ಕೊಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕಃ 27/11/2016 ರಂದು 2.00ಪಿಎಂ ಸುಮಾರಿಗೆ ಜಯನಗರದಲ್ಲಿರುವ ನನ್ನ ರೂಮಿನಿಂದ ಯಾರಿಗೂ ಹೇಳದೆ-ಕೇಳದೆ ಹೋಗಿದ್ದು, ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ ಕಾಣೆಯಾಗಿರುತ್ತಾರೆ. ಕಾಣೆಯಾದ ನನ್ನ ತಂದೆ ಸಿದ್ದನಗೌಡ ಮತ್ತು ಮಾವನಾದ ಮಲ್ಲಾರೆಡ್ಡಿ ಇವರನ್ನು ಪತ್ತೆಮಾಡಿಕೊಡಬೇಕು ಅಂತಾ ತಮ್ಮ ಠಾಣೆಯಲ್ಲಿ ಗುನ್ನೆ ನಂ. 139/2016 ಕಲಂ ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿದ್ದು ನಾವು ನಮ್ಮ ತಂದೆಯಾದ ಸಿದ್ದನಗೌಡ ಮತ್ತು ಮಾವನಾದ ಮಲ್ಲಾರೆಡ್ಡಿ ಇವರು ಕಾಣೆಯಾಗಿದ್ದರ ಬಗ್ಗೆ ನಮ್ಮ ಸಂಬಂಧಿಕರಿಗೆ ಹಾಗೂ ಪರಿಚಯದವರಿಗೆ ವಿಷಯ ತಿಳಿಸಿ ಸಿಕ್ಕಲ್ಲಿ ನಮಗೆ ಮಾಹಿತಿ ನೀಡುವಂತೆ ಹಾಗೂ ನಾವು ಕೂಡಾ ಎಲ್ಲಾ ಕಡೆಗೆ ಅವರ ಪತ್ತೆ ಬಗ್ಗೆ ವಿಚಾರಿಸುತ್ತಿದ್ದು, ನನಗೆ ನಮ್ಮ ತಂದೆ ಸಿದ್ದನಗೌಡ ಮತ್ತು ಮಾವನಾದ ಮಲ್ಲಾರೆಡಿ ಇವರು ಭೇಟಿ ಆಗಲೆಂದು ಕಲಬುರಗಿಗೆ ಬಂದು ಹೋಗಿದ್ದರಿಂದ ಕಲಬುರಗಿ ನಗರದಲ್ಲಿ ನನಗೆ ಪರಿಚಯದ ಬಸವೇಶ್ವರ ಆಸ್ಪತ್ರೆಯ ಮುಂದುಗಡೆ ಭಜಿಬಂಡಿ ಇಟ್ಟುಕೊಂಡಿರುವ ಅಂಬರೀಷ ತಂದೆ ಶರಣಪ್ಪ ಗೌಡ ಹಾಗೂ ನಾಗರೆಡ್ಡಿ ತಂದೆ ಸಾಹೇಬಗೌಡ ಇವರಿಗೆ ನಮ್ಮ ತಂದೆ ಹಾಗೂ ಮಾವ ಕಾಣೆಯಾದ ಬಗ್ಗೆ ತಿಳಿಸಿದಾಗ ಅವರು ತಿಳಿಸಿದ್ದೇನೆಂದರೆ, ದಿನಂಕಃ
27/11/2016 ರಂದು ನಿಮ್ಮ ತಂದೆ ಸಿದ್ದನಗೌಡ ಹಾಗು ಮಾವನಾದ ಮಲ್ಲಾರೆಡ್ಡಿ ಇವರು ಮದ್ಯಾಹ್ನ ಅಂದಾಜು ಸುಮಾರು 2.30 ಪಿಎಂ ಸುಮಾರಿಗೆ ತಮ್ಮ ಹತ್ತಿರ ಬಂದಿದ್ದು, ಅವರಿಗೆ ಚಹಾ ಕುಡಿಸಿ ಮಾತನಾಡಿ ಎಲ್ಲಿಗೆ ಹೋಗುತ್ತೀರಿ ಅಂತಾ ಕೇಳಿದಾಗ ಅವರು ಮಗನಾದ ಬಸವಗೌಡನ ಹತ್ತಿರ ಬಂದಿದ್ದು, ಆತನಿಗೆ ಭೇಟಿ ಆಗಿ ನಮಗೆ ಪರಿಚಯದ ಮಲ್ಲಪ್ಪ ಬಾಗೋಡಿ ಈತನು