POLICE BHAVAN KALABURAGI

POLICE BHAVAN KALABURAGI

10 December 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಸುವರ್ಣ ಗಂಡ ಮಾನಪ್ಪ ಮಾಡಗಿ ಸಾ.ಸೊನ್ನ ಹಾ: ವಃ ಚಿಗರಳ್ಳಿ ಕ್ಯಾಂಪ್ ತಾ.ಜೇವರ್ಗಿ ರವರ ಗಂಡನಾದ ಮಾನಪ್ಪ ಇತನು ಬಿರಾಳ್ (ಬಿ) ಸರಕಾರಿ ವಸತಿ ನಿಲಯದಲ್ಲಿ ವಾರ್ಡನ್  ಅಂತಾ ಕೆಲಸ ಮಾಡುತ್ತಿದ್ದನು. ದಿನಾಂಕ 09/12/2019 ರಂದು ಸಾಯಂಕಾಲ ಜೇವರ್ಗಿಯಲ್ಲಿ ಆಫೀಸ್ ಕೆಲಸ ಇದೆ ನಾನು ಜೇವರ್ಗಿಗೆ ಹೋಗಿ ಬರುತ್ತೇನೆ ಎಂದು ಹೇಳಿ ನಮ್ಮ  ಹೊಸ  ಜುಪಿಟರ್ ಮೋಟಾರ್ ಸೈಕಲ್ ಚೆಸ್ಸಿ ನಂಬರ್ MD6263G42K1K10778,  ಇಂಜಿನ್ ನಂಬರ್ EG4KK1106016,  ನೇದ್ದರ ಮೇಲೆ ಕುಳಿತುಕೊಂಡು ಮನೆಯಿಂದ ಹೋಗಿದ್ದು ಸಾಯಂಕಾಲ ನಾನು ಮನೆಯಲ್ಲಿದ್ದಾಗ ನಮ್ಮ ಸಂಬಂದಿಕರಾದ ಭೂತಾಳಿ  ಇವರು ಫೋನ್ ಮಾಡಿ ಮಾನಪ್ಪನ  ಮೊಟಾರ್ ಸೈಕಲಕ್ಕೆ  ಜೇವರ್ಗಿಯಲ್ಲಿ ರಸ್ತೆ ಅಪಘಾತವಾಗಿರುತ್ತದೆ. ಅವನಿಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಎಂದು ತಿಳಿಸಿದನು. ವಿಷಯ ಗೊತ್ತಾಗಿ ನಾನು ಮತ್ತು ನನ್ನ ತಂದೆ ಭೀಮಣ್ಣ ತಾಯಿಯಾದ ರತ್ನಮ್ಮ ಗಂಡ ಬೀಮಣ್ಣ ಮೂವರು  ಕೂಡಿಕೊಂಡು ಸ್ಥಳಕ್ಕೆ ಬಂದು ನೋಡಲಾಗಿ  ಸ್ಥಳದಲ್ಲಿ  ರಕ್ತ ಬಿದ್ದಿತ್ತು ನನ್ನ ಗಂಡನ ಹೆಣ ಜೇವರ್ಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ ಅಂತಾ ಗೊತ್ತಾಗಿ. ನಾವು  ಜೇವರಗಿ  ಆಸ್ಪತ್ರೆಗೆ ಬಂದು ನೋಡಲಾಗಿ  ನನ್ನ ಗಂಡ ಮೃತಪಟ್ಟಿದ್ದು ನಿಜವಿತ್ತು.  ಮತ್ತು ಅವನ ಕುತ್ತಿಗೆಯ ಹತ್ತಿರ ಭಾರಿ ರಕ್ತಗಾಯಯವಾಗಿ ಮಾಂಸ ಖಂಡ ಹೊರ ಬಂದಿದ್ದು ಇತ್ತು, ಎಡಗೈ ಭುಜದ ಹತ್ತಿರ, ಬಲಗೈ ಮುಂಗೈ ಹತ್ತಿರ ಮುರಿದ ಗಾಯವಾಗಿತ್ತು, ಹಾಗೂ ಎರಡು  ಕಿವಿಗಳಿಂದ ರಕ್ತ ಸ್ರಾವವಾಗಿತ್ತು .