ್ತೆ, 15. ಸಿದ್ದಾರಾಮ ತಂದೆ ನಾಗಣ್ಣಾ ಮಠ ಎಲ್ಲರೂ ಸಾ|| ಹಡಲಗಿ. ಇವರಿಗೆ  ಹೊಲದ ಸಂಭಂಧ ಹಳೆಯ ದ್ವೇಶವಿದ್ದು ಇದೇ ದ್ವೇಶದಿಂದ ದಿನಾಂಕ 20-05-2014 ರಂದು 1145 ಗಂಟೆಗೆ ಆರೋಪಿತರು ಫಿರ್ಯಾದಿಯ ಹೊಲವನ್ನು ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದಾಗ ಫಿರ್ಯಾದಿ ಹಾಗೂ ಅವರ ಕಡೆಯವರು ಸಾಗುವಳಿ ಮಾಡದಂತೆ ಕೇಳಿಕೊಂಡಿದ್ದು ಅದಕ್ಕೆ ಆರೋಪಿತರೆಲ್ಲರೂ ಫಿರ್ಯಾದಿ ಹಾಗೂ ಅವರ ಕಡೆಯವರಿಗೆ ಅಕ್ರಮ ಕೂಟ ಕಟ್ಟಿಕೊಂಡು ಅವಾಚ್ಯ ಶಬ್ದಗಳಿಂದ ಬೈದು ಜೀವ ಭಯ ಹಾಕಿ ಕೊಲೆ ಮಾಡುವ ಉದ್ದೇಶದಿಂದ ಕೊಡಲಿಬಡಿಗೆಸತೂರಿ ಗಳಿಂದ ಹೊಡೆ ಬಡೆ ಮಾಡಿ ಗಂಭೀರ ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಮಾಡಿದ ವಾಹನ ಜಪ್ತಿ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕ 19-02-2014 ರಂದು 11.00 ಪಿ.ಎಂ. ದಿಂದ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ತಡೆಗಟ್ಟುವ ಸಂಬಂಧ ಸಿಬ್ಬಂದಿಯವರೊಂದಿಗೆ ಪೆಟ್ರೋಲಿಂಗ್ ಕರ್ತವ್ಯ ಮಾಡುತ್ತಿರುವಾಗ, ದಿನಾಂಕಃ 20-05-2014 ರಂದು 05:00 ಗಂಟೆ ಸುಮಾರಿಗೆ ಬಸವೇಶ್ವರ ಕಾಲೋನಿ ಆಟೋ ಸ್ಟ್ಯಾಂಡ್ ಹತ್ತಿರ ನಿಂತಿರುವಾಗ ನಮ್ಮ ಎದರುಗಡೆಯಿಂದು ಒಂದು ಮೋಟಾರ ಸೈಕಲ ಮೇಲೆ 02 ಜನರು ಕುಳಿತುಕೊಂಡು ಸಂತ್ರಾಸವಾಡಿ ಕಡೆಯಿಂದ ಬರುತ್ತಿರುವಾಗ ಸದರಿ ಮೊಟಾರ ಸೈಕಲ ನಂಬರ ಪ್ಲೇಟ್ ಇಲ್ಲದ ಕಾರಣ ಅವರ ಮೇಲೆ ಬಲವಾಸ ಸಂಶಯ ಬಂದಿದ್ದು ಅವರ ಕೈ ಮಾಡಿ ನಿಲ್ಲಿಸಲು ಸೂಚಿಸಿದರೂ ಸಹ ನಿಲ್ಲಿಸದೇ ತಮ್ಮ ಮೋಟಾರ ಸೈಕಲನ್ನು ಹಾಗೆ ಚಲಾಯಿಸಿಕೊಂಡು ಓಡಿ ಹೋಗುತ್ತಿರುವಾಗ ಸದರಿಯವರಿಗೆ ನಾವು ಬೆನ್ನು ಹತ್ತಿ ಆದರ್ಶ ನಗರ ಶಾಲೆಯ ಹತ್ತಿರ ಹಿಡಿಯಲು ಅದರಲ್ಲಿ ಒಬ್ಬನು ಓಡಿ ಹೋಗಿರುತ್ತಾನೆ. ಇನ್ನೊಬ್ಬನಿಗೆ ಹೆಸರು ವಗೈರೆ ವಿಚಾರಿಸಲು ಅವನು ತನ್ನ ಹೆಸರು 1. ಶೋಹೆಬ್ ತಂದೆ ಬಾಷುಮಿಯಾ  ಸಾಃ ಸಂತ್ರಾಸವಾಡಿ ಉಪ್ಪರಗಲ್ಲಿ ಗುಲಬರ್ಗಾ ಅಂತಾ ತಿಳಿಸಿದನು. ಸದರಿಯವನಿಗೆ ಓಡಿ ಹೋದವನ ಹೆಸರು ವಿಚಾರಿಸಲು ಇಮ್ರಾನ್ ಸಂತ್ರಾಸವಾಡಿ ಅಂತಾ ತಿಳಿಸಿದನು. ಸದರಿಯವನ ಹತ್ತಿರವಿದ್ದ ಕಪ್ಪು ಮತ್ತು ಹಳದಿ ಬಣ್ಣದ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ ನಂಬರ ಇಲ್ಲದಿದ್ದು. ಸದರಿಯವನಿಗೆ ಮೋಟಾರ ಸೈಕಲಿನ ಕಾಗದ ಪತ್ರಗಳ ಬಗ್ಗೆ ವಿಚಾರಿಸಲು ಯಾವುದೇ ಕಾಗದ ಪತ್ರಗಳು ಇರುವುದಿಲ್ಲಾ ಅಂತಾ ತಿಳಿಸಿದನು. ಸದರಿ ಮೋಟಾರ ಸೈಕಲ ಎಲ್ಲಿಂದ ತಂದಿರುತ್ತೀರಿ ಎಲ್ಲಿಗೆ ಹೋಗುತ್ತಿದ್ದೀರಿ ಅಂತ ಪ್ರಶ್ನಿಸಲು ಯಾವುದೇ ಸಮರ್ಪಕವಾದ ಉತ್ತರ ಕೊಟ್ಟಿರುವುದಿಲ್ಲಾ. ಸದರಿಯವರು ಎಲ್ಲಿಂದಲೂ ಕಳ್ಳತನ ಮಾಡಿಕೊಂಡು ಬಂದಿರಬಹುದು ಅಂತಾ ಬಲವಾದ ಸಂಶಯ ಬಂದಿದ್ದು ಸದರಿಯವನ ಹತ್ತಿರವಿದ್ದ ನಂಬರ ಪ್ಲೇಟ್ ಇಲ್ಲದ ಒಂದು ಕಪ್ಪು ಮತ್ತು ಹಳದಿ ಬಣ್ಣದ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ ಇದ್ದು ಪರಿಶೀಲಿಸಲು ಅದರ ಚೆಸ್ಸಿ ನಂ. 03K16F09078 ಇದ್ದು ಹಾಗು ಇಂಜನ್ ನಂಬರ 03K15E09843 ಇದ್ದು ಅದರ ಅಂದಾಜು ಕಿಮ್ಮತ್ತು 20,000/- ರೂ. ಸದರಿಯವನೊಂದಿಗೆ ಠಾಣೆಗೆ ಬಂದು ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.