POLICE BHAVAN KALABURAGI

POLICE BHAVAN KALABURAGI

21 March 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಚೌಕ ಠಾಣೆ : ದಿನಾಂಕ 19/03/2014 ರಂದು  ಮುಂಜಾನೆ 11.00ಗಂಟೆ ಸುಮಾರಿಗೆ ಗುಲಬರ್ಗಾ  ನಗರದ ಚೌಕ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶಿವಾಜಿ ನಗರ ಬಡಾವಣೆಯಲ್ಲಿ ಮಸೂತಿಯ  ಎದರುಗಡೆ  ಖೋಬಾಜಿ ತಂದೆ ಬೀಮರಾವ್ ಪವಾರ  ಸಾ- ಶಿವಾಜಿನಗರ, ಇತನು ಕುಳಿತುಕೊಂಡು ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟ ನಡೆಸುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ಗುಲಬರ್ಗಾ ದ  ಡಿಸಿಐಬಿ ಘಟಕದ ಸಿಬ್ಬಂದಿಯವರು ಘಟಕದ ಫ್ರಭಾರದಲ್ಲಿರುವ ಶ್ರೀ. ಯು.ಶರಣಪ್ಪ. ಪೊಲೀಸ್ ಇನ್ಸಪೆಕ್ಟರ ರವರ ಮಾರ್ಗದರ್ಶನದಲ್ಲಿ ಶ್ರೀ.ದತ್ತಾತ್ರೇಯ ಎ.ಎಸ್.ಐ ಹಾಗೂ ಅವರ ಸಿಬ್ಬಂದಿಯವರು ಕೂಡಿ ದಾಳಿ ಮಾಡಿ ಸದರಿಯವನಿಗೆ ಹಿಡಿದುಕೊಂಡು ಅವನ ಕಡೆಯಿಂದ ಮಟಕಾ ಚೀಟಿ, ಬಾಲ್ ಪೆನ್ನು, ಹಾಗೂ ನಗದು ಹಣ 18,00/- ರೂಪಾಯಿ, ಜಪ್ತು ಮಾಡಿಕೊಂಡು  ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.