POLICE BHAVAN KALABURAGI

POLICE BHAVAN KALABURAGI

23 March 2013

GULBARGA DISTRICT REPORTED CRIMES


ಕೊಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ದಿನಾಂಕ: 23-03-2013 ರ ಬೆಳಿಗ್ಗೆ 11-30 ಗಂಟೆಯ ಸುಮಾರಿಗೆ ಫಿರದೋಸ ತಂದೆ ರಸೂಲ ಸಾಬ ವಯಾ|| 20 ವರ್ಷ, ಇತನ ಮೃತ ದೇಹವು ಉಪಳಾಂವ ಸೀಮಾಂತರದ ಅಂಬಾರಾವ ಮಾಲಿ ಪಾಟೀಲ ಎಂಬುವವರ ಹೊಲದಲ್ಲಿ ಬಿದ್ದಿದ್ದು ತಿಳಿದುಕೊಂಡು ನಾನು ಮತ್ತು ನನ್ನ ಮಗನಾದ ಫಾರೂಕ ಹಾಗೂ ಅಫ್ರೋಸ ಇತರರು ಕೂಡಿಕೊಂಡು ಮಧ್ಯಾಹ್ನ ಗಂಟೆಯ ಸುಮಾರಿಗೆ ಹೋಗಿ ನೋಡಲು ನನ್ನ ಸಾಕು ಮಗನಾದ ಅಂದರೆ ನನ್ನ ಗಂಡನ ಅಕ್ಕ ಸಮಿನಾ ಇವಳ ಮಗ ಫಿರದೋಸನ ಮೃತ ದೇಹವಿದ್ದು, ಫಿರದೋಸ ಇತನಿಗೆ ದೇಹದ ಕುತ್ತಿಗೆಯ ಎಡಭಾಗ, ಬಲ ಭಾಗ ಮತ್ತು ಹಿಂದುಗಡೆ ಹರಿತವಾದ ಆಯುಧದಿಂದ ಹೊಡೆದಿರುವ ಭಾರಿ ರಕ್ತಗಾಯಗಳಿದ್ದು ಮತ್ತು ಎದೆಯ ಮೇಲೆ ರಕ್ತಗಾಯವಾಗಿದೆ. ಎದೆಯ ಎಡಭಾಗದಲ್ಲಿ ಮಾಂಸ ಖಂಡಗಳು ಯಾವುದೋ ಕಾಡು ಪ್ರಾಣಿಗಳು ತಿಂದಂತೆ ಕಂಡುಬರುತ್ತಿದ್ದೆ. ಈ ಕೊಲೆಯು ದಿನಾಂಕ:22/03/2013 ರಂದು ರಾತ್ರಿ 7:00 ಗಂಟೆಯಿಂದ ದಿನಾಂಕ:23/03/2013 ರ ಬೆಳಿಗ್ಗೆ 11:00 ಗಂಟೆಯ ಮಧ್ಯದ ಅವಧಿಯಲ್ಲಿ ನಡೆದಿರಬಹುದು. ಕೊಲೆ ಮಾಡಿದವರನ್ನು ಪತ್ತೆ ಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ತಾಹೇರಾಬೇಗಂ ಗಂಡ ಮಹ್ಮದ ಅಯ್ಯುಬ ಖಾನ ವಯಾ||40 ವರ್ಷ ಸಾ|| ಹಸನ ಮಜ್ಜಿದ ಹತ್ತಿರ ಖಮರ ಕಾಲೋನಿ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 150/2013 ಕಲಂ. 302  ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಪೊಲೀಸ್ ಠಾಣೆ: ಶ್ರೀ ಮಹಾದೇವ ತಂದೆ ನರಸಿಂಗ ವಯಾ:64 ವರ್ಷ,ಸಾ: ಚಿತಾರಿ ಅಡ್ಡೆ ಎದುರುಗಡೆ ಉದಯ ನಗರ ಗುಲಬರ್ಗಾರವರು ನನ್ನ ಮಗನಾದ ದೀಪಕ ಮತ್ತು ಗುರುಪುತ್ರ @ ಗುರುರಾಜ ಇಬ್ಬರೂ ಕೂಡಿಕೊಂಡು ದಿನಾಂಕ:22-03-2013 ರಂದು  ರಾತ್ರಿ 8-00 ಗಂಟೆ ಸುಮಾರಿಗೆ ಹಳೆ ಜೇವರ್ಗಿ ರೋಡಿನಲ್ಲಿ ಬರುವ ಮೆಡಿಪ್ಲಸ್ ಅಂಗಡಿಯಿಂದ ಗಣೇಶ ನರಸಿಂಗ ಹೋಮ ಕಡೆಗೆ ಹೋಗಬೇಕೆಂದು ರೋಡ ದಾಟುತ್ತಿದ್ದಾಗ ರಾಮ ಮಂದಿರ ರಿಂಗ ರೋಡ ಕಡೆಯಿಂದ  ಮೋಟಾರ ಸೈಕಲ್ ನಂ:ಕೆಎ-32 ಇಬಿ-8011  ನೇದ್ದರ ಸವಾರ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗನಿಗೆ  ಡಿಕ್ಕಿ ಪಡಿಸಿ ಭಾರಿ ಗಾಯಗೊಳಿಸಿ ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ ಮಹಾದೇವ ರವರು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 20/2013 ಕಲಂ, 279, 338, ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.


