POLICE BHAVAN KALABURAGI

POLICE BHAVAN KALABURAGI

04 May 2015

KALABURAGI DISTRICT REPORTED CRIMES

ಕಳವು ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ದಿ: 3.05.2015 ರಂದು ಸುಖದೇವ ತಂದೆ ಸತ್ತುಬಾ ಕೊಡ್ಲೇಕರ್ ಸಾ: ಡ್ಯಾಬೇರಿ ಜಿ:ವಿಜಯಪುರ ಠಾಣೆಗೆ ಹಾಜರಾಗಿ ತಾನು ಜೇವರ್ಗಿ ತಾಲ್ಲೂಕಿನ ರೇವನೂರ ಸಿಮಾಂತರದ ಹೊಲಗಳಲ್ಲಿ ನಮ್ಮ ಕುರಿಗಳನ್ನು ಮೇಯಿಸಿ ವಿಜಯಪುರ ಜೇವರಗಿ ರೋಡಿನ ಪಕ್ಕದ ಹೆಲಿಕ್ಯಾಕ್ಟರ್ ಇಳಿಯು ಜಾಗದ ಮುಂದಿನ ಹೊಲದಲ್ಲಿ ನಾವು ನಿಲ್ಲಿಸಿದ್ದ ನಮ್ಮ ಕುರಿಗಳಲ್ಲಿ ಯಾರೋ ಅಪರಿಚಿತ ಕಳ್ಳರು 3 ಆಡುಗಳು ಮತ್ತು 17 ಕುರಿಗಳು ಒಟ್ಟು ಅ.ಕಿ.41.000/- ರೂ ನೇದ್ದವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ಕಳ್ಳತನವಾದ ಕುರಿಗಳನ್ನು ಮತ್ತು ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ :
ಸೇಡಂ ಪೊಲೀಸ್ ಠಾಣೆ: ದಿ:03-05-2015 ನಾಚವಾರ ಗ್ರಾಮದ ಬೋವಿ ಹಣಮಂತ ಅನ್ನುವವರು ತೀರಿಕೊಂಡಿದ್ದರಿಂದ, ನಾಚವಾರ ಗ್ರಾಮಕ್ಕೆ ದ್ಯಾವಣ್ಣ ತಳವಾರ ಇವರ ಟ್ರಾಕ್ಟರ್ ನಂ-KA-32-TA-2435 ಅದರ ಟ್ರ್ಯಾಲಿ ನಂ-KA-32-TA-2439 ನೇದ್ದರಲ್ಲಿ ಹೋಗಿ ಮರಳಿ ಬರುವಾಗ, ಟ್ರಾಕ್ಟರ್ ಚಾಲಕ ಸಿದ್ದಪ್ಪ ತಂದೆ ವಿಠಲ್ ಹಡಪದ್ ಸಾ:ಗೌಡನಳ್ಳಿ ಇತನು ಟ್ರಾಕ್ಟರನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ನಾಚವಾರ ಕ್ರಾಸನ ಬಲ ತಿರುವಿನಲ್ಲಿ ಕಟ್ ಹೊಡೆದಾಗ ಟ್ರಾಕ್ಟರ್ ಟ್ರ್ಯಾಲಿ ಪಲ್ಟಿಯಾಗಿದ್ದರಿಂದ, ಟ್ರಾಕ್ಟರ್ ಚಾಲಕ 1.ಸಿದ್ದಪ್ಪ ತಂದೆ ವಿಠಲ್ ಹಡಪದ್, 2.ದೇವಿಂದ್ರಪ್ಪ ತಂದೆ ಸಿದ್ರಾಮಪ್ಪ ಬೆಳಗೇರಿ, 3.ಭೀಮರಾಯ ತಂದೆ ಮೊನಪ್ಪ ಬಡಿಗೇರ, 4.ಶಿವರಾಯ ತಂದೆ ರಾಮಯ್ಯ ಕಲಾಲ, 5.ದೇವಪ್ಪ ತಂದೆ ದ್ಯಾವಣ್ಣ ಜುಟಲಾರ ಎಲ್ಲರೂ ಸಾ:ಗೌಡನಳ್ಳಿ ಗ್ರಾಮದವರು ಇವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಅಲ್ಲದೇ ಟ್ರಾಕ್ಟರ್ ದಲ್ಲಿ ಕುಳತಿದ್ದ 18 ಜನರಿಗೆ ಸಾದಾ ಹಾಗೂ ಭಾರಿ ಗುಪ್ತ ಮತ್ತು ರಕ್ತಗಾಯಗಳಾದ ಬಗ್ಗೆ ಭೀಮರೆಡ್ಡಿ ತಂದೆ ಮಲರೆಡ್ಡಿ ಮೂನೂರ, ಸಾ:ಗೌಡನಳ್ಳಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂಧ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.