ನಮಗೆ ಫೋನು ಮಾಡಿ ದಿಗ್ಗಾಂವಿ ಗ್ರಾಮದಲ್ಲಿರುವ ಅಯ್ಯಪ್ಪ ಈತನ ಹೊಲದ ವಿಷಯದಲ್ಲಿ ನ್ಯಾಯ ಪಂಚಾಯತಿ ಮಾಡುವುದಿದೆ ಬನ್ನಿ ಅಂತಾ ಹೇಳಿದ್ದರಿಂದ ಹೋಗುತ್ತಿದ್ದೇವೆ ಅಂತಾ ಹೇಳಿ ಇಲ್ಲಿಂದ ಹೋದರು ಅಂತಾ ತಿಳಿಸಿದರು. ನನ್ನ ತಂದೆ ಸಿದ್ದನಗೌಡ ತಂದೆ ಈರಣ್ಣಗೌಡ ಪೊಲೀಸ್ ಪಾಟೀಲ್ ವಃ 60 ವರ್ಷ ಹಾಗೂ ಮಾವ ಮಲ್ಲಾರೆಡ್ಡಿ ತಂದೆ ಶಾಂತಗೌಡ ಪಾಟೀಲ್ ವಃ 45 ವರ್ಷ ಇವರ ಪತ್ತೆಗಾಗಿ ಹುಡುಕಾಡುತ್ತಿರುವಾಗ ಸಂಬಂಧಿಕರಾದ ವೀರಣ್ಣಗೌಡ ತಂದೆ ಮುನೀತ್ ರೆಡ್ಡಿ ಹಾಗೂ ರಾಜುಗೌಡ ತಂದೆ ನಿಂಗನಗೌಡ ತಿಳಿಸಿದ್ದೇನೆಂದರೆ ತಾವು ದಿನಾಂಕಃ 27/11/16
ರಂದು ಮಳಖೇಡ ಗ್ರಾಮದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದು, ಅಲ್ಲಿ ಅಂದಾಜು ಸಮಯ 3.30 ಪಿಎಂ ಸುಮಾರಿಗೆ ಮಳಖೇಡದ ಕ್ರಾಸ್ ಹತ್ತಿರ ಅಂಗಡಿ ಮುಂದುಗಡೆ ಸಿದ್ದನಗೌಡ ಮತ್ತು ಮಲ್ಲಾರೆಡ್ಡಿ ನಿಂತಿದ್ದು, ಯಾಕೆ ಇಲ್ಲಿ ನಿಂತಿದ್ದೀರಿ ಏನು ಕೆಲಸ ಇದೆ ಅಂತಾ ಕೇಳಿದಾಗ ಆಗ ಅವರು ಮಲ್ಲಪ್ಪ ಈತನು ಫೋನು ಮಾಡಿದ್ದಾನೆ ನಾವು ದಿಗ್ಗಾಂವದಲ್ಲಿರುವ ಅಯ್ಯಪ್ಪನ ಜಮೀನು ವಿಷಯಕ್ಕೆ ನ್ಯಾಯ ಪಂಚಾಯತಿ ಮಾಡಲು ಹೊರಟಿದ್ದೇವೆ ಅಂತಾ ತಿಳಿಸಿರುತ್ತಾರೆ ಸ್ವಲ್ಪ ಸಮಯದ ನಂತರ ಅಲ್ಲೊಂದು ಮೋಟಾರ್ ಸೈಕಲ್ ಬಂದಿದ್ದು, ಅಯ್ಯಪ್ಪ ಬಂದಿದ್ದಾನೆ ಅಂತಾ ಹೇಳಿ ಅವನ ಗಾಡಿಯ ಮೇಲೆ ಇಬ್ಬರು ಕುಳಿತು ಹೋದರು ಅಂತಾ ತಿಳಿಸಿದರು. ನನ್ನ ತಂದೆಯಾದ ಸಿದ್ದನಗೌಡ ಮತ್ತು ಮಾವನಾದ ಮಲ್ಲಾರೆಡ್ಡಿ ಇವರನ್ನು ನಮ್ಮ ಗ್ರಾಮದ ಮಲ್ಲಪ್ಪನು ದಿಗ್ಗಾಂವದಲ್ಲಿರುವ ಅಯ್ಯಪ್ಪನ ಜಮೀನು ವಿಷಯದಲ್ಲಿ ನ್ಯಾಯ ಪಂಚಾಯತಿ ಮಾಡುವುದಿದೆ ಅಂತಾ ಪುಸಲಾಯಿಸಿ ಕರೆಯಿಸಿದ್ದು, ಹಾಗೂ ಈ ಹಿಂದೆ ನಮ್ಮೂರಿನಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಕಾಲಕ್ಕೆ ನಮ್ಮ ಗ್ರಾಮದ ಬಸಪ್ಪ ತಂದೆ ಶರಣಪ್ಪ ದೊರೆ ಇವರ ನಡುವೆ ಹಳೆಯ ವೈಷಮ್ಯದ ಹಾಗೂ ರಾಜಕೀಯ ವೈಷಮ್ಯದ ಪ್ರಯುಕ್ತ ಅಲ್ಲದೆ ಇನ್ನಿತರೆ ಕಾರಣಗಳಿಂದ ನಮ್ಮ ಕುಟುಂಬದವರಿಗೂ ಹಾಗೂ ಬಸಪ್ಪನಿಗೂ ದ್ವೇಷವಿದ್ದಿದ್ದು, ಅದೇ ಹಗೆತನವನ್ನು ಬಸಪ್ಪಾ ಈತನು ಸಾಧಿಸುತ್ತಾ ಬಂದಿದ್ದು ಮತ್ತು ಗ್ರಾಮದಲ್ಲಿ ಆಗಾಗ್ಗೆ ಮತ್ತು ಈಗ 15 ದಿವಸಗಳ ಹಿಂದೆ ಬಸಪ್ಪ ಈತನು ರೆಡ್ಡಿ ಮನೆತನದವರದು ಬಹಳ ಧಿಮಾಕಾಗಿದೆ ಅವರನ್ನು ಮುಗಿಸಿದರೆ ರೆಡ್ಡಿ ಮನೆತನ ಸರ್ವನಾಶವಾಗುತ್ತದೆ ಅಂತಾ ಅನ್ನುತ್ತಿರುವ ವಿಷಯ ಗಮನಿಸಿದ್ದು, ಈ ಎಲ್ಲಾ ಕಾರಣಗಳಿಂದ ನನ್ನ ತಂದೆಯಾದ ಸಿದ್ದನಗೌಡ ಹಾಗೂ ಮಾವ ಮಲ್ಲಾರೆಡ್ಡಿ ಇವರನ್ನು ದಿನಂಕಃ 27/11/2016 ರಂದು ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆ ಮುಂದುಗಡೆಯಿಂದ 2.30 ಪಿಎಂ ಸುಮಾರಿಗೆ ಪುಸಲಾಯಿಸಿ ದಿಗಾಂವ್ ಗ್ರಾಮದಲ್ಲಿನ ಜಮೀನು ವಿಷಯದಲ್ಲಿ ನ್ಯಾಯ ಪಂಚಾಯತಿ ಮಾಡುವುದಿದೆ ಅಂತಾ ಮಲ್ಲಪ್ಪ ಈತನು ಕರೆಯಿಸಿದ್ದರ ವಿಷಯಕ್ಕೆ ನಮಗೆ ಬಲವಾದ ಸಂಶಯವೇನೆಂದರೆ, ಮಲ್ಲಪ್ಪ, ಬಸಪ್ಪ, ಅಯ್ಯಪ್ಪ, ರಾಯಪ್ಪ ಹಾಗೂ ಇನ್ನಿತರರು ಕೂಡಿಕೊಂಡು ನಮ್ಮ ತಂದೆ ಸಿದ್ದನಗೌಡ ಹಾಗು ಮಾವ ಮಲ್ಲಾರೆಡ್ಡಿ ಇವರನ್ನು ಪುಸಲಾಯಿಸಿ ಕರೆಯಿಸಿ ಕೊಲೆ ಮಾಡಿರುತ್ತಾರೆ ಅಂತಾ ನನಗೆ ಖಚಿತವಾಗಿದ್ದರಿಂದ ಮಾನ್ಯರವರು ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಬಸನಗೌಡ ತಂದೆ ಸಿದ್ದನಗೌಡ ಪೊಲೀಸ್ ಪಾಟೀಲ್ ರವರು ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಳಖೇಡ ಠಾಣೆ : ದಿನಾಂಕ 18-11-2016 ರಂದು ಸಾಯಂಕಾಲ 7 ಗಂಟೆಯ ಸುಮಾರಿಗೆ ನಮ್ಮ ತಂಗಿಯ ಗಂಡನಾದ ದೇವಪ್ಪಗೌಡ ತಂದೆ ಶಾಂತಗೌಡ ಪೊಲೀಸಪಾಟೀಲ, ಸಾ: ಗೂಡುರ ಇವರು ತಮ್ಮ ಬೈಸಿಕಲ್ ಮೇಲೆ ಕುಳಿತು ನಮ್ಮೂರ ಸೀಮಾಂತರದ ಸ್ಟೇಷನತಾಂಡಾ-ಹಂಗನಳ್ಳಿ ಮುಖ್ಯರಸ್ತೆಯ ಬಸವೇಶ್ವರ ಗುಡಿ ಹತ್ತಿರ ಹೋಗುತ್ತಿರುವಾಗ, ಎದುರಗಡೆಯಿಂದ ಒಬ್ಬ ಮೋಟಾರ ಸೈಕಲ ಚಾಲಕ ಅತೀವೇಗ ಹಾಗು ನಿಷ್ಕಾಳಜಿತನದಿಂದ ಎದುರುಗಡೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿ
ಅಪಘಾತ ಪಡಿಸಿದ್ದರಿಂದ ದೇವಪ್ಪಗೌಡ ಇವರಿಗೆ ಅಫಗಾತದಲ್ಲಿ ಭಾರಿ ರಕ್ತಗಾಯ ಹಾಗು ಗುಪ್ತಗಾಯ ಆಗಿದ್ದರಿಂದ ನಂತರ ನನಗೆ ಅಫಗಾತದ ವಿಷಯ ನನಗೆ ಪೋನ ಮಾಡಿ ವಿಷಯ ತಿಳಿಸಿದಾಗ ನಾನು ಹೋಗಿ ನೋಡಿ ಉಪಚಾರ ಕುರಿತು ಸೇಡಂ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ ದಿನಾಂಕ 02-12-2016 ರಂದು ನಾನು ರಸ್ತೆ ಅಪಗಾತದಲ್ಲಿ
ಗಾಯ ಹೊಂದಿದ ದೇವಪ್ಪಗೌಡ ಇವರಿಗೆ ಕಲಬುರಗಿಯ
ಯುನೈಟೆಡ್ ಆಸ್ಪತ್ರೆಯಲ್ಲಿ ಸೇರಿಕೆಮಾಡಿ ಉಪಚಾರ ನೀಡಿಸಿದ್ದರು ಕೂಡ ಅವರಿಗೆ
ಗುಣಮುಖವಾಗಿರಲ್ಲಿ ನಾವು ಬಡವರಿದ್ದ ಕಾರಣ ಹಾಗು ನಮ್ಮ ಹತ್ತಿರ ಅವರ ವೈಧ್ಯಕೀಯ ವೆಚ್ಚ
ಭರಿಸಲು ನಮ್ಮ ಹತ್ತಿರ ಹಣ ಇಲ್ಲದ ಕಾರಣ ನಾನು
ಹಾಗು ದೇವಪ್ಪಗೌಡ ಇವರ ಮನೆಯವರು ಕೂಡಿ ವಿಚಾರ
ಮಾಡಿ ದಿನಾಂಕ 24-11-2016 ರಂದು ಮದ್ಯಾನ ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಿಕೊಂಡು ಗೋಲಿ ಔಷಧ ತೆಗೆದುಕೊಂಡು ಮನೆಯಲ್ಲಿಯೇ ಉಪಚಾರ
ಮಾಡಿಸಬೇಕೆಂದು ನಿರ್ಧರಿಸಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಅವರ ಸ್ವಂತ ಊರಾದ ಜೇವರ್ಗಿ
ತಾಲ್ಲೂಕಿನ ಗೂಡುರ ಗ್ರಾಮಕ್ಕೆ ಅವರ ಮನೆಗೆ ತೆಗೆದುಕೊಂಡು ಹೋಗಿದ್ದು ಇತ್ತು. ಆದರೆ ಅಫಗಾತದಲ್ಲಿ ದೇವಪ್ಪಗೌಡ ಇವರಿಗೆ ಆದ ಭಾರಿ ರಕ್ತಗಾಯ, ಗುಪ್ತಗಾಯಗಳಾಗಿ ಅವರು
ಗಾಯದ ಭಾದೆಯಲ್ಲಿ ಗುಣಮುಖ ಹೊಂದದೆ ಇಂದು ದಿನಾಂಕ 02-12-2016 ರಂದು ಬೆಳಿಗ್ಗೆ 05-00 ಗಂಟೆಯ
ಸುಮಾರಿಗೆ ದೇವಪ್ಪಗೌಡ ಇವರು ತಮ್ಮ ಮನೆಯಲ್ಲಿ