ಅಲ್ಲಿಯೇ ಇದ್ದ ನಮ್ಮ ಸಂಬಂಧಿಕರಾದ ಭೂತಾಳಿ ತಂದೆ ಬಲವಂತಪ್ಪ ಮತ್ತು ರಾಯಪ್ಪ ತಂದೆ ಮೈಲಪ್ಪ ಹೆಗಡೆ ಇವರು ಇದ್ದರು, ಭೂತಾಳಿ ಈತನಿಗೆ ಘಟನೆ ಬಗ್ಗೆ ಕೇಳಲಾಗಿ ಅವನು ಹೇಳಿದ್ದೇನೆಂದರೆ ಇಂದು ಸಾಯಾಂಕಾಲ; ಜೇವರಗಿ ಪಟ್ಟಣದ ಎ.ಪಿ.ಎಮ್.ಸಿ. ಯಾರ್ಡ ಹತ್ತಿರ ಜೇವರಗಿ -ಶಹಾಪೂರ ರೋಡಿನಲ್ಲಿ ಮಾನಪ್ಪಾ ಈತನು ತನ್ನ ಮೋಟಾರ್ ಸೈಕಲನ್ನು ಜೇವರಗಿ ಕಡೆಯಿಂದ ಶಹಾಪೂರ ಕಡೆಗೆ ನಡೆಯಿಸಿಕೊಂಡು ಹೋಗುತ್ತಿದ್ದನು. ಅದೇ ವೇಳಗೆ ಹಿಂದಿನಿಂದ ಅಂದರೆ ಸಿಂದಗಿ ಕ್ರಾಸ್ ಕಡೆಯಿಂದ ಒಂದು ಟ್ರೈಲರ್ ಲಾರಿಯ ಚಾಲಕನು ತನ್ನ ಲಾರಿಯನ್ನು ಅತೀ ವೇಗದಿಂದ ಮತ್ತು ಅಜಾಗೂರಕತೆಯಿಂದ ನಡೆಸಿಕೊಂಡು ಮಾನಪ್ಪಾ ಈತನ ಮೋಟಾರ್ ಸೈಕಲಿಗೆ ಓವರ್ ಟೇಕ ಮಾಡಲು ಹೋಗಿ ಲಾರಿ ಇಂಜೀನ ಹಿಂದಿನ ಬಾಡಿಯಿಂದ ಮಾನಪ್ಪ ಈತನ ಮೊಟಾರ ಸೈಕಲಕ್ಕೆ ಡಿಕ್ಕಿ ಪಡಿಸಿದನು. ಆಗ ಮಾನಪ್ಪಾ ಈತನು ಮೊಟಾರ್  ಸೈಕಲದೊಂದಿಗೆ ರೋಡಿನಲ್ಲಿ ಬಿದ್ದನು. ನಾನು ಮತ್ತು ರಾಯಪ್ಪಾ ಹೆಗಡೆ ಹೋಗಿ ನೋಡಲಾಗಿ, ಮಾನಪ್ಪನು ಹೆಲ್ಮೇಟ್  ಧರಿಸಿದ್ದು ಅವನ ಹೆಲ್ಮೇಟ್ ಒಂದು ಕಡೆ ಒಡೆದು ಬಿದ್ದಿರುತ್ತದೆ. ಅವನ ಕುತ್ತಿಗೆ ಹತ್ತಿರ ಭಾರಿ ರಕ್ತಗಾಯ ಮತ್ತು ಎರಡು ಕೈಗಳಿಗೆ ಭಾರಿ ಗಾಯವಾಗಿದ್ದು, ಕಿವಿಗಳಿಂದ ರಕ್ತ ಸ್ರಾವವಾಗಿ ಅವನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅವನ ಮೊಟಾರ್ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತಪಡಿಸಿದ ಲಾರಿ ನಂಬರ್ ನೋಡಲು ಅದರ ನಂ  ,KA-01-AE-3241 ನೇದ್ದು ಇತ್ತು.  