GULBARGA DISTRICT REPORTED CRIMES


ಅತ್ಯಾಚಾರ ಪ್ರಕರಣ:
ವಾಡಿ ಪೊಲೀಸ್ ಠಾಣೆ;ದಿನಾಂಕ:21-03-2013 ರಂದು ರಂದು ರಾತ್ರಿ ಊಟ ಮಾಡಿದ ನಂತರ ನಾನು ಮನೆಯ ಮುಂದೆ ಅಂಗಳದಲ್ಲಿ ಮಲಗಿದ್ದು, ರಾತ್ರಿ 11-30 ಗಂಟೆಯ ಸುಮಾರಿಗೆ ನಮ್ಮ ಮನೆಯ ಹತ್ತಿರವಿರುವ ರುದ್ರಪ್ಪಾ ತತ್ಯಾಂದೆ ಯಲ್ಲಪ್ಪ  ಗಡ್ಡಿಮನಿ ವಯಾ|| 30 ವರ್ಷ ಸಾ|| ಕೊಂಚುರ ತಾ||ಚಿತಾಪೂರ ಇತನು ನನ್ನ ಹತ್ತಿರ ಬಂದವನೆ ಒಮ್ಮೆಲೆ ನನ್ನ ಬಾಯಿ ಒತ್ತಿ ಹೀಡಿದು ಚೀರಾಡಿದರೆ ಹೊಡೆಯುತ್ತೆನೆ ಅಂತಾ ನನ್ನನ್ನು ಏಳೆದುಕೊಂಡು ಹೋಗಿ ಗುಡಿಯ ಕಟ್ಟೆಯ ಮೇಲೆ ಮಲಗಲು ಹೇಳಿದನು ನಾನು ಮಲಗುವದಿಲ್ಲಾ ಅಂತಾ ತಲೆ ಆಲ್ಲಾಡಿಸಿದರು ಕೂಡಾ ಕಟ್ಟೆಯ ಮೇಲೆ ಒತ್ತಾಯ ಮಾಡಿ ಮಲಗಿಸಿ ನಾನೆ ನಿನಗೆ ಆಳುತ್ತೆನೆ, ನಿನಗೆ ಮದುವೆಯಾಗುತ್ತೆನೆ ಅಂತಾ ಹೇಳಿ ಜಭರಿ ಸಂಭೋಗ ಮಾಡಿದನು. ನಾನು ಅಳುತ್ತಾ ಅಲ್ಲಿಂದ ನಮ್ಮ ಮನೆಯ ಅಂಗಳದಲ್ಲಿ ಬಂದು ಮಲಗಿದೆನು. ಮುಂಜಾನೆ ನಮ್ಮ ತಂದೆಗೆ ಮತ್ತು ನಮ್ಮ ದೊಡ್ಡಮ್ಮಳಾದ ರತ್ನಮ್ಮಾಳಿಗೆ ವಿಷಯ ತಿಳಿಸಿದೆನು. ನನಗೆ ಮದುವೆಯಾಗುತ್ತೆನೆ ಅಂತಾ ಜಬರದಸ್ತಿಯಿಂದ ಸಂಭೋಗ ಮಾಡಿದವನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ನೊಂದ ಯುವತಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:42/2013 ಕಲಂ, 506, 376 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ಶಿವಶಂಕರ ತಂದೆ ದೌಲಪ್ಪ ಹತ್ತರಗಿ ವಯಾ|| 52 ಸಾ|| ಮಲ್ಲಿಕಾರ್ಜುನ ಗುಡಿ ಹತ್ತಿರ ಹೀರಾಪೂರ ರವರು ನಾನು ದಿನಾಂಕ:21-03-13 ರಂದು ಸಂಜೆ 7-00 ಗಂಟೆ ಸುಮಾರಿಗೆ ಬಿದ್ದಾಪೂರ ಕಾಲೋನಿಯ ಉದ್ಯಾನ ವೈನ ಶಾಪದ ಹಿಂದಿನ ಖುಲ್ಲಾ ಜಾಗೆಯಲ್ಲಿ ಕುಡಿಯುತ್ತಾ ಕುಳಿತಾಗ ಸುದೋಧನ, ಶರಣಪ್ಪ ಸಾ:ಇಬ್ಬರು ಸಿದ್ದಾರ್ಥ ನಗರ ಗುಲಬರ್ಗಾ ಇವರು ಬಂದು, ಬೇರೆ ಕಡೆಯಿಂದ ಮಧ್ಯ ಖರೀದಿ ಮಾಡಿಕೊಂಡು ಇಲ್ಲಿ ಬಂದು ಕುಡಿಯುತ್ತೀ ಮಗನೇ ಅಂತಾ ಅವಾಚ್ಯವಾಗಿ ಬೈದು ಕಲ್ಲಿನಿಂದ ಬಲ ತಲೆಯ ಮೇಲೆ  ಮತ್ತು ಕೈಯಿಂದ ಬೆನ್ನ ಮೇಲೆ ಹೊಡೆದು ರಕ್ತಗಾಯ ಗುಪ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 147/2013 ಕಲಂ, 323, 324, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.