ಮೃತ ಪಟ್ಟಿರುತ್ತಾರೆ, ಅಂತಾ ಶ್ರೀ ಶಿವುಕುಮಾರ ತಂದೆ ನಾಗಣ್ಣ ಮಂಗಲಗಿ. ಸಾ: ಹಂಗನಳ್ಳಿ ಗ್ರಾಮ, ತಾ: ಸೇಡಂ, ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಸೇಡಂ ಠಾಣೆ : ಸೊಮೇಶ್ವರ ತಂದೆ ವೆಂಕಣ್ಣ ಕೊಮ್ಮನಬೊಯಿನ ಉ : ಟ್ರಾಕ್ ಮ್ಯಾನ್ (ರೈಲ್ವೆ ಇಲಾಖೆ) ಸಾ:
ಪೆದ್ದಮುಪ್ಪರಮ ನರಸಿಂಹಲುಪೆಟ ಮಂಡಲ ಜಿ : ವರಂಗಲ ತೆಲಂಗಾಣ ರಾಜ್ಯ ಹಾ.ವ : ಮ.ನಂ. 14/1 ರೈಲ್ವೆ
ಕಾಲೋನಿ ಸೇಡಂ ಇವರು ದಿನಾಂಕ: 29-11-16 ರಂದು ಮಧ್ಯರಾತ್ರಿಯಿಂದ 01-12-2016 ರವರೆಗೆ ರಜೆಯ ಮೇಲೆ ತೆರಳಿದ್ದು, ರಜೆಯ ಮೇಲೆ ಹೋಗುವಾಗ ಮನೆಯ ಕೀಲಿ ಕೈಯನ್ನು ತಮ್ಮ ಸಹದ್ಯೋಗಿಗಳಿಗೆ ಕೊಟ್ಟು ಮನೆ ಕಡೆಗೆ
ನೋಡಿಕೊಳ್ಳುವಂತೆ ಹೇಳಿ ಹೋಗಿದ್ದು, ದಿನಾಂಕ: 01-12-2016 ರಂದು ರಾತ್ರಿ 09:00 ಗಂಟೆಗೆ ಸಹದ್ಯೋಗಿಯಾದ ನಾಗೇಶ್ವರರಾವ ಇವರು ಫೋನ ಮಾಡಿ ತಿಳಿಸಿದ್ದೇನೆಂದರೆ, ಮೋಹನ ರೆಡ್ಡಿ ಇವರು ಬೆಳಿಗ್ಗೆಯಿಂದ ಮನೆಯಲ್ಲಿಯೆ ಇದ್ದು, ಸಾಯಂಕಾಲ 06:00 ಗಂಟೆಗೆ ಮನೆಯ ಬೀಗದ ಕೈ ಕೊಟ್ಟು ಕೆಲಸದ ಕುರಿತು ಹೋಗಿದ್ದು, ನಾನು ರಾತ್ರಿ ಮಲಗುವ ಕುರಿತು ಹೋದಾಗ ಮನೆಯ ಹಿಂದಿನ
ಬಾಗಿಲಿನ ಕೊಂಡಿ ಮುರಿದಿದ್ದು, ನೀವು ಬೇಗ ಬನ್ನಿರಿ ಅಂತಾ ತಿಳಿಸಿದಾಗ ನಾನು ದಿನಾಂಕ : 02-12-2016 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ
ಮನೆಗೆ ಬಂದು ನೋಡಿದಾಗ ನಮ್ಮ ಮನೆಯೊಳಗಿನ ಸೊನಿ LED TV ಅ.ಕಿ 17500/-
ಅಲಮಾರಿಯಲ್ಲಿದ್ದ ಒಂದು ಸಿಗೇಟ ಕಂಪನಿಯ ಹಾರ್ಡಡಿಸ್ಕ ಅ.ಕಿ 4500/- ಮತ್ತು ನಗದು ಹಣ 2500/- ಹೀಗೆ ಒಟ್ಟು 24500/-
ಬೆಲೆಬಾಳುವ ವಸ್ತುಗಳನ್ನು ಯಾರೊ ಕಳ್ಳರು ದಿನಾಂಕ: 01-12-2016 ರಂದು ಸಾಯಂಕಾಲ 6 ಗಂಟೆಯಿಂದ
ರಾತ್ರಿ 9 ಗಂಟೆಯ ಅವಧಿಯಲ್ಲಿ ಮನೆಯ ಬಾಗಿಲ ಕೊಂಡಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.