ಲಾರಿ ಚಾಲಕನ ಹೆಸರು  ಪ್ರಕಾಶ ತಂದೆ ಮಹಾಂತಪ್ಪ ಗಿರಿಸಾಗರ  ಸಾಃ ಚಿನ್ನಾಪೂರ ತಾ; ಹುನಗುಂದ ಜಿ; ಬಾಗಲಕೋಟ್ ಅಂತಾ ಗೊತ್ತಾಗಿರುತ್ತದೆ. ನಂತರ ನಾನು ಮತ್ತು ರಾಯಪ್ಪ ಹೆಗಡೆ ಇಬ್ಬರೂ ಕೂಡಿಕೊಂಡು ಮಾನಪ್ಪಾ ಈತನ ಹೆಣವನ್ನು ಜೇವರ್ಗಿ ಸರಕಾರಿ ಆಸ್ಫತ್ರೆಗೆ ತಂದು ಶವಗಾರ ಕೊಣೆಯಲ್ಲಿ ಹಾಕಿರುತ್ತೇವೆ. ಅಂತಾ ಹೇಳಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ವಾಡಿ ಠಾಣೆ : ಶ್ರೀ ನಾಗಪ್ಪ ತಂದೆ ಮರಗಪ್ಪ ಕಲಕುಟಗಿ ಸಾ:ಬಸಪ್ಪಗುಡಿ ವಾಡಿ  ರವರ ಮಗಳು ದಿನಾಂಕ 09/12/2019 ರಂದು ಮದ್ಯಾಹ್ನ 12-45 ಪಿ.ಎಮ್ ಸುಮಾರು ಮಗಳು ಭಾರತಿ ಇವಳು ಸಂಡಾಸಕ್ಕೆ ಹೋಗಿ ಬರುತ್ತೆನೆ ಅಂತಾ ತಂಬಿಗೆ ತೆಗೆದುಕೊಂಡು ಹೋಗಿ ಸ್ವಲ್ಪ ಸಮಯದ ನಂತರ ಭಾರತಿ ಇವಳು ಅಳುತ್ತ ಮರಳಿ ಮನೆಗೆ ಬಂದು ತಿಳಿಸಿದ್ದೆನೆಂದರೆ,ತಾನು ಬಸಪ್ಪ ಗುಡಿ ಆಚೆ ಬಯಲು ಪ್ರದೇಶದಲ್ಲಿ ಸಂಡಾಕ್ಕೆ ಹೋದಾಗ ಒಮ್ಮೇಲೆ ನನ್ನ ಬಲಗಾಲ ಕಿರುಬೆರಳಿಗೆ ಏನೋ ಕಚ್ಚಿಂದತೆ ಆಗಿ ಏನು ಅಂತಾ ನೋಡಲಾಗಿ ಅದು ಹಾವು ಇದ್ದು ಸರ ಸರನೇ ಕಂಟಿಯಲ್ಲಿ ಹೋಗಿರುತ್ತದೆ ಅಂತಾ ತಿಳಿಸಿದ್ದು ನಾನು ನೋಡಲಾಗಿ ಭಾರತಿ ಇವಳ ಬಲಗಾಲ ಕಿರುಬೆರಳಿನಿಂದ ರಕ್ತ ಬರುತ್ತಿದ್ದನ್ನು ಕಂಡು ಅವಳಿಗೆ ಮೊಟರ ಸೈಕಲ ಮೇಲೆ ಕೂಡಿಸಿಕೊಂಡು ವಾಡಿ ಸರ್ಕಾರಿ ಆಸ್ಪತ್ರೆಗೆ ತಂದು ಇಲ್ಲಿ ವೈದ್ಯರು ಪ್ರಥಮ ಚಿಕಿತ್ಸೆ ಮಾಡಿ ಹೆಚ್ಚಿನ ಉಪಚಾರ ಕುರಿತು ಚಿತ್ತಾಪುರ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ತಿಳಿಸಿದಾಗ ನಾನು ಮತ್ತು ನಮ್ಮ ತಂದೆ ಮರಗಪ್ಪ ಕೂಡಿಕೊಂಡು ಅಂಬುಲೇನ್ಸದಲ್ಲಿ ಹಾಕಿಕೊಂಡು ಚಿತ್ತಾಪೂರ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಅಲ್ಲಿ ವೈದ್ಯರು ನನ್ನ ಮಗಳಿಗೆ ಪರೀಕ್ಷೆ ಮಾಡಿ ನೋಡಿ ಇವಳು ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿದರು.. ಈ ಘಟನೆ ಅಕಸ್ಮಿಕವಾಗಿದ್ದು ಈ ಬಗ್ಗೆ ಯಾರ ಮೇಲೆ ಸಂಶಯವಿರುವದಿಲ್ಲ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.